Explained: ಮತ್ತಷ್ಟು ದುಬಾರಿಯಾಗಲಿದೆ ವಿಮಾನ ಪ್ರಯಾಣ, ಹೊಸಾ ದರಗಳೇನು? ಇಲ್ಲಿದೆ ಡೀಟೆಲ್ಸ್

Air Ticket Price Hike: ವೆಕೇಶನ್ ಹಾಗೂ ಹಾಲಿಡೇ ಟ್ರಿಪ್ ಗಳಿಗೆ ಮುಂಚಿತವಾಗಿ ಟಿಕೆಟ್ ಕಾಯ್ದಿರಿಸುವ ಪ್ರಯಾಣಿಕರಿಗೆ ನಿರಾಸೆ ಮೂಡಿಸಲಿದೆ. ಒಂದು ತಿಂಗಳ ಮುಂಚೆಯೇ ಟಿಕೆಟ್ ಬುಕ್ ಮಾಡಿ, ಹಾಲಿಡೇ ಮೂಡ್ ನಲ್ಲಿದ್ದ ಪ್ರಯಾಣಿಕರಿಗೆ ವಿಮಾನಯಾನ ದರ ಏರಿಕೆ ಬಿಸಿ ಮುಟ್ಟಲಿದೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
    ದೇಶದಲ್ಲಿ ಕೊರೋನಾ ಆತಂಕ ಕಡಿಮೆಯಾಗುತ್ತಿದ್ದಂತೆ, ದೇಶಿಯ ವಿಮಾನ(Domestic Flights) ಪ್ರಯಾಣ ದರ ಏರಿಕೆ ಆಗಲಿದೆ. ಕೆಳದರ್ಜೆ(Lower) ಮತ್ತು ಮೇಲ್ದರ್ಜೆ (Upper) ವಿಮಾನಗಳ ಪ್ರಯಾಣ ದರವನ್ನು ಹೆಚ್ಚಿಸಿ ನಾಗರಿಕ ವಿಮಾನಯಾನ ಸಚಿವಾಲಯ (Ministry of Civil Aviation) ಆದೇಶ ಹೊರಡಿಸಿದೆ. ಸಚಿವಾಲಯವು ವಿಮಾನ ದರಗಳ ಮೇಲಿನ ಕಡಿಮೆ ಮತ್ತು ಗರಿಷ್ಠ ಮಿತಿಗಳನ್ನು ಯಾವುದೇ ಸಮಯದಲ್ಲಿ ೧೫ ದಿನಗಳ ವರೆಗೆ ಜಾರಿಗೆ ತರಲಾಗುವುದು ಎಂದು ಘೋಷಿಸಿದೆ. ದರ ನಿಗದಿಯಾಗಿ 15 ದಿನ ಕಳೆದ ನಂತರ ವಿಮಾನಯಾನ ಸಂಸ್ಥೆಗಳು ಯಾವುದೇ ಮಿತಿಗಳಿಲ್ಲದೆ ಶುಲ್ಕ ವಿಧಿಸಬಹುದಾಗಿದೆ. ಈ ವರ್ಷದ ಆಗಸ್ಟ್ 12 ರಿಂದ ರೋಲ್- ಓವರ್(Roll Over) 30 ದಿನ ಕಾಲಾವಕಾಶ ನೀಡಲಾಗಿತ್ತು. 30 ದಿನಗಳ ಕಾಲ ಸಚಿವಾಲಯ ನಿಗದಿಪಡಿಸಿದ ದರಗಳನ್ನು, ವಿಮಾನಯಾನ ಸಂಸ್ಥೆಗಳು ಅನುಸರಿಸಬೇಕಿತ್ತು. 30 ದಿನ ರೋಲ್ ಓವರ್ (Roll Over) ಮುಗಿದ ಬಳಿಕ ವಿಮಾನ ಸಂಸ್ಥೆಗಳು ಯಾವುದೇ ಮಿತಿಯಿಲ್ಲದೆ ದರಗಳನ್ನು ನಿಗದಿ ಮಾಡಬಹುದಾಗಿತ್ತು.

    ನಾಗರಿಕ ವಿಮಾನಯಾನ ಸಚಿವಾಲಯ ಹೊಸ ನಿಯಮಗಳ ಬಗ್ಗೆ ವಿಸ್ತೃತವಾಗಿ ಮಾಹಿತಿ ನೀಡಿದೆ. ಸಚಿವಾಲಯವು ನಿಗದಿಪಡಿಸಿದ ದಿನಾಂಕದಿಂದ 15 ದಿನಗಳವರೆಗೂ ಕೆಳದರ್ಜೆ ಹಾಗೂ ಮೇಲ್ದರ್ಜೆ ದರವನ್ನು ವಿಮಾನಯಾನ ಸಂಸ್ಥೆಗಳು ಅನುಸರಿಸಬೇಕು. 15ದಿನಗಳ ಬಳಿಕ ಯಾವುದೇ ಮಿತಿಯಿಲ್ಲದೆ ಶುಲ್ಕ ವಿಧಿಸಬಹುದಾಗಿದೆ. ಕೋವಿಡ್ - 19 ಹೊಡೆತಕ್ಕೆ ಸಿಲುಕಿ ನಲುಗಿರುವ ವಾಯು ಸಂಚಾರವನ್ನು (Air Traffic) ಬೂಸ್ಟ್ (Boost) ಮಾಡಲು ವಿಮಾನಯಾನ ಸಚಿವಾಲಯ ಮುಂದಾಗಿದೆ.

    ಕೋವಿಡ್ ನಿಂದ ಆದ ಬದಲಾವಣೆ

    ಕೊರೋನಾ ಲಾಕ್ ಡೌನ್ ಬಳಿಕ ಜನ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹೋಗುವುದು ಕಡಿಮೆಯಾಗಿದೆ. ಅದರಲ್ಲೂ ಫ್ಲೈಟ್ ಬಳಸುವವರ ಸಂಖ್ಯೆ ಅತಿ ವಿರಳ. ಹೀಗಾಗಿ ಆರ್ಥಿಕ ಸಂಕಷ್ಟ ಹೊಂದಿರುವವರಿಗೆ ಕೆಳದರ್ಜೆಯ ದರವನ್ನು ಬದಲಿಸಲಾಗಿತ್ತು. ಸಚಿವಾಲಯ ನಿಗದಿಪಡಿಸಿದ ದಿನ ಹಾಗೂ ದರದಲ್ಲಿ ಪ್ರಯಾಣಿಕರು ಪ್ರಯಾಣ ಮಾಡಬಹುದಾಗಿತ್ತು. ಇಂಥವರಿಗಾಗಿಯೇ ವಿಮಾನಗಳಲ್ಲಿ ಕೆಲ ಸೀಟುಗಳನ್ನು ರಿಸರ್ವ್(Reserve) ಮಾಡಲಾಗಿತ್ತು. ಈ ಕೆಳದರ್ಜೆಯ ಸೀಟುಗಳಿಗೆ ವಿಮಾನಯಾನ ಸಚಿವಾಲಯ ನಿಗದಿಪಡಿಸಿದ ದರವನ್ನು ಪಡೆಯಬೇಕಿತ್ತು. ಇದೀಗ ಕೆಳದರ್ಜೆ ಹಾಗೂ ಮೇಲ್ದರ್ಜೆ ಸಂಖ್ಯೆಯನ್ನು ವಿಮಾನಯಾನ ಸಚಿವಾಲಯ ಹೆಚ್ಚಿಸಿದೆ.

    ಇದನ್ನೂ ಓದಿ: Flight Ticket: ಕಡಿಮೆ ದರದಲ್ಲಿ ವಿಮಾನ ಟಿಕೆಟ್ ಬುಕ್ ಮಾಡಬೇಕೇ? ಇಲ್ಲಿವೆ ಸುಲಭ ಮಾರ್ಗಗಳು

    15 ದಿನಗಳ ಮುಂಚೆ ಟಿಕೆಟ್ ಗಳನ್ನು ಬುಕ್ ಮಾಡಿದರೆ ಮಾತ್ರ ಇದರ ಉಪಯೋಗ ಪಡೆದುಕೊಳ್ಳಬಹುದಾಗಿದೆ. ಆದರೆ ವೆಕೇಶನ್ ಹಾಗೂ ಹಾಲಿಡೇ ಟ್ರಿಪ್ ಗಳಿಗೆ ಮುಂಚಿತವಾಗಿ ಟಿಕೆಟ್ ಕಾಯ್ದಿರಿಸುವ ಪ್ರಯಾಣಿಕರಿಗೆ ನಿರಾಸೆ ಮೂಡಿಸಲಿದೆ. ಒಂದು ತಿಂಗಳ ಮುಂಚೆಯೇ ಟಿಕೆಟ್ ಬುಕ್ ಮಾಡಿ, ಹಾಲಿಡೇ ಮೂಡ್ ನಲ್ಲಿದ್ದ ಪ್ರಯಾಣಿಕರಿಗೆ ವಿಮಾನಯಾನ ದರ ಏರಿಕೆ ಬಿಸಿ ಮುಟ್ಟಲಿದೆ.

    ವಿಮಾನಯಾನ ಈಗ ಸರಾಗ

    ಮೇ 25, 2020 ಕೊರೋನಾ ಲಾಕ್ ಡೌನ್(Lockdown) ತೆರವು ಬಳಿಕ ವಿಮಾನಯಾನ ಪುನರಾರಂಭಗೊಂಡಿತ್ತು. ಅಂದಿನಿಂದ ಇಲ್ಲಿಯವರೆಗೂ ನಾಲ್ಕು ಬಾರಿ ವಿಮಾನಗಳ ದರವನ್ನು ಬದಲಿಸಲಾಗಿದೆ. ಕೆಳದರ್ಜೆ ಹಾಗೂ ಮೇಲ್ದರ್ಜೆ ದರಗಳನ್ನು ಶೇಕಡ 9.83 ರಿಂದ ಶೇಕಡ 12.28 ರಷ್ಟು ಏರಿಕೆ ಮಾಡಲಾಗಿದೆ. ವಿಮಾನ ಪ್ರಯಾಣದ ಅವಧಿಯ ಆಧಾರದ ಮೇಲೆ ಭಾರತವು ವಿಮಾನ ದರಗಳನ್ನು ನಿಗದಿ ಮಾಡಿತ್ತು.

    ಆರ್ಥಿಕವಾಗಿ ಕಷ್ಟದಲ್ಲಿರುವವರ ಪ್ರಯಾಣಕ್ಕಾಗಿ ಹಾಗೂ ವಿಮಾನಯಾನ ಸಂಸ್ಥೆಗಳಿಗೆ ನೆರವಾಗುವ ಉದ್ದೇಶದಿಂದ ಕೆಳದರ್ಜೆಯನ್ನು ಅನುಷ್ಠಾನ ಗೊಳಿಸಲಾಗಿತ್ತು. ಇದರ ಜೊತೆಗೆ ಮೇಲ್ದರ್ಜೆ ಸೀಟುಗಳನ್ನು ಸಹ ಇರಿಸಿ, ಸೀಟುಗಳಿಗೆ ಬೇಡಿಕೆ ಹೆಚ್ಚಾದ ಸಂದರ್ಭದಲ್ಲಿ ಹೆಚ್ಚಿನ ಮೊತ್ತವನ್ನು ವಿಧಿಸುವ ಅನಿವಾರ್ಯತೆ ಸೃಷ್ಟಿಯಾಗದಂತೆ ನೋಡಿಕೊಳ್ಳಲಾಗಿತ್ತು.

    ಇನ್ನು ಆಗಸ್ಟ್ ತಿಂಗಳಲ್ಲಿ ದೇಶಿಯ ವಿಮಾನದಲ್ಲಿ ಒಟ್ಟು 6.7 ಮಿಲಿಯನ್ ಪ್ರಯಾಣಿಕರು ಸಂಚರಿಸಿದ್ದಾರೆ. ಕಳೆದ ವರ್ಷ ಕೇವಲ 2.8 ಮಿಲಿಯನ್ ಪ್ರಯಾಣಿಕರು ಸಂಚರಿಸಿದ್ದರು ಅಂತ ನಾಗರಿಕ ವಿಮಾನಯಾನ ಮಹಾನಿರ್ದೇಶಕರು ತಿಳಿಸಿದ್ದಾರೆ.

    (ವಾಸುದೇವ್ ಎಂ)
    Published by:Soumya KN
    First published: