ಚೀನಾದಿಂದ ಇಂಡೋನೇಷ್ಯಾ ಮತ್ತು ಬ್ರೆಜಿಲ್ ವರೆಗಿನ ಅನೇಕ ದೇಶಗಳು ತಮ್ಮ ಜನರನ್ನು ಕೋವಿಡ್ -19 ವಿರುದ್ಧ ಚುಚ್ಚುಮದ್ದು ನೀಡಲು ಚೀನಾದ ಲಸಿಕೆಗಳನ್ನು ಹೆಚ್ಚು ಅವಲಂಬಿಸಿವೆ. ಆದರೆ ಭಾರತದಲ್ಲಿ ಮೊದಲು ಗುರುತಿಸಲ್ಪಟ್ಟ ಡೆಲ್ಟಾ ರೂಪಾಂತರದ ವಿರುದ್ಧ ಆ ಲಸಿಕೆಗಳು ಸಾಕಷ್ಟು ರಕ್ಷಣೆ ನೀಡುತ್ತಾರೆಯೇ ಎಂಬ ಬಗ್ಗೆ ಆತಂಕಗಳು ಹೆಚ್ಚುತ್ತಿವೆ. ಡೆಲ್ಟಾ ವಿರುದ್ಧ ಚೀನಾದಲ್ಲಿ ಸ್ಥಳೀಯವಾಗಿ ಅಭಿವೃದ್ಧಿಯಾದ ಲಸಿಕೆಗಳ ಪರಿಣಾಮಕಾರಿತ್ವದ ಬಗ್ಗೆ ಚೀನಾದ ಆರೋಗ್ಯ ತಜ್ಞರ ಅಭಿಪ್ರಾಯಗಳನ್ನು ಈ ಲೇಖನದಲ್ಲಿ ನೀಡಲಾಗಿದೆ. ಹಾಗೂ, ಜಾಗತಿಕವಾಗಿ ಪ್ರಬಲ ರೂಪಾಂತರವಾಗುತ್ತಿರುವ ಡೆಲ್ಟಾ ಹಾಗೂ ಇತರೆ ಕೊರೊನಾ ವೈರಸ್ ತಡೆಗಟ್ಟಲು ಚೀನಾ ತೆಗೆದುಕೊಳ್ಳುತ್ತಿರುವ ಕ್ರಮಗಳ ಬಗ್ಗೆಯೂ ವಿವರಿಸಲಾಗಿದೆ.
ಚೀನೀ ಲಸಿಕೆಗಳು ಡೆಲ್ಟಾ ವಿರುದ್ಧ ಪರಿಣಾಮಕಾರಿಯೇ..?
ಚೀನಾ ಡೆಲ್ಟಾ ರೂಪಾಂತರದ ವಿರುದ್ಧ ಲಸಿಕೆ ಪರಿಣಾಮಕಾರಿತ್ವವನ್ನುದ ಬಗ್ಗೆ ಮಾಹಿತಿಯನ್ನೇ ಬಿಡುಗಡೆ ಮಾಡಿಲ್ಲ. ಕ್ಲಿನಿಕಲ್ ಪ್ರಯೋಗಗಳು ಅಥವಾ ನೈಜ-ಪ್ರಪಂಚದ ಬಳಕೆಯಲ್ಲಿನ ದೊಡ್ಡ-ಪ್ರಮಾಣದ ಡೇಟಾವನ್ನಾಗಲೀ ಅಥವಾ ಲ್ಯಾಬ್ ಪರೀಕ್ಷೆಗಳಿಂದ ವಿವರವಾದ ಮಾಹಿತಿಯನ್ನಾಗಲೀ ನೀಡಿಲ್ಲ. ಆದರೆ, ಚೀನಾದ ತಜ್ಞರು ಸಾಧ್ಯವಾದಷ್ಟು ಬೇಗ ಚುಚ್ಚುಮದ್ದನ್ನು ಪಡೆಯುವಂತೆ ಜನರಿಗೆ ಆಗ್ರಹಿಸುತ್ತಿದ್ದಾರೆ.
ಚೀನಾದ ಲಸಿಕೆಗಳು ಡೆಲ್ಟಾದಿಂದ ಉಂಟಾಗುವ ರೋಗಲಕ್ಷಣ ಮತ್ತು ತೀವ್ರತರವಾದ ಪ್ರಕರಣಗಳ ಅಪಾಯವನ್ನು ಕಡಿಮೆ ಮಾಡಲು ಸ್ವಲ್ಪ ಪರಿಣಾಮಕಾರಿ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ ಎಂದು ಚೀನಾದ ಕೋವಿಡ್ -19 ಪ್ರತಿಕ್ರಿಯೆಯನ್ನು ರೂಪಿಸಲು ಸಹಾಯ ಮಾಡಿದ ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಝಾಂಗ್ ನನ್ಶಾನ್ ಸುದ್ದಿಗಾರರಿಗೆ ತಿಳಿಸಿದರು. ಗುವಾಂಗ್ಝೌ ನಗರದಲ್ಲಿನ ಸೋಂಕುಗಳ ವಿಶ್ಲೇಷಣೆಯನ್ನು ಆಧರಿಸಿದೆ ಮತ್ತು ಫಲಿತಾಂಶಗಳು
ಡೆಲ್ಟಾ ರೂಪಾಂತರದ ಮೊದಲ ಪ್ರಕರಣಗಳು ಕಂಡುಬಂದ ದಕ್ಷಿಣ ಗುವಾಂಗ್ಡಾಂಗ್ ಪ್ರಾಂತ್ಯದಲ್ಲಿ ಲಸಿಕೆ ಹಾಕಿಸಿಕೊಂಡವರ ಪೈಕಿ ತೀವ್ರತರವಾದ ಪ್ರಕರಣಗಳು ಕಂಡುಬರದ ಹಿನ್ನೆಲೆ ಲಸಿಕೆಗಳು ರಕ್ಷಣೆ ನೀಡುತ್ತವೆ ಎನ್ನಬಹುದು. ಇನ್ನು, ಲಸಿಕೆ ಪಡೆಯದ ಜನರಲ್ಲಿ ತೀವ್ರತರವಾದ ಪ್ರಕರಣಗಳು ಕಂಡುಬಂದಿವೆ.
ಚೀನಾದ ಲಸಿಕೆಗಳು ತೀವ್ರವಾದ ಪ್ರಕರಣಗಳ ವಿರುದ್ಧ ಪರಿಣಾಮಕಾರಿ ಎಂಬ ಹೇಳಿಕೆಯನ್ನು ಬೆಂಬಲಿಸಲು ಫೆಂಗ್ ಅವರ ಹೇಳಿಕೆ ಸಾಕಾಗುವುದಿಲ್ಲ ಎಂದು ಹಾಂಗ್ ಕಾಂಗ್ ವಿಶ್ವವಿದ್ಯಾಲಯದ ವೈರಾಲಜಿಸ್ಟ್ ಜಿನ್ ಡಾಂಗ್-ಯಾನ್ ಹೇಳಿದ್ದಾರೆ.
ಇಂಡೋನೇಷ್ಯಾದಲ್ಲಿ ಚೀನಾದ ಸಿನೋವಾಕ್ ಲಸಿಕೆ ಪಡೆದರೂ ಸಹ ನೂರಾರು ವೈದ್ಯಕೀಯ ಕಾರ್ಯಕರ್ತರು ಕೋವಿಡ್ - 19 ಸೋಂಕಿಗೆ ಒಳಗಾಗುತ್ತಿದ್ದಾರೆ. ಇದರಿಂದ ಇಂಡೋನೇಷ್ಯಾದಲ್ಲಿ ಡೆಲ್ಟಾ ರೂಪಾಂತರದ ಉಲ್ಬಣದಿಂದಾಗಿ ಇತ್ತೀಚೆಗೆ ದಾಖಲೆಯ ದೈನಂದಿನ ಪ್ರಕರಣಗಳು ವರದಿಯಾಗುತ್ತಿದೆ ಎಂದು ಅಧಿಕಾರಿಗಳು ಈ ತಿಂಗಳ ಆರಂಭದಲ್ಲಿ ತಿಳಿಸಿದ್ದಾರೆ. ಆದರೆ, ಇಂಡೋನೇಷ್ಯಾದ ವೈದ್ಯಕೀಯ ಕಾರ್ಯಕರ್ತರು ಡೆಲ್ಟಾದಿಂದಲೇ ಸೋಂಕಿಗೆ ಒಳಗಾಗಿದ್ದಾರಾ ಎಂಬುದು ಸದ್ಯ ಸ್ಪಷ್ಟವಾಗಿಲ್ಲ.
ಪಾಶ್ಚಾತ್ಯ ಲಸಿಕೆಗಳು ಡೆಲ್ಟಾ ವಿರುದ್ಧ ಎಷ್ಟು ಪರಿಣಾಮಕಾರಿ..?
ಫೈಜರ್ - ಬಯೋಎನ್ಟೆಕ್ ಲಸಿಕೆಯ ಎರಡನೇ ಡೋಸ್ ಪಡೆದುಕೊಂಡ ನಂತರ ಡೆಲ್ಟಾ ರೋಗಲಕ್ಷಣದ ಕಾಯಿಲೆಯ ವಿರುದ್ಧ 88% ಪರಿಣಾಮಕಾರಿಯಾಗಿದೆ ಎಂದು ಇಂಗ್ಲೆಂಡ್ ಸಾರ್ವಜನಿಕ ಆರೋಗ್ಯ ಮೇ ತಿಂಗಳಲ್ಲಿ ನಡೆಸಿದ ಅಧ್ಯಯನದಲ್ಲಿ ಕಂಡುಕೊಂಡಿದೆ. ಆಲ್ಫಾ ವಿರುದ್ಧ 93% ಪರಿಣಾಮಕಾರಿತ್ವ ಹೊಂದಿದ್ದು, ಇದನ್ನು ಮೊದಲು ಬ್ರಿಟನ್ನಲ್ಲಿ ಗುರುತಿಸಲಾಗಿದೆ.
ಜಾನ್ಸನ್ ಮತ್ತು ಜಾನ್ಸನ್ ಸಿಂಗಲ್-ಡೋಸ್ ಕೋವಿಡ್ -19 ಲಸಿಕೆ ಎಷ್ಟು ಸುರಕ್ಷಿತವಾಗಿದೆ ಎಂಬುದನ್ನು ತೋರಿಸುವ ಯಾವುದೇ ಗಣನೀಯ ಮಾಹಿತಿಯಿಲ್ಲ, ಮತ್ತು ಯು.ಎಸ್. ಸಾಂಕ್ರಾಮಿಕ ರೋಗ ತಜ್ಞರು ಎಮ್ಆರ್ಎನ್ಎ ಲಸಿಕೆಗಳನ್ನು ಬಳಸಿಕೊಂಡು ಬೂಸ್ಟರ್ ಶಾಟ್ ನೀಡುವ ಅಗತ್ಯದ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ.
ಗುವಾಂಗ್ಡಾಂಗ್ ಏಕಾಏಕಿ ಎಷ್ಟು ತೀವ್ರವಾಗಿತ್ತು..?
ಚೀನಾದ ಪ್ರಮುಖ ಉತ್ಪಾದನಾ ಮತ್ತು ರಫ್ತು ಕೇಂದ್ರವಾದ ಗುವಾಂಗ್ಡಾಂಗ್, ಮೇ ತಿಂಗಳಲ್ಲಿ ಸ್ಥಳೀಯವಾಗಿ ಹರಡಿದ ಡೆಲ್ಟಾ ರೂಪಾಂತರದ ಸೋಂಕನ್ನು ವರದಿ ಮಾಡಿದ ನಂತರ ದೇಶದ ಅತಿದೊಡ್ಡ ಡೆಲ್ಟಾ ಪ್ರಕರಣಗಳಾಗಿವೆ. ಡೆಲ್ಟಾ ಸೋಂಕುಗಳು ಗುವಾಂಗ್ಡಾಂಗ್ನ ರಾಜಧಾನಿ ಗುವಾಂಗ್ಝೌದಲ್ಲಿ 146 ಪ್ರಕರಣಗಳು ಮತ್ತು ದಕ್ಷಿಣ ಟೆಕ್ ಹಬ್ನ ಶೆನ್ಜೆನ್ ಹಾಗೂ ಹತ್ತಿರದ ಡೊಂಗ್ಗುವಾನ್ ನಗರದಿಂದ ಹಲವಾರು ಪ್ರಕರಣಗಳನ್ನು ಒಳಗೊಂಡಿವೆ. ಜೂನ್ 22 ರಿಂದ ಪ್ರಾಂತ್ಯದಲ್ಲಿ ಯಾವುದೇ ರೂಪಾಂತರದ ಹೊಸ ದೇಶೀಯ ಪ್ರಸರಣಗಳು ವರದಿಯಾಗಿಲ್ಲ.
ಡೆಲ್ಟಾ ತಡೆಯಲು ಚೀನಾ ಏನು ಮಾಡಿದೆ..?
126 ಮಿಲಿಯನ್ ಜನರನ್ನು ಹೊಂದಿರುವ ಗುವಾಂಗ್ಡಾಂಗ್, ಸಾಂಕ್ರಾಮಿಕದ ನಂತರ ವ್ಯಾಕ್ಸಿನೇಷನ್ ಅನ್ನು ಹೆಚ್ಚಿಸಿದೆ. ಮೇ 19 ರ ಹೊತ್ತಿಗೆ ಕೇವಲ 39.15 ಮಿಲಿಯನ್ ಡೋಸ್ ನೀಡಿದ್ದು, ಜೂನ್ 20 ರ ವೇಳೆಗೆ 101.12 ಮಿಲಿಯನ್ ಡೋಸ್ಗೆ ಏರಿಕೆಯಾಗಿದೆ.
ಗುವಾಂಗ್ಝೌ, ಶೆನ್ಜೆನ್ ಮತ್ತು ಡಾಂಗ್ಗುವಾನ್ ನೆರೆಹೊರೆಯ ಪ್ರದೇಶಗಳಲ್ಲಿ ಸೋಂಕು ಬಂದಿರುವ ಕಡೆ ಸೀಲ್ಡೌನ್ ಮಾಡಿದರು, ಸಂಪರ್ಕಿತರಿಗೆ ಹಾಗೂ ಹೆಚ್ಚು ಜನರಿಗೆ ಟೆಸ್ಟ್ ಮಾಡಿದರು. ಈ ಹಿಂದಿನ ಸಾಂಕ್ರಾಮಿಕಗಳಂತೆ ಡೆಲ್ಟಾ ರೂಪಾಂತರ ಹರಡಿದ ಬಳಿಕವೂ ಪ್ರೋಟೋಕಾಲ್ಗಳನ್ನು ಅನುಸರಿಸಿದರು.
ಪ್ರಾಂತ್ಯದಿಂದ ಹೊರಹೋಗುವವರು ಕೋವಿಡ್ -19 ನೆಗೆಟಿವ್ ಪರೀಕ್ಷಾ ಫಲಿತಾಂಶಗಳ ಪುರಾವೆಗಳನ್ನು ತೋರಿಸುವುದು ಅಗತ್ಯ. ಪರಿಣಾಮಕಾರಿ ನಿಯಂತ್ರಣ ಕ್ರಮಗಳಿಲ್ಲದೆ ಗುವಾಂಗ್ಝೌ ನಗರದಲ್ಲಿ 7.3 ಮಿಲಿಯನ್ ಜನರು ಆರಂಭಿಕ ಪ್ರಕರಣದ ನಂತರದ ಮೊದಲ 20 ರಿಂದ 30 ದಿನಗಳಲ್ಲಿ ಸೋಂಕಿಗೆ ಒಳಗಾಗುತ್ತಿದ್ದರು ಎಂದು ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಝಾಂಗ್ ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ