Elon Musk: ಕ್ರಿಪ್ಟೋ ಕರೆನ್ಸಿ Dogecoin ನಿರ್ವಹಣಾ ಶುಲ್ಕ ಇಳಿಕೆಯಿಂದ ಉಂಟಾಗುವ ಪ್ರಯೋಜನವೇನು?

Elon Musk of Dogecoin: ಇದೊಂದು Cryptocurrencyಯಾಗಿದ್ದು ಡಿಜಿಟಲ್ ಹಣದ ರೂಪದಲ್ಲಿದೆ. ವಿಕೇಂದ್ರೀಕೃತ ನೆಟ್‌ವರ್ಕ್‌ನಲ್ಲಿ ವಹಿವಾಟುಗಳನ್ನು ಸಕ್ರಿಯಗೊಳಿಸುತ್ತದೆ. Elon Musk Dogecoin ನಿರ್ವಹಣಾ ಶುಲ್ಕವನ್ನು ಕಡಿಮೆ ಮಾಡುವುದರಿಂದ ಇದನ್ನು ಸಾಮಾನ್ಯ ವಿಷಯಗಳಿಗೆ ಬಳಸಬಹುದು ಎಂದು ತಿಳಿಸಿದ್ದಾರೆ

ಎಲಾನ್ ಮಸ್ಕ್

ಎಲಾನ್ ಮಸ್ಕ್

 • Share this:
  Cryptocurrency Latest Update: Dogecoin ಎಂಬುದು Bitcoinನಂತೆಯೇ ಇ-ವ್ಯವಹಾರಕ್ಕೆ ಬಳಸಲಾಗುವ ಡಿಜಿಟಲ್ ನಾಣ್ಯವಾಗಿದೆ. ಡಾಗ್ ಎಂಬುದು ಡಾಗ್ ಮೆಮೆಯನ್ನು ಉಲ್ಲೇಖಿಸುತ್ತದೆ ಹಾಗೂ ಶಿಬಾ ಇನು ಚಿತ್ರವನ್ನು ಹೊಂದಿದೆ. ಇದೊಂದು Cryptocurrencyಯಾಗಿದ್ದು ಡಿಜಿಟಲ್ ಹಣದ ರೂಪದಲ್ಲಿದೆ. ವಿಕೇಂದ್ರೀಕೃತ ನೆಟ್‌ವರ್ಕ್‌ನಲ್ಲಿ ವಹಿವಾಟುಗಳನ್ನು ಸಕ್ರಿಯಗೊಳಿಸುತ್ತದೆ. Elon Musk Dogecoin ನಿರ್ವಹಣಾ ಶುಲ್ಕವನ್ನು ಕಡಿಮೆ ಮಾಡುವುದರಿಂದ ಇದನ್ನು ಸಾಮಾನ್ಯ ವಿಷಯಗಳಿಗೆ ಬಳಸಬಹುದು ಎಂದು ತಿಳಿಸಿದ್ದಾರೆ.

  Dogecoin ಶುಲ್ಕವನ್ನು ಕಡಿಮೆ ಮಾಡಬೇಕು ಎಂದು Tesla ಮುಖ್ಯಸ್ಥರಾದ ಎಲಾನ್ ಮಸ್ಕ್ ಅಭಿಪ್ರಾಯ ವ್ಯಕ್ತಪಡಿಸಿದ್ದು ಚಲನಚಿತ್ರ ಟಿಕೆಟ್‌ಗಳನ್ನು ಕಡಿಮೆ ದರದಲ್ಲಿ ಖರೀದಿಸುವಂತಾಗಬೇಕು ಎಂಬ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಇದು ನಡೆದಲ್ಲಿ ನೀವು ಚಲನಚಿತ್ರ ವೀಕ್ಷಣೆಯನ್ನೂ ಮೇಮ್-ಕ್ರಿಪ್ಟೋ ಕರೆನ್ಸಿ ಬಳಸಿ ಮಾಡಬಹುದಾಗಿದೆ. ಡಾಝ್​ಕಾಯಿನ್ ಒಂದು ಹಾಸ್ಯದಂತೆ ಆರಂಭಗೊಂಡಿತು. ಮೇಮ್​ಕ್ರಿಪ್ಟೋ ಕರೆನ್ಸಿ ಹಾಸ್ಯವನ್ನು ಗಂಭೀರವಾಗಿ ಪರಿಗಣಿಸಿದವರಿಗೆ ಈ ಹಾಸ್ಯ ಪ್ರಭಾವಿತಗೊಳಿಸಿದಂತೆ ಕಾಣುತ್ತಿದೆ.

  ಮೇಮ್​-ಕ್ರಿಪ್ಟೋ ಕರೆನ್ಸಿ ಎಲಾನ್ ಮಸ್ಕ್ ಏಪ್ರಿಲ್ ಮಧ್ಯದಲ್ಲಿ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿದಾಗ ಈ ಕುರಿತು ಟ್ವೀಟ್ ಮಾಡುವುದನ್ನು ನಿಲ್ಲಿಸಲಿಲ್ಲ. ಡಾಝ್​ಕಾಯಿನ್ ಮಾರುಕಟ್ಟೆ ಕ್ಯಾಪ್ ಮೊದಲಿಗೆ ಹಾಸ್ಯವಾಗಿ ಆರಂಭಗೊಂಡರೂ ಮೇಮ್​ಕಾಯಿನ್ ಇದೀಗ $74.13 ಶತಕೋಟಿಯಷ್ಟು ಹೆಚ್ಚಾಗಿದೆ.

  ಡಾಝ್​ಕಾಯಿನ್‌ನ ಸಹ-ಸೃಷ್ಟಿಕರ್ತ ಶಿಬೆಟೋಶಿ ನಕಾಮೊಟೊ ಹೇಳುವಂತೆ ರಾಬಿನ್‌ಹುಡ್ ವಾಲೆಟ್‌ಗಳನ್ನು ಸೃಷ್ಟಿಸುವುದರಿಂದ ಅಂತಿಮವಾಗಿ ಕ್ರಿಪ್ಟೋ ಮಾರುಕಟ್ಟೆ ಸುಧಾರಣೆಯನ್ನು ಕಾಣುತ್ತಿದೆ ಎಂದು ಈ ಹಿಂದೆ ಹೇಳಿಕೆ ನೀಡಿದ್ದರು.

  ಟೆಸ್ಲಾ ಸಿಇಒ ಎಲಾನ್ ಮಸ್ಕ್, ಇತ್ತೀಚಿನ ಸಂದರ್ಶನವೊಂದರಲ್ಲಿ ಕ್ರಿಪ್ಟೋ ಭವಿಷ್ಯದ ಕರೆನ್ಸಿಯಾಗುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ತಿಳಿಸಿದ್ದರು. ತನದಂತರ ಅವರು ಡಾಝ್​ಕಾಯಿನ್ ಮೊದಲಿಗೆ ಹಾಸ್ಯವಾಗಿ ಅನ್ವೇಷಣೆಗೊಂಡಿದ್ದರೂ ಕ್ರಿಪ್ಟೋ ಕರೆನ್ಸಿಯನ್ನು ಗೇಲಿಮಾಡಲು ಇದೊಂದು ಪರ್ಯಾಯವಾಗಿ ಬೆಳೆದುನಿಂತಿದೆ. ಹಾಸ್ಯವಾಗಿ ಆರಂಭಗೊಂಡ ಕರೆನ್ಸಿ ತದನಂತರ ನೈಜ ಕರೆನ್ಸಿಯಾಗಿ ಮಾರ್ಪಟ್ಟಿತು ಎಂದು ತಿಳಿಸಿದ್ದಾರೆ. ಮೇಮ್​ ಆಧಾರಿತ ಕ್ರಿಪ್ಟೋ ಕರೆನ್ಸಿಯ ಕುರಿತು ಮತ್ತೊಮ್ಮೆ ಎಲಾನ್​ ಮಸ್ಕ್​ ಟ್ವೀಟ್ ಮಾಡಿದ್ದು ಈ ರೀತಿ ಅವರು ಹಲವಾರು ಬಾರಿ ಟ್ವೀಟ್ ಮಾಡಿದ್ದಾರೆ.

  ಡಾಝ್​ಕಾಯಿನ್ ತಮಾಷೆಯಾಗಿ ಆರಂಭಗೊಂಡಿತು ಹಾಗೂ ಏಳು ವರ್ಷಗಳ ಕಾಲ ಇದು ತಮಾಷೆಯಾಗಿಯೇ ಮುಂದುವರಿಯಿತು. ಮೇಮ್​ ಹಾಗೂ ಕ್ರಿಪ್ಟೋ ಕರೆನ್ಸಿ ಪ್ರೇಮಿಗಳು, ಮೇಮ್​-ಕ್ರಿಪ್ಟೋಕರೆನ್ಸಿಯನ್ನು ಸುಧಾರಿಸುವತ್ತ ಚಿತ್ತನೆಟ್ಟರು. ಹೀಗಾಗಿ ಕ್ರಿಪ್ಟೋ ಕರೆನ್ಸಿ ಮೌಲ್ಯದಲ್ಲಿ ಏರಿಕೆ ಕಂಡಿತು. ಮೊದಲಿಗೆ ಸೆಂಟ್ಸ್ ನಂತರ ಮೂವತ್ತು ಹಾಗೂ ಕೊನೆಗೆ ಏಪ್ರಿಲ್‌ 20 ರಂದು 69 ಸೆಂಟ್ಸ್ ದಾಖಲೆ ಸೃಷ್ಟಿಸಿತು. ಏಪ್ರಿಲ್ 21 ರಂತೆ ಕ್ರಿಪ್ಟೋ ಕರೆನ್ಸಿಯು 24 ಗಂಟೆಯ ಬದಲಾವಣೆಯಲ್ಲಿ 17.25% ಇಳಿಕೆ ಕಂಡಿದೆ.

  ಇದನ್ನೂ ಓದಿ: Explained: ಬಿಟ್ಕಾಯಿನ್ ವ್ಯಾಲೆಟ್ ಹೇಗೆ ಕೆಲಸ ಮಾಡುತ್ತದೆ? ಹೂಡಿಕೆ ಹೇಗೆ? ಒಂದು ಸಮಗ್ರ ಮಾರ್ಗದರ್ಶಿ

  ಇದನ್ನು ರಚಿಸಿದಾಗಿನಿಂದ ಡಾಗ್ ಅನ್ನು ಚ್ಯಾರಿಟಿಗಳಿಗೆ ಹಣ ನೀಡಲು ಬಳಸಲಾಗಿದೆ. 2013 ರಲ್ಲಿ ಮೇಮ್​ ಜನಪ್ರಿಯತೆಯ ಉತ್ತುಂಗದಲ್ಲಿದ್ದಾಗ, ಆಸ್ಟ್ರೇಲಿಯಾದ ಮಾರಾಟಗಾರನಾದ ಪಾಮರ್, ಇಂಟರ್‌ನೆಟ್‌ನ ಅತ್ಯಂತ ಹೆಚ್ಚು ಚರ್ಚಿತ ವಿಷಯಗಳನ್ನು ಸಂಯೋಜಿಸಿದರು. ಅದುವೇ ಕ್ರಿಪ್ಟೋ ಕರೆನ್ಸಿ ಹಾಗೂ ಡಾಝ್​. ಆತ Dogecoin.com ಡೊಮೇನ್ ಅನ್ನು ಖರೀದಿಸಿದರು ಹಾಗೂ ನಾನ್ಯದಲ್ಲಿ ಫೋಟೋಶಾಪ್ ಮಾಡಲಾದ ಶಿಬೆಯನ್ನು ಅಪ್‌ಲೋಡ್ ಮಾಡಿದರು.

  ಇದನ್ನೂ ಓದಿ: Elon Musk: ಬಾಹ್ಯಾಕಾಶಯಾನದ ಬಗ್ಗೆ ಕುತೂಹಲಕಾರಿ ಸಂಗತಿ ಹಂಚಿಕೊಂಡ ಎಲಾನ್ ಮಸ್ಕ್

  ಡಾಝ್​ಕಾಯಿನ್ ಅನ್ನು ನೈಜವಾಗಿ ಪರಿವರ್ತಿಸಲು ಬಯಸಿದಲ್ಲಿ ನೀವು ಸಂಪರ್ಕಲ್ಲಿರಿ ಎಂದು ವೆಬ್‌ಸೈಟ್​ ಆರಂಭದಲ್ಲಿಯೇ ತಿಳಿಸಲಾಗಿತ್ತು. IBM ನ ಎಂಜಿನಿಯರ್ ಬಿಲ್ಲಿ ಮಾರ್ಕಸ್ ಸಂಪರ್ಕಕಕ್ಕೆ ಬಂದರು ಹಾಗೂ ಡಾಝ್​ಕಾಯಿನ್ ಲೈವ್ ಅನ್ನು ಹೊಂದಿಸಿದರು. CoinMarketCap ಹೇಳಿರುವಂತೆ ಡಾಝ್​ಕಾಯಿನ್ ಕಳೆದ 24 ಗಂಟೆಗಳಲ್ಲಿ 60% ಕ್ಕಿಂತ ಏರಿಕೆಯನ್ನು ಕಂಡಿದೆ. ಹಾಗೂ ಟ್ರೇಡಿಂಗ್ ಮೌಲ್ಯದಲ್ಲಿ 1,421 ಹೆಚ್ಚಳವನ್ನು ಮಾಡಿದೆ ಎಂದಾಗಿದೆ.
  Published by:Sharath Sharma Kalagaru
  First published: