Explained: ಡಾ. ರಾಜ್‌ಕುಮಾರ್ ಸಾಧನೆಯೇನು ಕಡಿಮೆಯೇ? ‘ಕರ್ನಾಟಕ ರತ್ನ’ಕ್ಕೆ ಸಿಗಲಿಲ್ಲವೇಕೆ ‘ಭಾರತ ರತ್ನ’?

ಬರೀ 3ನೇ ತರಗತಿ ಕಲಿತ ಹುಡುಗ, ಬಡ ಕುಟುಂಬದ ಹಳ್ಳಿ ಹುಡುಗ ಇಷ್ಟೆಲ್ಲಾ ಸಾಧನೆ ಮಾಡಿದ್ದು, ಚಿತ್ರರಂಗದಲ್ಲಿ ಯಾರೂ ಏರಲಾರದ ಸಾಧನೆಯ ಶಿಖರ ಏರಿದ್ದು. ಹೀಗಾಗಿ ಅವರಿಗೆ ಭಾರತ ರತ್ನ ಸಲ್ಲಬೇಕು ಎನ್ನುವುದು ಕನ್ನಡಿಗರ ಬಯಕೆ. ಹಾಗಂತ ಭಾರತ ರತ್ನ ಸಿಗದಿದ್ದರೆ ಅವರ ಗೌರವ ಕಡಿಮೆಯಾಗುತ್ತದೆ ಅಂತೇನೂ ಅಲ್ಲ.

ನಟ ಸಾರ್ವಭೌಮ ಡಾ. ರಾಜ್‌ಕುಮಾರ್

ನಟ ಸಾರ್ವಭೌಮ ಡಾ. ರಾಜ್‌ಕುಮಾರ್

  • Share this:
ಡಾ. ರಾಜ್‌ಕುಮಾರ್ (Dr. Rajkumar) ಯಾರಿಗೆ ಗೊತ್ತಿಲ್ಲ ಹೇಳಿ? ಅವರ ಬಗ್ಗೆ ತಿಳಿಯದ ಕನ್ನಡಿಗನೇ ಇಲ್ಲ. ಅವರ ಬಗ್ಗೆ ಎಷ್ಟೇ ಹೇಳಿದರು ಅದು ಸಮುದ್ರದೊಳಗಿನ ಒಂದು ಬೊಗಸೆ ನೀರು ಮೊಗೆದು ತೋರಿಸಿದಂತೆ. ಡಾ. ರಾಜ್‌ಕುಮಾರ್ ನಟಿಸಿದ ಸಿನಿಮಾಗಳ (Cinema) ಸಂಖ್ಯೆ 200ಕ್ಕೂ ಹೆಚ್ಚು. ಅದು ಭಾರತೀಯ ಚಿತ್ರರಂಗದ (Indian Film Industry) ಮಟ್ಟಿಗೆ ದಾಖಲೆ (Records). ಅದರಲ್ಲೂ ಆ 200ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅವರೇ ನಾಯಕರು (Hero) ಎನ್ನುವುದು ಸಾರ್ವಕಾಲಿಕ ದಾಖಲೆ. ಇನ್ನೂ ವಿಶೇಷ ಏನೆಂದರೆ ಅವರು ನಟಿಸಿದ್ದ 200ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಹೆಚ್ಚಿನವು ಸೂಪರ್ ಹಿಟ್ (Super Hit), ಉಳಿದವುಗಳು ನಿರ್ಮಾಪಕರಿಗೆ ನಷ್ಟ ಮಾಡದ ಚಿತ್ರಗಳೇ! ತೆರೆ ಮೇಲಷ್ಟೇ ಅವರು ನಾಯಕರಲ್ಲ, ತೆರೆಯ ಹಿಂದೆಯೂ ಅವರು ನಾಯಕರೇ. ಕನ್ನಡಕ್ಕಾಗಿ ಸದಾ ಮಿಡಿಯುತ್ತಿದ್ದ ರಾಜಣ್ಣ, ಬೇರೆ ಭಾಷೆಯ ಚಿತ್ರರಂಗದ ಗಣ್ಯರೊಂದಿಗೂ ಸ್ನೇಹ ಸಂಬಂಧ ಹೊಂದಿದ್ದರು. ಇವರ ಅಭಿನಯಕ್ಕೆ, ವ್ಯಕ್ತಿತ್ವಕ್ಕೆ ಸಿಗದ ಪ್ರಶಸ್ತಿಗಳೇ ಇಲ್ಲ. ಆದರೂ ಆ ಒಂದು ಗೌರವ ಅವರಿಗೆ ಸಿಗಬೇಕಿತ್ತು ಅನ್ನೋದು ಸಮಸ್ತ ಕನ್ನಡಿಗರ ಬಯಕೆ. ಆದರೆ ಹಿಂದೆ ಆಳಿದ, ಈಗ ಆಳುತ್ತಿರುವ ಸರ್ಕಾರಗಳು, ಜನನಾಯಕರು ಎನಿಸಿಕೊಂಡವರ ದಿವ್ಯ ನಿರ್ಲಕ್ಷ್ಯದಿಂದ ಈ ಮಹಾನ್ ಚೇತನದ ಮುಡಿಸೇರದೇ ಆ ಗೌರವ ದೂರವೇ ಉಳಿದಿದೆ.

 ‘ಕರ್ನಾಟಕ ರತ್ನ’ಕ್ಕೆ ಸಿಗಬೇಕಿತ್ತು ‘ಭಾರತ ರತ್ನ’

ಹೌದು, ಇದೊಂದು ಕೊರತೆ ಕನ್ನಡಿಗರನ್ನು ಕಾಡುತ್ತಿದೆ. ಕೆಲವರಿಗೆ ಪ್ರಶಸ್ತಿ ಸಿಕ್ಕಿದ ಮೇಲೆ ಅವರ ವ್ಯಾಲ್ಯೂ ಜಾಸ್ತಿಯಾಗುತ್ತೆ. ಕೆಲವರಿಗೆ ಪ್ರಶಸ್ತಿ ಸಿಕ್ಕಿದರೆ, ಆ ಪ್ರಶಸ್ತಿಯ ಮೌಲ್ಯವೇ ಹೆಚ್ಚಾಗುತ್ತೆ. ಅಣ್ಣಾವ್ರು ಈ ಎರಡನೇ ಕ್ಯಾಟಗರಿಗೆ ಸೇರಿದವರು. ಕರ್ನಾಟಕ ರತ್ನ, ಕೆಂಟಕಿ ಕರ್ನಲ್, ದಾದಾಸಾಹೇಬ್ ಫಾಲ್ಕೆ, ಸ್ವರ್ಣ ಕಮಲ, ಗೌರವ ಡಾಕ್ಟರೇಟ್, ಪದ್ಮಭೂಷಣ ಸೇರಿದಂತೆ ಅನೇಕ ಪ್ರಶಸ್ತಿಗಳು ರಾಜಣ್ಣನನ್ನು ಅರಸಿ ಬಂದಿದೆ. ಆದರೂ ಭಾರತ ರತ್ನ ಅವರಿಗೆ ಸಿಗಬೇಕಿತ್ತು, ಭಾರತ ರತ್ನಕ್ಕೆ ಡಾ. ರಾಜ್ ಅರ್ಹರು ಎಂಬುದು ಎಲ್ಲ ಕನ್ನಡಿಗರ ಅಭಿಪ್ರಾಯ.

ಡಾ. ರಾಜ್‌ಕುಮಾರ್‌ಗೆ ಯಾಕೆ ಸಲ್ಲಬೇಕು ಭಾರತ ರತ್ನ?

ಡಾ. ರಾಜ್‌ಕುಮಾರ್ ಕೇವಲ ಒಬ್ಬ ನಟರಲ್ಲ, ಅವರು ಆದರ್ಶ ವ್ಯಕ್ತಿ. ಬರೀ ತೆರೆಯ ಮೇಲೆ ಹೀರೋ ಆಗಿ ಮೆರೆದವರಲ್ಲ, ಹೀರೋನ ಆದರ್ಶಗಳನ್ನು ತೆರೆ ಹಿಂದೂ ಮರೆಯದವರು. ಸರಳತೆಯನ್ನು ಚಾಚೂ ತಪ್ಪದೇ ಪಾಲಿಸಿದವರು. ಕೇವಲ 3ನೇ ಕ್ಲಾಸ್ ಕಲಿತ ಹುಡುಗ, ಹೀರೋ ಈಗಿ, ಬರೀ ಕನ್ನಡ ಚಿತ್ರರಂಗವಷ್ಟೇ ಅಲ್ಲ, ಭಾರತೀಯ ಚಿತ್ರರಂಗದಲ್ಲೇ ಅಪ್ರತಿಮ ಸಾಧನೆ ಮಾಡಿದ್ದು ಕಡಿಮೆಯೇನಲ್ಲ.

ಇದನ್ನೂ ಓದಿ: Dr Rajkumar: ಡಾ. ರಾಜ್‌ಕುಮಾರ್ ಸಂಭಾವನೆ ಬಗ್ಗೆ ನಿಮಗೆಷ್ಟು ಗೊತ್ತು? 'ಬಂಗಾರದ ಮನುಷ್ಯ'ನಿಗೆ ಸಿಕ್ಕ ಹಣವೆಷ್ಟು?

 ತೆರೆ ಹಿಂದೆಯೂ ಆದರ್ಶವಾಗಿ ಇದ್ದವರು

ಪಾತ್ರ ಯಾವುದಾದರೇನೂ ಎಲ್ಲವನ್ನೂ ಮಾಡಬೇಕು ಅಂತಾರೆ ಇಂದಿನ ನಟರು. ಆದರೆ ರಾಜ್‌ಕುಮಾರ್ ತೆರೆಯ ಹಿಂದೆ, ಮುಂದೆ ಆದರ್ಶವಾಗಿ ಇರಬೇಕು ಎಂದುಕೊಂಡವರು. ಅವರೆಂದೂ ಸಮಾಜಕ್ಕೆ ಅನ್ಯಾಯ ಮಾಡುವ ಪಾತ್ರದಲ್ಲಿ ನಟಿಸಿಲ್ಲ, ಅವರೆಂದೂ ಅತ್ಯಾಚಾರದಂತಹ ಪಾತ್ರದಲ್ಲಿ ಆ್ಯಕ್ಟ್ ಮಾಡಿಲ್ಲ, ಅವರೆಂದೂ ಮದ್ಯಸೇವನೆ, ಧೂಮ್ರಪಾನ ಉತ್ತೇಜಿಸುವಂತ ಪಾತ್ರದಲ್ಲಿ ಕಾಣಿಸಿಕೊಂಡಿಲ್ಲ. ಹೀಗಾಗಿ ಅವರು ಆದರ್ಶಪ್ರಾಯರು.

ಸಮಾಜಕ್ಕಾಗಿ ಮಿಡಿದವರು, ದುಡಿದವರು ರಾಜಣ್ಣ

ಹಿಟ್ ಮೇಲೆ ಹಿಟ್ ಸಿನಿಮಾಗಳನ್ನು ಕೊಟ್ಟ ರಾಜ್‌ಕುಮಾರ್ ಸಂಭಾವನೆ ಬರೀ 6 ಅಂಕೆಯೂ ದಾಟಲಿಲ್ಲ ಎನ್ನುವುದು ಕಟು ಸತ್ಯ. ಆದರೂ ತಾವು ದುಡಿದ ದುಡ್ಡನ್ನು ಸಮಾಜಕ್ಕೆ ನೀಡಿದರು. ಬಡ ಕಲಾವಿದರಿಗೆ ಸಹಾಯ ಮಾಡಿದ್ರು. ತಮ್ಮ ಸಿನಿಮಾ ಸೋತಾಗ ಅದೇ ನಿರ್ಮಾಪಕನಿಗೆ ಮತ್ತೊಮ್ಮೆ ಸಂಭಾವನೆ ಇಲ್ಲದೇ ಕಾಲ್ ಶೀಟ್ ಕೊಟ್ಟರು.

ಗೋಕಾಕ್ ಚಳುವಳಿಯಂತ ಕನ್ನಡಪರ ಹೋರಾಟಗಳಲ್ಲಿ ಭಾಗಿಯಾದರು. ಕಲಾವಿದರಿಗೆ, ಸಂಕಷ್ಟದಲ್ಲಿರುವವರಿಗೆ ನೆರವಾಗಲು ಮ್ಯೂಸಿಕಲ್ ನೈಟ್‌ನಂತಹ ಕಾರ್ಯಕ್ರಮಗಳನ್ನು ನೀಡಿದರು.

ಎಲ್ಲಾ ಭಾಷೆಯ ಮೇಲೂ ಗೌರವ

ಹಾಗಂತ ಡಾ. ರಾಜ್‌ಕುಮಾರ್‌ ಬೇರೆ ಭಾಷೆಗಳನ್ನು ದ್ವೇಷಿಸುತ್ತಿದ್ದರು ಅಂತಲ್ಲ, ಎಲ್ಲಾ ಭಾಷೆಯ ಬಗ್ಗೆಯೂ ಅವರಿಗೆ ಗೌರವವಿತ್ತು. ಎಂಜಿಆರ್‌, ಎನ್‌ಟಿಆರ್, ಶಿವಾಜಿ ಗಣೇಶನ್, ಅಮಿತಾಭ್ ಬಚ್ಚನ್ ಸೇರಿದಂತೆ ಎಲ್ಲಾ ಭಾಷೆಯ ಗಣ್ಯರೊಂದಿಗೂ ಸ್ನೇಹ ಸಂಬಂಧ ಹೊಂದಿದ್ದರು.

ಅವರಿಗೆ ಬಂದ ಪ್ರಶಸ್ತಿಗಳ ಲೆಕ್ಕ ಅವರಿಗೇ ಇರಲಿಕ್ಕಿಲ್ಲ!

ಹೌದು, ಅಷ್ಟೊಂದು ಪ್ರಶಸ್ತಿ-ಪುರಸ್ಕಾರಗಳು ಡಾ. ರಾಜ್‌ಕುಮಾರ್ ಅವರನ್ನು ಅರಸಿ ಬಂದಿವೆ. ಅವರ ಸಿನಿಮಾ ಜೀವನದಲ್ಲಿ 11 ರಾಜ್ಯ ಪ್ರಶಸ್ತಿಗಳು, 10 ಸೌತ್‌ ಇಂಡಿಯಾ ಫಿಲ್ಮ್ ಪ್ರಶಸ್ತಿಗಳು, ಒಂದು ರಾಷ್ಟ್ರೀಯ ಪ್ರಶಸ್ತಿಗಳು ಅವರ ಮುಡಿಗೇರಿವೆ.

ಹಲವು ಪ್ರತಿಷ್ಠಿತ ಪ್ರಶಸ್ತಿಗಳಿಗೆ ಭಾಜನ

ಡಾ. ರಾಜ್‌ಕುಮಾರ್ ಅವರ ಸಿನಿಮಾ, ಸಾಂಸ್ಕೃತಿಕ ರಂಗ ಹಾಗೂ ಇನ್ನಿತರ ಸೇವೆಯನ್ನು ಗುರುತಿಸಿ ಭಾರತ ಸರ್ಕಾರದಿಂದ 1983ರಲ್ಲಿ ಪದ್ಮಭೂಷಣ, 1995ರಲ್ಲಿ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ, ಕರ್ನಾಟಕ ಸರ್ಕಾರದಿಂದ ಕರ್ನಾಟಕ ರತ್ನ, ಜೀವನ ಚೈತ್ರ ಸಿನಿಮಾದ ಹಾಡಿಗಾಗಿ ಅತ್ಯುತ್ತಮ ಗಾಯಕ ರಾಷ್ಟ್ರ ಪ್ರಶಸ್ತಿ, ಅಮೆರಿಕ ನೀಡುವ ಪ್ರತಿಷ್ಠಿತ ಕೆಂಟಕಿ ಕರ್ನಲ್ ಪ್ರಶಸ್ತಿ, ಹಂಪಿ ವಿವಿಯ ನಾಡೋಜ ಗೌರವ, ಡಾಕ್ಟರೇಟ್ ಗೌರವ ಸೇರಿದಂತೆ ಅನೇಕ ಪ್ರಶಸ್ತಿ, ಪುರಸ್ಕಾರಗಳು ಸಿಕ್ಕಿವೆ.

ರಾಷ್ಟ್ರೀಯ ಪ್ರಶಸ್ತಿಗಳು, ಹೊರ ರಾಜ್ಯದ ಪ್ರಶಸ್ತಿಗಳೂ ಸಂದಾಯ

ಹೊರ ರಾಜ್ಯದಲ್ಲೂ ಡಾ. ರಾಜ್‌ಕುಮಾರ್ ಅವರಿಗೆ ಸಿಕ್ಕ ಪ್ರಶಸ್ತಿ ಪುರಸ್ಕಾರಗಳು ಅಪಾರ. 2002ರಲ್ಲಿ ಎನ್‌ಟಿಆರ್ ರಾಷ್ಟ್ರೀಯ ಪ್ರಶಸ್ತಿ ಸೇರಿದಂತೆ ಹಲವು ಗೌರವ ಅವರಿಗೆ ಸಂದಿವೆ. ಇನ್ನು ಜನರು, ಅಭಿಮಾನಿಗಳು, ಸಂಘ ಸಂಸ್ಥೆಗಳು ನೀಡಿದ ಪ್ರಶಸ್ತಿ, ಗೌರವಗಳಿಗೆ ಲೆಕ್ಕವೇ ಇಲ್ಲ.

ಈ ಎಲ್ಲಾ ಸಾಧನೆಗೆ ಭಾರತ ರತ್ನ ಸಲ್ಲಬೇಕಲ್ಲವೇ?

ಬರೀ 3ನೇ ತರಗತಿ ಕಲಿತ ಹುಡುಗ, ಬಡ ಕುಟುಂಬದ ಹಳ್ಳಿ ಹುಡುಗ ಇಷ್ಟೆಲ್ಲಾ ಸಾಧನೆ ಮಾಡಿದ್ದು, ಚಿತ್ರರಂಗದಲ್ಲಿ ಯಾರೂ ಏರಲಾರದ ಸಾಧನೆಯ ಶಿಖರ ಏರಿದ್ದು. ಹೀಗಾಗಿ ಅವರಿಗೆ ಭಾರತ ರತ್ನ ಸಲ್ಲಬೇಕು ಎನ್ನುವುದು ಕನ್ನಡಿಗರ ಬಯಕೆ. ಹಾಗಂತ ಭಾರತ ರತ್ನ ಸಿಗದಿದ್ದರೆ ಅವರ ಗೌರವ ಕಡಿಮೆಯಾಗುತ್ತದೆ ಅಂತೇನೂ ಅಲ್ಲ.

ಜನನಾಯಕರ ಇಚ್ಛಾ ಶಕ್ತಿಯ ಕೊರತೆ

ರಾಷ್ಟ್ರೀಯ ಪ್ರಶಸ್ತಿಗಳ ವಿಚಾರದಲ್ಲಿ ದಕ್ಷಿಣ ಭಾರತವನ್ನು ನಿರ್ಲಕ್ಷ್ಟ ಮಾಡಲಾಗುತ್ತಿದೆ ಎನ್ನುವುದು ಸಾರ್ವಕಾಲಿಕ ಸತ್ಯ. ಇದು ರಾಜ್‌ಕುಮಾರ್ ವಿಚಾರದಲ್ಲೂ ನಿಜವಾಗಿದೆ. ಅಷ್ಟಾಗಿಯೂ ಆಳುವ ಸರ್ಕಾರಕ್ಕೆ, ಇಲ್ಲಿಂದ ಆಯ್ಕೆಯಾಗಿ ಹೋದ ಸಂಸದರಿಗೆ, ರಾಷ್ಟ್ರಮಟ್ಟದಲ್ಲಿ ಪ್ರಭಾವ ಮೂಡಿಸಿದ ನಾಯಕರಿಗೆ ಡಾ. ರಾಜ್‌ಕುಮಾರ್‌ ಅವರಿಗೆ ಭಾರತರತ್ನ ನೀಡಬೇಕು ಎನ್ನು ಇಚ್ಛೆ ಇದ್ದಂತಿಲ್ಲ.

ಇದನ್ನೂ ಓದಿ: Dr Rajkumar: ಕೊನೆಗೂ ಈಡೇರಲೇ ಇಲ್ಲ ಡಾ. ರಾಜ್‌ಕುಮಾರ್ ಅವರ ಆ ಒಂದು ಕನಸು! ಈಗಲೂ ಕಣ್ಣೀರಿಡುತ್ತಾರೆ ಸ್ವಗ್ರಾಮದ ಜನ

2011ರಲ್ಲಿ ಡಾ. ರಾಜ್‌ಕುಮಾರ್ ಅವರಿಗೆ ಭಾರತ ರತ್ನ ನೀಡಬೇಕು ಅಂತ ಅಂದಿನ ಸಿಎಂ ಬಿ.ಎಸ್. ಯಡಿಯೂರಪ್ಪ ಕೇಂದ್ರಕ್ಕೆ ಶಿಫಾರಸ್ಸು ಮಾಡಿದ್ದರು. ಅದೇ ಕೊನೆ, ಮುಂದೆ ಬಂದ ಸರ್ಕಾರಕ್ಕೂ, ಜನನಾಯಕರೂ ರಾಜ್‌ರನ್ನು ಮರೆತಿದ್ದರು.
Published by:Annappa Achari
First published: