Explained: ಈ ವಿಮಾನ ಸಂಸ್ಥೆಗಳು ಸದ್ಯಕ್ಕೆ ತಮ್ಮ ಸೇವೆ ನಿಲ್ಲಿಸಿವೆ, ಇನ್ನು ಕೆಲವು ಭಾರೀ ಡಿಸ್ಕೌಂಟ್ ಕೊಡುತ್ತಿವೆ

ಸಾಂಕ್ರಾಮಿಕದ ಹಾವಳಿಯಿಂದಾಗಿ ವಿಮಾನಯಾನ ಸಂಸ್ಥೆಗಳು ಹಠಾತ್ ಆದಾಯ ಕುಸಿತದ ಸಮಸ್ಯೆಗಳಿಗೆ ಒಳಗಾಗಿವೆ. ಆದರೂ, ಹೆಚ್ಚಿನ ವಿಮಾನಯಾನ ಸಂಸ್ಥೆಗಳು ಮುಂದಿನ 6 ತಿಂಗಳವರೆಗೆ ಕೊಂಚ ಮಟ್ಟಿಗಿನ ಆರ್ಥಿಕ ಸ್ಥಿತಿಗತಿಗಳನ್ನು ರೂಪಿಸಿವೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:

ಕೋವಿಡ್-19 ಪ್ರಕರಣಗಳ(Covid-19 cases)  ತೀವ್ರ ಏರಿಕೆ ಹಾಗೂ ಈ ಪರಿಣಾಮವಾಗಿ ವಿಮಾನ ಪ್ರಯಾಣದ ಬೇಡಿಕೆಯ ಕುಸಿತದಿಂದಾಗಿ (Slowdown) ದೇಶದ ವಿಮಾನಯಾನ ಸಂಸ್ಥೆಗಳು ವಿಮಾನಗಳನ್ನು ರದ್ದುಗೊಳಿಸಲು ಹಾಗೂ ಪ್ರಸ್ತುತ ಬುಕ್ಕಿಂಗ್‌ಗಳಲ್ಲಿ ಮಾಡಲಾದ ಬದಲಾವಣೆಗಳ ಮೇಲೆ ವಿನಾಯಿತಿ ನೀಡಲು ಒತ್ತಾಯಿಸಿವೆ. ಕೊನೆಯ ಕ್ಷಣದ ರದ್ದತಿಗಳನ್ನು ತಡೆಗಟ್ಟುವ ಸಲುವಾಗಿ ಸಂಸ್ಥೆಗಳು(Organizations)  ದೇಶೀಯ(Domestic Airways)  ವಾಯುಮಾರ್ಗಗಳಲ್ಲಿ ಅಳವಡಿಸಲಾದ ಸಾಮರ್ಥ್ಯದ ಯೋಜಿತ ಕಡಿತ ನಡೆಸುತ್ತಿವೆ. ಯಾವ ವಿಮಾನಯಾನ ಸಂಸ್ಥೆಗಳು ಕಡಿತ ನಡೆಸುತ್ತಿವೆ? ಸಾಂಕ್ರಾಮಿಕ ತಗ್ಗಿದ ನಂತರ ಸಂಸ್ಥೆಗಳು ಆರ್ಥಿಕ ಚೇತರಿಕೆಯನ್ನು ಹೇಗೆ ನಡೆಸಬಹುದು? ಸವಾಲುಗಳೇನು ಎಂಬುದನ್ನು ತಿಳಿದುಕೊಳ್ಳೋಣ.


ಯಾವ ವಿಮಾನಯಾನ ಸಂಸ್ಥೆಗಳು ಸಾಮರ್ಥ್ಯ ಕಡಿಮೆ ಮಾಡುತ್ತಿವೆ?


ದೇಶದ ಅತಿದೊಡ್ಡ ವಿಮಾನಯಾನ ಸಂಸ್ಥೆ ಇಂಡಿಗೋ ಬೇಡಿಕೆ ಕಡಿಮೆಯಾದ ಕಾರಣದಿಂದ ತನ್ನ ನಿಗದಿಪಡಿಸಿದ ವಿಮಾನಗಳಲ್ಲಿ 20% ಅನ್ನು ಹಿಂತೆಗೆದುಕೊಳ್ಳುವುದಾಗಿ ಘೋಷಿಸಿದೆ. ಪೂರ್ಣ ಸೇವೆ ಒದಗಿಸುತ್ತಿದ್ದ ವಿಸ್ತಾರ ಕೂಡ ಬದಲಾಗುತ್ತಿರುವ ಬೇಡಿಕೆಯನ್ನು ಅನುಸರಿಸಿ ಪ್ರಯಾಣ ಸಾಮರ್ಥ್ಯವನ್ನು ಸರಿಹೊಂದಿಸಲಾಗುತ್ತಿದೆ ಎಂದು ತಿಳಿಸಿದೆ. ಇನ್ನು ಪ್ರಯಾಣ ಲೋಡ್ ಅನುಸರಿಸಿ ದೈನಂದಿನ ಸೇವೆಗಳನ್ನು ಕೈಗೊಳ್ಳುತ್ತಿರುವ ವಾಯು ಮಾರ್ಗಗಳಲ್ಲಿ ಕೆಲವು ವಿಮಾನಗಳನ್ನು ವಿಲೀನಗೊಳಿಸಲಾಗುತ್ತಿದೆ ಎಂದು ಏರ್ ಇಂಡಿಯಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕಡಿಮೆ ವೆಚ್ಚದ ವಿಮಾನಯಾನ ಸಂಸ್ಥೆಗಳು ಬೇಡಿಕೆಗೆ ಅನುಗುಣವಾಗಿ ಸಾಮರ್ಥ್ಯ ಕಡಿಮೆ ಮಾಡುವ ಯೋಜನೆ ಹೊಂದಿವೆ.


ವಿಮಾನ ಪ್ರಯಾಣದ ಬೇಡಿಕೆ ಹೇಗಿದೆ?


ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯದ ಅಂಕಿ ಅಂಶಗಳ ಪ್ರಕಾರ, ಕೋವಿಡ್ -19 ಪ್ರಕರಣಗಳು ಹೆಚ್ಚುತ್ತಲೇ ಇರುವುದರಿಂದ ಕಳೆದ 2 ವಾರಗಳಿಂದ ದೇಶೀಯ ವಿಮಾನ ಪ್ರಯಾಣಿಕರ ಸಂಖ್ಯೆಯು ಕುಸಿಯುತ್ತಿದೆ. ಅಂತೆಯೇ ಇದು ರಾಜ್ಯಗಳಿಂದ ವಿವಿಧ ನಿರ್ಬಂಧಗಳನ್ನು ವಿಧಿಸಲು ಕಾರಣವಾಗಿದೆ.


ಜನವರಿ 8ರಂದು ಸಚಿವಾಲಯವು 2.41 ಲಕ್ಷ ವಿಮಾನ ಪ್ರಯಾಣಿಕರ ಸಂಖ್ಯೆ ದಾಖಲಿಸಿದ್ದು, ಈ ಅಂಕಿ ಅಂಶವು ಡಿಸೆಂಬರ್ 26 ರಂದು ದಾಖಲೆಯಾದ 3.85 ಲಕ್ಷದಿಂದ ಕುಸಿದಿದೆ. ಈ ಸಂಖ್ಯೆಯು ಜನವರಿ 9 ರಂದು 2.37 ಲಕ್ಷಕ್ಕೆ ಮತ್ತಷ್ಟು ಕುಸಿದಿದೆ.


ಈ ಅಂಕಿ ಅಂಶವು ಬೇಡಿಕೆಯ ಪ್ರತಿನಿಧಿ ಎಂದೆನಿಸಿದ್ದು, ಜನವರಿ 8ರಂದು ಇಂಡಿಗೋ 65.8%ರಷ್ಟು ವರದಿ ಮಾಡಿದೆ. ಲೆಕ್ಕಾಚಾರದ ಪ್ರಕಾರ ಅಂದರೆ ಅದರ ಪ್ರತಿ 100 ಸೀಟುಗಳಲ್ಲಿ ಸರಾಸರಿ 34 ಸೀಟುಗಳು ಮಾರಾಟವಾಗಲಿಲ್ಲ. ಅದರ ಕಡಿಮೆ-ವೆಚ್ಚದ ಪ್ರತಿಸ್ಪರ್ಧಿಗಳಾದ ಸ್ಪೈಸ್‌ಜೆಟ್ (SpiceJet) ಮತ್ತು ಗೋ ಫಸ್ಟ್ (GoFirst) ಕ್ರಮವಾಗಿ 68.5% ಮತ್ತು 62.8% ಲೋಡ್ ಫ್ಯಾಕ್ಟರ್‌ಗಳನ್ನು ವರದಿ ಮಾಡಿದೆ. ಶನಿವಾರದಂದು ಏರ್ ಇಂಡಿಯಾದ ಲೋಡ್ ಫ್ಯಾಕ್ಟರ್ 67.4%ರಷ್ಟಿದ್ದರೆ, ವಿಸ್ತಾರಾ ಮತ್ತು ಏರ್ ಏಷ್ಯಾ ಇಂಡಿಯಾ ಕ್ರಮವಾಗಿ ಶೇಕಡಾ 53.6 ಮತ್ತು 59.6% ದಾಖಲಿಸಿದೆ.


ಇದನ್ನೂ ಓದಿ: Omicron ಆತಂಕದ ನಡುವೆ ಹೊಸ ಕೋವಿಡ್ ಸ್ಟ್ರೈನ್ ಪತ್ತೆ

ಈ ರದ್ದತಿಗಳ ವಿರುದ್ಧ ವಿಮಾನಯಾನ ಸಂಸ್ಥೆಗಳು ಪ್ರಯಾಣಿಕರಿಗೆ ಏನು ಕೊಡುಗೆ ನೀಡುತ್ತಿವೆ?


ಹೆಚ್ಚುತ್ತಿರುವ ಓಮಿಕ್ರಾನ್ ಸೋಂಕುಗಳ ಕಾರಣದಿಂದಾಗಿ ಹೆಚ್ಚಿನ ಸಂಖ್ಯೆಯ ಗ್ರಾಹಕರು ತಮ್ಮ ಪ್ರಯಾಣದ ಯೋಜನೆಗಳನ್ನು ಬದಲಾಯಿಸುತ್ತಿದ್ದಾರೆ ಎಂದು ಇಂಡಿಗೋ ಹೇಳಿದೆ. ಗ್ರಾಹಕರ ಅಗತ್ಯಗಳಿಗೆ ಪ್ರತಿಕ್ರಿಯೆಯಾಗಿ, ಏರ್‌ಲೈನ್ ಬದಲಾವಣೆಯ ಶುಲ್ಕವನ್ನು ಮನ್ನಾ ಮಾಡಿದೆ ಮತ್ತು ಮಾರ್ಚ್ 31, 2022ರವರೆಗಿನ ಫ್ಲೈಟ್‌ಗಳಿಗಾಗಿ ಜನವರಿ 31ರವರೆಗೆ ಮಾಡಲಾದ ಎಲ್ಲಾ ಹೊಸ ಮತ್ತು ಅಸ್ತಿತ್ವದಲ್ಲಿರುವ ಬುಕ್ಕಿಂಗ್‌ಗಳಿಗೆ ಉಚಿತ ಬದಲಾವಣೆಗಳನ್ನು ನೀಡುತ್ತಿದೆ.


ಸಾಧ್ಯವಾದರೆ, ವಿಮಾನಗಳ ರದ್ದತಿಯನ್ನು ಕನಿಷ್ಠ 72 ಗಂಟೆಗಳ ಮುಂಚಿತವಾಗಿ ಮಾಡಲಾಗುತ್ತದೆ ಮತ್ತು ಗ್ರಾಹಕರನ್ನು ಮುಂದಿನ ಲಭ್ಯವಿರುವ ವಿಮಾನಕ್ಕೆ ಸ್ಥಳಾಂತರಿಸಲಾಗುತ್ತದೆ ಎಂಬುದಾಗಿ ಇಂಡಿಗೋ ಉಲ್ಲೇಖಿಸಿದೆ.


ಪ್ರಯಾಣಿಕರ ವಿಮಾನವು ಸಂಸ್ಥೆಯ ಕಡೆಯಿಂದ ರದ್ದುಗೊಂಡಿದ್ದರೆ ಅಥವಾ ವಿಮಾನಯಾನ ಮರುಹೊಂದಿಸಿದರೆ, ಫ್ಲೈಟ್‌ನ ಸಮಯ ಮತ್ತು/ಅಥವಾ ದಿನಾಂಕ ಬದಲಾಯಿಸಲು ಅಥವಾ ರದ್ದುಗೊಳಿಸಲು ಮತ್ತು ಮರುಪಾವತಿಯನ್ನು ಪ್ರಕ್ರಿಯೆಗೊಳಿಸಲು ಯಾವುದೇ ಹೆಚ್ಚುವರಿ ಶುಲ್ಕ ಪಡೆದುಕೊಳ್ಳುವುದಿಲ್ಲ ಎಂದು ಸಂಸ್ಥೆ ತಿಳಿಸಿದೆ. ಪ್ರಯಾಣಿಕರ ಪ್ರಯಾಣ ಸಮಯ ಮತ್ತು/ಅಥವಾ ದಿನಾಂಕವನ್ನು ನೀವು ಬದಲಾಯಿಸಬಹುದು ಅಥವಾ ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ಮರುಪಾವತಿ ರದ್ದುಗೊಳಿಸಬಹುದು ಮತ್ತು ಪ್ರಕ್ರಿಯೆಗೊಳಿಸಬಹುದು ಎಂಬುದಾಗಿ ಇಂಡಿಗೋ ತನ್ನ ವೆಬ್‌ಸೈಟ್‌ನಲ್ಲಿ ಸೂಚಿಸಿದೆ.


ವಿಸ್ತಾರಾದ ವಕ್ತಾರರೊಬ್ಬರು ಉಲ್ಲೇಖಿಸಿರುವಂತೆ, ಪ್ರಯಾಣಿಕರಿಗೆ ವಿವಿಧ ಆಯ್ಕೆಗಳನ್ನು ಒದಗಿಸುವ ಮೂಲಕ ಅನಾನುಕೂಲತೆ ಕಡಿಮೆ ಮಾಡಲು ಪ್ರಯತ್ನಿಸಿರುವುದಾಗಿ ತಿಳಿಸಿದ್ದು, ಮರುನಿಗದಿಗೊಳಿಸುವಿಕೆ ಇಲ್ಲವೇ ಮರುಪಾವತಿ ವ್ಯವಸ್ಥೆಗಳನ್ನು ಪ್ರಯಾಣಿಕರಿಗೆ ಒದಗಿಸುವುದಾಗಿ ತಿಳಿಸಿದ್ದಾರೆ. ಈ ಕುರಿತಾಗಿ ಏರ್ ಇಂಡಿಯಾ ಕೂಡ ಟ್ವೀಟ್ ಮಾಡಿದ್ದು ಕೋವಿಡ್ ಪ್ರಕರಣಗಳ ಉಲ್ಬಣದಿಂದಾಗಿ ಸಂಸ್ಥೆಯು 31.03.22ರಂದು ಹಾಗೂ ಅದಕ್ಕೂ ಮುನ್ನ ದೃಢೀಕರಿಸಿದ ಪ್ರಯಾಣದೊಂದಿಗೆ ಎಲ್ಲಾ ದೇಶೀಯ ಟಿಕೆಟ್‌ಗಳಿಗೆ ದಿನಾಂಕ ಅಥವಾ ಫ್ಲೈಟ್ ಸಂಖ್ಯೆ ಅಥವಾ ವಿಭಾಗದಲ್ಲಿ ಉಚಿತ ಬದಲಾವಣೆ ಒದಗಿಸುವುದಾಗಿ ತಿಳಿಸಿದೆ.


ಕಡಿಮೆ ವೆಚ್ಚದ ವಿಮಾನಯಾನ ಸಂಸ್ಥೆಗಳ ಹಿರಿಯ ಕಾರ್ಯನಿರ್ವಾಹಕರು ಉಲ್ಲೇಖಿಸಿರುವಂತೆ ಹೆಚ್ಚುತ್ತಿರುವ ಓಮಿಕ್ರಾನ್ ಸೋಂಕಿನಿಂದಾಗಿ ಹೆಚ್ಚಿನ ವಿಮಾನ ಪ್ರಯಾಣಿಕರು ತಮ್ಮ ಪ್ರಯಾಣ ಯೋಜನೆಗಳನ್ನು ಬದಲಾಯಿಸುತ್ತಿದ್ದಾರೆ. ಗ್ರಾಹಕರ ಅಗತ್ಯಗಳಿಗೆ ಪ್ರತಿಕ್ರಿಯೆಯಾಗಿ ಸಂಸ್ಥೆಗಳು ಶುಲ್ಕವನ್ನು ಮನ್ನಾ ಮಾಡುತ್ತಿವೆ ಎಂಬುದಾಗಿ ತಿಳಿಸಿವೆ.


ಹಠಾತ್ ಆದಾಯ ಕುಸಿತದ ಭೀತಿಯಲ್ಲಿ ಸಂಸ್ಥೆಗಳು:


ಸಾಂಕ್ರಾಮಿಕದ ಹಾವಳಿಯಿಂದಾಗಿ ವಿಮಾನಯಾನ ಸಂಸ್ಥೆಗಳು ಹಠಾತ್ ಆದಾಯ ಕುಸಿತದ ಸಮಸ್ಯೆಗಳಿಗೆ ಒಳಗಾಗಿವೆ. ಆದರೂ, ಹೆಚ್ಚಿನ ವಿಮಾನಯಾನ ಸಂಸ್ಥೆಗಳು ಮುಂದಿನ 6 ತಿಂಗಳವರೆಗೆ ಕೊಂಚ ಮಟ್ಟಿಗಿನ ಆರ್ಥಿಕ ಸ್ಥಿತಿಗತಿಗಳನ್ನು ರೂಪಿಸಿವೆ. ಇನ್ನು ಕೆಲವು ಸಂಸ್ಥೆಗಳು ದಿವಾಳಿತನ ಘೋಷಿಸಿವೆ. ಈ ನಿಟ್ಟಿನಲ್ಲಿ ಸರಕಾರ ಕೂಡ ಕೆಲವೊಂದು ಯೋಜನೆಗಳನ್ನು ಘೋಷಿಸಿದ್ದು ಸಂಸ್ಥೆಗಳಿಗೆ ನೆರವಿನ ಹಸ್ತ ಚಾಚಿವೆ ಎಂಬುದಾಗಿ ಮೂಲಗಳು ತಿಳಿಸಿವೆ.


ಅಂತಾರಾಷ್ಟ್ರೀಯ ಗಡಿಗಳನ್ನು ಮುಚ್ಚುವುದರೊಂದಿಗೆ ಮತ್ತು ಮನೆಯಲ್ಲಿಯೇ ಇರುವ ನಿರ್ದೇಶನಗಳನ್ನು ಹೇರುವುದರೊಂದಿಗೆ, ಪ್ರಯಾಣದ ಬೇಡಿಕೆಯು ಬಹುತೇಕ ಅಸ್ತಿತ್ವದಲ್ಲಿಲ್ಲ. ವಿಶ್ವಾದ್ಯಂತ, ಏಪ್ರಿಲ್ 2019 ಕ್ಕೆ ಹೋಲಿಸಿದರೆ, ಏಪ್ರಿಲ್ 2020ರಲ್ಲಿ ಏರ್‌ಲೈನ್ ಸಾಮರ್ಥ್ಯವು 70 ರಿಂದ 80 ಪ್ರತಿಶತದಷ್ಟು ಕಡಿಮೆಯಾಗಿದ್ದು ವರ್ಷದಿಂದ ವರ್ಷಕ್ಕೆ ಈ ಅಂಕಿಅಂಶಗಳು ಕಡಿಮೆಯಾಗುತ್ತಿವೆ. ಈ ಪರಿಣಾಮವಾಗಿ ಬಹು ದೊಡ್ಡ ವಿಮಾನಯಾನ ಸಂಸ್ಥೆಗಳು ತಾತ್ಕಾಲಿಕವಾಗಿ ಕಾರ್ಯಾಚರಣೆ ನಿಲ್ಲಿಸಿವೆ.


ವಿಮಾನಯಾನ ಬೇಡಿಕೆಗಳು ಮುಂದಿನ ದಿನಗಳಲ್ಲಿ ಹೇಗೆ ವಿಕಸನಗೊಳ್ಳಬಹುದು?


ಪರಿಣಾಮಕಾರಿ ಚಿಕಿತ್ಸೆ ಹಾಗೂ ಲಸಿಕೆಗಳಿಂದಾಗಿ ಕೋವಿಡ್ ಒಂದು ದಿನ ಅಂತ್ಯಗೊಳ್ಳಬಹುದು ಎಂಬುದು ಹೆಚ್ಚಿನವರ ಭಾವನೆಯಾಗಿದ್ದರೂ ಪರ್ಯಾಯ ವಿಧಾನಗಳನ್ನು ರೂಪಿಸಿಕೊಳ್ಳುವುದು ಸಾಂಕ್ರಾಮಿಕದ ಅವಧಿಯಲ್ಲಿ ಸಹಕಾರಿಯಾಗಿದೆ. ಸಾಂಕ್ರಾಮಿಕದ ಸಮಯದಲ್ಲಿ ತಳಮಟ್ಟಕ್ಕೆ ಕಂಡುಕೊಂಡಿದ್ದ ವಿಮಾನ ಪ್ರಯಾಣಗಳು ಸರಕಾರದ ಆರ್ಥಿಕ ಮಧ್ಯಸ್ಥಿಕೆಗಳಿಂದ ಚೇತರಿಕೆ ಕಂಡುಕೊಳ್ಳುತ್ತವೆ. ಕೋವಿಡ್-19 ಪ್ರಕರಣಗಳಲ್ಲಿ ಚೇತರಿಕೆ ಕಂಡುಬರುತ್ತಿದ್ದಂತೆ ಪ್ರಯಾಣ ನಿರ್ಬಂಧಗಳನ್ನು ಒಂದೊಂದಾಗಿ ತೆಗೆದುಹಾಕಲಾಗುತ್ತದೆ. ಹಾಗೂ ಜಾಗತಿಕ ಆರ್ಥಿಕತೆಯು ನಿಧಾನವಾಗಿ ಚೇತರಣೆಗೊಳ್ಳುತ್ತದೆ. ವಿಮಾನಯಾನ ಸಂಸ್ಥೆಗಳು ಟಿಕೆಟ್ ದರಗಳನ್ನು ಕಡಿಮೆ ಮಾಡುವ ಮೂಲಕ ಪ್ರಯಾಣ ಬೇಡಿಕೆಯನ್ನು ಯಶಸ್ವಿಯಾಗಿ ಉತ್ತೇಜಿಸುತ್ತವೆ.


ವಿಮಾನಯಾನ ಸಂಸ್ಥೆಗಳು ತಕ್ಷಣದ ಕ್ರಮಗಳನ್ನು ಹೇಗೆ ರೂಪಿಸಿಕೊಳ್ಳಬಹುದು?


ಆದಾಯ ಕ್ಷೀಣಗೊಳ್ಳುತ್ತಿರುವ ಸಮಯದಲ್ಲಿ ವಿಮಾನಯಾನ ಸಂಸ್ಥೆಗಳು ಅಲ್ಪಾವಧಿಯ ಕಾರ್ಯಾಚರಣೆಗಳಿಗೆ ತಕ್ಕಷ್ಟು ಆರ್ಥಿಕತೆ ಹೊಂದಿವೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಬೇಕು. ಈ ಸಮಯದಲ್ಲಿ ಸಣ್ಣ, ಪ್ರಾದೇಶಿಕ ವಿಮಾನಯಾನ ಸಂಸ್ಥೆಗಳು ವಿಶೇಷವಾಗಿ ಹಣಕಾಸಿನ ಒತ್ತಡಗಳಿಗೆ ಗುರಿಯಾಗುತ್ತವೆ.


ಹೆಚ್ಚಿನ ವಿಮಾನಯಾನ ಸಂಸ್ಥೆಗಳು ವ್ಯಾಪಾರದಲ್ಲಿ ಉಳಿಯಲು ಹಾಗೂ ಆರ್ಥಿಕ ಮಟ್ಟ ಸಮತೋಲನಗೊಳಿಸುವತ್ತ ಚಿತ್ತ ಹರಿಸಿವೆ. ಈ ಸಮಯದಲ್ಲಿ ಸಂಸ್ಥೆಗಳು ಕಾರ್ಯತಂತ್ರವಾಗಿ ಯೋಜಿಸಬೇಕು ಹಾಗೂ ಮುಂದಿರುವ ಸವಾಲುಗಳನ್ನು ಸಮಾನ ರೂಪದಲ್ಲಿ ಬಗೆಹರಿಸುವತ್ತ ಗಮನ ಹರಿಸಬೇಕು. ಹೀಗೆ ಮಾಡಿದರೆ ಮಾತ್ರವೇ ಗ್ರಾಹಕರು ಹಾಗೂ ತಮ್ಮ ಉದ್ಯೋಗಿಗಳಿಗೆ ಹೆಚ್ಚಿನ ಪ್ರಯೋಜನ ಒದಗಿಸಲು ಸಾಧ್ಯ. ಸಾಂಕ್ರಾಮಿಕ ಕೊಂಚ ತಗ್ಗಿದ ನಂತರವೂ ವಿಮಾನ ಪ್ರಯಾಣ ಮಾಡಲು ಹಿಂಜರಿಯುವ ಅನೇಕ ಪ್ರಯಾಣಿಕರಿದ್ದಾರೆ.


ಇದನ್ನೂ ಓದಿ: Omicron ನಂತರವೂ ಕೋವಿಡ್ ಇರಲಿದೆ, ಎಚ್ಚರಿಕೆ : ಡಾ. ರಾಜೀವ್ ಜಯದೇವನ್

ಈ ಸಮಯದಲ್ಲಿ ಪ್ರಯಾಣಿಕರ ಸುರಕ್ಷತೆಗೆ ಸಂಸ್ಥೆಗಳು ಹೆಚ್ಚಿನ ಮುತುವರ್ಜಿ ವಹಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ಹೊಸ ಸುರಕ್ಷತಾ ಪ್ರೋಟೋಕಾಲ್‌ಗಳನ್ನು ಸಂಸ್ಥೆಗಳು ಅಳವಡಿಸಿಕೊಳ್ಳುವುದು ಮುಖ್ಯವಾಗಿದೆ. ವಿಮಾನಯಾನ ಸಂಸ್ಥೆಗಳು ನಿರಂತರವಾಗಿ ಬದಲಾಗುತ್ತಿರುವ ಆರೋಗ್ಯ ಆದೇಶಗಳು ಹಾಗೂ ಸರಕಾರದ ಮಾರ್ಗಸೂಚಿಗಳೊಂದಿಗೆ ಕೂಡ ಕಾರ್ಯಾಚರಣೆ ಹೆಚ್ಚಿಸಿಕೊಳ್ಳುವ ವಿಧಾನಗಳತ್ತ ಕೇಂದ್ರೀಕರಿಸಬೇಕು.


ಬೇಡಿಕೆಯು ಪ್ರಸ್ತುತ ಕಡಿಮೆಯಿರುವಾಗ, ವಿಮಾನಯಾನ ಸಂಸ್ಥೆಗಳು ಈಗ ದೊಡ್ಡ ಪ್ರಮಾಣದ ಕಾರ್ಯಾಚರಣೆಗಳಿಗೆ ಮರಳಲು ಯೋಜಿಸುವ ಮೂಲಕ ಪ್ರಯೋಜನ ಪಡೆಯಬಹುದು. ಅದು ಯಾವಾಗ ಸಂಭವಿಸುತ್ತದೆ ಎಂದು ಊಹಿಸಲು ಕಷ್ಟವಾಗಬಹುದು, ಆದ್ದರಿಂದ ಅವರು ಫ್ಲೈಟ್-ಸರ್ಚ್ ಚಟುವಟಿಕೆಯಂತಹ ಬೇಡಿಕೆಯ ಆರಂಭಿಕ ಸೂಚಕಗಳನ್ನು ಎಚ್ಚರಿಕೆಯಿಂದ ಮೇಲ್ವಿಚಾರಣೆ ಮಾಡಬೇಕು ಮತ್ತು ಗ್ರಾಹಕರ ವಿಭಾಗ ಹಾಗೂ ಹೊಸ ಬೆಳವಣಿಗೆಯ ಯೋಜನೆಗಳನ್ನು ಪ್ರತಿನಿಧಿಸುವ ಭೌಗೋಳಿಕತೆ ಗುರುತಿಸಲು ಅಂಕಿಅಂಶವನ್ನು ಪರಿಶೀಲಿಸಬೇಕು.


Published by:vanithasanjevani vanithasanjevani
First published: