Rajiv Gandhi Khel Ratna ಪ್ರಶಸ್ತಿಗೆ ಈಗ ಧ್ಯಾನ್ ಚಂದ್ (Dhyan Chand) ಹೆಸರನ್ನು ಇಡಲಾಗಿದೆ. ದೇಶದ ಅತ್ಯುನ್ನತ ಕ್ರೀಡಾ ಗೌರವದ ಮರುನಾಮಕರಣವನ್ನು ದೇಶದ ಐತಿಹಾಸಿಕ ಹೆಸರುಗಳೆಂದು ಕರೆಯಬಹುದು ಇದನ್ನು ರಾಜಕೀಯ ಏಕಮುಖಿ ಅಥವಾ ಬೇಗನೆ ಬರದ ನಿರ್ಧಾರ ಎಂದು ಪರಿಗಣಿಸಬಹುದು. ಆದರೆ ಧ್ಯಾನ್ ಚಂದ್ ಹೆಸರು ಭಾವನಾತ್ಮಕ ಅನುರಣ ಹೊಂದಿದ್ದು, ಅವರ ಹೆಸರು ಮತ್ತು ಭಾರತೀಯ ಹಾಕಿಗೆ ಹಾಗೂ ಸಾಮಾನ್ಯವಾಗಿ ಭಾರತೀಯ ಕ್ರೀಡೆಗಳಿಗೆ ಅರ್ಥೈಸುತ್ತಾರೆ ಎಂಬುದನ್ನು ನಿರಾಕರಿಸಲಾಗದಂತಹದ್ದು.
ಧ್ಯಾನ್ ಚಂದ್ ಯಾರು..?
ಸರಳವಾಗಿ ಹೇಳಬೇಕೆಂದರೆ ಧ್ಯಾನ್ ಚಂದ್ ಹಾಕಿಯ ಮೊದಲ ಸೂಪರ್‌ಸ್ಟಾರ್ ಆಗಿದ್ದರು, ಅವರನ್ನು ಮಾಂತ್ರಿಕ ಅಥವಾ ವಿಜಾರ್ಡ್ ಎಂದು ಪರಿಗಣಿಸಲಾಗಿದೆ. 1928ರ ಆ್ಯಮ್ಸ್ಟರ್‌ಡ್ಯಾಮ್, 1932ರ ಲಾಸ್ ಏಂಜಲೀಸ್ ಮತ್ತು 1936ರ ಬರ್ಲಿನ್ ಒಲಿಂಪಿಕ್ಸ್‌ನಲ್ಲಿ ಭಾರತವು ಸತತ ಮೂರು ಒಲಿಂಪಿಕ್ ಹಾಕಿ ಚಿನ್ನದ ಪದಕ ಗೆಲ್ಲುವಲ್ಲಿ ಮುಖ್ಯ ಪಾತ್ರಧಾರಿಯಾಗಿದ್ದರು. ತಮ್ಮ ಉತ್ಕೃಷ್ಟ ಕೌಶಲ್ಯ, ಸಂಕೀರ್ಣವಾದ ಡ್ರಿಬ್ಲಿಂಗ್ ಮತ್ತು ಸ್ಕೋರಿಂಗ್ ಸಾಮರ್ಥ್ಯದಿಂದ ನೋಡುವ ಸಾರ್ವಜನಿಕರನ್ನು ಆಕರ್ಷಿಸಿದರು ಎಂದು ಹೇಳಲಾಗುತ್ತದೆ.
ಆ ಪಂದ್ಯಾವಳಿಗಳಲ್ಲಿ, ಭಾರತದೊಂದಿಗೆ ಸ್ಪರ್ಧಿಸಲು ಯಾವುದೇ ತಂಡವಿರಲಿಲ್ಲ - ಮತ್ತು ಹೆಚ್ಚಿನ ಪಂದ್ಯಗಳಲ್ಲಿ ಭಾರಿ ಗೆಲುವಿನ ಅಂತರ ಕಂಡಿತು. 1928ರ ಫೈನಲ್‌ನಲ್ಲಿ ಭಾರತವು ಆತಿಥೇಯರನ್ನು 3-0 ಅಂತರದಿಂದ ಸೋಲಿಸಿತು, 1932ರ ಚಿನ್ನದ ಪದಕ ಪಂದ್ಯದಲ್ಲಿ ಯುನೈಟೆಡ್ ಸ್ಟೇಟ್ಸ್ ಅನ್ನು ನಂಬಲು ಕಷ್ಟವಾಗುವ 24-1 ಅಂತರದಿಂದ ಸೋಲಿಸಲಾಯಿತು. ಇನ್ನು, 1936ರಲ್ಲಿ ಜರ್ಮನಿ ವಿರುದ್ಧ 8-1 ಗೋಲುಗಳಿಂದ ಫೈನಲ್‌ನಲ್ಲಿ ಮಣಿಸಿತು. ಒಟ್ಟಾರೆಯಾಗಿ, ಧ್ಯಾನ್ ಚಂದ್ 12 ಒಲಿಂಪಿಕ್ ಪಂದ್ಯಗಳನ್ನು ಆಡಿ 33 ಗೋಲುಗಳನ್ನು ಗಳಿಸಿದರು.
ಧ್ಯಾನ್ ಚಂದ್‌ಗೆ ಸಂಬಂಧಿಸಿದ ಕೆಲವು ಕತೆಗಳು ಮತ್ತು ಉಪಾಖ್ಯಾನಗಳು ಯಾವುವು..?
ಹಾಕಿ ಸ್ಟಿಕ್‌ನೊಂದಿಗೆ ಧ್ಯಾನ್ ಚಂದ್ ಪರಾಕ್ರಮದ ಬಗ್ಗೆ ಕೆಲವು ಕತೆಗಳನ್ನು ಖಚಿತಪಡಿಸಲು ಕಷ್ಟವಾಗಿದ್ದರೆ ಇತರವು ಖಂಡಿತವಾಗಿಯೂ ಕಾಲ್ಪನಿಕವಾಗಿರುತ್ತವೆ.
1936ರ ಬರ್ಲಿನ್ ಕ್ರೀಡಾಕೂಟದಲ್ಲಿ, ಆರ್ಯನ್ ಜನಾಂಗೀಯ ಶ್ರೇಷ್ಠತೆಯ ಪ್ರತಿಪಾದಕ, ಜರ್ಮನ್ ಚಾನ್ಸೆಲರ್ ಅಡಾಲ್ಫ್ ಹಿಟ್ಲರ್, ಧ್ಯಾನ್ ಚಂದ್ ಆಟ ನೋಡಿ ಎಷ್ಟು ಆಕರ್ಷಿತರಾಗಿದ್ದರು ಎಂದರೆ ಹಿಟ್ಲರ್ ಧ್ಯಾನ್ ಚಂದ್‌ಗೆ ಜರ್ಮನ್ ಪೌರತ್ವ ಮತ್ತು ದೇಶದ ಸೈನ್ಯದಲ್ಲಿ ಕರ್ನಲ್ ಹುದ್ದೆ ನೀಡಿದರು. ಆದರೆ, ಈ ಪ್ರಸ್ತಾಪವನ್ನು ಭಾರತೀಯ ಖ್ಯಾತ ಆಟಗಾರ ನಿರಾಕರಿಸಿದರು ಎಂಬ ಕತೆಯೂ ಇದೆ.
ಇದನ್ನೂ ಓದಿ: Coronavirus: ಕರ್ನಾಟಕದ ಮಕ್ಕಳಲ್ಲಿ Delta Variantನಿಂದಲೇ ಹೆಚ್ಚು ಸೋಂಕು, ಹೆಚ್ಚಿದ ಆತಂಕ
ಸ್ವಾತಂತ್ರ್ಯದ ಮೊದಲು ಮತ್ತು ಅದರ ನಂತರ ಕೆಲವು ವರ್ಷಗಳವರೆಗೆ, ಭಾರತ ಹಾಕಿಯಲ್ಲಿ ಮಾತ್ರ ಅಂತಾರಾಷ್ಟ್ರೀಯ ಮತ್ತು ಒಲಿಂಪಿಕ್ಸ್ ಹಂತದಲ್ಲಿ ನಿರಂತರವಾಗಿ ಸಾಧನೆ ಮಾಡುತ್ತಿತ್ತು. ವಾಸ್ತವವಾಗಿ, 1928ರ ಆ್ಯಮ್‌ಸ್ಟರ್‌ಡ್ಯಾಮ್‌ನಿಂದ ಆರಂಭಗೊಂಡು, ಭಾರತವು ಕ್ರೀಡಾಕೂಟದಲ್ಲಿ ಎಂಟು ಹಾಕಿ ಚಿನ್ನದ ಪದಕಗಳನ್ನು ಗೆದ್ದಿತು. ಹಾಕಿ ಹೊರತುಪಡಿಸಿ ಉಳಿದ ಕ್ರೀಡೆಯಲ್ಲಿ 1952ರ ಹೆಲ್ಸಿಂಕಿ ಒಲಿಂಪಿಕ್ಸ್‌ನಲ್ಲಿ ಕುಸ್ತಿಯಲ್ಲಿ ಕೆ ಡಿ ಜಾಧವ್ ಕಂಚಿನ ಪದಕ ತೆಗೆದುಕೊಂಡಿದ್ದು ಬಿಟ್ಟರೆ, 1996ರ ಅಟ್ಲಾಂಟಾ ಒಲಿಂಪಿಕ್ಸ್‌ನಲ್ಲಿ ಟೆನ್ನಿಸ್ ಆಟಗಾರ ಲಿಯಾಂಡರ್ ಪೇಸ್ ಪದಕ ಗಳಿಸುವವರೆಗೆ ಕಾಯಬೇಕಾಯಿತು.
ಹಾಕಿಯಲ್ಲಿ ಕೆ ಡಿ ಸಿಂಗ್ 'ಬಾಬು', ರೂಪ್ ಸಿಂಗ್ ಮತ್ತು ಬಲ್ಬೀರ್ ಸಿಂಗ್‌ರಂತಹ ಇತರ ಸಮಕಾಲೀನ ಆಟಗಾರರು ಇದ್ದರೂ, ಧ್ಯಾನ್ ಚಂದ್ ಹೆಸರನ್ನು ಯಾವಾಗಲೂ ಮೊದಲು ತೆಗೆದುಕೊಳ್ಳಲಾಗುತ್ತಿತ್ತು.
ಧ್ಯಾನ್ ಚಂದ್‌ಗೆ ಮರಣೋತ್ತರವಾಗಿ ದೇಶದ ಅತ್ಯುನ್ನತ ಗೌರವವಾದ ಭಾರತ ರತ್ನ ನೀಡಬೇಕೆಂದು ವಾದಿಸುವ ಒಂದು ದೀರ್ಘಕಾಲದ ಅಭಿಯಾನವಿದೆ. 2013ರಲ್ಲಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ನಿವೃತ್ತಿಯ ಸಮಯದಲ್ಲಿ ಯಾವ ಕ್ರೀಡಾಪಟು, ಪ್ರಶಂಸೆಗೆ ಅರ್ಹರು ಎಂಬುದರ ಕುರಿತು ದೊಡ್ಡ ಚರ್ಚೆಯಾಗಿತ್ತು. ತೆಂಡೂಲ್ಕರ್‌ಗೆ ಅಂತಿಮವಾಗಿ ಭಾರತ ರತ್ನ ಗೌರವ ನೀಡಲಾಯಿತು, ಆದರೆ ಧ್ಯಾನ್ ಚಂದ್ ಪರ ವಾದಗಳು ಅಮದಿನಿಂದ ಇಂದಿನವರೆಗೆ ಮುಂದುವರಿದವು.
ಈವರೆಗೂ ಧ್ಯಾನ್ ಚಂದ್‌ರನ್ನು ಹೇಗೆ ಗುರುತಿಸಲಾಗುತ್ತದೆ..?
ಧ್ಯಾನ್ ಚಂದ್ ಜನ್ಮದಿನವಾದ ಆಗಸ್ಟ್ 29 ಅನ್ನು ರಾಷ್ಟ್ರೀಯ ಕ್ರೀಡಾ ದಿನವನ್ನಾಗಿ ಆಚರಿಸಲಾಗುತ್ತದೆ. ಈ ದಿನ ರಾಷ್ಟ್ರಪತಿಗಳು ಅರ್ಜುನ ಪ್ರಶಸ್ತಿ ಮತ್ತು ಇತರ ಗೌರವಗಳನ್ನು ನೀಡುತ್ತಾರೆ - ಈಗ ಧ್ಯಾನ್ ಚಂದ್ ಹೆಸರನ್ನೂ ಒಳಗೊಂಡಂತೆ ಇರುವ ಪ್ರಶಸ್ತಿಯನ್ನೂ ನೀಡಲಾಗುತ್ತದೆ.
ಕ್ರೀಡೆಯಲ್ಲಿ ಜೀವಮಾನ ಸಾಧನೆಗಾಗಿ ಪ್ರಶಸ್ತಿಯನ್ನು ಈಗಾಗಲೇ ಅವರ ಹೆಸರಿನಲ್ಲಿ ಇಡಲಾಗಿದೆ. ರಾಷ್ಟ್ರ ರಾಜಧಾನಿ ದಿಲ್ಲಿಯ ರಾಷ್ಟ್ರೀಯ ಕ್ರೀಡಾಂಗಣವನ್ನು ಮೇಜರ್ ಧ್ಯಾನ್ ಚಂದ್ ರಾಷ್ಟ್ರೀಯ ಕ್ರೀಡಾಂಗಣ ಎಂದು ಮರುನಾಮಕರಣ ಮಾಡಲಾಗಿತ್ತು.
ಶುಕ್ರವಾರದ ಪ್ರಶಸ್ತಿಯ ಮರುನಾಮಕರಣ ಏಕೆ ಮಹತ್ವದ್ದಾಗಿದೆ..?
ಹಾಕಿಯಲ್ಲಿ ಬಂದಿರುವ ಎಂಟು ಚಿನ್ನದ ಪದಕಗಳು ನಂತರದ ಪೀಳಿಗೆಯ ಆಟಗಾರರ ಕುತ್ತಿಗೆಗೆ ಗಿರಣಿ ಎಂದು ಕರೆಯಲಾಗುತ್ತದೆ. ಆಧುನಿಕ ಆಟವು ಧ್ಯಾನ್ ಚಂದ್ ಯುಗದಲ್ಲಿ ಆಡಿದ್ದಕ್ಕಿಂತ ಸಂಪೂರ್ಣವಾಗಿ ವಿಭಿನ್ನವಾದ ಕ್ರೀಡೆಯಾಗಿದೆ. ಯುರೋಪಿಯನ್ನರು ಮತ್ತು ಆಸ್ಟ್ರೇಲಿಯನ್ನರು ದಶಕಗಳಲ್ಲಿ ಹೆಚ್ಚು ಪರಿಣತರಾಗಿದ್ದಾರೆ. ಆದರೆ ಮೇಲ್ಮೈ ಬದಲಾವಣೆಯು ಫಿಟ್ನೆಸ್, ವೇಗ, ತ್ರಾಣ ಮತ್ತು ದೈಹಿಕ ಸಾಮರ್ಥ್ಯದ ಮೇಲೆ ಪ್ರೀಮಿಯಂ ಇರಿಸಿದೆ.
1980ರಲ್ಲಿ ಮಾಸ್ಕೋ ಕ್ರೀಡಾಕೂಟದ ನಂತರ ಭಾರತ ಒಲಿಂಪಿಕ್ಸ್‌ನಲ್ಲಿ ಅಗ್ರ ನಾಲ್ಕನೇ ಸ್ಥಾನ ಪಡೆಯಲು ಸಾಧ್ಯವಾಗಲಿಲ್ಲ. ಆ ಸುವರ್ಣ ವರ್ಷಗಳ ಬಗ್ಗೆ ಒಬ್ಬರು ಪುಸ್ತಕಗಳಲ್ಲಿ ಮಾತ್ರ ಓದಬಹುದು ಅಥವಾ ಕತೆಗಳಲ್ಲಿ ಕೇಳಬಹುದು. ಆ ಸನ್ನಿವೇಶದಲ್ಲಿ, ಟೋಕಿಯೋದಲ್ಲಿ ಭಾರತೀಯ ಪುರುಷರ ಮತ್ತು ಮಹಿಳೆಯರ ಹಾಕಿ ತಂಡಗಳ ಪ್ರದರ್ಶನವು ಆಟದಲ್ಲಿ ದೊಡ್ಡ ಪ್ರಮಾಣದ ಆಸಕ್ತಿಯನ್ನು ಮರುಹೊತ್ತಿಸಬಹುದು. ಪುರುಷರ ಹಾಕಿ ತಂಡ ಈ ಬಾರಿ ಕಂಚು ಪದಕ ಪಡೆದುಕೊಂಡು ನಾಲ್ಕು ದಶಕಗಳ ಪದಕ ದಾಹ ತೀರಿಸಿದೆ.
ಹಾಕಿಗೆ ಕ್ರಿಕೆಟ್‌ನಂತಹ ಅಭಿಮಾನವಿಲ್ಲದಿರಬಹುದು, ಆದರೆ ಅದನ್ನು ಖಂಡಿತವಾಗಿ ಅನುಸರಿಸಲಾಗುತ್ತದೆ, ವಿಶೇಷವಾಗಿ ಭಾರತವು ಪ್ರಮುಖ ಪಂದ್ಯಾವಳಿಯನ್ನು ಆಡುವಾಗ. ರಾಜೀವ್ ಗಾಂಧಿ ಖೇಲ್ ರತ್ನವನ್ನು ಧ್ಯಾನ್ ಚಂದ್ ಹೆಸರಿನಲ್ಲಿ ಮರುನಾಮಕರಣ ಮಾಡುವುದರಿಂದ ಪ್ರಸ್ತುತ ಮತ್ತು ನಂತರದ ಪೀಳಿಗೆಗಳು ಹಾಕಿಯ ಮೂಲ ಸೂಪರ್ ಸ್ಟಾರ್ ಬಗ್ಗೆ ತಿಳಿದಿರುವುದನ್ನು ಖಾತ್ರಿಪಡಿಸಿಕೊಳ್ಳಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ