• Home
 • »
 • News
 • »
 • explained
 • »
 • Explained: ಮಹಾರಾಷ್ಟ್ರ-ಕರ್ನಾಟಕ ಗಡಿ ವಿವಾದ, ಬೆಳಗಾವಿಗೆ ಸಂಬಂಧಿಸಿದಂತೆ ರಾಜ್ಯ ಈವರೆಗೆ ಅಂಗೀಕರಿಸಿರುವ ನಿರ್ಣಯಗಳಿವು!

Explained: ಮಹಾರಾಷ್ಟ್ರ-ಕರ್ನಾಟಕ ಗಡಿ ವಿವಾದ, ಬೆಳಗಾವಿಗೆ ಸಂಬಂಧಿಸಿದಂತೆ ರಾಜ್ಯ ಈವರೆಗೆ ಅಂಗೀಕರಿಸಿರುವ ನಿರ್ಣಯಗಳಿವು!

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ಕಳೆದ ವಾರದಲ್ಲಿ, ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳ ವಿಧಾನಸಭೆಗಳು ಈ ವಿಷಯದ ಬಗ್ಗೆ ತಮ್ಮ ನಿಲುವುಗಳನ್ನು ದೃಢೀಕರಿಸುವ ನಿರ್ಣಯಗಳನ್ನು ಅಂಗೀಕರಿಸಿವೆ. ವಿವಾದ ಆರಂಭವಾದಗಿನಿಂದ ಕರ್ನಾಟಕ ಸರ್ಕಾರವು ತೆಗೆದುಕೊಂಡ ಆರನೇ ನಿರ್ಣಾಯ ಇದಾಗಿದೆ.

 • Trending Desk
 • Last Updated :
 • Karnataka, India
 • Share this:

  ಮಹಾರಾಷ್ಟ್ರ(Maharashtra) ಮತ್ತು ಕರ್ನಾಟಕದ (Karnataka)ಗಡಿ ವಿವಾದ(Border Controversy) ಮುಗಿಯದ ಹಲವು ವರ್ಷಗಳ ಪ್ರಾದೇಶಿಕ ಸಂಘರ್ಷ. ಬೆಳಗಾವಿ(Belagavi) ಮೇಲೆ ಸಂಪೂರ್ಣ ಹಕ್ಕು ಸಾಧಿಸಲು ಎರಡೂ ರಾಜ್ಯಗಳು ಹೋರಾಡುತ್ತಿವೆ. ರಾಜ್ಯದ ಸಿಎಂಗಳ ನಡುವೆ ಟಕ್ಕರ್‌, ನಾಯಕರ ನಡುವೆ ಮಾತಿನ ಪೈಪೋಟಿ, ಪ್ರತಿಭಟನೆ, ಚಳುವಳಿ, ಪರಸ್ಪರ ಕಿತ್ತಾಟಕ್ಕೆ ಮಹಾರಾಷ್ಟ್ರ ಮತ್ತು ಕರ್ನಾಟಕದ ಗಡಿ ವಿವಾದ ಹಲವು ವರ್ಷಗಳಿಂದ ಸಾಕ್ಷಿಯಾಗಿದೆ. ಪ್ರಕರಣಕ್ಕೆ ತುಪ್ಪ ಸುರಿಯುವಂತೆ ಯಾರಾದ್ದಾದರೂ ಹೇಳಿಕೆಗಳು(Statements) ಬಂದರೆ ಸಾಕು ಬೂದಿ ಮುಚ್ಚಿದಂತಿರುವ ಸಂಘರ್ಷಕ್ಕೆ ಬೆಂಕಿ ಹತ್ತಿಕೊಳ್ಳುತ್ತದೆ.


  ಕಳೆದ ವಾರದಲ್ಲಿ, ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳ ವಿಧಾನಸಭೆಗಳು ಈ ವಿಷಯದ ಬಗ್ಗೆ ತಮ್ಮ ನಿಲುವುಗಳನ್ನು ದೃಢೀಕರಿಸುವ ನಿರ್ಣಯಗಳನ್ನು ಅಂಗೀಕರಿಸಿವೆ. ವಿವಾದ ಆರಂಭವಾದಗಿನಿಂದ ಕರ್ನಾಟಕ ಸರ್ಕಾರವು ತೆಗೆದುಕೊಂಡ ಆರನೇ ನಿರ್ಣಾಯ ಇದಾಗಿದೆ. ನಿರ್ಣಯ ಅಂಗೀಕಾರದ ಬೆನ್ನಲ್ಲೇ ವಿವಾದ ಮತ್ತಷ್ಟು ಕಾವು ಪಡೆದುಕೊಳ್ಳುತ್ತಿದೆ. ಕರ್ನಾಟಕದ ಮುಖ್ಯಮಂತ್ರಿಗಳು, ನಾಯಕರು ಈ ವಿಷಯವಾಗಿ ಹಲವಾರು ನಿರ್ಣಯಗಳನ್ನು ತೆಗೆದುಕೊಳ್ಳುತ್ತಲೇ ಬಂದಿದ್ದಾರೆ. ಈ ನಿರ್ಣಯಗಳು ಮಹಾರಾಷ್ಟ್ರ ಸರ್ಕಾರವನ್ನು ಸಹ ಕೆರಳಿಸುತ್ತಲೇ ಬಂದಿವೆ.


  ಹಾಗಾದರೆ ನಾವಿಲ್ಲಿ ಕೋರ್ಟ್ ಅಂಗಳದಲ್ಲಿರುವ ಈ ಗಡಿ ವಿವಾದ ಪ್ರಾರಂಭವಾಗಿದ್ದು ಯಾವಾಗ? ಕರ್ನಾಟಕವು ಈ ವಿಷಯದಲ್ಲಿ ಯಾವ ನಿರ್ಣಯಗಳನ್ನು ಅಂಗೀಕರಿಸಿದೆ ಎಂಬುದನ್ನು ತಿಳಿಯೋಣ.


  ವಿವಾದದ ಸುತ್ತ


  ರಾಜ್ಯಗಳ ಮರುಸಂಘಟನೆ ಕಾಯಿದೆ, 1956ರ ಅಡಿಯಲ್ಲಿ ಭಾಷಾವಾರು ಗಡಿಗಳನ್ನು ಗುರುತಿಸಿದಾಗಿನಿಂದ ಗಡಿ ನಗರವಾಗಿರುವ ಬೆಳಗಾವಿಯು ಕರ್ನಾಟಕದ ಭಾಗವಾಗಿದೆ.


  ಈ ಕಾಯಿದೆಯನ್ನು ಅಂಗೀಕರಿಸಿದಾಗಿನಿಂದ ಮಹಾರಾಷ್ಟ್ರ ಮತ್ತು ಕರ್ನಾಟಕ ರಾಜ್ಯದ ಗಡಿಯುದ್ದಕ್ಕೂ ಕೆಲವು ಪಟ್ಟಣಗಳು ಮತ್ತು ಹಳ್ಳಿಗಳನ್ನು ಸೇರಿಸುವ ಬಗ್ಗೆ ಕಿತ್ತಾಟ ಪ್ರಾರಂಭವಾಗಿದೆ.


  1967ರ ಮಹಾಜನ್ ಸಮಿತಿ ನೀಡಿದ ವರದಿಯಲ್ಲಿ ಬೆಳಗಾವಿ, ನಿಪ್ಪಾಣಿ ಮತ್ತು ಕಾರವಾರ ಕರ್ನಾಟಕಕ್ಕೆ ಸೇರಬೇಕೆಂದು ಹೇಳಿತ್ತು. ಈ ವರದಿಯನ್ನು ಮಹಾರಾಷ್ಟ್ರ ಒಪ್ಪಿಕೊಳ್ಳಲಿಲ್ಲ.


  ಇದನ್ನೂ ಓದಿ: Bomb Cyclone: ಅಮೆರಿಕ, ಕೆನಡಾವನ್ನ ನಡುಗಿಸುತ್ತಿದೆ ಹಿಮಬಿರುಗಾಳಿ; 60ಕ್ಕೂ ಹೆಚ್ಚು ಸಾವು, ವಿಜ್ಞಾನಿಗಳ ತಲೆಕೆಡೆಸಿದ ಆರ್ಕ್ಟಿಕ್‌ನ ತಾಪಮಾನ


  ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕು ಎಂಬುವುದು ಅವರ ವಾದ. 1956ರ ರಾಜ್ಯ ಪುನರ್‌ ವಿಂಗಡಣಾ ಕಾಯ್ದೆಯನ್ನು ಪ್ರಶ್ನಿಸಿ ಮಹಾರಾಷ್ಟ್ರ 2004ರಲ್ಲಿ ಸುಪ್ರೀಂಕೋರ್ಟ್​ ಮೊರೆ ಹೋಗಿದ್ದು, ಹಲವು ವರ್ಷಗಳಿಂದ ಗಡಿವಿವಾದದ ಚೆಂಡು ಸುಪ್ರಿಂ ಅಂಗಳದಲ್ಲಿದೆ.


  2022ರ ಸಿಎಂ ಬಸವರಾಜ ಬೊಮ್ಮಾಯಿ ನಿರ್ಣಯ


  ಡಿಸೆಂಬರ್ 22 ರಂದು, ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರಾಜ್ಯ ವಿಧಾನಮಂಡಲದ ಉಭಯ ಸದನಗಳಲ್ಲಿ ಸರ್ವಾನುಮತದ ನಿರ್ಣಯವನ್ನು ಅಂಗೀಕರಿಸಿದರು.


  amit shah given green signal to cm bommai for cabinet expansion mrq
  ಬಸವರಾಜ್ ಬೊಮ್ಮಾಯಿ, ಸಿಎಂ


  ಬೆಳಗಾವಿ ಮತ್ತು ವಿವಾದಿತ ಪ್ರದೇಶಗಳ ಮೇಲಿನ ಸಂಪೂರ್ಣ ಹಕ್ಕನ್ನು ದೃಢಪಡಿಸಿದರು. ಕರ್ನಾಟಕದ ವಿಷಯಗಳಲ್ಲಿ ಮಧ್ಯಪ್ರವೇಶಿಸಲು ಪ್ರಯತ್ನಿಸುತ್ತಿರುವ ಮಹಾರಾಷ್ಟ್ರ ಸರ್ಕಾರದ ನಾಯಕರ ನಡವಳಿಕೆಯನ್ನು ಕಾನೂನು ಮತ್ತು ಸುವ್ಯವಸ್ಥೆಗೆ ಭಂಗ ತರುತ್ತಿದ್ದಾರೆ ಎಂದು ಕಟುವಾಗಿ ಟೀಕಿಸಿದರು.


  ಎರಡೂ ರಾಜ್ಯಗಳ ಸಂಘರ್ಷ ತಾರಕಕ್ಕೇರುತ್ತಿದ್ದಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಧ್ಯ ಪ್ರವೇಶಿಸಿ ಎರಡೂ ರಾಜ್ಯಗಳ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದರು. ಆದಾದ ಕೆಲವೇ ದಿನಗಳ ನಂತರ ರಾಜ್ಯ ಈ ನಿರ್ಣಯವನ್ನು ತೆಗೆದುಕೊಂಡಿದೆ.


  ಬಾಂಬೆ ರಾಜ್ಯದಿಂದ ಬೆಳಗಾವಿ ಮೈಸೂರು ರಾಜ್ಯಕ್ಕೆ ವರ್ಗಾವಣೆ


  1881 ರ ಜನಗಣತಿಯ ಪ್ರಕಾರ, ಬೆಳಗಾವಿಯಲ್ಲಿ 64.39 ಪ್ರತಿಶತ ಜನರು ಕನ್ನಡ ಮಾತನಾಡುವವರಾಗಿದ್ದರೆ, 26.04 ಪ್ರತಿಶತ ಮರಾಠಿ ಭಾಷಿಕರು. ಆದಾಗ್ಯೂ, ಈ ಪ್ರದೇಶದ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ಮರಾಠಿ ಮಾತನಾಡುವ ಜನಸಂಖ್ಯೆಯು ಪ್ರಾಬಲ್ಯ ಸಾಧಿಸಿದೆ.


  ಮಹಾರಾಷ್ಟ್ರ ಏಕೀಕರಣ ಸಮಿತಿ (MES), ಬೆಳಗಾವಿ ಮೂಲದ ಸಾಮಾಜಿಕ-ರಾಜಕೀಯ ಸಮಿತಿಯನ್ನು 1948 ರಲ್ಲಿ ರಚಿಸಲಾಯಿತು. ಭಾಷಾವಾರು ರಾಜ್ಯಗಳ ರಚನೆಗೆ ಸಂಬಂಧಿಸಿದಂತೆ ನೋಡುವುದಾದರೆ ಅತಿಹೆಚ್ಚು ಮರಾಠಿ ಮಾತನಾಡುವ ಬೆಳಗಾವಿಯನ್ನು ತಪ್ಪಾಗಿ ಕರ್ನಾಟಕಕ್ಕೆ ಸೇರಿಸಲಾಗಿದೆ ಎನ್ನುವುದು ಮಹಾರಾಷ್ಟ್ರದ ವಾದವಾಗಿದೆ.


  ಇದೇ ವಿಚಾರ ಹಲವು ದಶಕಗಳಿಂದ ಸುಪ್ರೀಂ ಕೋರ್ಟ್‌ನಲ್ಲಿದೆ. ಬೆಳಗಾವಿ ಬಾಂಬೆ ರಾಜ್ಯದ ಭಾಗವಾಗಿದ್ದ ಸಮಯದಲ್ಲಿ ಅಂದರೆ 1948 ರಲ್ಲಿ ಬೆಳಗಾವಿ ನಗರ ಸಭೆಯು ಜಿಲ್ಲೆಯನ್ನು ಮರಾಠಿ ಬಹುಸಂಖ್ಯಾತ ಮತ್ತು "ಸಂಯುಕ್ತ ಮಹಾರಾಷ್ಟ್ರ" ದ ಭಾಗವೆಂದು ಬಹುಪಾಲು ಮರಾಠಿ ಮಾತನಾಡುವ ಜನಸಂಖ್ಯೆಯ ಜಿಲ್ಲೆಯನ್ನು ಪ್ರಸ್ತಾವಿತ ಮಹಾರಾಷ್ಟ್ರ ರಾಜ್ಯಕ್ಕೆ ಸೇರಿಸಬೇಕೆಂಬ ನಿರ್ಣಯವನ್ನು ಅಂಗೀಕರಿಸಿತು. ಆ ಸಮಯದಲ್ಲಿ ಬೆಳಗಾವಿ ಬಾಂಬೆ ರಾಜ್ಯದ ಭಾಗವಾಗಿತ್ತು.


  ನ್ಯಾ. ಫಜಲ್ ಅಲಿ ಆಯೋಗ


  ಜಸ್ಟಿಸ್ ಫಜಲ್ ಅಲಿ ಆಯೋಗದ ಸಂಶೋಧನೆಗಳ ಆಧಾರದ ಮೇಲೆ ರಾಜ್ಯ ಮರುಸಂಘಟನೆ ಕಾಯಿದೆ, 1956ರಲ್ಲಿ ಭಾರತದ ರಾಜ್ಯಗಳನ್ನು ಭಾಷಾವಾರು ಆಧಾರದ ಮೇಲೆ ಮರುಸಂಘಟಿಸಲಾಯಿತು.


  ಕ್ರಮೇಣ, ಬೆಳಗಾವಿ ಮತ್ತು ಬಾಂಬೆ ಪ್ರೆಸಿಡೆನ್ಸಿಯ 10 ಇತರ ತಾಲೂಕುಗಳನ್ನು ಮೈಸೂರು ರಾಜ್ಯದ ಭಾಗವಾಗಿ ಮಾಡಲಾಯಿತು. 1973 ರಲ್ಲಿ ಮೈಸೂರಿಗೆ ಕರ್ನಾಟಕ ಎಂದು ಮರುನಾಮಕರಣ ಮಾಡಲಾಯಿತು. ಆದಾದ ನಂತರ 2004ರಲ್ಲಿ, ಮಹಾರಾಷ್ಟ್ರವು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿತು.


  the supreme court has rejected a petition filed by a person to make me president ach
  ಸುಪ್ರೀಂ ಕೋರ್ಟ್


  1956ರಲ್ಲಿ ಸಂಸತ್ತಿನಲ್ಲಿ ರಾಜ್ಯ ಮರುಸಂಘಟನೆ ಕಾಯಿದೆಯನ್ನು ಅಂಗೀಕರಿಸಿದಾಗಿನಿಂದ ಮಹಾರಾಷ್ಟ್ರ ಮತ್ತು ಕರ್ನಾಟಕ ರಾಜ್ಯದ ಗಡಿಯುದ್ದಕ್ಕೂ ಕೆಲವು ಪಟ್ಟಣಗಳು ಮತ್ತು ಹಳ್ಳಿಗಳನ್ನು ಸೇರಿಸುವ ಬಗ್ಗೆ ಕಿತ್ತಾಟ ಪ್ರಾರಂಭವಾಗಿದೆ.


  1953ರಲ್ಲಿ ನೇಮಕಗೊಂಡ ನ್ಯಾಯಮೂರ್ತಿ ಫಜಲ್ ಅಲಿ ಆಯೋಗವು ಎರಡು ವರ್ಷಗಳ ನಂತರ ವರದಿಯನ್ನು ಸಲ್ಲಿಸಿತು. ಈ ಕಾಯ್ದೆಯು ಅದೇ ಆಯೋಗದ ಸಂಶೋಧನೆಗಳನ್ನು ಆಧರಿಸಿದೆ.


  ಇದನ್ನೂ ಓದಿ: Explained: ಚೀನಾದಲ್ಲಿ ಮತ್ತೆ ಕೊರೋನಾ ಹಾವಳಿ, ಜಾಗತಿಕ ಮಟ್ಟದಲ್ಲಿ ಇದರ ಪರಿಣಾಮ ಏನಾಗಬಹುದು?


  ರಾಜ್ಯ ಮರುಸಂಘಟನೆ ಕಾಯಿದೆ ಎತ್ತಿಹಿಡಿದ ಎಸ್ ನಿಜಲಿಂಗಪ್ಪ


  ಮರಾಠಿ ನಾಯಕರಿಗೆ, ಬೆಳಗಾವಿಯನ್ನು ಕರ್ನಾಟಕಕ್ಕೆ ಕೊಡುವ ನಿರ್ಧಾರವು ತೀವ್ರ ಅನ್ಯಾಯವಾಗಿದೆ. 1966 ರಲ್ಲಿ ಮರಾಠಿ ನಾಯಕ ಸೇನಾಪತಿ ಬಾಪಟ್ ಅವರು ಕೇಂದ್ರ ಸರ್ಕಾರ ತನ್ನ ತಪ್ಪನ್ನು ಸರಿಪಡಿಸುವಂತೆ ಒತ್ತಾಯಿಸಿ ಸಾರ್ವಜನಿಕ ಉಪವಾಸ ಸತ್ಯಾಗ್ರಹ ನಡೆಸಿದರು.


  ಒತ್ತಡಕ್ಕೆ ಮಣಿದು ಕೇಂದ್ರ ಸರ್ಕಾರವು ಮಹಾಜನ್ ಆಯೋಗವನ್ನು ರಚಿಸಿತು. ಇದಕ್ಕೆ ಪ್ರತಿಕ್ರಿಯೆಯಾಗಿ, ಕರ್ನಾಟಕದ ನಾಲ್ಕನೇ ಮುಖ್ಯಮಂತ್ರಿ ಮತ್ತು ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಮೊದಲ ಕನ್ನಡಿಗ ಎಸ್ ನಿಜಲಿಂಗಪ್ಪ ಅವರು 1956 ರ ರಾಜ್ಯ ಮರುಸಂಘಟನೆ ಕಾಯಿದೆ ಮತ್ತು ನ್ಯಾಯಮೂರ್ತಿ ಫಜಲ್ ಅಲಿ ಆಯೋಗದ ವರದಿಯನ್ನು ಎತ್ತಿಹಿಡಿಯುವ ನಿರ್ಣಯವನ್ನು 1967 ರಲ್ಲಿ ಅಂಗೀಕರಿಸಿದರು.


  ನಿರ್ಣಾಯಕವಾಗಿ, ಮಹಾಜನ್ ಆಯೋಗವು ಎರಡು ರಾಜ್ಯಗಳ ನಡುವೆ ನಿರ್ದಿಷ್ಟ ಸಂಖ್ಯೆಯ ಹಳ್ಳಿಗಳನ್ನು ವಿನಿಮಯ ಮಾಡಿಕೊಳ್ಳಲು ಶಿಫಾರಸು ಮಾಡಿದಾಗ, ಅದು ಬೆಳಗಾವಿ ಪಟ್ಟಣದ ಮೇಲಿನ ಮಹಾರಾಷ್ಟ್ರದ ಹಕ್ಕನ್ನು ತಿರಸ್ಕರಿಸಿತು.


  ಡಿ. ದೇವರಾಜ್ ಅರಸ್ ನಿರ್ಣಯ ಮಂಡನೆ


  1974 ರಲ್ಲಿ ಎಂಇಎಸ್ ನೇತೃತ್ವದ ಬೆಳಗಾವಿ ನಗರ ಸಭೆಯು ಬೆಳಗಾವಿ ಮಹಾರಾಷ್ಟ್ರದ ಭಾಗವಾಗಬೇಕೆಂದು ನಿರ್ಣಯವನ್ನು ಅಂಗೀಕರಿಸಿತು. 1976 ರಲ್ಲಿ, ಎಂಇಎಸ್‌ನ ಕನಿಷ್ಠ ನಾಲ್ವರು ಶಾಸಕರು ರಾಜ್ಯದಲ್ಲಿ ತಮ್ಮ ಅಜೆಂಡಾವನ್ನು ಮಂಡಿಸುತ್ತಿದ್ದಾಗ, ಕರ್ನಾಟಕ ಮುಖ್ಯಮಂತ್ರಿ ಡಿ. ದೇವರಾಜ್ ಅರಸ್ ಅವರು ರಾಜ್ಯವು 1956 ರ ರಾಜ್ಯ ಮರುಸಂಘಟನಾ ಆಯೋಗದ ಕಾಯಿದೆಯನ್ನು ಅಂಗೀಕರಿಸಿದೆ ಮತ್ತು ಬೆಳಗಾವಿ ಕರ್ನಾಟಕದ ಒಂದು ಭಾಗವಾಗಿದೆ ಎಂದು ಮರುದೃಢೀಕರಿಸುವ ನಿರ್ಣಯವನ್ನು ಅಂಗೀಕರಿಸಿದರು.


  ಭಾಷಸ್ಥಾನಮಾನಕ್ಕೆ ಸಿಎಂ ಗುಂಡೂರಾವ್‌ ಆಗ್ರಹ


  1980ರ ದಶಕದಲ್ಲಿ, ಗೋಕಾಕ್ ಚಳುವಳಿಯಲ್ಲಿ ಆಗಿನ ಮುಖ್ಯಮಂತ್ರಿ ಗುಂಡೂರಾವ್ ಅವರನ್ನು ಕನ್ನಡಕ್ಕೆ ರಾಜ್ಯದ ಅಧಿಕೃತ ಮತ್ತು ಮೊದಲ ಭಾಷೆಯ ಸ್ಥಾನಮಾನವನ್ನು ನೀಡಲು ಒತ್ತಾಯಿಸಿತು.


  ಗೋಕಾಕ್ ಆಂದೋಲನವನ್ನು ಕರ್ನಾಟಕ ಇತಿಹಾಸದಲ್ಲಿ ಒಂದು ಮಹತ್ವದ ಕ್ಷಣವೆಂದು ಪರಿಗಣಿಸಲಾಗಿದೆ, ಇದು ಭಾಷಾಭಿಮಾನದೊಂದಿಗೆ ಸಂಬಂಧಿಸಿದೆ. ಆದರೆ, ಈ ಕ್ರಮಕ್ಕೆ ಬೆಳಗಾವಿಯಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತು.


  ರಾಮಕೃಷ್ಣ ಹೆಗಡೆ ನಿರ್ಧಾರದ ವಿರುದ್ಧ ಶರದ್ ಪವಾರ್ ‘ಸೀಮಾ ಲಡಾಯಿ’


  1985ರಲ್ಲಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ರಾಜ್ಯ ಸರ್ಕಾರಿ ಸೇವೆಗೆ ಕನ್ನಡ ಕಡ್ಡಾಯಗೊಳಿಸಿದ್ದರು. ನಂತರ ಮೊದಲ ಬಾರಿಗೆ ಸಂಸದ ಮತ್ತು ಕಾಂಗ್ರೆಸ್ ನಾಯಕ ಶರದ್ ಪವಾರ್ ಅವರು ಬೆಳಗಾವಿಗೆ ‘ಸೀಮಾ ಲಡಾಯಿ’ ಮೆರವಣಿಗೆ ನಡೆಸಿದರು ಮತ್ತು ಈ ನಿರ್ಧಾರದ ವಿರುದ್ಧ ಪ್ರತಿಭಟನೆ ನಡೆಸಿದರು.


  ಈ ಪ್ರತಿಭಟನೆಗಳು ಹಿಂಸಾತ್ಮಕ ರೂಪ ಪಡೆದುಕೊಂಡು, ಒಂಭತ್ತು ಜನರ ಪ್ರಾಣವನ್ನು ಬಲಿತೆಗೆದುಕೊಂಡಿತು. ಇದೇ ಪ್ರತಿಭಟನೆಯಲ್ಲಿ ಮಹಾರಾಷ್ಟ್ರದ ಪ್ರಸ್ತುತ ಸಿಎಂ, ಏಕನಾಥ್ ಶಿಂಧೆ ಅವರು ಭಾಗಿಯಾಗಿದ್ದರು ಮತ್ತು ಸ್ವಲ್ಪ ದಿನ ಕರ್ನಾಟಕದಲ್ಲಿಯೇ ಜೈಲುವಾಸ ಸಹ ಅನುಭವಿಸಿದರು.


  1986 ರಲ್ಲಿ, ರಾಮಕೃಷ್ಣ ಹೆಗ್ಡೆ ಅವರು ರಾಜ್ಯ ಮರುಸಂಘಟನೆ ಕಾಯ್ದೆ ಮತ್ತು ನ್ಯಾಯಮೂರ್ತಿ ಫಜಲ್ ಅಲಿ ಆಯೋಗದ ವರದಿಯ ನ್ಯಾಯಸಮ್ಮತತೆಯನ್ನು ಪುನರುಚ್ಚರಿಸುವ ಮತ್ತೊಂದು ನಿರ್ಣಯವನ್ನು ಅಂಗೀಕರಿಸಿದರು.


  ಬೆಳಗಾವಿಯಲ್ಲಿ ಎಂಇಎಸ್ ಹಿಡಿತ


  ಕರ್ನಾಟಕದ ವಾಯುವ್ಯ ಜಿಲ್ಲೆ ಬೆಳಗಾವಿಯು ರಾಜ್ಯದ ಭಾಗವಾಗಬೇಕು ಎಂದು ಮಹಾರಾಷ್ಟ್ರವು ಆಗ್ರಹಿಸುತ್ತಿರುವ ಬೆನ್ನಲ್ಲೇ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ರಚನೆಯಾಯಿತು.


  ವರ್ಷ ಉರುಳಿದಂತೆ ಈ ಸಮಿತಿ ಬೆಳಗಾವಿ ಪ್ರದೇಶದಲ್ಲಿ ಪ್ರಬಲವಾಗುತ್ತಾ ಹೋಯಿತು, ಇದು ಜಿಲ್ಲೆಯ ಕೆಲವು ಭಾಗಗಳಲ್ಲಿ ಇನ್ನೂ ಅಧಿಕಾರವನ್ನು ಹೊಂದಿದೆ.


  2005 ರಲ್ಲಿ, MES ನ ಬೆಳಗಾವಿ ಮಹಾನಗರ ಪಾಲಿಕೆಯ ಮೇಯರ್ ವಿಜಯ್ ಮೋರೆ ಅವರು ಬೆಳಗಾವಿ ಮಹಾರಾಷ್ಟ್ರದ ಭಾಗವಾಗಬೇಕು ಎಂದು ನಿರ್ಣಯವನ್ನು ಅಂಗೀಕರಿಸಿದರು.


  ಇದು ಕನ್ನಡ ಹೋರಾಟಗಾರರ ಆಕ್ರೋಶಕ್ಕೆ ಕಾರಣವಾಗಿತ್ತು. ಕನ್ನಡ ಪರ ಸಂಘಟನೆಯಾದ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಮೋರೆ ಅವರ ಮುಖಕ್ಕೆ ಕಪ್ಪು ಬಣ್ಣ ಬಳಿದು ಆಕ್ರೋಶ ವ್ಯಕ್ತಪಡಿಸಿದ್ದರು.


  2006 ರಲ್ಲಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಅವರು ಸಹ ಬೆಳಗಾವಿ ಕರ್ನಾಟಕದ ಭಾಗವಾಗಿ ಉಳಿಯುವ ನಿರ್ಣಯವನ್ನು ಅಂಗೀಕರಿಸಿದರು.


  ಸುವರ್ಣ ಸೌಧ ನಿರ್ಮಿಸಿದ ಬಿಎಸ್ ಯಡಿಯೂರಪ್ಪ


  ಕಳೆದ 2007ರಲ್ಲಿ ಬಿಎಸ್ ಯಡಿಯೂರಪ್ಪ ಅವರ ಸರ್ಕಾರವು ಈ ಪ್ರದೇಶದ ಮೇಲೆ ತನ್ನ ನಿಯಂತ್ರಣವನ್ನು ಪ್ರತಿಪಾದಿಸಲು ಬೆಳಗಾವಿಯಲ್ಲಿ ಸುವರ್ಣ ವಿಧಾನ ಸೌಧವನ್ನು (ವಿಧಾನ ಸಭೆ) ನಿರ್ಮಿಸಲು ಪ್ರಾರಂಭಿಸಿತು.


  former cm bs yediyurappa petition challenging the Karnataka high court order pvn
  ಬಿ. ಎಸ್.ಯಡಿಯೂರಪ್ಪ


  ಕರ್ನಾಟಕ ರಚನೆಯ ಸುವರ್ಣ ಮಹೋತ್ಸವದ ನೆನಪಿಗಾಗಿ ಈ ಕಟ್ಟಡವನ್ನು ನಿರ್ಮಿಸಲಾಗಿದೆ ಮತ್ತು ಕಟ್ಟಡವನ್ನು 2012ರಲ್ಲಿ ಉದ್ಘಾಟಿಸಲಾಯಿತು.


  ವಾರ್ಷಿಕ ಚಳಿಗಾಲದ ಶಾಸಕಾಂಗ ಅಧಿವೇಶನಗಳು ಇಲ್ಲಿ ನಡೆಯುತ್ತವೆ. ಬೆಳಗಾವಿಯಲ್ಲಿ ಕರ್ನಾಟಕದ ವಿಧಾನಸಭೆ ಅಧಿವೇಶನ ನಡೆದಾಗಲೆಲ್ಲಾ ಗಡಿ ಸಮಸ್ಯೆಗಳು ತಲೆದೋರುತ್ತವೆ.

  Published by:Latha CG
  First published: