HOME » NEWS » Explained » DOS AND DONTS AFTER TAKING COVID VACCINE THAT EVERYONE SHOULD KNOW SKTV

Explained: ಕೋವಿಡ್ ಲಸಿಕೆ ಪಡೆದ ನಂತರ ಏನು ಮಾಡಬೇಕು? ಯಾವುದು ನಿಷಿದ್ಧ? ಇಲ್ಲಿದೆ ಫುಲ್ ಡೀಟೆಲ್ಸ್

ಯಾರು ವ್ಯಾಕ್ಸಿನ್ ತೆಗೆದುಕೊಳ್ಳಬೇಕು? ಲಸಿಕೆ ತೆಗೆದುಕೊಂಡ ನಂತರ ಮಾಡಬಹುದಾದ ಮತ್ತು ಮಾಡಬಾರದ ಕೆಲಸಗಳು ಯಾವುವು ಎನ್ನುವುದರ ಬಗ್ಗೆ ಜನರಿಗೆ ಸಾಕಷ್ಟು ಅನುಮಾನಗಳು, ಪ್ರಶ್ನೆಗಳು ಇದ್ದೇ ಇರುತ್ತವೆ. ಇವುಗಳಿಗೆ ಉತ್ತರ ಇಲ್ಲಿದೆ.

news18-kannada
Updated:April 25, 2021, 4:03 PM IST
Explained: ಕೋವಿಡ್ ಲಸಿಕೆ ಪಡೆದ ನಂತರ ಏನು ಮಾಡಬೇಕು? ಯಾವುದು ನಿಷಿದ್ಧ? ಇಲ್ಲಿದೆ ಫುಲ್ ಡೀಟೆಲ್ಸ್
ಸಾಂದರ್ಭಿಕ ಚಿತ್ರ
  • Share this:
Covid Vaccine: ಜನವರಿ ತಿಂಗಳಿಂದ ದೇಶದಾದ್ಯಂತ ಕೊರೊನಾ ಲಸಿಕೆ ನೀಡಲಾಗ್ತಿದೆ. ವಿವಿಧ ವರ್ಗಗಳಿಗೆ ಲಸಿಕೆ ನೀಡುತ್ತಾ ಬಂದಿದ್ದು ಮೇ 1ರಿಂದ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ನೀಡಲು ತಯಾರಿ ಮಾಡಿಕೊಳ್ಳಲಾಗಿದೆ. ಈ ಸಂದರ್ಭದಲ್ಲಿ ಯಾರು ವ್ಯಾಕ್ಸಿನ್ ತೆಗೆದುಕೊಳ್ಳಬೇಕು? ಲಸಿಕೆ ತೆಗೆದುಕೊಂಡ ನಂತರ ಮಾಡಬಹುದಾದ ಮತ್ತು ಮಾಡಬಾರದ ಕೆಲಸಗಳು ಯಾವುವು ಎನ್ನುವುದರ ಬಗ್ಗೆ ಜನರಿಗೆ ಸಾಕಷ್ಟು ಅನುಮಾನಗಳು, ಪ್ರಶ್ನೆಗಳು ಇದ್ದೇ ಇರುತ್ತವೆ. ಇವುಗಳಿಗೆ ಉತ್ತರ ಇಲ್ಲಿದೆ.

ಲಸಿಕೆ ಪಡೆಯುವ ಮೊದಲು ಏನು ಮಾಡಬೇಕು?

ನಿಮಗೆ ಯಾವುದಾದರೂ ಅಲರ್ಜಿ ಇದ್ದರೆ ನಿಮ್ಮ ವೈದ್ಯರನ್ನು ಮೊದಲೇ ಭೇಟಿಯಾಗಿ ಕೋವಿಡ್ ವ್ಯಾಕ್ಸಿನ್ ತೆಗೆದುಕೊಳ್ಳಬಹುದಾ ಎಂದು ತಿಳಿದುಕೊಳ್ಳಿ. ಲಸಿಕೆಯಲ್ಲಿರುವ ಯಾವುದಾದರೂ ರಾಸಾಯನಿಕದಿಂದ ನಿಮಗೆ ಸಮಸ್ಯೆ ಎದುರಾಗುವುದನ್ನು ತಪ್ಪಿಸಲು ಇದು ಸಹಕಾರಿ. ಕಳೆದ ಒಂದೂವರೆ ತಿಂಗಳ ಹಿಂದಷ್ಟೇ ನಿಮಗೆ ಸೋಂಕು ತಗುಲಿದ್ದು, ಪ್ಲಾಸ್ಮಾ ಥೆರಪಿ ಪಡೆದಿದ್ದರೆ ನೀವು ಈಗ ಲಸಿಕೆ ತೆಗೆದುಕೊಳ್ಳಬಾರದು. ಗರ್ಭಿಣಿ ಮಹಿಳೆಯರು ಮತ್ತು ಹಾಲೂಡಿಸುವ ತಾಯಂದಿರು ಲಸಿಕೆ ಪಡೆಯುವಂತಿಲ್ಲ. ಉಳಿದವರು ಆರಾಮಾಗಿ ಆರೋಗ್ಯವಾದ ಆಹಾರ ತಿಂದು ರಿಲ್ಯಾಕ್ಸ್ ಆಗಿ ಲಸಿಕೆ ಪಡೆಯಲು ತೆರಳಬಹುದು.

ಲಸಿಕೆ ಪಡೆದ ಕೂಡಲೇ ಏನು ಮಾಡಬೇಕು?

ಕೋವಿಡ್ ಲಸಿಕೆ ನೀಡಿದ ಅರ್ಧ ಗಂಟೆಯವರೆಗೂ ಲಸಿಕಾ ಕೇಂದ್ರದಲ್ಲೇ ನಿಮ್ಮನ್ನು ಕುಳಿತಿರಲು ತಿಳಿಸುತ್ತಾರೆ. ಲಸಿಕೆಯಿಂದಾಗಿ ಏನಾದರೂ ಅಡ್ಡಪರಿಣಾಮಗಳು ಉಂಟಾದರೆ ಕೂಡಲೇ ಚಿಕಿತ್ಸೆ ನೀಡಲು ಈ ವ್ಯವಸ್ಥೆ ಮಾಡಲಾಗಿರುತ್ತದೆ. ಕೈ ನೋವು, ಸಣ್ಣ ಜ್ವರ, ಮೈ ಕೈ ನೋವು, ಸುಸ್ತು ಮುಂತಾದ ಲಕ್ಷಣಗಳು ಕೆಲವರಲ್ಲಿ ಕಾಣಬಹುದು. ಅದು ಸಾಮಾನ್ಯವಾದದ್ದು ಮತ್ತು ಕೆಲವೇ ದಿನಗಳಲ್ಲಿ ಕಣ್ಮರೆಯಾಗುತ್ತದೆ. ಹಾಗಾಗಿ ತಲೆ ಕೆಡಿಸಿಕೊಳ್ಳಬೇಕಿಲ್ಲ.

ಲಸಿಕೆ ಪಡೆದ ನಂತರ ನಾನು ಮದ್ಯಪಾನ ಮಾಡಬಹುದೇ?

ಕೇಂದ್ರ ಆರೋಗ್ಯ ಇಲಾಖೆ ತಿಳಿಸಿರುವ ಪ್ರಕಾರ ಮದ್ಯಪಾನ ಮಾಡುವುದರಿಂದ ಲಸಿಕೆಯ ಮೇಲೆ ಯಾವುದೇ ಪರಿಣಾಮ ಉಂಟಾಗುವುದಿಲ್ಲ. ಮದ್ಯಪಾನಕ್ಕೂ ಲಸಿಕೆಗೂ ಯಾವುದೇ ಸಂಬಂಧವಿಲ್ಲ. ಮದ್ಯಪಾನದ ಕಾರಣಕ್ಕಾಗಿ ಲಸಿಕೆಯಿಂದ ಹಿಂಜರಿಯದಿರಿ.ಯಾವ ವ್ಯಾಕ್ಸಿನ್ ಬೇಕು ಎಂದು ನಾನೇ ಆರಿಸಿಕೊಳ್ಳಬಹುದೇ?

ಸದ್ಯ ನಮ್ಮ ದೇಶದಲ್ಲಿ ಲಸಿಕೆಯ ವಿಚಾರದಲ್ಲಿ ಆಯ್ಕೆ ಇಲ್ಲ. ಕೋವಿಶೀಲ್ಡ್ ಅಥವಾ ಕೋವ್ಯಾಕ್ಸಿನ್ ಯಾವುದನ್ನೇ ತೆಗೆದುಕೊಂಡರೂ ಸುರಕ್ಷತೆ ಇದ್ದೇ ಇರುತ್ತದೆ. ಅಲ್ಲದೇ, ಮೊದಲ ಬಾರಿ ನೀಡಿದ ಲಸಿಕೆಯನ್ನೇ ಎರಡನೇ ಬಾರಿಯೂ ನೀಡಲಾಗುತ್ತದೆ. ಹಾಗಾಗಿ ಲಸಿಕೆ ಬದಲಾಗುವ ಬಗ್ಗೆ ಆತಂಕ ಬೇಡ.

ಲಸಿಕೆ ಪಡೆದ ಬಗ್ಗೆ ಸರ್ಟಿಫಿಕೇಟ್ ಪಡೆಯುವುದು ಹೇಗೆ?

ನೀವು ಮೊದಲನೇ ಡೋಸ್ ನಂತರ ಅಥವಾ ಎರಡೂ ಡೋಸ್ ಮುಗಿದ ನಂತರ ಆರೋಗ್ಯ ಸೇತು ಆಪ್ ಅಥವಾ ಕೋವಿನ್ ಪೋರ್ಟಲ್ ನಲ್ಲಿ ಲಸಿಕೆ ಪಡೆದಿದ್ದರೆ ಬಗ್ಗೆ ಸರ್ಟಿಫಿಕೇಟ್ ಡೌನ್​ಲೋಡ್ ಮಾಡಿಕೊಳ್ಳಬಹುದು.

ಲಸಿಕೆ ಪಡೆದ ಕೂಡಲೇ ಕೊರೊನಾ ವೈರಸ್ ನಿಮ್ಮನ್ನು ಏನೂ ಮಾಡಲು ಸಾಧ್ಯವಿಲ್ಲ ಎಂದುಕೊಳ್ಳಬೇಡಿ. ನಿಮ್ಮ ದೇಹವನ್ನು ವೈರಾಣುವಿನ ಆಕ್ರಮಣಕ್ಕೆ ಸಜ್ಜುಗೊಳಿಸಲು ಲಸಿಕೆ ಅಗತ್ಯ. ಲಸಿಕೆ ಪಡೆದ ನಂತರವೂ ಮಾಸ್ಕ್ ಧರಿಸುವುದು, ಸ್ವಚ್ಛತೆ ಕಾಪಾಡುವುದು ಮತ್ತು ದೈಹಿಕ ಅಂತರ ಕಾಯ್ದುಕೊಳ್ಳುವುದು ಬಹಳ ಮುಖ್ಯ.
Published by: Soumya KN
First published: April 25, 2021, 4:03 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories