• ಹೋಂ
  • »
  • ನ್ಯೂಸ್
  • »
  • Explained
  • »
  • Explainer: ಒಂದು ರಾಷ್ಟ್ರ ಒಂದು ರೇಷನ್‌ ಕಾರ್ಡ್‌ ಸ್ಕೀಂ ಎಂದರೇನು..? ಇದರಿಂದ ಜನರಿಗೆ ಸಿಗುವ ಲಾಭವೇನು..? ಇಲ್ಲಿದೆ ಮಾಹಿತಿ..

Explainer: ಒಂದು ರಾಷ್ಟ್ರ ಒಂದು ರೇಷನ್‌ ಕಾರ್ಡ್‌ ಸ್ಕೀಂ ಎಂದರೇನು..? ಇದರಿಂದ ಜನರಿಗೆ ಸಿಗುವ ಲಾಭವೇನು..? ಇಲ್ಲಿದೆ ಮಾಹಿತಿ..

ರೇಷನ್ ಅಂಗಡಿ.

ರೇಷನ್ ಅಂಗಡಿ.

ಒಎನ್‌ಒಆರ್‌ಸಿ ಯೋಜನೆಯು ವಲಸೆ ಕಾರ್ಮಿಕರು ಮತ್ತು ಅವರ ಕುಟುಂಬ ಸದಸ್ಯರಿಗೆ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ 2013 ರ ಅಡಿಯಲ್ಲಿ ದೇಶದ ಯಾವುದೇ ನ್ಯಾಯಯುತ ಬೆಲೆ ಅಂಗಡಿಯಿಂದ ಸಬ್ಸಿಡಿ ಪಡಿತರವನ್ನು ಖರೀದಿಸಲು ಅವಕಾಶ ಮಾಡಿಕೊಡುತ್ತದೆ.

  • Share this:

ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಜುಲೈ 31 ರೊಳಗೆ ರಾಜ್ಯದೊಳಗೆ ಹಾಗೂ ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಪೋರ್ಟ ಬಿಲಿಟಿಗೆ ಅನುವು ಮಾಡಿಕೊಡುವ ಒನ್ ನೇಷನ್, ಒನ್ ರೇಷನ್ ಕಾರ್ಡ್ ಅಥವಾ ಒಂದು ರಾಷ್ಟ್ರ ಒಂದು ರೇಷನ್‌ ಕಾರ್ಡ್‌ ವ್ಯವಸ್ಥೆಯನ್ನು ಜಾರಿಗೆ ತರಲು ಸುಪ್ರೀಂ ಕೋರ್ಟ್‌ ನಿರ್ದೇಶಿಸಿದೆ. ಮಂಗಳವಾರ ಈ ಸಂಬಂಧ ವಿಚಾರಣೆಗೆ ಕೈಗೆತ್ತಿಕೊಂಡ ಸರ್ವೋಚ್ಛ ನ್ಯಾಯಾಲಯ ಎಲ್ಲ ರಾಜ್ಯಗಳಿಗೆ ಈ ನಿರ್ದೇಶನ ನೀಡಿದೆ. ಒಂದು ರಾಷ್ಟ್ರ ಒಂದು ರೇಷನ್‌ ಕಾರ್ಡ್‌ (ONORC) ಎಂದರೇನು? ಒಎನ್‌ಒಆರ್‌ಸಿ ಯೋಜನೆಯು ವಲಸೆ ಕಾರ್ಮಿಕರು ಮತ್ತು ಅವರ ಕುಟುಂಬ ಸದಸ್ಯರಿಗೆ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ 2013 ರ ಅಡಿಯಲ್ಲಿ ದೇಶದ ಯಾವುದೇ ನ್ಯಾಯಯುತ ಬೆಲೆ ಅಂಗಡಿಯಿಂದ ಸಬ್ಸಿಡಿ ಪಡಿತರವನ್ನು ಖರೀದಿಸಲು ಅವಕಾಶ ಮಾಡಿಕೊಡುತ್ತದೆ.


ಉದಾಹರಣೆಗೆ, ಉತ್ತರ ಪ್ರದೇಶದ ಬಸ್ತಿ ಜಿಲ್ಲೆಯ ವಲಸೆ ಕಾರ್ಮಿಕ ಮುಂಬಯಿಯಲ್ಲಿ ಕೆಲಸ ಮಾಡುತ್ತಿದ್ದರೆ ಆ ವ್ಯಕ್ತಿ ಮುಂಬಯಿಯಲ್ಲಿ ಸಹ ಪಡಿತರ ಖರೀದಿಸಬಹುದು. ಇನ್ನು,  ಎನ್‌ಎಫ್‌ಎಸ್‌ಎ ಅಡಿಯಲ್ಲಿ ಈ ವ್ಯಕ್ತಿ ತನ್ನ ಪಾಲಿನ ರೇಷನ್‌ ಅನ್ನು ಪಡೆದುಕೊಳ್ಳಬಹುದು ಹಾಗೂ ಅರ್ಹತೆಗೆ ಅನುಗುಣವಾಗಿ ಬಸ್ತಿಯಲ್ಲೇ ಇರುವ ಆತನ ಕುಟುಂಬ ಸಹ ಅವರ ಪಾಲಿನ ರೇಷನ್‌ ಅನ್ನು ಪಡಿತರ ಅಂಗಡಿಯಿಂದ ಪಡೆದುಕೊಳ್ಳಬಹುದಾಗಿದೆ.


ಇನ್ನು, ಈ ಹಿಂದಿನ ಸಾರ್ವಜನಿಕ ವಿತರಣಾ ವ್ಯವಸ್ಥೆಯಲ್ಲಿ (ಪಿಡಿಎಸ್) ಈ ಸುಧಾರಣೆಯನ್ನು ಉತ್ತೇಜಿಸಲು ಮೋದಿ ಸರ್ಕಾರವು ರಾಜ್ಯಗಳಿಗೆ ಪ್ರೋತ್ಸಾಹವನ್ನು ನೀಡಿದೆ. ಕಳೆದ ವರ್ಷ ಕೋವಿಡ್ -19 ಸಾಂಕ್ರಾಮಿಕ ಸಂದರ್ಭದಲ್ಲಿ ರಾಜ್ಯಗಳು ಹೆಚ್ಚುವರಿ ಸಾಲ ಪಡೆಯುವ ಮುನ್ಸೂಚನೆಯಂತೆ ONORC ಅನುಷ್ಠಾನವನ್ನು ಕೇಂದ್ರವು ನಿಗದಿಪಡಿಸಿತ್ತು. ಅಲ್ಲದೆ, ಈ ಸುಧಾರಣೆಯನ್ನು ಜಾರಿಗೆ ತಂದ ಕನಿಷ್ಠ 17 ರಾಜ್ಯಗಳಿಗೆ 2020-21ರಲ್ಲಿ ಹೆಚ್ಚುವರಿಯಾಗಿ 37,600 ಕೋಟಿ ರೂ. ಪಡೆದುಕೊಳ್ಳಲು ಅವಕಾಶ ನೀಡಿತ್ತು.


ONORC ಹೇಗೆ ಕಾರ್ಯನಿರ್ವಹಿಸುತ್ತದೆ..?ONORC ತಂತ್ರಜ್ಞಾನವನ್ನು ಆಧರಿಸಿದ್ದು, ಫಲಾನುಭವಿಗಳ ಪಡಿತರ ಚೀಟಿ, ಆಧಾರ್ ಸಂಖ್ಯೆ ಮತ್ತು ಎಲೆಕ್ಟ್ರಾನಿಕ್ ಪಾಯಿಂಟ್ಸ್ ಆಫ್ ಸೇಲ್ (ePoS) ವಿವರಗಳನ್ನು ಒಳಗೊಂಡಿರುತ್ತದೆ. ನ್ಯಾಯಬೆಲೆ ಅಂಗಡಿಗಳಲ್ಲಿ  ePoS ಸಾಧನಗಳಲ್ಲಿ ಬಯೋಮೆಟ್ರಿಕ್ ದೃಢೀಕರಣದ ಮೂಲಕ ವ್ಯವಸ್ಥೆಯ ಫಲಾನುಭವಿ ಯನ್ನು ಗುರುತಿಸುತ್ತದೆ. ಈ ವ್ಯವಸ್ಥೆಯು ಇಂಟಿಗ್ರೇಟೆಡ್ ಮ್ಯಾನೇಜ್‌ಮೆಂಟ್ ಆಫ್ ಪಬ್ಲಿಕ್ ಡಿಸ್ಟ್ರಿಬ್ಯೂಷನ್ ಸಿಸ್ಟಮ್ (IM-PDS) (impds.nic.in) ಮತ್ತು ಅನ್ನವಿತರಣ್‌ (annavitran.nic.in) ಎಂಬ ಎರಡು ಪೋರ್ಟಲ್‌ಗಳ ಸಪೋರ್ಟ್‌ನೊಂದಿಗೆ ಕಾರ್ಯ ನಿರ್ವಹಿಸುತ್ತದೆ.


ಪಡಿತರ ಚೀಟಿ ಹೊಂದಿರುವವರು ನ್ಯಾಯಬೆಲೆ ಅಂಗಡಿಗೆ ಹೋದಾಗ, ವ್ಯಕ್ತಿಯು ePoS ನಲ್ಲಿ ಬಯೋಮೆಟ್ರಿಕ್ ದೃಢೀಕರಣದ ಮೂಲಕ ತನ್ನನ್ನು ಗುರುತಿಸಿಕೊಳ್ಳುತ್ತಾರೆ, ಇದು ಅನ್ನವಿತರಣ್‌ ಪೋರ್ಟಲ್‌ನಲ್ಲಿನ ವಿವರಗಳೊಂದಿಗೆ ನೈಜ ಸಮಯಕ್ಕೆ ಹೊಂದಿಕೆಯಾ ಗುತ್ತದೆ. ಪಡಿತರ ಚೀಟಿ ವಿವರಗಳನ್ನು ಪರಿಶೀಲಿಸಿದ ನಂತರ, ವ್ಯಾಪಾರಿ ಫಲಾನುಭವಿಗಳ ಅರ್ಹತೆಗಳನ್ನು ವಿತರಿಸುತ್ತಾರೆ. ಅನ್ನವಿತರಣ್‌ ಪೋರ್ಟಲ್ ಅಂತರ್-ರಾಜ್ಯ ವಹಿವಾಟುಗಳ ದಾಖಲೆಯನ್ನು ನಿರ್ವಹಿಸುತ್ತಿದ್ದರೆ - ಜಿಲ್ಲೆಯೊಳಗೆ ಹಾಗೂ ಒಂದು ಜಿಲ್ಲೆಯಿಂದ ಇನ್ನೊಂದು ಜಿಲ್ಲೆಯ ಟ್ರಾನ್ಸಾಕ್ಷನ್‌ಗಳ ವಹಿವಾಟುಗಳನ್ನು IM-PDS ಪೋರ್ಟಲ್ ದಾಖಲಿಸುತ್ತದೆ.


ಇದು ಎಷ್ಟು ಜನರಿಗೆ ಪ್ರಯೋಜನವನ್ನು ನೀಡುತ್ತದೆ..? ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ, 2013 ರ ಪ್ರಕಾರ, ಸುಮಾರು 81 ಕೋಟಿ ಜನರಿಗೆ ಸಬ್ಸಿಡಿ ಆಹಾರ ಧಾನ್ಯಗಳನ್ನು ಖರೀದಿಸಲು ಅರ್ಹತೆ ಇದೆ. ಅಕ್ಕಿ ಒಂದು ಕೆಜಿಗೆ 3 ರೂ. ದರದಲ್ಲಿ, ಗೋಧಿಯನ್ನು ಒಂದು ಕೆಜಿಗೆ  2   ರೂ. ದರದಲ್ಲಿ,  ಮತ್ತು ಕೋರ್ಸ್ ಧಾನ್ಯಗಳನ್ನು  ಒಂದು ಕೆಜಿಗೆ 1 ರೂ. ದರದಲ್ಲಿ ನ್ಯಾಯಬೆಲೆ ಅಂಗಡಿಗಳಿಂದ ಪಡೆದುಕೊಳ್ಳಬಹುದು. ದೇಶದಲ್ಲಿ ಸದ್ಯ  5.46 ಲಕ್ಷ ನ್ಯಾಯಬೆಲೆ ಅಂಗಡಿಗಳು ಮತ್ತು 23.63 ಕೋಟಿ ಪಡಿತರ ಚೀಟಿ ಹೊಂದಿರುವವರು ಇದ್ದಾರೆ. ಪ್ರತಿ ಎನ್‌ಎಫ್‌ಎಸ್‌ಎ ಪಡಿತರ ಚೀಟಿ ಹೊಂದಿರುವವರನ್ನು ತನ್ನ ಪಡಿತರ ಚೀಟಿ ನೋಂದಾಯಿಸಿದ ಸ್ಥಳದ ಸಮೀಪವಿರುವ ನ್ಯಾಯಯುತ ಬೆಲೆ ಅಂಗಡಿಗೆ ರಿಜಿಸ್ಟರ್ ಮಾಡಲಾಗುತ್ತದೆ.


ONORC ಪ್ರಾರಂಭಿಸಲು ಕಾರಣವಾಗಿರುವ ಅಂಶಗಳು..!ಎನ್‌ಎಫ್‌ಎಸ್‌ಎ ಫಲಾನುಭವಿಗಳು ಈ ಮೊದಲು ತಮ್ಮ ಪಿಡಿಎಸ್ ಪ್ರಯೋಜನಗಳನ್ನು ನಿರ್ದಿಷ್ಟ ನ್ಯಾಯಯುತ ಬೆಲೆ ಅಂಗಡಿಯ ವ್ಯಾಪ್ತಿಯಲ್ಲಿ ಮಾತ್ರ ಪಡೆಯಲು ಅವಕಾಶವಿತ್ತು. ಆದರೆ, ONORC ಅಡಿಯಲ್ಲಿ ಯಾವುದೇ ನ್ಯಾಯಬೆಲೆ ಅಂಗಡಿಯಿಂದ ಪ್ರಯೋಜನ ಪಡೆದುಕೊಳ್ಳುವ ಅವಕಾಶವನ್ನು ಕೇಂದ್ರ ಸರ್ಕಾರ ಮಾಡಿದೆ. ಪಡಿತರ ಕಾರ್ಡ್‌ಗಳ 100% ಆಧಾರ್ ಲಿಂಕ್ ಅನ್ನು ಸಾಧಿಸಿದ ನಂತರ ಇದರ ಪೂರ್ಣ ವ್ಯಾಪ್ತಿ ಸಾಧ್ಯವಾಗುತ್ತದೆ ಮತ್ತು ಎಲ್ಲ ನ್ಯಾಯಬೆಲೆ ಅಂಗಡಿಗಳಲ್ಲೂ ePoS ಸಾಧನವನ್ನು ಒಳಗೊಂಡಿರುತ್ತವೆ.
ONORC ಅನ್ನು ಆಗಸ್ಟ್, 2019 ರಲ್ಲಿ ಪ್ರಾರಂಭಿಸಲಾಯಿತು.  ಆದರೆ, ಏಪ್ರಿಲ್ 2018 ರಲ್ಲೇ IM-PDS ಪ್ರಾರಂಭದೊಂದಿಗೆ ಪಡಿತರ ಚೀಟಿ ಪೋರ್ಟಬಿಲಿಟಿ ಕುರಿತ ಕೆಲಸವೂ ಆರಂಭವಾಯಿತು, ಅದಕ್ಷತೆ ಮತ್ತು ಸೋರಿಕೆಗಳನ್ನು ತಡೆದು ಪಿಡಿಎಸ್ ಅನ್ನು ಸುಧಾರಿಸುವ ಉದ್ದೇಶವನ್ನು ಇದು ಹೊಂದಿದೆ.


ಇದನ್ನೂ ಓದಿ: Ramesh Jarkiholi Sex CD Case| ಸೆಕ್ಸ್​ ಸಿಡಿ ಕೇಸ್​ ಖುಲಾಸೆಗೊಳಿಸಿ ಸಚಿವ ಸ್ಥಾನ ನೀಡಿ; ಬಿಜೆಪಿ ಹೈಕಮಾಂಡ್​ ಎದುರು ರಮೇಶ್ ಜಾರಕಿಹೊಳಿ ಬೇಡಿಕೆ!


ONORC ಆರಂಭದಲ್ಲಿ ಅಂತರರಾಜ್ಯ ಪೈಲಟ್ ಯೋಜನೆಯಾಗಿ ಶುರುವಾಯಿತಾದರೂ, ಕೋವಿಡ್ -19 ಸಾಂಕ್ರಾಮಿಕ ರೋಗವು ಕಳೆದ ವರ್ಷ ಸಾವಿರಾರು ವಲಸೆ ಕಾರ್ಮಿಕರನ್ನು ತಮ್ಮ ಹಳ್ಳಿಗಳಿಗೆ ಮರಳುವಂತೆ ಒತ್ತಾಯಿಸಿದಾಗ, ಯೋಜನೆಯನ್ನು ತ್ವರಿತಗೊಳಿಸುವ ಅವಶ್ಯಕತೆ ಕಂಡುಬಂತು. ಕೋವಿಡ್ ಆರ್ಥಿಕ ಪರಿಹಾರ ಪ್ಯಾಕೇಜಿನ ಭಾಗವಾಗಿ, ಮಾರ್ಚ್ 2021 ರ ವೇಳೆಗೆ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ONORC ಯ ರಾಷ್ಟ್ರೀಯ ರೋಲ್ ಔಟ್‌ ಅನ್ನು ಮೋದಿ ಸರ್ಕಾರ ಘೋಷಿಸಿತು.  ಈವರೆಗೆ ಎಷ್ಟು ಫಲಾನುಭವಿಗಳನ್ನು ಒಳಗೊಂಡಿದೆ..?


32 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಈವರೆಗೆ ONORC ಗೆ ಸೇರ್ಪಡೆಗೊಂಡಿದ್ದು, ಸುಮಾರು 69 ಕೋಟಿ ಎನ್‌ಎಫ್‌ಎಸ್‌ಎ ಫಲಾನುಭವಿಗಳನ್ನು ಒಳಗೊಂಡಿದೆ. ಆದರೆ, ಅಸ್ಸಾಂ, ಛತ್ತೀಸ್‌ಗಢ, ದೆಹಲಿ ಮತ್ತು ಪಶ್ಚಿಮ ಬಂಗಾಳ - ಈ ನಾಲ್ಕು ರಾಜ್ಯಗಳು ಈ ಯೋಜನೆಗೆ ಇನ್ನೂ ಸೇರ್ಪಡೆಯಾಗಿಲ್ಲ. ಪ್ರತಿ ತಿಂಗಳು ONORC ಅಡಿಯಲ್ಲಿ ಸರಾಸರಿ 1.35 ಕೋಟಿ ಪೋರ್ಟಬಿಲಿಟಿ ವಹಿವಾಟು ದಾಖಲಾಗುತ್ತಿದೆ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ ಮಾಹಿತಿ ನೀಡಿದೆ.


ಇದನ್ನೂ ಓದಿ: ಅಕ್ರಮಗಳ ಆರೋಪ; 324 ಮಿಲಿಯನ್ ಕೋವಾಕ್ಸಿನ್​ ಲಸಿಕೆ ಒಪ್ಪಂದವನ್ನು ಅಮಾನತುಗೊಳಿಸಿದ ಬ್ರೆಜಿಲ್


ಆಗಸ್ಟ್ 2019 ರಲ್ಲಿ ONORC ಪ್ರಾರಂಭವಾದ ಬಳಿಕ    ಒಟ್ಟು 27.83 ಕೋಟಿಗೂ ಹೆಚ್ಚು ಪೋರ್ಟಬಿಲಿಟಿ ವಹಿವಾಟುಗಳು ನಡೆದಿವೆ, ಈ ಪೈಕಿ ಸುಮಾರು 19.8 ಕೋಟಿ ಪೋರ್ಟಬಿಲಿಟಿ ವಹಿವಾಟುಗಳು ಕೋವಿಡ್‌ ಸಮಯದಲ್ಲಿ ಅಂದರೆ  ಏಪ್ರಿಲ್ 2020 ರಿಂದ ಮೇ 2021 ರವರೆಗೆ ನಡೆದಿದೆ ಎಂದು ಸಚಿವಾಲಯ ಜೂನ್ 3 ರಂದು ಹೇಳಿತ್ತು. 32 ರಾಜ್ಯಗಳಲ್ಲಿ ಅಂತರ-ರಾಜ್ಯ ಪಡಿತರ ಚೀಟಿ ಪೋರ್ಟಬಿಲಿಟಿ ಲಭ್ಯವಿದ್ದರೂ, ಅಂತಹ ವಹಿವಾಟುಗಳ ಸಂಖ್ಯೆ ಅಂತರ ಜಿಲ್ಲೆ ಮತ್ತು ಅಂತರ-ಜಿಲ್ಲಾ ವಹಿವಾಟುಗಳಿಗಿಂತ ತುಂಬಾ ಕಡಿಮೆ.


4 ರಾಜ್ಯಗಳಲ್ಲಿ ಈ ಸ್ಕೀಂ ಇನ್ನೂ ಏಕೆ ಜಾರಿಗೆ ತಂದಿಲ್ಲ..? ಇದಕ್ಕೆ ಹಲವು ಕಾರಣಗಳಿವೆ. ಉದಾಹರಣೆಗೆ, ONORC ಅನುಷ್ಠಾನಕ್ಕೆ ಪೂರ್ವಾಪೇಕ್ಷಿತವಾಗಿರುವ ನ್ಯಾಯಬೆಲೆ ಅಂಗಡಿಗಳಲ್ಲಿ ePoS ಬಳಕೆಯನ್ನು ದೆಹಲಿ  ಇನ್ನೂ ಪ್ರಾರಂಭಿಸಿಲ್ಲ,   ಪಶ್ಚಿಮ ಬಂಗಾಳದಲ್ಲಿ ಎನ್‌ಎಫ್‌ಎಸ್‌ಎ ಅಲ್ಲದ ಪಡಿತರ ಚೀಟಿ ಹೊಂದಿರುವವರು ಅಂದರೆ ರಾಜ್ಯ ಸರ್ಕಾರ ನೀಡುವ ಪಡಿತರ ಚೀಟಿ ಹೊಂದಿದವರನ್ನು ಸಹ ಈ ಯೋಜನೆಗೆ ಸೇರಿಸಬೇಕೆಂದು ಮಮತಾ ಬ್ಯಾನರ್ಜಿ ಸರ್ಕಾರ ಒತ್ತಾಯಿಸಿದ್ದು, ಈ ಹಿನ್ನೆಲೆ ಒಂದು ರಾಷ್ಟ್ರ ಒಂದು ಪಡಿತರ ವ್ಯವಸ್ಥೆ ಇನ್ನೂ ಜಾರಿಗೆ ಬಂದಿಲ್ಲ ಎಂದು ತಿಳಿದುಬಂದಿದೆ.

top videos
    First published: