• ಹೋಂ
  • »
  • ನ್ಯೂಸ್
  • »
  • Explained
  • »
  • Explained: ತಾಜ್ ಮಹಲ್ಲೋ, ತೇಜೋ ಮಹಾಲಯವೋ? ಮುಚ್ಚಿದ ಆ 20 ಕೋಣೆಗಳಲ್ಲಿ ಏನಿದೆ ಗೊತ್ತಾ?

Explained: ತಾಜ್ ಮಹಲ್ಲೋ, ತೇಜೋ ಮಹಾಲಯವೋ? ಮುಚ್ಚಿದ ಆ 20 ಕೋಣೆಗಳಲ್ಲಿ ಏನಿದೆ ಗೊತ್ತಾ?

ತಾಜ್ ಮಹಲ್

ತಾಜ್ ಮಹಲ್

ವಿಶ್ವ ಪ್ರಸಿದ್ಧ ತಾಜ್ ಮಹಲ್ ತೇಜೋ ಮಹಾಲಯ, ಹಿಂದೂ ದೇವಾಲಯ ಆಗಿತ್ತು ಎನ್ನುತ್ತಿದ್ದ ಬಲಪಂಥೀಯ ಸಂಘಟನೆಗಳ ಕೂಗು ಮತ್ತಷ್ಟು ಜೋರಾಗಿ ಕೇಳಿ ಬರುತ್ತಿದೆ. ಹಾಗಿದ್ರೆ ನಿಜಕ್ಕೂ ಅದು ಹಿಂದೂ ದೇವಾಲಯವೋ? ಅಥವಾ ಷಹಜಹಾನ್ ಕಟ್ಟಿಸಿದ ಸ್ಮಾರಕವೋ? ಈ ರಹಸ್ಯದ ಬಗ್ಗೆ ಮಾಹಿತಿ ಇಲ್ಲಿದೆ...

  • Share this:

ವಿಶ್ವ ಪ್ರಸಿದ್ಧ ತಾಜ್ ಮಹಲ್ (Taj Mahal) ತೇಜೋ ಮಹಾಲಯ, ಹಿಂದೂ ದೇವಾಲಯ (Hindu Temple) ಆಗಿತ್ತು ಎನ್ನುತ್ತಿದ್ದ ಬಲಪಂಥೀಯ ಸಂಘಟನೆಗಳ ಕೂಗು ಮತ್ತಷ್ಟು ಜೋರಾಗಿ ಕೇಳಿ ಬರುತ್ತಿದೆ. ಪ್ರಸ್ತುತ ತಾಜ್ ಮಹಲ್‌ನಲ್ಲಿ ಹಿಂದೂ ದೇವತೆಗಳ ವಿಗ್ರಹ (Idol) ಮತ್ತು ಶಾಸನಗಳು (Inscription) ಇರುವ ಕುರಿತು ಶೋಧಕಾರ್ಯ ನಡೆಸುವಂತೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ  (ಎಎಸ್‌ಐ) (Indian Archaeological Survey Department) ನಿರ್ದೇಶನ ನೀಡುವಂತೆ ಕೋರಿ ಅಲಹಾಬಾದ್‌ ಹೈಕೋರ್ಟಿನ (Allahabad High Court) ಲಖನೌ ಪೀಠಕ್ಕೆ ಅರ್ಜಿ ಸಲ್ಲಿಕೆಯಾಗಿದೆ. ತಾಜ್ ಮಹಲ್‌ನಲ್ಲಿ 20 ಕೊಠಡಿಗಳನ್ನು ಮುಚ್ಚಿಡಲಾಗಿದೆ. ಇಲ್ಲಿ ಹಿಂದೂ ವಿಗ್ರಹಗಳು ಮತ್ತು ಶಾಸನಗಳನ್ನು ಮರೆಮಾಡಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳಲು 20 ಕೊಠಡಿಗಳನ್ನು ತೆರೆಯಲು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್‌ಐ) ಗೆ ನಿರ್ದೇಶನ ನೀಡುವಂತೆ ಕೋರಿ ಅರ್ಜಿ ಸಲ್ಲಿಸಲಾಗಿದೆ.


ಅಲಹಾಬಾದ್‌ ಹೈಕೋರ್ಟಿನ ಲಖನೌ ಪೀಠಕ್ಕೆ ಅರ್ಜಿ ಸಲ್ಲಿಕೆ


ಭಾರತೀಯ ಜನತಾ ಪಕ್ಷದ (ಬಿಜೆಪಿ) ಅಯೋಧ್ಯೆ ಜಿಲ್ಲಾ ಉಸ್ತುವಾರಿ ಡಾ.ರಜನೀಶ್ ಸಿಂಗ್ ಅವರು ಅಲಹಾಬಾದ್‌ ಹೈಕೋರ್ಟಿನ ಲಖನೌ ಪೀಠಕ್ಕೆ ಅರ್ಜಿ ಸಲ್ಲಿಸಿದ್ದು, ನ್ಯಾಯವಾದಿ ರುದ್ರ ವಿಕ್ರಮ್ ಸಿಂಗ್ ಅವರು ನ್ಯಾಯಾಲಯದಲ್ಲಿ ಅರ್ಜಿದಾರರ ಪರ ವಕಾಲತ್ತು ವಹಿಸಿದ್ದಾರೆ.


ಹಿಂದೂ ವಿಗ್ರಹಗಳು ಅಥವಾ ಧರ್ಮಗ್ರಂಥಗಳಿಗೆ ವಿಗ್ರಹಗಳಿವೆ ಎಂಬ ನಂಬಿಕೆ


“ತಾಜ್ ಮಹಲ್‌ಗೆ ಸಂಬಂಧಿಸಿದಂತೆ ಹಳೆಯ ವಿವಾದವಿದೆ. ತಾಜ್‌ಮಹಲ್‌ನಲ್ಲಿರುವ ಸುಮಾರು 20 ಕೊಠಡಿಗಳಿಗೆ ಬೀಗ ಹಾಕಲಾಗಿದ್ದು, ಯಾರಿಗೂ ಅಲ್ಲಿಗೆ ಪ್ರವೇಶವಿಲ್ಲ. ಈ ಕೊಠಡಿಗಳಲ್ಲಿ ಹಿಂದೂ ದೇವರುಗಳು ಮತ್ತು ಧರ್ಮಗ್ರಂಥಗಳ ವಿಗ್ರಹಗಳಿವೆ ಎಂದು ನಂಬಲಾಗಿದೆ,” ಎಂದು ಅರ್ಜಿದಾರ ಡಾ.ರಜನೀಶ್ ಸಿಂಗ್ ಹೇಳಿದರು.


“ಸತ್ಯಾಸತ್ಯತೆಗಳನ್ನು ಖಚಿತಪಡಿಸಿಕೊಳ್ಳಲು ಈ ಕೊಠಡಿಗಳನ್ನು ತೆರೆಯಲು ಎಎಸ್‌ಐಗೆ ನಿರ್ದೇಶನ ನೀಡುವಂತೆ ಕೋರಿ ನಾನು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದೇನೆ. ಈ ಕೊಠಡಿಗಳನ್ನು ತೆರೆಯಲು ಮತ್ತು ಎಲ್ಲಾ ವಿವಾದಗಳಿಗೆ ತೆರೆ ಎಳೆಯಲು ಅವಕಾಶ ನೀಡಿ, ”ಎಂದು ಸಿಂಗ್ ಹೇಳಿದರು.


ವಿಗ್ರಹಗಳ ಪುರಾವೆ ಹುಡುಕಲು ಸಮಿತಿ ರಚನೆ


ಮನವಿಯಲ್ಲಿ, ಅರ್ಜಿದಾರರು ಈ ಕೊಠಡಿಗಳನ್ನು ಪರಿಶೀಲಿಸಲು ಮತ್ತು ಹಿಂದೂ ವಿಗ್ರಹಗಳು ಅಥವಾ ಧರ್ಮಗ್ರಂಥಗಳಿಗೆ ಸಂಬಂಧಿಸಿದ ಯಾವುದೇ ಪುರಾವೆಗಳನ್ನು ಹುಡುಕುವ ಸಮಿತಿಯನ್ನು ರಚಿಸುವಂತೆ ನ್ಯಾಯಾಲಯದಿಂದ ರಾಜ್ಯ ಸರ್ಕಾರಕ್ಕೆ ನಿರ್ದೇಶನಗಳನ್ನು ಕೋರಿದ್ದಾರೆ. ಮುಚ್ಚಿದ ಕೋಣೆಗಳ ಹಿಂದಿನ ರಹಸ್ಯ ಬಯಲು ಮಾಡಬೇಕಿದೆ ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ.


ಇದನ್ನೂ ಓದಿ: Explained: ‘ಬೆಳಕಿನಿಂದ ಕತ್ತಲೆಯೆಡೆಗೆ’ ಭಾರತ! ಕಲ್ಲಿದ್ದಲು ಕೊರತೆಗೆ ಕಾರಣ, ಅದರ ಪರಿಣಾಮವೇನು?


2020ರಿಂದ ತಾಜ್ ಮಹಲ್‌ನಲ್ಲಿ ಬೀಗ ಹಾಕಲಾಗಿರುವ 20 ಕೋಣೆಗಳ ಬಗ್ಗೆ ಮಾಹಿತಿ ಹಕ್ಕು ಕಾಯಿದೆ (ಆರ್‌ಟಿಐ) ಮೂಲಕ ಸತ್ಯವನ್ನು ಶೋಧಿಸಲು ಪ್ರಯತ್ನಿಸುತ್ತಿದ್ದೇನೆ ಎಂದು ರಜನೀಶ್ ಸಿಂಗ್ ಹೇಳಿದರು. ಸಿಂಗ್ 2020ರಲ್ಲಿ ಕೇಂದ್ರ ಸಂಸ್ಕೃತಿ ಸಚಿವಾಲಯಕ್ಕೆ ಕೊಠಡಿಗಳ ಬಗ್ಗೆ ಮಾಹಿತಿ ಕೋರಿ RTI ಸಲ್ಲಿಸಿದರು.


“2020ರಿಂದ, ನಾನು ತಾಜ್ ಮಹಲ್‌ನ ಬೀಗ ಹಾಕಿದ ಕೋಣೆಗಳ ಬಗ್ಗೆ ಸತ್ಯವನ್ನು ಕಂಡುಹಿಡಿಯಲು ಪ್ರಯತ್ನಿಸುತ್ತಿದ್ದೇನೆ. ನಾನು ಆರ್‌ಟಿಐ ಸಲ್ಲಿಸಿದ್ದೆ. ಆರ್‌ಟಿಐಗೆ ಉತ್ತರಿಸಿದ ಕೇಂದ್ರ ಸಂಸ್ಕೃತಿ ಸಚಿವಾಲಯವು ಭದ್ರತಾ ಕಾರಣಗಳಿಂದ ಈ ಕೊಠಡಿಗಳಿಗೆ ಬೀಗ ಹಾಕಲಾಗಿದೆ ಎಂದು ಸಮಜಾಯಿಷಿ ನೀಡಿದರು. ಅಂತಿಮವಾಗಿ ಈ ಕೊಠಡಿಗಳ ಬಗ್ಗೆ ಯಾವುದೇ ವಿವರಗಳನ್ನು ನೀಡಲಾಗಿಲ್ಲ” ಎಂದು ಅವರು ಹೇಳಿದರು.


"ಆರ್‌ಟಿಐನಲ್ಲಿ, ನಾನು ಬೀಗ ಹಾಕಿರುವ ಕೊಠಡಿಗಳಗಳ ಒಳಗೆ ಏನಿದೆ ಮತ್ತು ಅವುಗಳನ್ನು ತೆರೆಯಲು ನಿರ್ದೇಶನಗಳ ಬಗ್ಗೆ ವಿವರಗಳನ್ನು ಕೇಳಿದ್ದೇನೆ" ಎಂದು ಸಿಂಗ್ ಹೇಳಿದರು.


"ನನ್ನ ಎಲ್ಲಾ ಪ್ರಯತ್ನಗಳು ವಿಫಲವಾದಾಗ ನಾನು ಈ ಕೊಠಡಿಗಳನ್ನು ತೆರೆಯಲು ಮತ್ತು ಹಿಂದೂ ದೇವರುಗಳು ಮತ್ತು ಧರ್ಮಗ್ರಂಥಗಳು ಆ ಕೋಣೆಗಳ ಒಳಗೆ ಇದೆಯೇ ಎಂದು ಕಂಡುಹಿಡಿಯಲು ಸತ್ಯಶೋಧನಾ ಸಮಿತಿಯನ್ನು ರಚಿಸುವಂತೆ ಸರ್ಕಾರಕ್ಕೆ ನಿರ್ದೇಶನಗಳನ್ನು ಕೋರಿ ಲಖನೌ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದೇನೆ" ಎಂದು ಅರ್ಜಿದಾರರು ಹೇಳಿದ್ದಾರೆ.


ತಾಜ್ ಮಹಲ್ ಅನ್ನು ಹಿಂದೂ ದೇವಾಲಯ ಎಂದು ಕರೆದ ಬಲಪಂಥೀಯ ಸಂಘಟನೆಗಳು


ಇದನ್ನೂ ಓದಿ:  Explained: ತಮಿಳುನಾಡಿನಲ್ಲಿ 'ಪಟ್ಟಿನ ಪ್ರವೇಸಂ' ಆಚರಣೆ ನಿಷೇಧ: ಏನಿದು ಸಮಾರಂಭ, ಧಾರ್ಮಿಕ, ರಾಜಕೀಯ ನಾಯಕರ ನಿಲುವೇನು?


ಹಲವಾರು ಬಲಪಂಥೀಯ ಸಂಘಟನೆಗಳು ತಾಜ್ ಮಹಲ್ ಅನ್ನು ತೇಜೋ ಮಹಾಲಯ, ಹಿಂದೂ ದೇವಾಲಯ ಎಂದು ಕರೆದಿದ್ದಾರೆ. ತೇಜೋ ಮಹಾಲಯ ಎಂಬ ಮಂದಿರದ ಮೇಲೆ ಮೊಘಲ್‌ ದೊರೆ ಶಾಹಜಹಾನ್ ತಾಜ್‌ಮಹಲ್ಅನ್ನು ನಿರ್ಮಿಸಿದ್ದಾನೆ ಎನ್ನಲಾಗಿದೆ.

First published: