• Home
  • »
  • News
  • »
  • explained
  • »
  • Siddaramaiah Puppy Jibe: ರಾಜ್ಯ ರಾಜಕಾರಣದಲ್ಲೀಗ 'ನಾಯಿ' ಗದ್ದಲ! 'ಪಪ್ಪಿ ಫೈಟ್' ಶುರುವಾಗಿದ್ದು ಹೇಗೆ? ಎಲ್ಲಿಗೆ ಬಂದು ನಿಂತಿದೆ?

Siddaramaiah Puppy Jibe: ರಾಜ್ಯ ರಾಜಕಾರಣದಲ್ಲೀಗ 'ನಾಯಿ' ಗದ್ದಲ! 'ಪಪ್ಪಿ ಫೈಟ್' ಶುರುವಾಗಿದ್ದು ಹೇಗೆ? ಎಲ್ಲಿಗೆ ಬಂದು ನಿಂತಿದೆ?

ಮಾಜಿ ಸಿಎಂ ಸಿದ್ದರಾಮಯ್ಯ/ ಸಿಎಂ ಬಸವರಾಜ ಬೊಮ್ಮಾಯಿ

ಮಾಜಿ ಸಿಎಂ ಸಿದ್ದರಾಮಯ್ಯ/ ಸಿಎಂ ಬಸವರಾಜ ಬೊಮ್ಮಾಯಿ

ಅಸಲಿಗೆ ನಾಯಿ ಮರಿ ವಿವಾದ ಹೇಗೆ ಆರಂಭ ಆಯ್ತು? ಬಿಜೆಪಿ ನಾಯಕರು ಸಿದ್ದರಾಮಯ್ಯ ಅವರ ವಿರುದ್ಧ ಮುಗಿಬೀಳಲು ಕಾರಣವೇನು? ಸಿದ್ದರಾಮಯ್ಯ ಹೇಳಿಕೆಗೆ ಕೆಪಿಸಿಸಿ ಅಧ್ಯಕ್ಷರು (KPCC President) ಏನು ಹೇಳಿದರು ಅಂತ ಹೇಳ್ತೀವಿ.

  • News18 Kannada
  • Last Updated :
  • Bangalore [Bangalore], India
  • Share this:

ಬೆಂಗಳೂರು: ಸಿಎಂ ಬಸವರಾಜ ಬೊಮ್ಮಾಯಿ (CM Basavaraj Bommai) ಅವರನ್ನು ನಾಯಿ ಮರಿಗೆ (Puppy) ಹೋಲಿಕೆ ಮಾಡಿದ್ದ ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಅವರ ಹೇಳಿಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ (JP Nadda) ಅಸಮಾಧಾನ ವ್ಯಕ್ತಪಡಿಸಿದ್ದು, ಸಿದ್ದರಾಮಯ್ಯ ಅವರು ಇಂತಹ ಹೇಳಿಕೆ ನೀಡುವ ಕರ್ನಾಟಕ ರಾಜಕಾರಣವನ್ನು (Karnataka Politics) ಕೆಳಮಟ್ಟಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಅವರು ಅಂಥ ಹೇಳಿಕೆ ಹೇಗೆ ನೀಡಲು ಸಾಧ್ಯ. ಅವರ ಹೇಳಿಕೆ ಕೇಳಿ ಬಹಳ ದುಃಖ ಆಯ್ತು ಎಂದು ಹೇಳಿದ್ದಾರೆ. ಇತ್ತ ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿರುವ ಸಿದ್ದರಾಮಯ್ಯ ಅವರು, ಧೈರ್ಯ ಇಲ್ಲದವರು ಎಂದು ಹೇಳುವ ಅರ್ಥದಲ್ಲಿ ಹಾಡು ಭಾಷೆಯಲ್ಲಿ ನಾಯಿ ಮರಿ ಎಂದಿದ್ದೇ ಹೊರತು ಮುಖ್ಯಮಂತ್ರಿ (Chief Minister) ವ್ಯಕ್ತಿಗತವಾಗಿ ನಿಂದಿಸುವ ದುರುದ್ದೇಶವಿಲ್ಲ ಎಂದಿದ್ದರು. ಅಸಲಿಗೆ ನಾಯಿ ಮರಿ ವಿವಾದ ಹೇಗೆ ಆರಂಭ ಆಯ್ತು? ಬಿಜೆಪಿ ನಾಯಕರು ಸಿದ್ದರಾಮಯ್ಯ ಅವರ ವಿರುದ್ಧ ಮುಗಿಬೀಳಲು ಕಾರಣವೇನು? ಸಿದ್ದರಾಮಯ್ಯ ಹೇಳಿಕೆಗೆ ಕೆಪಿಸಿಸಿ ಅಧ್ಯಕ್ಷರು (KPCC President) ಏನು ಹೇಳಿದರು ಅಂತ ಹೇಳ್ತೀವಿ ಓದಿ.


ಸಿದ್ದರಾಮಯ್ಯ ಏನು ಹೇಳಿದ್ರು?


ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿಯಲ್ಲಿ ಏರ್ಪಡಿಸಿದ್ದ ಮಾಲವಿ ಜಲಾಶಯದ ವಿಜಯೋತ್ಸವ ಹಾಗೂ ಸಾರ್ಥಕ ನಮನ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಸಿದ್ದರಾಮಯ್ಯ ಅವರು ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು. ಅಪರೇಷನ್​ ಕಮಲ ಮೂಲಕ ನೀವು ಅಧಿಕಾರಕ್ಕೆ ಬಂದಿದ್ದೀರಿ.


siddaramaiah given clarification on his controversial statement about cm mrq
ಸಿದ್ದರಾಮಯ್ಯ, ಮಾಜಿ ಸಿಎಂ


ಸಿಎಂ ಬೊಮ್ಮಾಯಿ ಅವರೇ ನಿಮಗೆ ತಾಕುತ್ತು ಇದ್ದರೆ, ರಾಜ್ಯಕ್ಕೆ ನೀಡಬೇಕಾಗಿರುವ 5,495 ಕೋಟಿ ರೂಪಾಯಿ ವಿಶೇಷ ಅನುದಾನವನ್ನು ತೆಗೆದುಕೊಂಡು ಬನ್ನಿ. ಆದರೆ ರಾಜ್ಯದಿಂದ ಆಯ್ಕೆಯಾಗಿರುವ 25 ಜನ ಸಂಸದರಿದ್ದರೂ ಏನು ಪ್ರಯೋಜನ ಆಗುತ್ತಿಲ್ಲ. ನಿಮಗೆ ಧಮ್ ಇದ್ರೆ, ತಾಖತ್ ಇದ್ರೆ ಅನುದಾನ ತೆಗೆದುಕೊಂಡು ಬನ್ನಿ. ಬಸವರಾಜ ಬೊಮ್ಮಾಯಿ, ನರೇಂದ್ರ ಮೋದಿ ಅವರ ಮುಂದೇ ನಾಯಿ ಮರಿ ತರಾ ಇರುತ್ತೀರಿ. ಗಡಗಡ ಅಂತ ನಡುಗುತ್ತೀರಿ ಎಂದು ಕಿಡಿಕಾರಿದ್ದರು.


ಇದನ್ನೂ ಓದಿ: Vidhanasoudha: ವಿಧಾನಸೌಧದ ಗೇಟ್ ಬಳಿ ಸಿಕ್ಕ ‘10 ಲಕ್ಷ’ ಕೇಸ್​ಗೆ ಟ್ವಿಸ್ಟ್; ಆರೋಪಿ ಜಗದೀಶ್​​ಗೆ ಷರತ್ತು ಬದ್ದ ಜಾಮೀನು ಮಂಜೂರು


ಬಿಜೆಪಿ ಸರ್ಕಾರ ಎಲ್ಲಾ ನೀರಾವರಿ ಯೋಜನೆಗಳನ್ನು ನಿರ್ಲಕ್ಷ್ಯ ಮಾಡಿದೆ. 2020ರ ಫೆಬ್ರವರಿಯಲ್ಲೇ ಮಹದಾಯಿ ಯೋಜನೆಯ ಗೆಟೆಟ್​ ನೋಟಿಫಿಕೇಶನ್​ ಆಗಿತ್ತು, ಆಗ 93 ಕೋಟಿ ರೂಪಾಯಿ ಇದ್ದ ಯೋಜನಾ ವೆಚ್ಚ ಈಗ 1,677 ಕೋಟಿ ರೂಪಾಯಿ ಏರಿದೆ. ನಮ್ಮ ಪಕ್ಷ ಮುಂದಿನ ಚುನಾವಣೆಯಲ್ಲಿ ಗೆಲುವು ಪಡೆದು ಅಧಿಕಾರಕ್ಕೆ ಬರುತ್ತದೆ. ನಮ್ಮ ಅವಧಿಯಲ್ಲಿ ರಾಜ್ಯದ ಎಲ್ಲಾ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸುತ್ತೇವೆ ಎಂದು ಆಶ್ವಾಸನೆ ನೀಡಿದ್ದರು.


cm basavaraj bommai reacts mahadayi dpr saklb mrq
ಬಸವರಾಜ ಬೊಮ್ಮಾಯಿ, ಸಿಎಂ


ಸಿಎಂ ಬೊಮ್ಮಾಯಿ ಏನು ಹೇಳಿದ್ದರು?


ನಾಯಿ ನಿಯತ್ತಿನ ಪ್ರಾಣಿ, ಜನರಿಗೆ ನಾನು ನಿಯತ್ತಾಗಿ ಕೆಲಸ ಮಾಡ್ತಿದ್ದೀನಿ, ನಿಯತ್ತಿನ ಗುಣವನ್ನ ಜನರ ಪರವಾಗಿ ಉಳಿಸಿಕೊಂಡಿದ್ದೇನೆ ಅಂತ ಸಿಎಂ ಬೊಮ್ಮಾಯಿ ತಿರುಗೇಟು ನೀಡಿದ್ದರು.


ಸೋನಿಯಾ ಎದುರು ಸಿದ್ದರಾಮಯ್ಯ ಇಲಿ, ಬೆಕ್ಕು, ಜಿರಳೆ


ರಾಜ್ಯದ ಮುಖ್ಯಮಂತ್ರಿಯನ್ನ ನಾಯಿಮರಿ ಅಂತ ಕರೆದಿರುವುದು ಸಿದ್ದರಾಮಯ್ಯ ಅವರ ಸಂಸ್ಕೃತಿ ತೋರಿಸುತ್ತದೆ. ಮುಂದಿನ‌ಪೀಳಿಗೆಗೆ ಮಾದರಿಯಾಗಬೇಕಿದ್ದ ಸಿದ್ದರಾಮಯ್ಯ ಈ ರೀತಿ ಮಾತನಾಡಿರುವುದು ದುರದೃಷ್ಟಕರ ಅಂತ ಶ್ರೀರಾಮುಲು ಹೇಳಿದ್ದಾರೆ. ಸಿದ್ದರಾಮಯ್ಯ ಬಹಿರಂಗವಾಗಿ ಬಿಜೆಪಿಯ ಕ್ಷಮೆ ಕೇಳಬೇಕು. ಸೋನಿಯಾ ಗಾಂಧಿ ಮುಂದೆ ಸಿದ್ದರಾಮಯ್ಯ ಇಲಿ. ಬೆಕ್ಕು. ಜಿರಳೆ ಹಾಗೆ ಇರುತ್ತಾರೆ ಅಂತ ನಾವು ಹೇಳಲ್ಲ ಅಂತಾ ಕಾಲೆಳೆದಿದ್ದರು.


ED summons KPCC President DK Shivakumar in money laundering case mrq
ಡಿಕೆ ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ


ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದೇನು?


ಸಿದ್ದರಾಮಯ್ಯನವರ ಹೇಳಿಕೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ ನೀಡಿ, ಸಿದ್ದರಾಮಯ್ಯ ಮುಖ್ಯಮಂತ್ರಿಯನ್ನ ನಾಯಿ ಮರಿಗೆ ಹೋಲಿಸಿ ಮಾತನಾಡಿರೋದು ನನಗೆ ಗೊತ್ತಿಲ್ಲ. ಆದರೆ ನಮ್ಮ‌ ಮನೆಯಲ್ಲೂ ನಾಯಿ ಇದೆ. ನಾಯಿ ಬಗ್ಗೆ ನನಗೆ ಗೌರವ ಇದೆ. ಕಳ್ಳರನ್ನ ಹಿಡಿಯೋಕೆ ರಕ್ಷಣೆಗೆ ನಾಯಿ‌ಬೇಕು. ಕಷ್ಟ ಸುಖಕ್ಕೆ‌ ನಾಯಿ ಬೇಕು. ನಾಯಿ ಬಹಳ ಪ್ರಿಯವಾದ ಪ್ರಾಣಿ ಅಂತ ಹೇಳಿದ್ದರು.


ಇದನ್ನೂ ಓದಿ: Siddaramaiah: ಮೋದಿ ಎದುರು ತುಟಿ ಬಿಚ್ಚಲಾಗದ ಸಿಎಂ ಬೊಮ್ಮಾಯಿಯನ್ನ ಹುಲಿ-ಸಿಂಹಕ್ಕೆ ಹೋಲಿಸಲು ಆಗುತ್ತಾ? ಮಾಜಿ ಸಿಎಂ ಸಿದ್ದರಾಮಯ್ಯ


ಸಿದ್ದರಾಮಯ್ಯ ಹೇಳಿಕೆಯನ್ನು ಸಮರ್ಥಿಸಿದ್ದ ಕುಮಾರಸ್ವಾಮಿ


ಸಿಎಂ ಬೊಮ್ಮಾಯಿ, ಪ್ರಧಾನಿ ನರೇಂದ್ರ ಮೋದಿ ಅವರ ಎದುರು ನಾಯಿ ಮರಿ ತರ ಗಡಗಡ ಅಂತ ನಡುಗುತ್ತಾರೆ ಎಂಬ ಸಿದ್ದರಾಮಯ್ಯ ಹೇಳಿಕೆಯನ್ನು ಸಮರ್ಥಿಸಿದ ಕುಮಾರಸ್ವಾಮಿ ಅವರು, ಅವರು ಹಾಗೇ ಅಂತಾ ಸಿದ್ದರಾಮಯ್ಯಗೆ ಇವಾಗ ಗೊತ್ತಾಗಿದೆ. ನಾನು ಯಾವತ್ತೋ ಈ ಮಾತನ್ನು ಹೇಳಿದ್ದೀನಿ ಎಂದು ಹೇಳಿದ್ದರು.


ಹೆಚ್​​.ಡಿ ಕುಮಾರಸ್ವಾಮಿ, ಮಾಜಿ ಸಿಎಂ


ತಮ್ಮ ಹೇಳಿಕೆಯನ್ನು ಸಮರ್ಥಿಸಿದ ಸಿದ್ದರಾಮಯ್ಯ


ಇನ್ನು, ತಮ್ಮ ಹೇಳಿಕೆಗೆ ವಿರೋಧ ವ್ಯಕ್ತವಾಗುತ್ತಿದಂತೆ ಸ್ಪಷ್ಟನೆ ನೀಡಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರು, ಸಿಎಂ ಬೊಮ್ಮಾಯಿ ಬಗ್ಗೆ ನಾನು ಲಘುವಾಗಿ ಮಾತನಾಡಿಲ್ಲ ಅಂತ ಸಮಜಾಯಿಷಿ ನೀಡಿದ್ದಾರೆ. ಪ್ರಧಾನಿ ಮುಂದೆ ನಾಯಿಮರಿ ಇದ್ದಂಗೆ ಇರ್ತಾರೆ ಅಂತ ಹೇಳಿದ್ದೇನೆ. ನಮ್ಮ ಹಳ್ಳಿ ಭಾಷೆಯಲ್ಲಿ ಹಾಗೇ ಮಾತನಾಡೋದು, ಅವರು ಧಮ್ ಇದ್ರೆ.. ತಾಕತ್ ಇದ್ರೆ ಅವರು ಮಾತಾಡಲ್ವಾ? ನೀವು ಅಧಿಕಾರಕ್ಕೆ ಬಂದ ಮೇಲೆ ಕೇಂದ್ರದಿಂದ ನಮಗೆ ಬರುವ ಪಾಲು ಕಡಿಮೆ ಆಯ್ತು. ಎಲ್ಲಿ ಹೋಯ್ತು ಬೊಮ್ಮಾಯಿ ನಿಮ್ಮ ತಾಕತ್ತು ಧಮ್ಮು ಎಂದು ಪ್ರಶ್ನಿಸಿದರು.

Published by:Sumanth SN
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು