• Home
 • »
 • News
 • »
 • explained
 • »
 • Explained: ಆ್ಯಸಿಡ್ ಮಾರಾಟಕ್ಕೆ ಸುಪ್ರೀಂ ನಿಷೇಧ ಹೇರಿದ್ರೂ ಸಹ ಇಂದಿಗೂ ಹೇಗೆ ಸಿಗ್ತಿದೆ? ಇಲ್ಲಿದೆ ಈ ಬಗ್ಗೆ ಮಾಹಿತಿ

Explained: ಆ್ಯಸಿಡ್ ಮಾರಾಟಕ್ಕೆ ಸುಪ್ರೀಂ ನಿಷೇಧ ಹೇರಿದ್ರೂ ಸಹ ಇಂದಿಗೂ ಹೇಗೆ ಸಿಗ್ತಿದೆ? ಇಲ್ಲಿದೆ ಈ ಬಗ್ಗೆ ಮಾಹಿತಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

2013 ರಲ್ಲಿ ಮಾನ್ಯ ಸರ್ವೋಚ್ಛ ನ್ಯಾಯಾಲಯವು ಲಕ್ಷ್ಮಿ ವರ್ಸಸ್ ಯುನಿಯನ್ ಆಫ್ ಇಂಡಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ, ಆ್ಯಸಿಡ್ ದಾಳಿಯಿಂದ ಬಾಧಿತರಾದವರಿಗೆ ನ್ಯಾಯ ನೀಡುವಂತಹ ಹಾಗೂ ಅಂತಹ ದಾಳಿಯನ್ನು ನಿಗ್ರಹಿಸುವ ನಿಟ್ಟಿನಲ್ಲಿ ಮೈಲಿಗಲ್ಲಿನ ತೀರ್ಪೊಂದನ್ನು ನೀಡಿದೆ.

 • Trending Desk
 • 5-MIN READ
 • Last Updated :
 • New Delhi, India
 • Share this:

ಆ್ಯಸಿಡ್ ದಾಳಿ(Acid Attack) ಎನ್ನುವುದು ಬಲು ಕೀಳು ಮಟ್ಟದ ಅಪರಾಧ ಕೃತ್ಯವಾಗಿದ್ದು(Crime ) ಹಿಂದಿನಿಂದಲೂ ಈ ರೀತಿಯ ಘಟನೆಗಳು ನಡೆದಿರುವುದನ್ನು ಕಾಣಬಹುದು. ಅದರಲ್ಲೂ ಇತ್ತೀಚೆಗೆ ರಾಜಧಾನಿ ದೆಹಲಿಯ(New Delhi) ದ್ವಾರಕಾದಲ್ಲಿ ಹದಿನೇಳು ವರ್ಷದ ಹುಡುಗಿಯೊಬ್ಬಳ ಮೇಲೆ ಇಬ್ಬರು ಮುಸುಕುಧಾರಿಗಳು ಆ್ಯಸಿಡ್ ಎರಚಿದ್ದು ದೊಡ್ಡ ಸುದ್ದಿಯಾಗಿತ್ತು. ಶಾಲೆಗೆ(School) ಹೋಗುತ್ತಿದ್ದಂತಹ ಸಂದರ್ಭದಲ್ಲಿ ಈ ಘಟನೆ ನಡೆದಿತ್ತು ಹಾಗೂ ಅದಾದ ಬಳಿಕ ಆ ಅಪ್ರಾಪ್ತೆ ಬಾಲಕಿಯನ್ನು ಸಫ್ದರ್ಜಂಗ್ ಆಸ್ಪತ್ರೆಗೆ ದಾಖಲಿಸಲಾಯಿತು.


ಅದೇ ದಿನದಲ್ಲಿ ಪೊಲೀಸರು ಈ ದುಷ್ಕೃತ್ಯ ಎಸಗಿದ್ದವರನ್ನು ಬಂಧಿಸಿದರು ಹಾಗೂ ಪೊಲೀಸರ ಪ್ರಕಾರ, ಆ ಆರೋಪಿಗಳು ಆ್ಯಸಿಡ್ ಅನ್ನು ಇ-ಕಾಮರ್ಸ್ ಫ್ಲಿಪ್ ಕರ್ಟ್ ನಿಂದ ಖರೀದಿಸಿದ್ದಾರೆಂದು ಹೇಳಿರುವುದಾಗಿ ತಿಳಿಸಿದರು. ಪೊಲೀಸರು ಈ ಪ್ರಕರಣದಲ್ಲಿ ಆರೋಪಿಗಳು ಬಳಸಿದ್ದ ಆ್ಯಸಿಡ್ ಅನ್ನು ನೈಟ್ರಿಕ್ ಆ್ಯಸಿಡ್ ಎಂದು ಹೇಳಿದ್ದು ಪ್ರಯೋಗಾಲಯದ ಪರೀಕ್ಷೆಯ ನಂತರವೇ ಈ ಬಗ್ಗೆ ಸ್ಪಷ್ಟ ಮಾಹಿತಿ ಸಿಗಲಿದೆ ಎಂದು ಹೇಳಿದ್ದಾರೆ.


ಈಗ ಈ ಪ್ರಕರಣವನ್ನು ಗಮನಿಸಿದಾಗ ಕೆಲ ಪ್ರಶ್ನೆಗಳು ತಲೆಯಲ್ಲಿ ಬರುವುದು ಸಹಜ. ಅವೇನೆಂದರೆ,


2013 ರಿಂದಲೇ ಭಾರತದಲ್ಲಿ ಓವರ್-ದಿ-ಕೌಂಟರ್ ಆ್ಯಸಿಡ್ ಮಾರಾಟವನ್ನು ನಿಷೇಧಿಸಲಾಗಿದೆಯಾದರೂ ಅದು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲವೆ?


ಇ-ಕಾಮರ್ಸ್ ಫ್ಲಿಪ್ ಕಾರ್ಟ್ ನಲ್ಲಿ ಈ ರೀತಿಯಾಗಿ ಆ್ಯಸಿಡ್ ಅನ್ನು ಮಾರಲಾಗುತ್ತಿರುವುದಾದರೂ ಹೇಗೆ?


ಈ ಬಗ್ಗೆ ಇ-ಕಾಮರ್ಸ್ ಸಂಸ್ಥೆಯ ಮೇಲೆ ಪೊಲೀಸರು ಏನು ಕ್ರಮ ಜರುಗಿಸಿದ್ದಾರೆ?


ಈ ಪ್ರಕರಣವು 14ನೇ ಡಿಸೆಂಬರ್ ನಂದು ದ್ವಾರಕಾದಿಂದ 12ನೇ ತರಗತಿಯ ವಿದ್ಯಾರ್ಥಿನಿಯು ವಿದ್ಯಾಲಯಕ್ಕೆ ಹೋಗಲು ತೆರಳುತ್ತಿರುವಾಗ ಬೆಳಗ್ಗೆಯ ಸಂದರ್ಭದಲ್ಲಿ ನಡೆದಿದೆ. ಇದಕ್ಕೆ ಸಂಬಂಧಿಸಿದಂತೆ ಇಂಡಿಯನ್ ಪೆನಲ್ ಕೋಡ್ 326A ಕಾಯ್ದೆ ಅಡಿ ಪ್ರಕರಣವನ್ನು ಮೋಹನ್ ಗಾರ್ಡನ್ ಪೊಲೀಸರು ದಾಖಲಿಸಿದ್ದಾರೆ. (ಈ ಕಾಯ್ದೆಯಡಿ ಆ್ಯಸಿಡ್ ಎರಚುವ ಮೂಲಕ ಹಿಂಸೆ ನೀಡುವ ಉದ್ದೇಶ ಹೊಂದಿದ್ದರೆ ಅಂಥವರಿಗೆ ಕನಿಷ್ಠ ಹತ್ತು ವರ್ಷಗಳ ಕಠಿಣ ಶಿಕ್ಷೆ ವಿಧಿಸಬಹುದಾಗಿದೆ).


ಇದನ್ನೂ ಓದಿ: Karnataka Major Incidents: ಹಿಜಾಬ್ ವಿವಾದದ ಬಲೆ, ಹರ್ಷ-ಪ್ರವೀಣ್ ಕೊಲೆ! 2022ರಲ್ಲಿ ಕರ್ನಾಟಕದ ಪ್ರಮುಖ ಘಟನೆ, ವಿವಾದಗಳು


ಇನ್ನು, ಆರೋಪಿಗಳು ಹೇಳಿಕೊಂಡಿರುವಂತೆ, ಪೊಲೀಸ್ ಇಲಾಖೆಯು ಫ್ಲಿಪ್ ಕಾರ್ಟ್ ಸಂಸ್ಥೆಗೆ ಅವರಲ್ಲಿ ನೋಂದಾಯಿಸಿರುವ ಯಾವ ವ್ಯಾಪಾರಿ ಆಸಿಡ್ ಮಾರುತ್ತಿದ್ದಾರೆ ಹಾಗೂ ಅವರಿಂದ ಮಾರಾಟವಾದ ಆ್ಯಸಿಡ್ ಕುರಿತು ವಿವರಗಳನ್ನು ನೀಡುವಂತೆ ನೋಟಿಸ್ ಜಾರಿ ಮಾಡಿದ್ದಾರೆ. ದ್ವಾರಕಾದ ಡಿಸಿಪಿ ಹರ್ಷ ವರ್ಧನ್ ಮಾತನಾಡುತ್ತ, "ನಾವು ಸಂಸ್ಥೆಗೆ ಆಸಿಡ್ ಮಾರಾಟಕ್ಕೆ ಸಂಬಂಧಿಸಿದಂತೆ ಇರುವ ನಿಯಮಾವಳಿಗಳನ್ನು ಯಾವ ರೀತಿ ಅನುಸರಿಸಲಾಗುತ್ತಿದೆ" ಎಂಬುದರ ಕುರಿತು ವಿವರಣೆ ನೀಡುವಂತೆ ಕೇಳಿರುವುದಾಗಿ ಹೇಳಿದ್ದಾರೆ.


ಈ ಮಧ್ಯೆ, ಫ್ಲಿಪ್ ಕಾರ್ಟ್ ಸಂಸ್ಥೆಯು ಮಾಧ್ಯಮವೊಂದಕ್ಕೆ ಜಾರಿ ಮಾಡಿರುವ ತನ್ನ ಹೇಳಿಕೆಯಲ್ಲಿ, "ಸಂಬಂಧಿಸಿದ ಮಾರಾಟಗಾರರನ್ನು ಕಪ್ಪು ಪಟ್ಟಿಯಲ್ಲಿ ಸೇರಿಸಲಾಗಿದೆ ಹಾಗೂ ಇದಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಪ್ರಾಧಿಕಾರಕ್ಕೆ ನಾವು ಎಲ್ಲ ರೀತಿಯ ತನಿಖಾ ಸಹಕಾರ ನೀಡುತ್ತೇವೆ" ಎಂದು ಹೇಳಿದೆ.


2013 ರಿಂದಲೇ ಭಾರತದಲ್ಲಿ ಓವರ್-ದಿ-ಕೌಂಟರ್ ಆಸಿಡ್ ಮಾರಾಟವನ್ನು ನಿಷೇಧಿಸಲಾಗಿದೆ


2013 ರಲ್ಲಿ ಮಾನ್ಯ ಸರ್ವೋಚ್ಛ ನ್ಯಾಯಾಲಯವು ಲಕ್ಷ್ಮಿ ವರ್ಸಸ್ ಯುನಿಯನ್ ಆಫ್ ಇಂಡಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ, ಆ್ಯಸಿಡ್ ದಾಳಿಯಿಂದ ಬಾಧಿತರಾದವರಿಗೆ ನ್ಯಾಯ ನೀಡುವಂತಹ ಹಾಗೂ ಅಂತಹ ದಾಳಿಯನ್ನು ನಿಗ್ರಹಿಸುವ ನಿಟ್ಟಿನಲ್ಲಿ ಮೈಲಿಗಲ್ಲಿನ ತೀರ್ಪೊಂದನ್ನು ನೀಡಿದೆ.


ಅಲ್ಲದೆ ಈ ಕೃತ್ಯವನ್ನು ಘೋರ ಎಂದು ಹೇಳಿದ್ದಲ್ಲದೆ, ಇದನ್ನು ಬೇಲ್ ರಹಿತ ಅಪರಾಧ ಹಾಗೂ ಕನಿಷ್ಠ ಹತ್ತು ವರ್ಷಗಳ ಶಿಕ್ಷೆಯನ್ನು ವಿಧಿಸಬಹುದೆಂದು ಹೇಳಿದೆ. ಜೊತೆಗೆ ಆ್ಯಸಿಡ್ ಮಾರಾಟಕ್ಕೆ ಸಂಬಂಧಿಸಿದಂತೆ ಕಠಿಣ ನಿಯಮಾವಳಿಗಳನ್ನು ರೂಪಿಸಿದೆ.


* ಆ್ಯಸಿಡ್ ಮಾರಾಟಗಾರರು ಪರವಾನಗಿ ಪತ್ರವನ್ನು ಪಡೆಯಬೇಕು.


* ಪಾಯಿಸನ್ಸ್ ಆಕ್ಟ್ 1919ರ ಅಡಿಯಲ್ಲಿ ಅವರು ನೋಂದಾಯಿಸಿಕೊಳ್ಳಬೇಕು.


* ಮಾರಾಟಗಾರರು ಮಾರಾಟದ ಪ್ರತಿ ವಿವರಗಳ ದಾಖಲಾತಿ ಹೊಂದಿರಬೇಕು. ಇದು ಅವರಲ್ಲಿರುವ ಸ್ಟಾಕ್ ಅನ್ನು ಸಹ ಒಳಗೊಂಡಿರಬೇಕು.


* ಆ್ಯಸಿಡ್ ಖರೀದಿದಾರರು ಸರ್ಕಾರದಿಂದ ನೀಡಲಾದ ಅಧಿಕೃತ ಗುರುತು ಹಾಗೂ ವಿಳಾಸ ದೃಢೀಕರಣದ ಚೀಟಿ ತೋರಿಸಬೇಕು ಹಾಗೂ ಅವರು ಆಸಿಡ್ ಕೊಳ್ಳುತ್ತಿರುವ ಹಿಂದಿರುವ ಉದ್ದೇಶವನ್ನು ಸ್ಪಷ್ಟವಾಗಿ ಹೇಳಬೇಕು.


* ಅಪ್ರಾಪ್ತರಿಗೆ ಆ್ಯಸಿಡ್ ಮಾರಲಾಗುವುದಿಲ್ಲ


* ಈ ಮೇಲಿನವುಗಳನ್ನು ಹೊರತುಪಡಿಸಿ ಆಯಾ ರಾಜ್ಯಗಳು ಕಾನೂನುಬಾಹಿರವಾಗಿ ಆ್ಯಸಿಡ್ ಮಾರಾಟ ತಡೆಯುವ ನಿಟ್ಟಿನಲ್ಲಿ ಉಚಿತವಾದ ಇನ್ನೂ ಹಲವಾರು ಉಪಕ್ರಮಗಳನ್ನು ತೆಗೆದುಕೊಳ್ಳಬಹುದು


ಈ ಮೇಲಿನ ನಿಯಮಗಳನ್ನು ಯಾರಾದರೂ ಉಲ್ಲಂಘಿಸಿದ್ದು ಕಂಡುಬಂದಲ್ಲಿ ಅವರ ವಿರುದ್ಧ ಜಿಲ್ಲಾ ಉಪ-ವಿಭಾಗೀಯ ಮ್ಯಾಜಿಸ್ಟ್ರೇಟ್ ಅವರಲ್ಲಿ ದೂರು ಸಲ್ಲಿಸಬಹುದಾಗಿದ್ದು ಅವರು ಇದಕ್ಕೆ ಸಂಬಂಧಿಸಿದಂತೆ ಮಾರಾಟಗಾರರಿಗೆ ತಕ್ಕುದಾದ ದಂಡವನ್ನು ವಿಧಿಸಬಹುದಾಗಿರುತ್ತದೆ.


ಇದನ್ನೂ ಓದಿ: Explainer: ಶೀತ, ಜ್ವರ ಚಳಿಗಾಲದಲ್ಲಿಯೇ ಹೆಚ್ಚು ಕಾಡುತ್ತವೆ ಏಕೆ? ಅಧ್ಯಯನಗಳು ಏನ್‌ ಹೇಳ್ತಿವೆ?


ಇವುಗಳನ್ನು ಹೊರತುಪಡಿಸಿ ಆ್ಯಸಿಡ್ ಅಥವಾ ಚರ್ಮಕ್ಕೆ ಹಾನಿ ಮಾಡುವ ಯಾವುದೇ ಉತ್ಪನ್ನಗಳನ್ನು ಮಾರಾಟ ಮಾಡುವವರು ದೆಹಲಿ ಪೊಲೀಸ್ ಇಲಾಖೆಯಿಂದ ಪರವಾನಗಿಯನ್ನು ಪಡೇಯಬೇಕು ಹಾಗೂ ಪ್ರತಿ ವರ್ಷ ಅದನ್ನು ನವೀಕರಿಸುತ್ತಿರಬೇಕು.


ಅಪೆಕ್ಸ್ ಕೋರ್ಟ್ ನಿಂದ ಮಾಡಲಾಗಿರುವ ಆ್ಯಸಿಡ್ ಬ್ಯಾನ್ ಪರಿಣಾಮಕಾರಿಯಾಗಿದೆಯೆ?


ಮಾರುಕಟ್ಟೆಯಲ್ಲಿ ಮುಕ್ತವಾಗಿ ಆ್ಯಸಿಡ್ ಮಾರಾಟವನ್ನು 2013 ರಿಂದಲೇ ನಿಷೇಧಿಸಲಾಗಿದೆಯಾದರೂ, ದೇಶದಲ್ಲಿ ಸಾರ್ವಜನಿಕವಾಗಿ ಆಗುವ ಆ್ಯಸಿಡ್ ದಾಳಿಗಳು ಪರಿಣಾಮಕಾರಿಯಾಗಿ ನಿಯಂತ್ರಿತವಾಗಿಲ್ಲ. ಈ ಬಗ್ಗೆ ಲೋಕಸಭೆಯಲ್ಲಿ ಕೇಳಲಾದ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತ ಕೇಂದ್ರ ಗೃಹ ಮಂತ್ರಾಲಯವು ದೇಶದಲ್ಲಿ 2018-22 ರ ಅವಧಿಯಲ್ಲಿ ಮಹಿಳೆಯರ ಮೇಲೆ ಆ್ಯಸಿಡ್ ದಾಳಿಗಳ 386 ಪ್ರಕರಣಗಳು ದಾಖಲಾಗಿರುವುದಾಗಿ ತಿಳಿಸಿದ್ದಾರೆ.


ಇನ್ನು, ಹಿಂದೆ ಹೋದರೆ ಅಂದರೆ, 2014-18 ರ ಮಧ್ಯದಲ್ಲಿ ಆ್ಯಸಿಡ್ ದಾಳಿಗಳ ಪ್ರಮಾಣ 1483 ಎಂದು ದಾಖಲಾಗಿದೆ. ಹಾಗೆ ನೋಡಿದರೆ ಕಳೆದ ಕೆಲ ವರ್ಷಗಳಲ್ಲಿ ಆ್ಯಸಿಡ್ ದಾಳಿಗಳ ಸಂಖ್ಯೆ ಇಳಿಮುಖವಾಗಿದೆಯಾದರೂ ಸಂಪೂರ್ಣ ನಿಂತಿಲ್ಲ. ಅಲ್ಲದೆ ಇದರಲ್ಲಿ ಸಾಬೀತಾದ ಆರೋಪಿಗಳ ಸಂಖೆ ಕೇವಲ 62 ಆಗಿರುವುದು ದುರದೃಷ್ಟಕರ.


ಆ್ಯಸಿಡ್ ದಾಳಿಯಲ್ಲಿ ಬದುಕುಳಿಯುವವರ ಯೋಗಕ್ಷೇಮದ ಜವಾಬ್ದಾರಿ ಹೊತ್ತಿರುವ ಅತಿಜೀವನ್ ಫೌಂಡೇಶನ್ ಸಂಸ್ಥೆಯ ಪ್ರಗ್ಯಾ ಪ್ರಸೂನ್ ಹೇಳುವಂತೆ, "ಆ್ಯಸಿಡ್ ಗಳು ಸುಲಭವಾಗಿ ದೊರೆಯುತ್ತವೆ, ಅದರಲ್ಲೂ ವಿಶೇಷವಾಗಿ ಸಾಕಷ್ಟು ಪರಿಚಯವಿಲ್ಲದ, ಹೆಚ್ಚು ಹೆಸರು ಕೇಳಿರದ ಸ್ಥಳಗಳಲ್ಲಿ ಆ್ಯಸಿಡ್ ಸುಲಭವಾಗಿ ದೊರೆಯುತ್ತವೆ, ಏಕೆಂದರೆ ಅಲ್ಲಿ ಆ್ಯಸಿಡ್ ಮಾರಾಟಗಾರರಿಗೆ ಇದರ ನಿಷೇಧದ ಬಗ್ಗೆಯಾಗಲಿ ಅಥವಾ ಕಾನೂನಿನ ಬಗ್ಗೆಯಾಗಲಿ ಅರಿವಿರುವುದಿಲ್ಲ" ಎನ್ನುತ್ತಾರೆ.


ಪ್ರಗ್ಯಾ ಮುಂದುವರೆಯುತ್ತ, ಬಹಳಷ್ಟು ಪ್ರಕರಣಗಳಲ್ಲಿ ಇದು ಡಾಮೆಸ್ಟಿಕ್ ವಯಲೆನ್ಸ್ ಆಗಿರುತ್ತದೆ ಹಾಗೂ ದಾಳಿಗೊಳಗಾದವರು ಈ ಬಗ್ಗೆ ಪೊಲೀಸ್ ದೂರು ನೀಡಲು ಮುಂದೆ ಬರುವುದಿಲ್ಲ. ಅಲ್ಲದೆ ಇಂತಹ ಪ್ರಕರಣಗಳಲ್ಲಿ ಆರೋಪಿಗಳು ಅಪರಾಧಿಗಳಾಗುವ ದರ ಕಡಿಮೆಯಿರುವುದು ದುರದೃಷ್ಟಕರ ಎನ್ನುತ್ತಾರೆ.


ಇನ್ನು ಇದರ ಮಾರಾಟಕ್ಕೆ ಸಂಬಂಧಿಸಿದಂತೆ ಇರುವ ನಿಯಮಾವಳಿಗಳ ಬಗ್ಗೆ ಹೇಳುವ ಪ್ರಗ್ಯಾ, ಈ ನಿಯಮಾವಳಿಗಳು ಸಾಕಾಗುವಷ್ಟು ಇಲ್ಲ, ಹಾಗೂ ಈ ಬಗ್ಗೆ ಬಹುತೇಕ ಜನರಿಗೆ ತಿಳಿದೇ ಇಲ್ಲ. ಫ್ಲಿಪ್ ಕಾರ್ಟ್ ನಂತಹ ಸಂಸ್ಥೆಗಳೇ ಈ ಬಗ್ಗೆ ಗಮನಹರಿಸದೆ ಇದ್ದಾಗ ಸಾಮಾನ್ಯ ಕೆಮಿಸ್ಟ್ ಗಳಿಗೆ ಇವು ಹೇಗೆ ತಿಳೀದಿರುತ್ತವೆ ಎಂದು ಪ್ರಶ್ನಿಸುತ್ತಾರೆ ಪ್ರಗ್ಯಾ.


ಫ್ಲಿಪ್ ಕಾರ್ಟ್ ಹೇಳಿಕೆ


ಇನ್ನು ಫ್ಲಿಪ್ ಕಾರ್ಟ್ ಸಂಸ್ಥೆ ತನ್ನ ಹೇಳಿಕೆಯಲ್ಲಿ, "ಕಂಪನಿಯು ಬ್ಲ್ಯಾಕ್ ಲಿಸ್ಟ್ ಮಾಡಲಾದ, ಕಾನೂನುಬಾಹಿರವಾದ, ನಿಷೇಧಿಸಲ್ಪಟ್ಟ ಎಲ್ಲ ಸಾಮಗ್ರಿಗಳ ಮೇಲೆ ಕೂಲಂಕುಶವಾಗಿ ನಿಗಾ ಇರಿಸಿರುತ್ತದೆ, ಅಂತಹ ಮಾರಾಟಗಾರರು ಯಾರೆ ಇದ್ದಲ್ಲಿ ಅವರನ್ನು ತಕ್ಷಣ ಬ್ಲ್ಯಾಕ್ ಲಿಸ್ಟ್ ಮಾಡಲಾಗುತ್ತದೆ" ಎಂದು ಹೇಳಿದೆ.


ಇನ್ನು ದೆಹಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಫ್ಲಿಪ್ ಕಾರ್ಟ್ ಆ ನಿರ್ದಿಷ್ಟ ಆ್ಯಸಿಡ್ ಮಾರಾಟಗಾರರನ್ನು ಕಪ್ಪು ಪಟ್ಟಿಯಲ್ಲಿ ಹಾಕಿದ್ದು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆಯುವ ತನಿಖೆಗೆ ತನ್ನ ಸಂಪೂರ್ಣ ಸಹಕಾರವನ್ನು ನೀಡುವುದಾಗಿ ಹೇಳಿದೆ.


ಕಾನ್ಫಿಡರೆಷನ್ ಆಫ್ ಆಲ್ ಇಂಡಿಯಾ ಟ್ರೇಡರ್ಸ್


ಇನ್ನು ಭಾರತದ ಎಲ್ಲ ವ್ಯಾಪಾರಿಗಳ ಒಕ್ಕೂಟವಾದ ಕಾನ್ಫಿಡರೆಷನ್ ಆಫ್ ಆಲ್ ಇಂಡಿಯಾ ಟ್ರೇಡರ್ಸ್ (CAIT) ಇ-ಕಾಮರ್ಸ್ ಸಂಸ್ಥೆಗಳ ಮೇಲೆ ತಮ್ಮ ತೀವ್ರವಾದ ಆಕ್ರೋಶವನ್ನು ಮಂಗಳವಾರದಂದು ಹೊರಹಾಕಿದೆ. ಇಂತಹ ಉತ್ಪನ್ನಗಳನ್ನು ಮಾರಿದಾಗ ಅಂತಹ ಸಂಸ್ಥೆಗಳ ಇ-ಕಾರ್ಮ್ಸ್ ಲೈಸೆನ್ಸ್ ಅನ್ನೇ ರದ್ದು ಮಾಡಿ ಎಂದು ಒತ್ತಾಯಿಸಿದೆ.


ಪ್ರಾಧಿಕಾರಗಳು ಆಸಿಡ್ ಮಾರಾಟವನ್ನು ಪರಿಣಾಮಕಾರಿಯಾಗಿ ಏಕೆ ಗಮನಿಸುತ್ತಿಲ್ಲ?


ಈ ನಡುವೆ ದೆಹಲಿ ಕಮಿಷನ್ ಫಾರ್ ವುಮೆನ್ (DCW) ದೆಹಲಿಯ ಗೃಹ ಸಚಿವಾಲಯಕ್ಕೆ ಡಿಸೆಂಬರ್ 14 ರಂದು ನೋಟಿಸ್ ಜಾರಿ ಮಾಡಿದ್ದು ಅದರಲ್ಲಿ DCW ನ ಚೈರ್ ಪರ್ಸನ್ ಆಗಿರುವ ಸ್ವಾತಿ ಮಲಿವಾಲ್ ಅವರು "ದೆಹಲಿಯಲ್ಲಿ ಆ್ಯಸಿಡ್ ಮಾರಾಟಕ್ಕೆ ಸಂಬಂಧಿಸಿದಂತೆ ರೂಪಿಸಲಾದ ನಿಯಮಾವಳಿಗಳ ದುರ್ಬಲ ಅನುಷ್ಠಾನ" ದ ಬಗ್ಗೆ ಗಮನ ಸೆಳೆದಿದ್ದಾರೆ.


ಆ್ಯಸಿಡ್ ಮಾರಾಟಕ್ಕೆ ಸಂಬಂಧಿಸಿದಂತೆ ನಿಗಾ ಇರಿಸುವ ಅಧಿಕಾರ ಹೊಂದಿರುವ ಪ್ರಾಧಿಕಾರಕ್ಕೆ ಮಳಿಗೆಗಳಿಗೆ ಅನಿರೀಕ್ಷಿತ ಭೇಟಿ ನೀಡು ಪರಿಶೀಲಿಸುವ ಹಾಗೂ ಅಕ್ರಮ ಮಾರಾಟ ಕಂಡುಬಂದಲ್ಲಿ ಮಾರಾಟಗಾರರಿಗೆ 50,000 ರೂಪಾಯಿಗಳವರೆಗೂ ದಂಡ ವಿಧಿಸುವ ಅಧಿಕಾರ ನೀಡಲಾಗಿದೆ.


ಇನ್ನು ಅಕ್ಟೋಬರ್ ನಲ್ಲಿ ಕಮಿಷನ್ ನಿಂದ ತಯಾರಿಸಲಾಗಿದ್ದ ವರದಿಯೊಂದರ ಪ್ರಕಾರ, ಆ್ಯಸಿಡ್ ಮಾರಾಟವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ನಿಗದಿಪಡಿಸಲಾಗಿರುವ ನಿರಂತರ ಪರಿಶೀಲನೆಗಳನ್ನು ದೆಹಲಿಯ ಕೆಲವು ಜಿಲ್ಲೆಗಳಲ್ಲಿ ಮಾಡಲಾಗುತ್ತಿಲ್ಲ ಎಂದೇ ಹೇಳಿದೆ.


ಹಾಗಾಗಿ, ಈಗ ಆ್ಯಸಿಡ್ ಮಾರಾಟದ ಬಗ್ಗೆ ತೀವ್ರವಾದ ನಿಗಾ ಇರಿಸುವ ಸಮಯ ಇದಾಗಿರುವುದು ಒಂದೆಡೆಯಾದರೆ ಈ ಬಗ್ಗೆ ಸಾರ್ವಜನಿಕರಲ್ಲಿ ಹಾಗೂ ಮಾರಾಟಗಾರರಲ್ಲಿ ಜಾಗೃತಿ ಮೂಡಿಸುವುದು ಇನ್ನಷ್ಟು ಮಹತ್ವವಾಗಿರುವುದು ಇನ್ನೊಂದೆಡೆ ಅಂತಾನೇ ಹೇಳಬಹುದು.

Published by:Latha CG
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು