Explainer: ಕೋವಿಡ್ -19 ವೈರಸ್‌ ವಿರುದ್ಧ ಹೊಸ ಔಷಧ 2-DG ಹೇಗೆ ಹೋರಾಡುತ್ತದೆ?

ಕೋವಿಡ್ -19 ರೋಗಿಗಳಲ್ಲಿ ಔಷಧದ ಸುರಕ್ಷತೆ ಮತ್ತು ಪರಿಣಾಮಕಾರಿತ್ವವನ್ನು ಪರೀಕ್ಷಿಸಲು ಹಂತ 2 ಕ್ಲಿನಿಕಲ್ ಪ್ರಯೋಗಗಳನ್ನು ನಡೆಸಲಾಯಿತು. ಕೋವಿಡ್ -19 ರೋಗಿಗಳಲ್ಲಿ 2-ಡಿಜಿ ಸುರಕ್ಷಿತವಾಗಿದೆ ಎಂದು ಕಂಡುಬಂದಿದೆ.

ಸಾಂದರ್ಭಿಕ ಚಿತ್ರ.

ಸಾಂದರ್ಭಿಕ ಚಿತ್ರ.

  • Share this:
ಕೋವಿಡ್‌ ಎರಡನೇ ಅಲೆಯಿಂದ ದೇಶ ತತ್ತರಿಸುತ್ತಿದ್ದು, ಪ್ರತಿನಿತ್ಯ ಲಕ್ಷಾಂತರ ಸೋಂಕಿತರು ಪತ್ತೆಯಾಗುತ್ತಿದ್ದರೆ, ಸಾವಿರಾರು ಮಂದಿ ಸಾಯುತ್ತಿದ್ದಾರೆ. ಈ ಪೈಕಿ ಹಲವರು ಸೋಂಕಿನ ತೀವ್ರತೆ, ಆಕ್ಸಿಜನ್ ಕೊರತೆ, ಸರಿಯಾದ ಔಷಧ ಅಥವಾ ಚಿಕಿತ್ಸೆ ಕೊರತೆ ಮುಂತಾದ ಕಾರಣಗಳಿಂದ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಈ ಹಿನ್ನೆಲೆ ಸೋಮವಾರವಷ್ಟೇ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಕೋವಿಡ್ -19 ವಿರೋಧಿ ಔಷಧ 2-ಡಿಯೋಕ್ಸಿ-ಡಿ-ಗ್ಲೂಕೋಸ್ ಅಥವಾ ‘2-ಡಿಜಿ’ಯನ್ನು ಬಿಡುಗಡೆ ಮಾಡಲಾಗಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷ ವರ್ಧನ್ ಈ ಔಷಧಿಯ ಮೊದಲ ಬ್ಯಾಚ್‌ ಅನ್ನು ಬಿಡುಗಡೆ ಮಾಡಿದರು. ರಾಷ್ಟ್ರೀಯ ಔಷಧ ನಿಯಂತ್ರಕ, ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ), ಮೇ 1 ರಂದು ತೀವ್ರವಾದ ಕೋವಿಡ್ -19 ರೋಗಿಗಳಿಗೆ ಮಧ್ಯಮ ಚಿಕಿತ್ಸೆಯಲ್ಲಿ ಸಹಾಯಕ ಚಿಕಿತ್ಸೆಯಾಗಿ ತುರ್ತು ಬಳಕೆಗಾಗಿ ಈ ಫಾರ್ಮುಲಾವನ್ನು ಮೇ 1 ರಂದು ಒಪ್ಪಿಗೆ ನೀಡಿತ್ತು.

ಸೂತ್ರೀಕರಣ
ಹೈದರಾಬಾದ್ ಮೂಲದ ಫಾರ್ಮಾ ಕಂಪನಿ ಡಾ. ರೆಡ್ಡೀಸ್‌ ಲ್ಯಾಬೊರೇಟರೀಸ್ (DRL) ಸಹಯೋಗದೊಂದಿಗೆ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO)ಯ ಪ್ರಯೋಗಾಲಯವಾದ ನವದೆಹಲಿಯ ಇನ್ಸ್ಟಿಟ್ಯೂಟ್ ಆಫ್ ನ್ಯೂಕ್ಲಿಯರ್ ಮೆಡಿಸಿನ್ ಮತ್ತು ಅಲೈಡ್ ಸೈನ್ಸಸ್ (INMAS) 2-ಡಿಜಿಯನ್ನು ಅಭಿವೃದ್ಧಿಪಡಿಸಿದೆ. ಈ ಸಂಬಂಧ ರಕ್ಷಣಾ ಸಚಿವಾಲಯವು ಈ ತಿಂಗಳ ಆರಂಭದಲ್ಲಿ ಹೇಳಿಕೆ ಬಿಡುಗಡೆ ಮಾಡಿತ್ತು.

ಇದು ಹೇಗೆ ಕೆಲಸ ಮಾಡುತ್ತದೆ..?
ಸರ್ಕಾರದ ಬಿಡುಗಡೆಯ ಪ್ರಕಾರ, ಕೋವಿಡ್ -19ನೊಂದಿಗೆ ಆಸ್ಪತ್ರೆಗೆ ದಾಖಲಾದ ರೋಗಿಗಳನ್ನು ವೇಗವಾಗಿ ಚೇತರಿಸಿಕೊಳ್ಳಲು ಈ ಮಾಲಿಕ್ಯೂಲ್‌ ಸಹಾಯ ಮಾಡುತ್ತದೆ ಮತ್ತು ಪೂರಕ ಆಮ್ಲಜನಕದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುತ್ತದೆ ಎಂದು ಕ್ಲಿನಿಕಲ್ ಟ್ರಯಲ್ ಡೇಟಾ ತೋರಿಸುತ್ತದೆ.

ಔಷಧವು ವೈರಸ್-ಸೋಂಕಿತ ಸೆಲ್‌ಗಳಲ್ಲಿ ಸಂಗ್ರಹಗೊಳ್ಳುತ್ತದೆ ಮತ್ತು ವೈರಲ್ ಸಂಶ್ಲೇಷಣೆ ಮತ್ತು ಶಕ್ತಿಯ ಉತ್ಪಾದನೆಯನ್ನು ನಿಲ್ಲಿಸುವ ಮೂಲಕ ವೈರಸ್ ಬೆಳವಣಿಗೆಯನ್ನು ತಡೆಯುತ್ತದೆ. ವೈರಸ್-ಸೋಂಕಿತ ಸೆಲ್‌ಗಳಲ್ಲಿ ಇದರ ಆಯ್ದ ಸಂಗ್ರಹವು ಈ ಔಷಧಿಯನ್ನು ಅನನ್ಯಗೊಳಿಸುತ್ತದೆ ಎಂದು ಪ್ರಕಟಣೆ ತಿಳಿಸಿದೆ.

"ಕೋವಿಡ್ -19 ನಿಂದ ಬಳಲುತ್ತಿರುವ ಜನರಿಗೆ ಔಷಧವು ಅಪಾರ ಪ್ರಯೋಜನವನ್ನು ನೀಡುತ್ತದೆ" ಎಂದು ಅದು ಹೇಳಿದೆ.

ಕ್ಲಿನಿಕಲ್ ಪ್ರಯೋಗಗಳು
ಏಪ್ರಿಲ್ 2020 ರಲ್ಲಿ ಸಾಂಕ್ರಾಮಿಕ ರೋಗದ ಮೊದಲ ಅಲೆಯಲ್ಲಿ, ಹೈದರಾಬಾದ್‌ನ ಸೆಲ್ಯುಲಾರ್ ಮತ್ತು ಮಾಲಿಕ್ಯುಲರ್ ಬಯಾಲಜಿ (CCMB) ಕೇಂದ್ರದ ಸಹಯೋಗದೊಂದಿಗೆ INMAS-DRDO ವಿಜ್ಞಾನಿಗಳು ನಡೆಸಿದ ಲ್ಯಾಬೊರೇಟರಿ ಪ್ರಯೋಗಗಳು ಈ ಮಾಲಿಕ್ಯೂಲ್‌ SARS-CoV-2 ಅಂದರೆ ಕೋವಿಡ್ -19 ಕಾಯಿಲೆಗೆ ಕಾರಣವಾಗುವ ಕೊರೊನಾ ವೈರಸ್‌ ವಿರುದ್ಧ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ವೈರಲ್ ಬೆಳವಣಿಗೆಯನ್ನು ತಡೆಯುತ್ತದೆ ಎಂದು ಕಂಡುಕೊಂಡಿದೆ.

ಮೇ 2020 ರಲ್ಲಿ, ಡಿಸಿಜಿಐನ ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ (CDSCO) ಕೋವಿಡ್ -19 ರೋಗಿಗಳಲ್ಲಿ 2-ಡಿಜಿಯ 2ನೇ ಹಂತದ ಕ್ಲಿನಿಕಲ್ ಪ್ರಯೋಗಗಳಿಗೆ ಅನುಮತಿ ನೀಡಿತು.

DRDO ಮತ್ತು ಅದರ ಉದ್ಯಮದ ಪಾಲುದಾರ DRL ಕಳೆದ ವರ್ಷ ಮೇ ಮತ್ತು ಅಕ್ಟೋಬರ್ ನಡುವೆ 110 ರೋಗಿಗಳ ಮೇಲೆ 2 ನೇ ಹಂತದ ಪ್ರಯೋಗಗಳನ್ನು ನಡೆಸಿದೆ ಎಂದು ಸರ್ಕಾರ ತಿಳಿಸಿದೆ. ಹಂತ 2ಎ ಅನ್ನು 6 ಆಸ್ಪತ್ರೆಗಳಲ್ಲಿ ನಡೆಸಲಾಯಿತು, ಮತ್ತು ದೇಶಾದ್ಯಂತ 11 ಆಸ್ಪತ್ರೆಗಳಲ್ಲಿ ಹಂತ 2ಬಿ (ಡೋಸ್ ಶ್ರೇಣಿ) ನಡೆಸಲಾಯಿತು.

ಯಶಸ್ವಿ ಹಂತ 2 ಕ್ಲಿನಿಕಲ್ ಪ್ರಯೋಗಗಳ ಮಾಹಿತಿಯ ಆಧಾರದ ಮೇಲೆ, DCGI ನವೆಂಬರ್ 2020 ರಲ್ಲಿ 3 ನೇ ಹಂತದ ಪ್ರಯೋಗಗಳಿಗೆ ಅನುಮತಿ ನೀಡಿದೆ. ಡಿಸೆಂಬರ್ 2020 ಮತ್ತು ಮಾರ್ಚ್ 2021 ರ ನಡುವೆ, 27 ಕೋವಿಡ್ ಆಸ್ಪತ್ರೆಗಳಲ್ಲಿ ದಾಖಲಾದ 220 ರೋಗಿಗಳ ಮೇಲೆ ಕೊನೆಯ ಹಂತದ ಪ್ರಯೋಗಗಳನ್ನು ನಡೆಸಲಾಯಿತು. ಈ ಪ್ರಯೋಗಗಳು ದೆಹಲಿ, ಉತ್ತರಪ್ರದೇಶ, ಪಶ್ಚಿಮ ಬಂಗಾಳ, ಗುಜರಾತ್, ರಾಜಸ್ಥಾನ, ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ, ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ನಡೆದಿದೆ ಎಂದು ಸರ್ಕಾರ ತಿಳಿಸಿದೆ.

ಪ್ರಯೋಗದ ಡೇಟಾ
ಕೋವಿಡ್ -19 ರೋಗಿಗಳಲ್ಲಿ ಔಷಧದ ಸುರಕ್ಷತೆ ಮತ್ತು ಪರಿಣಾಮಕಾರಿತ್ವವನ್ನು ಪರೀಕ್ಷಿಸಲು ಹಂತ 2 ಕ್ಲಿನಿಕಲ್ ಪ್ರಯೋಗಗಳನ್ನು ನಡೆಸಲಾಯಿತು. ಕೋವಿಡ್ -19 ರೋಗಿಗಳಲ್ಲಿ 2-ಡಿಜಿ ಸುರಕ್ಷಿತವಾಗಿದೆ ಎಂದು ಕಂಡುಬಂದಿದೆ ಮತ್ತು ಅವರ ಚೇತರಿಕೆಯಲ್ಲಿ ಗಮನಾರ್ಹ ಸುಧಾರಣೆ ತೋರಿಸಿದೆ ಎಂದು ಸರ್ಕಾರದ ಪ್ರಕಟಣೆ ತಿಳಿಸಿದೆ.

ಪರಿಣಾಮಕಾರಿತ್ವದ ಟ್ರೆಂಡ್‌ಗಳಲ್ಲಿ, "2-ಡಿಜಿ ಯೊಂದಿಗೆ ಚಿಕಿತ್ಸೆ ಪಡೆದ ರೋಗಿಗಳು ವಿವಿಧ ಅಂತಿಮ ಬಿಂದುಗಳಲ್ಲಿ ಸ್ಟ್ಯಾಂಡರ್ಡ್ ಆಫ್ ಕೇರ್ (SoC)ಗಿಂತ ವೇಗವಾಗಿ ರೋಗಲಕ್ಷಣದ ಚಿಕಿತ್ಸೆಯನ್ನು ತೋರಿಸಿದ್ದಾರೆ" ಎಂದು ಈ ಪ್ರಕಟಣೆ ತಿಳಿಸಿದೆ.

"SoCಗೆ ಹೋಲಿಸಿದಾಗ ನಿರ್ದಿಷ್ಟ ಪ್ರಮುಖ ಚಿಹ್ನೆಗಳ ನಿಯತಾಂಕಗಳ ಸಾಮಾನ್ಯೀಕರಣವನ್ನು ಸಾಧಿಸುವ ಸರಾಸರಿ ಸಮಯದ ದೃಷ್ಟಿಯಿಂದ ಗಮನಾರ್ಹವಾಗಿ ಅನುಕೂಲಕರ ಪ್ರವೃತ್ತಿ (2.5 ದಿನಗಳ ವ್ಯತ್ಯಾಸ) ಕಂಡುಬಂದಿದೆ." ಎಂದು ತಿಳಿಸಿದ್ದಾರೆ.

ಇನ್ನು, 2-ಡಿಜಿ ಔಷಧದ ಪರಿಣಾಮದಿಂದ ಹಂತ 3 ಕ್ಲಿನಿಕಲ್ ಪ್ರಯೋಗದ ಡೇಟಾದಲ್ಲಿ “ಗಮನಾರ್ಹವಾಗಿ ಹೆಚ್ಚಿನ ಪ್ರಮಾಣದ ರೋಗಿಗಳ ರೋಗಲಕ್ಷಣ ಸುಧಾರಿಸಿದೆ ಮತ್ತು SoCಗೆ ಹೋಲಿಸಿದರೆ 3 ನೇ ದಿನದ ವೇಳೆಗೆ ಪೂರಕ ಆಮ್ಲಜನಕ ಅವಲಂಬನೆಯಿಂದ (42% vs 31%) ಮುಕ್ತವಾಯಿತು. ಇದು ಆರಂಭಿಕ ಆಮ್ಲಜನಕ ಚಿಕಿತ್ಸೆ / ಅವಲಂಬನೆಯಿಂದ ಪರಿಹಾರವನ್ನು ಸೂಚಿಸುತ್ತದೆ'' ಎಂದು ಸರ್ಕಾರ ಹೇಳಿದೆ.

65 ವರ್ಷಕ್ಕಿಂತ ಹೆಚ್ಚು ವಯಸ್ಸಿನ ರೋಗಿಗಳಲ್ಲಿ ಸಹ ಇದೇ ರೀತಿಯ ಪ್ರವೃತ್ತಿ ಕಂಡುಬಂದಿದೆ.

ಪ್ರಯೋಜನಗಳು
2-ಡಿಜಿ ಜೆನೆರಿಕ್ ಅಣು ಮತ್ತು ಗ್ಲೂಕೋಸ್‌ನ ಅನಲಾಗ್ ಆಗಿರುವುದರಿಂದ ಇದನ್ನು ಸುಲಭವಾಗಿ ಉತ್ಪಾದಿಸಬಹುದು ಮತ್ತು ದೊಡ್ಡ ಪ್ರಮಾಣದಲ್ಲಿ ಲಭ್ಯವಾಗಿಸಬಹುದು ಎಂದು ಸರ್ಕಾರ ಹೇಳುತ್ತದೆ. ಈ ಔಷಧವು ಪುಡಿ ರೂಪದಲ್ಲಿ ಸ್ಯಾಚೆಟ್‌ನಲ್ಲಿ ಲಭ್ಯವಿದೆ, ಮತ್ತು ಇದನ್ನು ನೀರಿನಲ್ಲಿ ಬೆರೆಸಿ ಸೇವಿಸಬೇಕು.
Published by:Sushma Chakre
First published: