Explained: ಮಹಿಳಾ ಸೈನಿಕರ 'ಕನ್ಯತ್ವ ಪರೀಕ್ಷೆ' ರದ್ದುಗೊಳಿಸಿರುವ ಇಂಡೋನೇಷ್ಯಾ, ಏನಿದರ ಹಿನ್ನೆಲೆ?

Virginity Tests: ಮಹಿಳಾ ಸೇನಾ ನೇಮಕಾತಿಗೆ ಇಂತಹ ಪರೀಕ್ಷೆಗಳು ಬಹಳ ಹಿಂದಿನಿಂದಲೂ ಕಡ್ಡಾಯವಾಗಿದ್ದು ಕನ್ಯತ್ವ ಪರೀಕ್ಷೆಯನ್ನು ಸೇನೆಗೆ ಸೇರುವ ಮಹಿಳಾ ಅರ್ಜಿದಾರರಿಗೆ ಮಾತ್ರವಲ್ಲದೆ, ಸೇನಾ ಸಿಬ್ಬಂದಿಯನ್ನು ವಿವಾಹವಾಗುವ ಮಹಿಳೆಯರಿಗೂ ಅಗತ್ಯವಾಗಿತ್ತು

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:

Virginity Test: ದೀರ್ಘ ಸಮಯದಿಂದ ಆಚರಣೆಯಲ್ಲಿದ್ದ ಮಹಿಳಾ ಸೇನಾ ನೇಮಕಾತಿ ವೇಳೆ ನಡೆಸುವ ಕನ್ಯತ್ವ ಪರೀಕ್ಷೆಯನ್ನು ಕೈಬಿಟ್ಟಿರುವುದಾಗಿ ಇಂಡೋನೇಷ್ಯಾ ಸೇನೆಯು ಘೋಷಿಸಿದೆ. ಇಂಡೋನೇಷ್ಯಾದ ಸೇನಾ ಪಡೆಯಲ್ಲಿ ಮಹಿಳಾ ಅಭ್ಯರ್ಥಿಗಳಿಗಾಗಿ ನಡೆಸುವ ಕನ್ಯತ್ವ ಪರೀಕ್ಷೆಯನ್ನು 2014 ರಲ್ಲಿ ಮಾನವ ಹಕ್ಕುಗಳು ಬಹಿರಂಗಪಡಿಸಿತು. ತನಿಖೆಯಿಂದ ತಿಳಿದು ಬಂದಿರುವ ವಿಚಾರವೇನೆಂದರೆ 1965 ರಿಂದಲೇ ಸೇನೆಯು ಸಾವಿರಾರು ಮಹಿಳಾ ಅರ್ಜಿದಾರರಿಗೆ ಕನ್ಯತ್ವ ಪರೀಕ್ಷೆಯನ್ನು ನಡೆಸಿದ್ದು, ರಾಷ್ಟ್ರೀಯ ಪೊಲೀಸ್ ತತ್ವಗಳ ಹೊರತಾಗಿಯೂ ನೇಮಕಾತಿಯು ಭೇದಭಾವ ರಹಿತವಾಗಿರಬೇಕು ಹಾಗೂ ಮಾನವೀಯ ನೆಲೆಗಟ್ಟಿನಲ್ಲಿರಬೇಕು ಎಂದು ತಿಳಿಸಿತ್ತು. ಅದೇ ವರ್ಷ, ರಾಜಕೀಯ, ಕಾನೂನು ಮತ್ತು ಭದ್ರತೆಗಾಗಿ ಇಂಡೋನೇಷ್ಯಾದ ಸಮನ್ವಯ ಸಚಿವರಾದ ಟೆಡ್ಜೊ ಈಧಿ, ಮಹಿಳಾ ಸೇನಾ ನೇಮಕಾತಿಗೆ ಇಂತಹ ಪರೀಕ್ಷೆಗಳು ಬಹಳ ಹಿಂದಿನಿಂದಲೂ ಕಡ್ಡಾಯವಾಗಿದ್ದು ಕನ್ಯತ್ವ ಪರೀಕ್ಷೆಯನ್ನು ಸೇನೆಗೆ ಸೇರುವ ಮಹಿಳಾ ಅರ್ಜಿದಾರರಿಗೆ ಮಾತ್ರವಲ್ಲದೆ, ಸೇನಾ ಸಿಬ್ಬಂದಿಯನ್ನು ವಿವಾಹವಾಗುವ ಮಹಿಳೆಯರಿಗೂ ಅಗತ್ಯವಾಗಿತ್ತು ಎಂದು ಮಾಧ್ಯಮದವರಿಗೆ ತಿಳಿಸಿದ್ದರು.


ಕನ್ಯತ್ವ ಪರೀಕ್ಷೆ ಎಂದರೇನು?


ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಟಣೆಯ ಪ್ರಕಾರ "ಕನ್ಯತ್ವ ಪರೀಕ್ಷೆ ನಿರ್ಮೂಲನೆ: ಒಂದು ಸಂವಾದ ಹೇಳಿಕೆ, ಕನ್ಯತ್ವ ಪರೀಕ್ಷೆ – ಹೈಮೆನ್ ಎಂದು ಕರೆಯಲಾಗಿದ್ದು “ಎರಡು ಬೆರಳಿನ ಪರೀಕ್ಷೆ” (ಟು ಪಿಂಗರ್) ಯೋನಿ ಪರೀಕ್ಷೆ ಎಂದಾಗಿಯೂ ಕರೆಯಲಾಗಿತ್ತು. ಮಹಿಳೆ ಅಥವಾ ಹುಡುಗಿಯು ಯೋನಿ ಸಂಭೋಗದಲ್ಲಿ ತೊಡಗಿಸಿಕೊಂಡಿದ್ದಾರೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಸ್ತ್ರೀ ಜನನಾಂಗದ ತಪಾಸಣೆಯನ್ನು ನಡೆಸಲಾಗುತ್ತಿತ್ತು.


ಮಾನವ ಹಕ್ಕುಗಳ ಕಣ್ಗಾವಲು ತನ್ನ ವರದಿಯಲ್ಲಿ ಕನ್ಯತ್ವ ಪರೀಕ್ಷೆಯನ್ನು ಲಿಂಗ ಆಧಾರಿತ ಹಿಂಸೆಯ ವ್ಯಾಪಕ ಅಪಕೀರ್ತಿ ಪದ್ಧತಿಯಾಗಿದೆ ಎಂಬುದಾಗಿ ಉಲ್ಲೇಖಿಸಿತ್ತು.


ಪದ್ಧತಿಯ ವೈಜ್ಞಾನಿಕ ಮಾನ್ಯತೆ


ಯುನೈಟೆಡ್ ನೇಷನ್ಸ್‌ಗಳ ಏಜೆನ್ಸಿಗಳ ಗುಂಪೊಂದು 2018 ರಲ್ಲಿ ಬಿಡುಗಡೆ ಮಾಡಿರುವ ಜಂಟಿ ಹೇಳಿಕೆಗಳಲ್ಲಿ ಯಾವುದೇ ವೈಜ್ಞಾನಿಕ ಆಧಾರವಿಲ್ಲದೆ ಹುಡುಗಿ ಅಥವಾ ಸ್ತ್ರೀಯರ ಕನ್ಯತ್ವ ನಿರ್ಣಯಿಸುವ ಹಕ್ಕನ್ನು ಮಾನವ ಹಕ್ಕುಗಳ ಉಲ್ಲಂಘನೆ ಎಂಬುದಾಗಿ ಪರಿಗಣಿಸಿ ಪರೀಕ್ಷೆಯನ್ನು ಕೈಬಿಡುವಂತೆ ಒತ್ತಾಯಿಸಿತ್ತು.


ಇದನ್ನೂ ಓದಿ: Sleep Tips: ಸಿಕ್ಕಾಪಟ್ಟೆ ಗೊರಕೆ ಹೊಡಿತೀರಾ? ಅದ್ರಿಂದ ತಪ್ಪಿಸಿಕೊಳ್ಳೋಕೆ ಹೀಗೆ ಮಾಡಿ

ವಿಶ್ವ ಆರೋಗ್ಯ ಸಂಸ್ಥೆಯ ಕನ್ಯತ್ವ ಪರೀಕ್ಷೆಯ ವ್ಯವಸ್ಥಿತ ವಿಮರ್ಶೆಯ ಪ್ರಕಾರ, ಪರೀಕ್ಷೆಗೆ ಯಾವುದೇ ವೈಜ್ಞಾನಿಕ ಅರ್ಹತೆ ಅಥವಾ ವೈದ್ಯಕೀಯ ಸೂಚನೆ ಇಲ್ಲ. ಯೋನಿಯ ಸಂಭೋಗದ ವ್ಯಕ್ತಿಯ ಇತಿಹಾಸವನ್ನು ಸಾಬೀತುಪಡಿಸುವ ಯಾವುದೇ ಪರಿಚಿತ ಪರೀಕ್ಷೆ ಇಲ್ಲ ಎಂದು ಅಧ್ಯಯನ ಹೇಳುತ್ತದೆ.


ಕಾರ್ಯಕರ್ತರು ಮತ್ತು ಮಾನವ ಹಕ್ಕುಗಳ ಸಂಘಟನೆಗಳಿಂದ ಪ್ರತಿಕ್ರಿಯೆಗಳು


ಹಕ್ಕುಗಳ ಕಾರ್ಯಕರ್ತರು ಮತ್ತು ಸಂಘಟನೆಗಳು ಸೇನೆಯ ನಡೆಯನ್ನು ಸ್ವಾಗತಿಸಿವೆ. ಇಂಡೋನೇಷ್ಯಾದ ಸಂಶೋಧಕ ಮತ್ತು ಲೇಖಕ ಎಚ್‌ಆರ್‌ಡಬ್ಲ್ಯೂ ಆಂಡ್ರಿಯಾಸ್ ಹರ್ಸೊನೊ ಹೇಳಿರುವಂತೆ “ಸೇನಾ ಕಮಾಂಡ್ ಸರಿಯಾದ ಕೆಲಸವನ್ನು ಮಾಡುತ್ತಿದೆ. ಆದೇಶಗಳನ್ನು ಅನುಸರಿಸುವುದು ಮತ್ತು ಈ ಪದ್ಧತಿಯ ಅವೈಜ್ಞಾನಿಕ, ಹಕ್ಕುಗಳ ದುರುಪಯೋಗದ ಸ್ವಭಾವವನ್ನು ಗುರುತಿಸುವುದು ಈಗ ಪ್ರಾದೇಶಿಕ ಮತ್ತು ಬೆಟಾಲಿಯನ್ ಕಮಾಂಡರ್‌ಗಳ ಜವಾಬ್ದಾರಿಯಾಗಿದೆ. ಹೆಚ್ಚಿದ ಒತ್ತಡವು ನೌಕಾಪಡೆ ಮತ್ತು ವಾಯುಪಡೆಯ ಉನ್ನತ ಕಮಾಂಡರ್‌ಗಳ ಮೇಲೆ ಕೇಂದ್ರೀಕರಿಸುವ ಅಗತ್ಯವಿದೆ ಮತ್ತು ಸೈನ್ಯದ ಮುನ್ನಡೆ ಅನುಸರಿಸಲು ಮತ್ತು ಈ ಅಭ್ಯಾಸವನ್ನು ಕೊನೆಗೊಳಿಸಿರುವುದು ಸ್ವಾಗತಾರ್ಹ ಎಂದು ತಿಳಿಸಿದ್ದಾರೆ.


ಇದನ್ನೂ ಓದಿ: ಎಣ್ಣೆ ಪ್ರಿಯರಿಗೆ ಸಖತ್ ಸುದ್ದಿ…ಬಂದಿದೆ Alcohol Ice Cream! ತಿಂದ್ರೆ ಕಿಕ್ ಹೊಡೆಯೋದು ಗ್ಯಾರಂಟಿ

ಮಹಿಳಾ ಹಕ್ಕುಗಳ ಹೋರಾಟಗಾರ್ತಿ ಮತ್ತು ಸಮುದಾಯ ಸಂಘಟಕರಾದ ಕೇಟ್ ವಾಲ್ಟನ್ ಟ್ವೀಟ್ ಮಾಡಿ, ಇದು ಒಳ್ಳೆಯ ಸುದ್ದಿ! ಇಂಡೋನೇಷ್ಯಾದ ಸೇನಾ ಮುಖ್ಯಸ್ಥ ಜನರಲ್ ಆಂಡಿಕಾ ಪೆರ್ಕಾಸ ಅವರು ಸೇನಾ ಕಮಾಂಡರ್‌ಗಳಿಗೆ ಮಹಿಳಾ ಅಧಿಕಾರಿಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಪುರುಷರಂತೆಯೇ ಸಮಾನ ವೈದ್ಯಕೀಯ ಪರೀಕ್ಷೆ ನಡೆಸಬೇಕು ಎಂದು ತಿಳಿಸಿದ್ದು, ಇದು ಕನ್ಯತ್ವ ಪರೀಕ್ಷೆ ಅಂತ್ಯ ಹಾಡಿದೆ ಎಂದು ಬರೆದುಕೊಂಡಿದ್ದಾರೆ.
ಇತರೆ 20 ದೇಶಗಳಲ್ಲಿ ಕನ್ಯತ್ವ ಪರೀಕ್ಷೆ ಚಾಲ್ತಿಯಲ್ಲಿದೆ


ವಿಶ್ವಸಂಸ್ಥೆಯ ಪ್ರಕಾರ, ಬಹುತೇಕ ದೇಶಗಳು ಕನ್ಯತ್ವ ಪರೀಕ್ಷೆಗಳ "ಪುರಾತನ" ಮತ್ತು "ಅವೈಜ್ಞಾನಿಕ" ಅಭ್ಯಾಸವನ್ನು ರದ್ದುಗೊಳಿಸಿದರೂ, ಅಫ್ಘಾನಿಸ್ತಾನ, ಈಜಿಪ್ಟ್ ಮತ್ತು ದಕ್ಷಿಣ ಆಫ್ರಿಕಾ ಸೇರಿದಂತೆ ಕನಿಷ್ಠ 20 ದೇಶಗಳಲ್ಲಿ ಮಹಿಳೆಯರು ಮತ್ತು ಹುಡುಗಿಯರು ಯೋನಿ ಪರೀಕ್ಷೆಗೆ ಒಳಗಾಗುತ್ತಾರೆ ಎಂಬುದು ತಿಳಿದು ಬಂದಿದೆ.

Published by:Soumya KN
First published: