• Home
 • »
 • News
 • »
 • explained
 • »
 • Goeie Mie History: ನೆದರ್ಲ್ಯಾಂಡ್‌ನ ಸರಣಿ ಕೊಲೆಗಾತಿ 'ಗೋಯಿ ಮಿ'; ಕೊಲೆಗಳನ್ನು ಮಾಡಿದ ಉದ್ದೇಶವಾದರೂ ಏನು?

Goeie Mie History: ನೆದರ್ಲ್ಯಾಂಡ್‌ನ ಸರಣಿ ಕೊಲೆಗಾತಿ 'ಗೋಯಿ ಮಿ'; ಕೊಲೆಗಳನ್ನು ಮಾಡಿದ ಉದ್ದೇಶವಾದರೂ ಏನು?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಎಷ್ಟೋ ಕೊಲೆಗಳನ್ನು ನಡೆಸಿದ ನಂತರ ಇಂತಹ ಪಾತಕಿಗಳು ಕಾನೂನಿನ ಕಣ್ಣಿಗೆ ಬೀಳುತ್ತಾರೆ. ಇದೀಗ ಇಂತಹುದೇ ಸರಣಿ ಕೊಲೆಯ ಪಾತಕಿಯೊಬ್ಬರ ಯಾತನಾಮಯ ಜೀವನದ ಬಗ್ಗೆ ಇಂದಿನ ಲೇಖನದಲ್ಲಿ ತಿಳಿಸಲಿದ್ದು ಆಕೆ ಸರಣಿ ಕೊಲೆಗಳನ್ನು ಏಕೆ ನಡೆಸುತ್ತಿದ್ದಳು? ಹೇಗೆ ನಡೆಸುತ್ತಿದ್ದಳು? ಪೊಲೀಸರ ಕೈಗೆ ಈ ಪಾತಕಿ ಸಿಕ್ಕಿಬಿದ್ದಿದ್ದಾದರೂ ಹೇಗೆ ಎಂಬುದನ್ನು ತಿಳಿಸುತ್ತೇವೆ ನೋಡಿ

ಮುಂದೆ ಓದಿ ...
 • Share this:

  ಸರಣಿ ಕೊಲೆ (Serial Killer) ಮಾಡುವ ಅದೆಷ್ಟೋ ದುಷ್ಕರ್ಮಿಗಳ ಕುರಿತು ನಾವು ಸುದ್ದಿಪತ್ರಿಕೆ, ಟಿವಿ (TV), ಸಾಮಾಜಿಕ ತಾಣಗಳಲ್ಲಿ (Social Media) ವೀಕ್ಷಿಸಿರುತ್ತೇವೆ. ತಮ್ಮದೇ ಕುಟುಂಬದ ಸದಸ್ಯರನ್ನು ಕೌಟುಂಬಿಕ ವಿಷಯಕ್ಕಾಗಿ ಕೊಲೆ ಮಾಡುವುದು, ಹಣದ ವ್ಯಾಮೋಹಕ್ಕೆ ಬಲಿಯಾಗಿ ಕೊಲೆ ನಡೆಸುವುದು ಈ ಸರಣಿ ಕೊಲೆಗಳ ಹಿಂದಿರುವ ಉದ್ದೇಶವಾಗಿರುತ್ತದೆ. ಆದರೂ ಮೇಲಿಂದ ಮೇಲೆ ಕೊಲೆಗಳನ್ನು ನಡೆಸುವ ಕೊಲೆಗಡುಕರಿಗೆ ಕಿಂಚಿತ್ತೂ ದಯೆ, ಕರುಣೆ ಎಂಬುದಿಲ್ಲವೇ? ಎಂದು ನಾವು ಬೇಸರಪಡುತ್ತೇವೆ. ಇನ್ನು ಕೆಲವೊಮ್ಮೆ ಅವರ ಪೈಶಾಚಿಕ ಕೃತ್ಯ ನೆನೆದು ಮರಣದಂಡನೆಯಂತಹ ಕಠಿಣ ಶಿಕ್ಷೆ ಅವರಿಗೆ ದೊರೆಯಬೇಕು ಎಂದು ಆಶಿಸುತ್ತೇವೆ.


  ಎಷ್ಟೋ ಕೊಲೆಗಳನ್ನು ನಡೆಸಿದ ನಂತರ ಇಂತಹ ಪಾತಕಿಗಳು ಕಾನೂನಿನ ಕಣ್ಣಿಗೆ ಬೀಳುತ್ತಾರೆ. ಇದೀಗ ಇಂತಹುದೇ ಸರಣಿ ಕೊಲೆಯ ಪಾತಕಿಯೊಬ್ಬರ ಯಾತನಾಮಯ ಜೀವನದ ಬಗ್ಗೆ ಇಂದಿನ ಲೇಖನದಲ್ಲಿ ತಿಳಿಸಲಿದ್ದು ಆಕೆ ಸರಣಿ ಕೊಲೆಗಳನ್ನು ಏಕೆ ನಡೆಸುತ್ತಿದ್ದಳು? ಹೇಗೆ ನಡೆಸುತ್ತಿದ್ದಳು? ಪೊಲೀಸರ ಕೈಗೆ ಈ ಪಾತಕಿ ಸಿಕ್ಕಿಬಿದ್ದಿದ್ದಾದರೂ ಹೇಗೆ ಎಂಬುದನ್ನು ತಿಳಿಸುತ್ತೇವೆ ನೋಡಿ


  ಸರಣಿ ಕೊಲೆಗಳ ಪಾತಕಿ


  1883 ರಲ್ಲಿ ಡಚ್ ನಗರದ ಲೈಡೆನ್‌ನಲ್ಲಿ ನಡೆದ ಸರಣಿ ಕೊಲೆಗಳ ಒಂದೊಂದೇ ಎಳೆಗಳನ್ನು ಬಿಚ್ಚಿಡುತ್ತಾ ಹೋಗುತ್ತದೆ ಹೆಂಡ್ರಿಕ್ ಫ್ರಾಂಕ್‌ಹೈಜೆನ್‌ನ ಪತ್ನಿ ಹಾಗೂ ನವಜಾತ ಕೂಸು ವಾಂತಿ ಬೇಧಿಯಿಂದ ನರಳಿ ಮೃತಪಟ್ಟ ನಂತರ ಸ್ವತಃ ಹೆಂಡ್ರಿಕ್ ಫ್ರಾಂಕ್‌ಹೈಜೆನ್ ಹಲವಾರು ದಿನಗಳಿಂದ ಆತನನ್ನು ಕಂಗೆಡಿಸಿದ್ದ ಅಸಹನೀಯ ನೋವು ತಾಳಲಾರದೆ ವೈದ್ಯರ ತಪಾಸಣೆಗೆ ಬರುತ್ತಾರೆ. ಈ ಸಮಯದಲ್ಲಿ ಶಂಕೆಗೆ ಒಳಗಾದ ವೈದ್ಯರು ಇದರಲ್ಲೇನೋ ಸಮಸ್ಯೆ ಇದೆ ಎಂಬ ತೀರ್ಮಾನಕ್ಕೆ ಬರುತ್ತಾರೆ. ಏಕೆಂದರೆ ಅದೇ ಬಡಾವಣೆಯ ಬೇರೊಬ್ಬ ವ್ಯಕ್ತಿ ಇಂತಹುದೇ ರೋಗಲಕ್ಷಣಗಳೊಂದಿಗೆ ವೈದ್ಯರ ತಪಾಸಣೆಗೆ ಬಂದಿರುತ್ತಾನೆ.


  ಇದನ್ನೂ ಓದಿ: ಮಂಡ್ಯದಿಂದ ಓಡಿ ಬಂದ ಕಳ್ಳ ಗೋವಿಂದ! ಮಂಜುನಾಥ ಆಗಿದ್ದವ 'ಸ್ಯಾಂಟ್ರೋ ರವಿ' ಹೇಗಾದ?


  ಕಾಲರಾ ಎಂದೇ ವೈದ್ಯರು ಭಾವಿಸಿದ್ದರು


  ಮೊದಲಿಗೆ ವೈದ್ಯರು ಕಾಲರಾ ಸಮಸ್ಯೆಯಿಂದ ಇಂತಹ ರೋಗಲಕ್ಷಣಗಳು ಬಂದಿರುತ್ತವೆ  ಎಂದು ಅಷ್ಟೇನೋ ತಲೆಕೆಡಿಸಿಕೊಂಡಿರಲಿಲ್ಲ ಏಕೆಂದರೆ ಆ ಬಡಾವಣೆಯಲ್ಲಿ ಆಗ ಕಾಲರಾ ನಿರಂತರವಾಗಿ ಜನರನ್ನು ಬಲಿ ತೆಗೆದುಕೊಳ್ಳುತ್ತಿತ್ತು. ಆದರೆ ಕುಟುಂಬದ ಸದಸ್ಯರು ಕೆಲವೇ ವಾರಗಳಲ್ಲಿ ಅತಿಸಾರ, ವಾಂತಿ ಬೇಧಿಯಿಂದ ಬಳಲುತ್ತಾರೆ ಹಾಗೂ ಕೆಲವೇ ದಿನಗಳಲ್ಲಿ ಮರಣ ಹೊಂದುತ್ತಾರೆ ಈ ಸಮಯದಲ್ಲಿ ವೈದ್ಯರ ಚಿಕಿತ್ಸೆ ಕೂಡ ಫಲಕಾರಿಯಾಗುವುದಿಲ್ಲ. ಹೀಗಾಗಿ ಯಾರಾದರೂ ನೆರೆಹೊರೆಯವರಿಗೆ ವಿಷವನ್ನು ನೀಡುತ್ತಿದ್ದಾರೆಯೇ ಎಂಬ ಶಂಕೆ ವೈದ್ಯರಿಗೆ ಮೂಡುತ್ತದೆ


  ಸಾಂದರ್ಭಿಕ ಚಿತ್ರ


  ತನಿಖೆ ಕೈಗೆತ್ತಿಕೊಂಡ ಪೊಲೀಸರು


  ಫ್ರಾಂಕ್‌ಹೈಜೆನ್‌ 11 ದಿನಗಳ ನಂತರ ಆಸ್ಪತ್ರೆಯಲ್ಲೇ ಅಸುನೀಗುತ್ತಾರೆ ಹಾಗೂ ಫ್ರಾಂಕ್‌ಹೈಜೆನ್‌ ಮರಣದ ನಂತರ ಪೊಲೀಸರು ಕೂಡ ವೈದ್ಯರು ನೀಡಿರುವ ಹೇಳಿಕೆಯನ್ನು ಅನುಸರಿಸಿ ತನಿಖೆಯನ್ನು ಚುರುಕುಗೊಳಿಸುತ್ತಾರೆ. ಆದರೆ ಪೊಲೀಸರಿಗೆ ಆಘಾತವಾಗುವಂತೆ 44 ರ ಹರೆಯದ ಮಾರಿಯಾ ಸ್ವಾನೆನ್ಬರ್ಗ್ ತನ್ನದೇ ನೆರೆಹೊರೆಯ ಜನರಿಗೆ ವಿಷವುಣಿಸಿ ಅವರು ಸಾಯುವಂತೆ ಮಾಡುತ್ತಿದ್ದಳು. ತನ್ನ ನಿಷ್ಕಲ್ಮಶ ಸ್ನೇಹ, ವಿಶ್ವಾಸಾರ್ಹ ಸ್ವಭಾವದಿಂದ ಆಕೆಯನ್ನು ನೆರೆಹೊರೆಯವರು ಗೋಯಿ ಮಿ ಎಂದೇ ಸಂಬೋಧಿಸುತ್ತಿದ್ದರು. ಮರಣ ಹೊಂದಿದ ಫ್ರಾಂಕ್‌ಹೈಜೆನ್‌ ಅತ್ತಿಗೆ ಇದೇ ಪಾತಕಿ ಮಾರಿಯಾ ಸ್ವಾನೆನ್ಬರ್ಗ್.


  ಆಕೆ ಮಾಡಿದ ಕೊಲೆಗಳು 100 ಕ್ಕೂ ಹೆಚ್ಚೆಂಬ ಶಂಕೆ ಇದೆ


  ಸ್ವಾನೆನ್ಬರ್ಗ್ ಅನ್ನು ಪೊಲೀಸರು ಪ್ರಾಥಮಿಕ ಶಂಕಿತೆ ಎಂದು ತೀರ್ಮಾನಿಸಿದ ನಂತರ ನೆರೆಹೊರೆಯ ಜನರು ತಮ್ಮ ಕುಟುಂಬದಲ್ಲಿ ಸಂಭವಿಸಿದ ನಿಗೂಢ ಹಾಗೂ ಆಕಸ್ಮಿಕ ಮರಣಗಳ ಬಗ್ಗೆ ವಿವರ ನೀಡುತ್ತಾರೆ. ಕುಟುಂಬ ಸದಸ್ಯರು ಒಬ್ಬೊಬ್ಬರಾಗಿ ಕೆಲವೊಂದು ಕಾಲರಾ ರೋಗದ ರೋಗಲಕ್ಷಣಗಳೊಂದಿಗೆ ನರಳಿ ಅಸುನೀಗಿರುವುದನ್ನು ಪೊಲೀಸರಿಗೆ ತಿಳಿಸುತ್ತಾರೆ. ಇನ್ನಷ್ಟು ತನಿಖೆ ನಡೆಸಿದಾಗ ಸ್ವಾನೆನ್ಬರ್ಗ್ 23 ಜನರನ್ನು ಕೊಂದಿರುವುದು ಪತ್ತೆಯಾಗುತ್ತದೆ ಆದರೆ ಒಂದು ಮಾಹಿತಿಯ ಪ್ರಕಾರ ಆಕೆ 100 ಕ್ಕೂ ಹೆಚ್ಚಿನ ಜನರನ್ನು ವಿಷವುಣಿಸಿ ಹತ್ಯೆಗೈದಿದ್ದಾರೆ ಎಂದೂ ಶಂಕಿಸಲಾಗಿದೆ.


  ಇತಿಹಾಸಕಾರ ಸ್ಟೀಫನ್ ಗ್ಲಾಸ್ಬರ್ಗ್ನ್ 2019 ರಲ್ಲಿ ಡಚ್‌ ಭಾಷೆಯಲ್ಲಿ ಪ್ರಕಟವಾದ ತಮ್ಮ ಪುಸ್ತಕ (Goeie Mie: Biography of a female serial killer) ದಲ್ಲಿ ಮಾರಿಯಾ ಸ್ವಾನೆನ್‌ಬರ್ಗ್ ಕುರಿತು ಕೆಲವೊಂದು ರೋಚಕ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.


  ಆರ್ಥಿಕ ಪರಿಸ್ಥಿತಿ ಕಾರಣವೇ?


  ಕಡುಬಡತನದ ಕುಟುಂಬದಲ್ಲಿ ಜನಿಸಿದ ಮಾರಿಯಾ ಸ್ವಾನೆನ್‌ಬರ್ಗ್ ತುತ್ತು ಅನ್ನಕ್ಕೂ ಪರದಾಡುವ ಬಡತನದ ಜೀವನ ನಡೆಸುತ್ತಿದ್ದರು. ಆಕೆಯ ತಂದೆಗೆ ಯಾವುದೇ ಸ್ಥಿರವಾದ ಉದ್ಯೋಗ ಇರಲಿಲ್ಲ ಹೀಗಾಗಿ ಕುಟುಂಬ ಕಷ್ಟಗಳನ್ನೇ ನೋಡಬೇಕಾಯಿತು. ಮನೆ ಬಾಡಿಗೆ ಕಟ್ಟಲು ಹಣದ ಸಮಸ್ಯೆ ಎದುರಾದಾಗ ಬಾಡಿಗೆ ಮನೆಯನ್ನು ತ್ಯಜಿಸಿ ಬಡ ಕಾರ್ಮಿಕರೇ ತುಂಬಿದ್ದ ಹಾಗೂ ಒರಟು ಜನರಿದ್ದ ಸಿಂಗಲ್‌ಸ್ಟ್ರೀಟ್‌ಗೆ ಬರುತ್ತಾರೆ.


  ಗೋಯಿ ಮಿ ಅವರ ಚಿತ್ರ


  ವಿದ್ಯಾಭ್ಯಾಸದ ಗಂಧಗಾಳಿಯೂ ಇಲ್ಲದ ಸ್ವಾನೆನ್‌ಬರ್ಗ್ ತನ್ನ 28 ರ ಹರೆಯದಲ್ಲಿ ವಿವಾಹವಾಗುತ್ತಾಳೆ ಹಾಗೂ ವಿವಾಹಕ್ಕೂ ಮುನ್ನ ಗರ್ಭಿಣಿಯಾಗಿದ್ದರು ಇದರಿಂದ ಆಕೆಯ ಜೀವನದಲ್ಲಿ ಬರೀ ಊಹಾಪೋಹಗಳು ಹಾಗೂ ಗಾಸಿಪ್‌ಗಳೇ ತುಂಬಿತ್ತು ಎಂದು ಲೇಖಕರು ತಿಳಿಸುತ್ತಾರೆ. ವಿವಾಹಕ್ಕೂ ಮುಂಚೆ ಆಕೆ ಗರ್ಭಿಣಿಯಾಗಿದ್ದರಿಂದ ಆಕೆಯನ್ನು ಲೈಂಗಿಕವಾಗಿ ಅಶ್ಲೀಲಳಾದವರು ಎಂಬುದಾಗಿ ಪರಿಗಣಿಸಲಾಗಿತ್ತು ಎಂದು ಗ್ಲಾಸ್ಬರ್ಗೆನ್ ತಿಳಿಸುತ್ತಾರೆ.


  ಸ್ವಾನೆನ್‌ಬರ್ಗ್ ಸರಣಿ ಕೊಲೆಗಾತಿಯಾಗಲು ಕಾರಣಗಳೇನು?


  ವಿವಾಹವಾದ ಕೆಲವೇ ದಿನಗಳಲ್ಲಿ ಆಕೆಯ ಮಕ್ಕಳು ಮರಣಹೊಂದಿದರು. ಗ್ಲಾಸ್ಬರ್ಗೆನ್ ತಿಳಿಸುವಂತೆ ಮಕ್ಕಳ ಮರಣ ಕಾಲರಾ ಸಂಭವಿಸಿರುವುದಾಗಿದೆ ಎಂದಾಗಿದೆ. ಅತಿಯಾದ ಬಡತನ, ದುಃಖ ಮಾನಸಿಕ ಹಿಂದೆ ಮೊದಲಾದ ಕಾರಣಗಳೇ ಆಕೆಯನ್ನು ಸರಣಿ ಕೊಲೆಗಾತಿಯಾಗಿ ರೂಪಿಸಿದವು ಎಂಬುದು ಗ್ಲಾಸ್ಬರ್ಗೆನ್ ಅಭಿಪ್ರಾಯವಾಗಿದೆ. ಮಕ್ಕಳ ಮರಣದ ನಂತರ ಮದ್ಯಪಾನ ಚಟಕ್ಕೆ ಅಂಟಿಕೊಂಡ ಆಕೆ ಜನರಿಗೆ ವಿಷವುಣಿಸುವ ದುಷ್ಕ್ರತ್ಯವನ್ನು ಮೈಗೂಡಿಸಿಕೊಂಡಳು ಎಂದು ತಿಳಿಸುತ್ತಾರೆ.


  ಹಣದ ಆಮಿಷಕ್ಕೆ ನಡೆಸುತ್ತಿದ್ದ ಸರಣಿ ಕೊಲೆಗಳು


  ಆರಂಭದ ದಿನಗಳಲ್ಲಿ ಹಣಕ್ಕಾಗಿ ಆಕೆ ಜನರನ್ನು ಕೊಲ್ಲುತ್ತಿದ್ದಳು. ಆಕೆಯನ್ನು ನಂಬಿದವರು, ವಿಶ್ವಾಸ ಇರಿಸಿದವರು, ಆಕೆಗೆ ಸಾಲ ನೀಡಿದವರು ಹೀಗೆ ಪ್ರತಿಯೊಬ್ಬರನ್ನೂ ಆಕೆ ಆಹಾರದಲ್ಲಿ ವಿಷಸೇರಿಸಿ ಕೊಲ್ಲುತ್ತಿದ್ದಳು. ಕೊಂದವರ ಅಂತ್ಯಕ್ರಿಯೆಯ ವಿಮೆಯ ಹಣವನ್ನು ಲಪಟಾಯಿಸುವುದು ನಂತರ ಆಕೆಯ ಖಾಯಂ ಕೃತ್ಯವಾಗಿ ಮಾರ್ಪಟ್ಟಿತು ಎಂದು ಲೇಖಕರು ಉಲ್ಲೇಖಿಸಿದ್ದಾರೆ. ಆ ಕಾಲದಲ್ಲಿ ಶುಲ್ಕ ಪಾವತಿಸುವ ಯಾರು ಬೇಕಾದರೂ ವಿಮೆಯ ಹಣವನ್ನು ಪಡೆದುಕೊಳ್ಳಬಹುದಿತ್ತು ಕುಟುಂಬದ ಸದಸ್ಯರೇ ಮಾಡಬೇಕು ಎಂಬ ನಿಯಮವಿರಲಿಲ್ಲ.


  ಅಂತ್ಯಕ್ರಿಯೆ ನಡೆಸಲು ಸಾಧ್ಯವಿಲ್ಲದ ಹಲವಾರು ಬಡಜನರಿಗೆ ಕೂಡ ಈ ವಿಮೆಯ ಸೌಲಭ್ಯವಿತ್ತು. ಆದರೆ ಶುಲ್ಕ ನೀಡಲು ಸಮರ್ಥರಾಗಿಲ್ಲದ ಕಾರಣ ವಿಮೆಯನ್ನು ಅವರು ತ್ಯಜಿಸುತ್ತಿದ್ದರು. ಇದನ್ನು ಉದ್ದೇಶವಾಗಿಟ್ಟುಕೊಂಡು ಸ್ವಾನೆನ್‌ಬರ್ಗ್ ಜನರನ್ನು ಕೊಲ್ಲುವುದೇ ಮುಖ್ಯ ಕಾಯಕವನ್ನಾಗಿಸಿಕೊಂಡಳು. ತನ್ನ ನೆರೆಹೊರೆಯವರಿಗೆ ಉತ್ತಮ ಬಾಂಧವ್ಯವನ್ನು ಹೊಂದಿದ್ದ ಸ್ವಾನೆನ್‌ಬರ್ಗ್ ಅನ್ನು ಎಲ್ಲಾ ಕೆಲಸ ಕಾರ್ಯಗಳಲ್ಲಿಯೂ ನೆರೆಹೊರೆಯವರು ಬಳಸಿಕೊಳ್ಳುತ್ತಿದ್ದರು.


  ಈ ಅತಿಯಾದ ವಿಶ್ವಾಸವನ್ನೇ ಸ್ವಾನೆನ್‌ಬರ್ಗ್ ತನ್ನ ಧೂರ್ತ ಯೋಜನೆಗೆ ಬಳಸಿಕೊಂಡಳು. ಕೀಟನಿಯಂತ್ರಣಕ್ಕೆ ಬಳಸುವ ಆರ್ಸೆನಿಕ್ ವಿಷವನ್ನೇ ಜನರ ಆಹಾರದಲ್ಲಿ ಬೆರೆಸಿ ನಿಧಾನವಾಗಿ ಸಾಯುವಂತೆ ಮಾಡುತ್ತಿದ್ದಳು. ಈ ರಾಸಾಯನಿಕ ಅತ್ಯಂತ ವಿಷಕಾರಿಯಾಗಿದ್ದು, ಇದನ್ನು ಸೇವಿಸಿದಾಗ ಇದು ತೀವ್ರ ಅತಿಸಾರಕ್ಕೆ ಕಾರಣವಾಗುತ್ತದೆ ಹಾಗೂ ರಕ್ತಪ್ರವಾಹಕ್ಕೆ ಸೇರಿದಾಗ ಅಂಗಗಳನ್ನು ಹಾನಿಗೊಳಿಸುತ್ತದೆ. ಒಂದು ರೀತಿಯಲ್ಲಿ ಈ ವಿಷವು ವ್ಯಕ್ತಿಯನ್ನು ಯಾತನಾಮಯವಾಗಿ ಸಾಯಿಸುತ್ತದೆ ಎಂದು ಗ್ಲಾಸ್ಬರ್ಗೆನ್ ತಿಳಿಸುತ್ತಾರೆ.


  ತಪ್ಪುಗಳನ್ನು ಮರೆಮಾಚಲು ಉದ್ದೇಶಪೂರ್ವಕವಾಗಿ ನಡೆಸುತ್ತಿದ್ದ ಕೊಲೆಗಳು


  ಸ್ವಾನೆನ್ಬರ್ಗ್ನ ಮೊದಲೆಲ್ಲಾ ತನ್ನ ಹಣದ ಸಮಸ್ಯೆಯನ್ನು ನಿವಾರಿಸಲು ಕೊಲೆಗಳನ್ನು ಒಂದು ಅಸ್ತ್ರವನ್ನಾಗಿ ಬಳಸಿಕೊಂಡರೂ ನಂತರ ಅದನ್ನು ಉದ್ದೇಶಪೂರ್ವಕವಾಗಿ ಹಾಗೂ ಬಲವಂತದಿಂದ ಮಾಡಲಾರಂಭಿಸಿದಳು. ಆಕೆ ನೋಡಿಕೊಳ್ಳುತ್ತಿದ್ದ ಇಬ್ಬರು ಮಕ್ಕಳನ್ನು ಕೊಂದ ನಂತರ ತನ್ನ ಸಂಬಂಧಿಕರಿಗೆ ಕಾಫಿಯಲ್ಲಿ ವಿಷಹಾಕಿ ಕೊಲ್ಲುತ್ತಾಳೆ. ಮೃತ ಮಕ್ಕಳ ಗರ್ಭಿಣಿ ತಾಯಿಯೂ ಸೇರಿದಂತೆ ಆರು ಜನರನ್ನು ಕೊಲ್ಲಲು ಪ್ರಯತ್ನಿಸಿದ್ದಳು ಎಂದು ಗ್ಲಾಸ್ಬರ್ಗೆನ್ ತಮ್ಮ ಲೇಖನದಲ್ಲಿ ಬರೆದುಕೊಂಡಿದ್ದಾರೆ.


  ಸ್ವಾನೆನ್ಬರ್ಗ್‌ ಮೇಲೆ ಅತಿಯಾಗಿ ವಿಶ್ವಾಸವಿರಿಸಿಕೊಂಡಿದ್ದ ನೆರೆಹೊರೆಯವರು


  ಕುಟುಂಬದ ಸದಸ್ಯರೆಲ್ಲರೂ ಒಬ್ಬರಾದ ಮೇಲೆ ಒಬ್ಬರು ಮೃತಹೊಂದಿದಾಗಲೂ ಯಾರೂ ಇದನ್ನು ಕೊಲೆ ಎಂದು ಶಂಕಿಸಿರಲಿಲ್ಲ. ಸಾಂಕ್ರಾಮಿಕ ರೋಗಗಳೇ ಮರಣ ಹೊಂದಿದವರ ಸಾವಿಗೆ ಕಾರಣ ಎಂದು ನಂಬಿದ್ದರು. ಇನ್ನು ಸ್ವಾನೆನ್ಬರ್ಗ್‌ನ ಮೇಲೆ ಅತಿಯಾದ ವಿಶ್ವಾಸ ಹೊಂದಿದ್ದ ಜನರು ಆಕೆಯನ್ನು ಅನುಮಾನಿಸುವ ಪ್ರಶ್ನೆಯೇ ಇರಲಿಲ್ಲ. ಆದರೆ ಹೆಂಡ್ರಿಕ್ ಫ್ರಾಂಕ್‌ಹೈಜೆನ್‌ ಸಾವಿನೊಂದಿಗೆ ಸ್ವಾನೆನ್ಬರ್ಗ್‌ ಕೊಲೆಗಡುಕಿ ಎಂಬುದು ಬಯಲಾಗುತ್ತದೆ.


  ಅಪರಾಧ ಪತ್ತೆಯಾಗಿದ್ದು ಹೇಗೆ?


  ಸ್ವಾನೆನ್ಬರ್ಗ್ ಅನ್ನು ಬಂಧಿಸಿದ ನಂತರ ಆಕೆಯ ಹೆಸರಿನಲ್ಲಿ ಅನೇಕ ವಿಮಾ ಪಾಲಿಸಿಗಳು ಇರುವುದು ಪೊಲೀಸರ ಗಮನಕ್ಕೆ ಬರುತ್ತದೆ. ಹೀಗೆ ಆಕೆ 65 ಜನರಿಗೆ ವಿಷವುಣಿಸಿದ್ದು ಪತ್ತೆಯಾಯಿತು ಮತ್ತು ಅವರಲ್ಲಿ 23 ಜನರ ಸಾವಿಗೂ ಈಕೆ ಕಾರಣಳಾಗಿದ್ದಳು ಎಂಬುದು ತನಿಖೆಯಿಂದ ಬಯಲಾಯಿತು. ಆದರೆ ಆಕೆ ವಿಷವುಣಿಸಿದ ಜನರ ಸಂಖ್ಯೆ ಇನ್ನೂ ಹೆಚ್ಚಿದೆ ಎಂಬ ಶಂಕೆ ಕೂಡ ಇದೆ.

  Published by:Prajwal B
  First published: