HOME » NEWS » Explained » EXPLAINED COVISHIELD AND COVAXIN WHICH IS BETTER WHAT ARE THE SIDE EFFECTS AND WHY SKTV

Explained: Covishield ಮತ್ತು Covaxin.. ಈ ಎರಡೂ ಲಸಿಕೆಗಳಲ್ಲಿ ಯಾವುದು ಉತ್ತಮ? ಯಾವುದರಲ್ಲಿ ಸೈಡ್ ಎಫೆಕ್ಟ್ ಜಾಸ್ತಿ? ಯಾವುದು ಸೇಫ್?

ನಮ್ಮ ದೇಶದಲ್ಲಿ ಪ್ರಮುಖವಾಗಿ Covishield ಮತ್ತು Covaxin ಈ ಎರಡು ಲಸಿಕೆಗಳನ್ನೇ ನೀಡಲಾಗ್ತಿದೆ. ಆದ್ರೆ ಇದರಲ್ಲೂ ಯಾವುದು ಉತ್ತಮ, ಯಾವುದರಿಂದ ನಮಗೆ ಹೆಚ್ಚು ಅನುಕೂಲ, ಯಾವುದರಲ್ಲಿ ಸೈಡ್ ಎಫೆಕ್ಟ್ ಜಾಸ್ತಿ ಎನ್ನುವ ನಾನಾ ಅನುಮಾನಗಳು ಜನರಲ್ಲಿ ಇದ್ದೇ ಇದೆ. ಮೇ 1 ರಿಂದ 18 ವರ್ಷ ಮೇಲ್ಪಟ್ಟ ಎಲ್ಲಾ ನಾಗರಿಕರಿಗೂ ಲಸಿಕೆ ನೀಡುವುದರಿಂದ ಈ ಎರಡು ಲಸಿಕೆಗಳ ನಡುವಿನ ವ್ಯತ್ಯಾಸದ ಬಗ್ಗೆ ಹಿಂದೆಂದಿಗಿಂತಲೂ ಹೆಚ್ಚು ಚರ್ಚೆಯಾಗ್ತಿದೆ. ಈ ಬಗ್ಗೆ ಎಲ್ಲಾ ಅನುಮಾನಗಳಿಗೆ ಪರಿಹಾರ ಇಲ್ಲಿದೆ.

news18-kannada
Updated:April 25, 2021, 10:08 AM IST
Explained: Covishield ಮತ್ತು Covaxin.. ಈ ಎರಡೂ ಲಸಿಕೆಗಳಲ್ಲಿ ಯಾವುದು ಉತ್ತಮ? ಯಾವುದರಲ್ಲಿ ಸೈಡ್ ಎಫೆಕ್ಟ್ ಜಾಸ್ತಿ? ಯಾವುದು ಸೇಫ್?
ಸಾಂದರ್ಭಿಕ ಚಿತ್ರ
  • Share this:
Covid Vaccine: ಭಾರತ ಸೇರಿದಂತೆ ವಿಶ್ವದ ಅನೇಕ ರಾಷ್ಟ್ರಗಳಲ್ಲಿ ಕೋವಿಡ್ 19 ವಿರುದ್ಧದ ಸಮರಕ್ಕೆ ಲಸಿಕೆಯನ್ನೇ ಬ್ರಹ್ಮಾಸ್ತ್ರದಂತೆ ಬಳಸಲಾಗ್ತಿದೆ. ನಮ್ಮ ದೇಶದಲ್ಲಿ ಪ್ರಮುಖವಾಗಿ Covishield ಮತ್ತು Covaxin ಈ ಎರಡು ಲಸಿಕೆಗಳನ್ನೇ ನೀಡಲಾಗ್ತಿದೆ. ಆದ್ರೆ ಇದರಲ್ಲೂ ಯಾವುದು ಉತ್ತಮ, ಯಾವುದರಿಂದ ನಮಗೆ ಹೆಚ್ಚು ಅನುಕೂಲ, ಯಾವುದರಲ್ಲಿ ಸೈಡ್ ಎಫೆಕ್ಟ್ ಜಾಸ್ತಿ ಎನ್ನುವ ನಾನಾ ಅನುಮಾನಗಳು ಜನರಲ್ಲಿ ಇದ್ದೇ ಇದೆ. ಮೇ 1 ರಿಂದ 18 ವರ್ಷ ಮೇಲ್ಪಟ್ಟ ಎಲ್ಲಾ ನಾಗರಿಕರಿಗೂ ಲಸಿಕೆ ನೀಡುವುದರಿಂದ ಈ ಎರಡು ಲಸಿಕೆಗಳ ನಡುವಿನ ವ್ಯತ್ಯಾಸದ ಬಗ್ಗೆ ಹಿಂದೆಂದಿಗಿಂತಲೂ ಹೆಚ್ಚು ಚರ್ಚೆಯಾಗ್ತಿದೆ. ಈ ಬಗ್ಗೆ ಎಲ್ಲಾ ಅನುಮಾನಗಳಿಗೆ ಪರಿಹಾರ ಇಲ್ಲಿದೆ.

ಲಸಿಕೆಯಲ್ಲಿ ಎಷ್ಟು ವಿಧ? ಲಸಿಕೆಯೊಳಗೆ ಏನಿದೆ?

ಕೋವಿಡ್ ಲಸಿಕೆಯಲ್ಲಿ ಒಟ್ಟು 4 ವಿಧಗಳಿವೆ. ಇಡಿಯಾದ ವೈರಸ್ (ಕೊರೊನಾ ವೈರಾಣುವಿನ ಶಕ್ತಿಹೀನ ರೂಪ), ಪ್ರೋಟೀನ್ ಸಬ್​ಯೂನಿಟ್, ನ್ಯೂಕ್ಲಿಕ್ ಆಸಿಡ್ (RNA) ಮತ್ತು ವೈರಲ್ ವೆಕ್ಟರ್ ಇವು ಆ ನಾಲ್ಕು ವಿಧಗಳು. ಕೋವಿಶೀಲ್ಡ್ ವೈರಲ್ ವೆಕ್ಟರ್ ಗುಂಪಿಗೆ ಸೇರುತ್ತದೆ. ಅಂದ್ರೆ ಅದು ಸಾಮಾನ್ಯ ನೆಗಡಿ ಉಂಟುಮಾಡುವ ಅಡಿನೋವೈರಸ್​ನ್ನು ಶಕ್ತಿಹೀನಗೊಳಿಸಿ ಅದನ್ನು ಕೋವಿಡ್ ವೈರಸ್ ನಂತೆಯೇ ಕಾಣುವಂತೆ ಬದಲಾಯಿಸಿ ಬಳಸಲಾಗುತ್ತದೆ. ಕೋವಿಶೀಲ್ಡ್ ಲಸಿಕೆಯ ಎರಡು ಡೋಸ್​ಗಳ ನಡುವೆ 8ರಿಂದ 12 ವಾರಗಳ ಅಂತರವಿರುವುದು ಸೂಕ್ತ ಎನ್ನಲಾಗಿದೆ.

ಆದ್ರೆ ಕೋವ್ಯಾಕ್ಸಿನ್ ಶಕ್ತಿಹೀನಗೊಂಡ ಕೊರೊನಾ ವೈರಾಣುವನ್ನು ಹೊಂದಿರುವ ಲಸಿಕೆ. ಅದರಲ್ಲಿ ಸತ್ತ ಕೊರೊನಾ ವೈರಸ್ ಇದ್ದು ದೇಹದ ರೋಗನಿರೋಧಕ ಶಕ್ತಿಯನ್ನು ಎಚ್ಚರಿಸುವ ಆದರೆ ವ್ಯಕ್ತಿಗೆ ಯಾವುದೇ ಸೋಂಕು ಅಥವಾ ಖಾಯಿಲೆ ಉಂಟುಮಾಡದ ಪರಿಸ್ಥಿತಿಯಲ್ಲಿ ಇರುತ್ತದೆ. ಕೋವ್ಯಾಕ್ಸಿನ್ 2 ರಿಂದ 8 ಡಿಗ್ರಿ ತಾಪಮಾನದಲ್ಲಿ ಶೇಖರಣೆ ಮಾಡಬಹುದಾಗಿದ್ದು ಎರಡು ಡೋಸ್​ಗಳ ನಡುವೆ 6 ರಿಂದ 8 ವಾರಗಳಷ್ಟು ಅಂತರ ಇರುವುದು ಒಳಿತು ಎನ್ನಲಾಗಿದೆ.

ಈ ಮೊದಲು ಎರಡೂ ಲಸಿಕೆಗಳನ್ನು 4 ವಾರಗಳು ಅಂದ್ರೆ 28 ದಿನಗಳ ಅಂತರದಲ್ಲಿ ಎರಡು ಡೋಸ್ ನೀಡಲಾಗ್ತಿತ್ತು. ನೂತನ ಸಂಶೋಧನೆಗಳ ಆಧಾರದ ಮೇಲೆ ಅದನ್ನು ಮಾರ್ಚ್ ತಿಂಗಳಿಂದ ಬದಲಾಯಿಸಲಾಗಿದೆ.

ಯಾವುದು ಉತ್ತಮ?

ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಎರಡೂ ವೈರಸ್ ವಿರುದ್ಧದ ಹೋರಾಟದಲ್ಲಿ ಅತ್ಯುತ್ತಮ ಯಶಸ್ಸು ಪ್ರದರ್ಶಿಸಿವೆ. ಆರಂಭದಲ್ಲಿ ಕೋವಿಶೀಲ್ಡ್ ಒಂದೇ ಡೋಸ್ ಲಸಿಕೆ ನೀಡಿದಾಗ ಕೇವಲ 62% ಇದ್ದ ವ್ಯಾಕ್ಸಿನ್ ಯಶಸ್ಸಿನ ಪ್ರಮಾಣ ಮೊದಲು ಅರ್ಧ ಡೋಸ್ ನೀಡಿ 4 ವಾರಗಳ ನಂತರ ಮತ್ತೊಂದು ಡೋಸ್ ನೀಡಿದಾಗ 90%ಗೆ ಏರಿಕೆಯಾಯ್ತು.ಕೋವ್ಯಾಕ್ಸಿನ್ ಮೂರನೇ ಹಂತದ ಟ್ರಯಲ್ ನಲ್ಲಿ 78% ಯಶಸ್ಸು ಪ್ರದರ್ಶಿಸಿದ್ದು ವೈರಸ್ ಹೆಚ್ಚಾಗಿದ್ದ ದೇಹದಲ್ಲಿ 100% ಯಶಸ್ಸು ಪ್ರದರ್ಶಿಸಿದೆ. ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಎರಡೂ ಯುಕೆ ಮತ್ತು ಬ್ರೆಜಿಲ್ ರೂಪಾಂತರಿ ವಿರುದ್ಧವೂ ಪರಿಣಾಮಕಾರಿಯಾಗಿವೆ.

ಯಾರಿಗೆ ಯಾವ ವ್ಯಾಕ್ಸಿನ್? ಅಡ್ಡಪರಿಣಾಮಗಳು ಏನೇನು?

ಇದುವರಗೆ ನಡೆದಿರುವ ಪ್ರಯೋಗಗಳ ಪ್ರಕಾರ ಕೋವ್ಯಾಕ್ಸಿನ್ 12 ವರ್ಷ ಮೇಲ್ಪಟ್ಟ ಎಲ್ಲರಿಗೂ ನೀಡಬಹುದು ಎನ್ನಲಾಗಿದೆ, ಆದ್ರೆ ಕೋವಿಶೀಲ್ಡ್ 18 ವರ್ಷಕ್ಕಿಂತ ಹೆಚ್ಚಿನ ವಯಸ್ಸಿನವರಿಗೆ ಮಾತ್ರ ಸೂಕ್ತವಾಗಿದೆ. ಆದರೆ ಭಾರತ ಸರ್ಕಾರ ಎರಡೂ ಲಸಿಕೆಗಳನ್ನು 18 ವರ್ಷ ಮೇಲ್ಪಟ್ಟವರಿಗೆ ಮಾತ್ರ ನೀಡಲು ನಿರ್ಧರಿಸಿದೆ.

ಕೋವಿಶೀಲ್ಡ್ ಲಸಿಕೆ ಪಡೆದವರಲ್ಲಿ ಇದುವರಗೆ ಇಂಜೆಕ್ಷನ್ ಪಡೆದ ಸ್ಥಳದಲ್ಲಿ ನೋವು, ಕೆಂಪಾಗುವುದು, ತುರಿಕೆ, ಊತ, ಸುಸ್ತು, ಚಳಿ, ಜ್ವರ, ತಲೆನೋವು, ಹೊಟ್ಟಯುಬ್ಬರ, ಕೀಲು ಮತ್ತು ಮಾಂಸಖಂಡಗಳ ನೋವು ಕಂಡುಬಂದಿದೆ. ಈ ಎಲ್ಲಾ ಲಕ್ಷಣಗಳೂ ಬಹಳ ಲಘುವಾಗಿದ್ದು ಸಾಮಾನ್ಯ ಔಷಧಗಳಿಂದಲೂ ಇವನ್ನು ಬೇಗನೇ ಗುಣಪಡಿಸಬಹುದಾಗಿದೆ. ಕೆಲವರಲ್ಲಿ ಚರ್ಮದ ಮೇಲೆ ತುರಿಕೆಯ ಜೊತೆಗೆ ಕಲೆ ಉಳಿಯುವಂಥಾ ಅಲರ್ಜಿ ಕೂಡಾ ಉಂಟಾಗಿದೆ. ಈ ಮೊದಲೇ ಅಲರ್ಜಿ ಇರುವವರಲ್ಲಿ ಮುಖ ಅಥವಾ ನಾಲಗೆ ಊತ, ಉಸಿರಾಟಕ್ಕೆ ಸಮಸ್ಯೆ ಕಂಡುಬರುವ ಸಾಧ್ಯತೆ ಇದ್ದು ಅಂಥವರಿಗೆ ಮೊದಲು ವೈದ್ಯರನ್ನು ಭೇಟಿಯಾಗಿ ನಂತರ ಲಸಿಕೆ ಪಡೆಯಲು ತಿಳಿಸಲಾಗ್ತಿದೆ.

ಇನ್ನು, ಕೋವ್ಯಾಕ್ಸಿನ್ ತೆಗೆದುಕೊಂಡವರಲ್ಲೂ ಕೆಲವು ಸೈಡ್ ಎಫೆಕ್ಟ್​ಗಳು ಕಂಡುಬಂದಿವೆ. ಇಂಜೆಕ್ಷನ್ ಪಡೆದ ಜಾಗದಲ್ಲಿ ನೋವು, ಊತ, ಕೆಂಪಾಗುವಿಕೆ, ತುರಿಕೆ, ತೋಳಿನ ಮಾಂಸಖಂಡಗಳು ಬಿಗಿಯಾಗುವುದು, ಮೈ ಕೈ ನೋವು, ತಲೆನೋವು, ಸುಸ್ತು, ಹೊಟ್ಟೆಯುಬ್ಬರ ಮತ್ತು ವಾಂತಿ ಕೆಲವರಿಗೆ ಉಂಟಾಗಿದೆ. ಆದ್ರೆ ಕೋವ್ಯಾಕ್ಸಿನ್ ಅಲರ್ಜಿ ಉಂಟುಮಾಡುವ ಸಾಧ್ಯತೆಗಳು ಬಹಳ ಕಡಿಮೆ ಎನ್ನಲಾಗಿದೆ.

ಎರಡರಲ್ಲಿ ಯಾವುದೇ ಲಸಿಕೆ ತೆಗೆದುಕೊಳ್ಳುವುದಾದರೂ ಮೊದಲೇ ತಮ್ಮ ಎಲ್ಲಾ ಆರೋಗ್ಯ ಸಂಬಂಧಿತ ಮಾಹಿತಿಯನ್ನು ಲಸಿಕಾ ಕೇಂದ್ರದ ಸಿಬ್ಬಂದಿಗೆ ನೀಡಬೇಕು.  ಪುಣೆಯಲ್ಲಿರುವ ಸೀರಂ ಇನ್ಸ್ಟ್​​ಟಿಟ್ಯೂಟ್ ಆಫ್ ಇಂಡಿಯಾ ಕೋವಿಶೀಲ್ಡ್ ತಯಾರಿಸುತ್ತಿದ್ದು ಹೈದರಾಬಾದ್​ನ ಭಾರತ್ ಬಯೋಟೆಕ್ ಕೋವ್ಯಾಕ್ಸಿನ್ ತಯಾರಿಸುತ್ತಿದೆ.

ಎರಡರಲ್ಲಿ ಯಾವುದು ಬೆಟರ್? ಯಾವ ಲಸಿಕೆ ತೆಗೆದುಕೊಳ್ಳಬೇಕು?

ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಈ ಎರಡರಲ್ಲಿ ಯಾವುದು ಉತ್ತಮ ಎಂದು ಹೇಳುವುದು ಅಸಾಧ್ಯ, ಏಕೆಂದರೆ ಎರಡೂ ಲಸಿಕೆಗಳು ಕೋವಿಡ್ 19 ವಿರುದ್ಧ ಅತ್ಯಂತ ಸಮರ್ಪಕವಾಗಿ ಹೋರಾಡುತ್ತವೆ. ಎರಡರ ಸಾಧಕ ಬಾಧಕಗಳ ಬಗ್ಗೆ ವಿವರವಾಗಿ ತಿಳಿದ ನಂತರವೇ ಭಾರತ ಸರ್ಕಾರ ಸಾರ್ವಜನಿಕರಿಗೆ ಇದನ್ನು ನೀಡುತ್ತಿರುವುದು. ಸದ್ಯದ ಪರಿಸ್ಥಿತಿಯಲ್ಲಿ ಈ ಎರಡರಲ್ಲಿ ಯಾವುದೇ ಲಸಿಕೆ ಇದ್ದರೂ ಅದನ್ನು ಪಡೆದುಕೊಳ್ಳುವುದೇ ಉತ್ತಮ. ಅಲ್ಲದೇ ತಮಗೆ ಯಾವ ಲಸಿಕೆ ಬೇಕು ಎನ್ನುವ ಆಯ್ಕೆಯೂ ಜನರಿಗೆ ಇಲ್ಲ. ಹಾಗಾಗಿ ತಮ್ಮ ಸರದಿ ಬಂದಾಗ ಎಲ್ಲರೂ ತಪ್ಪದೇ ಲಸಿಕೆ ಪಡೆಯುವುದೇ ಅತ್ಯಂತ ಜವಾಬ್ದಾರಿಯುತ ನಿರ್ಧಾರವಾಗಲಿದೆ.
Published by: Soumya KN
First published: April 25, 2021, 10:08 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories