Explained: ಸಿಡಿಲು-ಮಿಂಚಿನಿಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳುವುದು ಹೇಗೆ? ಇಲ್ಲಿದೆ ನೋಡಿ ಅತ್ಯುತ್ತಮ ಮಾಹಿತಿ

ಈಗಾಗಲೇ ಕೆಲವೆಡೆ ಮಳೆ ಸುರಿಯುತ್ತಿದೆ. ಪ್ರತಿ ವರ್ಷ ಸಿಡಿಲು, ಮಿಂಚಿನಿಂದ ಅನಾಹುತ ನಡೆಯುತ್ತವೇ ಇರುತ್ತವೆ. ಮುಂದಂತೂ ಮಳೆಗಾಲ ಬಲಲಿದ್ದು, ಅಪಾಯ ಇನ್ನಷ್ಟು ಜಾಸ್ತಿ. ಹಾಗಿದ್ದರೆ ಇದರಿಂದ ತಪ್ಪಿಸಿಕೊಳ್ಳುವುದು ಹೇಗೆ? ಈ ಬಗ್ಗೆ ಇಲ್ಲಿದೆ ಮಾಹಿತಿ..

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಮಳೆಗಾಲ (Rainy season) ಅಂದರೆ ಯಾರಿಗೆ ಸಂತಸವಿಲ್ಲ ಹೇಳಿ? ಮಳೆ ಅಂದರೆ ನವಿಲು (peacock) ಗರಿಬಿಚ್ಚಿ ಕುಣಿಯುತ್ತದೆ, ಒಣಗಿ ಹೋದ ಭೂಮಿ (Earth) ಮಳೆಗಾಗಿ (Rain) ಕಾಯುತ್ತದೆ, ಮೊದಲ ಮಳೆಯಲ್ಲಿ ನೆನೆವ ಸಂಭ್ರಮ ಮಕ್ಕಳಿಗಾದರೆ, ರಸಿಕರಿಗೆ ಮಳೆಯಲ್ಲಿ ಸಂಗಾತಿ ನೆನಪಾಗುತ್ತಾಳೆ. ರೈತರಿಗೆ (farmers) ಮೊದಲ ಮಳೆಯೆಂದರೆ ಜೀವವೇ ಬಂದಂತೆ, ಕವಿ ಪುಂಗವರು ಮಳೆಯಲ್ಲಿ ನೆನೆಯದೇ ಬೆಚ್ಚಗೆ ಕುಳಿತು, ಮಳೆ ಬಗ್ಗೆ ಸಾಲು ಸಾಲು ಕವನ (Poem) ಕಟ್ಟುತ್ತಾರೆ. ಹೌದು ಮಳೆ ಎಂದರೆ ಎಲ್ಲರಿಗೂ ಖುಷಿ, ಆದರೆ ಆ ಮಳೆ ಕೆಲವೊಮ್ಮೆ ಮಾಡುವ ಅನಾಹುತ ಅಷ್ಟಿಷ್ಟಲ್ಲ. ಮಳೆ ಜೊತೆಗೆ ಬರುವ ಸಿಡಿಲು (Thunderbolt), ಮಿಂಚು (lightning), ಗುಡುಗು (thunder), ಗಾಳಿ (Wind) ಇವೆಲ್ಲ ಮನುಷ್ಯನ ಬದುಕನ್ನೇ ನಾಶ ಮಾಡಿದ ನಿದರ್ಶನವೂ ಇದೆ.

 ಗುಡುಗು-ಮಿಂಚು ಹೇಗೆ ಉಂಟಾಗುತ್ತದೆ?

 ಎಲ್ಲ ಮೋಡಗಳೂ ಗುಡುಗು ಸಿಡಿಲನ್ನು ಉಂಟು ಮಾಡುವುದಿಲ್ಲ. ಮಳೆಗಾಲದಲ್ಲಿ ನೀರಿನ ಅಂಶ ಮತ್ತು ವಿದ್ಯುತ್​ ಅಂಶಗಳನ್ನು ಹೊಂದಿರುವ ಮೋಡಗಳು ಮಾತ್ರ ಸಿಡಿಲು ಹಾಗೂ ಗುಡುಗನ್ನು ಉಂಟು ಮಾಡುತ್ತವೆ. ಧನಾತ್ಮಕ ಹಾಗೂ ಋಣಾತ್ಮಕ ವಿದ್ಯುತ್ ಅಂಶಗಳಿರುವ ಮೋಡಗಳು ಬೇರೆ ಬೇರೆಯಾಗಿರುತ್ತವೆ. ಇವೆರಡೂ ಪರಸ್ಪರ ವಿರುದ್ಧವಿರುವ ಮೋಡಗಳಾಗಿದ್ದು, ತುಂಬಾ ಹತ್ತಿರ ಬಂದಾಗ ಋಣ ವಿದ್ಯುತ್ ಅಂಶಗಳು ಒಮ್ಮೆಲೆ ಧನಾತ್ಮಕ ಅಂಶಗಳಿರುವ ಮೋಡದ ಕಡೆಗೆ ಅಪ್ಪಳಿಸುತ್ತವೆ.

 30 ಸೆಕೆಂಡ್‌ಗಿಂತ ಅಧಿಕವಿದ್ದರೆ ಅಪಾಯ

ಈ ರೀತಿ ಅಪಾರ ವಿದ್ಯುತ್​ ಅಂಶಗಳು ಒಂದು ಮೋಡದಿಂದ ಇನ್ನೊಂದು ಮೋಡಕ್ಕೆ ಜಿಗಿದಾಗ ಬೆಳ್ಳಿಯಂಥ ಪ್ರಖರ ಬೆಳಕಿನ ಗೆರೆಗಳು ಮಿಂಚಿ ಮಾಯವಾಗುತ್ತವೆ. ಇದೇ ಮಿಂಚು. ಮಿಂಚಿನ ಪ್ರಕಾಶ ಮತ್ತು ಅದರ ಶಬ್ದ ಕೇಳಿಸುವುದು, ಇವುಗಳಲ್ಲಿ 30 ಸೆಕೆಂಡುಗಳಿಗಿಂತ ಕಡಿಮೆ ಅಂತರವಿದ್ದರೆ, ಆ ಮಿಂಚು ಅಪಾಯಕಾರಿಯಾಗಿದೆ ಎಂದು ತಿಳಿದುಕೊಳ್ಳಬೇಕು.

ಇದನ್ನೂ ಓದಿ: Explained: Lt Gen Manoj Pande ಭಾರತದ ಹೊಸ ಸೇನಾ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಮನೋಜ್ ಪಾಂಡೆ ಅವರ ಬಗ್ಗೆ ನಿಮಗೆ ಗೊತ್ತಿಲ್ಲದ ಸಂಗತಿಗಳು!

 ಕೆಲವೊಮ್ಮೆ ಈ ಮಿಂಚಿನ ಬೆಳಕು ಮೋಡಗಳಿಂದ ಭೂಮಿಗೂ ಹರಿಯುತ್ತವೆ. ಈ ಎರಡು ಮೋಡಗಳ ಮರ್ಧಯೆ ಇರುವ ಗಾಳಿ ಈ ವಿದ್ಯುತ್ ಆಘಾತದಿಂದ ಒಮ್ಮೆಗೆ ಕಾದು ಸಿಡಿಯುತ್ತದೆ. ಆಗ ದೊಡ್ಡದಾಡ ಶಬ್ದ ಉಂಟಾಗುತ್ತದೆ. ಇದನ್ನು ಗುಡುಗು ಎನ್ನುತ್ತೇವೆ.

 ಸೂರ್ಯನ ಶಾಖಕ್ಕಿಂತ ಬಿಸಿಯಾಗಿರುತ್ತದೆ ಮಿಂಚು!

ಮಿಂಚು ಅಂದಾಜು 30,000 ಡಿಗ್ರಿ ಸೆಲ್ಸಿಯಷ್‌ನಷ್ಟು ಬಿಸಿ ಇರುತ್ತದೆ. ಅಂದರೆ ಸೂರ್ಯನ ಮೇಲ್ಮೈಗಿಂತ ಆರು ಪಟ್ಟು ಹೆಚ್ಚು ಬಿಸಿ. ಈ ಶಾಖವು ಸುತ್ತಮುತ್ತಲಿನ ಗಾಳಿಯನ್ನು ವೇಗವಾಗಿ ವಿಸ್ತರಿಸಲು ಮತ್ತು ಕಂಪಿಸಲು ಕಾರಣವಾಗುತ್ತದೆ. ಹೀಗಾಗಿ ಮಿಂಚಿನ ಬೆಳಕಿನ ಫ್ಲ್ಯಾಶ್ ಅನ್ನು ನೋಡಿದ ಸ್ವಲ್ಪ ಸಮಯದಲ್ಲಿ ನಮಗೆ ಸಿಡಿಲಿನ ಶಬ್ಧ ಕೇಳಿಸುತ್ತದೆ.

ಸಿಡಿಲ ಹೊಡೆತದಿಂದ ಸಾಲು ಸಾಲು ಸಾವು

ಮಿಂಚು ನೋಡಲು ಆಕರ್ಷಣೀಯ ಎಂದೆನ್ನಿಸಿದರೂ ಮಿಂಚಿನ ಹೊಡೆತದಿಂದ ಪ್ರತಿ ವರ್ಷ ವಿಶ್ವದಾದ್ಯಂತ ಸರಿಸುಮಾರು 2000 ಜನರು ಮೃತಪಡುತ್ತಿದ್ದಾರೆ. ನೂರಾರು ಜನರು ಬದುಕುಳಿದರೂ ಅವರು ಕೆಲವೊಂದು ರೋಗಲಕ್ಷಣಗಳಾದ ನೆನಪಿನ ಶಕ್ತಿ ಕಳೆದುಕೊಳ್ಳುವುದು, ತಲೆತಿರುಗುವುದು, ಸುಸ್ತು, ಮರಗಟ್ಟುವಿಕೆ ಹಾಗೂ ಇತರ ಸುದೀರ್ಘ ಕಾಲದ ರೋಗಗಳಿಂದ ಬಳಲುತ್ತಿದ್ದಾರೆ. ಮಿಂಚಿನ ವಿಪರೀತ ಶಾಖವು ಮರದೊಳಗಿನ ನೀರನ್ನು ಆವಿಯಾಗಿಸುತ್ತದೆ ಮತ್ತು ಸಂಪೂರ್ಣ ಮರವನ್ನೇ ಉರಿಸಿ ಬೂದಿಮಾಡಿ ಬಿಡುತ್ತದೆ.

 ಸಿಡಿಲಿನಿಂದ ರಕ್ಷಣೆ ಪಡೆಯುವುದು ಹೇಗೆ?

ಈಗಾಗಲೇ ಕೆಲವೆಡೆ ಮಳೆ ಸುರಿಯುತ್ತಿದೆ. ಪ್ರತಿ ವರ್ಷ ಸಿಡಿಲು, ಮಿಂಚಿನಿಂದ ಅನಾಹುತ ನಡೆಯುತ್ತವೇ ಇರುತ್ತವೆ. ಮುಂದಂತೂ ಮಳೆಗಾಲ ಬಲಲಿದ್ದು, ಅಪಾಯ ಇನ್ನಷ್ಟು ಜಾಸ್ತಿ. ಹಾಗಿದ್ದರೆ ಇದರಿಂದ ತಪ್ಪಿಸಿಕೊಳ್ಳುವುದು ಹೇಗೆ? ಈ ಬಗ್ಗೆ ಇಲ್ಲಿದೆ ಮಾಹಿತಿ

ತಗ್ಗು ಪ್ರದೇಶಕ್ಕೆ ಹೋಗಿ ಕುಳಿತುಕೊಳ್ಳಿ

ಗುಡುಗು-ಮಿಂಚು ಬರಲಿದೆ ಎಂದು ಗೊತ್ತಾದಾಗ ನೀವು ಬಯಲಿನಲ್ಲಿದ್ದರೆ. ತಕ್ಷಣವೇ ಇರುವುದರಲ್ಲಿ ತಗ್ಗು ಪ್ರದೇಶಕ್ಕೆ ಹೋಗಿ ಕುಳಿತುಕೊಳ್ಳಿ.ನಿಲ್ಲ ಬೇಡಿ . ತಗ್ಗು ಪ್ರದೇಶ ಇಲ್ಲದೆ ಬಯಲಿನಲ್ಲೆ ಇರಬೇಕಾದರೆ. ನಿಮ್ಮ ತಲೆಯನ್ನು ಮೊಣಕಾಲುಗಳ ನಡುವೆ ಹುದುಗಿಸಿಕೊಳ್ಳಿ, ಇದು ಮಿಂಚಿನಿಂದ ಮೆದುಳಿಗೂ,ಹೃದಯಕ್ಕೂ ಆಗುವ ಹಾನಿಯನ್ನು ತಪ್ಪಿಸುತ್ತದೆ.

ಮರದ ಬಳಿ ನಿಂತಿದ್ದರೆ ಅಪಾಯ ಜಾಸ್ತಿ

ಮರಗಳಿದ್ದ ಪ್ರದೇಶದಲ್ಲಿ ನೀವು ಇದ್ದರೆ, ಅಲ್ಲಿಂದ ಬೇಗನೆ ಹೊರಬರುವುದು ಒಳ್ಳೆಯದು. ಯಾಕೆಂದರೆ ಸಿಡಿಲು ಮೋಡದಿಂದ ಭೂಮಿಗೆ ಹರಿಯಲು ಮರದಂತಹ ಹಸಿ, ಒದ್ದೆ ವಸ್ತುವನ್ನೇ ಆರಿಸಿಕೊಳ್ಳುತ್ತದೆ. ಹೀಗಾಗಿ ಮರದ ಬಳಿ ನಿಲ್ಲದೇ ದೂರ ಬನ್ನಿ.

ಪ್ರಾಣಿಗಳ ಜೊತೆ ಇದ್ದರೆ ಅವುಗಳ ಮಧ್ಯದಲ್ಲಿರಿ

ನೀವು ಎತ್ತರದ ಗುಡ್ಡದ ಮೇಲಿದ್ದರೆ ತಗ್ಗು ಪ್ರದೇಶಕ್ಕೆ ಇಳಿಯಿರಿ.  ಕುರಿ ಮಂದೆ ಅಥವಾ ಜಾನುವಾರುಗಳ ಮಧ್ಯ ನಿಂತಿದ್ದರೆ, ಅವುಗಳ ಮಧ್ಯದಲ್ಲಿ ಬಗ್ಗಿ ಕುಳಿತುಕೊಳ್ಳಿ. ಯಾಕೆಂದರೆ ಮಿಂಚು ಪ್ರಾಣಿಗಳಿಗಿಂತ ಎತ್ತರವಿರುವ ಮನುಷನನ್ನೇ ಆರಿಸಿಕೊಳ್ಳುತ್ತದೆ.

ಸಿಡಿಲು ಬರುವ ವೇಳೆ ನೀರಿನಿಂದ ದೂರ ಇರಿ

ಸಿಡಿಲು ಆರ್ಭಟಿಸುತ್ತಿದ್ದರೆ ಕೆರೆಯಲ್ಲಿ ಈಜುವುದು, ಸ್ನಾನ ಮಾಡುವುದು ಬೇಡ, ನೀರಿನಲ್ಲಿದ್ದರೆ ತಕ್ಷಣ ಹೊರ ಬನ್ನಿ. ವಿದ್ಯುತ್ ಕಂಬ, ಎಲಕ್ಟ್ರಿಕಲ್ ಟವರ್, ಮೊಬೈಲ್ ಟವರ್, ಟ್ರಾನ್ಸ್ ಫಾರ್ಮರ್ ಮುಂತಾದವುಗಳ ಹತ್ತಿರವೂ ಇರಬೇಡಿ.

ಸಿಡಿಲು ಬರುವಾಗ ಟೆರೆಸ್ ಮೇಲಿರಬೇಡಿ

ತಂತಿಬೇಲಿ, ಬಟ್ಟೆ ಒಣ ಹಾಕುವ ತಂತಿ ಇವುಗಳಿಂದ ದೊರವಿರಿ. ಮಳೆ ಬರುವ ಸಮಯದಲ್ಲಿ ಮನೆಯ ಟೆರೇಸ್ ಸ್ವಚ್ಛ ಮಾಡುವ ಸಾಹಸ ಬೇಡ. ಮನೆಯ ಕಿಟಕಿಯ ಬಳಿ ನಿಲ್ಲುವುದಕ್ಕಿಂತಲೂ ಮನೆಯ ಮಧ್ಯದಲ್ಲಿರುವುದು ಸುರಕ್ಷಿತ.

ಮೊಬೈಲ್ ದೂರ ಇರಲಿ

ಗುಡುಗು-ಸಿಡಿಲಿನ ಸಂದರ್ಭದಲ್ಲಿ ಫೋನ್ ಮಾಡಬೇಡಿ. ಅದನ್ನು ಚಾರ್ಜ್ ಮಾಡುವ ಸಹಸವೂ ಬೇಡ. ಕಾರಿನಲ್ಲಿ ಪ್ರಯಾಣಿಸುತ್ತಿದ್ದರೆ ಗಾಜನ್ನು ಮುಚ್ಚಿಕೊಳ್ಳಿ. ಕಾರಿನ ಬಾಡಿಯನ್ನು ಸಾಧ್ಯವಾದಷ್ಟು ಸ್ಪರ್ಶಿಸದೆ ಮಧ್ಯದಲ್ಲಿ ಕುಳಿತುಕೊಳ್ಳುವುದು ಒಳ್ಳೆಯದು. ಕಂಪ್ಯೂಟರ್ ಗಳಿಂದ ದೂರ ಇರಿ, ಜೊತೆಗೆ ಮನೆಯ ಕಾoಕ್ರೇಟ್ ಗೋಡೆಗಳನ್ನು ಸ್ಪೆರ್ಶಿಸದೆ. ಕೋಣೆಯ  ಮಧ್ಯದಲ್ಲಿದ್ದರೆ ಹೆಚ್ಚು ಸುರಕ್ಷಿತ.

ಲೋಹದ ವಸ್ತುಗಳಿಂದ ಅಂತರ ಕಾಪಾಡಿಕೊಳ್ಳಿ

ಸಿಡಿಲು ಆರ್ಭಟಿಸುವಾಗ ಲೋಹದ ವಸ್ತುಗಳನ್ನು ಮುಟ್ಟಬೇಡಿ. ಉದಾಹರಣೆಗೆ ಕುಡುಗೋಲು, ಕತ್ತಿ, ಹಾರೆ, ಕೊಡಲಿ ಇತ್ಯಾದಿಗಳನ್ನು ಮುಟ್ಟಬೇಡಿ. ಕರಾವಳಿ, ಮಲೆನಾಡು ಭಾಗದಲ್ಲಿ ಸಿಡಿಲು ಬಂದಾಗ ಲೋಹದ ವಸ್ತುಗಳನ್ನು ಅಂಗಳಕ್ಕೆ ಎಸೆಯುತ್ತಾರೆ.

ವಿದ್ಯುತ್ ಉಪಕರಣ ಬಳಸಬೇಡಿ

ಮನೆಯಲ್ಲಿನ ವಿದ್ಯುತ್ ಪ್ರವಾಹದ ಮೇನ್ ಸ್ವಿಚ್ ಆಫ್ ಮಾಡಿ ವಿದ್ಯುತ್ ಪ್ರವಾಹವನ್ನು ಸ್ಥಗಿತಗೊಳಿಸಬೇಕು. ದೂರದರ್ಶನ ಉಪಕರಣ, ಮಿಕ್ಸರ್ ಇತ್ಯಾದಿ ವಿದ್ಯುತ್ ಉಪಕರಣಗಳ ಪಿನ್ ಬೋರ್ಡ್ ನಿಂದ ಕಳಚಿಡಬೇಕು.

ಎಸಿ, ಫ್ರಿಜ್ಡ್ ಬಳಕೆ ಬೇಡ

ಈ ಅವಧಿಯಲ್ಲಿ ಲಿಫ್ಟ್, ಹವಾ ನಿಯಂತ್ರಕ (ಎ.ಸಿ), ಹೇರ್ ಡ್ರೈಯರ್ ಇತ್ಯಾದಿಗಳನ್ನು ಉಪಯೋಗಿಸಬಾರದು. ಶೀತಕವನ್ನು (ಫ್ರಿಜ್) ಸ್ಪರ್ಶಿಸಬಾರದು.  ಸುರಕ್ಷತೆಯ ದೃಷ್ಟಿಯಿಂದ ಮೊಬೈಲ್ ಉಪಯೋಗಿಸದಿದ್ದರೆ ಒಳ್ಳೆಯದು.

ಇದನ್ನೂ ಓದಿ: Explained: ನಿವಾಸಿಯೇತರ ಸ್ಥಾನಮಾನ ಎಂದರೇನು? ಅಕ್ಷತಾ ಮೂರ್ತಿ ಕ್ಲೈಮ್ ಮಾಡಿರುವ ತೆರಿಗೆ ಕುರಿತ ಪ್ರಶ್ನೆಗಳಿಗೆ ತಜ್ಞರು ಉತ್ತರ

ಈ ರೀತಿ ಟಿಪ್ಸ್‌ಗಳನ್ನು ಉಪಯೋಗಿಸಿ, ಸಿಡಿಲು, ಮಿಂಚಿನ ಅಪಾಯದಿಂದ ನಿಮ್ಮನ್ನು  ನೀವು ರಕ್ಷಿಸಿಕೊಳ್ಳಬಹುದು, ಇದರಿಂದಾಗಿ ಅಪಾರ ಜೀವಹಾನಿಯನ್ನು ತಪ್ಪಿಸಬಹುದು.
Published by:Annappa Achari
First published: