• Home
 • »
 • News
 • »
 • explained
 • »
 • Explained: Immunity Boosterಗಳಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದಾ? ತಜ್ಞರು ಏನಂತಾರೆ?

Explained: Immunity Boosterಗಳಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದಾ? ತಜ್ಞರು ಏನಂತಾರೆ?

ರೋಗನಿರೋಧಕ ಶಕ್ತಿ ಹೆಚ್ಚಿಸುವ ಆಹಾರಗಳು

ರೋಗನಿರೋಧಕ ಶಕ್ತಿ ಹೆಚ್ಚಿಸುವ ಆಹಾರಗಳು

Can immunity be boosted: ರೋಗನಿರೋಧಕ ಶಕ್ತಿ ವರ್ಧನೆ, ಉತ್ತೇಜನ ಇವೆಲ್ಲವೂ ಕಾಲ್ಪನಿಕ ಪದಗಳು. ಇವು ವೈದ್ಯಕೀಯ ಪದಗಳಲ್ಲ. ಇವುಗಳನ್ನು ಮಾರುಕಟ್ಟೆ ಚಾಲಿತ ಕಂಪನಿಗಳು ಉತ್ತೇಜಿಸುತ್ತಿವೆ. ರೋಗನಿರೋಧಕತೆ ಹೆಚ್ಚಿಸಲು ಉತ್ಪನ್ನಗಳನ್ನು ಬಳಸುವ ಬದಲು, ಜೀವನ ಶೈಲಿಯನ್ನು ಬದಲಿಸಲು ವೈದ್ಯರು ಸಲಹೆ ನೀಡಿದ್ದಾರೆ.

ಮುಂದೆ ಓದಿ ...
 • Share this:

  ಮಹಾಮಾರಿ ಕೊರೋನಾ (corona) ಭಾರತಕ್ಕೆ ಲಗ್ಗೆ ಇಡುತ್ತಿದ್ದಂತೆ, ಎಲ್ಲರ ಬಾಯಿಯಲ್ಲೂ ಕೇಳಿಬಂದಿದ್ದು ಒಂದೇ ಪದ. ಅದುವೇ ಇಮ್ಯೂನಿಟಿ... ಈ ರೋಗನಿರೋಧಕ ಶಕ್ತಿಯನ್ನು ಹೇಗೆ ಹೆಚ್ಚಿಸಿಕೊಳ್ಳುವುದು ಎಂದು ಜನ ತಲೆಕೆಡಿಸಿಕೊಂಡಿದ್ದರು. ಈಗಲೂ ತಲೆಕೆಡಿಸಿಕೊಂಡಿದ್ದಾರೆ. ಇಮ್ಯೂನಿಟಿ ಪವರ್(Immunity Power) ಹೆಚ್ಚಿದ್ದರೆ ಕೊರೋನಾ ನಮಗೆ ಏನು ಮಾಡೋದಿಲ್ಲ ಅನ್ನುವ ತೀರ್ಮಾನಕ್ಕೆ ಬಂದು ಬಿಟ್ಟಿದ್ದರು. ಅದರಲ್ಲೂ ಯಾವುದೇ ಅಂಗಡಿಗೆ ಹೋದರು ಇಮ್ಯೂನಿಟಿ ಬೂಸ್ಟ್ (Immunity Boosting Medicine) ಮಾಡುವ ಉತ್ಪನ್ನಗಳು ತುಂಬಿಕೊಂಡಿದ್ದವು. ಸೂಪರ್ ಮಾರ್ಕೆಟ್, ಮೆಡಿಕಲ್ ಶಾಪ್, ದಿನಸಿ ಅಂಗಡಿಗಳಲ್ಲೂ ಕೂಡ ಇಮ್ಯೂನಿಟಿ ಬೂಸ್ಟರ್ ಪ್ರಾಡೆಕ್ಟ್ ಗಳು ಸರ್ವೇಸಾಮಾನ್ಯವಾಗಿ ಬಿಟ್ಟಿದೆ. ಈ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತೆ ಅಂತ ಹೇಳಲಾಗುವ ಪ್ರಾಡಕ್ಟ್ ಗಳನ್ನು ಜನ ನಾ ಮುಂದು ತಾ ಮುಂದು ಎಂದು ಖರೀದಿಸುತ್ತಿದ್ದಾರೆ. ನಿಜಕ್ಕೂ ಇಮ್ಯೂನಿಟಿ ಹೆಚ್ಚಿಸಲು ಸಾಧ್ಯವೇ? ಇಲ್ಲ ಇದು ಒಂದು ಮೆಡಿಕಲ್ ಮಾಫಿಯಾನಾ? ಎಂಬ ಅನುಮಾನ ಮೂಡಿರುವುದಂತೂ ನಿಜ.


  ಈ ಬಗ್ಗೆ ತಜ್ಞರು ಇದೊಂದು ಜನರನ್ನ ದಾರಿತಪ್ಪಿಸುವ ಕೆಲಸವಾಗಿದೆ, ಇಮ್ಯೂನಿಟಿ ಬೂಸ್ಟರ್ ಪ್ರಾಡಕ್ಟ್ ಗಳ ಬಗ್ಗೆ ವೈಜ್ಞಾನಿಕವಾಗಿ ಸ್ಪಷ್ಟನೆ ಸಿಕ್ಕಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಈ ಬಗ್ಗೆ 2020ರಲ್ಲಿ ಅಲರ್ಜಿ, ಆಸ್ತಮಾ ಮತ್ತು ಕ್ಲಿನಿಕಲ್ ಇಮ್ಯುನಾಲಜಿ ಇಲಾಖೆ ಅಧ್ಯಯನವೊಂದನ್ನು ನಡೆಸಿತ್ತು. ರೋಗನಿರೋಧಕ ಶಕ್ತಿ ತನ್ನಷ್ಟಕ್ಕೆ ತಾನೆ ಉತ್ಪತ್ತಿಯಾಗಬೇಕು, ಈ ರೀತಿಯ ಪ್ರಾಡಕ್ಟ್ ಗಳಿಂದಾಗಿ ರೋಗನಿರೋಧಕ ಶಕ್ತಿ ಹೆಚ್ಚುವುದಿಲ್ಲ ಅಂತ ಈ ಅಧ್ಯಯನದಲ್ಲಿ ಉಲ್ಲೇಖವಾಗಿದೆ. ಹಾಲಿನಿಂದ ಹಿಡಿದು ಚಾಕ್ಲೇಟ್ ಗಳವರೆಗೂ ಇಮ್ಯೂನಿಟಿ ಬೂಸ್ಟರ್ ಎಂದು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ನಿಜಕ್ಕೂ ಇದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತಾ?


  ಇದನ್ನೂ ಓದಿ: Immunity Power: ನಿಮ್ಮ ದೇಹದಲ್ಲಿರುವ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವುದು ಹೇಗೆ ಅಂತೀರಾ? ಇಲ್ಲಿವೆ ಕೆಲವು ಟಿಪ್ಸ್


  ಇತ್ತೀಚೆಗೆ, ಲಿವರ್ ಸ್ಪೆಷಲಿಸ್ಟ್ ತಜ್ಞ ಡಾ. ಡ್ರಾಬಿ ಫಿಲಿಪ್ಸ್, ಇಮ್ಯೂನಿಟಿ ಬೂಸ್ಟರ್ ಎಂಬ ಪದಗುಚ್ಛದ ಬಳಕೆ ಎಷ್ಟು ದಾರಿ ತಪ್ಪಿಸುತ್ತದೆ ಎಂಬುದರ ಬಗ್ಗೆ ಟ್ವಿಟರ್ ನಲ್ಲಿ ಸದ್ದು ಮಾಡಿದ್ದರು. ಈ ರೀತಿಯ ವಸ್ತುಗಳಿಂದ ದೇಹಕ್ಕೆ ಹಾನಿಕಾರಕವೇ ಹೊರತು ಇದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು.


  ನಿಜವಾಗಲೂ ಇಮ್ಯೂನಿಟಿ ಎಂದರೇನು?


  ಸರಳವಾಗಿ ಹೇಳುವುದಾದರೆ, ರೋಗನಿರೋಧಕತೆಯು ಸೋಂಕುಗಳ ವಿರುದ್ಧ ಹೋರಾಡುವ ದೇಹದ ಸಾಮರ್ಥ್ಯವನ್ನು ಸೂಚಿಸುತ್ತದೆ. ಬ್ಯಾಕ್ಟೀರಿಯಾ ಅಥವಾ ವೈರಸ್, ರೋಗಕಾರಕಗಳ ಆಕ್ರಮಣವನ್ನು ತಡೆಯುತ್ತದೆ. ರೋಗನಿರೋಧಕ ಶಕ್ತಿ ಹೆಚ್ಚಿದ್ದರೆ ಮನುಷ್ಯನಿಗೆ ಯಾವುದೇ ರೋಗ ರುಜಿನಗಳು ಬರುವುದಿಲ್ಲ.
  ರೋಗನಿರೋಧಕ ಜೀವಕೋಶಗಳು, ಅಂಗಾಂಶಗಳು ಮತ್ತು ಅಂಗಗಳ ಸಂಕೀರ್ಣ ಜಾಲವಾಗಿದೆ, ಇದು ದೇಹವು ಸೋಂಕುಗಳು ಮತ್ತು ಇತರ ರೋಗಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. Medlineplus.gov ಪ್ರಕಾರ, ರೋಗನಿರೋಧಕ ಚರ್ಮ ಸೇರಿದಂತೆ ಅನೇಕ ವಿಭಿನ್ನ ಭಾಗಗಳನ್ನು ಹೊಂದಿದೆ, ಇದು ಕೀಟಾಣುಗಳು ದೇಹಕ್ಕೆ ಸೇರುವುದನ್ನು ತಡೆಯಲು ಸಹಾಯ ಮಾಡುತ್ತದೆ.


  ರೋಗನಿರೋಧಕ ಶಕ್ತಿ ಹೆಚ್ಚಿಸಲು ಸಾಧ್ಯವೇ?


  ಸೋಂಕುಗಳ ವಿರುದ್ಧ ಹೋರಾಟದಲ್ಲಿ ರೋಗನಿರೋಧಕತೆ ಪ್ರಮುಖ ಪಾತ್ರವಹಿಸುತ್ತದೆ. ಕೆಲ ಉತ್ಪನ್ನಗಳಿಂದ ಇಮ್ಯೂನಿಟಿ ಹೆಚ್ಚಿಸಲು ಸಾಧ್ಯವಿಲ್ಲ ಎಂದು ದೆಹಲಿಯ ಫೋರ್ಟಿಸ್ ಆಸ್ಪತ್ರೆಯ ಆಂತರಿಕ ಔಷಧದ ಹಿರಿಯ ಸಲಹೆಗಾರ ಡಾ. ಮನೋಜ್ ಶರ್ಮಾ ಹೇಳಿದ್ದಾರೆ. "ರೋಗನಿರೋಧಕ ಶಕ್ತಿ ವರ್ಧನೆ, ಉತ್ತೇಜನ ಇವೆಲ್ಲವೂ ಕಾಲ್ಪನಿಕ ಪದಗಳು. ಇವು ವೈದ್ಯಕೀಯ ಪದಗಳಲ್ಲ. ಇವುಗಳನ್ನು ಮಾರುಕಟ್ಟೆ ಚಾಲಿತ ಕಂಪನಿಗಳು ಉತ್ತೇಜಿಸುತ್ತಿವೆ" ಎಂದು ಹೇಳಿದ್ದಾರೆ. ರೋಗನಿರೋಧಕತೆ ಹೆಚ್ಚಿಸಲು ಉತ್ಪನ್ನಗಳನ್ನು ಬಳಸುವ ಬದಲು, ಜೀವನ ಶೈಲಿಯನ್ನು ಬದಲಿಸಲು ವೈದ್ಯರು ಸಲಹೆ ನೀಡಿದ್ದಾರೆ. ಪೌಷ್ಟಿಕಾಂಶ ಆಹಾರ, ಶುದ್ದ ನೀರು, 8 ಗಂಟೆಗಳ ಕಾಲ ನಿದ್ದೆ, ವಾರಕ್ಕೆ 3 ಬಾರಿ ದೇಹ ದಂಡಿಸಿದರೆ ತಾನಾಗೇ ರೋಗನಿರೋಧಕ ಶಕ್ತಿ ವೃದ್ಧಿಯಾಗುತ್ತದೆ ಎಂದು ತಿಳಿಸಿದ್ದಾರೆ.


  ರೋಗನಿರೋಧಕ ಶಕ್ತಿ ಹೆಚ್ಚಿಸಲು ಇದನ್ನ ಮಾಡಿ


  * ಧೂಮಪಾನವನ್ನು ನಿಲ್ಲಿಸಿ


  *ಹಣ್ಣು ಮತ್ತು ತರಕಾರಿಗಳಿಂದ ಸಮೃದ್ಧವಾದ ವರ್ಣರಂಜಿತ ಆಹಾರವನ್ನು ಸೇವಿಸಿ


  *ನಿಯಮಿತವಾಗಿ ವ್ಯಾಯಾಮ ಮಾಡಿ


  *ಆರೋಗ್ಯಕರ ದೇಹದ ತೂಕವನ್ನು ಕಾಪಾಡಿಕೊಳ್ಳಿ


  * ಮಿತವಾಗಿ ಆಲ್ಕೋಹಾಲ್ ಸೇವನೆ


  * 8 ಗಂಟೆಗಳ ಕಾಲ ನಿದ್ದೆ


  * ಆಗಾಗ್ಗೆ ಕೈಗಳನ್ನು ತೊಳೆಯಿರಿ


  * ಒತ್ತಡವನ್ನು ಕಡಿಮೆ ಮಾಡಿಕೊಳ್ಳಿ


  (ವರದಿ- ವಾಸುದೇವ್. ಎಂ)

  Published by:Soumya KN
  First published: