HOME » NEWS » Explained » EXPLAINED HOW TO REGISTER ONLINE FOR CORONA VACCINE REGISTRATION THROUGH COWIN PORTAL SKTV

Explained: Corona Vaccine: ಲಸಿಕೆ ಪಡೆಯೋಕೆ ಆನ್​ಲೈನ್​ ಮೂಲಕ ರೆಜಿಸ್ಟರ್ ಮಾಡಿಕೊಳ್ಳೋದು ಹೀಗೆ ! 

ಮುಂಚೆಯೇ ಆನ್​ಲೈನ್ ಮೂಲಕ ನೋಂದಣಿ ಮಾಡಿಟ್ಟುಕೊಂಡರೆ ಲಸಿಕೆ ಬಂದ ವಿಚಾರ ತಿಳಿಯುತ್ತಿದ್ದಂತೆ ನಿಮ್ಮ ಹತ್ತಿರದ ಲಸಿಕಾ ಕೇಂದ್ರದಲ್ಲಿ ಸ್ಲಾಟ್ ಬುಕ್ ಮಾಡಿಕೊಂಡು ಲಸಿಕೆ ಪಡೆದುಕೊಳ್ಳಬಹುದು. ಹಾಗಂತ ಆನ್​ಲೈನ್ ಮೂಲಕ ನೋಂದಣಿ ಮಾಡಿಕೊಳ್ಳೋದು ಅಷ್ಟೇನು ಕಷ್ಟದ ಕೆಲಸವಲ್ಲ. ಅದು ಬಹಳ ಸುಲಭವಿದೆ, ಹೇಗೆ ಅನ್ನೋದರ ಸಂಪೂರ್ಣ ವಿವರ ಇಲ್ಲಿದೆ.

news18-kannada
Updated:May 12, 2021, 10:39 AM IST
Explained: Corona Vaccine: ಲಸಿಕೆ ಪಡೆಯೋಕೆ ಆನ್​ಲೈನ್​ ಮೂಲಕ ರೆಜಿಸ್ಟರ್ ಮಾಡಿಕೊಳ್ಳೋದು ಹೀಗೆ ! 
ಸಾಂದರ್ಭಿಕ ಚಿತ್ರ
  • Share this:
Corona Vaccine Registration: ದೇಶದ ಅನೇಕ ಕಡೆ ಇನ್ನೂ ಅಗತ್ಯವಿದ್ದಷ್ಟು ಕೋವಿಡ್ ಲಸಿಕೆ ಸಿಗುತ್ತಿಲ್ಲ ನಿಜ. ಆದ್ರೆ ಮುಂಚೆಯೇ ಆನ್​ಲೈನ್ ಮೂಲಕ ನೋಂದಣಿ ಮಾಡಿಟ್ಟುಕೊಂಡರೆ ಲಸಿಕೆ ಬಂದ ವಿಚಾರ ತಿಳಿಯುತ್ತಿದ್ದಂತೆ ನಿಮ್ಮ ಹತ್ತಿರದ ಲಸಿಕಾ ಕೇಂದ್ರದಲ್ಲಿ ಸ್ಲಾಟ್ ಬುಕ್ ಮಾಡಿಕೊಂಡು ಲಸಿಕೆ ಪಡೆದುಕೊಳ್ಳಬಹುದು. ಹಾಗಂತ ಆನ್​ಲೈನ್ ಮೂಲಕ ನೋಂದಣಿ ಮಾಡಿಕೊಳ್ಳೋದು ಅಷ್ಟೇನು ಕಷ್ಟದ ಕೆಲಸವಲ್ಲ. ಅದು ಬಹಳ ಸುಲಭವಿದೆ, ಹೇಗೆ ಅನ್ನೋದರ ಸಂಪೂರ್ಣ ವಿವರ ಇಲ್ಲಿದೆ.

ಮೊದಲು ಲಿಂಕ್ ಓಪನ್ ಮಾಡಿ:

https://www.cowin.gov.in/home ಈ ಲಿಂಕ್ ನ್ನು ಮೊದಲು ಕ್ಲಿಕ್ ಮಾಡಿ. ನಿಮ್ಮ ಲ್ಯಾಪ್​ಟಾಪ್, ಡೆಸ್ಕ್​ಟಾಪ್, ಟ್ಯಾಬ್ ಅಥವಾ ಮೊಬೈಲ್ ಫೋನ್ ಯಾವುದರಿಂದ ಬೇಕಿದ್ದರೂ ಸುಲಭವಾಗಿ ರೆಜಿಸ್ಟರ್ ಮಾಡಬಹುದು. ಮೊದಲಿಗೆ ಈ ಲಿಂಕ್ ಕ್ಲಿಕ್ ಮಾಡಿದಾಗ ಕೋವಿನ್ ಪೋರ್ಟಲ್​ನ ಮುಖ್ಯ ಪೇಜ್ ತೆರೆಯುತ್ತದೆ. ಒಂದು ವೇಳೆ ನೀವು ಕಚೇರಿಯ ಕಂಪ್ಯೂಟರ್ ಬಳಸುತ್ತಿದ್ದರೆ ಆಗ ಕೆಲವೊಮ್ಮೆ ಈ ಪೇಜ್ ತೆರೆಯದೇ ಇರುವ ಸಾಧ್ಯತೆ ಇರುತ್ತದೆ. ಕೆಲವು ಕಚೇರಿಗಳಲ್ಲಿ ನಿರ್ದಿಷ್ಟ ಸೈಟ್​ಗಳಿಗೆ ಮಾತ್ರ ಅವಕಾಶ ಇರುವಂತೆ ವೈ ಫೈ ಮತ್ತು ಕಂಪ್ಯೂಟರ್​ಗಳನ್ನು ರಿಸ್ಟ್ರಿಕ್ಟ್ ಮಾಡಿರುತ್ತಾರೆ. ಅಂಥಾ ಸಂದರ್ಭದಲ್ಲಿ ನಿಮ್ಮ ಮೊಬೈಲ್ ಫೋನ್ ಅಥವಾ ಖಾಸಗಿ ಕಂಪ್ಯೂಟರ್​ನಲ್ಲಿ ಇದನ್ನು ಬಳಸಬಹುದು.

ಮುಖ್ಯ ಪೇಜ್ ತೆರೆದ ನಂತರ ಬಲಭಾಗದ ಮೇಲ್ಗಡೆ ರೆಜಿಸ್ಟರ್ ಅಥವಾ ಸೈನ್​ ಅಪ್ ಎನ್ನುವ ಆಯ್ಕೆ ಇರುತ್ತದೆ. ಅದನ್ನು ಕ್ಲಿಕ್ ಮಾಡಿ. ಮೊದಲು ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಬೇಕಾಗುತ್ತದೆ. ಆಗ ನಿಮ್ಮ ಮೊಬೈಲ್ ಸಂಖ್ಯೆಗೆ ಬರುವ ಒಟಿಪಿಯನ್ನು ಅಲ್ಲಿ ನಮೂದಿಸಿ.

ಇದನ್ನೂ ಓದಿhttps://kannada.news18.com/news/coronavirus-latest-news/oxygen-shortage-everywhere-what-is-the-severity-of-corona-for-a-patient-to-be-icu-or-o2-dependent-sktv-559607.html

ನಂತರ ಅದರಲ್ಲಿ ಕೇಳಿದಂತೆ ನಿಮ್ಮ ವಿವರಗಳನ್ನು ತುಂಬಿಸಿ. ಸರ್ಕಾರಿ ದಾಖಲೆಗಳಲ್ಲಿ ಇರುವಂತೆ ನಿಮ್ಮ ಹೆಸರು, ಜನ್ಮವರ್ಷ, ಆಧಾರ್ ಕಾರ್ಡ್ ಅಥವಾ ಓಟರ್ ಐಡಿ ಅಥವಾ ಡ್ರೈವಿಂಗ್ ಲೈಸೆನ್ಸ್​ನ ಸಂಖ್ಯೆಯನ್ನು ದಾಖಲಿಸಬೇಕಾಗುತ್ತದೆ. ಇದಿಷ್ಟಾದರೆ ನೀವು ಲಸಿಕೆ ಪಡೆಯಲು ನೋಂದಣಿ ಮಾಡಿಕೊಂಡಂತೆಯೇ.

ನಂತರ ನಿಮ್ಮ ಪ್ರದೇಶದ ಪಿನ್​ಕೋಡ್ ಹಾಕಿದಾಗ ನಿಮ್ಮ ಸಮೀಪದ ಯಾವ ಕೇಂದ್ರದಲ್ಲಿ ಲಸಿಕೆ ಸಿಗುತ್ತಿದೆ ಎನ್ನುವ ಮಾಹಿತಿ ದೊರೆಯುತ್ತದೆ. ಆ ಕೇಂದ್ರದಲ್ಲಿ ನಿಮ್ಮ ಅನುಕೂಲದ ದಿನಾಂಕ ಮತ್ತು ಸಮಯಕ್ಕೆ ಲಸಿಕೆ ಪಡೆಯಲು ಮುಂಗಡವಾಗಿ ಬುಕ್ ಮಾಡಿಕೊಳ್ಳುವ ಅವಕಾಶವಿದೆ.
Youtube Video

ಸದ್ಯ ಲಸಿಕೆಯ ಅಭಾವ ಇರುವುದರಿಂದ ಲಸಿಕಾ ಕೇಂದ್ರದ ವಿವರಗಳು ಎಲ್ಲರಿಗೂ ಸಿಗದೇ ಇರಬಹುದು. ಆದರೆ ಮುಂಗಡವಾಗಿ ನೋಂದಣಿ ಮಾಡಿಕೊಳ್ಳುವುದು ಉತ್ತಮ. ಮುಂದಿನ ದಿನಗಳಲ್ಲಿ ಆದ್ಯತೆಯ ಮೇರೆಗೆ ಲಸಿಕೆ ಹಂಚಿಕೆ ಎಂದಾದಲ್ಲಿ ಆಗ ನೋಂದಣಿ ಮಾಡುವ ಕೆಲಸ ಉಳಿಯುತ್ತದೆ. ಕೊರೊನಾ ಸೋಂಕಿನ ಆರ್ಭಟ ಹೆಚ್ಚೇ ಇರುವುದರಿಂದ ಲಸಿಕೆಯ ಮೂಲಕ ಅದಕ್ಕೊಂದು ಅಂತ್ಯ ಹಾಡುವ ಅವಕಾಶವಿದ್ದು, ಅದನ್ನು ಜನ ಸದುಪಯೋಗ ಪಡೆದುಕೊಳ್ಳಬೇಕಿದೆ.
Published by: Soumya KN
First published: May 12, 2021, 10:39 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories