Explained: ಹಕ್ಕಾನಿ ಅನ್ನೋ ಈ ನೆಟ್‌ವರ್ಕ್‌ ಇರೋದ್ರಿಂದಲೇ ತಾಲಿಬಾನ್​ ಅಷ್ಟೊಂದು ಶಕ್ತಿಶಾಲಿ, ಭಾರತ ಕೂಡಾ ಎಚ್ಚರದಿಂದಿರಬೇಕು!

Taliban in Afghanistan: ಮಾದಕವಸ್ತು ವ್ಯಾಪಾರ (Drugs), ಪಾಕ್‌ ಬೆಂಬಲ, ಶಸ್ತ್ರಾಸ್ತ್ರಗಳ ಲೂಟಿ, ಹಫ್ತಾ ವಸೂಲಿ ಮುಂತಾದವುಗಳಿಂದ ತಾಲಿಬಾನ್‌ ಶಕ್ತಿಶಾಲಿಯಾಗಿದೆ. ಇದರ ಜತೆಗೆ ಹಕ್ಕಾನಿ ನೆಟ್‌ವರ್ಕ್‌ (Haqqani Network) ತಾಲಿಬಾನ್‌ನ ಹೋರಾಟದ ಬೆನ್ನೆಲುಬಾಗಿ ನಿಂತಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:

ತಾಲಿಬಾನ್‌ (Taliban) ಅಫ್ಘಾನಿಸ್ತಾನವನ್ನು ನಿಯಂತ್ರಣ ಸಾಧಿಸಿದ ನಂತರ ತಾಲಿಬಾನ್‌ ಉಗ್ರ ಸಂಘಟನೆ ಅಷ್ಟು ಶಕ್ತಿಯುತವಾಗುತ್ತಿರುವುದು ಹೇಗೆ, ಹಣ ಒದಗಿಸುತ್ತಿರುವುದು ಯಾರು, ಬೆಂಬಲ ನೀಡುತ್ತಿರುವವರು ಯಾರು ಎಂಬೆಲ್ಲ ಪ್ರಶ್ನೆಗಳು ನಿಮ್ಮ ಮನಸ್ಸಲ್ಲಿ ಮೂಡುತ್ತಿರಬಹುದು. ಮಾದಕವಸ್ತು ವ್ಯಾಪಾರ, ಪಾಕ್‌ ಬೆಂಬಲ, ಶಸ್ತ್ರಾಸ್ತ್ರಗಳ ಲೂಟಿ, ಹಫ್ತಾ ವಸೂಲಿ ಮುಂತಾದವುಗಳಿಂದ ತಾಲಿಬಾನ್‌ ಶಕ್ತಿಶಾಲಿಯಾಗಿದೆ. ಇದರ ಜತೆಗೆ ಹಕ್ಕಾನಿ ನೆಟ್‌ವರ್ಕ್‌ (Haqqani Network) ತಾಲಿಬಾನ್‌ನ ಹೋರಾಟದ ಬೆನ್ನೆಲುಬಾಗಿ ನಿಂತಿದೆ. ಹಕ್ಕಾನಿ ನೆಟ್‌ವರ್ಕ್‌ ತಾಲಿಬಾನ್‌ ಗುಂಪಿನ ಭಾಗವಾಗಿದ್ದರೂ, ಅವರು ತಮ್ಮದೇ ಸಂಘಟನೆ ಹೊಂದಿದ್ದು, ಹಲವರಿಗೆ ಆಜ್ಞೆ ಮಾಡುತ್ತಾರೆ. ಈಗ, ಕಾಬೂಲ್ ಪತನದ ನಂತರ, ಹಕ್ಕಾನಿ ನೆಟ್ವರ್ಕ್‌ನ ಹಿರಿಯ ನಾಯಕರು ಅಫ್ಘಾನಿಸ್ತಾನ ರಾಜಧಾನಿಗೆ ಬಂದಿಳಿದಿದ್ದಾರೆ. ಅಲ್ಲಿ ಅವರು ನಗರದ ಭದ್ರತೆಯ ಉಸ್ತುವಾರಿ ವಹಿಸಿಕೊಂಡಿದ್ದು, ಮುಂದಿನ ಸರ್ಕಾರವನ್ನು ರಚಿಸುವ ಮಾತುಕತೆಯ ಭಾಗವಾಗಿದ್ದಾರೆ. ಇದು ಜಾಗತಿಕ ಸಮುದಾಯವನ್ನು ವಿಶೇಷವಾಗಿ ಭಾರತವನ್ನು ಆತಂಕಕ್ಕೀಡುಮಾಡಿದ್ದು, ತನ್ನ ಹೊಸ ಆಡಳಿತಗಾರರ ಅಡಿಯಲ್ಲಿ ದೇಶವು ತೆಗೆದುಕೊಳ್ಳಬಹುದಾದ ನಿರ್ದೇಶನದ ಬಗ್ಗೆ ಎಚ್ಚರದಿಂದಿರಬೇಕು. ಹಾಗಾದರೆ, ಹಕ್ಕಾನಿಗಳು ಯಾರು, ಮತ್ತು ಅವರನ್ನು ತುಂಬಾ ಭಯಪಡುವಂತೆ ಮಾಡುವುದು ಯಾವುದು ಅಂತೀರಾ.. ಮುಂದೆ ಓದಿ.


ಅಫ್ಘಾನಿಸ್ತಾನದಲ್ಲಿ ಹಕ್ಕಾನಿ ನೆಟ್‌ವರ್ಕ್‌ನ ಪ್ರಾಧಾನ್ಯತೆ ಆತಂಕದ ಕಿಡಿ ಹೊತ್ತಿಸಿರುವುದೇಕೆ..?
ಅಫ್ಘಾನಿಸ್ತಾನವನ್ನು ತಾಲಿಬಾನ್ ಸ್ವಾಧೀನಪಡಿಸಿಕೊಂಡ ನಂತರ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸಭೆಯಲ್ಲಿ, ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್, "ಅಫ್ಘಾನಿಸ್ತಾನದಲ್ಲಿ ನಡೆಯುತ್ತಿರುವ ಘಟನೆಗಳು ಪ್ರಾದೇಶಿಕ ಮತ್ತು ಅಂತಾರಾಷ್ಟ್ರೀಯ ಭದ್ರತೆಗಾಗಿ ಅವುಗಳ ಪರಿಣಾಮಗಳ ಬಗ್ಗೆ ಜಾಗತಿಕ ಕಾಳಜಿಯನ್ನು ಹೇಗೆ ಹೆಚ್ಚಿಸಿವೆ" ಎಂಬ ವಿಚಾರದ ಬಗ್ಗೆ ಜಾಗತಿಕವಾಗಿ ಬೆಳಕು ಚೆಲ್ಲಲು ಪ್ರಯತ್ನಿಸಿದರು. ಈಗ ತಾಲಿಬಾನ್ ಮತ್ತೊಮ್ಮೆ ಭಾರತದ ನೆರೆಹೊರೆಯಲ್ಲಿ ಅಧಿಕಾರವನ್ನು ವಶಪಡಿಸಿಕೊಂಡಿದೆ. ಕೊನೆಯ ಬಾರಿ ಅವರು ಹಾಗೆ ಮಾಡಿದಾಗ, 1996-2001ರ ಅವಧಿಯಲ್ಲಿ, ಭಾರತವು ಅಫ್ಘಾನಿಸ್ತಾನದಲ್ಲಿ ತಮ್ಮ ಸರ್ಕಾರವನ್ನು ಗುರುತಿಸಲು ನಿರಾಕರಿಸಿತು. ಈ ಹಿನ್ನೆಲೆ ಈ ಪ್ರದೇಶದಲ್ಲಿ ಭಯೋತ್ಪಾದಕ ಚಟುವಟಿಕೆಗಳ ಸಂಭಾವ್ಯ ಪುನರ್ವಸತಿಯ ಸುತ್ತ ಆತಂಕವು ಕೇಂದ್ರೀಕೃತವಾಗಿದೆ.


ಇದನ್ನೂ ಓದಿ: Afghanistan Crisis: 'ಬೇರೆ ಯಾವುದೇ ದಾರಿ ಇಲ್ಲ': ತಾಲಿಬಾನಿಗಳಿಗೆ ಶರಣಾದ ಅಫ್ಘನ್ ಸೈನಿಕರ ಕೊನೆಯ ಮಾತು..!

"ನಿಷೇಧಿತ ಹಕ್ಕಾನಿ ನೆಟ್ವರ್ಕ್‌ನ ಹೆಚ್ಚಿದ ಚಟುವಟಿಕೆಗಳು ಈ ಬೆಳೆಯುತ್ತಿರುವ ಆತಂಕವನ್ನು ಸಮರ್ಥಿಸುತ್ತವೆ. ಅದು ಅಫ್ಘಾನಿಸ್ತಾನದಲ್ಲಾಗಲಿ ಅಥವಾ ಭಾರತದ ವಿರುದ್ಧವಾಗಲೀ ಲಷ್ಕರ್-ಎ-ತೊಯ್ಬಾ ಮತ್ತು ಜೈಶ್-ಎ-ಮೊಹಮ್ಮದ್ನಂತಹ ಉಗ್ರ ಸಂಘಟನೆಗಳು ರ್ಭಯ ಮತ್ತು ಪ್ರೋತ್ಸಾಹದೊಂದಿಗೆ ಕಾರ್ಯನಿರ್ವಹಿಸುತ್ತಲೇ ಇರುತ್ತವೆ'' ಎಂದು ಜೈಶಂಕರ್ UNSC ಸಭೆಯಲ್ಲಿ ಹೇಳಿದರು. ಹಾಗೂ, " ನಾವು ಎಂದಿಗೂ ಭಯೋತ್ಪಾದಕರಿಗೆ ಬೆಂಬಲ ಅಥವಾ ಆಶ್ರಯ ನೀಡಬಾರದು ಅಥವಾ ಅವರ ಸಂಪನ್ಮೂಲಗಳ ಸಂಗ್ರಹವನ್ನು ಕಡೆಗಣಿಸುವಂತಿಲ್ಲ'' ಎಂದೂ ವಿದೇಶಾಂಗ ಸಚಿವರು ಹೇಳಿದ್ದರು.


ಇನ್ನು, ಅವರ ಈ ಹೇಳಿಕೆ ಪರೋಕ್ಷವಾಗಿ ಪಾಕಿಸ್ತಾನವನ್ನು ಉಲ್ಲೇಖಿಸಿದಂತೆ ಕಂಡುಬರುತ್ತದೆ, ಹಾಗೂ ಪಾಕ್‌ ಭಾರತವನ್ನು ಗುರಿಯಾಗಿಸುವ ಹಲವಾರು ಭಯೋತ್ಪಾದಕ ಸಂಘಟನೆಗಳಿಗೆ ನೆಲೆಯಾಗಿದೆ ಎಂದು ತಿಳಿದುಬಂದಿದೆ. ಅಲ್ಲದೆ, ಪಾಕಿಸ್ತಾನದ ಇಂಟರ್ ಸರ್ವೀಸಸ್ ಇಂಟೆಲಿಜೆನ್ಸ್ (ಐಎಸ್‌ಐ) ಹಕ್ಕಾನಿ ನೆಟ್‌ವರ್ಕ್‌ನ ಪೋಷಕರೆಂದು ಪರಿಗಣಿಸಲಾಗಿದೆ. ಹಕ್ಕಾನಿ ನೆಟ್‌ವರ್ಕ್‌ ಅನ್ನು ವಿಶ್ವಸಂಸ್ಥೆ ಹಾಗೂ ಅಮೆರಿಕವೂ ಭಯೋತ್ಪಾದಕ ಗುಂಪು ಎಂದು ಪರಿಗಣಿಸಿದೆ ಹಾಗೂ ತಾಲಿಬಾನ್‌ಗೆ ಇದು ಬೆಂಬಲ ನೀಡುತ್ತಿದೆ.

ಹಕ್ಕಾನಿ ನೆಟ್‌ವರ್ಕ್‌ ಎಂದರೇನು..?
''ಹಕ್ಕಾನಿ ನೆಟ್ವರ್ಕ್ ತಾಲಿಬಾನ್‌ನ ಅತ್ಯಂತ ಯುದ್ಧ-ಸಿದ್ಧ ಪಡೆಗಳಾಗಿ ಉಳಿದಿದೆ" ಎಂದು ಜೂನ್‌ನಲ್ಲಿ ಯುಎನ್ ವರದಿ ಹೇಳುತ್ತದೆ. ಮತ್ತು ಸಂಕೀರ್ಣ ದಾಳಿಗಳಲ್ಲಿ ಪರಿಣತಿ ಹೊಂದಿರುವ ಮತ್ತು ಸುಧಾರಿತ ಸ್ಫೋಟಕ ಸಾಧನ ಮತ್ತು ರಾಕೆಟ್ ನಿರ್ಮಾಣದಂತಹ ತಾಂತ್ರಿಕ ಕೌಶಲ್ಯಗಳನ್ನು ಒದಗಿಸುವ ಸದಸ್ಯರ ಅತ್ಯಂತ ನುರಿತ ಮೂಲ ಹೊಂದಿದೆ ಎಂದು ವರದಿಯಾಗಿದೆ. ಹಕ್ಕಾನಿ ನೆಟ್ವರ್ಕ್ ತಾಲಿಬಾನ್‌ಗೆ ಸಂಯೋಜಿತವಾಗಿದ್ದರೂ, ಅರೆ ಸ್ವಾಯತ್ತ ಸ್ಥಾನಮಾನವನ್ನು ಉಳಿಸಿಕೊಂಡಿದೆ ಮತ್ತು ನೇರವಾಗಿ ತಾಲಿಬಾನ್ ಸುಪ್ರೀಂ ಕೌನ್ಸಿಲ್‌ಗೆ ವರದಿ ಮಾಡುತ್ತಿದೆ ಎಂದೂ ಈ ವರದಿ ಹೇಳುತ್ತದೆ.


ಇದನ್ನೂ ಓದಿ: Afghanistan Crisis: ನಮ್ಮ ಕತೆ ಏನಾದ್ರೂ ಆಗ್ಲಿ, ಮಕ್ಕಳಾದರೂ ಬದುಕಲಿ ಎಂದು ತಂತಿ ಬೇಲಿಯಾಚೆ ಮಕ್ಕಳನ್ನು ಎಸೆಯುತ್ತಿದ್ದಾರೆ ಅಫ್ಘನ್ ಜನ

ವಾಸ್ತವವಾಗಿ, ಹಕ್ಕಾನಿ ನೆಟ್‌ವರ್ಕ್‌ನ ನಾಯಕ ಸಿರಾಜುದ್ದೀನ್ ಹಕ್ಕಾನಿ ನಾಯಕತ್ವ ಭಾಗದಲ್ಲಿ ತಾಲಿಬಾನ್ ಸರ್ವೋಚ್ಚ ನಾಯಕ ಅಮೀರ್ ಅಲ್-ಮುಮಿನಿನ್ ಹೈಬತುಲ್ಲಾ ಅಖುಂದ್ಝಾದಾ ನಂತರದ ಸ್ಥಾನ ಪಡೆಯುತ್ತಾರೆ.

1979ರಲ್ಲಿ ಅಫ್ಘಾನಿಸ್ತಾನದಲ್ಲಿ ಆರಂಭವಾದ ಸೋವಿಯತ್‌ ಆಕ್ರಮಣದ ವಿರುದ್ಧ ಹೋರಾಡಿದ ಅಫ್ಘಾನ್ ಪ್ರತಿರೋಧದ ಪ್ರಮುಖ ನಾಯಕರಲ್ಲಿ ಒಬ್ಬರಾದ ಸಿರಾಜುದ್ದೀನ್ ತಂದೆ ಜಲಾಲುದ್ದೀನ್, ಹಕ್ಕಾನಿ ನೆಟ್ವರ್ಕ್ ಅನ್ನು ರಚಿಸಿದರು. ಜಲಾಲುದ್ದೀನ್‌ ಆ ವೇಳೆ ಅಫ್ಘಾನಿಸ್ತಾನದ ಪ್ರತಿರೋಧಕ್ಕಾಗಿ ಶಸ್ತ್ರಾಸ್ತ್ರಗಳು ಮತ್ತು ಹಣ ಸಂಗ್ರಹಿಸಲು ಅಮೆರಿಕದ ಬೆಂಬಲ ತೆಗೆದುಕೊಂಡಿದ್ದರು. ಅಲ್ಲದೆ, ಅಮೆರಿಕದ 9/11 ದಾಳಿಯ ಪ್ರಮುಖ ರೂವಾರಿ ಒಸಾಮಾ ಬಿನ್ ಲಾಡೆನ್‌ಗೆ ಆ ಸಮಯದಲ್ಲಿ ಹತ್ತಿರವಾಗಿದ್ದರು. ಸೋವಿಯತ್ ವಿರುದ್ಧ ಹೋರಾಡಲು ಜಿಹಾದ್‌ಗೆ ಕರೆ ನೀಡಿದಾಗ ಲಾಡೆನ್‌ ಅಫ್ಘಾನಿಸ್ತಾನಕ್ಕೆ ಆಗಮಿಸಿದ್ದರು.


ಸೋವಿಯತ್ ಪಡೆಗಳ ನಿರ್ಗಮನದ ನಂತರ ಮತ್ತು ಅಫ್ಘಾನಿಸ್ತಾನದಲ್ಲಿ ನಿಯಂತ್ರಣಕ್ಕಾಗಿ ಅಫ್ಘಾನ್ ಸೇನಾಧಿಕಾರಿಗಳ ನಡುವೆ ಸ್ಪರ್ಧೆಯ ನಂತರ, ತಾಲಿಬಾನ್‌ ಗುಂಪು 1996ರಲ್ಲಿ ಅಧಿಕಾರ ವಶಪಡಿಸಿಕೊಂಡಾಗ ಜಲಾಲುದ್ದೀನ್ ಅಫ್ಘಾನಿಸ್ತಾನದ ತಾಲಿಬಾನ್ ಸರ್ಕಾರದಲ್ಲಿ ಮಂತ್ರಿಯಾದರು. ಹಾಗೂ ಅಲ್‌ಖೈದಾ ಉಗ್ರ ಸಂಘಟನೆ ಸ್ಥಾಪಿಸಿದ್ದ ಬಿನ್‌ ಲಾಡೆನ್‌ನೊಂದಿಗೆ ತಮ್ಮ ಸಂಬಂಧ ಉಳಿಸಿಕೊಂಡರು. ಆಗಲೇ ಅಲ್‌ಖೈದಾ ಅಮೆರಿಕ ವಿರುದ್ಧ 9/11 ದಾಳಿಗೆ ಸಂಚು ರೂಪಿಸುತ್ತಿತ್ತು.


ಇನ್ನು, ಭಯೋತ್ಪಾದಕ ಗುಂಪುಗಳನ್ನು ಅಫ್ಘಾನ್‌ ನೆಲದಲ್ಲಿ ಕಾರ್ಯನಿರ್ವಹಿಸಲು ಅನುಮತಿಸುವುದಿಲ್ಲ ಎಂದು ತಾಲಿಬಾನ್‌ ಯುಎಸ್‌ನೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಅಮೆರಿಕ ಸೈನ್ಯವನ್ನು ಅಫ್ಘಾನಿಸ್ತಾನದಿಂದ ಹಿಂತೆಗೆದುಕೊಳ್ಳಲು ತಾಲಿಬಾನ್‌ ಈ ಆಶ್ವಾಸನೆ ನೀಡಿದರೂ, ಈಗಲೂ ಸಹ ಅಲ್‌ಖೈದಾ ಹಾಗೂ ಇತರೆ ಉಗ್ರ ಸಂಘಟನೆಗಳೊಂದಿಗೆ ಅದರ ಸಂಬಂಧಗಳು ಇನ್ನೂ ಗಟ್ಟಿಯಾಗಿ ಬೇರೂರಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: Afghanistan ನಲ್ಲಿ ಷರಿಯಾ ಕಾನೂನು: ಹೆಣ್ಮಕ್ಕಳು ಶಾಲೆಗೆ ಹೋಗುವಂತಿಲ್ಲ, ಸಾಯುತ್ತಿದ್ರೂ ಪುರುಷ ವೈದ್ಯರ ಬಳಿ ಹೋಗುವಂತಿಲ್ಲ..ಹೇಗಿರಲಿದೆ ಅವರ ಬದುಕು?

"ಹಕ್ಕಾನಿ ನೆಟ್ವರ್ಕ್ ಪ್ರಾದೇಶಿಕ ವಿದೇಶಿ ಭಯೋತ್ಪಾದಕ ಗುಂಪುಗಳೊಂದಿಗೆ ಸಂಪರ್ಕ ಮತ್ತು ಸಹಕಾರದ ಕೇಂದ್ರವಾಗಿ ಉಳಿದಿದೆ ಮತ್ತು ಇದು ತಾಲಿಬಾನ್ ಹಾಗೂ ಅಲ್‌ ಖೈದಾ ನಡುವಿನ ಪ್ರಾಥಮಿಕ ಸಂಪರ್ಕವಾಗಿದೆ" ಎಂದು ಯುಎನ್ ವರದಿ ಹೇಳಿದೆ. 2018 ರಲ್ಲಿ ಜಲಾಲುದ್ದೀನ್ ಸಾವಿನ ನಂತರ, ಹಕ್ಕಾನಿ ನೆಟ್ವರ್ಕ್ ಈಗ ಸಿರಾಜುದ್ದೀನ್ ನೇತೃತ್ವದಲ್ಲಿದೆ. ಸಿರಾಜುದ್ದೀನ್‌ ವಿಶಾಲವಾದ ಅಲ್ ಖೈದಾ ನಾಯಕತ್ವದ ಸದಸ್ಯ ಎಮದೂ ನಿರ್ಣಯಿಸಲಾಗುತ್ತದೆ. ಆದರೆ ಅಲ್ ಖೈದಾ ಮೂಲ ನಾಯಕತ್ವದ ಸದಸ್ಯ ಅಲ್ಲ ಎಂದೂ ವಿಶ್ವಸಂಸ್ಥೆಯ ವರದಿ ಹೇಳುತ್ತದೆ.


ಪಾಕಿಸ್ಥಾನದೊಂದಿಗೆ ಹಕ್ವಾನಿ ನೆಟ್‌ವರ್ಕ್ ಸಹಯೋಗ ಹೇಗಿದೆ..?
"ಹಕ್ಕಾನಿ ನೆಟ್ವರ್ಕ್ ಪ್ರಾಥಮಿಕವಾಗಿ ಪಾಕಿಸ್ತಾನದ ಉತ್ತರ ವಜೀರಿಸ್ತಾನದಲ್ಲಿ ನೆಲೆಗೊಂಡಿದೆ ಮತ್ತು ಝಡ್ರಾನ್‌ ಬುಡಕಟ್ಟಿನ ಸದಸ್ಯರಿಂದ ಕೂಡಿದೆ'' ಎಂದು ಯುಎಸ್ ಗುಪ್ತಚರ ವರದಿಗಳು ಹೇಳುತ್ತವೆ. ''ಈ ಗುಂಪು ಅಫ್ಘಾನಿಸ್ತಾನದ "P2K" ಎಂದು ಕರೆಯಲ್ಪಡುವ ಪ್ರದೇಶಗಳಾದ ಖೋಸ್ಟ್, ಪಾಕ್ತಿಕಾ ಮತ್ತು ಪಾಕ್ತಿಯಾ ಪ್ರಾಂತ್ಯಗಳಲ್ಲಿ 3,000ರಿಂದ 10,000ವರೆಗಿನ ಸಾಂಪ್ರದಾಯಿಕ ಸಶಸ್ತ್ರ ಹೋರಾಟಗಾರರ ವಿಶಾಲ ಬಲವನ್ನು ನಿರ್ವಹಿಸುತ್ತದೆ" ಎಂದು ಯುಎನ್‌ ವರದಿ ಹೇಳುತ್ತದೆ.


"ಅಲ್-ಖೈದಾ ಹಿರಿಯ ನಾಯಕತ್ವದ ಹೊರತಾಗಿಯೂ ಪಾಕಿಸ್ತಾನದ ಸೇನೆಯು ಉತ್ತರ ವಜೀರಿಸ್ತಾನದಲ್ಲಿ ಮಿಲಿಟರಿ ಕಾರ್ಯಾಚರಣೆ ಆರಂಭಿಸಲು ನಿರಂತರವಾಗಿ ನಿರಾಕರಿಸುತ್ತಿದೆ" ಮತ್ತು ''ಅಫ್ಘಾನಿಸ್ತಾನದಲ್ಲಿ ತಮ್ಮ ಹಿತಾಸಕ್ತಿಗಳನ್ನು ಪ್ರತಿನಿಧಿಸಲು ಪಾಕಿಸ್ತಾನದ ಭದ್ರತಾ ಸಂಸ್ಥೆಯಲ್ಲಿರುವ ಅಂಶಗಳು ಹಕ್ಕಾನಿ ನೆಟ್ವರ್ಕ್ ಅನ್ನು ಉಪಯುಕ್ತ ಮಿತ್ರ ಮತ್ತು ಪ್ರಾಕ್ಸಿ ಪಡೆ ಎಂದು ನೋಡುವುದನ್ನು ಮುಂದುವರಿಸಿದೆ'' ಎಂದು ತಜ್ಞರು ಹೇಳುತ್ತಾರೆ.


"ಈ ನಿಟ್ಟಿನಲ್ಲಿ, ಹಕ್ಕಾನಿ ಉಗ್ರ ಪಡೆಗಳು ಪದೇ ಪದೇ ಭಾರತೀಯ ಮೂಲಸೌಕರ್ಯ ಮತ್ತು ಅಫ್ಘಾನಿಸ್ತಾನದಲ್ಲಿ ನಿರ್ಮಾಣ ಯೋಜನೆಗಳನ್ನು ಗುರಿಯಾಗಿರಿಸಿಕೊಂಡಿವೆ," ಮತ್ತು 2008 ಹಾಗೂ 2009ರಲ್ಲಿ ಕಾಬೂಲ್‌ನಲ್ಲಿ ಭಾರತೀಯ ರಾಯಭಾರ ಕಚೇರಿಯ ವಿರುದ್ಧದ ದಾಳಿ ಸೇರಿದಂತೆ ಇತರ ಘಟನೆಗಳಿಗೆ ಹೊಣೆಗಾರರಾಗಿದ್ದಾರೆ.


ಹಕ್ಕಾನಿ ಗ್ರೂಪ್‌ ಸಂಪೂರ್ಣವಾಗಿ ಭಾರತೀಯ ವಿರೋಧಿಯಾಗಿದೆ ಮತ್ತು "ಲಷ್ಕರ್-ಎ- ತೊಯ್ಬಾ ಬೆಂಬಲದೊಂದಿಗೆ, ಅವರು ಬಹಳ ಸಮಯದವರೆಗೆ ಐಎಸ್‌ಐ ಜತೆ ಕೈಜೋಡಿಸಿದ್ದಾರೆ" ಎಂದು ಅಂತಾರಾಷ್ಟ್ರೀಯ ಶಾಂತಿಗಾಗಿ ಕಾರ್ನೆಗೀ ಎಂಡೋಮೆಂಟ್‌ನ 2020ರ ಪತ್ರಿಕೆಯೊಂದು ಹೇಳುತ್ತದೆ.

ಆದ್ದರಿಂದ, ಸಿರಾಜುದ್ದೀನ್, "ಎಲ್ಲಾ ದೇಶಗಳೊಂದಿಗೆ ಸ್ನೇಹ ಸಂಬಂಧವನ್ನು ಕಾಪಾಡಿಕೊಳ್ಳುವ ಮತ್ತು ಅವರ ಕಾಳಜಿಯನ್ನು ಗಂಭೀರವಾಗಿ ಪರಿಗಣಿಸುವ" ಅಗತ್ಯದ ಬಗ್ಗೆ ಕಳೆದ ವರ್ಷ ನ್ಯೂಯಾರ್ಕ್ ಟೈಮ್ಸ್ ನಲ್ಲಿ ಬರೆದ ಲೇಖನದಲ್ಲಿ ಬರೆದಿದ್ದರೂ, ಭಾರತಕ್ಕೆ ಈ ಖಾತರಿ ಇಲ್ಲ ಎಂದು ತಜ್ಞರು ಹೇಳುತ್ತಾರೆ.


ಅಫ್ಘಾನಿಸ್ತಾನದಲ್ಲಿ ಹಕ್ಕಾನಿ ನೆಟ್‌ವರ್ಕ್‌ನ ಪಾತ್ರವೇನು..?
ತಾಲಿಬಾನ್ ಅಫ್ಘಾನಿಸ್ತಾನವನ್ನು ವಶಕ್ಕೆ ಪಡೆಯುತ್ತಿದ್ದಂತೆ ಹಕ್ಕಾನಿ ನೆಟ್‌ವರ್ಕ್‌ನ ಸದಸ್ಯರು ಅಲ್ಲಿ ಸರ್ಕಾರ ರಚನೆಗೆ ಮುಂದಿನ ಕ್ರಮಗಳನ್ನು ರೂಪಿಸಲು ಇರಿಸಲಾಗಿರುವ ಮಧ್ಯಂತರ ವ್ಯವಸ್ಥೆಯ ಪ್ರಮುಖ ಘಟಕಗಳಾಗಿ ಹೊರಹೊಮ್ಮಿದ್ದಾರೆ. ತಾಲಿಬಾನ್ ಸರ್ಕಾರವನ್ನು ಸ್ಥಾಪಿಸುವ ಪ್ರಯತ್ನದ ಭಾಗವಾಗಿ ಸಿರಾಜುದ್ದೀನ್ ಸಹೋದರ ಅನಸ್ ಹಕ್ಕಾನಿ, ಅಫ್ಘಾನಿಸ್ತಾನದ ಮಾಜಿ ಅಧ್ಯಕ್ಷ ಹಮೀದ್ ಕರ್ಜಾಯ್ ಮತ್ತು ಇತರ ಹಿರಿಯ ಸರ್ಕಾರದ ನಾಯಕರೊಂದಿಗೆ ಮಾತನಾಡುತ್ತಿರುವ ಫೋಟೋಗಳು ಕಂಡುಬಂದಿದೆ.


ಇದನ್ನೂ ಓದಿ: 50 ವರ್ಷಗಳ ಹಿಂದೆ ಅಲ್ಲಿನ ಹೆಣ್ಣುಮಕ್ಕಳು ಮಿನಿಸ್ಕರ್ಟ್ ಹಾಕಿಕೊಂಡು ಓಡಾಡ್ತಿದ್ರು, ಹೇಗಿತ್ತು ಗೊತ್ತಾ ತಾಲಿಬಾನ್ ಮುಂಚಿನ ಅಫ್ಘಾನಿಸ್ತಾನ?

ಅಲ್ಲದೆ, ಈಗ ಕಾಬೂಲ್‌ನಲ್ಲಿ ಭದ್ರತೆಯ ಉಸ್ತುವಾರಿ ಹೊತ್ತಿರುವ ವ್ಯಕ್ತಿ ಖಲೀಲ್ ಹಕ್ಕಾನಿಯಾಗಿದ್ದು, ಈತನನ್ನು ಹತ್ಯೆ ಮಾಡಿದರೆ ಬಹುಮಾನ ನೀಡುವುದಾಗಿ ಅಮೆರಿಕ ಈ ಹಿಂದೆ ಘೋಷಿಸಿತ್ತು.


''ಕಾಬೂಲ್ ಭದ್ರತೆಯ ಉಸ್ತುವಾರಿಯನ್ನು ಖಲೀಲ್ ಅಲ್-ರಹಮಾನ್ ಹಕ್ಕಾನಿ ಹೊಂದಿರುವುದು ನಿರಾಶಾದಾಯಕವಾಗಿದೆ. ಹಕ್ಕಾನಿ ಮತ್ತು ಅಲ್ ಖೈದಾ ಒಟ್ಟಿಗೆ ದೀರ್ಘ ಇತಿಹಾಸವನ್ನು ಹೊಂದಿದ್ದು, ಎರಡೂ ಸಂಘಟನೆಗಳು ಹೆಣೆದುಕೊಂಡಿವೆ ಎಂದು ಹೇಳಬಹುದು. ಮತ್ತು ಅವರು ಸಂಬಂಧಗಳನ್ನು ಕಡಿತಗೊಳಿಸುವ ಸಾಧ್ಯತೆಯಿಲ್ಲ" ಎಂದು ಅನಾಮಧೇಯ ಬ್ರಿಟಿಷ್ ಗುಪ್ತಚರ ಅಧಿಕಾರಿ ಹೇಳಿದ್ದಾರೆಂದು ವಾಯ್ಸ್ ಆಫ್ ಅಮೆರಿಕ (VOA) ಉಲ್ಲೇಖಿಸಿದೆ.

ಹಾಗೂ, "ನರಿಯನ್ನು ಕೋಳಿ ಗೂಡಿನ ಉಸ್ತುವಾರಿಯನ್ನಾಗಿ ಮಾಡಿದಂತೆ'' ಎಂದೂ ಹಕ್ಕಾನಿ ನೆಟ್‌ವರ್ಕ್ ಕಾಬೂಲ್‌ ಉಸ್ತುವಾರಿ ವಹಿಸಿಕೊಂಡಿರುವ ಬಗ್ಗೆ ನಿವೃತ್ತ ಬ್ರಿಟಿಷ್ ರಾಜತಾಂತ್ರಿಕರೊಬ್ಬರು ಉಲ್ಲೇಖಿಸಿದ್ದಾರೆ. ಹೊಸ ಆಡಳಿತದಲ್ಲಿ ಹಕ್ಕಾನಿಗಳು ಪ್ರಮುಖ ಪಾತ್ರವಹಿಸುತ್ತಿದ್ದು, ತಾಲಿಬಾನ್ - ಹಕ್ಕಾನಿ ನೆಟ್‌ವರ್ಕ್ ಮೈತ್ರಿ ಮಹಿಳೆಯರು, ಹುಡುಗಿಯರು ಮತ್ತು ನಾಗರಿಕ ಸಮಾಜಕ್ಕೆ ಭಯಾನಕ ಸಂಕೇತವನ್ನು ಕಳುಹಿಸುತ್ತದೆ ಎಂದು ಐವರ್ ರಾಬರ್ಟ್ಸ್ VOA ಗೆ ತಿಳಿಸಿದರು. "ಅಫ್ಘಾನಿಸ್ತಾನ ಮತ್ತೆ ಅಂತಾರಾಷ್ಟ್ರೀಯ ಭಯೋತ್ಪಾದನೆಯ ತಳಹದಿಯಾಗುವ ಸಾಧ್ಯತೆ ಹೆಚ್ಚಿಸುತ್ತದೆ" ಎಂದೂ ಅಭಿಪ್ರಾಯಪಟ್ಟರು.

Published by:Soumya KN
First published: