Explained: ಹೆಚ್ಚು ಜನ ಸೇರಿದ್ರೆ ಅಲ್ಲಿ ಸಾವು ಸಂಭವಿಸೋ ಸಾಧ್ಯತೆ ಜಾಸ್ತಿ ಅಂತಿದ್ದಾರೆ ತಜ್ಞರು, ಎಚ್ಚರ!

Death Explained: ಜನರನ್ನು ಒಟ್ಟುಗೂಡಿಸಿದಾಗ ಜನಸಂದಣಿ ಉಂಟಾಗಿ ಅಲ್ಲಿ ಅಪಾಯ ಕಟ್ಟಿಟ್ಟಬುತ್ತಿಯಾಗಿರುತ್ತದೆ ಎಂಬುದು ಅವರ ಅಭಿಪ್ರಾಯವಾಗಿದೆ. ಧ್ವನಿ ರಹಿತ ಹೆಡ್‌ಸೆಟ್‌ಗಳನ್ನು ಸಮೂಹ ಸ್ಪಾಟರ್‌ಗಳು ಹೊಂದಿರುವುದರಿಂದ ಅವರು ಸನಿಹದಲ್ಲಿಯೇ ಪ್ರದರ್ಶಕರಿಗೆ ಮಾಹಿತಿ ನೀಡಿ ಜೀವಕ್ಕೆ ಅಪಾಯಕಾರಿಯಾಗಿರುವ ಪರಿಸ್ಥಿತಿಯನ್ನು ನಿಲ್ಲಿಸಲು ನೇರವಾಗಿ ಸಂವಹನ ನಡೆಸುತ್ತಾರೆ.

ಜನಜಂಗುಳಿ - ನೂಕುನುಗ್ಗಲು

ಜನಜಂಗುಳಿ - ನೂಕುನುಗ್ಗಲು

  • Share this:
Death by Crowd: ಹೂಸ್ಟನ್ ಸಂಗೀತೋತ್ಸವದಲ್ಲಿ ನಡೆದ ಜನ ಸಮೂಹದ ಸಾವುಗಳ ಪಟ್ಟಿಗೆ ಇನ್ನಷ್ಟು ಹೆಸರುಗಳು ಸೇರ್ಪಡೆಯಾಗುತ್ತಿದ್ದು ಬಹಳಷ್ಟು ಜನರು ನೂಕುನುಗ್ಗಲಿನಲ್ಲಿ (Crowd) ಮರಣ ಹೊಂದಿರುವ ಸಂದೇಹಗಳಿವೆ. ಆಸ್ಟ್ರೋಲ್ಯಾಂಡ್ ಸಂಗೀತೋತ್ಸವದಲ್ಲಿ ಶುಕ್ರವಾರ ನಡೆದ ದುರಂತವು ಬಹಳ ಹಿಂದಿನಿಂದಲೂ ನಡೆಯುತ್ತಿವೆ. 1979 ರಲ್ಲಿ, ಓಹಿಯೋದ ಸಿನ್ಸಿನಾಟಿ, ದಿ ಹೂ ಅವರ ಸಂಗೀತ ಕಚೇರಿಗೆ ಪ್ರವೇಶ ಗಿಟ್ಟಿಸಲು ಜನರು ಹರಸಾಹಸ ಮಾಡಿ ಅದರಲ್ಲಿ 11 ಜನರು ಮೃತಪಟ್ಟರು (11 dead). ಇಂಗ್ಲೆಂಡ್‌ನ ಹಿಲ್ಸ್‌ಬರೋ ಸಾಕರ್ ಸ್ಟೇಡಿಯಂನಲ್ಲಿ 1989 ರಲ್ಲಿ ನಡೆದ ದುರಂತವು ನೂರಾರು ಜನರನ್ನು (Hundreds) ಬಲಿತೆಗೆದುಕೊಂಡಿತು. 2015 ರ ಹಜ್ (Hajj Pilgrimage) ಯಾತ್ರೆಯ ಸಂದರ್ಭದಲ್ಲಿ ನಡೆದ ಕಾಲ್ತುಳಿತ ಹಾಗೂ ಘರ್ಷಣೆಯಿಂದ 2,400 ಕ್ಕೂ ಹೆಚ್ಚು ಜನರು ಮರಣ ಹೊಂದಿದರು.

ಇನ್ನೂ ಕೆಲವೊಂದು ಕಾರ್ಯಕ್ರಮಗಳು ಯಾವುದೇ ಸಾವು ನೋವಿಲ್ಲದೆ ಶಾಂತಿಯುತವಾಗಿ ನಡೆದ ಸುದ್ದಿಗಳೂ ಇವೆ. ಹಾಗಿದ್ದರೆ ಇಂತಹ ಅವಘಡಗಳಿಗೆ ಕಾರಣವೇನು ಎಂಬುದನ್ನು ತಜ್ಞರು ಪರಿಶೀಲಿಸಿದ್ದು ಕಾರಣಗಳನ್ನು ಇಲ್ಲಿ ನಮೂದಿಸಿದ್ದಾರೆ.

ಈ ಕಾರ್ಯಕ್ರಮಗಳಲ್ಲಿ ಜನರು ಸಾಯಲು ಕಾರಣಗಳೇನು?

ಕಾರ್ಯಕ್ರಮಗಳಲ್ಲಿ ಗುಂಪುಗೂಡುವುದು ಸಾಮಾನ್ಯವಾಗಿರುವುದರಿಂದ ಆಮ್ಲಜನಕ ದೊರೆಯದೆ ಮರಣ ಸಂಭವಿಸುತ್ತದೆ ಇದು ತುಳಿತದ ಕಾರಣದಿಂದ ಅಲ್ಲ ಎಂಬುದು ತಜ್ಞರ ಅಭಿಪ್ರಾಯವಾಗಿದೆ.

ಜನಸಮೂಹವು ಹೆಚ್ಚಾದಾಗ ಉಕ್ಕನ್ನು ಬಗ್ಗಿಸುವಷ್ಟು ಸಾಮರ್ಥ್ಯ ಹೆಚ್ಚಿರುತ್ತದೆ. ಎಲ್ಲಾ ದಿಕ್ಕುಗಳಿಂದ ಜನರು ಘರ್ಷಣೆಗೆ ಒಳಗಾಗುತ್ತಾರೆ ಹಾಗೂ ಗುಂಪಿನಿಂದ ಹಿಂದಕ್ಕೆ ಮುಂದಕ್ಕೆ ತಳ್ಳುವಿಕೆಗೆ ಒಳಪಡುತ್ತಾರೆ. ಹೀಗೆ ಜನರು ರಾಶಿ ಬಿದ್ದಾಗ ಮೇಲಿನಿಂದ ಒತ್ತಡ ಉಂಟಾಗುತ್ತದೆ. ಮಧ್ಯದಲ್ಲಿ ಸಿಲುಕಿಕೊಂಡ ಜನರು ಉಸಿರಾಟ ಸಮಸ್ಯೆಯಿಂದ ಸಾವನ್ನಪ್ಪುತ್ತಾರೆ.

ಉಸಿರುಗಟ್ಟಿದ್ದರಿಂದಲೇ ಸಾವು!

ಹಿಲ್ಸ್‌ಬರ್ಗ್ ದುರಂತದ ಕುರಿತು ಇಂಗ್ಲೆಂಡ್ ತನಿಖೆಯಿಂದ ತಿಳಿದುಬಂದಿರುವ ಅಂಶವೇನೆಂದರೆ ಉಸಿರುಗಟ್ಟುವಿಕೆ ಎಂಬುದಾಗಿದೆ. ಹೊಟ್ಟೆಯ ಭಾಗಗಳ ಸೆಳೆತವು ಸಾವಿಗೆ ಇನ್ನೊಂದು ಕಾರಣ ಎಂಬುದನ್ನು ಪಟ್ಟಿಮಾಡಿದೆ.

ಬಿಸಿಲಿನ ಝಳವಿರುವ ದಿನ ಬೆಚ್ಚಗಿನ ವಾತಾವರಣವಿದ್ದಾಗ 50,000 ಕ್ಕಿಂತಲೂ ಹೆಚ್ಚಿನ ಅಭಿಮಾನಿಗಳು ಪುಟ್‌ಬಾಲ್ ಪಂದ್ಯವನ್ನು ವೀಕ್ಷಿಸಲು ಸ್ಟೇಡಿಯಂನಲ್ಲಿ ಜಮಾಯಿಸಿದ್ದರು. ಮೆಶ್‌ನಿಂದ ಅವರ ಮುಖಗಳು ಒತ್ತುತ್ತಿದ್ದುದರಿಂದ ಹಾಗೂ ಅಧಿಕ ನೂಕುನುಗ್ಗಲಿನಿಂದ ಮುಖ ಕೂಡ ವಿರೂಪಗೊಂಡಿವೆ ಎಂದು ವಿಚಾರಣೆಯು ಬಹಿರಂಗಪಡಿಸಿದೆ.

ಇಂತಹ ಘಟನೆಗಳಿಗೆ ಕಾರಣಗಳೇನು?

ಇಂಗ್ಲೆಂಡ್‌ನ ಸಫೊಲ್ಕ್ ವಿಶ್ವವಿದ್ಯಾಲಯದ ಕ್ರೌಡ್ ಸೈನ್ಸ್‌ನ ಸಂದರ್ಶಕ ಪ್ರಾಧ್ಯಾಪಕ ಜಿ. ಕೀತ್ ಸ್ಟಿಲ್ ಹೇಳುವಂತೆ ಅವರ ಸಂಶೋಧನೆಯು 100 ವಿಪತ್ತುಗಳನ್ನು ಒಳಗೊಂಡಿದ್ದು ಅವರು ನ್ಯಾಯಾಲಯದ ಪ್ರಕರಣಗಳಲ್ಲಿ ಪರಿಣಿತ ಸಾಕ್ಷಿಯಾಗಿ ಸಾಕ್ಷ್ಯ ನೀಡಿದ್ದಾರೆ.

ಇದನ್ನೂ ಓದಿ: ಕೊರೋನಾತಂಕದ ನಡುವೆ ರಾಜಧಾನಿಯ ಮಾರುಕಟ್ಟೆಗಳಲ್ಲಿ ಜನಜಾತ್ರೆ; ದೇವಸ್ಥಾನಗಳಲ್ಲಿಯೂ ಭಕ್ತರ ದಂಡು!

ಈವೆಂಟ್ ವಿನ್ಯಾಸಗೊಳಿಸುವಾಗ ಕೆಲವೊಂದು ಕ್ರಮಗಳನ್ನು ಅದು ಅನುಸರಿಸಬೇಕು ಎಂದು ಕೀತ್ ತಿಳಿಸಿದ್ದು ಅಗ್ನಿಶಾಮಕ ಸಂರಕ್ಷಣಾ ಸಂಘ ಹಾಗೂ ಕಾರ್ಯಕ್ರಮದ ಆಯೋಜಕರು ನಿಗದಿಪಡಿಸಿದ ಮಾರ್ಗಸೂಚಿಗಳನ್ನು ಮೀರುವುದಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ತಿಳಿಸಿದ್ದಾರೆ. ನೆರೆದಿರುವ ಜನರಿಗೆ ಸಾಕಷ್ಟು ಸ್ಥಳಾವಕಾಶವಿದೆ ಹಾಗೂ ಜನರು ಅತ್ತಿತ್ತ ಚಲಿಸಲು ಸಾಧ್ಯವಿದೆ ಎಂಬುದನ್ನು ಖಾತ್ರಿಪಡಿಸಬೇಕು.

ಈವೆಂಟ್‌ಗೆ ಹೆಚ್ಚಿನ ಜನರು ಆಗಮಿಸುತ್ತಾರೆ ಎಂಬುದು ತಿಳಿದಾಗ ಕೆಲವು ಸ್ಥಳಗಳು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುತ್ತಾರೆ. ದೊಡ್ಡ ಸಮೂಹಗಳನ್ನು ಸಣ್ಣದಾಗಿ ವಿಭಜಿಸುವ ಕ್ರಮವನ್ನು ಇದು ಒಳಗೊಂಡಿರಬೇಕು. ಇನ್ನು ತುರ್ತು ನಿರ್ಗಮನದ ವ್ಯವಸ್ಥೆಯನ್ನು ಮಾಡಬೇಕು ಎಂದು ಕೀತ್ ತಿಳಿಸುತ್ತಾರೆ.

ಇತರ ಕಾರಣಗಳು ಯಾವುವು?

ಜನಸಂದಣಿಯ ಸಾಂದ್ರತೆಯು ಮಾರಣಾಂತಿಕ ಉಲ್ಬಣಕ್ಕೆ ಪ್ರಮುಖ ಅಂಶವಾಗಿರಬಹುದು, ಆದರೆ ಸಾಮಾನ್ಯವಾಗಿ ಎಲ್ಲರೂ ಒಂದೇ ದಿಕ್ಕಿನಲ್ಲಿ ಧಾವಿಸುವುದರಿಂದ ಕೂಡ ನೂಕುನುಗ್ಗಲು ಉಂಟಾಗುತ್ತದೆ.

ಹಠಾತ್ ಮಳೆ ಅಥವಾ ಆಲಿಕಲ್ಲು ಮಳೆಯು ಎಲ್ಲರನ್ನೂ ರಕ್ಷಣೆಗಾಗಿ ಓಡಿಸಬಲ್ಲದು, 1988 ರಲ್ಲಿ ಬೀಗ ಹಾಕಿದ ಸ್ಟೇಡಿಯಂ ನಿರ್ಗಮನದ ಕಡೆಗೆ 93 ಫುಟ್‌ಬಾಲ್ ಅಭಿಮಾನಿಗಳು ನೇಪಾಳದಲ್ಲಿ ಮೃತರಾದರು. ಇತರ ದೇಶಗಳಿಗಿಂತ ಅಮೆರಿಕಾದಲ್ಲಿ ಹೀಗೆ ಭಯದಿಂದ ನೂಕುನುಗ್ಗಲು ಉಂಟಾಗುವುದು ಸರ್ವೇಸಾಮಾನ್ಯ ವಿಷಯವಾಗಿದೆ. ಉದಾಹರಣೆಗೆ ಯಾರಾದರೂ ಗನ್ ಇದೆ ಎಂದು ಕೂಗಿದರೂ ಅಲ್ಲಿ ಜನರ ನೂಕುನುಗ್ಗಲು ಉಂಟಾಗುತ್ತದೆ.

ಇದನ್ನೂ ಓದಿ: 23 ಮಕ್ಕಳ ಜವಾಬ್ದಾರಿ ನಿಭಾಯಿಸಲು ಕ್ರೌಡ್​ ಫಂಡಿಂಗ್​ ಮೂಲಕ 53 ಲಕ್ಷ ನೆರವು ಪಡೆದ ಬೆಂಗಳೂರು ಮೂಲದ ದಂಪತಿ

ಜನರು ಯಾವುದಾದರೂ ಅಂಶದಿಂದ ನೂಕುನುಗ್ಗಲು ಯಾವಾಗಲೂ ಸಂಭವಿಸುವುದಿಲ್ಲ. ಕೆಲವೊಮ್ಮೆ ಅವರು ತಡೆಗೋಡೆಗೆ ಬಡಿಯುವುದಕ್ಕೆ ಕಾರಣವಾಗಿರುವ ವೇದಿಕೆಯಲ್ಲಿ ಪ್ರದರ್ಶಕನಂತಹ ಯಾವುದೋ ಒಂದು ಕಡೆಗೆ ಚಲಿಸುವ ಜನಸಮೂಹದಿಂದ ಉಂಟಾಗುತ್ತದೆ.

ಇನ್ನೂ ಕಳಪೆ ಗುಂಪಿನ ನಿರ್ವಹಣಾ ವ್ಯವಸ್ಥೆಗಳನ್ನು ಉಲ್ಲೇಖಿಸಲಾಗಿದೆ, ಅಲ್ಲಿ ಈವೆಂಟ್ ಸಂಘಟಕರು ಕೆಂಪು ಧ್ವಜಗಳು ಅಥವಾ ಎಚ್ಚರಿಕೆಗಳನ್ನು ವರದಿ ಮಾಡಲು ಬಲವಾದ ಕಾರ್ಯವಿಧಾನಗಳನ್ನು ಹೊಂದಿರುವುದಿಲ್ಲ. ಇಂತಹ ರಕ್ಷಣೆಗಳನ್ನು ಅಳವಡಿಸಿಕೊಂಡರೆ ಮಾರಣಾಂತಿಕ ಉಲ್ಬಣಗಳು ಸಂಭವಿಸುವುದಿಲ್ಲ.

ಸಾಂಕ್ರಾಮಿಕವು ಹೇಗೆ ಪರಿಣಾಮ ಬೀರುತ್ತದೆ?

ಪ್ರಪಂಚದಾದ್ಯಂತದ ಇಂತಹ ಪ್ರಮುಖ ಘಟನೆಗಳ ಮೇಲ್ವಿಚಾರಣೆ ನಡೆಸುವ ಇಂಗ್ಲೆಂಡ್ ಮೂಲದ ಕನ್ಸಲ್ಟೆನ್ಸಿಯಾದ ಕ್ರೌಡ್ ಸೇಫ್ಟಿಯ ಸ್ಟೀವ್ ಅಲೆನ್ ಹೇಳುವಂತೆ ಪ್ರೇಕ್ಷಕರನ್ನು ಮೇಲ್ವಿಚಾರಣೆ ಮಾಡುವುದು ಯಾವಾಗಲೂ ಮುಖ್ಯ ಎಂದು ಹೇಳಿದರು, ಆದರೆ ವಿಶೇಷವಾಗಿ ಈಗ ಸಾಂಕ್ರಾಮಿಕ ಲಾಕ್‌ಡೌನ್ ಘಟನೆಗಳ ನಂತರ ಇಂತಹ ವಿಪತ್ತುಗಳು ಅಧಿಕವಾಗುತ್ತಿವೆ ಎಂದು ತಿಳಿಸಿದ್ದಾರೆ.

ಜನರನ್ನು ಒಟ್ಟುಗೂಡಿಸಿದಾಗ ಜನಸಂದಣಿ ಉಂಟಾಗಿ ಅಲ್ಲಿ ಅಪಾಯ ಕಟ್ಟಿಟ್ಟಬುತ್ತಿಯಾಗಿರುತ್ತದೆ ಎಂಬುದು ಅವರ ಅಭಿಪ್ರಾಯವಾಗಿದೆ. ಧ್ವನಿ ರಹಿತ ಹೆಡ್‌ಸೆಟ್‌ಗಳನ್ನು ಸಮೂಹ ಸ್ಪಾಟರ್‌ಗಳು ಹೊಂದಿರುವುದರಿಂದ ಅವರು ಸನಿಹದಲ್ಲಿಯೇ ಪ್ರದರ್ಶಕರಿಗೆ ಮಾಹಿತಿ ನೀಡಿ ಜೀವಕ್ಕೆ ಅಪಾಯಕಾರಿಯಾಗಿರುವ ಪರಿಸ್ಥಿತಿಯನ್ನು ನಿಲ್ಲಿಸಲು ನೇರವಾಗಿ ಸಂವಹನ ನಡೆಸುತ್ತಾರೆ. ಇದು, ಬೆಂಕಿ ಅನಾಹುತ, ಜನಸಂದಣಿ, ಅಥವಾ ಇನ್ನಾವುದಾದರೂ ಘಟನೆಗಳಾಗಿರಬಹುದು. ಓಯಸಿಸ್, ರೆಡ್ ಹಾಟ್ ಚಿಲ್ಲಿ ಪೆಪ್ಪರ್ಸ್ ಮತ್ತು ಎಮಿನೆಮ್ ಅವರ ಸುಮಾರು 25 ಪ್ರದರ್ಶನಗಳನ್ನು ವೈಯಕ್ತಿಕವಾಗಿ ನಿಲ್ಲಿಸಿದ್ದೇನೆ ಎಂದು ಅಲೆನ್ ತಿಳಿಸುತ್ತಾರೆ.

ಜನರು ಇದನ್ನು ಭಯ ಎಂದೇಕೆ ಕರೆಯುತ್ತಿಲ್ಲ?

ಇಂತಹ ಸನ್ನಿವೇಶಗಳನ್ನು ವೃತ್ತಿಪರರು ಭಯ ಎಂದು ಬಣ್ಣಿಸುವುದಿಲ್ಲ ಏಕೆಂದರೆ ಇದು ಗುಂಪಿನಲ್ಲಿರುವ ಜನರು ಇತರರ ಸಾವಿಗೆ ಕಾರಣರು ಎಂಬ ಹೊಣೆಯನ್ನು ಆರೋಪಿಸುತ್ತದೆ. ಸುರಕ್ಷಿತ ವಾತಾವರಣವನ್ನು ಒದಗಿಸಲು ವಿಫಲವಾದ ಈವೆಂಟ್ ಸಂಘಟಕರು ಇಲ್ಲಿ ಮರಣಗಳಿಗೆ ಕಾರಣರಾಗಿರುತ್ತಾರೆ. ಸುರಕ್ಷತೆಯು ಯಾವುದೇ ಲಾಭಗಳನ್ನು ತರದೇ ಇದ್ದರೂ ಬಜೆಟ್‌ನಲ್ಲಿ ಇದಕ್ಕೆ ಹೆಚ್ಚಿನ ಪರಿಗಣನೆಯನ್ನು ನೀಡುವುದಿಲ್ಲ ಎಂದಾಗಿದೆ.

ರ‍್ಯಾಪರ್ ಟ್ರಾವಿಸ್ ಸ್ಕಾಟ್ ಅವರ ಪ್ರದರ್ಶನದ ಸಮಯದಲ್ಲಿ ಹೂಸ್ಟನ್ ಸಂಗೀತ ಉತ್ಸವದಲ್ಲಿ ಅಭಿಮಾನಿಗಳು ವೇದಿಕೆಯತ್ತ ನುಗ್ಗಿದರು, ಇದರಿಂದ ಜನ ಭಯಭೀತಗೊಂಡರು ಮತ್ತು ಕನಿಷ್ಠ ಎಂಟು ಜನರು ಸಾವನ್ನಪ್ಪಿದರು ಮತ್ತು ಅನೇಕರು ಗಾಯಗೊಂಡರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇತ್ತೀಚಿನ ದಶಕಗಳಲ್ಲಿ ಸಂಭವಿಸಿದ ಕೆಲವು ಪ್ರಮುಖ ಘಟನೆಗಳತ್ತ ಚಿತ್ತ ಹರಿಸೋಣ.

ಎಲ್ಲೆಲ್ಲಿ ನಡೆದಿತ್ತು ಅವಘಡ?

ಡಿಸೆಂಬರ್ 3, 1979 - ಸಿನ್ಸಿನಾಟಿಯ ರಿವರ್‌ಫ್ರಂಟ್ ಕೊಲಿಸಿಯಂನಲ್ಲಿ ದಿ ಹೂ ಅವರ ಸಂಗೀತ ಕಚೇರಿಯನ್ನು ವೀಕ್ಷಿಸಲು ಸಾವಿರಾರು ಅಭಿಮಾನಿಗಳು ನುಗ್ಗಿದ್ದರಿಂದ ಹನ್ನೊಂದು ಜನರು ಕೊಲ್ಲಲ್ಪಟ್ಟರು.

ಅಕ್ಟೋಬರ್ 20, 1982 - ಮಾಸ್ಕೋದ ಲುಜ್ನಿಕಿ ಸ್ಟೇಡಿಯಂನಲ್ಲಿ ಸ್ಪಾರ್ಟಕ್ ಮಾಸ್ಕೋ ಮತ್ತು ನೆದರ್ಲೆಂಡ್ಸ್‌ನ ಹಾರ್ಲೆಮ್ ನಡುವಿನ UEFA ಕಪ್ ಪಂದ್ಯದಲ್ಲಿ ಅರವತ್ತಾರು ಜನರು ಸಾವನ್ನಪ್ಪಿದರು.

ಮೇ 28, 1985 - ಬ್ರಸೆಲ್ಸ್‌ನ ಹೈಸೆಲ್ ಸ್ಟೇಡಿಯಂನಲ್ಲಿ ಲಿವರ್‌ಪೂಲ್ ಮತ್ತು ಜುವೆಂಟಸ್ ನಡುವಿನ 1985 ಯುರೋಪಿಯನ್ ಕಪ್ ಫೈನಲ್‌ನಲ್ಲಿ ಅಭಿಮಾನಿಗಳ ಹಿಂಸಾಚಾರದಲ್ಲಿ ಮೂವತ್ತೊಂಬತ್ತು ಜನರು ಸತ್ತರು.

ಇದನ್ನೂ ಓದಿ: Covid Death| ಕೊರೋನಾದಿಂದ ಮೃತಪಟ್ಟವರಿಗೆ 1 ಲಕ್ಷ ಪರಿಹಾರ; ಆದೇಶ ಹಿಂಪಡೆದ ರಾಜ್ಯ ಬೊಮ್ಮಾಯಿ ಸರ್ಕಾರ

ಮಾರ್ಚ್ 13, 1988 - ನೇಪಾಳದ ಕಠ್ಮಂಡುವಿನಲ್ಲಿ ಹಠಾತ್ ಆಲಿಕಲ್ಲು ಮಳೆಯಿಂದ ತಪ್ಪಿಸಿಕೊಳ್ಳಲು ಸಾವಿರಾರು ಫುಟ್‌ಬಾಲ್ ಅಭಿಮಾನಿಗಳು ಬೀಗ ಹಾಕಿದ ಕ್ರೀಡಾಂಗಣದ ನಿರ್ಗಮನ ದ್ವಾರದ ಬಳಿ ನುಗ್ಗಿದಾಗ ತೊಂಬತ್ತಮೂರು ಜನರು ಸಾವನ್ನಪ್ಪಿದರು.

ಏಪ್ರಿಲ್ 15, 1989 - ಇಂಗ್ಲೆಂಡ್‌ನ ಶೆಫೀಲ್ಡ್‌ನಲ್ಲಿರುವ ಕಿಕ್ಕಿರಿದ ಹಿಲ್ಸ್‌ಬರೋ ಕ್ರೀಡಾಂಗಣದಲ್ಲಿ ಅಭಿಮಾನಿಗಳ ನುಗ್ಗಾಟದಲ್ಲಿ ತೊಂಬತ್ತೇಳು ಜನರು ಸಾವನ್ನಪ್ಪಿದರು ಮತ್ತು ನೂರಾರು ಜನರು ಗಾಯಗೊಂಡರು.

ಜುಲೈ 2, 1990 - ಸೌದಿ ಅರೇಬಿಯಾದಲ್ಲಿ ವಾರ್ಷಿಕ ಹಜ್ ಸಮಯದಲ್ಲಿ, 1,426 ಮುಸ್ಲಿಂ ಯಾತ್ರಿಕರು, ಮುಖ್ಯವಾಗಿ ಏಷ್ಯಾದಿಂದ, ಮೆಕ್ಕಾದಿಂದ ಮಿನಾಗೆ ಹೋಗುವ ಸುದೀರ್ಘ ಪಾದಚಾರಿ ಸುರಂಗದಲ್ಲಿ ಸಾಯುತ್ತಾರೆ.
Published by:Soumya KN
First published: