Explained: ಪ್ರಧಾನಿ ಭದ್ರತೆಗೆ ಏನೆಲ್ಲಾ ಪ್ಲಾನ್‌ ಮಾಡ್ತಾರೆ ಗೊತ್ತಾ? ಹಾಗದ್ರೆ ಪಂಜಾಬ್‌ನಲ್ಲಾದ ಲೋಪವೇನು?

ಪಂಜಾಬ್ ವಿಷಯದಲ್ಲಿ, ಕೆಟ್ಟ ಹವಾಮಾನದ ಕಾರಣದಿಂದಾಗಿ ಪ್ರಧಾನಿಯವರು ರಸ್ತೆಯ ಮೂಲಕ ಸಂಚರಿಸಲು ನಿರ್ಧರಿಸಿದಾಗ ಸಂಪೂರ್ಣ ರಸ್ತೆಯ ಸ್ವಚ್ಛತೆ, ಇದಕ್ಕೆ ಸಂಬಂಧಪಟ್ಟ ಕೆಲಸಗಾರರನ್ನು ನೇಮಿಸುವುದು ಸ್ಥಳೀಯ ಪೊಲೀಸರ ಜವಬ್ದಾರಿಯಾಗಿದೆ

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
ಪ್ರಧಾನಿ ನರೇಂದ್ರ ಮೋದಿಯವರು (Prime Minister Narendra Modi) ಪಂಜಾಬ್‌ನಲ್ಲಿ ಪ್ರತಿಭಟನಾಕಾರರ ಕಾರಣದಿಂದಾಗಿ ಸುಮಾರು 20 ನಿಮಿಷಗಳ ಕಾಲ ಫಿರೋಜ್‌ಪುರ ಫ್ಲೈಓವರ್‌ನಲ್ಲಿ (Ferozepur flyover) ಸಿಲುಕಿಕೊಂಡಿದ್ದರು ಈ ಕಾರಣದಿಂದ ಪ್ರಧಾನಿಯವರು ಅಲ್ಲಿಂದ ವಾಪಾಸಾಗಬೇಕಾಯಿತು ಹಾಗೂ ಫಿರೋಜ್‌ಪುರದಲ್ಲಿ ನಡೆಯಬೇಕಿದ್ದ ಬಿಜೆಪಿ ರ‍್ಯಾಲಿ ಕೂಡ ರದ್ದಾಯಿತು ಹಾಗೂ ಗೃಹ ವ್ಯವಹಾರಗಳ ಸಚಿವಾಲಯವು ಪ್ರಧಾನಿಯವರ ಭದ್ರತೆಯ ವಿಷಯದಲ್ಲಿ ಪಂಜಾಬ್ (Punjab) ಸರಕಾರ ಮುತುವರ್ಜಿ ವಹಿಸಿದೆಯೇ ಅತ್ಯಂತ ದೊಡ್ಡ ಲೋಪವೆಸಗಿದೆ ಎಂಬುದಾಗಿ ಹೇಳಿದೆ. ಈ ಕುರಿತು ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯನ್ನು ನಡೆಸುವುದಾಗಿ ಸುಪ್ರೀಂಕೋರ್ಟ್(Supreme Court) ಒಪ್ಪಿಗೆ ನೀಡಿದೆ. ಇಂದಿನ ಲೇಖನದಲ್ಲಿ ಪ್ರಧಾನಿಯವರ ಸುರಕ್ಷತೆಗಾಗಿ ಯಾವೆಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಹಾಗೂ ಇದನ್ನು ಹೇಗೆ ಯೋಜಿಸಲಾಗುತ್ತದೆ ಎಂಬುದನ್ನು ತಿಳಿದುಕೊಳ್ಳೋಣ.

ಪ್ರಧಾನಿಯವರ ಭದ್ರತೆಯನ್ನು ಹೇಗೆ ಯೋಜಿಸಲಾಗುತ್ತದೆ?
ಯಾವುದೇ ಭೇಟಿಯ ಸಮಯದಲ್ಲಿ ಪ್ರಧಾನ ಮಂತ್ರಿಯವರ ಭದ್ರತೆಯನ್ನು ಯೋಜಿಸುವುದು ಕೇಂದ್ರೀಯ ಸಂಸ್ಥೆಗಳು ಮತ್ತು ರಾಜ್ಯ ಪೊಲೀಸ್ ಪಡೆಗಳನ್ನು ಒಳಗೊಂಡಿರುವ ವ್ಯವಸ್ಥೆಯಾಗಿದೆ. ಯಾವುದೇ ಯೋಜಿತ ಭೇಟಿಗೆ ಮೂರು ದಿನಗಳ ಮುನ್ನ ಪ್ರಧಾನ ಮಂತ್ರಿಯವರ ಭದ್ರತೆಗೆ ಜವಬ್ದಾರರಾಗಿರುವ ವಿಶೇಷ ರಕ್ಷಣಾ ಗುಂಪು (SPG), SPG ಅಧಿಕಾರಿಗಳು, ಸಂಬಂಧಿತ ರಾಜ್ಯದಲ್ಲಿರುವ ಇಂಟೆಲಿಜೆನ್ಸ್ ಬ್ಯೂರೋ (IB) ಅಧಿಕಾರಿಗಳು, ರಾಜ್ಯ ಪೊಲೀಸ್ ಅಧಿಕಾರಿಗಳು ಹಾಗೂ ಸಂಬಂಧಿತ ಜಿಲ್ಲಾ ಮ್ಯಾಜಿಸ್ಟ್ರೇಟ್ ಒಳಗೊಂಡಂತೆ ಈವೆಂಟ್ ಅನ್ನು ಭದ್ರಪಡಿಸುವಲ್ಲಿ ತೊಡಗಿರುವ ಪ್ರತಿಯೊಬ್ಬರೊಂದಿಗೆ ಕಡ್ಡಾಯ ಮುಂಗಡ ಭದ್ರತಾ ಸಂಪರ್ಕವನ್ನು (ASL) ಹೊಂದುತ್ತದೆ.

ಭೇಟಿಯ ಪ್ರತಿ ನಿಮಿಷದ ವಿವರ ಹಾಗೂ ಅಗತ್ಯ ಭದ್ರತಾ ವ್ಯವಸ್ಥೆಗಳ ಕುರಿತು ಅಧಿಕಾರಿಗಳಲ್ಲಿ ಚರ್ಚಿಸಲಾಗುತ್ತದೆ. ಸಭೆ ಮುಗಿದ ನಂತರ ASL ವರದಿಯನ್ನು ಸಿದ್ಧಪಡಿಸಲಾಗುತ್ತದೆ ಹಾಗೂ ಸಭೆಗೆ ಹಾಜರಾದವರು ವರದಿಗೆ ಸಹಿ ಹಾಕುತ್ತಾರೆ ಮತ್ತು ವರದಿಯನ್ನು ಆಧರಿಸಿ ಭದ್ರತಾ ವ್ಯವಸ್ಥೆಯನ್ನು ಮಾಡಲಾಗುತ್ತದೆ.

ಇದನ್ನೂ ಓದಿ: PM Modi: ಅಬ್ಬಬ್ಬಾ ಪ್ರಧಾನಿ ಮೋದಿ ಸಂಚರಿಸುವ 12 ಕೋಟಿಯ ಕಾರಿಗೆ ಎಷ್ಟೆಲ್ಲಾ ಭದ್ರತೆ ಇದೆ ಗೊತ್ತಾ?

ಸಭೆಯ ಸಮಯದಲ್ಲಿ ಯಾವೆಲ್ಲಾ ಅಂಶಗಳಿಗೆ ಮಹತ್ವ ನೀಡಲಾಗುತ್ತದೆ?
ಹೆಚ್ಚಾಗಿ ಪ್ರಧಾನಿಯವರ ಭೇಟಿಯು ಅಂತಿಮವಾಗಿ ತೀರ್ಮಾನವಾದ ಯೋಜನೆಗಳಿಗೆ ಬದ್ಧವಾಗಿರುತ್ತದೆ ಮತ್ತು ಅದಕ್ಕೆ ಅನುಗುಣವಾಗಿ ಪ್ರವಾಸ ಯೋಜನೆಗಳನ್ನು ಸಿದ್ಧಪಡಿಸಲಾಗುತ್ತದೆ ಹೀಗಾಗಿಯೇ ಪ್ರಧಾನಿಯವರು ಹೇಗೆ ಆಗಮಿಸುತ್ತಾರೆ (ವಿಮಾನ, ರಸ್ತೆ, ರೈಲು) ಒಮ್ಮೆ ಅವರು ಆಗಮಿಸಿದ ನಂತರ ತಮ್ಮ ಕಾರ್ಯಕ್ರಮದ ಸ್ಥಳವನ್ನು ಹೇಗೆ ತಲುಪುತ್ತಾರೆ ( ಸಾಮಾನ್ಯವಾಗಿ ಹೆಲಿಕಾಪ್ಟರ್ ಅಥವಾ ರಸ್ತೆ) ಎಂಬುದನ್ನು ಸಭೆಯಲ್ಲಿ ಚರ್ಚಿಸಲಾಗುತ್ತದೆ. ಇದನ್ನು ಯೋಜಿಸುವಾಗ, ಕೇಂದ್ರೀಯ ಏಜೆನ್ಸಿಗಳು ಮತ್ತು ಸ್ಥಳೀಯ ಗುಪ್ತಚರ ಘಟಕದ ಗುಪ್ತಚರ ಅಂಶಗಳನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ.

ಅಗ್ನಿ ಸುರಕ್ಷತೆಯನ್ನೂ ಮೇಲ್ವಿಚಾರಣೆ
ನಂತರ ಕಾರ್ಯಕ್ರಮ ನಡೆಯುವ ಸ್ಥಳದ ಭದ್ರತೆ – ಆಗಮನ, ನಿರ್ಗಮನ ಸ್ಥಳಕ್ಕೆ ಬರುವವರ ಪರಿಶೀಲನೆ, ಡೋರ್ ಫ್ರೇಮ್ ಮೆಟಲ್ ಡಿಟೆಕ್ಟರ್‌ಗಳನ್ನು ಇರಿಸುವಂತಹ ಅಂಶಗಳನ್ನು ಭದ್ರತಾ ಪರಿಶೀಲನೆ ಒಳಗೊಂಡಿರುತ್ತದೆ. ವೇದಿಕೆಯ ನಿರ್ಮಾಣ ಸ್ಥಿರತೆಯನ್ನು ಸಹ ಪರಿಶೀಲಿಸಲಾಗುತ್ತದೆ. ಇದರೊಂದಿಗೆ ಕಾರ್ಯಕ್ರಮ ನಡೆಯುವ ಅಗ್ನಿ ಸುರಕ್ಷತೆಯನ್ನೂ ಮೇಲ್ವಿಚಾರಣೆ ಮಾಡಲಾಗುತ್ತದೆ. ಆ ದಿನದ ಹವಾಮಾನ ವರದಿಯ ಬಗ್ಗೆಯೂ ಮಾಹಿತಿ ಪಡೆಯಲಾಗುತ್ತದೆ. ಇನ್ನು ಪ್ರಧಾನಿಯವರಿಗೆ ಕಾರ್ಯಕ್ರಮ ನಡೆಯುವ ಸ್ಥಳವನ್ನು ತಲುಪಲು ಬೋಟ್ ಅಗತ್ಯವಿದ್ದಲ್ಲಿ, ಬೋಟ್‌ನ ಕ್ರಿಯಾತ್ಮಕ ಸಿದ್ಧತೆ ಮತ್ತು ಸುರಕ್ಷತೆಯನ್ನು ಪ್ರಮಾಣಪತ್ರದಲ್ಲಿ ಅಧಿಕೃತಗೊಳಿಸಲಾಗುತ್ತದೆ. ಇನ್ನು ಪ್ರಧಾನಿಯವರು ಪ್ರಯಾಣಿಸುವ ಮಾರ್ಗದಲ್ಲಿ ಯಾವುದೇ ತೊಂದರೆಗಳು, ಸವಾಲುಗಳಿದ್ದರೆ ಅದನ್ನು ಕೂಡಲೇ ನಿವಾರಿಸುವಂತೆ ತಿಳಿಸಲಾಗುತ್ತದೆ.

ಯೋಜನೆಗಳು ಕೂಡಲೇ ಬದಲಾದರೆ ಏನಾಗುತ್ತದೆ?
ಆಕಸ್ಮಿಕ ಯೋಜನೆಯನ್ನು ಯಾವಾಗಲೂ ಮುಂಚಿತವಾಗಿ ಮಾಡಲಾಗುತ್ತದೆ. ಹಾಗಾಗಿ ಹವಾಮಾನ ವರದಿಯನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ ಎಂಬುದಾಗಿ ಮೂಲಗಳು ತಿಳಿಸಿವೆ. ಒಂದು ವೇಳೆ ಕೆಟ್ಟ ಹವಾಮಾನದಿಂದಾಗಿ, ಪ್ರಧಾನಿ ಕಾರ್ಯಕ್ರಮಕ್ಕೆ ತೆರಳಲು ಸಾಧ್ಯವಾಗದೇ ಇದ್ದಾಗ ರಸ್ತೆಯ ಮೂಲಕ ಪರ್ಯಾಯ ಮಾರ್ಗವನ್ನು ಮುಂಚಿತವಾಗಿ ಯೋಜಿಸಲಾಗುತ್ತದೆ.

SPG ಯು ಪ್ರಧಾನಿಯವರಿಗೆ ನಿಕಟ ಭದ್ರತೆಯನ್ನು ಮಾತ್ರವೇ ಒದಗಿಸುತ್ತದೆ. ಪ್ರಧಾನಿಯವರು ಯಾವುದೇ ರಾಜ್ಯಕ್ಕೆ ಪ್ರಯಾಣಿಸುವಾಗ, ಸಂಪೂರ್ಣ ಭದ್ರತೆಯನ್ನು ಖಚಿತಪಡಿಸಿಕೊಳ್ಳುವುದು ರಾಜ್ಯ ಪೊಲೀಸರ ಜವಾಬ್ದಾರಿಯಾಗಿದೆ. ಅವರು ಗುಪ್ತಚರ ಸಂಗ್ರಹಣೆ, ರಸ್ತೆ ತೆರವುಗೊಳಿಸುವುದು, ಸ್ಥಳ ನೈರ್ಮಲ್ಯ ಮತ್ತು ಜನಸಂದಣಿ ನಿರ್ವಹಣೆಯ ಜವಾಬ್ದಾರಿಯನ್ನು ಹೊಂದಿರುತ್ತಾರೆ ಎಂಬುದಾಗಿ SPG ಯೊಂದಿಗೆ ಸೇವೆ ಸಲ್ಲಿಸಿದ ಮಾಜಿ ಯುಪಿ ಡಿಜಿಪಿ ಓ.ಪಿ ಸಿಂಗ್ ಹೇಳಿದ್ದಾರೆ.
ಭದ್ರತೆಗೆ ಯಾವುದೇ ರೀತಿಯ ಬೆದರಿಕೆ ಇದ್ದಲ್ಲಿ ಈ ಕುರಿತು ಮಾಹಿತಿಗಳನ್ನು ಒದಗಿಸುವ ಜವಾಬ್ದಾರಿಯನ್ನು ಕೇಂದ್ರ ಗುಪ್ತಚರ ಸಂಸ್ಥೆಗಳು ಹೊಂದಿರುತ್ತವೆ. ಆದಾಗ್ಯೂ, ಪ್ರಧಾನ ಮಂತ್ರಿಯ ಭದ್ರತೆಯನ್ನು ಹೇಗೆ ವ್ಯವಸ್ಥೆಗೊಳಿಸಬೇಕು ಎಂಬುದರ ಕುರಿತು ಅಂತಿಮ ತೀರ್ಮಾನವನ್ನು SPG ತೆಗೆದುಕೊಳ್ಳುತ್ತದೆ.

ಪ್ರಧಾನಿಯವರು ಜನಸಂದಣಿಯ ಸಮೀಪಕ್ಕೆ ತೆರಳಬೇಕಾದ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಯೋಜನೆಗಳನ್ನು ಹೇಗೆ ಸಿದ್ಧಪಡಿಸಲಾಗುತ್ತದೆ?
ಸಾರ್ವಜನಿಕ ಸಭೆಗಳು, ರ‍್ಯಾಲಿಗಳು ಮತ್ತು ರೋಡ್ ಶೋಗಳ ಸಮಯದಲ್ಲಿ, ಪೊಲೀಸರನ್ನು ಹೊರತುಪಡಿಸಿ, ಭದ್ರತೆಗಾಗಿ ಸಾಮಾನ್ಯ ಬಟ್ಟೆಯಲ್ಲಿ ಎಸ್‌ಪಿ ಮಟ್ಟದ ಅಧಿಕಾರಿಗಳನ್ನು ನಿಯೋಜಿಸಲಾಗುತ್ತದೆ. ರ‍್ಯಾಲಿಗಳ ಸಮಯದಲ್ಲಿ ನಾಯಕರುಗಳು ಸಮವಸ್ತ್ರಧಾರಿ ಅಧಿಕಾರಿಗಳಿಂದ ಸುತ್ತುವರಿಯಲು ಬಯಸುವುದಿಲ್ಲ. ಆದರೆ ಅವರನ್ನು ಹಾಗೆಯೇ ಬಿಡಲು ಸಾಧ್ಯವಿಲ್ಲ. ಹೀಗಾಗಿ ಅಧಿಕಾರಿಗಳನ್ನು ಸಾಮಾನ್ಯ ಉಡುಪಿನಲ್ಲಿ ನಿಯೋಜಿಸಲಾಗುತ್ತದೆ. ಒಮ್ಮೊಮ್ಮೆ ಪಕ್ಷದ ಕಾರ್ಯಕರ್ತರ ದಿರಿಸಿನಲ್ಲಿ ಕೂಡ ನಿಯೋಜಿಸಲಾಗುತ್ತದೆ ಎಂಬುದಾಗಿ ಇನ್ನೊಬ್ಬ ಅಧಿಕಾರಿ ಮಾಹಿತಿ ನೀಡಿದ್ದಾರೆ.

ನಿರೀಕ್ಷಿತವಲ್ಲದ ಸ್ವಯಂಪ್ರೇರಿತ ಅಥವಾ ಅನಿರೀಕ್ಷಿತ ಪ್ರತಿಭಟನೆಗಳು ಇದ್ದಲ್ಲಿ ಭೇಟಿಯ ಯೋಜನೆಗಳೇನು?
ಯಾವುದೇ ವಿಐಪಿಯ ಭೇಟಿಗೆ ಪ್ರತಿಭಟನೆಗಳು ಯಾವಾಗಲೂ ಬೆದರಿಕೆಯ ರೂಪದಲ್ಲಿರುತ್ತವೆ ಮತ್ತು ಹೀಗಾಗಿ, ಅವರನ್ನು ತಡೆಯಲು ರಾಜ್ಯ ಪೊಲೀಸರು ಯಾವೆಲ್ಲಾ ಮುಂಚಿತ ಯೋಜನಾ ಅಂಶಗಳನ್ನು ನಿರ್ಧರಿಸಿದ್ದಾರೆ ಎಂಬುದನ್ನು ವಿವರಿಸಲು ಕೇಳಲಾಗುತ್ತದೆ. ಸಾಮಾನ್ಯವಾಗಿ, ಸ್ಥಳೀಯ ಗುಪ್ತಚರ ದಳವು ಯಾವ ಗುಂಪುಗಳು ಪ್ರತಿಭಟನೆಯನ್ನು ಯೋಜಿಸುತ್ತಿದೆ ಎಂಬುದರ ಕುರಿತು ಮುಂಚಿನ ವಿವರಗಳನ್ನು ಹೊಂದಿದೆ ಮತ್ತು ಇದಕ್ಕೆ ಹೊಂದಿದಂತೆ ತಡೆಗಟ್ಟುವ ಕ್ರಮವನ್ನು ತೆಗೆದುಕೊಳ್ಳಲಾಗುತ್ತದೆ.

ಸ್ಥಳೀಯ ಪೊಲೀಸರ ಬಳಿ ಅನುಮಾನಾಸ್ಪದ ವ್ಯಕ್ತಿಗಳು ಅಥವಾ ಸಂಭಾವ್ಯ ಪ್ರತಿಭಟನಾಕಾರರ ಪಟ್ಟಿ ಇರುತ್ತದೆ. ಅವರನ್ನು ಮುಂಚಿತವಾಗಿ ಪ್ರತ್ಯೇಕವಾಗಿರಿಸಲಾಗುತ್ತದೆ. ಇಂತಹ ಮಾಹಿತಿಯನ್ನು ಸಂಗ್ರಹಿಸಲು ಭೌತಿಕ ಮತ್ತು ಎಲೆಕ್ಟ್ರಾನಿಕ್ ಕಣ್ಗಾವಲು ಎರಡನ್ನೂ ಅಳವಡಿಸಲಾಗುತ್ತದೆ. ಯೋಜಿತ ಪ್ರತಿಭಟನೆಯನ್ನು ಸ್ಥಗಿತಗೊಳಿಸಲಾಗದಿದ್ದರೆ, ನಂತರ ಪ್ರಧಾನಿಯವರು ಹೋಗುವ ಮಾರ್ಗವನ್ನು ತಪ್ಪಿಸಲಾಗುತ್ತದೆ, ”ಎಂದು ಅಧಿಕಾರಿ ತಿಳಿಸಿದ್ದಾರೆ.

ಜನವರಿ 5 ರಂದು ಪಂಜಾಬ್‌ನಲ್ಲಿ ಏನು ನಡೆಯಿತು?
ಪಂಜಾಬ್ ಮುಖ್ಯಮಂತ್ರಿ ಚರಣ್‌ ಜಿತ್ ಸಿಂಗ್ ಚನ್ನಿ ಅವರು ಪ್ರಧಾನ ಮಂತ್ರಿಗಳು ತಮ್ಮ ಯೋಜನೆಯನ್ನು ಹಠಾತ್ ಆಗಿ ಬದಲಾಯಿಸಿದರು ಎಂಬುದಾಗಿ ತಿಳಿಸಿದ್ದು, ಪ್ರಧಾನಿಯವರ ಕಾರ್ಯಕ್ರಮವನ್ನು ಮುಂಚಿತವಾಗಿಯೇ ತಿಳಿಸಲಾಗಿದೆ ಎಂದು ಗೃಹ ಸಚಿವಾಲಯವು ಹೇಳಿಕೊಂಡಿದೆ.
ಡಿಜಿಪಿ ಪಂಜಾಬ್ ಪೊಲೀಸರ ಅಗತ್ಯ ಭದ್ರತಾ ವ್ಯವಸ್ಥೆಗಳ ದೃಢೀಕರಣದ ನಂತರವೇ ಪ್ರಧಾನಿಯವರು ರಸ್ತೆಯ ಮೂಲಕ ಪ್ರಯಾಣ ಮಾಡಲು ನಿರ್ಧರಿಸಿದರು ಎಂಬುದಾಗಿ ಸಚಿವಾಲಯವು ಹೇಳಿಕೆಯಲ್ಲಿ ತಿಳಿಸಿದೆ. ಮಾಜಿ ಅಧಿಕಾರಿ ಓ ಪಿ ಸಿಂಗ್ ಪಂಜಾಬ್ ಪೊಲೀಸರ ಮೇಲೆ ಪ್ರಧಾನಿಯವರ ಭದ್ರತಾ ಲೋಪದೋಷಗಳ ಆರೋಪವನ್ನು ಹೊರಿಸಿದ್ದಾರೆ.

ಈ ಲೋಪದೋಷಗಳಿಗೆ ಜವಬ್ದಾರರು ಯಾರು?
ಪಂಜಾಬ್ ವಿಷಯದಲ್ಲಿ, ಕೆಟ್ಟ ಹವಾಮಾನದ ಕಾರಣದಿಂದಾಗಿ ಪ್ರಧಾನಿಯವರು ರಸ್ತೆಯ ಮೂಲಕ ಸಂಚರಿಸಲು ನಿರ್ಧರಿಸಿದಾಗ ಸಂಪೂರ್ಣ ರಸ್ತೆಯ ಸ್ವಚ್ಛತೆ, ಇದಕ್ಕೆ ಸಂಬಂಧಪಟ್ಟ ಕೆಲಸಗಾರರನ್ನು ನೇಮಿಸುವುದು ಸ್ಥಳೀಯ ಪೊಲೀಸರ ಜವಬ್ದಾರಿಯಾಗಿದೆ. ಮಾರ್ಗದ ಸಂಪೂರ್ಣ ಭದ್ರತೆಯ ಕುರಿತು ಸ್ಥಳೀಯ ಪೊಲೀಸರಿಂದ ದೃಢೀಕರಣವನ್ನು ಪಡೆದ ನಂತರವೇ SPG ಯು ಪ್ರಧಾನಿಯ ಪ್ರಯಾಣಕ್ಕೆ ಅನುಮತಿಯನ್ನು ನೀಡುತ್ತದೆ ಎಂಬುದಾಗಿ ಸಿಂಗ್ ತಿಳಿಸಿದ್ದಾರೆ.

ಇದನ್ನೂ ಓದಿ: Viral News: ಈ ವಯಸ್ಸಲ್ಲೂ ಸಖತ್​ ವರ್ಕೌಟ್​ ಮಾಡಿದ ಮೋದಿ: ವಿಡಿಯೋ ಸಿಕ್ಕಾಪಟ್ಟೆ ವೈರಲ್​!

ಪ್ರಧಾನಿಯವರು ಫ್ಲೈಓವರ್ ಮೇಲೆ 15 ನಿಮಿಷಗಳ ಕಾಲ ಕಾಯಬೇಕಾಯಿತು ಎಂದು ಸಿಂಗ್ ತಿಳಿಸಿದ್ದಾರೆ. ಇದು ರಸ್ತೆಯ ಕ್ರಾಸ್ ಸೆಕ್ಶನ್ ವಿಭಾಗವೂ ಅಲ್ಲ ಅಂದರೆ ಸ್ಥಳೀಯ ಪೊಲೀಸರು ಫ್ಲೈಓವರ್‌ನ ಪ್ರವೇಶ ಹಾಗೂ ನಿರ್ಗಮನಗಳನ್ನು ಸುರಕ್ಷಿತವಾಗಿರಿಸುವಲ್ಲಿ ವಿಫಲರಾಗಿದ್ದಾರೆ ಎಂಬುದು ಕಂಡುಬಂದಿದೆ. ಪಂಜಾಬ್ ಪಾಕಿಸ್ತಾನದ ಗಡಿಭಾಗದಲ್ಲಿರುವ ರಾಜ್ಯವಾಗಿರುವುದರಿಂದ ಇದು ಅತ್ಯಂತ ಗಂಭೀರ ಭದ್ರತಾ ಲೋಪ ಎಂಬುದಾಗಿ ಸಿಂಗ್ ಎಚ್ಚರಿಕೆ ನೀಡಿದ್ದಾರೆ. ಆದಾಗ್ಯೂ, ಪ್ರಧಾನಿ ರಸ್ತೆ ಮಾರ್ಗವಾಗಿ ಹೋಗಲು ನಿರ್ಧರಿಸಿದ ನಂತರ ಪಂಜಾಬ್ ಡಿಜಿಪಿ ಮತ್ತು ಎಸ್‌ಪಿಜಿ ನಡುವೆ ಯಾವ ಸಂಭಾಷಣೆ ನಡೆಯಿತು ಎಂಬುದನ್ನು ನಿರ್ಧರಿಸುವುದು ಇಲ್ಲಿ ಪ್ರಧಾನವಾದುದು ಎಂದು ಮತ್ತೊಬ್ಬ ಅಧಿಕಾರಿ ತಿಳಿಸಿದ್ದಾರೆ.

ರೈತರು ಪ್ರತಿಭಟನೆಗಳನ್ನು ನಡೆಸುವ ಕುರಿತು ಪಂಜಾಬ್ ಡಿಜಿಪಿಯು SPG ಗೆ ತಿಳಿಸಿದ್ದರೆ ಇಲ್ಲವೇ ಪ್ರದೇಶದಲ್ಲಿ ಅಶಾಂತಿ ಕೂಡಿರುತ್ತದೆ ಎಂಬ ಮಾಹಿತಿಯನ್ನು ನೀಡಿದ್ದರೆ ಆ ಮಾರ್ಗವಾಗಿ ಸಂಚರಿಸುವುದನ್ನು ತಪ್ಪಿಸಲು ಎಸ್‌ಪಿಜಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕಿತ್ತು ಎಂದು ಹೆಸರು ಹೇಳಲು ಇಚ್ಛಿಸಿದ ಮಾಜಿ SPG ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Published by:vanithasanjevani vanithasanjevani
First published: