HOME » NEWS » Explained » EXPLAINED DID YOUR BANK DEDUCT 330 RUPEES FROM YOUR SAVINGS ACCOUNT IN MAY HERE IS THE REASON STG SCT

Explained: ಮೇ ತಿಂಗಳಲ್ಲಿ ನಿಮ್ಮ ಬ್ಯಾಂಕ್ ಉಳಿತಾಯ ಖಾತೆಯಿಂದ 330 ರೂ. ಕಡಿತಗೊಂಡಿದೆಯೇ? ಇಲ್ಲಿದೆ ಕಾರಣ

ಮೇ ತಿಂಗಳಲ್ಲಿ ನಿಮ್ಮ ಖಾತೆಯಿಂದ ಹಣ ಕಡಿತಗೊಂಡಿರುವುದರ ಬಗ್ಗೆ ಉತ್ತರ ಸಿಕ್ಕಿದ್ದು, ಈ ಹಣ ಕಡಿತಗೊಂಡಿರುವವರು ಆತಂಕಪಡುವ ಅವಶ್ಯಕತೆಯಿಲ್ಲ.

news18-kannada
Updated:May 31, 2021, 12:03 PM IST
Explained: ಮೇ ತಿಂಗಳಲ್ಲಿ ನಿಮ್ಮ ಬ್ಯಾಂಕ್ ಉಳಿತಾಯ ಖಾತೆಯಿಂದ 330 ರೂ. ಕಡಿತಗೊಂಡಿದೆಯೇ? ಇಲ್ಲಿದೆ ಕಾರಣ
ಬ್ಯಾಂಕ್​ ವಹಿವಾಟಿನ ಸಾಂದರ್ಭಿಕ ಚಿತ್ರ
  • Share this:

ಕೊರೋನಾದಿಂದ ಜನರು ಆರ್ಥಿಕವಾಗಿ ಸಂಕಷ್ಟವನ್ನು ಅನುಭವಿಸುತ್ತಿದ್ದು, ಒಂದೊಂದು ರೂಪಾಯಿಗೂ ಲೆಕ್ಕ ಹಾಕುವ ಪರಿಸ್ಥಿತಿ ಬಂದೊದಗಿದೆ. ಈ ದುಸ್ಥಿತಿಯಲ್ಲಿ ಆರ್ಥಿಕವಾಗಿ ಹಿಂದುಳಿದ ಮತ್ತು ಮಧ್ಯಮ ವರ್ಗದವರ ಉಳಿತಾಯ ಖಾತೆಯಿಂದ 330 ರೂಪಾಯಿ ಕಡಿತಗೊಂಡಿರುವುದರ ಬಗ್ಗೆ ದೊಡ್ಡ ಸುದ್ದಿಯಾಗಿದೆ. ಈಗಾಗಲೇ ಕೆಲವರಿಗೆ ತಮ್ಮ ಹಣ ಕಡಿತಗೊಂಡಿರುವುದರ ಬಗ್ಗೆ ಬ್ಯಾಂಕ್ ಸ್ಟೇಟ್‌ಮೆಂಟ್‌ ಮೂಲಕ ತಿಳಿದುಕೊಂಡಿದ್ದಾರೆ. ಕೊರೋನಾ ಸಮಯದಲ್ಲಿ ಅನೇಕರು ತಮ್ಮ ಕೆಲಸಕ್ಕೆ ಕುತ್ತು ಬಂದಿದ್ದು, ದಿನನಿತ್ಯದ ಖರ್ಚಿಗೆ ಜನರು ಆದಾಯವಿಲ್ಲದೇ ಪರಿತಪಿಸುತ್ತಿದ್ದಾರೆ.


ಹೀಗಿರುವಾಗ ತಮ್ಮ ಬ್ಯಾಂಕ್ ಉಳಿತಾಯ ಖಾತೆಯಲ್ಲಿ ತಾವು ಅಲ್ಪಸ್ವಲ್ಪ ಕೂಡಿಟ್ಟ ಹಣ ಕಡಿತಗೊಂಡರೆ ಆಘಾತವಾಗದೇ ಇರದು. ಮೇ ತಿಂಗಳಲ್ಲಿ ನಿಮ್ಮ ಖಾತೆಯಿಂದ ಹಣ ಕಡಿತಗೊಂಡಿರುವುದರ ಬಗ್ಗೆ ಉತ್ತರ ಸಿಕ್ಕಿದ್ದು, ಈ ಹಣ ಕಡಿತಗೊಂಡಿರುವವರು ಆತಂಕಪಡುವ ಅವಶ್ಯಕತೆಯಿಲ್ಲ.ಉಳಿತಾಯ ಖಾತೆಗಳಿಂದ ರೂ. 330 ರೂಪಾಯಿ ಕಡಿತಗೊಂಡಿದೆಯೇ? ಇಲ್ಲಿದೆ ಉತ್ತರ..!

ಉಳಿತಾಯ ಖಾತೆಗಳಿಂದ 330 ರೂಪಾಯಿ ಮೇ ತಿಂಗಳಲ್ಲಿ ಯಾವಾಗ ಬೇಕಾದರೂ ಕಡಿತಗೊಳ್ಳಬಹುದು. ಉಳಿತಾಯ ಖಾತೆ ಹೊಂದಿರುವವರು ಭಾರತದ ವಿಮಾ ಯೋಜನೆ, ಪ್ರಧಾನ್ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ (PMJJBY) ಗೆ ಸೇರ್ಪಡೆಗೊಂಡಿದ್ದರೆ ಈ ಹಣ ಉಳಿತಾಯ ಬ್ಯಾಂಕ್ ಖಾತೆಯಿಂದ ಕಡಿತಗೊಳ್ಳುತ್ತದೆ.


PMJJBY ಎಂದರೇನು?


ಸರ್ಕಾರದ ಮಹತ್ವ ಯೋಜನೆಗಳಲ್ಲಿ ಒಂದಾದ ಪ್ರಧಾನ್ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ (PMJJBY)ಯು, ಒಂದು ವರ್ಷದ ಜೀವ ವಿಮಾ ಯೋಜನೆಯಾಗಿದೆ. ಇದನ್ನು ಆರು ವರ್ಷಗಳ ಹಿಂದೆ ಪ್ರಾರಂಭಿಸಲಾಯಿತು. ವಿಮಾದಾರನು ಮೃತಪಟ್ಟ ನಂತರ ನಾಮಿನಿಯು 2 ಲಕ್ಷ ರೂಪಾಯಿ ಹಣವನ್ನು ಪಡೆಯುತ್ತಾನೆ. ಇದರಿಂದ ವಿಮಾದಾರನ ಮೂಲಕ ನಾಮಿನಿಯ ಹೆಸರಿನಲ್ಲಿರುವವನು ತನ್ನ ಜೀವನಕ್ಕೆ ಉಪಯೋಗ ಮಾಡಿಕೊಳ್ಳಲು ಸಹಾಯವಾಗುತ್ತದೆ.


ಒಂದು ವೇಳೆ ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆಗಳನ್ನು ಹೊಂದಿದ್ದರೆ ಏನಾಗುತ್ತದೆ?

ನೀವು ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆಗಳನ್ನು ಹೊಂದಿದ್ದರೆ, ಕೇವಲ ಒಂದು ಬ್ಯಾಂಕ್ ಖಾತೆಯ ಮೂಲಕ ಮಾತ್ರ ಈ ಯೋಜನೆಗೆ ಸೇರಿಕೊಳ್ಳಬಹುದು. ಆದರೆ, 330 ರೂ. ಒಂದಕ್ಕಿಂತ ಹೆಚ್ಚು ಅಕೌಂಟ್‌ಗಳಲ್ಲಿ ಕಡಿತವಾಗಿದೆಯೇ ಎಂದು ನೋಡಲು, ನೀವು ಈ ಬಗ್ಗೆ ಬ್ಯಾಂಕನ್ನು ಸಂಪರ್ಕಿಸಬೇಕಾಗುತ್ತದೆ.


ಪ್ರಧಾನಿ ಜೀವನ್ ಜ್ಯೋತಿ ಬಿಮಾ ಯೋಜನೆ (PMJJBY) ಗೆ ಯಾರು ಅರ್ಹರು?


ಪ್ರಧಾನಿ ಜೀವನ್ ಜ್ಯೋತಿ ಬಿಮಾ ಯೋಜನೆ ಜೂನ್ 1 ರಿಂದ ಮೇ 31 ರವರೆಗೆ ಒಂದು ವರ್ಷ ಅವಧಿಯ ವಿಮಾ ಅವಧಿಯ ಪಾಲಿಸಿಯನ್ನು ಹೊಂದಿರುವ ಯೋಜನೆಯಾಗಿದೆ. ಕೊಲೆ ಮತ್ತು ಆತ್ಮಹತ್ಯೆ, ರೋಗ ಹಾಗೂ ಯಾವುದೇ ಕಾರಣಗಳಿಂದಾಗಿ ಸಾವು ಸಂಭವಿಸಿದರೆ ಜೀವ ವಿಮಾ ರಕ್ಷಣೆಯನ್ನು ಒಳಗೊಂಡಿರುತ್ತದೆ.


ಇದನ್ನೂ ಓದಿ: Joe Lara: ಫ್ಲೋರಿಡಾದಲ್ಲಿ ವಿಮಾನ ಪತನ; ಹಾಲಿವುಡ್ ನಟ ಜೋ ಲಾರಾ ಸೇರಿ 7 ಜನ ಸಾವು

ಮೇ 9, 2015 ರಂದು ಪ್ರಾರಂಭವಾದ ಈ ವಿಮಾ ಯೋಜನೆಯು 18 ರಿಂದ 50 ವರ್ಷದ ವಯೋಮಾನದವರು ಬ್ಯಾಂಕ್ ಖಾತೆ ಹೊಂದಿದ್ದರೆ, ಅವರಿಗೆ 2 ಲಕ್ಷ ರೂ.ಗಳ ಅವಧಿಯ ವಿಮಾ ರಕ್ಷಣೆಯನ್ನು ನೀಡುತ್ತದೆ. ಮತ್ತು ಜೂನ್ ಮತ್ತು ಆಗಸ್ಟ್ ನಡುವೆ ಯೋಜನೆಯನ್ನು ಆರಂಭಿಸಿದ್ದರೆ ವಾರ್ಷಿಕವಾಗಿ ಪ್ರೀಮಿಯಂ ಮೊತ್ತ 330 ರೂಪಾಯಿಯನ್ನು ಪಾವತಿಸಬೇಕಾಗುತ್ತದೆ.


ಒಂದು ವೇಳೆ 55 ವಯಸ್ಸು ಮೀರಿದ್ದರೆ ಅಥವಾ ಬ್ಯಾಂಕ್ ಖಾತೆ ಮುಚ್ಚಿದ್ದರೆ, ಅಂತವರು ಸಮತೋಲನದ ಕೊರತೆಯಿಂದಾಗಿ ಯೋಜನೆಯ ಫಲಾನುಭವಿಯಾಗುವುದಿಲ್ಲ. ಯೋಜನೆಯಿಂದ ಹೊರ ಹೋಗಿರುವ ವ್ಯಕ್ತಿಗಳು ವಾರ್ಷಿಕ ಪ್ರೀಮಿಯಂ ಪಾವತಿಸಿ ಮತ್ತು ಉತ್ತಮ ಆರೋಗ್ಯದ ಬಗ್ಗೆ ಪ್ರಮಾಣಿಕೃತ ದೃಢೀಕರಣ ಪತ್ರ ಸಲ್ಲಿಸುವ ಮೂಲಕ ಮತ್ತೆ ಯೋಜನೆಗೆ ಸೇರಲು ಅವಕಾಶವಿದೆ.


ಇದನ್ನೂ ಓದಿ: Gold Price Today: ಮತ್ತೆ ಏರಿಕೆಯತ್ತ ಸಾಗಿದ ಚಿನ್ನದ ಬೆಲೆ; ಇಂದಿನ ಬೆಳ್ಳಿ ದರ ಹೀಗಿದೆ

PMJJBYಗೆ ಹೇಗೆ ನೋಂದಾಯಿಸಬೇಕು?


ಪ್ರಧಾನ್ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆಗಾಗಿ ನೋಂದಾಯಿಸುವ ಪ್ರಕ್ರಿಯೆಯು ಸರಳವಾಗಿದ್ದು ಇದನ್ನು ಎಲ್ಐಸಿ ಮತ್ತು ಇತರ ಖಾಸಗಿ ವಿಮಾ ಕಂಪನಿಗಳು ನಿರ್ವಹಿಸುತ್ತವೆ.


ಯೋಜನೆಯ ವಿಮಾದಾರನ ನಾಮಿನಿಯ ಬ್ಯಾಂಕ್ ಖಾತೆಯು ವಿಮಾ ಸಂಸ್ಥೆಗಳೊಂದಿಗೆ ಸಂಪರ್ಕ ಹೊಂದಿದ್ದರೆ, ನೋಂದಣಿ ಪ್ರಕ್ರಿಯೆಗಾಗಿ ಆಯಾ ಬ್ಯಾಂಕರ್‌ಗಳನ್ನು ಸಂಪರ್ಕಿಸಬೇಕು.
  • ಎಲ್ಐಸಿ / ವಿಮಾ ಕಂಪನಿಗೆ ವಿಮಾ ಪ್ರೀಮಿಯಂ- ರೂ 289 / -

  • ಬಿ.ಸಿ / ಮೈಕ್ರೋ / ಕಾರ್ಪೊರೇಟ್ / ಏಜೆಂಟರಿಗೆ ಖರ್ಚಿನ ಮರುಪಾವತಿ - 30 / - ರೂ

  • ಬ್ಯಾಂಕಿನ ಆಡಳಿತಾತ್ಮಕ ಶುಲ್ಕಗಳ ಮರುಪಾವತಿ- ರೂ .11 / -

  • ಒಟ್ಟು ಪ್ರೀಮಿಯಂ - 330 / - ರೂ


ಜೀವನ್ ಜ್ಯೋತಿ ವಿಮಾ ಯೋಜನೆಗೆ ಸಲ್ಲಿಸಬೇಕಾಗಿರುವ ದಾಖಲೆಗಳು:
  1. ಅರ್ಜಿದಾರರ ಆಧಾರ್ ಕಾರ್ಡ್

  2. ಗುರುತಿನ ಚೀಟಿ

  3. ಬ್ಯಾಂಕ್ ಖಾತೆ ಪಾಸ್‌ಬುಕ್‌

  4. ಮೊಬೈಲ್ ನಂಬರ್

  5. ಪಾಸ್‌ಪೋರ್ಟ್‌ ಗಾತ್ರದ ಫೋಟೋ


ಈ ಯೋಜನೆಯ ಸದಸ್ಯರಿಗೆ ವಾರ್ಷಿಕವಾಗಿ 330 ರೂಪಾಯಿ ಪ್ರೀಮಿಯಂ ಪಾವತಿಸಬೇಕಾಗುತ್ತದೆ. ಇದರಿಂದ 2 ಲಕ್ಷ ರೂ. ಗಳ ಜೀವ ವಿಮೆ ಪಡೆಯಬಹುದಾಗಿದೆ.


Published by: Sushma Chakre
First published: May 31, 2021, 12:03 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories