ದೇಹದ ಬೊಜ್ಜು (Obesity) ಅಂತೆಯೇ ಅತ್ಯಧಿಕ ತೂಕ ಎಂಬುದು ಹೆಚ್ಚಿನವರನ್ನು ಕಾಡುತ್ತಿರುವ ಸಮಸ್ಯೆಯಾಗಿದೆ. ಬೊಜ್ಜಿನ ಉಪಸ್ಥಿತಿಯೊಂದಿಗೆ ಅದರೊಂದಿಗೆ ಬರುವ ಇನ್ನಿತರ ಕಾಯಿಲೆಗಳನ್ನು (disease) ಅನುಭವಿಸಬೇಕಾಗುತ್ತದೆ. ಬೊಜ್ಜಿನ ಸಮಸ್ಯೆ ದೇಹದಲ್ಲಿ ಹೃದ್ರೋಗದ ಅಪಾಯ (Heart Problem), ಸಂಧಿ ನೋವು, ಕಿಡ್ನಿ ಸಮಸ್ಯೆ, ಕ್ಯಾನ್ಸರ್ (Cancer) ಮೊದಲಾದ ಅಪಾಯಕಾರಿ ರೋಗಗಳಿಗೂ ಕಾರಣವಾಗಿವೆ ಎಂದು ಸಂಶೋಧನೆಗಳು ತಿಳಿಸುತ್ತವೆ.
ಮಧುಮೇಹ ಔಷಧಗಳು ತೂಕ ನಷ್ಟಕ್ಕೆ ಸಹಕಾರಿಯೇ?
ಮಧುಮೇಹ ಚಿಕಿತ್ಸೆಗೆ ಸಿದ್ಧಪಡಿಸಲಾದ ಕೆಲವೊಂದು ಔಷಧಗಳು ತೂಕ ಇಳಿಕೆಗೆ ಪರಿಣಾಮಕಾರಿ ಔಷಧವಾಗಿವೆ ಎಂದು ವರದಿಯಾಗಿದೆ. ಈ ದಿಸೆಯಲ್ಲಿ ಆ ಔಷಧಗಳನ್ನು ಇನ್ನಷ್ಟು ಅಭಿವೃದ್ಧಿಪಡಿಸುವ ಮೂಲಕ ಬೊಜ್ಜಿನ ಸಮಸ್ಯೆ ನಿವಾರಣೆಗೆ ಬಳಸಿಕೊಳ್ಳಬಹುದೇ ಎಂಬುದರ ಕುರಿತು ಅಧ್ಯಯನ ನಡೆಯುತ್ತಿದೆ.
ಯುಎಸ್ ಸಂಸ್ಥೆ ಎಲಿ ಲಿಲ್ಲಿ & ಕೋ ತಯಾರಿಸಿದ ಹೊಸ ಔಷಧವಾದ ಮೌಂಜಾರೋನ ಸುತ್ತ ಅಧ್ಯಯನಗಳು ನಡೆಯುತ್ತಿದ್ದು, ಈ ಔಷಧ 17 ತಿಂಗಳ ಅವಧಿಯಲ್ಲಿ 104 ಕೆಜಿ ವ್ಯಕ್ತಿಗೆ 22 ಕೆಜಿ ತೂಕವನ್ನು ಕಳೆದುಕೊಳ್ಳಲು ನೆರವಾಗಿದೆ ಎಂಬುದು ಪ್ರಯೋಗ ಸಮಯದಲ್ಲಿ ತಿಳಿದುಬಂದಿದೆ.
ಈ ವರದಿಯನ್ನು ವಾಲ್ ಸ್ಟ್ರೀಟ್ ಜರ್ನಲ್ ಪ್ರಕಟಿಸಿದ್ದು, ಯಾವುದೇ ಬೊಜ್ಜಿನ ಔಷಧ ಇಷ್ಟೊಂದು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಿಲ್ಲ ಎಂಬುದಾಗಿ ವರದಿಯಾಗಿದೆ.
ತೂಕ ಇಳಿಸಲು ಸೇವಿಸಬಹುದೇ ಎಂಬುದಕ್ಕೆ ವೈದ್ಯರು ದೃಢೀಕರಣ ನೀಡಿಲ್ಲ
ಮುಂಬರುವ ತಿಂಗಳಲ್ಲಿ ತೂಕ ನಷ್ಟ ಹಾಗೂ ತೂಕದ ನಿರ್ವಹಣೆಗಾಗಿ ಶಿಫಾರಸು ಮಾಡಲು ಯುಎಸ್ ಆರೋಗ್ಯ ನಿಯಂತ್ರಕರಿಂದ ಇದನ್ನು ಅನುಮೋದಿಸಲಾಗುತ್ತದೆ ಎಂದು ವ್ಯಾಪಕವಾಗಿ ಊಹಿಸಲಾಗಿದೆ.
ಅದೇ ರೀತಿ ಇನ್ನು ಕೆಲವು ರೋಗಿಗಳು ತೂಕ ನಷ್ಟಕ್ಕಾಗಿಯೇ ವೈದ್ಯರ ಅನುಮತಿ ಇಲ್ಲದೆ ಈ ಔಷಧವನ್ನು ತೆಗೆದುಕೊಳ್ಳುತ್ತಿದ್ದಾರೆ ಎಂಬುದು ವರದಿಯಾಗಿದೆ.
ಟೈಪ್ 2 ಡಯಾಬಿಟಿಸ್ ಚಿಕಿತ್ಸೆಗಾಗಿ ಬಳಸುವ ಔಷಧ ಮೌಂಜರೋ ಈಗಾಗಲೇ ಮಾರುಕಟ್ಟೆಯಲ್ಲಿದೆ. ಓಝೆಂಪಿಕ್, ವೆಗೋವಿ ಮತ್ತು ಮೌಂಜರೋ ಔಷಧಗಳನ್ನು ಟೈಪ್ 2 ಮಧುಮೇಹಕ್ಕೆ ಚಿಕಿತ್ಸೆಯಾಗಿ ಔಷಧ ರೂಪದಲ್ಲಿ ನೀಡಲಾಗುತ್ತದೆ. ಆದರೆ ಈ ಔಷಧಗಳನ್ನು ಸೆಲೆಬ್ರಿಟಿಗಳು ತೂಕ ಇಳಿಸಲು ಬಳಸುತ್ತಾರೆಂಬ ಕಾರಣದಿಂದ ಹೆಚ್ಚು ವಿವಾದಕ್ಕೊಳಗಾಗಿವೆ.
ಓಝೆಂಪಿಕ್ ತೂಕ ಇಳಿಸಲು ಹೇಗೆ ನೆರವಾಗಿದೆ?
#Ozempic ಎಂಬ ಹ್ಯಾಶ್‌ಟ್ಯಾಗ್ ಉಳ್ಳ ಔಷಧ ಟಿಕ್‌ಟಾಕ್‌ನಲ್ಲಿ 273 ಮಿಲಿಯನ್ ಬಾರಿ ವೀಕ್ಷಿಸಲಾಗಿದೆ. ನವೆಂಬರ್ 2022 ರಲ್ಲಿ ನ್ಯೂಯಾರ್ಕ್ ಟೈಮ್ಸ್‌ನ ವರದಿಯ ಪ್ರಕಾರ ಬಳಕೆದಾರರು ಇದನ್ನು ತೆಗೆದುಕೊಂಡು ತೂಕ ಇಳಿಸಿಕೊಂಡಿದ್ದಾರೆ ಅಂತೆಯೇ ಅಡ್ಡಪರಿಣಾಮಗಳ ಬಗ್ಗೆಯೂ ಮಾಹಿತಿ ನೀಡಿದ್ದಾರೆ.
ಹೆಲ್ತ್‌ಲೈನ್ ಪ್ರಕಾರ, ಓಝೆಂಪಿಕ್ ಒಂದು ಪ್ರಿಸ್ಕ್ರಿಪ್ಷನ್ ಔಷಧಿಯಾಗಿದ್ದು, ಟೈಪ್ 2 ಡಯಾಬಿಟಿಸ್ ಹೊಂದಿರುವ ವ್ಯಕ್ತಿಗಳಲ್ಲಿ ಆಹಾರ ಮತ್ತು ವ್ಯಾಯಾಮದ ಮಾರ್ಪಾಡುಗಳೊಂದಿಗೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಬಳಸಲಾಗುತ್ತದೆ.
ಹೃದಯಾಘಾತ ಮತ್ತು ಪಾರ್ಶ್ವವಾಯು ಮುಂತಾದ ಹೃದ್ರೋಗ ಮತ್ತು ಮಧುಮೇಹ ಹೊಂದಿರುವ ವ್ಯಕ್ತಿಗಳಲ್ಲಿ ಕೆಲವು ಅಪಾಯಗಳನ್ನು ಕಡಿಮೆ ಮಾಡಲು ಇದು ಸಹಾಯ ಮಾಡುತ್ತದೆ.
ಇದನ್ನೂ ಓದಿ: Ayurvedic Tips: ಮೊಸರನ್ನ ತಿನ್ನೋದು ಹೇಗೆ? ಇದಕ್ಕೆ ಆಯುರ್ವೇದ ತಜ್ಞರು ಕೊಟ್ಟಿದ್ದಾರೆ ಸಲಹೆ
ಸೆಮಾಗ್ಲುಟೈಡ್ ಓಜೆಂಪಿಕ್‌ನಲ್ಲಿ ಸಕ್ರಿಯ ಘಟಕವಾಗಿದೆ. ಇದು ಗ್ಲುಕಗನ್ ತರಹದ ಪೆಪ್ಟೈಡ್-1 ರಿಸೆಪ್ಟರ್ ಅಗೊನಿಸ್ಟ್ಸ್ (GLP-1 RAs) ಎಂದು ಕರೆಯಲಾದ ಔಷಧಿಗಳ ವರ್ಗಕ್ಕೆ ಸೇರಿದೆ. ಸೆಮಾಗ್ಲುಟೈಡ್ ಒಜೆಂಪಿಕ್ ಬ್ರಾಂಡ್ ಹೆಸರಿನಲ್ಲಿ ಪ್ರತ್ಯೇಕವಾಗಿ ಲಭ್ಯವಿದೆ. ಯಾವುದೇ ಜೆನೆರಿಕ್ ಆವೃತ್ತಿ ಲಭ್ಯವಿಲ್ಲ ಎಂದು ವರದಿ ತಿಳಿಸಿದೆ.
ಸೆಮಾಗ್ಲುಟೈಡ್, ಓಜೆಂಪಿಕ್‌ನಲ್ಲಿನ ಸಕ್ರಿಯ ಅಂಶವನ್ನು ಉತ್ತೇಜಿಸುವ ಮೂಲಕ ಕಾರ್ಯನಿರ್ವಹಿಸುತ್ತದೆ. ಇದು ಹಸಿವನ್ನು ನಿಯಂತ್ರಿಸುತ್ತದೆ. ಹಾಗಾಗಿಯೇ ಇದು ಹೆಚ್ಚುವರಿ ತೂಕವನ್ನು ಕಡಿಮೆ ಮಾಡುತ್ತದೆ ಎಂಬುದಾಗಿ ಔಷಧ ಮೂಲಗಳು ತಿಳಿಸಿವೆ.
ಮೇದೋಜ್ಜೀರಕ ಗ್ರಂಥಿಯಿಂದ ಇನ್ಸುಲಿನ್ ಉತ್ಪಾದನೆಯಲ್ಲಿ ಸೆಮಾಗ್ಲುಟೈಡ್ ಸಹಕಾರ ನೀಡುತ್ತದೆ. ಹಾಗಾಗಿಯೇ ಇದು ಟೈಪ್ 2 ಮಧುಮೇಹದ ನಿರ್ವಹಣೆಗೆ ಸಹಾಯ ಮಾಡುತ್ತದೆ.
ಆಹಾರದಿಂದ ಜೀವಕೋಶಗಳಿಗೆ ಗ್ಲೂಕೋಸ್ (ಅಥವಾ ರಕ್ತದಲ್ಲಿನ ಸಕ್ಕರೆ) ಅನ್ನು ಸಾಗಿಸಲು ನಮ್ಮ ದೇಹಕ್ಕೆ ಇನ್ಸುಲಿನ್ ಅಗತ್ಯವಿರುತ್ತದೆ ಇದರಿಂದ ಅದನ್ನು ಶಕ್ತಿಯಾಗಿ ಬಳಸಬಹುದು.
ಆಹಾರದಲ್ಲಿನ ಪೋಷಕಾಂಶಗಳನ್ನು ಪತ್ತೆಹಚ್ಚಲು ಪ್ರತಿಕ್ರಿಯೆಯಾಗಿ ನಿಯಮಿತವಾಗಿ ರಚಿಸಲಾದ GLP-1 (ಗ್ಲುಕಗನ್ ತರಹದ ಪೆಪ್ಟೈಡ್-1) ಎಂಬ ನೈಸರ್ಗಿಕ ಹಾರ್ಮೋನ್‌ನ ಪಾತ್ರವನ್ನು ಅನುಕರಿಸುವ ಮೂಲಕ ಸೆಮಾಗ್ಲುಟೈಡ್ ಕಾರ್ಯನಿರ್ವಹಿಸುತ್ತದೆ.
ವಾಲ್ ಸ್ಟ್ರೀಟ್ ಜರ್ನಲ್ ಪ್ರಕಾರ, ಓಜೆಂಪಿಕ್ ಮೂಲಕ ತೂಕ ನಷ್ಟದ ಶೇಕಡಾವಾರು ಪ್ರಮಾಣದ ಮೇಲೆ ಪರಿಣಾಮ ಬೀರುತ್ತದೆ ಎಂಬುದಕ್ಕೆ ಯಾವುದೇ ದೃಢೀಕೃತ ಅಧ್ಯಯನಗಳಿಲ್ಲ ಎಂದು ತಿಳಿಸಿದೆ.
ಈ ಔಷಧದ ದುಷ್ಪರಿಣಾಮಗಳೇನು?
ಹೆಲ್ತ್‌ಲೈನ್ ವರದಿಗಳ ಪ್ರಕಾರ ಓಝೆಂಪಿಕ್ ಔಷಧ ಸೇವನೆಯು ಗಂಭೀರವಾದ ಹಾಗೂ ಸೌಮ್ಯವಾದ ಅಡ್ಡ ಪರಿಣಾಮಗಳನ್ನು ಹೊಂದಿದೆ.
ಸೌಮ್ಯವಾದ ಅಡ್ಡಪರಿಣಾಮಗಳು
ಯುಎಸ್‌ನಲ್ಲಿ ಅನುಮೋದಿತವಾಗಿರುವ ತೂಕ ನಷ್ಟದ ಔಷಧಿಯಾಗಿರುವ ವೆಗೋವಿ, ದೀರ್ಘಾವಧಿಯಲ್ಲಿ ತೂಕ ಇಳಿಕೆಗೆ ಕಡಿಮೆ ಕ್ಯಾಲೊರಿ ಆಹಾರ ಜೊತೆಗೆ ಔಷಧವಾಗಿ ಬಳಸಲಾಗುತ್ತದೆ.
30 ಅಥವಾ ಅದಕ್ಕಿಂತ ಹೆಚ್ಚಿನ ಬಿಎಮ್‌ಐ (BMI) ಹೊಂದಿರುವ 30 ವರ್ಷ ವಯಸ್ಸಿನ ವ್ಯಕ್ತಿಗಳು
27 ಅಥವಾ ಅದಕ್ಕಿಂತ ಹೆಚ್ಚಿನ ಬಿಎಮ್‌ಐ (BMI) ಹೊಂದಿರುವ ವ್ಯಕ್ತಿಗಳು
95% ಅಥವಾ ಅದಕ್ಕಿಂತ ಹೆಚ್ಚಿನ ಬಿಎಮ್‌ಐ (BMI) ಹೊಂದಿರುವ 12 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಯುವಕರು
ಇದನ್ನೂ ಓದಿ: Health Tips: ಸೌತೆಕಾಯಿ ಅತಿಯಾಗಿ ತಿಂದ್ರೂ ಸಮಸ್ಯೆನೇ; ಇದರಿಂದಾಗೋ ದುಷ್ಪರಿಣಾಮಗಳ ಬಗ್ಗೆ ಮೊದ್ಲು ತಿಳಿದುಕೊಳ್ಳಿ!
ವೆಗೋವಿ ಹೇಗೆ ಕಾರ್ಯನಿರ್ವಹಿಸುತ್ತದೆ
ವೆಗೋವಿ, ಇದು ಮಾನವ ಗ್ಲುಕಗನ್ ತರಹದ ಪೆಪ್ಟೈಡ್-1 (GLP-1) ರಿಸೆಪ್ಟರ್ ಅಗೊನಿಸ್ಟ್ ಎಂದೆನಿಸಿದ್ದು ಕರುಳು, ಮೇದೋಜ್ಜೀರಕ ಗ್ರಂಥಿ ಮತ್ತು ಮೆದುಳಿನ ವ್ಯವಸ್ಥೆಯಿಂದ ನೈಸರ್ಗಿಕವಾಗಿ ಉತ್ಪತ್ತಿಯಾಗುವ GLP-1 ನ ಚಟುವಟಿಕೆಯನ್ನು ಪುನರಾವರ್ತಿಸುತ್ತದೆ ಎಂದು ವೈದ್ಯಲೋಕ ತಿಳಿಸುತ್ತದೆ.
GLP-1 ಮೆದುಳಿನ ರಚನೆಯ ಮೇಲೆ ಪರಿಣಾಮ ಬೀರುತ್ತದೆ ಅಂತೆಯೇ ಹಸಿವನ್ನು ನಿಯಂತ್ರಿಸಲು ಸಹಕಾರಿಯಾಗಿದೆ. ಹೊಟ್ಟೆ ಖಾಲಿ ಎನಿಸುವಂತೆ ಮಾಡುವುದಿಲ್ಲ ಅಂದರೆ ಹೊಟ್ಟೆ ತುಂಬಿರುವ ಅನುಭವವನ್ನು ಉಂಟುಮಾಡುತ್ತದೆ.
ಈ ಔಷಧದ ಸೇವನೆಯಿಂದ ಉಂಟಾಗುವ ಸೌಮ್ಯವಾದ ಅಡ್ಡ ಪರಿಣಾಮಗಳು
ಮೌಂಜರೋ ಹೇಗೆ ಕಾರ್ಯನಿರ್ವಹಿಸುತ್ತದೆ
ಕಳೆದ ವರ್ಷ ಎಫ್‌ಡಿಎ ಅನುಮೋದನೆಯ ನಂತರ, ಎಲಿ ಲಿಲ್ಲಿ ಅವರ ಮಧುಮೇಹ ಔಷಧಿ ಮೌಂಜಾರೊ ಯಶಸ್ವಿಯಾಯಿತು. ಸ್ಥೂಲಕಾಯ ಸಮಸ್ಯೆಗೆ ನಡೆಸಿದ ಅನೇಕ ಪ್ರಯೋಗಗಳಲ್ಲಿ ಮೌಂಜರೋ ಯಶಸ್ವಿಯಾಯಿತು ಜೊತೆಗೆ ಈ ಔಷಧದ ಬೇಡಿಕೆ ಕೂಡ ದುಪ್ಪಟ್ಟಾಯಿತು. ಮೌಂಜಾರೊವು ಡ್ಯುಯಲ್ GIP/GLP-1 ಅಗೊನಿಸ್ಟ್ ಟಿರ್ಜೆಪಟೈಡ್ ಅನ್ನು ಹೊಂದಿದೆ.
ಟಿರ್ಜೆಪಟೈಡ್ ಹೇಗೆ ಕೆಲಸ ಮಾಡುತ್ತದೆ?
ಗುಡ್ರಾಕ್ಸ್ ಹೆಲ್ತ್‌ನ ವರದಿಯ ಪ್ರಕಾರ, ಟಿರ್ಜೆಪಟೈಡ್ ಎರಡು ರೀತಿಯ ಔಷಧಿಗಳನ್ನು ಅಂದರೆ ಜಿಎಲ್‌ಪಿ-1 ರಿಸೆಪ್ಟರ್ ಅಗೊನಿಸ್ಟ್ ಮತ್ತು ಗ್ಲೂಕೋಸ್-ಅವಲಂಬಿತ ಇನ್ಸುಲಿನೊಟ್ರೋಪಿಕ್ ಪಾಲಿಪೆಪ್ಟೈಡ್ (ಜಿಐಪಿ) ರಿಸೆಪ್ಟರ್ ಅಗೊನಿಸ್ಟ್ ಅನ್ನು ಸಂಯೋಜಿಸುವ ಮೊದಲ ಔಷಧಿಯಾಗಿದೆ.
GLP-1 ಮತ್ತು GIP ಇವೆರಡೂ ಆಹಾರ ಸೇವನೆಯ ನಂತರ ಬಿಡುಗಡೆಯಾಗುವ ಹಾರ್ಮೋನುಗಳಾಗಿವೆ. ಟಿರ್ಜೆಪಟೈಡ್ ಆಹಾರ ಸೇವನೆಯ ನಂತರ ಇನ್ಸುಲಿನ್ ಬಿಡುಗಡೆ ಮಾಡಲು ಮೇದೋಜೀರಕ ಗ್ರಂಥಿಗೆ ಸೂಚನೆ ನೀಡುವುದು ಹಾಗೂ ಯಕೃತ್ತು ಉತ್ಪಾದಿಸುವ ಗ್ಲೂಕೋಸ್ ಪ್ರಮಾಣವನ್ನು ಕಡಿಮೆ ಮಾಡಲು ಸೂಚನೆ ಕಳುಹಿಸುವ ಕ್ರಿಯೆಯನ್ನು ಒಳಗೊಂಡಿರುತ್ತದೆ.
ಅಡ್ಡಪರಿಣಾಮಗಳು
ಮೌಂಜೆರೋ ತೂಕ ಇಳಿಸುವ ಟಿರ್ಜೆಪಟೈಡ್ ಅಂಶದಿಂದಾಗಿ ಇದು ಬೇಡಿಕೆಯಲ್ಲಿದೆ ಎಂದು ತಜ್ಞರು ತಿಳಿಸುತ್ತಾರೆ.
CNBC ನೀಡಿರುವ ವರದಿಯ ಪ್ರಕಾರ ತೂಕ ಇಳಿಸುವ ಪ್ರಕ್ರಿಯೆಗೆ ಸಹಕಾರಿಯಾಗಿರುವ ಔಷಧಗಳಾದ ಒಜೆಂಪಿಕ್ ಅಥವಾ ವೆಗೋವಿ ಔಷಧಗಳನ್ನು ತೆಗೆದುಕೊಳ್ಳುವುದನ್ನು ನಿಲ್ಲಿಸಿದರೆ ತೂಕ ಹೆಚ್ಚಾಗುತ್ತದೆ ಎಂದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ