• Home
  • »
  • News
  • »
  • explained
  • »
  • Explained: ಭಾರತ ಮರೆಯದ 'ಉಕ್ಕಿನ ಮಹಿಳೆ' ಇಂದಿರಾ! ಇವ್ರನ್ನು ಗ್ರೇಟ್​ ವುಮೆನ್​ ಅನ್ನೋದು ಇದಕ್ಕೆ ನೋಡಿ

Explained: ಭಾರತ ಮರೆಯದ 'ಉಕ್ಕಿನ ಮಹಿಳೆ' ಇಂದಿರಾ! ಇವ್ರನ್ನು ಗ್ರೇಟ್​ ವುಮೆನ್​ ಅನ್ನೋದು ಇದಕ್ಕೆ ನೋಡಿ

ಇಂದಿರಾ ಗಾಂಧಿ

ಇಂದಿರಾ ಗಾಂಧಿ

ಇಂದಿರಾ ಅವರ ರಾಜಕೀಯ ವಿರೋಧಿಗಳು ಅವರ ಸಾಮರ್ಥ್ಯಗಳನ್ನು ಚೆನ್ನಾಗಿ ಅರಿತುಕೊಂಡಿರಲಿಲ್ಲ. ಏಕೆಂದರೆ ತೊಟ್ಟಿಲು ತೂಗುವ ಕೈ ದೇಶವನ್ನು ಆಳಬಹುದು ಎಂಬ ಸಾಧನೆಯನ್ನು ಆಕೆ ಮಾಡಿದ್ದರು.

  • Trending Desk
  • 2-MIN READ
  • Last Updated :
  • Share this:

ಕಠಿಣ ಮತ್ತು ವಿವಾದಾತ್ಮಕ ನೆಲೆಯಲ್ಲಿ ಕೂಡ 1999 ರಲ್ಲಿ ಇಂದಿರಾ ಗಾಂಧಿ (Indira Gandhi) ಯವರು, ರಾಣಿ ಎಲಿಜಬೆತ್ (Queen Elizabeth), ಮದರ್ ತೆರೇಸಾ (Mother Teresa), ಮಾರ್ಗರೇಟ್ ಥ್ಯಾಚರ್ (Margaret Thatcher), ಮೇರಿ ಕ್ಯೂರಿ (Marie Curie) ಅಥವಾ ಜೋನ್ ಆಫ್ ಆರ್ಕ್ (Joan of Arc) ಅವರಿಗಿಂತ 20 ನೇ ಶತಮಾನದ 'ಶ್ರೇಷ್ಠ ಮಹಿಳೆ' (A Great Woman) ಎಂದು ಗುರುತಿಸಿಕೊಂಡಿದ್ದಾರೆ. ಇಂತಹ ಬಿರುದು ಆಕೆಗೆ ಸಂದಿದೆ ಎಂದರೆ ದೇಶದ ಅಧಿಕಾರ ಚುಕ್ಕಾಣಿಯಲ್ಲಿ ಆಕೆಯ ಪಾತ್ರ ಎಂತಹದ್ದು ಎಂಬ ಅರಿವು ದೇಶವಾಸಿಗಳಿಗೆ ಉಂಟಾಗುವುದು ಖಂಡಿತ. ತಮ್ಮ ಜೀವನದ ಬಹುಪಾಲು ಸಮಯದಲ್ಲಿಯೂ ಇಂದಿರಾ ಗಾಂಧಿ, ಪ್ರತಿಯೊಂದು ರಾಜಕೀಯ (Politics) ಬೆಳವಣಿಗೆಗೂ ತಮ್ಮ ಮೌನ ಹಾಗೂ ಅಚ್ಚರಿಯ ತೀರ್ಮಾನ ಹಾಗೂ ಕಾರ್ಯಯೋಜನೆಯೊಂದಿಗೆ ಉತ್ತರಿಸಲು ಆದ್ಯತೆ ನೀಡಿದ್ದಾರೆ.


ಸಾಧನೆಗಳನ್ನು ಸಾಧಿಸಿದ ಛಲಗಾತಿ!


ಇಂದಿರಾ ಅವರ ರಾಜಕೀಯ ವಿರೋಧಿಗಳು ಅವರ ಸಾಮರ್ಥ್ಯಗಳನ್ನು ಚೆನ್ನಾಗಿ ಅರಿತುಕೊಂಡಿರಲಿಲ್ಲ. ಏಕೆಂದರೆ ತೊಟ್ಟಿಲು ತೂಗುವ ಕೈ ದೇಶವನ್ನು ಆಳಬಹುದು ಎಂಬ ಸಾಧನೆಯನ್ನು ಆಕೆ ಮಾಡಿದ್ದರು. ಇದರೊಂದಿಗೆ ತಮ್ಮ ನೈಪುಣ್ಯತೆಯನ್ನು ಅವರು ಹೆಚ್ಚಿಸಿಕೊಂಡಿದ್ದರು ಹಾಗೂ ಭಾರತದಂತಹ ರಾಷ್ಟ್ರವನ್ನು ಮುನ್ನಡೆಸಲು ಈ ಅಂಶಗಳು ಆಕೆಯನ್ನು ಸಿದ್ಧಗೊಳಿಸಿತ್ತು.


ನೆಹರೂ ಅವರ ಆತ್ಮೀಯ ಸ್ನೇಹಿತರಾದ ಬರಹಗಾರ ಮತ್ತು ಚಲನಚಿತ್ರ ನಿರ್ಮಾಪಕ ಖ್ವಾಜಾ ಅಹ್ಮದ್ ಅಬ್ಬಾಸ್ ಅವರು ಆಗಸ್ಟ್ 1954 ರಲ್ಲಿ ಇಂದಿರಾ ಗಾಂಧಿಯವರ ಆರ್ಥಿಕ ಚಾಣಾಕ್ಷತೆಯನ್ನು ಕಣ್ಣಾರೆ ಕಂಡಿದ್ದಾಗಿ ತಿಳಿಸಿದ್ದಾರೆ. ಆ ಅನುಭವವನ್ನು ಅಬ್ಬಾಸ್ ತಿಳಿಸಿದ್ದು ಒಮ್ಮೆ ಅಬ್ಬಾಸ್ ಹಾಡು ರಹಿತ ಮೊದಲ ಹಿಂದಿ ಚಲನಚಿತ್ರ ಮುನ್ನಾದ ಪ್ರದರ್ಶನವನ್ನು ನೆಹರು ಸೇರಿದಂತೆ ಆಯ್ದ ಗಣ್ಯರಿಗಾಗಿ ಏರ್ಪಡಿಸಿದ್ದರು.


ಮನೆ ನಿರ್ವಹಣೆ ಹಾಗೂ ದೇಶ ನಿರ್ವಹಣೆ ಎರಡಕ್ಕೂ ಸೈ!


ಬಾಲನಟ ಮಾಸ್ಟರ್ ರೋಮಿಯ ಅಭಿನಯದಿಂದ ಭಾವುಕರಾದ ಚಲನಚಿತ್ರ ಪ್ರೇಮಿ ನೆಹರು ರೋಮಿಯನ್ನು ಬೆಳಗ್ಗಿನ ಉಪಹಾರಕ್ಕೆ ಆಹ್ವಾನಿಸಿದ್ದರು. ಈ ಸಮಯದಲ್ಲಿ ಇತರ ನಟರು ಮತ್ತು ತಂತ್ರಜ್ಞರು ಸೇರಿದಂತೆ ಇಡೀ ಘಟಕವು ರೋಮಿಯೊಂದಿಗೆ ಬರಬಹುದೇ ಎಂದು ಅಬ್ಬಾಸ್ ನೆಹರು ಅವರನ್ನು ಕೇಳಿದಾಗ ನೆಹರು ತಮ್ಮ ಮಗಳು ಇಂದಿರಾಳಲ್ಲಿ ಚಲನಚಿತ್ರ ತಂಡವನ್ನು ಸಂಪೂರ್ಣವಾಗಿ ಬೆಳಗ್ಗಿನ ಉಪಹಾರಕ್ಕೆ ಆಹ್ವಾನಿಸಲು ಸಾಕಷ್ಟು ಧಾನ್ಯ ಹಾಗೂ ಮೊಟ್ಟೆಗಳು ನಮ್ಮ ಬಳಿ ಇದೆಯೇ ಎಂದು ಕೇಳಿದ್ದರು.


ಆದರೆ ಇಂದಿರಾ ತಮ್ಮ ತಂದೆಗೆ ಆ ಸಮಯದಲ್ಲಿ ಪೂರ್ಣ ಮನಸ್ಸಿನಿಂದ ಸರಿ ಎಂಬ ಉತ್ತರ ನೀಡಿರಲಿಲ್ಲ ಎಂದು ಅಬ್ಬಾಸ್ ಹೇಳುತ್ತಾರೆ. ಈ ಬಗ್ಗೆ ಅಬ್ಬಾಸ್ ಇಂದಿರಾ ಬಳಿ ನೇರವಾಗಿ ಪ್ರಶ್ನಿಸಿದಾಗ ಆಕೆಯ ಉತ್ತರ ಚಿತ್ರ ನಿರ್ಮಾಪಕರನ್ನು ದಂಗುಬಡಿಸಿತ್ತು ಎಂದು ಅವರು ಹೇಳಿದ್ದಾರೆ. ತಂದೆ ನೆಹರು ಅವರದು ಅತಿಥಿ ಸತ್ಕಾರದ ಮನೋಭಾವ ಹಾಗೂ ಅವರಂತಹ ದೊಡ್ಡ ಹೃದಯವಂತ ವ್ಯಕ್ತಿಯ ಮನೆಯನ್ನು ನಿಭಾಯಿಸಲು ಅವರ ಸಂಬಳ ಸಾಲುವುದಿಲ್ಲ ಎಂದು ಇಂದಿರಾ ಅಬ್ಬಾಸ್‌ಗೆ ತಿಳಿಸಿದರು.


ತಿಂಗಳ ದಿನಸಿಗೂ ಸಾಲುತ್ತಿರಲಿಲ್ವಂತೆ ಅಪ್ಪನ ಸಂಬಳ!


ಪ್ರಧಾನ ಮಂತ್ರಿಯವರು ಪಡೆದುಕೊಳ್ಳುತ್ತಿದ್ದ ಸಂಬಳ ತಿಂಗಳ ದಿನಸಿ ಶುಲ್ಕಗಳನ್ನು ಪಾವತಿಸಲು ಸಾಲುತ್ತಿರಲಿಲ್ಲ ಎಂದು ಇಂದಿರಾ ಹೇಳುತ್ತಿದ್ದರು ಎಂಬುದನ್ನು ಅಬ್ಬಾಸ್ ನೆನಪಿಸಿಕೊಂಡಿದ್ದು ವರ್ಷದ ಕೊನೆಯಲ್ಲಿ ಹಲವು ಸಾಲಗಳನ್ನು ನೆಹರು ಮಾಡುತ್ತಿದ್ದರು ಹಾಗೂ ಸಾಲಗಾರರಿಗೆ ಹೆಚ್ಚಿನ ಮೊತ್ತವನ್ನು ತೆರಬೇಕಾದ ಪರಿಸ್ಥಿತಿ ಉಂಟಾಗುತ್ತಿತ್ತು. ತಮ್ಮ ಪುಸ್ತಕಗಳ ವಿದೇಶಿ ಪ್ರಕಾಶಕರು ನೀಡುತ್ತಿದ್ದ ವಾರ್ಷಿಕ ರಾಯಧನದಿಂದ ಸಾಲಗಳನ್ನು ಪ್ರಧಾನಿಯವರು ಪಾವತಿಸುತ್ತಿದ್ದರು ಎಂಬುದನ್ನು ಅಬ್ಬಾಸ್ ಹೇಳಿದ್ದಾರೆ.


ಜನಪರ ಯೋಜನೆಗಳ ಘೋಷಣೆ:


1969 ರಲ್ಲಿ ಕಾಂಗ್ರೆಸ್ ಪಕ್ಷವನ್ನು ವಿಭಜಿಸಿದ ಇಂದಿರಾ ಗಾಂಧಿ ಖಾಸಗಿ ನಿಧಿ ರದ್ದುಗೊಳಿಸುವುದು ಹಾಗೂ ಬ್ಯಾಂಕ್‌ಗಳ ರಾಷ್ಟ್ರೀಕರಣದಂತಹ ಜನಪರ ಯೋಜನೆಗಳನ್ನು ಘೋಷಿಸಿದರು. 14 ಪ್ರಮುಖ ಬ್ಯಾಂಕ್‌ಗಳನ್ನು ರಾಷ್ಟ್ರೀಕರಣಗೊಳಿಸುವ ಕ್ರಮವು ಅದಾಗಲೇ ಮೆಚ್ಚುಗೆ ಪಡೆದಿತ್ತು. ಇಂದಿರಾ ಒಂದೇ ಪೆಟ್ಟಿಗೆ 14 ಪ್ರಮುಖ ಬ್ಯಾಂಕ್‌ಗಳ ರಾಷ್ಟ್ರೀಕರಣ ಮಾಡಿದರು.


ಯುನೈಟೆಡ್ ಕಮರ್ಷಿಯಲ್ ಬ್ಯಾಂಕ್ ಅನ್ನು ನಡೆಸುತ್ತಿದ್ದ ಬಿರ್ಲಾಗಳಂತಹ ಇತರ ದೊಡ್ಡ ವ್ಯಾಪಾರ ಸಂಸ್ಥೆಗಳಿಗೂ ಇಂದಿರಾ ತೀವ್ರ ಹೊಡೆತವನ್ನು ನೀಡಿದರು. ಆ ಸಮಯದ ಆರ್ಥಿಕ ಸಮೀಕ್ಷೆಯ ಪ್ರಕಾರ 20 ಪ್ರಮುಖ ಬ್ಯಾಂಕ್‌ಗಳ 188 ನಿರ್ದೇಶಕರು ಬ್ಯಾಂಕ್‌ಗಳಲ್ಲದೆ 1,452 ಕಂಪನಿಗಳ ನಿರ್ದೇಶಕರು ಆಗಿದ್ದರು ಎಂಬುದನ್ನು ಬಹಿರಂಗಪಡಿಸಿದೆ. ಖಾಸಗಿ ಲಾಭ ಹಾಗೂ ಸೌಲಭ್ಯಗಳಿಗಾಗಿ ಅವರುಗಳು ಬಳಸುತ್ತಿದ್ದ ದೊಡ್ಡ ಫಂಡ್‌ಗಳು ಇದೀಗ ಸಾರ್ವಜನಿಕ ಕಲ್ಯಾಣಕ್ಕಾಗಿ ತೆರೆದಿದೆ ಅಂದರೆ ಗ್ರಾಮೀಣ ವಲಯಕ್ಕೆ ಹಣಕಾಸು ಒದಗಿಸುವುದು, ರೈತರಿಗೆ ಟ್ರಾಕ್ಟರ್‌ಗಳನ್ನು ಖರೀದಿಸಲು ಮತ್ತು ಟ್ಯಾಕ್ಸಿ-ಡ್ರೈವರ್‌ಗಳಿಗೆ ಕ್ಯಾಬ್‌ಗಳನ್ನು ಖರೀದಿಸಲು ಹಣವನ್ನು ಸಾಲವಾಗಿ ನೀಡುವುದು ಇತ್ಯಾದಿ.


ಗರೀಬಿ ಹಟಾವೋ ಘೋಷಣೆ


1971 ರ ಆರಂಭಿಕ ಚುನಾವಣೆಯಲ್ಲಿ "ಗರೀಬಿ ಹಟಾವೋ" (ಬಡತನ ನಿರ್ಮೂಲನೆ) ಎಂಬ ಪ್ರಬಲ ಘೋಷಣೆಯೊಂದಿಗೆ ಇಂದಿರಾ ಅಧಿಕಾರಕ್ಕೆ ಮರಳಿದರು. ಆಕೆ ಎಷ್ಟು ಬಲಶಾಲಿ ಹಾಗೂ ದಿಟ್ಟ ಪ್ರಧಾನಿಯಾಗಿದ್ದರು ಎಂಬ ಸಂಗತಿ ಪಾಕಿಸ್ತಾನವನ್ನು ಎರಡು ವಿಭಾಗಗಳಾಗಿ ವಿಭಜಿಸಿದ ಸಮಯದಲ್ಲಿ ವಿಶ್ವಕ್ಕೆ ಅರಿವಾಯಿತು. ಢಾಕಾದಲ್ಲಿ ಸಾವಿರಾರು ಪಾಕಿಸ್ತಾನಿ ಪಡೆಗಳ ಶರಣಾಗತಿ ಮತ್ತು ಬಾಂಗ್ಲಾದೇಶದ ರಚನೆಯು ಅವರ ಅವರ ಧೀಮಂತ ವ್ಯಕ್ತಿತ್ವಕ್ಕೆ ಮಹತ್ವದ ಅಂಶಗಳಾಯಿತು. ಭಾರತೀಯ ಜನಸಂಘದ ಅಟಲ್ ಬಿಹಾರಿ ವಾಜಪೇಯಿಯವರೇ ಇಂದಿರಾ ಗಾಂಧಿಯವರಿಗೆ ದುರ್ಗಾ ಎಂಬ ಬಿರುದನ್ನು ನೀಡಿದರು.


ಭಾರತ ರತ್ನ ಗೌರವಕ್ಕೆ ಪಾತ್ರರಾದ ಇಂದಿರಾ ಗಾಂಧಿ


1971 ರಲ್ಲಿ ಪಾಕಿಸ್ತಾನದ ವಿರುದ್ಧದ ಭಾರತದ ನಿರ್ಣಾಯಕ ವಿಜಯವು 1962 ರಲ್ಲಿ ಹಾನಿಗೊಂಡಿದ್ದ ರಾಷ್ಟ್ರೀಯ ಗೌರವವನ್ನು ಪುನಃಸ್ಥಾಪಿಸಿತು. ರಾಷ್ಟ್ರಪತಿ ವಿ.ವಿ.ಗಿರಿ ಇಂದಿರಾ ಅವರಿಗೆ ರಾಷ್ಟ್ರದ ಅತ್ಯುನ್ನತ ನಾಗರಿಕ ಗೌರವವಾದ ಭಾರತ ರತ್ನವನ್ನು ನೀಡಿದರು.


ಪಾಕ್ ಅನ್ನು ಸೋಲಿಸಿದ ಇಂದಿರಾ ಅವರ ಪ್ರಬಲ ಶಕ್ತಿಗೆ ವಾಜಪೇಯಿ ಅಭಿನವ್ ಚಂಡಿ ದುರ್ಗ ಎಂಬ ಬಿರುದನ್ನು ಆಕೆಗೆ ನೀಡಿದ್ದರು ಎಂದು ಬರಹಗಾರರಾದ ಪ್ರೇಮ್ ಕುಮಾರ್ ಮಣಿ ನೆನಪಿಸಿಕೊಂಡಿದ್ದಾರೆ. 1974 ರಲ್ಲಿ ಪೋಖ್ರಾನ್ ಪರಮಾಣು ಪರೀಕ್ಷೆಗಳು ಭಾರತವನ್ನು ವಿಶ್ವದ ಆರನೇ ಪರಮಾಣು ಶಕ್ತಿಯನ್ನಾಗಿ ಮಾಡಿದವು ಈ ಅಂಶ ಭಾರತ ಮತ್ತು ವಿದೇಶಗಳಲ್ಲಿ ಇಂದಿರಾ ಅವರ ಘನತೆಯನ್ನು ಮತ್ತಷ್ಟು ಹೆಚ್ಚಿಸಿತು. 1975 ರಲ್ಲಿ ಸಿಕ್ಕಿಂ ಅನ್ನು ಸ್ವಾಧೀನಪಡಿಸಿಕೊಂಡ ನಂತರ ಇಂದಿರಾರನ್ನು ಉನ್ನತ ವ್ಯಕ್ತಿಯನ್ನಾಗಿ ಪರಿವರ್ತಿಸಿತು.


ಇದನ್ನೂ ಓದಿ: ಏಷ್ಯಾದ ಅತೀ ದೊಡ್ಡ ಸ್ಲಂ ಅಭಿವೃದ್ಧಿ ಸಾಧ್ಯವೇ? ಧಾರಾವಿ ಪುನರ್‌ ನಿರ್ಮಾಣ ಅದಾನಿ ಗ್ರೂಪ್‌ಗೆ ಚಾಲೆಂಜಿಂಗ್ ಏಕೆ?


ಪಂಜಾಬ್ ರಾಜ್ಯ ರಚನೆಗೆ ವಿರೋಧ


ಇಂದಿರಾ ಅವರು ತಮ್ಮ ಅಲ್ಪಸಂಖ್ಯಾತ ಹಿಂದೂ ಬೆಂಬಲಿಗರೊಂದಿಗೆ ನಿಕಟವಾಗಿ ಗುರುತಿಸಿಕೊಂಡಿದ್ದರಿಂದ ಭಾಷಾವಾರು ರೀತಿಯಲ್ಲಿ ಪಂಜಾಬ್ ರಾಜ್ಯವನ್ನು ರಚಿಸುವುದನ್ನು ಕಟುವಾಗಿ ವಿರೋಧಿಸಿದ್ದರು. ಆಕೆಯ ಹತ್ಯೆಗೆ ಆರು ತಿಂಗಳ ಮೊದಲು ಪ್ರಧಾನ ಮಂತ್ರಿ ಬಹುಸಂಖ್ಯಾತ ಸಮುದಾಯಕ್ಕೆ ಅವರಿಗೆ ಅನ್ಯಾಯವಾದಲ್ಲಿ ಇಲ್ಲವೇ ಅವರ ಹಕ್ಕುಗಳನ್ನು ಸಮುದಾಯದವರು ಪಡೆಯದೇ ಹೋದರೆ ಅದು ದೇಶದ ಸಮಗ್ರತೆಗೆ ಅಪಾಯಕಾರಿ ಎಂದು ಭರವಸೆ ನೀಡಲು ಯತ್ನಿಸಿದ್ದರು ಎಂಬುದು ತಿಳಿದುಬಂದಿದೆ.


ಇಂದಿರಾ ಅವರು 1966 ರಲ್ಲಿ ಮೊದಲ ಬಾರಿಗೆ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಸಮಯದಲ್ಲಿ ಪಂಜಾಬಿ ಸುಬಾ ರಚನೆಯ ಬೇಡಿಕೆಯನ್ನು ಒಪ್ಪಿಕೊಂಡಿದ್ದರು. ಇಂದಿರಾ ಅವರು 1965ರಲ್ಲಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಸಂಪುಟದಲ್ಲಿ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವರಾಗಿದ್ದಾಗ ಮತ್ತು ಆಗಿನ ಲೋಕಸಭಾ ಸ್ಪೀಕರ್ ಸರ್ದಾರ್ ಹುಕುಂ ಸಿಂಗ್ ಅವರ ಸಮಿತಿಯಲ್ಲಿದ್ದಾಗ 1980ರಲ್ಲಿ ಪ್ರಕಟವಾದ ಮೈ ಟ್ರುತ್ (ವಿಷನ್ ಬುಕ್ಸ್) ಎಂಬ ತಮ್ಮ ಪುಸ್ತಕದಲ್ಲಿ ಅವರಿಗಿದ್ದ ಕಾಳಜಿಯನ್ನು ನೆನಪಿಸಿಕೊಂಡಿದ್ದರು.


ಹಿಂದೂ ಸಂವೇದನೆಗೆ ಮಿಡಿದಿದ್ದ ಪ್ರಧಾನಿ


ಈ ಸಂದರ್ಭದಲ್ಲಿ, ಹಿಂದೂ ಸಂವೇದನೆಗಾಗಿ ಇಂದಿರಾ ಅವರ ಮನವಿ ಮಹತ್ವದ್ದಾಗಿತ್ತು. 1980 ರಲ್ಲಿ, ಅವರು ಮತ್ತೆ ಪ್ರಧಾನಿಯಾಗಿದ್ದಾಗ, ಪಂಜಾಬಿ ಸುಬಾ ರಚನೆಯ ಸಮಯದಲ್ಲಿ ಪಕ್ಷದ ಹಿಂದೂ ಬೆಂಬಲಿಗರನ್ನು ನಿರಾಸೆಗೊಳಿಸುವ "ಕಾಂಗ್ರೆಸ್ ನೀತಿಯ ಚಕಿತಗೊಳಿಸುವ ಹಿಂತಿರುವು" ಎಂಬುದನ್ನು ಅವರು ನೆನಪಿಸಿಕೊಳ್ಳುವುದು ಹಿಂದೂ ಸಮುದಾಯದ ಬಗ್ಗೆ ಅವರ ಆಳವಾದ ಕಾಳಜಿಯನ್ನು ಪ್ರತಿಬಿಂಬಿಸುತ್ತದೆ.


ಇಂದಿರಾ ಅವರ ಜೀವನಚರಿತ್ರೆಕಾರರಾದ ಕ್ಯಾಥರೀನ್ ಫ್ರಾಂಕ್, ಎಸ್‌ಎಸ್ ಗಿಲ್ ಮತ್ತು ಪುಪುಲ್ ಜಯಕರ್ ಆಕೆ 1980 ರಲ್ಲಿ ಅಧಿಕಾರಕ್ಕೆ ಮರಳಿದಾಗ, ಅವರು ಮುಸ್ಲಿಮರು ಅಥವಾ ಸಿಖ್ಖರಿಗಿಂತ ಹಿಂದೂ ಸಮುದಾಯದ ಕಡೆಗೆ ಹೆಚ್ಚು ಸಂವೇದನಾಶೀಲರಾಗಿದ್ದರು ಎಂಬುದನ್ನು ಗಮನಿಸಿದ್ದಾರೆ.


ಪ್ರಧಾನಿಗೆ ಚಿಂತೆಯನ್ನುಂಟು ಮಾಡಿದ್ದ ವಿಷಯಗಳು


ಜನತಾ ಪಕ್ಷದ ಮೇಲೆ ಜನಸಂಘದ ಪ್ರಾಬಲ್ಯ, ಭಾರತೀಯ ಜನತಾ ಪಕ್ಷ (ಬಿಜೆಪಿ) ರಚನೆ ಮತ್ತು ಏಪ್ರಿಲ್ 1981 ರಲ್ಲಿ ತಮಿಳುನಾಡಿನ ಮೀನಾಕ್ಷಿಪುರಂನಲ್ಲಿ 1,300 ಹರಿಜನರನ್ನು ಇಸ್ಲಾಂಗೆ ಸಾಮೂಹಿಕವಾಗಿ ಮತಾಂತರಗೊಳಿಸಿದ್ದು, ಕೋಮು ಸಮಸ್ಯೆಗಳು ಮೇಲುಗೈ ಸಾಧಿಸುತ್ತವೆ ಎಂಬುದಾಗಿ ಪ್ರಧಾನಿ ಚಿಂತಿತರಾಗಿದ್ದರು.


ಪಂಜಾಬ್‌ನಲ್ಲಿ ನೆಲೆಸಿರುವ ಹಿಂದೂಗಳ ಬಗ್ಗೆ ಇಂದಿರಾ ಅವರ ಕಾಳಜಿಯನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘ ಗುರುತಿಸಿತ್ತು. ಆಕೆಯ ಹತ್ಯೆಯ ನಂತರ, ಹಿರಿಯ ಆರ್‌ಎಸ್‌ಎಸ್ ಸಿದ್ಧಾಂತವಾದಿ ನಾನಾಜಿ ದೇಶಮುಖ್ ಇಂದಿರಾರನ್ನು ಮಹಾನ್ ಹುತಾತ್ಮ ಎಂದು ಬಣ್ಣಿಸಿದ್ದಾರೆ.


ಇದನ್ನೂ ಓದಿ: 'ದಿ ಕಾಶ್ಮೀರ್‌ ಫೈಲ್ಸ್‌' ಅಸಭ್ಯ ಸಿನಿಮಾ ಎಂದ ನಾದವ್ ಲ್ಯಾಪಿಡ್ ಯಾರು?


ಇಂದಿರಾ ಗಾಂಧಿ ಮಹಾನ್ ಹುತಾತ್ಮರಂತೆ ಇತಿಹಾಸದ ಪುಟಗಳಲ್ಲಿ ಶಾಶ್ವತ ಸ್ಥಾನ ಪಡೆದಿದ್ದಾರೆ ಎಂದು ತಿಳಿಸಿರುವ ದೇಶ್‌ಮುಖ್, ಆಕೆ ನಿರ್ಭಯತೆ, ಚೈತನ್ಯಶೀಲ, ಧೈರ್ಯವಂತೆ ನಾಯಕಿಯಾಗಿ ಒಂದು ದಶಕದ ಕಾಲ ದೇಶವನ್ನು ಮುನ್ನಡೆಸಿದ್ದಾರೆ ಎಂದು ಹೊಗಳಿದ್ದಾರೆ. ಭ್ರಷ್ಟ ಮತ್ತು ವಿಭಜಿತ ಸಮಾಜದ ಅವನತಿಯ ರಾಜಕೀಯ ವ್ಯವಸ್ಥೆಯನ್ನು ನಡೆಸುವ ಸಾಮರ್ಥ್ಯ ಇಂದಿರಾ ಗಾಂಧಿಗೆ ಮಾತ್ರವೇ ಇತ್ತು ಎಂದು ದೇಶ್‌ಮುಖ್ ಹೊಗಳಿದ್ದಾರೆ.

Published by:ವಾಸುದೇವ್ ಎಂ
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು