• Home
 • »
 • News
 • »
 • explained
 • »
 • Technology: ಟೆಕ್ ದೈತ್ಯಗಳು ಅಪಾಯದಲ್ಲಿ ಸಿಲುಕಲು ಕಾರಣವೇನು ಗೊತ್ತಾ?

Technology: ಟೆಕ್ ದೈತ್ಯಗಳು ಅಪಾಯದಲ್ಲಿ ಸಿಲುಕಲು ಕಾರಣವೇನು ಗೊತ್ತಾ?

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಯುಕೆಯ ಕಾಂಪಿಟಿಷನ್ ವಾಚ್ ಡಾಗ್ ಸದ್ಯ ಜಗತ್ತಿನ ಟೆಕ್ ದೈತ್ಯರಾದ ಆ್ಯಪಲ್ ಹಾಗೂ ಗೂಗಲ್ ತಮ್ಮ ಮೊಬೈಲ್ ಬ್ರೌಸರ್ ಗಳ ಮೂಲಕ ದ್ವಿಸಾಮ್ಯತೆಯನ್ನು ಸಾಧಿಸುತ್ತಿವೆಯೇ ಎಂಬುದನ್ನು ತಿಳಿಯುವ ಕುರಿತು ಆಳವಾದ ತನಿಖೆಗೆ ಸಜ್ಜಾಗಿರುವುದಾಗಿ ತಿಳಿದುಬಂದಿದೆ.

 • Share this:

  ಯುಕೆಯ (UK) ಕಾಂಪಿಟಿಷನ್ ವಾಚ್ ಡಾಗ್ ಸದ್ಯ ಜಗತ್ತಿನ ಟೆಕ್ ದೈತ್ಯರಾದ ಆ್ಯಪಲ್ ಹಾಗೂ ಗೂಗಲ್ ತಮ್ಮ ಮೊಬೈಲ್ ಬ್ರೌಸರ್ ಗಳ ಮೂಲಕ ದ್ವಿಸಾಮ್ಯತೆಯನ್ನು ಸಾಧಿಸುತ್ತಿವೆಯೇ ಎಂಬುದನ್ನು ತಿಳಿಯುವ ಕುರಿತು ಆಳವಾದ ತನಿಖೆಗೆ ಸಜ್ಜಾಗಿರುವುದಾಗಿ ತಿಳಿದುಬಂದಿದೆ. ಈ ಹಿಂದೆ ಜೂನ್ ನಲ್ಲಿ ವಾಚ್ ಡಾಗ್ ನೀಡಿದ್ದ ವರದಿಯಲ್ಲಿ ಈ ವಿಷಯಕ್ಕೆ ಸಂಬಂಧಿಸಿದಂತೆ ಮಹತ್ವದ ಪುರಾವೆ ಬೆಂಬಲ ದೊರೆತಿದ್ದುದರ ಪ್ರತಿಕ್ರಿಯೆಯ ಭಾಗವಾಗಿ ಸದ್ಯ ಈ ತನಿಖೆ ಕೈಗೊಳ್ಳಲಿದೆ ಎನ್ನಲಾಗಿದೆ. ಈ ಮೂಲಕ ಐಫೋನ್ (IPhone) ತಯಾರಕ ಸಂಸ್ಥೆಯಾದ ಆಪಲ್ (Iphone) ತನ್ನ ಆ್ಯಪ್​ ಸ್ಟೋರ್ ಮೂಲಕ ಕ್ಲೌಡ್ ಗೇಮಿಂಗ್  (Cloud Downloading) ಅನ್ನು ನಿರ್ಬಂಧಿಸುತ್ತಿದೆಯೇ ಎಂಬುದನ್ನು ತಿಳಿಯಬೇಕಾಗಿರುವುದಾಗಿ ಕಾಂಪಿಟಿಷನ್ ಆಂಡ್ ಮೇಕರ್ಸ್ ಅಥಾರಿಟಿ (ಸಿಎಂಎ) ತಿಳಿಸಿರುವುದಾಗಿ ವರದಿಯಾಗಿದೆ.


  ಇದಕ್ಕೆ ಸಂಬಂಧಿಸಿದಂತೆ ಸಿಎಂಎಯ ಮುಖ್ಯ ಕಾರ್ಯಾಧಿಕಾರಿಯಾದ ಕಾರ್ಡೇಲ್ ಅವರು ಪ್ರತಿಕ್ರಯಿಸಿದ್ದು "ನಮಗೆ ಯುಕೆಯ ಹಲವು ವ್ಯವಹಾರಗಳು ಹಾಗೂ ವೆಬ್ ಡೆವೆಲಪರ್ಸ್ ಗಳು ತಮ್ಮನ್ನು ಆ್ಯಪಲ್ ಹಾಗೂ ಗೂಗಲ್ ಸಂಸ್ಥೆಗಳು ನಿರ್ಬಂಧಿಸುತ್ತಿರುವುದಾಗಿ ಅನಿಸುತ್ತಿದೆ" ಎಂದು ಹೇಳಿಕೊಂಡಿರುವುದಾಗಿ ತಿಳೀಸಿದ್ದಾರೆ.


  ಮುಂದುವರೆಯುತ್ತ ಅವರು, "ನಮಗೆ ಕೇಳಿಬಂದಿರುವ ಈ ಗಂಭೀರ ಆರೋಪಗಳು ನಿಜಕ್ಕೂ ವಾಸ್ತವವಾಗಿವೆಯೇ, ಒಂದು ವೇಳೆ ಇದು ನಿಜವಾಗಿದ್ದರೂ ಸಹ ಮುಂದೆ ಸೃಜನಾತ್ಮಕತೆ ಹಾಗೂ ಸ್ಪರ್ಧಾತ್ಮಕತೆಯನ್ನು ಉತ್ತೇಜಿಸಲು ಯಾವೆಲ್ಲ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕಾಗಬಹುದು ಎಂಬುದರ ಬಗ್ಗೆ ಆಲೋಚಿಸಬೆಕಾಗಿದೆ" ಎಂದು ಅವರು ಹೇಳಿದ್ದಾರೆ.


  ಈ ನಡುವೆ ಗೂಗಲ್ ಮಾತೃ ಸಂಸ್ಥೆಯಾದ ಅಲ್ಫಾಬೇಟ್ ಹಾಗೂ ಆ್ಯಪಲ್ ಸಂಸ್ಥೆಗಳು ಬ್ರುಸೆಲ್ಸ್ ಹಾಗೂ ಲಂಡನ್ ಮತ್ತು ಇತರೆಡೆಗಳಲ್ಲಿ ಸ್ಥಿತವಿರುವ ಸ್ಪರ್ಧಾತ್ಮಕ ನಿಯಂತ್ರಕ ಸಂಸ್ಥೆಗಳ ಗಮನವನ್ನು ಹೆಚ್ಚಾಗಿ ಸೆಳೆಯುತ್ತಿದ್ದಾರೆ ಎಂದು ಸಹ ತಿಳಿದುಬಂದಿದೆ. ಇನ್ನು, ಗೂಗಲ್ ಸಂಸ್ಥೆಯ ಪ್ಲೇಸ್ಟೋರ್ ವಿಷಯ ವಿಶ್ವಾಸಾರ್ಹತೆಗೆ ಸಂಬಂಧಿಸಿದಂತೆ ತನಿಖೆ ನಡೆಸಬೇಕಾಗಿರುವ ಪ್ರತ್ಯೇಕ ವಿಷಯವೇ ಆಗಿದೆ ಎಂದು ತಿಳಿದುಬಂದಿದೆ.


  Do you know why tech giants are in danger
  ಸಾಂಕೇತಿಕ ಚಿತ್ರ


  ತನಿಖೆ ನಡೆಸಲಾಗುತ್ತಿರುವುದೇಕೆ?


  ಸಿಎಂಎ ಪ್ರಸ್ತುತ ಜಗತ್ತಿನ ಸ್ಪರ್ಧಾತ್ಮಕತೆಗೆ ಸಂಬಂಧಿಸಿದಂತೆ ಕಳೆದ ವರ್ಷವಷ್ಟೇ ಸಮಗ್ರ ಸಮೀಕ್ಷೆಯೊಂದನ್ನು ನಡೆಸಿದ್ದು ಅದರ ಫಲಿತಾಂಶ ಈ ವರ್ಷವಷ್ಟೇ ಲಭಿಸಿದೆ. ಇನ್ನು ಆ ಫಲಿತಾಂಶದಲ್ಲಿ ಸ್ಪರ್ಧಾತ್ಮಕತೆಗೆ ಸಂಬಂಧಿಸಿದಂತೆ ಕಳವಳ ವ್ಯಕ್ತವಾಗಿದ್ದು ಹಲವಾರು ನಿಯಂತ್ರಕ ಸಂಸ್ಥೆಗಳು ಹೇಳಿರುವಂತೆ ಆ್ಯಪಲ್ ಹಾಗೂ ಗೂಗಲ್ ಸಂಸ್ಥೆಗಳು ತಮ್ಮ ಮೊಬೈಲ್ ಬ್ರೌಸರ್ ಗಳ ದ್ವಿಸಾಮ್ಯತೆಯನ್ನು ಹೊಂದುವ ಮೂಲಕ ಆಪ ಸ್ಟೋರ್, ವೆಬ್ ಬ್ರೌಸರ್ ಹಾಗೂ ಮೊಬೈಲ್ ಸಾಧನಗಳಲ್ಲಿ ತಮ್ಮದೆ ಆದ ಹಿಡಿತವನ್ನು ಸಾಧಿಸಿದ್ದಾರೆಂದು ಆಕ್ರೋಶ ವ್ಯಕ್ತವಾಗಿದೆ.


  ಪ್ರಸ್ತುತ ಇದೇ ಸಮಯದಲ್ಲಿ ಸಿಎಂಎ ಎರಡು ಆಯಾಮಗಳಲ್ಲಿ ಮಾರ್ಕೆಟ್ ಇನ್ವೆಸ್ಟಿಗೇಷನ್ ರೆಫರನ್ಸ್ ಅನ್ನು ಪ್ರಸ್ತಾಪಿಸಿದ್ದು ಮೊದಲನೆಯದ್ದು ಮೊಬೈಲ್ ಬ್ರೌಸರ್ ಗಳ ಮೇಲೆ ಆಪಲ್ ಹಾಗೂ ಗೂಗಲ್ ಸಂಸ್ಥೆಗಳ ಪ್ರಭಾವವನ್ನು ಗಮನಿಸಿದರೆ ಎರಡನೆಯದ್ದು ಆ್ಯಪಲ್ ತನ್ನ ಸ್ಟೋರ್ ಮೂಲಕ ಕ್ಲೌಡ್ ಗೇಮಿಂಗ್ ಮೇಲೆ ನಿರ್ಬಂಧಗಳನ್ನು ಹೇರುತ್ತಿದೆಯೇ ಎಂಬುದನ್ನು ತನಿಖೆ ನಡೆಸುವ ಅಂಶವನ್ನು ಒಳಗೊಂಡಿದೆ.


  ಈ ಕ್ರಮ, ಸಿಎಂಎ ದಿಂದ ಹೊರಬರುತ್ತಿದ್ದಂತೆಯೇ ಮಾರುಕಟ್ಟೆಯಲ್ಲಿ ಬಿಸಿಯಾದ ವಾತಾವರಣ ಉಂಟಾಗಿದ್ದು ಈ ಒಟ್ಟಾರೆ ಪ್ರಕ್ರಿಯೆಗಳ ಬಗ್ಗೆ ಹಲವು ನಿಯಂತ್ರಕ ಸಂಸ್ಥೆಗಳ ಅಭಿಪ್ರಾಯವನ್ನು ಕೇಳಲಾಗಿದ್ದು ಅಂತಿಮವಾಗಿ ಆಳವಾದ ತನಿಖೆ ನಡೆಸುವ ಫೇಸ್ ಎರಡರ ತನಿಖೆಗೆ ಚಾಲನೆಗೆ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ. ಈ ತನಿಖೆ ಸಂಪೂರ್ಣಗೊಳ್ಳಲು 18 ತಿಂಗಳುಗಳವರೆಗೆ ಕಾಯಬೇಕಾಗಿರುತ್ತದೆ.


  ಹೇಗಿರುತ್ತದೆ ತನಿಖೆ


  ಈ ಬಗ್ಗೆ ಸಿಎಂಎ ಹೇಳಿಕೆಯನ್ನು ನೀಡಿದ್ದು ಅದು ಈ ಪ್ರಕ್ರಿಯೆಯಲ್ಲಿ ಮೊದಲಿಗೆ ಸ್ಟೋರ್ ಹಾಗೂ ಉಪಕರಣಗಳ ಮೂಲಕ ಮೊಬೈಲ್ ಬ್ರೌಸರ್ ಗಳ ಸರಬರಾಜು/ವಿತರಣೆ ಹಾಗೂ ಬ್ರೌಸರ್ ಎಂಜಿನ್ ಗಳ ಕುರಿತು ವಿಶ್ಲೇಷಣೆ ಮತ್ತು ಕ್ಲೌಡ್ ಗೇಮಿಂಗ್ ಸೇವೆಗಳ ವಿತರಣೆ ಯಾವ ರೀತಿಯಿದೆ ಎಂಬುದರ ಮೇಲೆ ಗಮನಹರಿಸಲಿದೆ.


  ಈ ಸಂದರ್ಭದಲ್ಲಿ ಸಂಸ್ಥೆಯ ಪಿಆರ್ ಮೂಲಗಳು ತಿಳಿಸಿರುವಂತೆ ಬಹುತೇಕ ಜನರು ನಿತ್ಯ ವೆಬ್ ಕಂಟೆಂಟ್ ನೋಡಲು ಮೊಬೈಲ್ ಬ್ರೌಸರ್ ಬಳಸುತ್ತಾರೆಂದಿದ್ದು, ಕಳೆದ ವರ್ಷ ಯುಕೆನಲ್ಲಿ 97% ರಷ್ಟು ಜನ ತಾವು ನೋಡಿದ ಕಂಟೆಂಟ್​ಗಾಗಿ ಬಳಸಿರುವ ಬ್ರೌಸರ್​ಗಳು, ಗೂಗಲ್ ಹಾಗೂ ಆ್ಯಪಲ್ ಸಂಸ್ಥೆಗಳಿಂದಲೇ ಹೆಚ್ಚು ಬೆಂಬಲಿತವಾಗಿರುವುದು ಕಂಡುಬಂದಿದೆ ಎಂದು ಹೇಳಿದೆ.


  ಇನ್ನು ಆ್ಯಪಲ್ ಸಂಸ್ಥೆಯ ಕ್ಲೌಡ್ ಗೇಮಿಂಗ್ ಕ್ಷೇತ್ರದಲ್ಲಿ ಹಸ್ತಕ್ಷೇಪಗಳು, ಯುಕೆಯಲ್ಲಿ ಬೆಳೆಯುತ್ತಿರುವ ಈ ಕ್ಷೇತ್ರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದಲ್ಲದೆ ಗೇಮರ್ಸ್ ಗಳು ಇದರಿಂದ ಬೇಸರಗೊಳ್ಳಬಹುದಾಗಿ ನಿಯಂತ್ರಕ ಸಂಸ್ಥೆಗಳು ಕಳವಳ ವ್ಯಕ್ತಪಡಿಸಿವೆ.


  ಗೂಗಲ್ ಮತ್ತು ಆಪಲ್ ಸಂಸ್ಥೆಗಳ ಹೇಳಿಕಗಳೇನು?


  ಈ ಸಂದರ್ಭದಲ್ಲಿ ಗೂಗಲ್ ಸಂಸ್ಥೆಯು ತನ್ನ ಆಂಡ್ರಾಯ್ಡ್ ವೇದಿಕೆಯು ಜಗತ್ತಿನಲ್ಲಿರುವ ಇತರೆ ವೇದಿಕೆಗಳಿಗಿಂತ ಹೆಚ್ಚು ಪ್ರಮಾಣದಲ್ಲಿ ಆಪ್​ಗಳ ಆಯ್ಕೆ ಹಾಗೂ ಪ್ಲೇಸ್ಟೊರ್​ಗಳ ಆಯ್ಕೆಗಳನ್ನು ಬಳಕೆದಾರರಿಗೆ ನೀಡಿರುವುದಾಗಿ ಹೇಳಿದೆ. "ಇದು ಡೆವೆಲಪರ್ಸ್​ಗಳಿಗೆ ತಮ್ಮದೆ ಆದ ಇಚ್ಛೆಯ ಬ್ರೌಸರ್ ಎಂಜಿನ್ ಹೊಂದುವಂತಹ ಆಯ್ಕೆ ನೀಡಿದ್ದು ಆ ಮೂಲಕ ಮಿಲಿಯ್​ಗಟ್ಟಲೆ ಆಪ್​ಗಳ ಅಭಿವೃದ್ಧಿಗೆ ಇದು ಬುನಾದಿಯಾಗಿದೆ" ಎಂದು ಸಂಸ್ಥೆಯ ವಕ್ತಾರರು ಪ್ರತಿಕ್ರಯಿಸಿದ್ದಾರೆ.


  ಇನ್ನು ಆ್ಯಪಲ್ ಸಂಸ್ಥೆಯು ಈ ಒಟ್ಟಾರೆ ವಿದ್ಯಮಾನದ ಕುರಿತು, ಅದು ಸಿಎಂಎ ಜೊತೆಗೆ "ರಚನಾತ್ಮಕವಾಗಿ" ಒಳಗೊಳ್ಳಲಿದ್ದು ಗ್ರಾಹಕರ ಬಳಿ ತನ್ನ ಅಪ್ರೋಚ್ ಹಾಗೂ ಪ್ರಚಾರ ಒಳಗೊಂಡಂತೆ ಅವರ ಖಾಸಗೀತನ, ಗೌಪ್ಯತೆಯನ್ನು ಹೇಗೆಲ್ಲ ಸಂರಕ್ಷಿಸಲಾಗುತ್ತಿದೆ ಎಂಬುದಾಗಿ ವಿವರಿಸಲಿದೆ ಎಂದು ತಿಳಿಸಿದೆ.


  ಬಿಗ್ ಟೆಕ್ ಕಂಪನಿಗಳೆಂದರೇನು? ಅವು ಏಕೆ ಸಮಸ್ಯೆ ಎದುರಿಸುತ್ತಿವೆ


  ಸಾಮಾನ್ಯವಾಗಿ ಒಂದು ನಿರ್ದಿಷ್ಟ ತಂತ್ರಜ್ಞಾನ ಕ್ಷೇತ್ರದಲ್ಲಿ ಅತಿ ದೊಡ್ಡ ಹಾಗೂ ಪ್ರಭಾವಶಾಲಿಯಾಗಿರುವ ತಾಂತ್ರಿಕ ಸಂಸ್ಥೆಗಳನ್ನು ಬಿಗ್ ಟೆಕ್ ಕಂಪನಿಗಳೆಂದು ಹೇಳಲಾಗುತ್ತದೆ ಎಂದಿರುವ ಟೆಕ್ ಟಾರ್ಗೆಟ್ ಎಂಬ ಸಂಸ್ಥೆಯ ವರದಿಯು ಅಂತಹ ಸಂಸ್ಥೆಗಳ ಉತ್ಪನ್ನಗಳು ಹಾಗೂ ಸೇವೆಗಳನ್ನು ಪ್ರಪಂಚದಾದ್ಯಂತ ಮಿಲಿಯನ್ ಗಟ್ಟಲೇ ಫಲಾನುಭವಿಗಳು ಬಳಸುತ್ತಾರೆ ಎಂದಾಗಿದೆ.


  ಹಾಗಾಗಿ ಆ ಕ್ಷೇತ್ರದಲ್ಲಿ ಅವರ ಪ್ರಾಬಲ್ಯ ಮತ್ತು ಪ್ರಭಾವ ಹೆಚ್ಚಿನ ಮಟ್ಟದಲ್ಲಿದ್ದು ಅವರು ತಮಗೆ ಬೇಕಾದಂತೆ ಕೆಲವು ನಿರ್ಬಂಧಗಳನ್ನೂ ಸಹ ಹೇರಲು ಸಮರ್ಥರಾಗಿರುತ್ತಾರೆ ಎಂದಾಗಿದೆ.


  ಆದರೆ, ಇತ್ತೀಚಿನ ಕೆಲ ಸಮಯದಿಂದ ಅಂತಹ ಕಂಪನಿಗಳು ತೀವ್ರತರವಾದ ಆಕ್ರೋಶ ಎದುರಿಸುತ್ತಿದ್ದು ಅವುಗಳನ್ನು ಹತೋಟಿಯಲ್ಲಿಡಲು ಅನುಕೂಲವಾಗುವಂತಹ ಕೆಲವು ನಿಯಮಗಳ ಸೃಷ್ಟಿಗೆ ಬೇಡಿಕೆ ಹೆಚ್ಚಾಗುತ್ತಿದೆ.


  ವಿಶ್ವಾಸಾರ್ಹತೆ, ವಾಣಿಜ್ಯ ಹಾಗೂ ಆಡಳಿತ ವಲಯಗಳಿಗೆ ಸಂಬಂಧಿಸಿದಂತೆ ಜನವರಿ 2020 ರಲ್ಲಿ ಅಮೆರಿಕದ ನ್ಯಾಯ ಪ್ರಾಧಿಕಾರದ ಉಪಸಮಿತಿಯು ಬಿಗ್ ಟೆಕ್ ಕಂಪನಿಗಳ ವಿರುದ್ಧ ತನಿಖೆಯ ಆದೇಶವನ್ನು ಹೊರಡಿಸಿದೆ.


  ಜನವರಿ 2021 ರಲ್ಲಿ ಇದೇ ಉಪಸಮಿತಿಯು ವರದಿಯೊಂದನ್ನು ನೀಡಿದ್ದು ಅದರಲ್ಲಿ ಅದು ಆ್ಯಪಲ್, ಅಮೆಜಾನ್, ಫೇಸ್ ಬುಕ್ ಮತ್ತು ಗೂಗಲ್ ಸಂಸ್ಥೆಗಳು ವಿಶ್ವಾಸಾರ್ಹತೆಯ ನಿಯಮಗಳನ್ನು ಉಲ್ಲಂಘಿಸಿರುವುದಾಗಿ ಹೇಳಿದೆ.


  ಇದನ್ನೂ ಓದಿ: ಕೆಜಿಎಫ್ ಅನ್ನೇ ಮೀರಿಸುವಷ್ಟು ಚಿನ್ನ ಇಲ್ಲಿದ್ಯಂತೆ! ಈ ಅಣೆಕಟ್ಟಿನೊಳಗೇ ಹುದುಗಿದೆಯಾ ಸಂಪತ್ತು?


  ಈ ನಡುವೆ ಐರೋಪ್ಯ ಒಕ್ಕೂಟವು ಸಹ ಬಿಗ್ ಟೆಕ್ ಕಂಪನಿಗಳ ವಿರುದ್ಧ ತನ್ನ ಅಸಮಾಧಾನ ಹೊರಹಾಕಿದೆ. ಅದು ಈ ಸಂಸ್ಥೆಗಳು ಯಾವುದೇ ಶುಲ್ಕ ಪಾವತಿಸದೆ ಬಿಲಿಯನ್ ಮೌಲ್ಯದ ಸುದ್ದಿಗಳನ್ನು ಪ್ರಕಾಶಿಸಲು ಕಾರಣವಾಗಿದ್ದು ತೆರಿಗೆಗಳನ್ನು ಸಹ ತಪ್ಪಿಸಿಕೊಂಡಿವೆ ಮತ್ತು ತಪ್ಪು ಸುದ್ದಿಗಳನ್ನೂ ಸಹ ಬಿತ್ತರಿಸಲು ಕಾರಣವಾಗಿವೆ ಎಂದಿದೆ.


  ಹೀಗೆ ಜಗತ್ತಿನಾದ್ಯಂತ ದೊಡ್ಡ ಸಂಸ್ಥೆಗಳೆಂಬ ಹಣೆಪಟ್ಟ ಹೊತ್ತಂತಹ ಆ್ಯಪಲ್ ಹಾಗೂ ಗೂಗಲ್ ಸಂಸ್ಥೆಗಳು ಈ ಮಾಹಿತಿ ತಂತ್ರಜ್ಞಾನ ಕ್ಷೇತ್ರ ಸೇರಿದಂತೆ ಬ್ರೌಸಿಂಗ್ ಮತ್ತುಕಂಟೆಂಟ್ ಅವಿಷಯದಲ್ಲಿ ತಮ್ಮದೆ ಆದ ಅಧಿಪತ್ಯವನ್ನು ಹೊಂದುತ್ತಿವೆ ಎಂಬುದೇ ಈಗ ಭುಗಿಲೆದ್ದಿರುವ ಆಕ್ರೋಶಕ್ಕೆ ಕಾರಣವಾಗಿದೆ.


  ಆದಾಗ್ಯೂ ಈ ಟೆಕ್ ಕಂಪನಿಗಳು ಸಾಕಷ್ಟು ಹಿಡಿತವನ್ನು ಹೊಂದಿದ್ದು ಮುಂದೆ ಅವು ಯಾವ ರೀತಿ ವರ್ತಿಸಲಿವೆ ಹಾಗೂ ಏನೆಲ್ಲ ಉಪಕ್ರಮಗಳನ್ನು ಅವು ತೆಗೆದುಕೊಳ್ಳಬಹುದು ಎಂಬುದನ್ನು ಜನರು ಕಾದು ನೋಡುತ್ತಿದ್ದಾರೆನ್ನಬಹುದು.


  ಈಗ ಬಿಸಿಬಿಸಿಯಾದ ವಿರೋಧವನ್ನು ಎದುರಿಸುತ್ತಿವೆ ಎನ್ನುವುದು ಸತ್ಯನಾ?


  ಒಟ್ಟಿನಲ್ಲಿ ಈ ಸ್ಪರ್ಧಾತ್ಮಕತೆ ಎಂಬುದು ಪ್ರತಿಯೊಬ್ಬರನ್ನೂ ಅವರವರ ಸಾಮರ್ಥ್ಯ ಹೊರ ಹಾಕುವಂತೆ ಉತ್ತೇಜಿಸುವ ಕ್ರಿಯೆ ಆಗಬೇಕೆ ಹೊರತು ಒಂದಿಬ್ಬರು ತಮ್ಮದೆ ಸ್ವಾಮ್ಯತೆಯನ್ನು ಸಾಧಿಸಿ ಯಾರಿಗೂ ಅವರ ಕ್ಷಮತೆ ತೋರಿಸದಂತೆ ಅಡ್ಡಗಾಲು ಹಾಕುವಂತಹ ಲಕ್ಷಣಗಳನ್ನು ಹೊಂದಿರಬಾರದು ಎಂಬುದು ಸಾಮಾನ್ಯ ಜನರ ಅಭಿಪ್ರಾಯ. ಹಾಗಾಗಿ ಈ ನಿಟ್ಟಿನಲ್ಲಿ ಈ ದೈತ್ಯ ತಾಂತ್ರಿಕ ಸಂಸ್ಥೆಗಳು ಈಗ ಬಿಸಿಬಿಸಿಯಾದ ವಿರೋಧವನ್ನು ಎದುರಿಸುತ್ತಿವೆ ಎನ್ನುವುದು ಸುಳ್ಳಲ್ಲ.


  ಸದ್ಯ ಈಗ ಯುಕೆ ತನಿಖೆ ಚಾಲ್ತಿ ಸಿಗಲಿದ್ದು ಅದು ಹೇಗೆ ಸಾಗುತ್ತದೆ ಎಂಬುದನ್ನು ಗಮನಿಸಬೇಕು ಹಾಗೂ ಮುಂದಿನ ಸಮಯದಲ್ಲಿ ಏನೆಲ್ಲ ಅಂಶಗಳನ್ನು ಆ ತನಿಖೆ ಹೊರ ಹಾಕಲಿದೆ ಮತ್ತು ಅದರಿಂದ ಈ ದೈತ್ಯ ಕಂಪನಿಗಳಿಗೆ ಭವಿಷ್ಯದಲ್ಲಿ ಏನಾದರೂ ದೊಡ್ಡ ಆಘಾತವಾಗಲಿದೆಯೇ ಎಂಬುದನ್ನೂ ಸಹ ಕಾದು ನೋಡಬೇಕಷ್ಟೆ.

  Published by:Gowtham K
  First published: