• Home
  • »
  • News
  • »
  • explained
  • »
  • Explained: ಸಮಯ ಉಳಿಸಲು ಪ್ರೆಶರ್ ಕುಕ್ಕರ್​ ಬಳಸಿ ಅಡುಗೆ ಮಾಡ್ತೀರಾ? ಬಯಲಾಯ್ತು ಆತಂಕದ ವಿಚಾರ!

Explained: ಸಮಯ ಉಳಿಸಲು ಪ್ರೆಶರ್ ಕುಕ್ಕರ್​ ಬಳಸಿ ಅಡುಗೆ ಮಾಡ್ತೀರಾ? ಬಯಲಾಯ್ತು ಆತಂಕದ ವಿಚಾರ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಈ ಪ್ರೆಶರ್ ಕುಕ್ಕರ್‌ಗಳ ಬಳಕೆಯು ಆರೋಗ್ಯಕರವೇ ಎಂಬುದು ಸದ್ಯ ಚರ್ಚೆಯ ವಿಷಯವಾಗುತ್ತಿದೆ. ಹಾಗಿದ್ದರೆ ಈ ಕುರಿತು ಇನ್ನಷ್ಟು ಮಾಹಿತಿಗಳನ್ನು ತಿಳಿದುಕೊಳ್ಳೋಣ.

  • Trending Desk
  • Last Updated :
  • Bangalore [Bangalore], India
  • Share this:

    ಜನರು ಆಧುನೀಕತೆಗೆ ಒಗ್ಗಿಕೊಂಡಂತೆ ಅದೇ ಮಾರ್ಪಾಡುಗಳನ್ನು ತಮ್ಮ ದೈನಂದಿನ ದಿನಚರಿಗಳಲ್ಲೂ (Lifestyle) ಆರಂಭಿಸುತ್ತಾರೆ. ಮುಖ್ಯವಾಗಿ ಅಡುಗೆ ವಿಷಯಗಳಲ್ಲಿ ಈ ಆಧುನಿಕ ಅಂಶಗಳು ಹೆಚ್ಚು ಪರಿಣಾಮಕಾರಿ ಎಂದೇ ಹೇಳಬಹುದು. ಅಡುಗೆ ಕೆಲಸ ಬೇಗ ಮುಗಿಯಬೇಕು ಹಾಗೂ ಸಮಯ ಉಳಿತಾಯವಾಗಬೇಕು ಎಂಬ ನಿಟ್ಟಿನಲ್ಲಿ ಅಡುಗೆ ಮನೆಯಲ್ಲಿ (Kitchen)  ಅದೆಷ್ಟೋ ಮಾರ್ಪಾಡುಗಳು ನಡೆದಿವೆ. ಓವನ್‌ಗಳ (Microwave Oven) ಬಳಕೆ, ಪಾತ್ರೆ ತೊಳೆಯಲು ಮೆಶೀನ್‌ಗಳ (Machines) ಬಳಕೆ, ಗ್ಯಾಸ್ ಸ್ಟವ್‌ಗಳಲ್ಲಿ (Gas Stoves) ಇನ್ನಷ್ಟು ಆಧುನಿಕತೆ ಹೀಗೆ ಪಟ್ಟಿ ಮಾಡುತ್ತಾ ಹೋದರೆ ಆಧುನಿಕ ಅಡುಗೆ ಮನೆ ಹಾಗೂ ಪಾಕ ಪದ್ಧತಿಗೆ ನಾವು ಮನಸೋಲಲೇಬೇಕು.


    ಹೀಗಿರುವಾಗ ಇತ್ತೀಚಿನ ದಿನಗಳಲ್ಲಿ ಹೆಚ್ಚು ಚರ್ಚೆಯಾಗುತ್ತಿರುವ ವಿಷಯ ಪ್ರೆಶರ್ ಕುಕ್ಕರ್‌ನಲ್ಲಿ ಅಡುಗೆ ಮಾಡುವುದರಿಂದ ಅದರಲ್ಲಿರುವ ಪೋಷಕಾಂಶಗಳು ನಷ್ಟಗೊಳ್ಳುತ್ತವೆ ಎಂಬುದಾಗಿದೆ. ಆದರೆ ಈ ಪ್ರೆಶರ್ ಕುಕ್ಕರ್‌ಗಳ ಬಳಕೆಯು ಆರೋಗ್ಯಕರವೇ ಎಂಬುದು ಸದ್ಯ ಚರ್ಚೆಯ ವಿಷಯವಾಗುತ್ತಿದೆ. ಹಾಗಿದ್ದರೆ ಈ ಕುರಿತು ಇನ್ನಷ್ಟು ಮಾಹಿತಿಗಳನ್ನು ತಿಳಿದುಕೊಳ್ಳೋಣ.


    ಇದನ್ನೂ ಓದಿ: Explained: ಅಮೆರಿಕಾದಲ್ಲಿ ಕ್ಯಾನ್ಸರ್‌ನಿಂದ ಸಾಯುತ್ತಿರುವವರ ಪ್ರಮಾಣ ಇಳಿಕೆ; 1991 ರಿಂದ 33% ಕಡಿಮೆಯಾಗಲು ಕಾರಣವೇನು?


    ಪ್ರೆಶರ್ ಕುಕ್ಕರ್ ಹೇಗೆ ಕಾರ್ಯ ನಿರ್ವಹಿಸುತ್ತದೆ?


    ಪ್ರೆಶರ್ ಕುಕ್ಕರ್ ಶಾಖ ಹಾಗೂ ಹಬೆ ಅಂದರೆ ಹೀಟ್ ಮತ್ತು ಸ್ಟೀಮ್ ಎರಡನ್ನೂ ಬಳಸಿಕೊಂಡು ಆಹಾರವನ್ನು ಬೇಯಿಸುತ್ತದೆ. ಹೆಚ್ಚಿನ ಶಾಖದ ಸಂದರ್ಭದಲ್ಲಿ ಉಗಿ ಹಾಗೂ ಒತ್ತಡವು ಆಹಾರವನ್ನು ಬೇಯಿಸಲು ಸಹಕಾರವನ್ನೊದಗಿಸುತ್ತದೆ. ಕುಕ್ಕರ್ ಸ್ಟೀಮ್ ಅನ್ನು ಹಿಡಿದಿಡುವ ವಾಲ್ವ್ ಅಂದರೆ ಕವಾಟವನ್ನು ಹೊಂದಿದ್ದು ಇದು ಹೆಚ್ಚು ಒತ್ತಡದ ಸ್ಥಿತಿಯನ್ನು ನಿರ್ಮಿಸುತ್ತದೆ.


    ಕುಕ್ಕರ್‌ನಲ್ಲಿರುವ ದ್ರವ ಅಥವಾ ದ್ರವಾಹಾರಗಳ ಕುದಿಯುವ ತಾಪಮಾನವನ್ನು ಇದು ಏರಿಸುತ್ತದೆ ಮತ್ತು ಹಬೆಯ ರೂಪದಲ್ಲಿ ಆಹಾರಕ್ಕೆ ತೇವಾಂಶವನ್ನು ಒದಗಿಸುತ್ತದೆ. ಇದರಿಂದ ಆಹಾರ ಬೇಯುವಿಕೆ ಪ್ರಕ್ರಿಯೆ ತ್ವರಿತಗೊಳ್ಳುತ್ತದೆ.


    ಹೆಚ್ಚಿನ ಎತ್ತರದಲ್ಲಿ ಕಡಿಮೆ ತಾಪಮಾನದಲ್ಲಿ ನೀರು ಕುದಿಯುತ್ತದೆ. ಒತ್ತಡದ ಕೊರತೆಯು ಕಡಿಮೆ ತಾಪಮಾನದಲ್ಲಿ ನೀರನ್ನು ಕುದಿಸಲು ಅನುವು ಮಾಡಿಕೊಡುತ್ತದೆ. ನೀರು ಕುದಿಯುವ ತಾಪಮಾನ ಕಡಿಮೆಯಾದಷ್ಟೂ ವೇಗವಾಗಿ ಆಹಾರಗಳು ಒಣಗುತ್ತವೆ ಹಾಗೂ ಅಡುಗೆ ಮಾಡುವುದು ಕಷ್ಟಕರವಾಗುತ್ತದೆ. ಹೀಗಾಗಿ ನೀರು ಕಡಿಮೆಯಾದಾಗ ಆಹಾರ ಬೇಯಲು ಇನ್ನಷ್ಟು ಸಮಯ ಅಗತ್ಯವಿರುತ್ತದೆ.




    ಪ್ರೆಶರ್ ಕುಕ್ಕರ್ ನೀರಿನ ಕುದಿಯುವ ಬಿಂದುವನ್ನು ಹೆಚ್ಚಿಸುತ್ತದೆ ಹಾಗೂ ಅಡುಗೆ ಮಾಡುವ ಸಮಯವನ್ನು ಕಡಿಮೆ ಮಾಡುತ್ತದೆ. ಪ್ರೆಶರ್ ಕುಕ್ಕರ್‌ನಲ್ಲಿ ಸ್ಟೀಮ್ ಹೊರಬರಲು ಸಾಧ್ಯವಿಲ್ಲದ ಕಾರಣ ನೀರು ನಷ್ಟವಾಗುವುದಿಲ್ಲ ಹಾಗೂ ಶಾಖದ ಸೋರಿಕೆ ಇಲ್ಲದೆ ಆಹಾರ ಬೇಯುತ್ತದೆ.


    ಹೆಚ್ಚಿನ ಶಾಖವನ್ನು ಪ್ರೆಶರ್ ಕುಕ್ಕರ್ ಬಳಸಿಕೊಳ್ಳುತ್ತದೆಯೇ?


    ಪ್ರೆಶರ್ ಕುಕ್ಕರ್‌ನಲ್ಲಿ ನೀರು ಕುದಿಯುವ ಬಿಂದು 250 ಡಿಗ್ರಿಯಾಗಿದೆ. ಇದು ಇನ್ನೂ ಹೆಚ್ಚಿನ ಆಹಾರಗಳನ್ನು ಸ್ಟವ್ ಅಥವಾ ಗ್ಯಾಸ್‌ನಲ್ಲಿ ತಯಾರಿಸುವ ತಾಪಮಾನಕ್ಕಿಂತ ಕಡಿಮೆಯಾಗಿದೆ.

    ಪೋಷಕಾಂಶಗಳು ನಷ್ಟಗೊಳ್ಳುತ್ತದೆಯೇ?


    * ಪ್ರೆಶರ್ ಕುಕ್ಕರ್‌ಗಳು ಆಹಾರವನ್ನು ಕಡಿಮೆ ತಾಪಮಾನದಲ್ಲಿ ಬೇಯಿಸುತ್ತವೆ ಆದರೆ 1995 ರ ಅಧ್ಯಯನವು ಇತರ ಅಡುಗೆ ವಿಧಾನಗಳಿಗಿಂತ ಪ್ರೆಶರ್ ಕುಕ್ಕರ್ ಆಹಾರದಲ್ಲಿ ಪೋಷಕಾಂಶಗಳನ್ನು ಸಂರಕ್ಷಿಸುತ್ತದೆ ಎಂಬುದನ್ನು ತಿಳಿಸಿದೆ.


    * ಮತ್ತೊಂದು ಅಧ್ಯಯನವು ಆಹಾರದಲ್ಲಿನ ವಿಟಮಿನ್ ಸಿ ಮತ್ತು ಬಿ-ವಿಟಮಿನ್‌ಗಳ ಮಟ್ಟವನ್ನು ಪರಿಶೀಲಿಸಿದ್ದು ವಿಟಮಿನ್ ಮಟ್ಟ ಪ್ರೆಶರ್ ಕುಕ್ಕರ್‌ನಲ್ಲಿರುತ್ತದೆ ಎಂಬುದನ್ನು ಸೂಚಿಸಿದೆ.


    * ಆದರೆ ಕುದಿಯುವಿಕೆಯಿಂದ 40-75% ವ್ಯಾಪ್ತಿಯೊಂದಿಗೆ ಪೋಷಕಾಂಶಗಳನ್ನು ಕಡಿಮೆ ಮಾಡುತ್ತದೆ (60% ಪೋಷಕಾಂಶಗಳ ನಷ್ಟ!) ಎಂದು ಮತ್ತೊಂದು ಅಧ್ಯಯನ ತಿಳಿಸಿದೆ.


    * ಹುರಿದ ಮತ್ತು ಆವಿಯಲ್ಲಿ 90% ಪೋಷಕಾಂಶಗಳು ಉಳಿಯುತ್ತವೆ ಎಂಬುವುದು ಮತ್ತೊಂದು ಅಧ್ಯಯನ ತಿಳಿಸಿಕೊಟ್ಟಿದೆ.


    ಇದನ್ನೂ ಓದಿ: Explainer: ಜೋಶಿಮಠದ ದುರಂತ ಪತ್ತೆ ಹಚ್ಚಲು ಸ್ಯಾಟಲೈಟ್ ತಂತ್ರಜ್ಞಾನ ಹೇಗೆ ಸಹಾಯಕ? ಮುಂದಿನ ಅನಾಹುತ ತಪ್ಪುತ್ತಾ ಟೆಕ್ನಾಲಜಿ?


    ಪ್ರೆಶರ್ ಕುಕ್ಕರ್ ಪೋಷಕಾಂಶ ಹೀರುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ


    ಪೋಷಕಾಂಶಗಳನ್ನು ಸಂರಕ್ಷಿಸುವಲ್ಲಿ ಪ್ರೆಶರ್ ಕುಕ್ಕರ್ ಸಹಕಾರಿಯಾಗಿದೆ. ಅದಾಗ್ಯೂ ಪ್ರೆಶರ್ ಕುಕ್ಕರ್ ಫೈಟಿಕ್ ಆಮ್ಲದಂತಹ ಆಹಾರದಲ್ಲಿನ ಕೆಲವು ಗುಣಲಕ್ಷಣಗಳನ್ನು ನಿಷ್ಕ್ರಿಯಗೊಳಿಸುತ್ತದೆ.




    ಫೈಟಿಕ್ ಆಸಿಡ್ ಮತ್ತು ಲೆಕ್ಟಿನ್‌ಗಳನ್ನು ಕಡಿಮೆ ಮಾಡುವುದರಿಂದ ಧಾನ್ಯಗಳು ಮತ್ತು ಬೀನ್ಸ್‌ನಂತಹ ಆಹಾರಗಳಲ್ಲಿನ ಪೋಷಕಾಂಶಗಳನ್ನು ಹೆಚ್ಚು ಹೀರಿಕೊಳ್ಳುವಂತೆ ಮಾಡುತ್ತದೆ ಮತ್ತು ಜೀರ್ಣಾಂಗ ವ್ಯವಸ್ಥೆಯನ್ನು ಕಿರಿಕಿರಿಗೊಳಿಸುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ.


    ಹಾಗಾಗಿ ಪ್ರೆಶರ್ ಕುಕ್ಕರ್‌ನಲ್ಲಿ ಅಡುಗೆ ಮಾಡುವುದು ಈ ಪದಾರ್ಥಗಳನ್ನು ನಿಷ್ಕ್ರಿಯಗೊಳಿಸುವ ಕಾರ್ಯವಾಗಿದೆ ಎಂದು ಹೇಳಬಹುದು.

    Published by:Precilla Olivia Dias
    First published: