news18-kannada Updated:February 24, 2021, 6:14 PM IST
ಬಾಗ್ಪತ್ ಐನ್ಸ್ಟೈನ್ ಚಾಚಾ
'ಪೌರಿ ಹೋ ರಾ ಹೇ' , 'ಶ್ವೇತಾ' ಮೆಮ್ಸ್ ಬಳಿಕ ಈಗ ಸಾಮಾಜಿಕ ಜಾಲತಾಣದಲ್ಲಿ ಬಾಗ್ ಪತ್ 'ಐನ್ಸ್ಟೈನ್ ಚಾಚಾ' ಸಿಕ್ಕಾಪಟ್ಟೆ ಫೇಮಸ್ ಆಗಿದ್ದಾರೆ. ಅಷ್ಟೇ ಅಲ್ಲದೇ, ಖ್ಯಾತ ಭೌತಶಾಸ್ತ್ರಜ್ಞ ಆಲ್ಬರ್ಟ್ ಐನ್ಸ್ಟೈನ್ಗೆ ಹೋಲಿಕೆ ಮಾಡಿ ನೆಟ್ಟಿಗರು ಅವರ ಫೋಟೋಗಳನ್ನು ಹಂಚಿಕೊಳ್ಳಲಾಗುತ್ತಿದೆ. ಕಳೆದೆರಡು ದಿನಗಳಿಂದ ಟ್ರೆಂಡ್ನಲ್ಲಿರುವ ಈ ಚಾಚಾನ ಮೇಲಿನ ಮೆಮ್ಸ್ಗಳು ಎಲ್ಲರ ಗಮನಸೆಳೆಯುತ್ತಿದೆ. ಜೊತೆಗೆ ಈ ಚಾಚಾನ ಫೈಟಿಂಗ್ ವಿಡಿಯೋವನ್ನು ಜನರು ಸಿಕ್ಕಾಪಟ್ಟೆ ಟ್ರೋಲ್ ಕೂಡ ಮಾಡುತ್ತಿದ್ದಾರೆ. ಇಷ್ಟೆಲ್ಲಾ ಪ್ರಖ್ಯಾತಿ ಪಡೆದ ಈ ಚಾಚಾ ಯಾರು? ಏನಿದು ಇವರ ಕಥೆ ಎಂಬ ಬಗ್ಗೆ ಹಲವರಲ್ಲಿ ಕುತೂಹಲ ಕೂಡ ಮೂಡುತ್ತಿದ್ದು, ಅನೇಕ ಜನರು ಇವರ ಬಗ್ಗೆ ಹುಡುಕಾಟಕ್ಕೆ ಕೂಡ ಮುಂದಾಗಿದ್ದಾರೆ. ಇವರ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಇದ್ದರೆ, ಇಲ್ಲಿದೆ ನೋಡಿ ವಿವರಣೆ
ಯಾರೀ ಐನ್ಸ್ಟೈನ್ ಚಾಚಾ?
ಉತ್ತರ ಪ್ರದೇಶದ ಬಾಗ್ಪತ್ ನಿವಾಸಿಯಾಗಿರುವ ಹರೇಂದ್ರ ಎಂಬುವವರೆ ಈ ಐನ್ಸ್ಟೈನ್ ಚಾಚಾ. ಚಾಟ್ ಅಂಗಡಿ ಮಾಲೀಕರಾಗಿರುವ ಇವರು ಬಲು ಪ್ರಖ್ಯಾತಿಗಳಿಸಿದ್ದಾರೆ. ತಮ್ಮ ಸ್ಪರ್ಧಿಗಳಿಗೆ ಪ್ರಬಲ ಸ್ಪರ್ಧೆಯೊಡ್ಡುತ್ತಿರುವ ಈ ಚಾಚಾ ಗ್ರಾಹಕರನ್ನು ಸೆಳೆಯುವ ವಿಚಾರಕ್ಕಾಗಿಯೇ ನೆರೆಯ ಚಾಟ್ ಅಂಗಡಿಯವರೊಂದಿಗೆ ಸಂಘರ್ಷಕ್ಕೆ ಇಳಿದಿದ್ದರು. ನಡು ರಸ್ತೆಯಲ್ಲಿ ಕಬ್ಬಿಣದ ಸಲಾಕೆ, ಬಡಿಗೆ ಹಿಡಿದು ಏಳರಿಂದ ಎಂಟು ಜನರ ಜಗಳವಾಡಿದ್ದರು.
ಈ ವಿಡಿಯೋವನ್ನು ಎಎನ್ಐ ಸುದ್ದಿ ಸಂಸ್ಥೆ ಹಂಚಿಕೊಂಡಿತ್ತು. ಈ ಪ್ರಕರಣ ಕುರಿತು ಸುದ್ದಿ ಸಂಸ್ಥೆಗೆ ಸಂದರ್ಶನ ನೀಡಿದ್ದ ಈ ಹರೇಂದ್ರ, ತಮ್ಮ ಚಾಟ್ ಅಂಗಡಿ ಬಗ್ಗೆ ನೆರೆಯ ಅಂಗಡಿ ಮಾಲೀಕರು ಸುಳ್ಳು ಸುದ್ದಿ ಹಬ್ಬಿಸಿದ್ದಾರೆ. ಇದರಿಂದ ಗ್ರಾಹಕರು ತಮ್ಮ ಅಂಗಡಿಗೆ ಬರಲು ಹಿಂದೇಟು ಹಾಕುತ್ತಿದ್ದಾರೆ ಎಂದು ಆರೋಪಿಸಿದ್ದರು.
ಈ ಪ್ರಕರಣ ಕುರಿತು ತನಿಖೆ ನಡೆಸಿದ ಪೊಲೀಸರು ಹರೇಂದ್ರ ಸೇರಿದಂತೆ ಏಂಟು ಮಂದಿಯನ್ನು ಬಂಧಿಸಿದ್ದರು. ಈ ಪೋಟೋ, ವಿಡಿಯೋದಲ್ಲಿ ಹರೇಂದ್ರ ಕಂಡ ನೆಟ್ಟಿಗರು ಅವರನ್ನು ಆಲ್ಬರ್ಟ್ ಐನ್ಸ್ಟೈನ್ಗೆ ಹೋಲಿಕೆ ಮಾಡಿ ಮೆಮ್ಸ್ ಹರಿ ಬಿಡುತ್ತಿದ್ದಾರೆ.
ಅವರ ಕೂದಲ ಶೈಲಿಗೆ ನೆಟ್ಟಿಗರು ಫಿದಾ ಆಗಿದ್ದು, ಚಾಟ್ ಹೊರರಾಗಿ ಈಗ ಸಾಮಾಜಿಕ ಆಲಗಾಣತದಲ್ಲಿ ಸಿಕ್ಕಾಪಟ್ಟೆ ಬೇಡಿಕೆ ಸೃಷ್ಟಿಸಿಕೊಂಡಿದ್ದಾರೆ. ಈ ಐನ್ಸ್ಟೈನ್ ಚಾಚಾ.
Published by:
Seema R
First published:
February 24, 2021, 6:09 PM IST