• ಹೋಂ
  • »
  • ನ್ಯೂಸ್
  • »
  • Explained
  • »
  • Explained: ZyCoV-D ಲಸಿಕೆಯ ವಿಶೇಷತೆ ಏನು..? ಇದು ಮಕ್ಕಳಿಗೆ ಹೆಚ್ಚು ಸುರಕ್ಷಿತವಾಗಿದೆಯೇ..?

Explained: ZyCoV-D ಲಸಿಕೆಯ ವಿಶೇಷತೆ ಏನು..? ಇದು ಮಕ್ಕಳಿಗೆ ಹೆಚ್ಚು ಸುರಕ್ಷಿತವಾಗಿದೆಯೇ..?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಕೊಲೊರಾಡೋ ಮೂಲದ ಫಾರ್ಮಾ ಜೆಟ್ ತಯಾರಿಸಿರುವ ಸೂಜಿ ರಹಿತ ಲಸಿಕೆಯನ್ನು ಝೈಡಸ್ ಸಂಸ್ಥೆ ತನ್ನ ZyCoV-D ಲಸಿಕೆಯಲ್ಲಿ ಬಳಸಲಿದೆ.

  • Share this:

ಕೇಂದ್ರ ಸರಕಾರದ ತುರ್ತು ಬಳಕೆ ಅನುಮೋದನೆ ಪಡೆದಿರುವ ಝೈಡಸ್ ಕ್ಯಾಡಿಲಾ ಸಂಸ್ಥೆಯ ZyCov-D ಲಸಿಕೆಯು ಸೂಜಿ ರಹಿತ ಲಸಿಕೆಯಾಗಿದೆ. DNA ಪ್ಲಾಟ್‌ಫಾರ್ಮ್‌ನಲ್ಲಿ ನಿರ್ಮಾಣವಾಗಿರುವ ಮೊದಲ ಕೋವಿಡ್-19 ವ್ಯಾಕ್ಸಿನ್ ಕೂಡ ಹೌದು. ಯೂರೋಪ್‌ನಲ್ಲಿ 2017ರಲ್ಲಿ ಅನುಮೋದನೆ ಪಡೆದಿದ್ದ ‘ಟ್ರೋಪಿಸ್’ ಎಂದು ಕರೆಯಲಾದ ನಿರ್ದಿಷ್ಟ ಮಾದರಿಯನ್ನು ಲಸಿಕೆಯಲ್ಲಿ ಬಳಸಲಾಗಿದೆ ಎನ್ನಲಾಗಿದೆ.


ಈ ಲಸಿಕೆಯು 12 ರಿಂದ 18 ವರ್ಷದವರಿಗೂ ಸಂಪೂರ್ಣವಾಗಿ ಸುರಕ್ಷಿತವಾಗಿದ್ದು ಲಸಿಕೆಯನ್ನು ಪ್ರಾಯೋಗಿಕವಾಗಿ ದೃಢೀಕರಿಸಲಾಗಿದೆ. ZyCoV-D ಮೂರು ಡೋಸ್‌ಗಳ ಲಸಿಕೆಯಾಗಿದ್ದು SARS-CoV-2 ವೈರಸ್‌ನ ಸ್ಪೈಕ್ ಪ್ರೊಟೀನ್ ಉತ್ಪಾದಿಸುತ್ತದೆ. ಮೊದಲನೇ ಹಾಗೂ ಎರಡನೇ ಡೋಸ್ ಅಂತರವು 28 ದಿನಗಳಾಗಿದ್ದು ಮೂರನೇ ಡೋಸ್ ಅನ್ನು 56ನೇ ದಿನದಂದು ನೀಡಲಾಗುತ್ತದೆ.


ZyCoV-D ಲಸಿಕೆ ಬಳಸಲು ಝೈಡಸ್ ಸಂಸ್ಥೆ ಬಳಸಿರುವ ಸೂಜಿ-ರಹಿತ ವ್ಯವಸ್ಥೆಯ ವಿವರಗಳೇನು?


ಕೊಲೊರಾಡೋ ಮೂಲದ ಫಾರ್ಮಾ ಜೆಟ್ ತಯಾರಿಸಿರುವ ಸೂಜಿ ರಹಿತ ಲಸಿಕೆಯನ್ನು ಝೈಡಸ್ ಸಂಸ್ಥೆ ತನ್ನ ZyCoV-D ಲಸಿಕೆಯಲ್ಲಿ ಬಳಸಲಿದೆ. ಯೂರೋಪ್‌ನಲ್ಲಿ 2017ರಲ್ಲಿ ಅನುಮೋದನೆ ಪಡೆದಿದ್ದ ‘ಟ್ರೋಪಿಸ್’ ಎಂದು ಕರೆಯಲಾದ ನಿರ್ದಿಷ್ಟ ಮಾದರಿಯನ್ನು ಲಸಿಕೆಯಲ್ಲಿ ಬಳಸಲಾಗಿದೆ.


ಟ್ರೋಪಿಸ್ ಸೂಜಿ ರಹಿತ ವ್ಯವಸ್ಥೆ ಎಂದರೇನು?


ಟ್ರೋಪಿಸ್ ಲಸಿಕೆಗಳನ್ನು ಚರ್ಮದ ಪದರಗಳ ಒಳಗೆ ನೀಡುತ್ತದೆ. ಸೂಜಿಗಳನ್ನು ಬಳಸದೇ ಚರ್ಮದ ಮೂಲಕ ಲಸಿಕೆಗಳನ್ನು ವಿತರಿಸಲು ದ್ರವವನ್ನು ಅಧಿಕ ಒತ್ತಡದಲ್ಲಿ ಚಲಿಸುವಂತೆ ಮಾಡುವ ತಂತ್ರಜ್ಞಾನವಾಗಿದೆ. ಇದರಲ್ಲಿ ಮೂರು ವಿಭಾಗಗಳಿದ್ದು ಇಂಜೆಕ್ಟರ್, ಸೂಜಿ ರಹಿತ ಸಿರಿಂಜ್, ಹಾಗೂ ಫಿಲ್ಲಿಂಗ್ ಅಡಾಪ್ಟರ್‌ ಎಂದು ಹೆಸರಿಸಲಾಗಿದೆ.


ನಾಲ್ಕು ಸರಳ ಹಂತಗಳ ಮೂಲಕ ಲಸಿಕಾ ಪ್ರಕ್ರಿಯೆ ನಡೆಸಲಾಗುತ್ತದೆ: ಇಂಜೆಕ್ಟರ್ ಸಿದ್ಧಪಡಿಸುವುದು, ಸಿರಿಂಜ್ ತುಂಬುವುದು, ಇಂಜೆಕ್ಟರ್ ಲೋಡ್ ಮಾಡುವುದು, ಇಂಜೆಕ್ಶನ್ ಅನ್ನು ದಪ್ಪನೆಯ ತ್ರಿಕೋನ ಭುಜದ ಸ್ನಾಯುವಿಗೆ ನೀಡಲಾಗುತ್ತದೆ.


ಸೂಜಿ ರಹಿತ ಇಂಜೆಕ್ಶನ್ ನೀಡುವುದರ ಪ್ರಯೋಜನಗಳೇನು?


ಸೂಜಿ ರಹಿತ ಇಂಜೆಕ್ಶನ್‌ ಹೆಚ್ಚು ನಿಖರವಾಗಿದ್ದು ತರಬೇತಿಯ ಅಗತ್ಯವಿರುತ್ತದೆ. ಚುಚ್ಚುಮದ್ದು ತೆಗೆದುಕೊಳ್ಳುವವರಿಗೆ ಹಾಗೂ ನೀಡುವವರಿಗೆ ಸೋಂಕು ಸಂಬಂಧಿತ ಆತಂಕ ನಿವಾರಿಸುತ್ತದೆ. ಸೂಜಿಯಿಂದ ಉಂಟಾಗುವ ಯಾವುದೇ ಗಾಯಗಳಿಗೆ ಕಾರಣವಾಗುವುದಿಲ್ಲ. ಸೂಜಿ ರಹಿತ ಸಿರಿಂಜ್ ಕ್ರಿಮಿನಾಶಕ ಹಾಗೂ ಸ್ವಯಂ ನಿಷ್ಕ್ರಿಯಗೊಳಿಸುವಿಕೆ ಮಾಡಬಹುದಾಗಿದ್ದು ಇದನ್ನು ಮರುಬಳಕೆ ಮಾಡಲು ಸಾಧ್ಯವಿಲ್ಲ. ಹಾಗಾಗಿ ಈ ತಂತ್ರಜ್ಞಾನದಲ್ಲಿ ಸಿರಿಂಜಿನ ಮರುಬಳಕೆ ಮಾಡಲಾಗುವುದಿಲ್ಲ.


ದೇಶದಲ್ಲಿ 28,000 ಸ್ವಯಂಸೇವಕರ ಮೇಲೆ ZyCoV-D ಲಸಿಕೆಯ ಪ್ರಯೋಗ ನಡೆಸಲಾಗಿದ್ದು ಇದು 66.6% ಪರಿಣಾಮ ಪ್ರದರ್ಶಿಸುವಲ್ಲಿ ಸಫಲವಾಗಿದೆ ಎಂದು ಸಂಸ್ಥೆ ತಿಳಿಸಿದೆ. ZyCoV-D ಲಸಿಕೆಯು ಹೆಚ್ಚು ಸಂಕ್ರಾಮಿಕ ಡೆಲ್ಟಾ ರೂಪಾಂತರ ಸೇರಿದಂತೆ ಹೊಸ ವೈರಸ್ ತಳಿಗಳ ವಿರುದ್ಧ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬಲ್ಲುದು ಎಂದು ಝೈಡಸ್ ಕ್ಯಾಡಿಲಾ ಸಂಸ್ಥೆ ತಿಳಿಸಿದೆ. ವೈರಸ್‌ನಲ್ಲಿನ ರೂಪಾಂತರಗಳನ್ನು ಎದುರಿಸಲು DNA ಪ್ಲಾಟ್‌ಫಾರ್ಮ್ ಆಧರಿಸಿರುವ “ಪ್ಲಗ್-ಅಂಡ್ ಪ್ಲೇ” ತಂತ್ರಜ್ಞಾನ ಪರಿಣಾಮಕಾರಿಯಾಗಿದೆ ಎಂದು ಸಂಸ್ಥೆ ತಿಳಿಸಿದೆ. ಈ ಲಸಿಕೆಯು ನೋವು ರಹಿತವಾಗಿದ್ದು ಸೂಜಿ ರಹಿತವಾಗಿ ಕಾರ್ಯನಿರ್ವಹಿಸಲಿದೆ.


ಸೂಜಿ ಸಹಿತ ಲಸಿಕೆ ಪಡೆದ ಫಲಾನುಭವಿಗಳಲ್ಲಿ ಉಂಟಾಗುವ ಕೈ ನೋವು, ಕೈಯಲ್ಲಿ ಬಾವು ಬರುವುದು, ಸೂಜಿಯಿಂದ ಉಂಟಾಗುವ ಗಾಯಗಳನ್ನು ZyCoV-D ಲಸಿಕೆ ಉಂಟುಮಾಡುವುದಿಲ್ಲವೆಂದು ಝೈಡಸ್ ಕ್ಯಾಡಿಲಾ ಸಂಸ್ಥೆ ತಿಳಿಸಿದೆ.




ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.

Published by:Latha CG
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು