• ಹೋಂ
  • »
  • ನ್ಯೂಸ್
  • »
  • Explained
  • »
  • ಸಾಗರಕ್ಕಿಂತ ಭೂ ಪ್ರದೇಶದಲ್ಲಿ ಸಾಮೂಹಿಕ ನಾಶವಾಗಲು ಬೇಕು 10 ಪಟ್ಟು ಹೆಚ್ಚು ಸಮಯ; ಅಧ್ಯಯನ

ಸಾಗರಕ್ಕಿಂತ ಭೂ ಪ್ರದೇಶದಲ್ಲಿ ಸಾಮೂಹಿಕ ನಾಶವಾಗಲು ಬೇಕು 10 ಪಟ್ಟು ಹೆಚ್ಚು ಸಮಯ; ಅಧ್ಯಯನ

(image for representation./REUTERS)

(image for representation./REUTERS)

ಭೂಮಿಯ ಮೇಲಿನ ಸುದೀರ್ಘ ಘಟನೆಗೆ ಸಮುದ್ರ ನಾಶ “ವಾಸ್ತವವಾಗಿ ವಿರಾಮ ಚಿಹ್ನೆಯಾಗಿರಬಹುದು” ಎಂದು ಸಂಶೋಧಕರು ಕಂಡುಕೊಂಡಿದ್ದಾರೆ ಎಂದು ಪ್ರಮುಖ ಲೇಖಕ ಪಿಯಾ ವಿಗ್ಲಿಯೆಟ್ಟಿ ಅವರು ಹೇಳಿದರು.

  • Share this:

    ಭೂಮಿಯ ಮೇಲೆ ಅತಿದೊಡ್ಡ ಸಾಮೂಹಿಕ ನಾಶ ಸಂಭವಿಸಿದ್ದು 252 ದಶಲಕ್ಷ ವರ್ಷಗಳ ಹಿಂದೆ. ಭಾರಿ ಜ್ವಾಲಾಮುಖಿ ಸ್ಫೋಟಗಳಿಂದಾಗಿ ಹವಾಮಾನ ವೈಪರೀತ್ಯ ದುರಂತ ಈ ನಾಶಕ್ಕೆ ಕಾರಣವಾಯಿತು. ಇದರ ಪರಿಣಾಮವಾಗಿ, ಬಹುಪಾಲು ಪ್ರಾಣಿ ಪ್ರಭೇದಗಳು ಕೊಲ್ಲಲ್ಪಟ್ಟವು ಮತ್ತು ಭೂ ಗ್ರಹವು ಡೈನೋಸಾರ್‌ಗಳ ಯುಗವನ್ನು ಪ್ರವೇಶಿಸಿತು. ಈ ಘಟನೆಯಿಂದ ಶೇಕಡಾ 97 ರಷ್ಟು ಜೀವ ವೈವಿಧ್ಯಗಳ ಪ್ರಭೇದ ಶಾಶ್ವತವಾಗಿ ಕಣ್ಮರೆಯಾಗಲು ಕಾರಣವಾಯಿತು. ಆದರೆ, ಈ ಸಾಮೂಹಿಕ ನಾಶ ಸಂಭವಿಸಲು ನೀರಿಗಿಂತ ಭೂ ಪ್ರದೇಶದಲ್ಲಿ 10 ಪಟ್ಟು ಹೆಚ್ಚು ಸಮಯ ತೆಗೆದುಕೊಂಡಿತು ಎಂದು ಚಿಕಾಗೊ ಫೀಲ್ಡ್ ಮ್ಯೂಸಿಯಂನ ಸಂಶೋಧಕರು ತಿಳಿಸಿದ್ದಾರೆ.


    ದಕ್ಷಿಣ ಆಫ್ರಿಕಾದ ಇಂದಿನ ಕರೂ ಜಲಾನಯನ ಪ್ರದೇಶದಲ್ಲಿ ಸಾಮೂಹಿಕ ಅಳಿವಿನ ಕೊನೆಯಲ್ಲಿ 588 ಪ್ರಾಣಿಗಳ ಪಳೆಯುಳಿಕೆಗಳನ್ನು ಅಧ್ಯಯನ ಮಾಡಿದ ಸಂಶೋಧಕರು, ಜ್ವಾಲಾಮುಖಿ ಸ್ಫೋಟಗಳು ಹೆಚ್ಚಿನ ಮಟ್ಟದ ಇಂಗಾಲದ ಡೈಆಕ್ಸೈಡ್ ಮತ್ತು ಹಸಿರುಮನೆ ಅನಿಲಗಳನ್ನು ಸಾಗರದ ಮೇಲೆ ಹೆಚ್ಚು ಸುರಿಯುವುದರಿಂದ ಅಲ್ಲಿ ಅಳಿವು ವೇಗವಾಗಿ ಸಂಭವಿಸಿದೆ ಎಂದು ಕಂಡುಕೊಂಡಿದೆ. ಆದರೆ, ಭೂ ಪ್ರದೇಶದಲ್ಲಿ ಬದಲಾವಣೆಗಳು ನಿಧಾನವಾಗಿದ್ದರಿಂದ ಹೆಚ್ಚಿನ ಜೀವಿಯು ನಾಶವಾಗಲು ಹೆಚ್ಚು ಅವಧಿ ತೆಗೆದುಕೊಂಡಿದೆ.


    ಭೂಮಿಯ ಮೇಲಿನ ಸುದೀರ್ಘ ಘಟನೆಗೆ ಸಮುದ್ರ ನಾಶ “ವಾಸ್ತವವಾಗಿ ವಿರಾಮ ಚಿಹ್ನೆಯಾಗಿರಬಹುದು” ಎಂದು ಸಂಶೋಧಕರು ಕಂಡುಕೊಂಡಿದ್ದಾರೆ ಎಂದು ಪ್ರಮುಖ ಲೇಖಕ ಪಿಯಾ ವಿಗ್ಲಿಯೆಟ್ಟಿ ಅವರು ಹೇಳಿದರು. ಭೂಮಿಯಲ್ಲಿ ಜೀವಕ್ಕೆ ಏನಾಯಿತು ಎಂದು ತಿಳಿಯಲು, ಸಂಶೋಧಕರು ಪೆರ್ಮಿಯನ್ ಸಾಮೂಹಿಕ ಅಳಿವಿನ ಸಮಯದಲ್ಲಿ ವಾಸಿಸುತ್ತಿದ್ದ 588 ನಾಲ್ಕು ಕಾಲಿನ ಪ್ರಾಣಿಗಳ ಪಳೆಯುಳಿಕೆಗಳನ್ನು ಪರೀಕ್ಷಿಸಿದರು, ಇದನ್ನು ಗ್ರೇಟ್ ಡೈಯಿಂಗ್ ಅವಧಿ ಎಂದೂ ಕರೆಯುತ್ತಾರೆ.


    ನಾಶದ ಮಾದರಿಗಳನ್ನು ಬಹಿರಂಗಪಡಿಸಲು ವಿಜ್ಞಾನಿಗಳಿಗೆ ಸಹಾಯ ಮಾಡಿದ ಒಂದು ಪ್ರಭೇದವೆಂದರೆ ಸಸ್ಯಾಹಾರಿ ಸಸ್ತನಿ ಲಿಸ್ಟ್ರೋಸಾರಸ್. ಇದು ಇತರ ಜೀವಗಳು ಹೆಣಗಾಡುತ್ತಿರುವಾಗ ಅಭಿವೃದ್ಧಿ ಹೊಂದಿತು. ಸಾಮೂಹಿಕ ನಾಶದ ಘಟನೆಯು ಭೂಮಿಯಲ್ಲಿ ಏಕೆ ನಿಧಾನವಾಗಿತ್ತು ಎಂದು ನಿಖರವಾಗಿ ತಿಳಿದು ಬಂದಿಲ್ಲ ಎಂದು ಸಂಶೋಧಕರು ಹೇಳುತ್ತಾರೆ. ಭೂಮಿಯ ಮೇಲಿನ ಹವಾಮಾನ ಬದಲಾವಣೆಯು ಕಾಲಾನಂತರದಲ್ಲಿ ಹೆಚ್ಚಾಗಿರುವುದು ಒಂದು ಉತ್ತರವಾಗಿರಬಹುದು.


    ಸಾಗರಗಳು ಬಹಳಷ್ಟು ಇಂಗಾಲದ ಡೈಆಕ್ಸೈಡ್ ಅನ್ನು ಹೀರಿಕೊಳ್ಳಬಹುದು ಅಥವಾ ತಾಪಮಾನದಲ್ಲಿ ಏರಿಕೆಯಾಗಬಹುದು ಎಂದು ಅವರು ವಿವರಿಸಿದರು. ತಾವು ಸಮುದ್ರ ಅಳಿವಿನ ಮೇಲೆ ಕೇಂದ್ರೀಕರಿಸಿದ್ದಕ್ಕೆ ಕಾರಣ ಅಧ್ಯಯನ ಮಾಡಲು ನೀರೊಳಗಿನ ಜೀವನದ ಸಂಪೂರ್ಣ ಪಳೆಯುಳಿಕೆ ದಾಖಲೆಗಳಿವೆ ಎಂದು ಹೇಳಿದರು. ಬೃಹತ್ ಜೀವವೈವಿಧ್ಯ ಬಿಕ್ಕಟ್ಟುಗಳು ಹೇಗಿವೆ ಎಂಬುದರ ಬಗ್ಗೆ ಪಳೆಯುಳಿಕೆ ದಾಖಲೆ ಕೆಲವು ಕಲ್ಪನೆಯನ್ನು ನೀಡುತ್ತದೆ. ಇಂದಿನ ಹವಾಮಾನ ಬದಲಾವಣೆ ಮತ್ತು ಆವಾಸಸ್ಥಾನ ನಾಶದ ಘಟನೆಗಳನ್ನು ಅರ್ಥಮಾಡಿಕೊಳ್ಳಲು ಅವರ ಸಂಶೋಧನೆಗಳು ನಮಗೆ ಸಹಾಯ ಮಾಡುತ್ತವೆ ಎಂದು ವಿಜ್ಞಾನಿಗಳು ಹೇಳುತ್ತಾರೆ.


    ಈ ಸಂಶೋಧನೆಗಳನ್ನು ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸಸ್‌ನ ಪ್ರೊಸೀಡಿಂಗ್ಸ್ ಜರ್ನಲ್‌ನಲ್ಲಿ ಪ್ರಕಟಿಸಲಾಗಿದೆ.

    First published: