Explained: ಉಕ್ರೇನ್ ದೇಶ ಹುಟ್ಟಿದ್ದು ಹೇಗೆ? Russiaಗೇಕೆ ಇದರ ಮೇಲೆ ಅಷ್ಟೊಂದು ಆಸಕ್ತಿ?

ಉಕ್ರೇನ್ ಎಂಬ ಸಣ್ಣ ದೇಶದ ಮೇಲೆ ರಷ್ಯಾ ಎಂಬ ಬಲಾಢ್ಯ ಹಾಗೂ ದೈತ್ಯ ರಾಷ್ಟ್ರ ದಾಳಿ ಮಾಡುತ್ತಿರುವುದಾದರೂ ಏಕೆ? ಎಂಬ ಪ್ರಶ್ನೆ ಇಂದಿಗೂ ಹಲವರಲ್ಲಿದೆ. ಈ ಸಂದೇಹ ಪರಿಹರಿಸಬೇಕೆಂದರೆ ಮೊದಲು ಉಕ್ರೇನ್ ದೇಶದ ಇತಿಹಾಸದ ಬಗ್ಗೆ ತಿಳಿದುಕೊಳ್ಳುವುದು ಅತ್ಯಾವಶ್ಯಕ.

ಉಕ್ರೇನ್ ದೇಶದ ನಕಾಶೆ

ಉಕ್ರೇನ್ ದೇಶದ ನಕಾಶೆ

 • Share this:
  ಈಗ ಎಲ್ಲೆಡೆ ರಷ್ಯಾ-ಉಕ್ರೇನ್ (Russia-Ukraine) ಯುದ್ಧದ (War) ಚರ್ಚೆಯೇ ನಡೆಯುತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಿ (Social Media) ರಷ್ಯಾ-ಉಕ್ರೇನ್ ಕುರಿತು ಪರಸ್ಪರ ವಿಚಾರ-ವಿನಿಮಯ ನಡೆಯುತ್ತಿದ್ದರೆ, ಬಹುತೇಕ ಎಲ್ಲ ಟಿವಿ (TV) ಮಾಧ್ಯಮಗಳಲ್ಲಿ ಈ ಕುರಿತು ದಿನವಿಡೀ ಚರ್ಚೆ, ಚಿಂತನ-ಮಂಥನಗಳು ಪ್ರಸಾರವಾಗುತ್ತಿದೆ. ಅದೆಷ್ಟೋ ಜನರಿಗೆ ಉಕ್ರೇನ್ ಎಂಬ ಹೆಸರಿನ ದೇಶವಿದೆ ಎಂಬುದೆ ಗೊತ್ತಿರಲಿಲ್ಲ. ಈಗ ಆ ದೇಶ ಎಲ್ಲಿದೆ ಎಂಬುದು ಗೊತ್ತಾಗುವಷ್ಟರ ಮಟ್ಟಕ್ಕೆ ಈ ಪ್ರಸ್ತುತ ಯುದ್ಧದ ಚರ್ಚೆಗಳಾಗುತ್ತಿವೆ. ಕೆಲವರು ಇದು ಮೂರನೇ ವಿಶ್ವ ಯುದ್ಧದ  (3rd World War) ಸಂಕೇತ ಎಂದು ಬಣ್ಣಿಸುತ್ತಿದ್ದರೆ ಹಲವರು ಈ ಯುದ್ದ ನಿಲ್ಲಲಿ ಅಂತ ಪ್ರಾರ್ಥಿಸುತ್ತಿದ್ದಾರೆ. ಅಷ್ಟಕ್ಕೂ ಉಕ್ರೇನ್ ಎಂಬ ಸಣ್ಣ ದೇಶದ ಮೇಲೆ ರಷ್ಯಾ ಎಂಬ ಬಲಾಢ್ಯ ಹಾಗೂ ದೈತ್ಯ ರಾಷ್ಟ್ರ ದಾಳಿ ಮಾಡುತ್ತಿರುವುದಾದರೂ ಏಕೆ? ಎಂಬ ಪ್ರಶ್ನೆ ಇಂದಿಗೂ ಹಲವರಲ್ಲಿದೆ. ಈ ಸಂದೇಹ ಪರಿಹರಿಸಬೇಕೆಂದರೆ ಮೊದಲು ಉಕ್ರೇನ್ ದೇಶದ ಇತಿಹಾಸದ ಬಗ್ಗೆ ತಿಳಿದುಕೊಳ್ಳುವುದು ಬಲು ಅತ್ಯಾವಶ್ಯಕ.

  ಉಕ್ರೇನ್ ಪೂರ್ವದ ಇತಿಹಾಸ

  ದಶಕದ ಹಿಂದಿನ ಮಾತು... ಪೂರ್ವ ಸ್ಲಾವಿಕ್, ಬಾಲ್ಟಿಕ್ ಮತ್ತು ಫಿನ್ನಿಕ್ ಜನರು ಕೀವ್ ಎಂಬ ನಗರವನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ಸಮ್ಮಿಳಿತವಾಗಿ ವಾಸಿಸುತ್ತಿದ್ದರು. ಇಂದಿನ ಆಧುನಿಕ ಉಕ್ರೇನ್, ರಷ್ಯಾ ಹಾಗೂ ಬೆಲಾರೂಸ್ ದೇಶಗಳಲ್ಲಿರುವ ಜನರ ಪೂರ್ವಜರು ಹೆಚ್ಚು-ಕಡಿಮೆ ಏಕ ರೀತಿಯ ಸಂಪ್ರದಾಯದಲ್ಲೇ ಬದುಕುತ್ತಿದ್ದರು. ಇದನ್ನು 'ಕೀವ್ ರೂಸ್' ಪ್ರದೇಶವೆಂದೇ ಹೇಳಲಾಗುತ್ತಿತ್ತು. ಈ ಪ್ರದೇಶವು ಸುಮಾರು 10 ಹಾಗೂ 11ನೇ ಶತಮಾನಗಳಲ್ಲಿ ಒಂದು ಶಕ್ತಿಶಾಲಿ ಪ್ರದೇಶವಾಗಿ ಹೊರಹೊಮ್ಮಿತ್ತು.

  ಕ್ರೈಸ್ತ ಧರ್ಮದ ಬೆಳವಣಿಗೆ

  ಕ್ರಿ.ಶ. 988ರಲ್ಲಿ ಕೀವ್ ನ ಜನಪ್ರೀಯ ರಾಜಕುಮಾರನಾಗಿದ್ದ ವ್ಲಾಡಿಮಿರ್ (ಅಥವಾ ವೊಲೊಡಿಮಿರ್) ದಿ ಗ್ರೇಟ್ ಎಂಬಾತನು ಕ್ರೈಸ್ತ ಧರ್ಮವನ್ನು ಇಲ್ಲಿನ ಅಧಿಕೃತ ಧರ್ಮವನ್ನಾಗಿ ಘೋಷಣೆ ಮಾಡಿದ್ದ. ನಂತರ ಈ ಪ್ರದೇಶವು 1019-54ರ ವರೆಗೆ ಯರೋಸ್ಲಾವ್ ದಿ ವೈಸ್ ಎಂಬ ರಾಜನ ಆಳ್ವಿಕೆಗೆ ಒಳಪಟ್ಟಿತ್ತು. ಇದು ಕೀವ್ ರೂಸ್ ಸಂಸ್ಥಾನದ ಪ್ರಭಾವವಿದ್ದ ಉತ್ತುಂಗದ ಅವಧಿಯಾಗಿತ್ತು.

  ತದನಂತರ, ಈ ಪ್ರದೇಶದ ಪ್ರಭಾವ ಕ್ರಮೇಣವಾಗಿ ಕಡಿಮೆಯಾಗುತ್ತ ಬಂದಿತು. ಇದಕ್ಕೆ ಮುಖ್ಯ ಕಾರಣ, ಮಂಗೋಲಿಯಾದ ಗೋಲ್ಡನ್ ಹೋರ್ಡ್ ಆಕ್ರಮಣಕಾರರಿಂದ ಬೈಜ಼ಂಟೈನ್ ಸಾಮ್ರಾಜ್ಯದ ಅವನತಿಯಾದದ್ದು.

  ಇದರಿಂದ ಪ್ರದೇಶದಲ್ಲಿ ವ್ಯಾಪಾರ ಕ್ಷೀಣಿಸಿತು ಹಾಗೂ ಕೀವ್ ರೂಸ್ ಪ್ರದೇಶದ ಪ್ರಭಾವ ಕುಗ್ಗತೊಡಗಿತು ಮತ್ತು ಮಂಗೋಲ್ ಖಾನರ ಆಕ್ರಮಣಗಳಿಂದಾಗಿ ಕೀವ್ ರೂಸ್ ಸಣ್ಣ ಸಣ್ಣ ಪ್ರದೇಶಗಳಾಗಿ ವಿಭಜಿಸಲ್ಪಟ್ಟವು. ಆದಾಗ್ಯೂ, 15ನೇ ಶತಮಾನದಲ್ಲಿ ಕೀವ್ ರೂಸ್ ಪ್ರದೇಶದ ದೊಡ್ಡ ಭಾಗಗಳು ಒಂದಾಗಿ ಸೇರಿಸಲ್ಪಟ್ಟು ಲಿಥುವಾನಿಯಾ ಎಂಬ ಪ್ರದೇಶ ಪ್ರವರ್ಧಮಾನಕ್ಕೆ ಬಂದಿತು.

  ಆಗ ಯುರೋಪ್‌ನಲ್ಲೇ ದೊಡ್ಡ ದೇಶ

  ಇನ್ನೊಂದೆಡೆ ಲುಬ್ಲಿನ್ ಮತ್ತು ಪೊಲ್ಯಾಂಡ್ ಸಾಮ್ರಾಜ್ಯಗಳು ಒಂದಾದವು. ತದನಂತರ 1569ರಲ್ಲಿ ಪೊಲ್ಯಾಂಡ್ ಮತ್ತು ಲಿಥುವಾನಿಯಾ ಒಟ್ಟಾಗಿ ಸೇರಿ ಪಾಲಿಶ್-ಲಿಥುವೇನಿಯನ್ ಕಾಮನ್ವೆಲ್ತ್ ದೇಶದ ರಚನೆ ಮಾಡಿದವು. ಅಂದಿನ ಸಮಯದಲ್ಲಿ ಯುರೋಪ್ ಖಂಡದಲ್ಲೇ ಇದೊಂದು ದೊಡ್ಡ ದೇಶವಾಗಿತ್ತು. ಇಂದಿನ ಆಧುನಿಕ ಉಕ್ರೇನ್ ದೇಶದ ಇತಿಹಾಸವನ್ನು ಕೆದಕಿದಾಗ ಅದು ನಮ್ಮನ್ನು ಇತಿಹಾಸದ ಈ ಅವಧಿಗೆ ಕರೆದುಕೊಂಡು ಹೋಗುತ್ತದೆ.

  ಇದನ್ನೂ ಓದಿ: Explained: ರಷ್ಯಾ-ಉಕ್ರೇನ್ ನಡುವೆ ಏನಿದೆ ವೈರತ್ವ? ಉಭಯ ರಾಷ್ಟ್ರಗಳ ಯುದ್ಧದ Time Line ಇಲ್ಲಿದೆ

  ರಷ್ಯಾ ಸೇರ್ಪಡೆಯಾಗಿದ್ದು

  17ನೇ ಶತಮಾನದ ಸಮಯದಲ್ಲಿ ಈ ಪ್ರದೇಶದಲ್ಲಿ ಆಳುತ್ತಿದ್ದ ಸಾಮ್ರಾಜ್ಯವೆಂದರೆ ಪಾಲಿಶ್ ಸಮುದಾಯ. ಇದೇ ಸಮಯದಲ್ಲಿ ಬೋಹ್ದನ್ ಖೆಲ್ನಿಸ್ಕಿ. ಎಂಬ ಬಂಡಾಯಗಾರರ ನೇತೃತ್ವದಲ್ಲಿ ಕೊಸ್ಯಾಕಿಗಳೆಂಬ ಪಂಗಡದವರು ಪಾಲಿಶ್ ಗಳ ವಿರುದ್ಧ ತಿರುಗಿ ಎದ್ದರು. ಇದರ ಪರಿಣಾಮವಾಗಿ ಅವರು ಪಾಲಿಶರನ್ನು ಮಣಿಸಿ ತಮ್ಮದೆ ಆದ ಸ್ವತಂತ್ರ ಉಕ್ರೇನಿಯನ್ ಕೊಸ್ಯಾಕ್ ಹೆಟ್ಮನೇಟ್ ಎಂಬ ಸಾಮ್ರಾಜ್ಯ ಸ್ಥಾಪಿಸಿದರು. ಇದೇ ಈಗಿನ ಸೆಂಟ್ರಲ್ ಉಕ್ರೇನ್ ಎಂದು ಕರೆಯಲ್ಪಡುತ್ತದೆ.

  ರಷ್ಯಾ ಜೊತೆ ವಿಲೀನ

  ಇದಾದ ಶತಮಾನದ ನಂತರ ರಷ್ಯಾದ ರಾಣಿ ಕ್ಯಾಥರೀನ್ ದಿ ಗ್ರೇಟ್ (1762-96) ಹೆಟ್ಮನ್ ಆಡಳಿತ ರದ್ದುಗೊಳಿಸಿ ಅಂದಿನ ಎಲ್ಲ ಉಕ್ರೇನಿಯನ್ ಸಮುದಾಯವನ್ನು ರಷ್ಯಾದಲ್ಲಿ ವಿಲೀನಗೊಳಿಸಿದಳು.

  ರಷ್ಯಾದ ಬಿಗಿಯಾದ ನೀತಿಯನ್ನು ಹೇರಿದ ಕಾರಣ ಉಕ್ರೇನಿಯನ್ ಸೇರಿದಂತೆ ಇತರೆ ಚಿಕ್ಕ ಪುಟ್ಟ ಸಮುದಾಯಗಳ ಸಂಸ್ಕೃತಿ, ಆಚರಣೆ ಹಾಗೂ ಭಾಷೆಗಳು ದಬ್ಬಲ್ಪಟ್ಟವು. ಆದಾಗ್ಯೂ ಹಲವಾರು ಉಕ್ರೇನಿಯನ್ನರು ಈ ಸ್ಥಿತಿಯಲ್ಲೂ ಸಹ ಅದ್ಭುತವಾಗಿ ಬೆಳೆದು ರಷ್ಯಾದ ಇತರೆ ಭಾಗಗಳಲ್ಲಿ ಹೋಗಿ ನೆಲೆಸಿದರು.

  ವಿಶ್ವಯುದ್ಧದಲ್ಲಿ ರಷ್ಯಾದ ಪರ ಹೋರಾಟ

  ಪರಿಸ್ಥಿತಿ ಹೇಗಾಯಿತೆಂದರೆ ಬಹು ಸಂಖ್ಯೆಯಲ್ಲಿ ಉಕ್ರೇನಿಯನ್ನರು ರಷ್ಯಾದ ಭಾಗವೇ ಆಗಿ ಹೋಗಿಬಿಟ್ಟರು. ಅಂತೆಯೇ ಒಂದನೇ ವಿಶ್ವ ಯುದ್ಧದ ಸಂದರ್ಭದಲ್ಲಿ ಮೂರುವರೆ ದಶಲಕ್ಷಕ್ಕೂ ಹೆಚ್ಚು ಉಕ್ರೇನಿಯನ್ನರು ರಷ್ಯಾದ ಪರವಾಗಿ ಯುದ್ಧ ಮಾಡಿದ್ದರು. ಈ ಯುದ್ಧದಿಂದ ಜ಼ಾರಿಸ್ಟ್ ಹಾಗೂ ಒಟ್ಟೊಮನ್ ಈ ಎರಡೂ ಸಾಮ್ರಾಜ್ಯಗಳು ಅವನತಿ ಹೊಂದಿದವು.

  ಪ್ರವರ್ಧಮಾನಕ್ಕೆ ಬಂದ ಉಕ್ರೇನಿಯನ್ ರಾಷ್ಟ್ರೀಯ ಚಳುವಳಿ

  1917ರಲ್ಲಿ ಉಕ್ರೇನಿಯನ್ ರಾಷ್ಟ್ರೀಯ ಚಳುವಳಿಯು ಪ್ರವರ್ಧಮಾನಕ್ಕೆ ಬರತೊಡಗಿತು ಹಾಗೂ ಇದರ ಪ್ರಭಾವದಿಂದಾಗಿ ಹಲವೆಡೆ ಉಕ್ರೇನಿಯನ್ ಸಮುದಾಯಗಳು ಹೊರಹೊಮ್ಮತೊಡಗಿದರು. 1917ರ ಅಕ್ಟೋಬರ್ ಕ್ರಾಂತಿಯಲ್ಲಿ ಸ್ವತಂತ್ರ ಉಕ್ರೇನ್ ಗಣರಾಜ್ಯ ಎಂದು ಹೇಳಲಾಯಿತಾದರೂ ಒಳಗೊಳಗೆ ಇತರೆ ಸಮುದಾಯಗಳ ಮಧ್ಯೆ ಅಂತರ್ಯುದ್ಧ ನಡೆಯುತ್ತಲೇ ಇದ್ದವು. ಕೊನೆಗೆ 1922ರಲ್ಲಿ ಉಕ್ರೇನ್ ಯುನಿಯನ್ ಆಫ್ ಸೋವಿಯತ್ ಸೊಶಿಯಾಲಿಸ್ಟ್ ರಿಪಬ್ಲಿಕ್ಸ್ (USSR) ಭಾಗವಾಗಿ ಸೇರಿಕೊಂಡಿತು.

  ಸೋವಿಯತ್ ಒಕ್ಕೂಟದ ಪತನ

  ನಮಗೆಲ್ಲ ಈಗಾಗಲೇ ತಿಳಿದಿರುವಂತೆ ಸೋವಿಯತ್ ಸಂಘವು 1991ರಲ್ಲಿ ಪತನವಾಯಿತು. ಈ ಪತನಕ್ಕೂ ಮುಂಚಿನಿಂದಲೇ ಉಕ್ರೇನ್ ಸ್ವಾತಂತ್ರ್ಯದ ಬಗ್ಗೆ ಕೂಗು ಕೇಳಿಸುತ್ತಲೇ ಇತ್ತು. 1990ರಲ್ಲೇ ಮೂರು ಲಕ್ಷ ಉಕ್ರೇನಿಯನ್ನರು ಮಾನವ ಸರಪಳಿಯನ್ನು ನಿರ್ಮಿಸಿ ಸ್ವಾತಂತ್ರ್ಯಕ್ಕೆ ಬೆಂಬಲ ನೀಡಿದ್ದರು.

  ಆಗಸ್ಟ್ 24, 1991ರಲ್ಲಿ ಅಧ್ಯಕ್ಷ ಮಿಖಾಯಿಲ್ ಗೋರ್ಬಚೇವ್ ಅವರನ್ನು ಕಿತ್ತು ಕಮ್ಯೂನಿಸ್ಟ್ ಅಧಿಕಾರವನ್ನು ಮತ್ತೆ ತರುವ ಪ್ರಯತ್ನ ವಿಫಲವಾದ ನಂತರ ಉಕ್ರೇನ್ ದೇಶದ ಸ್ವಾತಂತ್ರ್ಯ ಕಾಯ್ದೆಯನ್ನು ಅಳವಡಿಸಿಕೊಂಡಿತು.

  ತದನಂತರ ಸಂಸತ್ತಿನ ಮುಖ್ಯಸ್ಥನಾಗಿದ್ದ ಲಿಯೊನಿಡ್ ಕ್ರಾವ್ಚುಕ್ ಅವರನ್ನು ಉಕ್ರೇನಿನ ಪ್ರಥಮ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. 1991 ಡಿಸೆಂಬರ್ ತಿಂಗಳಿನಲ್ಲಿ ಬೆಲಾರೂಸ್, ರಷ್ಯಾ ಹಾಗೂ ಉಕ್ರೇನ್ ದೇಶಗಳು ಅಧಿಕೃತವಾಗಿ ಸೋವಿಯತ್ ಸಂಘವನ್ನು ವಿಸರ್ಜಿಸಿ ಕಾಮನ್ವೆಲ್ತ್ ಆಫ್ ಇಂಡಿಪೆಂಡೆಂಟ್ ಸ್ಟೇಟ್ಸ್ (ಸಿಐ‍ಎಸ್) ಅನ್ನು ಸ್ಥಾಪನೆ ಮಾಡಿದವು.

  ಆದಾಗ್ಯೂ, ಉಕ್ರೇನ್‌ನ ಸಂಸತ್ತು, ವರ್ಕೋವ್ನಾ ರಾಡಾ, ಪ್ರವೇಶವನ್ನು ಎಂದಿಗೂ ಅನುಮೋದಿಸಲಿಲ್ಲ, ಆದ್ದರಿಂದ ಉಕ್ರೇನ್ ಕಾನೂನುಬದ್ಧವಾಗಿ ಸಿಐಎಸ್‌ನ ಸದಸ್ಯನಾಗಿರಲಿಲ್ಲ.

  ನಕಲಿ ದೇಶ ಎಂದು ಜರಿದಿದ್ದ ಪುಟಿನ್

  ಇಲ್ಲಿ ಒಂದು ಸಂಗತಿಯನ್ನು ಗಮನಿಸಬೇಕು. ರಷ್ಯಾದವರು ಉಕ್ರೇನ್ ಮೇಲೆ ಆಕ್ರಮಣ ಮಾಡುವ ಮೂರು ದಿನಗಳ ಮೊದಲು, ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ರಷ್ಯಾದ ಈ ನೈಋತ್ಯ ನೆರೆ ರಾಷ್ಟ್ರವನ್ನು ಉದ್ದೇಶಿಸಿ ಯಾವುದೇ ಇತಿಹಾಸ, ಗುರುತು ಅಥವಾ "ನೈಜ ರಾಜ್ಯತ್ವದ ಸ್ಥಿರ ಸಂಪ್ರದಾಯಗಳು" ಇಲ್ಲದ ನಕಲಿ ದೇಶ ಎಂದು ಬಣ್ಣಿಸಿದ್ದರು.

  ಪುಟಿನ್ ಪ್ರಕಾರ, ಆಧುನಿಕ ಉಕ್ರೇನ್ ಅನ್ನು "ಸಂಪೂರ್ಣವಾಗಿ ಮತ್ತು ಸಂಪೂರ್ಣವಾಗಿ ರಷ್ಯಾದಿಂದ ರಚಿಸಲಾಗಿದೆ, ಹೆಚ್ಚು ನಿರ್ದಿಷ್ಟವಾಗಿ ಹೇಳಬೇಕೆಂದರೆ ಬೊಲ್ಶೆವಿಕ್, ಕಮ್ಯುನಿಸ್ಟ್ ರಷ್ಯಾ . ಹಾಗೇ ನೋಡಿದರೆ ಈ ಪ್ರಕ್ರಿಯೆಯು 1917 ರ ಕ್ರಾಂತಿಯ ನಂತರ ಪ್ರಾಯೋಗಿಕವಾಗಿ ಪ್ರಾರಂಭವಾಯಿತು, ಮತ್ತು ಮೇಲಾಗಿ ಲೆನಿನ್ ಮತ್ತು ಅವರ ಸಹಚರರು ಇದನ್ನು ರಷ್ಯಾಕ್ಕೆ ಸಂಬಂಧಿಸಿದಂತೆ ಅತ್ಯಂತ ಕಳಪೆ ರೀತಿಯಲ್ಲಿ ಪ್ರದೇಶವನ್ನು ತುಂಡುಗಳಿಂದ ವಿಭಜಿಸಿದ್ದಾರೆ.

  ಉಕ್ರೇನ್ ಭೌಗೋಳಿಕತೆ

  ಉಕ್ರೇನ್ ಯುರೋಪ್ ಖಂಡದ ಪೂರ್ವದಲ್ಲಿದೆ ಮತ್ತು ಅದರ ಈಶಾನ್ಯ ಮತ್ತು ಆಗ್ನೇಯ ಭಾಗದಲ್ಲಿ ರಷ್ಯಾ ಇದ್ದರೆ ದಕ್ಷಿಣದ ಭಾಗವು ಕಪ್ಪು ಸಮುದ್ರದಿಂದ ಸುತ್ತುವರೆದಿದೆ. ನೈಋತ್ಯ, ಪಶ್ಚಿಮ ಮತ್ತು ಉತ್ತರದಲ್ಲಿ, ಉಕ್ರೇನ್ ಮೊಲ್ಡೊವಾ, ರೊಮೇನಿಯಾ, ಹಂಗೇರಿ, ಸ್ಲೋವಾಕಿಯಾ, ಪೋಲೆಂಡ್ ಮತ್ತು ಬೆಲಾರೂಸ್ ಗಳೊಂದಿಗೆ ತನ್ನ ಗಡಿಗಳನ್ನು ಹಂಚಿಕೊಂಡಿದೆ.

  ಉಕ್ರೇನ್ ದೇಶವು 603,550 ಚದರ ಕಿಲೋಮೀಟರ್ ವಿಸ್ತಾರವಾಗಿದ್ದು ಸುಮಾರು 6% ವಿಸ್ತೀರ್ಣದೊಂದಿಗೆ ರಷ್ಯಾ ನಂತರ ಯುರೋಪ್‌ ಖಂಡದಲ್ಲಿ ಅತಿದೊಡ್ಡ ದೇಶವಾಗಿದೆ.

  ರಷ್ಯಾ ಹೋಲಿಕೆಯಲ್ಲಿ ಅತೀ ಚಿಕ್ಕ ದೇಶ

  ರಷ್ಯಾಗೆ ಹೋಲಿಸಿದರೆ ಉಕ್ರೇನ್, ಸಹಜವಾಗಿ, ಚಿಕ್ಕ ದೇಶ. ಇದರ ಸುಮಾರು 4 ಮಿಲಿಯನ್ ಚದರ ಕಿ.ಮೀ ಅಂದರೆ 40% ಪ್ರದೇಶ ಯುರೋಪಿನಲ್ಲಿ ವ್ಯಾಪಿಸಿದೆ.

  ಜುಲೈ 2021ರಲ್ಲಿ, ಉಕ್ರೇನ್ ಜನಸಂಖ್ಯೆಯು 43.7 ಮಿಲಿಯನ್ ಹೊಂದಿತ್ತೆಂದು ಅಂದಾಜಿಸಲಾಗಿದೆ. ಇದರಲ್ಲಿ, 77.8% ಉಕ್ರೇನಿಯನ್ ಜನಾಂಗದವರು ಮತ್ತು 17.3% ರಷ್ಯನ್ನರು ವಾಸವಾಗಿದ್ದರು. ಉಕ್ರೇನಿಯನ್ ಮತ್ತು ರಷ್ಯನ್ ಭಾಷಿಕರು ಕ್ರಮವಾಗಿ ಜನಸಂಖ್ಯೆಯ 67.5% ಮತ್ತು 29.6% ರಷ್ಟಿದ್ದಾರೆ (2001 ಅಂದಾಜಿನ ಪ್ರಕಾರ, CIA ವರ್ಲ್ಡ್ ಫ್ಯಾಕ್ಟ್‌ಬುಕ್).

  ಎಲ್ಲಾ ಸಮುದಾಯಗಳ ಮಿಶ್ರಣ

  ರಷ್ಯಾ ಭಾಷೆ ಮಾತನಾಡುವವರು ಹೆಚ್ಚಾಗಿ ಪೂರ್ವದಲ್ಲಿ ವಾಸಿಸುತ್ತಿದ್ದಾರೆ. ಹಾಗಾಗಿಯೇ ರಷ್ಯಾ ಬೆಂಬಲಿತ ಬಣದವರು ಇಲ್ಲಿ ಹೆಚ್ಚಾಗಿ ಕಂಡುಬರುತ್ತಾರೆ. ರಷ್ಯಾ ಸರ್ಕಾರವು ಎಂಟು ವರ್ಷಗಳ ಕಾಲ ಸಶಸ್ತ್ರ ದಂಗೆಯನ್ನು ಪ್ರೋತ್ಸಾಹಿಸಿ ಮತ್ತು ಬೆಂಬಲಿಸುತ್ತಿತ್ತು, ಇದರ ಪರಿಣಾಮವಾಗಿಯೇ ಈ ವಾರ ಇಲ್ಲಿ ಎರಡು ಸ್ವತಂತ್ರ ಗಣರಾಜ್ಯಗಳನ್ನು ಗುರುತಿಸಿ ಯುದ್ಧದ ಸಂಕೇತ ಸೂಚಿಸಿತ್ತೆನ್ನಬಹುದು.

  ಇದನ್ನೂ ಓದಿ: Explained: ಉಕ್ರೇನ್‌ನಲ್ಲಿ ಯುದ್ಧ, ಭಾರತದಲ್ಲಿ ಆತಂಕ! ದೂರದ ದೇಶದೊಂದಿಗೆ India ಸಂಬಂಧವೇನು?

  ಪ್ರಾಕೃತಿಕ ಸಂಪತ್ತು ಇರುವ ಬಡ ದೇಶ

  ಒಟ್ಟು ದೇಶೀಯ ಉತ್ಪನ್ನ ಮತ್ತು ತಲಾವಾರು ಒಟ್ಟು ರಾಷ್ಟ್ರೀಯ ಆದಾಯದ ದೃಷ್ಟಿಯಿಂದ ಉಕ್ರೇನ್ ಯುರೋಪ್‌ನ ಅತ್ಯಂತ ಬಡ ದೇಶವಾಗಿದೆ. ಇದು ಕಬ್ಬಿಣದ ಅದಿರು ಮತ್ತು ಕಲ್ಲಿದ್ದಲಿನ ನಿಕ್ಷೇಪಗಳನ್ನು ಹೊಂದಿದೆ ಮತ್ತು ಕಾರ್ನ್, ಸೂರ್ಯಕಾಂತಿ ಎಣ್ಣೆ, ಕಬ್ಬಿಣ ಮತ್ತು ಕಬ್ಬಿಣದ ಉತ್ಪನ್ನಗಳು ಮತ್ತು ಗೋಧಿಯನ್ನು ರಫ್ತು ಮಾಡುತ್ತದೆ.

  ಭಾರತದೊಂದಿಗೆ ಉಕ್ರೇನ್ ಸಂಬಂಧ

  ಏಷ್ಯಾ ಪೆಸಿಫಿಕ್ ಪ್ರದೇಶದಲ್ಲಿ ಭಾರತವು ಉಕ್ರೇನ್‌ನ ಅತಿದೊಡ್ಡ ರಫ್ತು ತಾಣವಾಗಿದೆ. ಭಾರತಕ್ಕೆ ಉಕ್ರೇನ್ ದೇಶವು ಪ್ರಮುಖವಾಗಿ ಸೂರ್ಯಕಾಂತಿ ಎಣ್ಣೆ, ಅಜೈವಿಕ ರಾಸಾಯನಿಕಗಳು, ಕಬ್ಬಿಣ ಮತ್ತು ಉಕ್ಕು, ಪ್ಲಾಸ್ಟಿಕ್‌ಗಳು ಮತ್ತು ರಾಸಾಯನಿಕಗಳನ್ನು ರಫ್ತು ಮಾಡಿದರೆ ಭಾರತದಿಂದ ಔಷಧೀಯ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುತ್ತದೆ.
  Published by:Annappa Achari
  First published: