HOME » NEWS » Explained » EXPLAINED IS FANTASY GAMING REALLY WORK IS DREAM11 UNIQUE HERE IS THE DETAILS STG SCT

Explainer: ಫ್ಯಾಂಟಸಿ ಗೇಮಿಂಗ್ ಬಗ್ಗೆ ನಿಮಗೆಷ್ಟು ಗೊತ್ತು? ಅದು ಹೇಗೆ ಕೆಲಸ ಮಾಡುತ್ತದೆ? ಇಲ್ಲಿದೆ ಮಾಹಿತಿ

2021 ರ ಐಪಿಎಲ್‌ಗೆ ದಿನಗಣನೆ ಶುರುವಾಗಿದ್ದು, ಈ ಹಿನ್ನೆಲೆ ಫ್ಯಾಂಟಸಿ ಗೇಮಿಂಗ್ ಬಗ್ಗೆ ಬಳಕೆದಾರರು ಯಾಕೆ ಕ್ರೇಜಿ ಆಗಿದ್ದಾರೆ, ಅವರ ವ್ಯವಹಾರವು ಕಾನೂನುಬದ್ಧವಾಗಿದೆಯೇ ಮತ್ತು ಅದು ನಿಮ್ಮ ನೆಚ್ಚಿನ ಕ್ರೀಡೆಯ ದೃಷ್ಟಿಕೋನವನ್ನು ಹೇಗೆ ಬದಲಾಯಿಸುತ್ತದೆ ಎಂಬುದನ್ನು ಡಿಕೋಡ್‌ ಮಾಡಲಾಗಿದೆ.

news18-kannada
Updated:March 11, 2021, 10:53 AM IST
Explainer: ಫ್ಯಾಂಟಸಿ ಗೇಮಿಂಗ್ ಬಗ್ಗೆ ನಿಮಗೆಷ್ಟು ಗೊತ್ತು? ಅದು ಹೇಗೆ ಕೆಲಸ ಮಾಡುತ್ತದೆ? ಇಲ್ಲಿದೆ ಮಾಹಿತಿ
ಸಾಂದರ್ಭಿಕ ಚಿತ್ರ
  • Share this:
ಫ್ಯಾಂಟಸಿ ಕ್ರೀಡೆಗಳು ಜಾಗತಿಕವಾಗಿ ಒಂದು ದಶಕದಿಂದಲೂ ಇದ್ದರೂ, ಭಾರತದ ಮಟ್ಟಿಗೆ ಇದು ಹೊಸದು. ಅದರಲ್ಲೂ ಕಳೆದ ವರ್ಷ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕ್ರಿಕೆಟ್ ಪಂದ್ಯಾವಳಿಗೆ ಶೀರ್ಷಿಕೆ ಪ್ರಾಯೋಜಕರಾಗಿ ಡ್ರೀಮ್ 11 ಆಯ್ಕೆಯಾಗಿದ್ದು, ಸಾಂಕ್ರಾಮಿಕ ಸಮಯದಲ್ಲಿ ಕ್ರಿಕೆಟ್‌ ಹಸಿವಿನಿಂದ ಬಳಲುತ್ತಿದ್ದ ಅಭಿಮಾನಿಗಳು ಡ್ರೀಮ್ 11 ನಂತಹ ಆ್ಯಪ್‌ಗಳನ್ನು ಡೌನ್ಲೋಡ್‌ ಮಾಡಿಕೊಂಡಿದ್ದಾರೆ. ಆದರೆ, ಈ ಸ್ಟಾರ್ಟ್ಅಪ್‌ಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದರ ಬಗ್ಗೆ ಅನೇಕರಿಗೆ ತಿಳಿದಿಲ್ಲ. 2021 ರ ಐಪಿಎಲ್‌ಗೆ ದಿನಗಣನೆ ಶುರುವಾಗಿದ್ದು, ಈ ಹಿನ್ನೆಲೆ ಫ್ಯಾಂಟಸಿ ಗೇಮಿಂಗ್ ಬಗ್ಗೆ ಬಳಕೆದಾರರು ಯಾಕೆ ಕ್ರೇಜಿ ಆಗಿದ್ದಾರೆ, ಅವರ ವ್ಯವಹಾರವು ಕಾನೂನುಬದ್ಧವಾಗಿದೆಯೇ ಮತ್ತು ಅದು ನಿಮ್ಮ ನೆಚ್ಚಿನ ಕ್ರೀಡೆಯ ದೃಷ್ಟಿಕೋನವನ್ನು ಹೇಗೆ ಬದಲಾಯಿಸುತ್ತದೆ ಎಂಬುದನ್ನು ಡಿಕೋಡ್‌ ಮಾಡಲಾಗಿದೆ.

ಫ್ಯಾಂಟಸಿ ಕ್ರೀಡೆ ಎಂದರೇನು?

ಫ್ಯಾಂಟಸಿ ಕ್ರೀಡೆಗಳು ಪಂದ್ಯವೊಂದರಲ್ಲಿ ಉತ್ತಮ ಪ್ರದರ್ಶನ ನೀಡಲಿದ್ದಾರೆ ಎಂದು ನೀವು ಭಾವಿಸುವ ಆಟಗಾರರನ್ನು ಆಯ್ಕೆ ಮಾಡುವುದನ್ನು ಒಳಗೊಂಡಿರುತ್ತದೆ. ಕ್ರಿಕೆಟ್, ಫುಟ್ಬಾಲ್, ಬೇಸ್ ಬಾಲ್ ಇತ್ಯಾದಿಗಳಿಗೆ ಇದು ಜಾಗತಿಕವಾಗಿ ಸಾಮಾನ್ಯ ಅಭ್ಯಾಸವಾಗಿದೆ. ಕ್ರಿಕೆಟ್ ಮತ್ತು ಫುಟ್ಬಾಲ್‌ನಲ್ಲಿ ಮೈದಾನದಲ್ಲಿರುವ 22 ಆಟಗಾರರ ಪೈಕಿ ಉತ್ತಮ ಪ್ರದರ್ಶನ ನೀಡುತ್ತಾರೆ ಎಂದು ನೀವು ಭಾವಿಸುವ 11 ಜನರನ್ನು ನೀವು ಆಯ್ಕೆ ಮಾಡುತ್ತೀರಿ. ನಂತರ ಆ ಆಟಗಾರರು ನಿಜವಾಗಿ ಹೇಗೆ ಹಣವನ್ನು ಗೆಲ್ಲಬಹುದು ಎಂಬುದನ್ನು ಆಧರಿಸಿ ನೀವು ಹಣ ಗೆಲ್ಲಬಹುದು. ಕ್ರಿಕೆಟ್‌ ವಿಚಾರದಲ್ಲಿ, ನೀವು ಆಯ್ಕೆ ಮಾಡಿದ ಆಟಗಾರರು ಎಷ್ಟು ರನ್ ಗಳಿಸುತ್ತಾರೆ, ಅವರು ತೆಗೆದುಕೊಳ್ಳುವ ವಿಕೆಟ್‌ಗಳು, ಕ್ಯಾಚ್‌ಗಳು ಮತ್ತು ರನ್ ಔಟ್‌ಗಳ ಆಧಾರದ ಮೇಲೆ ಪಾಯಿಂಟ್ಸ್‌ಗಳನ್ನು ಗಳಿಸುತ್ತಾರೆ.

ಆಟಗಾರರನ್ನು ಆಯ್ಕೆ ಮಾಡಿ ಹಣ ಗೆಲ್ಲುವುದು ಅಷ್ಟೇನಾ..?
ನಿಮಗೆ ಕೆಲವು ಕ್ರೆಡಿಟ್‌ಗಳನ್ನು ನೀಡಲಾಗುತ್ತದೆ (ಆಟಗಾರರನ್ನು ಖರೀದಿಸಲು ಹಣಕ್ಕೆ ಹೋಲುತ್ತದೆ) ಮತ್ತು ನೀವು ಈ ಕ್ರೆಡಿಟ್‌ಗಳಿಂದ ಆಟಗಾರರನ್ನು ಆಯ್ಕೆ ಮಾಡಬಹುದು. ವಿಭಿನ್ನ ಆಟಗಾರರಿಗೆ ವಿಭಿನ್ನವಾಗಿ ಬೆಲೆ ನಿಗದಿಪಡಿಸಲಾಗಿರುತ್ತದೆ. ಆದ್ದರಿಂದ ನೀವು ಎಲ್ಲಾ ಟಾಪ್‌ ಆಟಗಾರರನ್ನು ಆಯ್ಕೆ ಮಾಡಲು ಸಾಧ್ಯವಿಲ್ಲ. ನೀವು ಎರಡೂ ಟೀಂಗಳಿಂದ ಆಟಗಾರರನ್ನು ಆರಿಸಬೇಕಾಗುತ್ತದೆ.

ಹಣ ಸಂಪಾದಿಸುವ “ಪೂಲ್‌ಗಳಲ್ಲಿ” ಭಾಗವಹಿಸಲು, ನೀವು ಪ್ರವೇಶ ಶುಲ್ಕವನ್ನು ನೀಡಬೇಕು. ಅಂತಿಮ ಬಹುಮಾನವನ್ನು ಗೆಲ್ಲಲು (1 ಕೋಟಿ ರೂ.ವರೆಗೆ), ನೀವು ಪರಿಪೂರ್ಣ 11 ಅನ್ನು ಆಯ್ಕೆ ಮಾಡಿದರೆ ಆಗಲ್ಲ. ಇದರ ಜತೆಗೆ, ಪರಿಪೂರ್ಣ ನಾಯಕ ಮತ್ತು ಉಪನಾಯಕ (ಅಥವಾ ಕೆಲವು ಅಪ್ಲಿಕೇಶನ್‌ಗಳಲ್ಲಿ ಟ್ರಿಪಲ್ ಕ್ಯಾಪ್ಟನ್) ಸೇರಿ ಇತರ ಆಟಗಾರರನ್ನು ಆಯ್ಕೆ ಮಾಡಬೇಕು. ಆದ್ದರಿಂದ, ನಿಜವಾಗಿಯೂ ಅಗ್ರ ಬಹುಮಾನವನ್ನು ಗೆಲ್ಲಲು, ನೀವು ಅತ್ಯುತ್ತಮ 11 ಜನರನ್ನು ಆಯ್ಕೆ ಮಾಡುವುದರ ಜತೆಗೆ, ಆ ದಿನದ ಅತ್ಯುತ್ತಮ ಇಬ್ಬರು ಆಟಗಾರರನ್ನು ಸಹ ಸೆಲೆಕ್ಟ್‌ ಮಾಡಬೇಕು.

ಇದನ್ನೂ ಓದಿ: Consumer Rights: ಗ್ರಾಹಕರ ಹಕ್ಕುಗಳ ಬಗ್ಗೆ ನೀವು ತಿಳಿದಿರಲೇಬೇಕಾದ ಮಾಹಿತಿ ಇಲ್ಲಿದೆ...ಎಷ್ಟು ಫ್ಯಾಂಟಸಿ ಕ್ರೀಡಾ ಅಪ್ಲಿಕೇಶನ್‌ಗಳಿವೆ? ಡ್ರೀಮ್ 11 ಭಿನ್ನವಾಗಿದೆಯೇ?
ಭಾರತದಲ್ಲೇ ಮೈ 11 ಸರ್ಕಲ್, ಹಲಾಪ್ಲೇ ಮತ್ತು ಪೇಟಿಎಂ ಫಸ್ಟ್ ಗೇಮ್ಸ್ ಸೇರಿದಂತೆ ಕನಿಷ್ಠ 40 ಅಪ್ಲಿಕೇಶನ್‌ಗಳಿವೆ. ಆ ಆ್ಯಪ್‌ಗಳಲ್ಲೂ ಡ್ರೀಮ್‌ 11 ರೀತಿಯಲ್ಲೇ ಕ್ರೆಡಿಟ್‌ಗಳೊಂದಿಗೆ ಆಟಗಾರರು, ಕ್ಯಾಪ್ಟನ್‌ ಆಯ್ಕೆ ಮಾಡುವುದು ಇರುತ್ತದೆ. ಈ ಅರ್ಥದಲ್ಲಿ, ಡ್ರೀಮ್ 11 ಭಿನ್ನವಾಗಿಲ್ಲ.

ಆದರೂ, ಡ್ರೀಮ್ 11 2019ರಲ್ಲಿ 50 ಮಿಲಿಯನ್ ಬಳಕೆದಾರರನ್ನು ಹೊಂದಿತ್ತು, ಮತ್ತು ಅದರ ಪ್ಲಾಟ್‌ಫಾರ್ಮ್‌ನಲ್ಲಿ 2 ಬಿಲಿಯನ್ ಡಾಲರ್‌ ವಹಿವಾಟುಗಳನ್ನು ಹೊಂದಿತ್ತು. 2020 ರ ಐಪಿಎಲ್‌ ಪ್ರಾಯೋಜಕತೆ ಪಡೆದ ಕಾರಣ ಇನ್ನೂ ಹೆಚ್ಚಿನ ವಹಿವಾಟು ನಡೆದಿರುವ ಸಾಧ್ಯತೆ ಇದೆ.

ಇದು ಕೇವಲ ಅದೃಷ್ಟದ ಆಟವಾ..?
ಫ್ಯಾಂಟಸಿ ಕ್ರೀಡೆಗಳು ಕೌಶಲ್ಯದ ಆಟವೋ ಅಥವಾ ಛಾನ್ಸ್‌ನ ಆಟವೋ ಎಂಬುದರ ಬಗ್ಗೆ ಹೂಡಿಕೆದಾರರು, ವಿಶ್ಲೇಷಕರು ಮತ್ತು ವಕೀಲರು ಸಾಕಷ್ಟು ಬಾರಿ ಚರ್ಚೆ ಮಾಡಿದ್ದಾರೆ. ಭಾರತದ ಹೆಚ್ಚಿನ ರಾಜ್ಯಗಳು ಇದನ್ನು ಕಾನೂನುಬದ್ಧವೆಂದು ಪರಿಗಣಿಸುತ್ತವೆ. ಆದರೆ, ಆಂಧ್ರಪ್ರದೇಶ, ಅಸ್ಸಾಂ, ಒಡಿಶಾ, ತೆಲಂಗಾಣ, ನಾಗಾಲ್ಯಾಂಡ್ ಮತ್ತು ಸಿಕ್ಕಿಂನಂತಹ ಕೆಲವು ರಾಜ್ಯಗಳಲ್ಲಿ ಅವಕಾಶವಿಲ್ಲ.

2019 ರಲ್ಲಿ, ಇದು ಕೌಶಲ್ಯದ ಆಟ ಎಂದು ಬಾಂಬೆ ಹೈಕೋರ್ಟ್ ತೀರ್ಪು ನೀಡಿತ್ತು. ಈ ಬಗ್ಗೆ ಗುರುದೀಪ್ ಸಿಂಗ್ ಸಚಾರ್ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಹೋಗಿದ್ದು, ಇದು ಜೂಜಾಟ ಎಂದು ವಾದ ಮಾಡಿದ್ದರು. ಕ್ರಿಮಿನಲ್ ಮೊಕದ್ದಮೆಗಳನ್ನು ಪ್ರಾರಂಭಿಸಲು ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಹೂಡಿದ್ದರು, ಆದರೆ, ಸದ್ಯಕ್ಕೆ ಕಾನೂನು ಕ್ರಮಗಳನ್ನು ಸ್ಥಗಿತಗೊಳಿಸಿ ಸುಪ್ರೀಂ ಕೋರ್ಟ್ ಸ್ಟೇ ಆರ್ಡರ್‌ ನೀಡಿತ್ತು.

ಹಣ ಇಟ್ಟು ಆಟವಾಡುವುದು ಕಡ್ಡಾಯವೇ?
ಇಲ್ಲ. ಈ ಅಪ್ಲಿಕೇಶನ್‌ಗಳು ಉಚಿತ ಅಥವಾ ಅಭ್ಯಾಸದ ಮೋಡ್ ಅನ್ನು ಸಹ ಹೊಂದಿವೆ. ಅಲ್ಲಿ ನೀವು ಆಟಗಾರರನ್ನು ಆಯ್ಕೆ ಮಾಡಬಹುದು ಮತ್ತು ಅವರ ಕಾರ್ಯಕ್ಷಮತೆಯನ್ನು ಟ್ರ್ಯಾಕ್ ಮಾಡಬಹುದು ಹಾಗೂ ಹಣವಿಲ್ಲದೆ ನಿಮ್ಮ ಸ್ನೇಹಿತರೊಂದಿಗೆ ಸ್ಪರ್ಧಿಸಬಹುದು.

ಫ್ಯಾಂಟಸಿ ಕ್ರೀಡೆ ಏಕೆ ಅಷ್ಟೊಂದು ಜನಪ್ರಿಯವಾಗಿದೆ?
ಫ್ಯಾಂಟಸಿ ಕ್ರೀಡೆಗಳು ಭಾವೋದ್ರಿಕ್ತ ಅಭಿಮಾನಿಗಳ ಜ್ಞಾನವನ್ನು ಪರೀಕ್ಷಿಸುತ್ತವೆ. ಅವರಲ್ಲಿ ಹಲವರು ಈ ಆಟಗಳು, ಆಟಗಾರರು ಮತ್ತು ಅವುಗಳನ್ನು ವಿಶ್ಲೇಷಿಸಲು ಸಾಕಷ್ಟು ಸಮಯವನ್ನು ಕಳೆಯುತ್ತಾರೆ. ಲಕ್ಷಾಂತರ ಇತರರೊಂದಿಗೆ ಸ್ಪರ್ಧೆಯನ್ನು ಸಹ ಪ್ರೋತ್ಸಾಹಿಸುತ್ತದೆ. ಅಲ್ಪ ಮೊತ್ತದ ಹಣ ಗೆದ್ದರೂ, ಅದು ತನ್ನದೇ ಆದ ರೋಮಾಂಚನವನ್ನು ಹೊಂದಿದೆ.

ಒಂದು ಪಂದ್ಯದಲ್ಲಿ 40 ಲಕ್ಷ ಜನರು ಈ ಅಪ್ಲಿಕೇಷನ್‌ಗಳಲ್ಲಿ ಅಡಿದರೆ, ಆ ಪೈಕಿ ಕೇವಲ 5-10 ಜನರು ಮಾತ್ರ ದೊಡ್ಡ ಮೊತ್ತ ಹಣ ಗೆಲ್ಲುತ್ತಾರೆ (1 ಲಕ್ಷ ಅಥವಾ ಅದಕ್ಕಿಂತ ಹೆಚ್ಚು). ಆದರೆ 50-60 ಪ್ರತಿಶತದಷ್ಟು ಆಟಗಾರರು ಏನನ್ನಾದರೂ ಗೆಲ್ಲುತ್ತಾರೆ. ಆದರೆ ಆ ಸಣ್ಣ ಮೊತ್ತವನ್ನು ಗೆಲ್ಲುವುದು ಸಹ ಬಳಕೆದಾರರನ್ನು ಆ್ಯಪ್‌ಗಳಲ್ಲಿ ಮುಂದುವರಿಸಿಕೊಂಡು ಹೋಗುತ್ತದೆ.

ಪೂಲ್ ಎಂದರೇನು? ಮತ್ತು ಈ ಗೆಲುವುಗಳನ್ನು ಹೇಗೆ ಡಿಸ್ಟ್ರಿಬ್ಯೂಟ್‌ ಮಾಡಲಾಗುತ್ತದೆ..?
ಪೂಲ್‌ ಎಂದರೆ ಒಂದು ಆಟದಲ್ಲಿ ಸ್ಪರ್ಧಿಸಲು ಹಣವನ್ನು ಸಂಗ್ರಹಿಸಿದ ಜನರ ಗುಂಪು. ಉದಾಹರಣೆಗೆ, 40 ಲಕ್ಷ ಜನರು ತಲಾ 10 ರೂ. ಹಣ ಹೂಡಿದ್ದರೆ, ಒಟ್ಟು 4 ಕೋಟಿ ರೂ. ಸಂಗ್ರಹವಾಗಿರುತ್ತದೆ. ಈ ಪೈಕಿ ಫಸ್ಟ್‌ ಪ್ರೈಜ್‌ ಗೆದ್ದ ವಿಜೇತರಿಗೆ 1 ಕೋಟಿ ರೂ., ರನ್ನರ್ ಅಪ್‌ ಗೆದ್ದವರಿಗೆ 50 ಲಕ್ಷ ರೂ. ಹೋಗುತ್ತದೆ.

ಇದನ್ನು ಆಡುವುದರಿಂದ ನೀವು ಆಟವನ್ನು ನೋಡುವ ರೀತಿ ಬದಲಾಗುತ್ತಾ..?
ಹೌದು. ಹೆಚ್ಚಿನ ಅಭಿಮಾನಿಗಳು ತಮ್ಮ ತಂಡವನ್ನು ಬೆಂಬಲಿಸುತ್ತಾ ಆಟವನ್ನು ನೋಡುತ್ತಾರೆ. ಆದರೆ ನೀವು ಫ್ಯಾಂಟಸಿ ತಂಡವನ್ನು ಹೊಂದಿರುವಾಗ, ನೀವು ತಂಡಗಳಿಗಿಂತ ಹೆಚ್ಚು ಆಟಗಾರರನ್ನು ಬೆಂಬಲಿಸುತ್ತಿದ್ದೀರಿ. ಸಾಂಪ್ರದಾಯಿಕ ಕ್ರೀಡಾ ವೀಕ್ಷಣೆಗೆ ವಿರುದ್ಧವಾಗಿ, ಫ್ಯಾಂಟಸಿ ಕ್ರೀಡೆಗಳು ತಂಡದ ನಿಷ್ಠೆಯನ್ನು ಕಡಿಮೆ ಹೊಂದಿರುತ್ತವೆ.

ಕಂಪನಿಯು ತನ್ನ ಸ್ವಂತ ಹಣವನ್ನು ಅಥವಾ ಹೂಡಿಕೆದಾರರ ಹಣವನ್ನು ಬಳಸಿಕೊಂಡು ದೊಡ್ಡ ಪೂಲ್‌ಗಳನ್ನು ಹೊಂದಲು ಸಾಧ್ಯವಿಲ್ಲವೇ?
ಫ್ಯಾಂಟಸಿ ಕ್ರೀಡಾ ವ್ಯವಹಾರವು ಅದರ ಕಡಿಮೆ-ವೆಚ್ಚದ ಆಧಾರದಿಂದಾಗಿ ಜಾಗತಿಕವಾಗಿ ಬಹಳ ಲಾಭದಾಯಕವಾಗಿದೆ. ಒಂದು ಕಂಪನಿಯು ತನ್ನದೇ ಆದ, ಅಥವಾ ಹೂಡಿಕೆದಾರರ ಹಣವನ್ನು ಬಳಸಿಕೊಂಡು ಪೂಲ್‌ಗಳಿಗೆ ಹಣವನ್ನು ನೀಡಲು ನಿರ್ಧರಿಸಿದರೆ - ಅದು ಎಷ್ಟು ಕಾಲ ಸಮರ್ಥನೀಯವಾಗಿರುತ್ತದೆ? ಒಂದು ದಿನ ಬಳಕೆದಾರರು ಹೆಚ್ಚಾಗುತ್ತಾರೆ ಎಂಬ ಭರವಸೆಯಿಂದ ಕಂಪನಿಗಳು ಒಂದು ಆಟಕ್ಕೆ ಪ್ರತಿದಿನ ಮಿಲಿಯನ್ ಡಾಲರ್ ಹಣ ಖರ್ಚು ಮಾಡಲು ಸಾಧ್ಯವಿಲ್ಲ ಎಂದು ಹೂಡಿಕೆದಾರರು ಹೇಳುತ್ತಾರೆ.
Published by: Sushma Chakre
First published: March 11, 2021, 10:53 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories