• Home
  • »
  • News
  • »
  • explained
  • »
  • Enjoy Enjaami: ಒಂದು ಸೂಪರ್​ಹಿಟ್ ಹಾಡನ್ನು ಮೂರು ಜನ ತಾವೇ ಮಾಡಿದ್ದು ಅಂತಿದ್ದಾರೆ, ಸತ್ಯ ಏನಿದೆ?

Enjoy Enjaami: ಒಂದು ಸೂಪರ್​ಹಿಟ್ ಹಾಡನ್ನು ಮೂರು ಜನ ತಾವೇ ಮಾಡಿದ್ದು ಅಂತಿದ್ದಾರೆ, ಸತ್ಯ ಏನಿದೆ?

ಕ್ರೆಡಿಟ್ ಕಿತ್ತಾಟದಲ್ಲಿ'ಎಂಜಾಯ್ ಎಂಜಾಮಿ' ಹಾಡು

ಕ್ರೆಡಿಟ್ ಕಿತ್ತಾಟದಲ್ಲಿ'ಎಂಜಾಯ್ ಎಂಜಾಮಿ' ಹಾಡು

2021ರ ಹಿಟ್ ಹಾಡು ‘ಎಂಜಾಯ್ ಎಂಜಾಮಿ’ ಹಾಡು ಬಿಡುಗಡೆಯಾದ ಒಂದು ವರ್ಷದ ಬಳಿಕ ಮತ್ತೆ ಕ್ರೆಡಿಟ್ ವಿಚಾರವಾಗಿ ವಿವಾದದ ಕೇಂದ್ರಬಿಂದುವಾಗಿದೆ. ಈ ಹಾಡಿನಲ್ಲಿ ಅರಿವು ಅವರ ಪಾತ್ರವನ್ನು ಮೊದಲಿನಿಂದಲೂ ಕಡೆಗಣಿಸಲಾಗುತ್ತಿದ್ದು, ಮೊನ್ನೆ ನಡೆದ ಸಮಾರಂಭದಲ್ಲಿ ಪ್ರದರ್ಶನಗೊಂಡ ಈ ಹಾಡು ಮತ್ತೆ ಗಾಯಕ ಅರಿವು ಅವರನ್ನು ಹಿಂದಿಕ್ಕಿದೆ. 

ಮುಂದೆ ಓದಿ ...
  • Share this:

2021ರ ಹಿಟ್ ಹಾಡು ‘ಎಂಜಾಯ್ ಎಂಜಾಮಿ’ ಹಾಡು ಬಿಡುಗಡೆಯಾದ (Song Release) ಒಂದು ವರ್ಷದ ಬಳಿಕ ಮತ್ತೆ ಕ್ರೆಡಿಟ್ ವಿಚಾರವಾಗಿ ವಿವಾದದ ಕೇಂದ್ರಬಿಂದುವಾಗಿದೆ. ಈ ಹಾಡಿನಲ್ಲಿ ಅರಿವು (Arivu) ಅವರ ಪಾತ್ರವನ್ನು ಮೊದಲಿನಿಂದಲೂ ಕಡೆಗಣಿಸಲಾಗುತ್ತಿದ್ದು, ಮೊನ್ನೆ ನಡೆದ ಸಮಾರಂಭದಲ್ಲಿ ಪ್ರದರ್ಶನಗೊಂಡ ಈ ಹಾಡು ಮತ್ತೆ ಗಾಯಕ (Singer) ಅರಿವು ಅವರನ್ನು ಹಿಂದಿಕ್ಕಿದೆ. ಕುಕ್ಕೂ ಕುಕ್ಕೂ ಎಂದು ಆರಂಭವಾಗುವ ಈ ಹಾಡನ್ನು ಗಾಯಕ-ಗೀತರಚನೆಕಾರ (Lyricist) ಅರಿವು ಮತ್ತು ಗಾಯಕಿ ಧೀ ಹಾಡಿ, ನಟಿಸಿದ್ದಾರೆ. ಗಾಯಕಿ ದೀಕ್ಷಿತಾ ವೆಂಕದೇಶನ್ ಈ ಹಾಡಿನ ನಂತರ ಎಂಜಾಯ್ ಎಂಜಾಮಿ ಧೀ ಎಂದೇ ಹೆಸರುವಾಸಿಯಾಗಿದ್ದಾರೆ. ಸ್ವತಂತ್ರ ಸಂಗೀತ ಲೇಬಲ್ ಮಜ್ಜಾದ ಮೂಲಕ ಬಿಡುಗಡೆಯಾದ ಎಂಜಾಯ್ ಎಂಜಾಮಿ ಹೆಚ್ಚು ಜನಪ್ರಿಯವಾಗಿತ್ತು. 


ಇಂಡೀ-ತಮಿಳಿನ ಟಾಪ್ ಹಾಡು
ಸಾಮಾಜಿಕ ಜಾಲತಾಣದಲ್ಲಿ ರೀಲ್ಸ್ ಮೂಲಕವೂ ಸಾಕಷ್ಟು ವೈರಲ್ ಆಗಿತ್ತು. ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಯ್ಯುಟ್ಯೂಬ್ ನಲ್ಲಿ ಮಿಲಿಯನ್ ವೀಕ್ಷಣೆ ಗಳಿಸಿತ್ತು ಮತ್ತು ಈ ಹಾಡು ಇದುವರೆಗೆ ಬಿಡುಗಡೆಯಾದ ಟಾಪ್ ಇಂಡೀ-ತಮಿಳು ಹಾಡುಗಳಲ್ಲಿ ಒಂದಾಗಿದೆ. ಆದಾಗ್ಯೂ, ಗಾಯಕ-ಗೀತರಚನೆಕಾರ ಅರಿವು, ಸಂಗೀತ ನಿರ್ಮಾಪಕ ಸಂತೋಷ್ ನಾರಾಯಣನ್ ಮತ್ತು ಗಾಯಕ ಧೀ ಅವರು ವಿವಾದದ ಕೇಂದ್ರಬಿಂದುವಾಗಿದ್ದಾರೆ.


ಹಾಡಿನಲ್ಲಿ ಆಫ್ರಿಕನ್ ಸಂಸ್ಕೃತಿಯ ಸ್ವಾಧೀನ, ಪ್ರಮುಖ ಮ್ಯಾಗಜಿನ್ ನಲ್ಲಿ ಅರಿವು ಅವರನ್ನು ಹೊರತು ಪಡಿಸಿ ಕವರ್ ಫೋಟೋ ಬಂದಿದ್ದು ಸೇರಿ, ಈ ಹಾಡು ಬಿಡುಗಡೆಯಾದ ದಿನದಿಂದಲೂ ವಿವಾದದಲ್ಲಿದೆ. ಈಗ ವಿವಾದಕ್ಕೆ ಮತ್ತಷ್ಟು ತುಪ್ಪು ಸುರಿಯುವಂತಹ ಮತ್ತೊಂದು ಘಟನೆ ನಡೆದಿದೆ.


ಮತ್ತೆ ಕ್ರೆಡಿಟ್ ವಿಚಾರದಲ್ಲಿ ವಿವಾದಕ್ಕೆ ಸಿಲುಕಿದ ಎಂಜಾಯ್ ಎಂಜಾಮಿಹಾಡು
ಜುಲೈ 28ರಂದು ಚೆನ್ನೈನಲ್ಲಿ ನಡೆದ 44ನೇ ಚೆಸ್ ಒಲಿಂಪಿಯಾಡ್‌ನ ಉದ್ಘಾಟನಾ ಸಮಾರಂಭದಲ್ಲಿ ಪ್ರದರ್ಶನಗೊಂಡ ಎಂಜಾಯ್ ಎಂಜಾಮಿ ಹಾಡು ಮತ್ತೆ ವಿವಾದಕ್ಕೆ ಸಿಲುಕಿದೆ. ಸಮಾರಂಭದಲ್ಲಿ, ಎಂಜಾಯ್ ಎಂಜಾಮಿ ಗೀತೆಯನ್ನು ಗಾಯಕರಾದ ಧೀ ಮತ್ತು ಕಿಡಕುಝಿ ಮರಿಯಮ್ಮಲ್ ಅವರು ಪ್ರದರ್ಶಿಸಿದರು. ಹಾಡಿನ ಮ್ಯೂಸಿಕ್ ವಿಡಿಯೋದ ನಿರ್ದೇಶಕ ಸಂತೋಷ್ ನಾರಾಯಣನ್ ಅದರ ಸಂಯೋಜಕರಾಗಿ ಮನ್ನಣೆ ಪಡೆದರು. ಆದರೆ ಇಲ್ಲಿ ಗಾಯಕ ಅರಿವು ಬಗ್ಗೆ ಮಾತ್ರ ಯಾವುದೇ ಉಲ್ಲೇಖವಾಗಿಲ್ಲ. ಸದ್ಯ ಹಾಡಿನ ಎಲ್ಲಾ ಕ್ರೆಡಿಟ್ ಸಂತೋಷ್ ನಾರಾಯಣನ್ ಗೆ ಹೋಗಿದ್ದು, ಅರಿವು ಅವರನ್ನು ಲೆಕ್ಕದಿಂದ ಹೊರಗಿಡಲಾಗಿದೆ.


ಇದನ್ನೂ ಓದಿ:  Sita Ramam: ಹೇಗಿದೆ ಸೀತಾರಾಮಮ್? ದುಲ್ಕರ್ ಸಲ್ಮಾನ್‌ಗೆ ಸಲಾಂ ಹೇಳಿದ್ರಾ ಪ್ರೇಕ್ಷಕರು?


ಕಳೆದ ವರ್ಷ ಬಿಡುಗಡೆಯಾದ ಎಂಜಾಯ್ ಎಂಜಾಮಿ ಹಾಡು ಜನರನ್ನು ಒಟ್ಟುಗೂಡಿಸುವ ಗುರಿಯನ್ನು ಹೊಂದಿತ್ತು ಮತ್ತು ಜೀವನವನ್ನು ಪ್ರಚಾರ ಮಾಡಲು ಶ್ರಮಿಸಿದ ಪೂರ್ವಜರನ್ನು ಆಚರಿಸುವ ಗುರಿಯನ್ನು ಹೊಂದಿದೆ. ಚಹಾ ತೋಟಗಳಲ್ಲಿ ಕೆಲಸ ಮಾಡಲು ಬಲವಂತವಾಗಿ ಶ್ರೀಲಂಕಾಕ್ಕೆ ಕರೆದೊಯ್ದ ಕಾರ್ಮಿಕರ ವಂಶಸ್ಥರಾದ ಗಾಯಕ ಅರಿವು ಅವರ ಅಜ್ಜಿ ವಲ್ಲಿಯಮ್ಮ ಕುರಿತಾದ ಹಾಡು ಇದಾಗಿದೆ ಎಂದು ಅರಿವು ತಿಳಿಸಿದ್ದರು.


ಬಿಡುಗಡೆಯಾದ ದಿನದಿಂದಲೂ ವಿವಾದದಲ್ಲಿರುವ ‘ಎಂಜಾಯ್ ಎಂಜಾಮಿ’
ಬಿಡುಗಡೆಯ ನಂತರ, ಎಂಜಾಯ್ ಎಂಜಾಮಿಯ ಮ್ಯೂಸಿಕ್ ವೀಡಿಯೋ ಅರಿವು ಅವರ ವೇಷಭೂಷಣಗಳಿಗೆ ಕೆಲವು ಭಾಗಗಳಿಂದ ಟೀಕೆಗಳನ್ನು ಪಡೆಯಿತು. ಇದು ಆಫ್ರಿಕನ್ ಸಂಸ್ಕೃತಿಯ ಸ್ವಾಧೀನ ಎಂದು ಕೆಲವರು ಟೀಕಿಸಿದರು. ಡಿಜೆ ಸ್ನೇಕ್‌ನ ರೀಮಿಕ್ಸ್ ಆವೃತ್ತಿಯ ಕವರ್‌ನಿಂದ ಮತ್ತು ರೋಲಿಂಗ್ ಸ್ಟೋನ್ ಇಂಡಿಯಾದ ಆಗಸ್ಟ್ 2021ರ ಕವರ್‌ನಿಂದ ಗಾಯಕ ಅರಿವು ಅನ್ನು ಹೊರಗಿಟ್ಟಾಗ ವಿವಾದ ಮತ್ತಷ್ಟು ಭುಗಿಲೆದ್ದಿತ್ತು. ಕೇವಲ ಧೀ ಮತ್ತು ನೀಯೆ ಒಲಿ ಗಾಯಕ ಶಾನ್ ವಿನ್ಸೆಂಟ್ ಡಿ ಪಾಲ್ ಅನ್ನು ಮಾತ್ರ ರೋಲಿಂಗ್ ಸ್ಟೋನ್ ಕವರ್ ಒಳಗೊಂಡಿತ್ತು. ಇದಕ್ಕೆ ವಿರೋಧ ವ್ಯಕ್ತಪಡಿಸಿದ ತಮಿಳು ಚಲನಚಿತ್ರ ನಿರ್ದೇಶಕ ಪಾ.ರಂಜಿತ್ ಅವರು ಅರಿವುಗೆ ತಮ್ಮ ಬೆಂಬಲ ನೀಡುವುದರ ಮೂಲಕ ಎಲ್ಲೆಡೆ ಈ ವಿಚಾರ ಗಮನ ಸೆಳೆಯಿತು. ಈ ಎಲ್ಲಾ ಬೆಳವಣಿಗೆಯ ನಂತರ ಪತ್ರಿಕೆಯು ತಮ್ಮ ಸಂಚಿಕೆಯ ಮುಖಪುಟದಲ್ಲಿ ಅರಿವು ಒಳಗೊಂಡ ಹೊಸ ಡಿಜಿಟಲ್ ಕವರ್ ಅನ್ನು ಬಿಡುಗಡೆ ಮಾಡಿತು.


ನಾನೇ ಬರೆದು, ಸಂಯೋಜಿಸಿ, ಹಾಡಿದ್ದೇನೆ- ಗಾಯಕ ಅರಿವು
ಪ್ರಸ್ತುತ ಯುಎಸ್ ಪ್ರವಾಸದಲ್ಲಿರುವ ಅರಿವು ಅವರು ಈ ಎಲ್ಲಾ ಬೆಳವಣಿಗೆ ಬಗ್ಗೆ ಪ್ರತಿಕ್ರಿಯಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ ಒಂದನ್ನು ಮಾಡಿದ್ದಾರೆ. “ನಾನು ಸಂಯೋಜಿಸಿದ್ದೇನೆ, ಬರೆದಿದ್ದೇನೆ, ಹಾಡಿದ್ದೇನೆ ಮತ್ತು ಪ್ರದರ್ಶಿಸಿದ್ದೇನೆ ಎಂಜಾಯ್ ಎಂಜಾಮಿ. ಇದನ್ನು ಬರೆಯಲು ಯಾರೂ ನನಗೆ ಟ್ಯೂನ್, ಮೆಲೋಡಿ ಅಥವಾ ಒಂದೇ ಪದವನ್ನು ನೀಡಲಿಲ್ಲ. ಈಗಿರುವ ಎಲ್ಲದಕ್ಕೂ ಸುಮಾರು 6 ತಿಂಗಳ ನಿದ್ದೆಯಿಲ್ಲದ ರಾತ್ರಿಗಳು ಮತ್ತು ಹಗಲುಗಳನ್ನು ಕಳೆದಿದ್ದೇನೆ. ಇದು ಉತ್ತಮ ಟೀಮ್ ವರ್ಕ್ ಎಂಬುದರಲ್ಲಿ ಸಂದೇಹವಿಲ್ಲ.


ಇದನ್ನೂ ಓದಿ: Ranveer Singh: ಮತ್ತೆ ಬೆತ್ತಲಾಗ್ತಾರಾ ರಣವೀರ್ ಸಿಂಗ್? ಬರ್ತಿದೆ ಬೇಡಿಕೆಗಳ ಸುರಿಮಳೆ!

View this post on Instagram


A post shared by Arivu (@therukural)
ಇದು ಎಲ್ಲರನ್ನೂ ಒಟ್ಟಿಗೆ ಕರೆಯುವುದರಲ್ಲಿ ಸಂದೇಹವಿಲ್ಲ. ಆದರೆ ಇದು ವಲ್ಲಿಯಮ್ಮಾಳ್ ಅಥವಾ ನನ್ನ ಭೂರಹಿತ ಚಹಾ ತೋಟದ ಗುಲಾಮರ ಇತಿಹಾಸವಲ್ಲ ಎಂದು ಅರ್ಥವಲ್ಲ. ನನ್ನ ಪ್ರತಿಯೊಂದು ಹಾಡು ಈ ಪೀಳಿಗೆಯ ದಬ್ಬಾಳಿಕೆಯ ಗುರುತುಗಳನ್ನು ಹೊಂದಿರುತ್ತದೆ. ಎಲ್ಲವನ್ನೂ ವ್ಯಕ್ತಪಡಿಸಿದ ನಂತರ ಜೈಭೀಮ್. ಸತ್ಯ ಯಾವಾಗಲೂ ಕೊನೆಯಲ್ಲಿ ಗೆಲ್ಲುತ್ತದೆ (sic)" ಎಂದು ಅವರು ಬರೆದಿದ್ದಾರೆ


ಅರಿವು ಹೇಳಿಕೆಗೆ ವಿರುದ್ಧವಾಗಿ ಹೇಳಿಕೆ ನೀಡಿದ ಸಂತೋಷ್
ಅರಿವು ಪೋಸ್ಟ್ ಮಾಡಿದ ಕೂಡಲೇ, ಸಂಯೋಜಕ ಸಂತೋಷ್ ಹಾಡಿನ ಹಿಂದಿನ ಸೃಜನಶೀಲ ಪ್ರಕ್ರಿಯೆಯನ್ನು ವಿವರಿಸುವ ಹೇಳಿಕೆಯೊಂದಿಗೆ ಪ್ರತಿಕ್ರಿಯಿಸಿದರು. ಹಾಡಿನ ಟ್ಯೂನ್ ಕಂಪೋಸ್ ಮಾಡಿದ್ದು ನಾನೇ ಮತ್ತು 30 ಗಂಟೆಗಳ ಒಳಗೆ ಸಂಪೂರ್ಣ ಸೃಜನಶೀಲ ಪ್ರಕ್ರಿಯೆಯನ್ನು ಮಾಡಲಾಗಿದೆ ಎಂದು ಸಂತೋಷ್ ಹೇಳಿಕೊಂಡಿದ್ದಾರೆ. ಹಾಡು ಮಾಡಲು 6 ತಿಂಗಳು ಬೇಕಾಯಿತು ಎಂಬ ಅರಿವು ಅವರ ಹೇಳಿಕೆಗೆ ವಿರುದ್ಧವಾಗಿ ಸಂತೋಷ್ ಹೇಳಿಕೆ ಮತ್ತಷ್ಟು ಗೊಂದಲ ಮೂಡಿಸಿದೆ.
“ಡಿಸೆಂಬರ್ 2020ರಲ್ಲಿ, ಪ್ರಕೃತಿಯನ್ನು ಆಚರಿಸುವ ತಮಿಳು ಹಾಡನ್ನು ರಚಿಸುವ ಕಲ್ಪನೆಯನ್ನು ಧೀ ಮುಂದಿಟ್ಟರು. ನಾನು ನಂತರ "ಎಂಜಾಯ್ ಎಂಜಾಮಿ" ಅನ್ನು ಸಂಯೋಜಿಸಿದೆ, ಪ್ರೋಗ್ರಾಮ್ ಮಾಡಿದೆ, ರೆಕಾರ್ಡ್ ಮಾಡಿದೆ. ಧೀ, ಅರಿವು ಮತ್ತು ನಾನು ಪರಸ್ಪರ ಪ್ರೀತಿಯಿಂದ ಹಾಡನ್ನು ಮಾಡಿದ್ದೇವೆ. . ಧೀ ಅವರ ಅನೇಕ ಸಾಲುಗಳ ರಾಗ ಸಂಯೋಜನೆಯನ್ನು ಮಾಡಿದ್ದಾರೆ, ಆದರೆ ಅರಿವು ಸಾಹಿತ್ಯವನ್ನು ಬರೆಯಲು ಒಪ್ಪಿಕೊಂಡರು. ನಾನು ಉಳಿದ ರಾಗವನ್ನು ಸಂಯೋಜಿಸಿದ್ದೇನೆ ಮತ್ತು ಅರಿವು ಭಾಗಗಳ ಟ್ಯೂನ್ ಅನ್ನು ಕೂಡ ರಚಿಸಿದ್ದೇನೆ" ಎಂದು ಸಂತೋಷ್ ಬರೆದಿದ್ದಾರೆ.


"ಹಾಡಿನ ಕ್ರೆಡಿಟ್ ಪಡೆಯಲು ಅರಿವು ಅರ್ಹನಾಗಿದ್ದಾನೆ"
ಧೀ ಕೂಡ ಅರಿವು ಹೇಳಿಕೆಗೆ ಪ್ರತಿಕ್ರಿಯಿಸಿದ್ದು, “ಅರಿವು ಈ ಬಗ್ಗೆ ಮಾತನಾಡಬೇಕು ಎಂದು ನಾನು ಬಯಸುತ್ತೇನೆ. ಈ ಹಾಡಿನ ಕೇಂದ್ರಬಿಂದುವಾಗುವುದಕ್ಕೆ ಅರಿವು ಅರ್ಹನಾಗಿದ್ದಾನೆ ಎಂದು ನಾನು ನಂಬುತ್ತೇನೆ. ನಮ್ಮ ಹಾಡಿನ ಎಲ್ಲಾ ಆದಾಯಗಳು ಮತ್ತು ಮಾಲೀಕತ್ವವನ್ನು ನಮ್ಮೂರಲ್ಲಿ ಸಮಾನವಾಗಿ ಹಂಚಿಕೊಳ್ಳಲಾಗಿದೆ” ಎಂದು ಅರಿವು ಪರ ಬ್ಯಾಟಿಂಗ್ ಮಾಡಿದ್ದಾರೆ.

Published by:Ashwini Prabhu
First published: