ಮೆಟ್ ಗಾಲಾ (Met Gala) ಬಗ್ಗೆ ಬಹುತೇಕರು ಕೇಳಿರಬಹುದು. ಪ್ರಪಂಚದ ಅತಿ ದೊಡ್ಡ ಸೆಲೆಬ್ರಿಟಿಗಳು (Celebrity) ನ್ಯೂಯಾರ್ಕ್‌ನ (New York) ಮೆಟ್ರೋಪಾಲಿಟನ್ ಮ್ಯೂಸಿಯಂ ಆಫ್ ಆರ್ಟ್ (Metropolitan Museum of Art) ಒಳಗೆ ಉನ್ನತ ಫ್ಯಾಶನ್‌ನ (Fashion) ಅತ್ಯಂತ ವಿಪರೀತವಾದ ಬಟ್ಟೆಗಳನ್ನು ಧರಿಸಿ ಸೌಂದರ್ಯ ಸಮರ ಹೂಡುತ್ತಾರೆ. ರೆಡ್ ಕಾರ್ಪೆಟ್‌ನಲ್ಲಿ (Red carpet) ಅತಿಥಿಗಳು ಬರುತ್ತಿದ್ದರೆ ಅವರ ಛಾಯಾಚಿತ್ರ, ವಿಡಿಯೋ, ಲೈವ್ ಸ್ಟ್ರೀಮ್ ಇತ್ಯಾದಿಗಳು ಜಗತ್ತಿನ ಎಲ್ಲೆಡೆ ವೈರಲ್ ಆಗುತ್ತೆ. ಇದು ಪ್ರಪಂಚದ ಅತ್ಯಂತ ಪ್ರತಿಷ್ಠಿತ ಫ್ಯಾಶನ್ ಈವೆಂಟ್ (Fashion Event) ಎಂದು ಪರಿಗಣಿಸಲ್ಪಟ್ಟಿದೆ. ಫ್ಯಾಷನ್, ಚಲನಚಿತ್ರ, ದೂರದರ್ಶನ, ರಂಗಭೂಮಿ, ಸಂಗೀತ, ವ್ಯಾಪರಸ ಉದ್ಯಮ, ಕ್ರೀಡೆ, ಸಾಮಾಜಿಕ ಮಾಧ್ಯಮ ಮತ್ತು ರಾಜಕೀಯದಂತಹ ವಿವಿಧ ವೃತ್ತಿಪರ ಕ್ಷೇತ್ರಗಳ ಪ್ರಸಿದ್ಧ ವ್ಯಕ್ತಿಗಳನ್ನು ಗಾಲಾಕ್ಕೆ ಆಹ್ವಾನಿಸಲಾಗುತ್ತದೆ. ಅಮೆರಿಕನ್ ಫ್ಯಾಶನ್ ಮ್ಯಾಗಜೀನ್ (American Fashion Magazine) ವೋಗ್ (Vogue) ಇದನ್ನು ಆಯೋಜಿಸುತ್ತದೆ. ಇತ್ತೀಚಿಗಷ್ಟೇ ನಡೆದ ಮೆಟ್ ಗಾಲಾ ಶೋ ಈ ಬಾರಿ ಭಾರೀ ಸುದ್ದಿ ಮಾಡಿದೆ. ಕಾರಣ ಪ್ರಸಿದ್ಧ ಯೂಟ್ಯೂಬರ್ ಧರಿಸಿದ್ದ ಬೆಲೆಬಾಳುವ ನೆಕ್ಲೆಸ್ (Neckless) ಒಂದು ಭಾರತೀಯರ ಕಣ್ಣು ಕೆಂಪಾಗಿಸಿದೆ. ಹಾಗಿದ್ರೆ ಏನಿದು ನೆಕ್ಲೆಸ್ ಕಥೆ? ಅದನ್ನು ಧರಿಸಿದ್ದು ಯಾರು? ಆಕೆ ಮೇಲೆ ಭಾರತೀಯರಿಗೆ ಯಾಕೆ ಕೋಪ? ಈ ಬಗ್ಗೆ ಕುತೂಹಲಕಾರಿ ಮಾಹಿತಿ ಇಲ್ಲಿದೆ…
ಏನಿದು ಮೆಟ್ ಗಾಲಾ?
ಈ ಮೊದಲೇ ತಿಳಿಸಿದಂತೆ ಇದೊಂದು ಪ್ರಪಂಚದ ಅತಿ ದೊಡ್ಡ ಸೆಲೆಬ್ರಿಟಿಗಳು ನ್ಯೂಯಾರ್ಕ್‌ನ ಮೆಟ್ರೋಪಾಲಿಟನ್ ಮ್ಯೂಸಿಯಂ ಆಫ್ ಆರ್ಟ್ ಒಳಗೆ ಉನ್ನತ ಫ್ಯಾಶನ್‌ನ ಬಟ್ಟೆಗಳನ್ನು ಧರಿಸಿ ನಡೆಸುವ ಸೌಂದರ್ಯ ಪ್ರದರ್ಶನ. ಇದು ಪ್ರಪಂಚದ ಅತ್ಯಂತ ಪ್ರತಿಷ್ಠಿತ ಫ್ಯಾಶನ್ ಈವೆಂಟ್ ಎಂದು ಪರಿಗಣಿಸಲ್ಪಟ್ಟಿದೆ. ಫ್ಯಾಷನ್, ಚಲನಚಿತ್ರ, ದೂರದರ್ಶನ, ರಂಗಭೂಮಿ, ಸಂಗೀತ, ವ್ಯಾಪರಸ ಉದ್ಯಮ, ಕ್ರೀಡೆ, ಸಾಮಾಜಿಕ ಮಾಧ್ಯಮ ಮತ್ತು ರಾಜಕೀಯದಂತಹ ವಿವಿಧ ವೃತ್ತಿಪರ ಕ್ಷೇತ್ರಗಳ ಪ್ರಸಿದ್ಧ ವ್ಯಕ್ತಿಗಳನ್ನು ಗಾಲಾಕ್ಕೆ ಆಹ್ವಾನಿಸಲಾಗುತ್ತದೆ. ಅಮೆರಿಕನ್ ಫ್ಯಾಶನ್ ಮ್ಯಾಗಜೀನ್ ವೋಗ್ ಇದನ್ನು ಆಯೋಜಿಸುತ್ತದೆ.
ಈ ಬಾರಿ ಭಾರತೀಯರ ಗಮನ ಸೆಳೆದಿದ್ದೇಕೆ ಮೆಟ್ ಗಾಲಾ?
1973ರಿಂದ ಮೆಟ್ ಗಾಲಾ ಇವೆಂಟ್ ಆಚರಿಸಿಕೊಂಡು ಬರಲಾಗುತ್ತಿದೆ. ಆದರೆ ಈ ಬಾರಿಯ ಮೆಟ್ ಗಾಲಾ ಇವೆಂಟ್ ಭಾರತೀಯರ ಗಮನ ಸೆಳೆದಿದೆ. ಅದಕ್ಕೆ ಕಾರಣ ಅಲ್ಲಿ ಸೆಲಬ್ರಿಟಿಯೊಬ್ಬರ ಕುತ್ತಿಗೆಯಲ್ಲಿ ಕಾಣಿಸಿದ ಅತ್ಯಮೂಲ್ಯ ನೆಕ್ಲೆಸ್. ಅದು ಭಾರತೀಯ ಮಹಾರಾಜರೊಬ್ಬರ ಅತ್ಯಮೂಲ್ಯ ನೆಕ್ಲೆಸ್ ಎನ್ನಲಾಗಿದೆ. ಅಂದಹಾಗೆ ಅದನ್ನು ಧರಿಸಿ ಮೆಟ್ ಗಾಲಾದಲ್ಲಿ ಗಮನ ಸೆಳೆದವರ ಹೆಸರು ಎಮ್ಮಾ ಚೇಂಬರ್ಲೇನ್.
ಯಾರು ಈ ಎಮ್ಮಾ ಚೇಂಬರ್ಲೇನ್?
ಎಮ್ಮಾ ಫ್ರಾನ್ಸಿಸ್ ಚೇಂಬರ್ಲೇನ್ ಒಬ್ಬ ಅಮೆರಿಕದ ಪ್ರಸಿದ್ಧ ಯೂಟ್ಯೂಬರ್. ಏಪ್ರಿಲ್ 2019ರಲ್ಲಿ, ಅವರು ತಮ್ಮ ಮೊದಲ ಸಾಪ್ತಾಹಿಕ ಪಾಡ್‌ಕ್ಯಾಸ್ಟ್ ಸರಣಿಯಾದ ಎನಿಥಿಂಗ್ ಗೋಸ್ ಅನ್ನು ಪ್ರಾರಂಭಿಸಿದರು, ಇದನ್ನು ಹಿಂದೆ ಸ್ಟುಪಿಡ್ ಜೀನಿಯಸ್ ಎಂದು ಕರೆಯಲಾಗುತ್ತಿತ್ತು. ಇದೇ ಕಾರ್ಯಕ್ರಮಕ್ಕಾಗಿ ಅವರು "ಅತ್ಯುತ್ತಮ ಪಾಡ್ಕಾಸ್ಟರ್" ಪ್ರಶಸ್ತಿಯನ್ನು ಗೆದ್ದರು. ಮುಂದೆ ಯೂ ಟ್ಯೂಬ್ ಸೇರಿದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಅವರದ್ದೇ ಹವಾ ಎದ್ದಿತು. ಟೈಮ್ಸ್ ಮ್ಯಾಗಜೀನ್‌ನ ಪ್ರತಿಷ್ಠಿತ ಇಂಟರ್‌ನೆಟ್‌ನ 100 ಪ್ರಭಾವಿ ವ್ಯಕ್ತಿಗಳಲ್ಲಿ ಇವರೂ ಕೂಡ ಒಬ್ಬರಾದರು.
ಇದನ್ನೂ ಓದಿ: Explained: 22 ನಾಯಿಗಳ ಮಧ್ಯೆ 2 ವರ್ಷ ಕೋಣೆಯಲ್ಲಿ ಬಂಧಿಯಾಗಿದ್ದ ಬಾಲಕ! ಪಾಪಿ ತಂದೆ-ತಾಯಿ ಈ ಶಿಕ್ಷೆ ಕೊಟ್ಟಿದ್ದೇಕೆ?
ಈ ಬಾರಿ ಭಾರತೀಯರ ಗಮನ ಸೆಳೆದಿದ್ದೇಕೆ ಈ ಎಮ್ಮ?
ಮೆಟ್ ಗಾಲಾ ಈವೆಂಟ್‌ನ ಈ ಬಾರಿಯ ಗೆಸ್ಟ್‌ಗಳಲ್ಲಿ ಎಮ್ಮಾ ಫ್ರಾನ್ಸಿಸ್ ಚೇಂಬರ್ಲೇನ್ ಕೂಡ ಒಬ್ಬರಾಗಿದ್ದರು. ಈ ಬಾರಿ ಅವರು ಆಕರ್ಷಕ ಡ್ರೆಸ್ ಜೊತೆಗೆ ತಮ್ಮ ಕತ್ತಲ್ಲಿ ಮಿರ ಮಿರ ಮಿಂಚುವ ಅತ್ಯಮೂಲ್ಯ ವಜ್ರಗಳ ಹರಳುಗಳುಳ್ಳ ನೆಕ್ಲೆಸ್ ಧರಿಸಿದ್ದರು. ಅದು ಈಗ ಭಾರೀ ಸುದ್ದಿ ಮಾಡುತ್ತಿದೆ. ಅದು ಭಾರತೀಯ ಸಂಸ್ಥಾನವೊಂದರ ಮಹಾರಾಜ ಭೂಪಿಂದರ್ ಸಿಂಗ್ ಅವರದ್ದು ಎನ್ನಲಾಗಿದೆ.
ಮಹಾರಾಜ ಭೂಪಿಂದರ್ ಸಿಂಗ್ ಯಾರು?
ಮಹಾರಾಜ ಭೂಪಿಂದರ್ ಸಿಂಗ್ ಅವರು ಪಟಿಯಾಲದ ರಾಜ. ಅವರುತಮ್ಮ 9 ನೇ ವಯಸ್ಸಿನಲ್ಲಿ, ತಂದೆ ಮಹಾರಾಜ ರಾಜೀಂದರ್ ಸಿಂಗ್ ಅವರ ಮರಣದ ನಂತರ 9 ನವೆಂಬರ್ 1900 ರಂದು ಪಟಿಯಾಲ ರಾಜ್ಯದ ಮಹಾರಾಜರಾಗಿ ಪಟ್ಟಕ್ಕೆ ಬಂದರು.
ಅನೇಕ ಬಾರಿ ವಿವಾಹವಾಗಿದ್ದ ಮಹಾರಾಜ
ಮಹಾರಾಜ ಭೂಪಿಂದರ್ ಸಿಂಗ್ ಅವರು ಅತ್ಯಂತ ಪ್ರಸಿದ್ಧ ಮಹಾರಾಜರಾಗಿದ್ದಾರೆ, ಜೊತೆಗೆ ಅವರ ದುಂದುಗಾರಿಕೆ, ವೈಭವಯುತ ಭೋಗ ಜೀವನ, ಆಕರ್ಷಕ ಕಟ್ಟಡ, ಐಷಾರಾಮಿ ಕಾರು, ವಿಮಾನ, ಕ್ರಿಕೆಟ್‌ಗಳಿಂದ ಖ್ಯಾತಿ ಹಾಗೂ ಅಪಖ್ಯಾತಿ ಗಳಿಸಿದರು. ಇವರು ಅನೇಕ ಬಾರಿ ವಿವಾಹವಾದರು ಮತ್ತು ಅವರ ಪತ್ನಿಯರು ಮತ್ತು ಉಪ ಪತ್ನಿಯರಿಂದ ಅನೇಕ ಮಕ್ಕಳನ್ನು ಪಡೆದರು. ಅವರು 1910ರಲ್ಲಿ ಯುನೈಟೆಡ್ ಕಿಂಗ್‌ಡಮ್‌ನಿಂದ ಖರೀದಿಸಿದ ವಿಮಾನವನ್ನು ಹೊಂದಿದ್ದ ಭಾರತದಲ್ಲಿ ಮೊದಲ ವ್ಯಕ್ತಿಯಾಗಿದ್ದಾರೆ. ಅವರ ವಿಮಾನಕ್ಕಾಗಿ ಅವರು ಪಟಿಯಾಲದಲ್ಲಿ ಏರ್ ಸ್ಟ್ರಿಪ್ ಅನ್ನು ನಿರ್ಮಿಸಿದರು.
ಕಳುವಾಗಿತ್ತು ಅವರ ಅತ್ಯಮೂಲ್ಯ ವಜ್ರದ ನೆಕ್ಲೆಸ್
1948ರ ಸುಮಾರಿಗೆ ಪಟಿಯಾಲಾದ ರಾಯಲ್ ಖಜಾನೆಯಿಂದ ಅತ್ಯಮೂಲ್ಯ ವಜ್ರದ ಹರಳುಗಳುಳ್ಳ ನೆಕ್ಲೆಸ್ ಕಣ್ಮರೆಯಾಯಿತು ಎಂದು ಹೇಳಲಾಗುತ್ತದೆ. ಈ ನೆಕ್ಲೆಸ್ ಡಿ ಬೀರ್ಸ್ ವಜ್ರವನ್ನು ಹೊಂದಿದ್ದು, ಇದು ವಿಶ್ವದ ಏಳನೇ ಅತ್ಯಂತ ದೊಡ್ಡ ವಜ್ರವಾಗಿತ್ತು.
ಎಮ್ಮಾ ಅವರ ನೆಕ್ಲೇಸ್ ಏಕೆ ವಿವಾದಾತ್ಮಕವಾಗಿತ್ತು?
ಕಾರ್ಟಿಯರ್‌ನ ಬ್ರಾಂಡ್ ಅಂಬಾಸಿಡರ್ ಆಗಿ ಎಮ್ಮಾ ಚೇಂಬರ್ಲೇನ್ ಮೆಟ್ ಗಾಲಾ ರೆಡ್ ಕಾರ್ಪೆಟ್‌ನಲ್ಲಿ ನಡೆದರು. ಲೂಯಿಸ್ ವಿಟಾನ್‌ನಲ್ಲಿ ತಲೆಯಿಂದ ಕಾಲಿನವರೆಗೆ ಧರಿಸಿರುವ ಆಕೆಯ ಉಡುಪನ್ನು 1911 ರ ಹಿಂದಿನ ವಿಂಟೇಜ್ ಪ್ಲಾಟಿನಂ ಮತ್ತು ವಜ್ರದ ಕಾರ್ಟಿಯರ್ ಕಿರೀಟ ಮತ್ತು ಪ್ರಶ್ನೆಯಲ್ಲಿರುವ ನೆಕ್ಲೇಸ್‌ನೊಂದಿಗೆ ಜೋಡಿಸಲಾಗಿತ್ತು.
ಈ ವಜ್ರದ ನೆಕ್ಲೆಸ್ ಹೇಗಿತ್ತು ಗೊತ್ತಾ?
ಇದು ಮೂಲತಃ ಐದು ಸರಪಳಿಗಳು ಮತ್ತು ಕುತ್ತಿಗೆಯ ಕಾಲರ್‌ಗಳ ಸಂಗ್ರಹದ ಭಾಗವಾಗಿತ್ತು, ಇದನ್ನು ಒಟ್ಟಾರೆಯಾಗಿ ಪಟಿಯಾಲಾ ನೆಕ್ಲೇಸ್ ಎಂದು ಕರೆಯಲಾಗುತ್ತದೆ. ಇದನ್ನು 1928 ರಲ್ಲಿ ಪಟಿಯಾಲದ ಮಹಾರಾಜ ಭೂಪಿಂದರ್ ಸಿಂಗ್‌ಗಾಗಿ ರಚಿಸಲಾಯಿತು ಮತ್ತು ಡಿ ಬೀರ್ಸ್ ಸೇರಿದಂತೆ ಸುಮಾರು 2,900 ವಜ್ರಗಳನ್ನು ಒಳಗೊಂಡಿತ್ತು - ಆ ಸಮಯದಲ್ಲಿ ಇದು ವಿಶ್ವದ ಏಳನೇ ಅತಿ ದೊಡ್ಡ ವಜ್ರವಾಗಿತ್ತು.
1982ರಲ್ಲಿ ಹರಾಜಾಗಿದ್ದ ನೆಕ್ಲೆಸ್
1948 ರಲ್ಲಿ, ಭಾರತದಲ್ಲಿ ಬ್ರಿಟಿಷ್ ಆಳ್ವಿಕೆಯ ನಂತರ ಪಟಿಯಾಲಾದ ರಾಜ ಖಜಾನೆಯಿಂದ ನೆಕ್ಲೆಸ್ ಕಾಣೆಯಾಗಿತ್ತು. 1982 ರಲ್ಲಿ, ಜಿನೀವಾದಲ್ಲಿ ಸೋಥೆಬಿ ಹರಾಜಿನಲ್ಲಿ, "ಡಿ ಬೀರ್ಸ್" ವಜ್ರವು ಮತ್ತೆ ಕಾಣಿಸಿಕೊಂಡಿತು ಮತ್ತು ಮಾರಾಟವಾಯಿತು. 1998 ರಲ್ಲಿ ಲಂಡನ್‌ನ ಸೆಕೆಂಡ್ ಹ್ಯಾಂಡ್ ಆಭರಣ ಅಂಗಡಿಯಲ್ಲಿ ಹಾರದ ಒಂದು ಭಾಗವನ್ನು ಮರುಪಡೆಯಲು ಬೇರೆ ವಜ್ರಗಳು ಮತ್ತು ಕಲ್ಲುಗಳನ್ನು ಸೇರಿಸಿ ಮರುಸೃಷ್ಟಿಸಲಾಗಿತ್ತು.
ಇದನ್ನೂ ಓದಿ: Explained: ಟೊಮೆಟೋ ತಿಂದ್ರೆ Tomato flu ಬರುತ್ತಾ? ಈ ಕುರಿತು ಏನ್ ಹೇಳ್ತಿದ್ದಾರೆ ತಜ್ಞರು
ಎಮ್ಮಾ ವಿರುದ್ಧ ಸಿಡಿದೆದ್ದ ಭಾರತೀಯರು
ಇದೀಗ ಎಮ್ಮಾ ಧರಿಸಿದ್ದ ವಜ್ರದ ನೆಕ್ಲೆಸ್ ಭಾರತೀಯರ ಕಣ್ಣು ಕೆಂಪಾಗಿಸಿದೆ. ಇದು ಮಹಾರಾಜ ಭೂಪಿಂದರ್ ಸಿಂಗ್ ಅವರ ಖಜಾನೆಯಿಂದ ಕದ್ದ ನೆಕ್ಲೆಸ್ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದೆ. ಇದನ್ನು ಕೂಡಲೇ ಕೇಂದ್ರ ಸರ್ಕಾರ ವಾಪಸ್ ಭಾರತಕ್ಕೆ ತರಬೇಕು ಅಂತ ಆಗ್ರಸಿಹಿಸಿದ್ದಾರೆ. ಕಳುವಾಗಿದ್ದ ವಜ್ರ ಎಮ್ಮಾ ಕತ್ತಲ್ಲಿ ಹೇಗೆ ಬಂತು ಅಂತ ಜನ ತಲೆಕೆಡಿಸಿಕೊಂಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ