E Khata: ಬೆಂಗಳೂರಿನ 44 ವಾರ್ಡುಗಳಲ್ಲಿ ಆಸ್ತಿ ನೋಂದಣಿಗೆ ಈಗ ಇ-ಖಾತಾ ಅತ್ಯಗತ್ಯ; ಇಲ್ಲಿದೆ ವಿವರ

ಇನ್ನು ಕಂದಾಯ ಇಲಾಖೆಯ ಅಧಿಕಾರಿಗಳು ಈ ಬಗ್ಗೆ ಮಾಹಿತಿ ನೀಡುತ್ತ ಸದ್ಯ ಈ ಕಡ್ಡಾಯ ಇ-ಖಾತಾ ನೋಂದಣಿಯನ್ನು ಈ ವರ್ಷಾಂತ್ಯದವರೆಗೆ ಬೆಂಗಳೂರಿನ ನೂರು ವಾರ್ಡುಗಳಲ್ಲಿ ಜಾರಿಗೆ ತರಲಾಗುತ್ತಿದ್ದು 2023ರ ವರೆಗೆ ನಗರದ ಎಲ್ಲ ವಾರ್ಡುಗಳಲ್ಲಿ ಇದನ್ನು ಅನುಷ್ಠಾನಗೊಳಿಸಲಾಗುವುದು ಎಂದು ಹೇಳಿದ್ದಾರೆ.

ಇ-ಖಾತಾ ನೋಂದಣಿ

ಇ-ಖಾತಾ ನೋಂದಣಿ

  • Share this:
ಬೆಂಗಳೂರಿನಲ್ಲಿ (Bengaluru) ಈಗ ಸದ್ಯ ಹೆಚ್ಚುತ್ತಿರುವ ಜಮೀನುಗಳಿಗೆ ಸಂಬಂಧಿಸಿದಂತೆ ಬೇನಾಮಿ ವ್ಯವಹಾರಗಳು (Business) ಹಾಗೂ ಭೂವಂಚನೆಗಳನ್ನು (Treason) ಪರಿಣಾಮಕಾರಿಯಾಗಿ ಹತ್ತಿಕ್ಕಲ್ಲು ಸರ್ಕಾರವು ಮುಂದಾಗಿರುವ ಹಿನ್ನೆಲೆಯ ಅಡಿಯಲ್ಲಿ ಈಗ ಬೆಂಗಳೂರಿನ 44 ವಾರ್ಡುಗಳಲ್ಲಿ ಆಸ್ತಿಗೆ (Property) ಸಂಬಂಧಿಸಿದಂತೆ ಡಿಜಿಟಲ್ ಖಾತಾ (Digital Khata) ಅಥವಾ ಇ-ಖಾತಾ (E-Khata) ನೋಂದಣಿಯನ್ನು ಕಡ್ಡಾಯ ಮಾಡಿದೆ ಎಂದು ತಿಳಿದುಬಂದಿದೆ. ಈ ಬಗ್ಗೆ ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿರುವ ನೋಂದಣಿ (Registration) ಹಾಗೂ ಮುದ್ರಾಂಕ ಇಲಾಖೆಯ ಐಜಿ ಮತ್ತು ಆಯುಕ್ತರಾಗಿರುವ ಮಮತಾ ಬಿಆರ್, "ನಾವು ಈಗಾಗಲೇ ಈ ಕಡ್ಡಾಯ ಇ-ಖಾತಾ ನಿಯಮವನ್ನು 14 ವಾರ್ಡುಗಳಲ್ಲಿ ಅನುಷ್ಠಾನಗೊಳಿಸಿದ್ದು ಮುಂದಿನ 30 ವಾರ್ಡುಗಳಲ್ಲೂ ಸಹ ಇದನ್ನು ಪಾಲಿಸುವ ನಿಮಿತ್ತ ಸರ್ಕಾರಿ ಆದೇಶವನ್ನು ಹೊರಡಿಸಿದ್ದೇವೆ" ಎಂದಿದ್ದಾರೆ.

ಇ-ಖಾತಾ ನೋಂದಣಿ

ಇನ್ನು ಕಂದಾಯ ಇಲಾಖೆಯ ಅಧಿಕಾರಿಗಳು ಈ ಬಗ್ಗೆ ಮಾಹಿತಿ ನೀಡುತ್ತ ಸದ್ಯ ಈ ಕಡ್ಡಾಯ ಇ-ಖಾತಾ ನೋಂದಣಿಯನ್ನು ಈ ವರ್ಷಾಂತ್ಯದವರೆಗೆ ಬೆಂಗಳೂರಿನ ನೂರು ವಾರ್ಡುಗಳಲ್ಲಿ ಜಾರಿಗೆ ತರಲಾಗುತ್ತಿದ್ದು 2023ರ ವರೆಗೆ ನಗರದ ಎಲ್ಲ ವಾರ್ಡುಗಳಲ್ಲಿ ಇದನ್ನು ಅನುಷ್ಠಾನಗೊಳಿಸಲಾಗುವುದು ಎಂದು ಹೇಳಿದ್ದಾರೆ.

ಹೆಚ್ಚುತ್ತಿರುವ ಭೂ ಆಸ್ತಿ ವಂಚನೆ ಪ್ರಕರಣ

ಈಗಾಗಲೇ ಬೆಂಗಳೂರಿನಂತಹ ನಗರದಲ್ಲಿ ಭೂ ಆಸ್ತಿ ವಂಚನೆ ಪ್ರಕರಣಗಳು ಸಾಕಷ್ಟು ದಾಖಲೆಯಾಗಿದ್ದು ಈ ಕ್ರಮದಿಂದ ಮುಂದಿನ ದಿನಗಳಲ್ಲಿ ಈ ರೀತಿಯ ಭೂ ವಂಚನೆಗಳನ್ನು ಹಾಗೂ ಒಂದೇ ಆಸ್ತಿಯನ್ನು ಮೋಸಗಾರರು ಹಲವು ಬಾರಿ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಮಾರುವುದನ್ನು ಪರಿಣಾಮಕಾರಿಯಾಗಿ ತಪ್ಪಿಸಬಹುದಾಗಿದೆ ಎನ್ನುತ್ತಾರೆ ಕಂದಾಯ ಇಲಾಖೆಯ ಅಧಿಕಾರಿ ಒಬ್ಬರು.

ಇದನ್ನೂ ಓದಿ:  Government Job: ಸರ್ಕಾರಿ ಕೆಲಸ ಹುಡುಕುತ್ತಿದ್ರೆ ಇಲ್ಲಿದೆ ಅವಕಾಶ - 8 ಹುದ್ದೆಗೆ ಅಪ್ಲೈ ಮಾಡಿ

ಇನ್ನು, ಹೊಸದಾಗಿ ಬಂದಿರುವ ಇ-ಸ್ವತ್ತು ತಂತ್ರಾಂಶವು ರಿಯಲ್ ಎಸ್ಟೇಟ್ ನಲ್ಲಿನ ಭೂ-ವಂಚನೆಗಳು ಹಾಗೂ ಆಸ್ತಿ ವಿವಾದಗಳನ್ನು ಸಮ್ರ್ಥವಾಗಿ ಬಗೆಹರಿಸುತ್ತದೆಂದು ನಿರೀಕ್ಷಿಸಲಾಗಿದ್ದು ಆಸ್ತಿ ನಿರ್ವಹಣೆ ಇದರಿಂದ ಸುಗಮವಾಗಿ ಸಾಗಲಿದೆ ಎಂದು ಅಪೇಕ್ಷಿಸಲಾಗಿದೆ.

ಈ ವ್ಯವಸ್ಥೆಯಡಿಯಲ್ಲಿ ಬೇರೆಯವರ ಸೋಗಿನಲ್ಲಿ ವ್ಯವಹರಿಸುವುದು ಅಸಾಧ್ಯವಾಗಿದೆ ಏಕೆಂದರೆ ಈ ವ್ಯವಸ್ಥೆಯು ಡಿಜಿಟಲ್ ರೂಪದಲ್ಲಿ ಪ್ರಮಾಣಿತ ಪತ್ರದೊಂದಿಗೆ ಇತರೆ ಬಗೆಯ 47 ಮಾಹಿತಿಗಳು ಹಾಗೂ ಆಸ್ತಿಯ ನಿಜವಾದ ಒಡೆಯನ ಭಾವಚಿತ್ರ ಹೊಂದಿರುವುದಲ್ಲದೆ ಡಿಜಿಟಲ್ ಸಹಿ ಹಾಗೂ ಅದನ್ನು ಸುರಕ್ಷಿತವಾಗಿರುಸುವಂತಹ ಬಾರ್ ಕೋಡ್ ಅನ್ನು ಹೊಂದಿರುತ್ತದೆ ಮತ್ತು ಇದನ್ನು ಡಿಜಿ ಲಾಕರ್ ವ್ಯವಸ್ಥೆಯಲ್ಲಿ ಸಂರಕ್ಷಿಸಲಾಗಿರುತ್ತದೆ.

ಆನ್ಲೈನ್ ಮೂಲಕ ನೋಂದಾವಣೆ

ಇದಕ್ಕೂ ಮೊದಲು ಇದ್ದ ಖಾತಾ ಪ್ರಮಾಣ ಪತ್ರಗಳಲ್ಲಿ ಕೇವಲ 18 ಬಗೆಯ ಮಾಹಿತಿಗಳಿರುತ್ತಿತ್ತು. ಈ ತಂತ್ರಾಂಶದ ಮತ್ತೊಂದು ವೈಶಿಷ್ಠ್ಯವೆಂದರೆ ಆಸ್ತಿಗಳ ಮಾಲಿಕರೇ ಸ್ವತಃ ತಮ್ಮ ಆಸ್ತಿಗೆ ಸಂಬಂಧಿಸಿದಂತೆ ವಿಲೇವಾರಿ, ಹೆಸರು ಸೇರಿಸುವಿಕೆ, ಡಿಕ್ರೀ, ಉಡುಗೊರೆ, ವಾಅರಸುದಾರರು ಮುಂತಾದ ಮಾಹಿತಿಗಳನ್ನು ಆನ್ಲೈನ್ ಮೂಲಕವೇ ಸೇರಿಸಬಹುದಾಗಿದೆ. ಇದಕ್ಕೆ ಸಂಬಂಧಿಸಿದಂತೆ ಕಂದಾಯ ಇಲಾಖೆಯ ಅಧಿಕಾರಿ ಈ ಎಲ್ಲ ಮಾಹಿತಿಗಳನ್ನು ಪರಿಶೀಲಿಸಿ ದೃಢೀಕರಿಸಿ ಅನುಮೋದಿಸಲಿದ್ದಾರೆ.

ಪಾಲಿಕೆಯು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸೇರಿ ಈಗಾಗಲೇ 2020 ರಲ್ಲಿ ಬೆಂಗಳೂರಿನ ಮೂರು ವಾರ್ಡುಗಳಲ್ಲಿ ಅಂದರೆ ಶಾಂತಿನಗರ, ನೀಲಸಂದ್ರ ಹಾಗೂ ಶಾಂತಲಾನಗರಗಳಲ್ಲಿ ಇ-ಆಸ್ತಿ ಪೈಲಟ್ ಯೋಜನೆಯೊಂದನ್ನು ಅನುಷ್ಠಾನಗೊಳಿಸಿದ್ದು ಡಿಜಿಟಲ್ ಖಾತಾಗಳನ್ನು ವಿತರಿಸಲಾಗುತ್ತಿದೆ ಎಂದು ತಿಳಿದುಬಂದಿದೆ.

ಇಲಾಖೆಯ ಅಧಿಕಾರಿಗಳು ಹೇಳುವಂತೆ ಮುಂದಿನ ದಿನಗಳಲ್ಲಿ ಮೊದಲ ಹಂತದಲ್ಲಿ ಬೆಂಗಳೂರು ಪೂರ್ವ ಹಾಗೂ ದಕ್ಷಿಣ ಸೇರಿದಂತೆ ನೂರು ವಾರ್ಡುಗಳಲ್ಲಿ ಇದನ್ನು ಕಾರ್ಯಗತ ಮಾಡಲಾಗುತ್ತದೆ ಹಾಗೂ ತದನಂತರ ಎರಡನೇ ಹಂತದಲ್ಲಿ ಈ ಯೋಜನೆಯನ್ನು ಮಹದೇವಪುರ, ಯಲಹಂಕ, ದಾಸನಪುರ, ಬೊಮ್ಮನಹಳ್ಳಿ, ರಾಜರಾಜೇಶ್ವರಿನಗರ ಹಾಗೂ ಇತರೆ ಪ್ರದೇಶಗಳಲ್ಲಿ ಅನುಷ್ಠಾನಗೊಳಿಸಲಾಗುವುದು ಎಂದಿದ್ದಾರೆ.

ಅಧಿಕಾರಿಗಳು ಆ ಬಗ್ಗೆ ಪರಿಶೀಲಿಸಿ ಅನುಮೋದಿಸಲು ಮೂರು ದಿನಗಳ ಕಾಲಾವಕಾಶ

ನೋಂದಣಿ ಹಾಗೂ ಮುದ್ರಾಂಕ ಇಲಾಖೆಯ ಇ-ಸ್ವತ್ತು ಮತ್ತು ಕಾವೇರಿ ತಂತ್ರಾಂಶಗಳನ್ನು ಈಗಾಗಲೇ ಒಂದಕ್ಕೊಂದು ಲಿಂಕ್ ಮಾಡಲಾಗಿದ್ದು ಇಲ್ಲಿ ಮಾಡಬಹುದಾದ ಯಾವುದೇ ಕ್ರಮ ಅಧಿಕಾರಿಗಳ ಗಮನಕ್ಕೆ ಸ್ವಯಂಚಾಲಿತ ವ್ಯವಸ್ಥೆಯ ಮೂಲಕ ತಾನಾಗಿಯೇ ಬರಲಿದೆ ಹಾಗೂ ಆ ನಂತರ ಅಧಿಕಾರಿಗಳು ಆ ಬಗ್ಗೆ ಪರಿಶೀಲಿಸಿ ಅನುಮೋದಿಸಲು ಮೂರು ದಿನಗಳ ಕಾಲಾವಕಾಶ ಇರಲಿದೆ ಎಂದು ತಿಳಿದುಬಂದಿದೆ.

ಇಲ್ಲಿ ಆಸ್ತಿಗೆ ಸಂಬಂಧಿಸಿದಂತೆ ಏನಾದರೂ ಬದಲಾವಣೆ ಮಾಡುವುದಿದ್ದಲ್ಲಿ ಅದನ್ನು ಬೆಂಬಲಿಸುವ ದಾಖಲೆಗಳನ್ನು ಲಗತ್ತಿಸುವ ಸೌಲಭ್ಯವನ್ನೂ ಸಹ ಇದರಲ್ಲಿ ಕಲ್ಪಿಸಲಾಗಿದೆ ಎನ್ನಲಾಗಿದೆ.

ಇದನ್ನೂ ಓದಿ:  UPSC Recruitment: ಡ್ರಗ್ ಇನ್ಸ್‌ಪೆಕ್ಟರ್, ಅಸಿಸ್ಟೆಂಟ್ ಡೈರೆಕ್ಟರ್ ಹುದ್ದೆಗೆ ಅರ್ಜಿ ಆಹ್ವಾನ; ಪದವಿ ಆಗಿದ್ರೆ ಸಾಕು

ಈ ಒಟ್ಟಾರೆ ವ್ಯವಸ್ಥೆ ಈಗ ಭೂ ವಂಚನೆಗಳನ್ನು ತಡೆಗಟ್ಟಲು ಪರಿಣಾಮಕಾರಿಯಾಗಿ ಕೆಲಸ ಮಾಡಲಿದೆ ಎಂಬ ನಿರೀಕ್ಷೆ ಎಲ್ಲರಲ್ಲೂ ಮೂಡಿದ್ದು ಇದಕ್ಕೆ ಸಂಬಂಧಿಸಿದಂತೆ ವೈಷ್ಣವಿ ಗ್ರೂಪ್ ನಿರ್ದೇಶಕರಾದ ದರ್ಶನ್ ಗೋವಿಂದರಾಜು ಅವರು ಈ ರೀತಿ ಪ್ರತಿಕ್ರಿಯಿಸುತ್ತಾರೆ.

"ಈ ಮೊದಲು ಖಾತಾ ನೋಂದಣಿ ಬಲು ಕಠಿಣ ಹಾಗೂ ಬಲು ಎಚ್ಚರಿಕೆಯಿಂದ ನಿರ್ವಹಿಸಬೇಕಾದ ಕೆಲಸವಾಗಿತ್ತು, ಈಗ ಇದು ಡಿಜಿಟಲ್ ರೂಪ ಪಡೆದಿದ್ದು ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಸರಿಯಾದ ದಿಕ್ಕು ತೋರುವಂತಾಗಿದೆ" ಎಂದಿದ್ದಾರೆ.
Published by:Ashwini Prabhu
First published: