Anti-Terrorism Day: ಭಾರತಕ್ಕೆ ಮರೆಯಲಾಗದ ಗಾಯ ಮಾಡಿದ ಭಯೋತ್ಪಾದನೆ! Anti-Terrorism Day ನೆಪದಲ್ಲಿ ಹೀಗೊಂದು ಸ್ಮರಣೆ

ಸರ್ಕಾರವು ಭಯೋತ್ಪಾದನೆ ವಿರುದ್ಧ ಹೋರಾಡುವ ಅಗತ್ಯತೆಯ ಬಗ್ಗೆ ಜಾಗೃತಿ ಮೂಡಿಸುವಂತಹ ಕಾರ್ಯಕ್ರಮಗಳನ್ನು ಆಯೋಜಿಸುತ್ತದೆ, ಚರ್ಚಾಗೋಷ್ಠಿಗಳು ನಡೆಯುತ್ತವೆ ಹಾಗೂ ಯುವಕರನ್ನು ಈ ಭಯೋತ್ಪಾದನೆಯಿಂದ ದೂರವಿರುವಂತೆ ಅವರಲ್ಲಿ ಅರಿವು ಮೂಡಿಸುವ ಪ್ರಯತ್ನಗಳನ್ನು ಮಾಡಲಾಗುತ್ತದೆ.

ಭಯೋತ್ಪಾದನಾ ವಿರೋಧಿ ದಿನ

ಭಯೋತ್ಪಾದನಾ ವಿರೋಧಿ ದಿನ

  • Share this:
ಸದ್ಯ ಜಗತ್ತು (World) ಸಾಕಷ್ಟು ಮುಂದುವರೆಯುತ್ತಿದೆ. ಹಿಂದೆ ಗುಹೆಗಳಲ್ಲಿ ವಾಸಿಸುತ್ತಿದ್ದ ಮನುಷ್ಯ (Man) ಇಂದು ದೊಡ್ಡ ದೊಡ್ಡ ಆಧುನಿಕ (Modern) ಕಟ್ಟಡಗಳನ್ನು ನಿರ್ಮಿಸುವಲ್ಲಿ ಸಫಲನಾಗಿದ್ದಾನೆ. ಲಕ್ಷಾಂತರ ವರ್ಷಗಳ ಹಿಂದೆ ಇದ್ದ ಭೂಮಿಯ ಮೇಲಿನ ಸ್ವರೂಪ (Format) ಇಂದು ಬದಲಾಗಿದೆ. ಭೂಮಿಯಲ್ಲಿರುವ (Earth) ಪ್ರತಿ ಜೀವಿಗಳಲ್ಲೂ ಸರ್ವಶ್ರೇಷ್ಠನಾಗಿರುವ ಮನುಷ್ಯ ತನ್ನ ಎಲ್ಲರಿಗಿಂತಲೂ ವಿಕಸನಗೊಂಡ ಬುದ್ಧಿಮತ್ತೆ, ಮಾತನಾಡುವ ಶಕ್ತಿ, ಆಲೋಚಿಸಬಲ್ಲ ಮೆದುಳು ಮುಂತಾದವುಗಳಿಂದಾಗಿ ಮಿಕ್ಕೆಲ್ಲ ಜೀವಿಗಳಿಗಿಂತಲೂ ಊಹಿಸಲಾಗದಷ್ಟು ಮುಂದೆ ಸಾಗಿದ್ದಾನೆ. ಈ ಜಗತ್ತು ಮೊದ ಮೊದಲು ಅಭಿವೃದ್ಧಿಯತ್ತ ಸಾಗಿದಾಗ ಪ್ರತಿ ಮನುಜ ಯಾವುದೇ ತಾರತಮ್ಯಗಳಿಲ್ಲದೆ, ಭೇದ-ಭಾವಗಳಿಲ್ಲದೆ ಒಟ್ಟಾಗಿ ಸಂಘಟಿತನಾಗಿ ಕ್ರಾಂತಿಯತ್ತ ಸಾಗಿದ.

ಈಗ ಎಲ್ಲವೂ ಒಲಿದ ಮೇಲೆ ಮನುಷ್ಯ ಕುಲದಲ್ಲಿ ಜಾತಿ-ಧರ್ಮಗಳೆಂಬ ಅಂಧಕಾರ ವ್ಯಾಪಿಸಿದ್ದು ಎಷ್ಟೋ ಜನರು ತಮ್ಮ ತಮ್ಮ ಸ್ವಾರ್ಥ ಹಾಗೂ ಮೌಢ್ಯಗಳ ಸೋಗಿನಲ್ಲಿ ಇತರೆ ಜನರ ವಿರುದ್ಧ ಹಿಂಸೆಗಳಲ್ಲಿ ತೊಡಗಿದ್ದು ಮಾನವಕುಲವೇ ತಮ್ಮ ವಿಧ್ವಂಸಕ ಕೃತ್ಯಗಳಿಂದ ಭಯಭೀತರಾಗುವಂತೆ ಮಾಡಿದ್ದಾರೆ. ಇಂತಹ ಜನರೇ ಇಂದು ಮನುಷ್ಯತ್ವದ ವಿರೋಧಿಗಳಾಗಿದ್ದು ಭಯೋತ್ಪಾದಕರಾಗಿ ಜಗತ್ತಿನ ಶಾಂತಿ-ನೆಮ್ಮದಿಗಳಿಗೆ ಧಕ್ಕೆ ನೀಡುತ್ತಿದ್ದಾರೆ.

ಭಯೋತ್ಪಾದನಾ ವಿರೋಧಿ ದಿನ
ವಿಶ್ವಾದ್ಯಂತ ಸಾಮರಸ್ಯದ ಭಾವನೆ ಹರಡಿ ಪ್ರತಿಯೊಬ್ಬರೂ ಯಾವುದೇ ಚಿಂತೆ ಭಯಗಳಿಲ್ಲದೆ ನೆಮ್ಮದಿಯ ಜೀವನ ಸಾಗಿಸಬೇಕೆಂದರೆ ಇಂತಹ ಭಯೋತ್ಪಾದಕರನ್ನು ನಿಗ್ರಹಿಸುವ ಅವಶ್ಯಕತೆಯಿದೆ. ನಾವೆಲ್ಲರೂ ಸೇರಿ ಒಟ್ಟಾಗಿ ಹೋರಾಡಿದಾಗ ಮಾತ್ರ ಈ ಭಯೋತ್ಪಾದನೆಗೆ ತಿಲಾಂಜಲಿ ಇಡಬಹುದು. ಈ ಭಯೋತ್ಪಾದನೆ ಅಥವಾ ಭಯೋತ್ಪಾದಕರು ಯಾವ ದೇಶಕ್ಕೂ ಸ್ವಂತವಾಗಿರಲಾರರು.

ಇದನ್ನೂ ಓದಿ:   China: ಪಾಂಗಾಂಗ್ ನದಿಗೆ 2ನೇ ಸೇತುವೆ ಕಟ್ಟುತ್ತಿದೆ ಚೀನಾ, ಶಸ್ತ್ರಸಜ್ಜಿತ ಭಾರೀ ವಾಹನ ಸಂಚರಿಸಬಲ್ಲ ಸೇತುವೆ ಕಟ್ಟುತ್ತಿರೋದ್ಯಾಕೆ?

ಭಯೋತ್ಪಾದನೆ ಕೃತ್ಯಗಳಿಂದ ಈಗಾಗಲೇ ಜಗತ್ತಿನ ಬಹುತೇಕ ಎಲ್ಲ ದೇಶಗಳು ನಲುಗಿ ಹೋಗಿವೆ. ಈ ದೇಶಗಳಲ್ಲಿ ಭಾರತವೂ ಸಹ ಒಂದು ಎಂಬುದರಲ್ಲಿ ಬೇರೆ ಹೇಳಬೇಕಾಗಿಲ್ಲ. ಭಾರತ ಮೊದಲಿನಿಂದಲೂ ತನ್ನ ಮಡಿಲಲ್ಲಿ ಭಯೋತ್ಪಾದನೆಯ ಹಾಗೂ ಭಯೋತ್ಪಾದಕರ ಅನೇಕ ಕೃತ್ಯಗಳನ್ನು ನೋಡಿದೆ. ಭಯೋತ್ಪಾದನೆಯಿಂದಾಗಿಯೇ ಭಾರತ ತನ್ನ ಧೀಮಂತ ಪ್ರಧಾನಿಗಳನ್ನು ಕಳೆದುಕೊಂಡಿರುವುದನ್ನು ಯಾರೂ ಮರೆಯಲು ಸಾಧ್ಯವಿಲ್ಲ.

ಭಾರತದ ಪಾಲಿಗೆ ಮರೆಯಲಾಗದ ದಿನ
ಇಂದಿಗೂ ಆ ಭಯೋತ್ಪಾದನೆಯ ಕುಕೃತ್ಯವು ಭಾರತದ ಪಾಲಿಗೆ ಮರೆಯಲಾಗದ ದಿನವಾಗಿದ್ದು ಭಾರತವು ಪ್ರತಿ ವರ್ಷ ಮೇ 21 ರಂದು ರಾಷ್ಟ್ರೀಯ ಭಯೋತ್ಪಾದನಾ ವಿರೋಧಿ ದಿನವನ್ನು ಆಚರಿಸುತ್ತ ಬಂದಿದೆ. ಹಲವಾರು ವರ್ಷಗಳಿಂದ ಭಯೋತ್ಪಾದಕ ದಾಳಿಗೆ ಬಲಿಯಾಗಿರುವುದರಿಂದ ಈ ದಿನವು ರಾಷ್ಟ್ರಕ್ಕೆ ಅತ್ಯಂತ ಮಹತ್ವದ್ದಾಗಿದೆ.

ಪಾಕಿಸ್ತಾನದಿಂದ ತರಬೇತಿ ಪಡೆದ ಭಯೋತ್ಪಾದಕರೇ ಇರಬಹುದು ಅಥವಾ ಲಿಬರೇಶನ್ ಟೈಗರ್ಸ್ ಆಫ್ ತಮಿಳ್ ಈಳಂ (ಎಲ್‌ಟಿಟಿಇ) ಉಗ್ರಗಾಮಿಗಳಾಗಿರಬಹುದು, ಎಲ್ಲ ಭಯೋತ್ಪಾದಕ ಕೃತ್ಯಗಳಿಂದ ಭಾರತದ ಶ್ರೀಸಾಮಾನ್ಯ ನಷ್ಟ ಅನುಭವಿಸಿದ್ದಾನೆ, ತಮ್ಮವರನ್ನು ಕಳೆದುಕೊಂಡಿದ್ದಾನೆ. ಭಾರತದಾದ್ಯಂತ ಹಲವಾರು ಮೆಟ್ರೋ ಮತ್ತು ಟೈರ್-II ನಗರಗಳಲ್ಲಿ ನಡೆದ ವಿವಿಧ ಸ್ಫೋಟಗಳಲ್ಲಿ ಅನೇಕ ಜನರು ಸಾವನ್ನಪ್ಪಿದ್ದಾರೆ. ಕಳೆದ ಕೆಲವು ದಶಕಗಳಲ್ಲಿ ಭಯೋತ್ಪಾದಕ ದಾಳಿಗಳು ಹೆಚ್ಚಾಗಿರುವುದನ್ನೂ ಸಹ ನಾವು ಗಮನಿಸಬಹುದು.

ಇತಿಹಾಸ
ಆದರೆ ನಾವು ಈ ದಿನವನ್ನೇ ಅಂದರೆ ಮೇ 21 ದಿನವನ್ನೇ ಏಕೆ ಭಯೋತ್ಪಾದನಾ ವಿರೋಧಿ ದಿನ ಎಂದು ಆಚರಿಸುತ್ತೇವೆ? ಇದಕ್ಕೆ ಉತ್ತರವೆಂದರೆ ಇದೇ ದಿನ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರನ್ನು 1991 ರಲ್ಲಿ ಭಯೋತ್ಪಾದಕ ದಾಳಿಯಲ್ಲಿ ಹತ್ಯೆ ಮಾಡಲಾಗಿತ್ತು. ಇದು ಜಗತ್ತನ್ನೇ ಬೆಚ್ಚಿಬೀಳಿಸಿದಂತಹ ಪ್ರಸಂಗವಾಗಿತ್ತು.

ಇದನ್ನೂ ಓದಿ: Explained: ವಿದ್ಯಾರ್ಥಿಗಳೇ, ಕಾಲೇಜುಗಳಿಗೆ ಅಪ್ಲೈ ಮಾಡುವ ನಿಮ್ಮ ಅರ್ಜಿ ಹೇಗಿರಬೇಕು? ಈಗಲೇ ತಿಳಿಯಿರಿ

ತಮಿಳುನಾಡಿನ ಶ್ರೀಪೆರಂಬದೂರಿನಲ್ಲಿ ಚುನಾವಣಾ ರ್‍ಯಾಲಿಯೊಂದರಲ್ಲಿ ಭಾಗವಹಿಸಿದ್ದ ಅಂದಿನ ಭಾರತದ ಪ್ರಧಾನಿ ರಾಜೀವ್ ಗಾಂಧಿ ಅವರನ್ನು ಎಲ್‌ಟಿಟಿಇಯ ಆತ್ಮಹತ್ಯಾ ಬಾಂಬರ್‌ ಒಬ್ಬ ತನ್ನನ್ನು ತಾನೇ ಸ್ಫೋಟಿಸಿಕೊಂಡು ಅವರ ಸಾವಿಗೆ ಕಾರಣನಾಗಿದ್ದ. ಇದು ನಿಜಕ್ಕೂ ಆಘಾತಕಾರಿ ಘಟನೆಯಾಗಿತ್ತು. ಈ ದಿನದ ಸ್ಮರನಾರ್ಥವಾಗಿಯೇ ಭಯೋತ್ಪಾದನಾ ವಿರೋಧಿ ದಿನವನ್ನು ಆಚರಿಸುತ್ತ ಬರಲಾಗಿದೆ.

ಈ ದಿನದ ಮಹತ್ವ
ಈ ದಿನದಂದು, ಸರ್ಕಾರವು ಭಯೋತ್ಪಾದನೆ ವಿರುದ್ಧ ಹೋರಾಡುವ ಅಗತ್ಯತೆಯ ಬಗ್ಗೆ ಜಾಗೃತಿ ಮೂಡಿಸುವಂತಹ ಕಾರ್ಯಕ್ರಮಗಳನ್ನು ಆಯೋಜಿಸುತ್ತದೆ, ಚರ್ಚಾಗೋಷ್ಠಿಗಳು ನಡೆಯುತ್ತವೆ ಹಾಗೂ ಯುವಕರನ್ನು ಈ ಭಯೋತ್ಪಾದನೆಯಿಂದ ದೂರವಿರುವಂತೆ ಅವರಲ್ಲಿ ಅರಿವು ಮೂಡಿಸುವ ಪ್ರಯತ್ನಗಳನ್ನು ಮಾಡಲಾಗುತ್ತದೆ. ಇದಕ್ಕಾಗಿ, ಇದು ಜನರ ನೋವುಗಳನ್ನು ಎತ್ತಿ ತೋರಿಸುತ್ತದೆ ಮತ್ತು ಇದು ರಾಷ್ಟ್ರೀಯ ಭದ್ರತೆ ಮತ್ತು ಶಾಂತಿಗೆ ಹೇಗೆ ನೇರ ಬೆದರಿಕೆಯಾಗಿದೆ ಎಂಬುದನ್ನು ತೋರಿಸುತ್ತದೆ.

ಆಚರಣೆ
ಭಯೋತ್ಪಾದನೆ-ವಿರೋಧಿ ಸಂದೇಶವನ್ನು ವಿವಿಧ ಬಗೆಗಳಲ್ಲಿ, ನವೀನ ರೀತಿಯಲ್ಲಿ ಹರಡುವ ಮೂಲಕ ಇದರ ಬಗ್ಗೆ ಎಲ್ಲರ ಗಮನಸೆಳೆದು ಆಚರಿಸಲಾಗುತ್ತದೆ. ವಿವಿಧ ಭಯೋತ್ಪಾದಕ ದಾಳಿಯ ಬಲಿಪಶುಗಳನ್ನು ನೆನಪಿಸಿಕೊಳ್ಳಲು ಇದು ಸೂಕ್ತ ಸಮಯವಾಗಿದೆ. ಭಯೋತ್ಪಾದನಾ ಚಟುವಟಿಕೆಗಳನ್ನು ತಡೆಯಲು ಕಟ್ಟುನಿಟ್ಟಿನ ನಿಗಾ ಇಡುವುದು ಸಹ ಅತ್ಯಗತ್ಯ.
Published by:Ashwini Prabhu
First published: