• Home
 • »
 • News
 • »
 • explained
 • »
 • Covid-19 Drug 2-DG: 2-ಡಿಜಿ ಕಮರ್ಷಿಯಲ್​ ಲಾಂಚ್​ಗೆ ಮುಂದಾದ ಡಾ. ರೆಡ್ಡಿ ಲ್ಯಾಬ್ಸ್​: ಬೆಲೆ ಎಷ್ಟು? ಪಡೆಯುವುದು ಹೇಗೆ?

Covid-19 Drug 2-DG: 2-ಡಿಜಿ ಕಮರ್ಷಿಯಲ್​ ಲಾಂಚ್​ಗೆ ಮುಂದಾದ ಡಾ. ರೆಡ್ಡಿ ಲ್ಯಾಬ್ಸ್​: ಬೆಲೆ ಎಷ್ಟು? ಪಡೆಯುವುದು ಹೇಗೆ?

ಕೋವಿಡ್​ ರೋಗಿಗಳಿಗೆ 2-ಡಿಜಿ ಔಷಧ.

ಕೋವಿಡ್​ ರೋಗಿಗಳಿಗೆ 2-ಡಿಜಿ ಔಷಧ.

Covid-19 Drug 2-DG: ಸರ್ಕಾರದ ಬಿಡುಗಡೆಯ ಪ್ರಕಾರ, ಕೋವಿಡ್ -19ನೊಂದಿಗೆ ಆಸ್ಪತ್ರೆಗೆ ದಾಖಲಾದ ರೋಗಿಗಳನ್ನು ವೇಗವಾಗಿ ಚೇತರಿಸಿಕೊಳ್ಳಲು ಈ ಮಾಲಿಕ್ಯೂಲ್‌ ಸಹಾಯ ಮಾಡುತ್ತದೆ ಮತ್ತು ಪೂರಕ ಆಮ್ಲಜನಕದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುತ್ತದೆ ಎಂದು ಕ್ಲಿನಿಕಲ್ ಟ್ರಯಲ್ ಡೇಟಾ ತೋರಿಸುತ್ತದೆ.

ಮುಂದೆ ಓದಿ ...
 • Share this:

  ಹೈದರಾಬಾದ್​: ಡಾ. ರೆಡ್ಡಿ ಲ್ಯಾಬೋರೇಟರಿ ಡಿಆರ್​ಡಿಒ ಸಿದ್ಧಪಡಿಸಿರುವ 2-ಡಿಜಿ ಕೊರೋನಾ ಔಷದವನ್ನು ವಾಣಿಜ್ಯವಾಗಿ ಲಾಂಚ್​ ಮಾಡುತ್ತಿದೆ. ಮೊದಲ ಹಂತದಲ್ಲಿ ಮೆಟ್ರೋ ಸಿಟಿಗಳು, ದೊಡ್ಡ ನಗರಗಳಲ್ಲಿ ಸೇವೆ ನೀಡಲಿದ್ದು. ಮುಂದಿನ ದಿನಗಳಲ್ಲಿ ದೇಶಾದ್ಯಂತ ಔಷಧ ಲಭ್ಯವಾಗಲಿದೆ ಎಂದು ಸಂಸ್ಥೆ ಮಾಹಿತಿ ನೀಡಿದೆ. ಡಿಆರ್​ಡಿಒ ಮತ್ತು ಡಾ. ರೆಡ್ಡಿ ಲ್ಯಾಬ್ಸ್​ ಈ ಮೌಖಿಕವಾಗಿ ಸೇವಿಸುವ ಔಷಧಿಯನ್ನು ಜಂಡಿಯಾಗಿ ಸಿದ್ಧಪಡಿಸಿದೆ.


  2-ಡಿಜಿ ಒಂದು ಸ್ಯಾಚೆಟ್​ನ ಬೆಲೆ ರೂ. 990 ಆಗಿದ್ದು, ಸರ್ಕಾರಿ ಆಸ್ಪತ್ರೆಗಳಿಗೆ, ಸಂಸ್ಥೆಗಳಿಗೆ ಸಬ್ಸಿಡಿ ಬೆಲೆಯಲ್ಲಿ ನೀಡಲಾಗುವುದು ಎಂದು ಡಾ. ರೆಡ್ಡಿ ಲ್ಯಾಬ್ಸ್​ ತಿಳಿಸಿದೆ.
  ರಕ್ಷಣಾ ಇಲಾಖೆಯ (ಸಂಶೋಧನೆ ಮತ್ತು ಅಭಿವೃದ್ಧಿ) ಹಾಗೂ ಡಿಆರ್​ಡಿಒ ಮುಖ್ಯಸ್ಥ ಡಾ. ಜಿ. ಸತೀಶ್​ ರೆಡ್ಡಿ ಈ ಸಂಬಂಧ ಮಾತನಾಡಿ, ನಾವು ತುಂಬಾ ವರ್ಷಗಳ ಸಹಭಾಗಿ ಸಂಸ್ಥೆ ಡಾ. ರೆಡ್ಡಿ ಲಾಬ್ಸ್​ ಜೊತೆಗೂಡಿ ಔಷಧವನ್ನು ಸಿದ್ಧಪಡಿಸಿದ್ದು ಖುಷಿ ನೀಡಿದೆ ಎಂದಿದ್ದಾರೆ. ಡಾ. ರೆಡ್ಡಿ ಲ್ಯಾಬ್ಸ್​ ಜೊತೆಗೂಡಿ ಡಿಆರ್​ಡಿಒ 2-ಡಿಜಿ ಔಷಧಿಯನ್ನು ಕೋವಿಡ್​ ಸಂತ್ರಸ್ತರ ಮೇಲೆ ಪ್ರಯೋಗ ನಡೆಸಿತ್ತು ಎಂದ ಅವರು, ಡಿಆರ್​ಡಿಒ ಕೋವಿಡ್​-19 ವಿರುದ್ಧದ ಹೋರಾಟದಲ್ಲಿ ಸದಾ ಒಂದಲ್ಲಾ ಒಂದು ಕೊಡುಗೆಯನ್ನು ದೇಶಕ್ಕೆ ಕೊಡುತ್ತಲೇ ಬಂದಿದೆ ಎಂದಿದ್ದಾರೆ.


  ಯಾರು ಪಡೆಯಬಹುದು?:


  ಕೋವಿಶೀಲ್ಡ್​, ಕೋವ್ಯಾಕ್ಸಿನ್​, ಸ್ಪುಟ್ನಿಕ್​-ವಿ ಸೇರಿದಂತೆ ಇತರೆ ಲಸಿಕೆಗಳನ್ನು ಪಡೆಯುವ ರೀತಿ 18 ವರ್ಷ ಮೇಲ್ಪಟ್ಟ ಎಲ್ಲರೂ 2-ಡಿಜಿಯನ್ನು ಪಡೆಯುವಂತಿಲ್ಲ. ವೈದ್ಯರು ಔಷಧಿಯನ್ನು ಬರೆದುಕೊಟ್ಟರೆ ಮಾತ್ರ ಪಡೆಯಬೇಕು. ವೈದ್ಯರ ಶರಾ ಇಲ್ಲದೇ ಈ ಔಷಧಿಯನ್ನು ಯಾರಿಗೂ ನೀಡುವಂತಿಲ್ಲ. ಕೋವಿಡ್​-19 ರೋಗಕ್ಕೆ ತುತ್ತಾಗಿದ್ದರೆ, ತುರ್ತು ಸಂದರ್ಭದಲ್ಲಿ ವೈದ್ಯರು ಸೂಚಿಸಿದರೆ ಮಾತ್ರ 2-ಡಿಜಿ ಪಡೆಯಬಹುದಾಗಿದೆ ಎಂದು ಡಿಆರ್​ಡಿಒ ತಿಳಿಸಿದೆ.


  ಇದೇ ವರ್ಷದ ಮೇ 1ರಂದು 2-ಡಿಜಿ ಓರಲ್​ ಡ್ರಗ್​ನ ತುರ್ತು ಪರಿಸ್ಥಿತಿ ಬಳಕೆಗೆ ಅನುಮತಿ ನೀಡಲಾಗಿತ್ತು.


  ಡಾ. ರೆಡ್ಡಿ ಲ್ಯಾಬ್ಸ್​ನ ಮುಖ್ಯಸ್ಥ ಸತೀಶ್​ ರೆಡ್ಡಿ ಬ್ಯುಸಿನೆಸ್​ ಸ್ಟಾಂಡರ್ಡ್​ ಜತೆ ಮಾತನಾಡಿ, ಕೋವಿಡ್​ - 19 ವಿರುದ್ಧದ ಯುದ್ಧದಲ್ಲಿ 2-ಡಿಜಿ ಪ್ರಮುಖ ಅಸ್ತ್ರವಾಗಿದೆ. ಈ ಔಷಧಿ ಸೌಮ್ಯ ಗುಣಲಕ್ಷಣ ಹೊಂದಿರುವ ರೋಗಿಗಳಿಂದ ಹಿಡಿದು ತೀವ್ರ ಗುಣಲಕ್ಷಣ ಹೊಂದಿರುವ ಎಲ್ಲಾ ರೋಗಿಗಳಿಗೂ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಲಿದೆ. ದೇಶದ ಅತ್ಯುನ್ನತ ಸಂಸ್ಥೆ ಡಿಆರ್​ಡಿಒ ಜತೆ ಈ ಸಂಶೋಧನೆಯಲ್ಲಿ ಪಾಲ್ಗೊಂಡಿದ್ದು ಡಾ. ರೆಡ್ಡಿ ಲ್ಯಾಬ್ಸ್​ ಪಾಲಿಗೆ ಹೆಮ್ಮೆಯ ಅಂಶವಾಗಿದೆ ಎಂದಿದ್ದಾರೆ.


  ಸೂತ್ರೀಕರಣ:


  ಹೈದರಾಬಾದ್ ಮೂಲದ ಫಾರ್ಮಾ ಕಂಪನಿ ಡಾ. ರೆಡ್ಡೀಸ್‌ ಲ್ಯಾಬೊರೇಟರೀಸ್ (DRL) ಸಹಯೋಗದೊಂದಿಗೆ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO)ಯ ಪ್ರಯೋಗಾಲಯವಾದ ನವದೆಹಲಿಯ ಇನ್ಸ್ಟಿಟ್ಯೂಟ್ ಆಫ್ ನ್ಯೂಕ್ಲಿಯರ್ ಮೆಡಿಸಿನ್ ಮತ್ತು ಅಲೈಡ್ ಸೈನ್ಸಸ್ (INMAS) 2-ಡಿಜಿಯನ್ನು ಅಭಿವೃದ್ಧಿಪಡಿಸಿದೆ. ಈ ಸಂಬಂಧ ರಕ್ಷಣಾ ಸಚಿವಾಲಯವು ಈ ತಿಂಗಳ ಆರಂಭದಲ್ಲಿ ಹೇಳಿಕೆ ಬಿಡುಗಡೆ ಮಾಡಿತ್ತು.


  ಇದು ಹೇಗೆ ಕೆಲಸ ಮಾಡುತ್ತದೆ..?:


  ಸರ್ಕಾರದ ಬಿಡುಗಡೆಯ ಪ್ರಕಾರ, ಕೋವಿಡ್ -19ನೊಂದಿಗೆ ಆಸ್ಪತ್ರೆಗೆ ದಾಖಲಾದ ರೋಗಿಗಳನ್ನು ವೇಗವಾಗಿ ಚೇತರಿಸಿಕೊಳ್ಳಲು ಈ ಮಾಲಿಕ್ಯೂಲ್‌ ಸಹಾಯ ಮಾಡುತ್ತದೆ ಮತ್ತು ಪೂರಕ ಆಮ್ಲಜನಕದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುತ್ತದೆ ಎಂದು ಕ್ಲಿನಿಕಲ್ ಟ್ರಯಲ್ ಡೇಟಾ ತೋರಿಸುತ್ತದೆ.


  ಔಷಧವು ವೈರಸ್-ಸೋಂಕಿತ ಸೆಲ್‌ಗಳಲ್ಲಿ ಸಂಗ್ರಹಗೊಳ್ಳುತ್ತದೆ ಮತ್ತು ವೈರಲ್ ಸಂಶ್ಲೇಷಣೆ ಮತ್ತು ಶಕ್ತಿಯ ಉತ್ಪಾದನೆಯನ್ನು ನಿಲ್ಲಿಸುವ ಮೂಲಕ ವೈರಸ್ ಬೆಳವಣಿಗೆಯನ್ನು ತಡೆಯುತ್ತದೆ. ವೈರಸ್-ಸೋಂಕಿತ ಸೆಲ್‌ಗಳಲ್ಲಿ ಇದರ ಆಯ್ದ ಸಂಗ್ರಹವು ಈ ಔಷಧಿಯನ್ನು ಅನನ್ಯಗೊಳಿಸುತ್ತದೆ ಎಂದು ಪ್ರಕಟಣೆ ತಿಳಿಸಿದೆ.


  "ಕೋವಿಡ್ -19 ನಿಂದ ಬಳಲುತ್ತಿರುವ ಜನರಿಗೆ ಔಷಧವು ಅಪಾರ ಪ್ರಯೋಜನವನ್ನು ನೀಡುತ್ತದೆ" ಎಂದು ಅದು ಹೇಳಿದೆ.ಕ್ಲಿನಿಕಲ್ ಪ್ರಯೋಗಗಳು
  ಏಪ್ರಿಲ್ 2020 ರಲ್ಲಿ ಸಾಂಕ್ರಾಮಿಕ ರೋಗದ ಮೊದಲ ಅಲೆಯಲ್ಲಿ, ಹೈದರಾಬಾದ್‌ನ ಸೆಲ್ಯುಲಾರ್ ಮತ್ತು ಮಾಲಿಕ್ಯುಲರ್ ಬಯಾಲಜಿ (CCMB) ಕೇಂದ್ರದ ಸಹಯೋಗದೊಂದಿಗೆ INMAS-DRDO ವಿಜ್ಞಾನಿಗಳು ನಡೆಸಿದ ಲ್ಯಾಬೊರೇಟರಿ ಪ್ರಯೋಗಗಳು ಈ ಮಾಲಿಕ್ಯೂಲ್‌ SARS-CoV-2 ಅಂದರೆ ಕೋವಿಡ್ -19 ಕಾಯಿಲೆಗೆ ಕಾರಣವಾಗುವ ಕೊರೊನಾ ವೈರಸ್‌ ವಿರುದ್ಧ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ವೈರಲ್ ಬೆಳವಣಿಗೆಯನ್ನು ತಡೆಯುತ್ತದೆ ಎಂದು ಕಂಡುಕೊಂಡಿದೆ.

  Published by:Sharath Sharma Kalagaru
  First published: