• ಹೋಂ
 • »
 • ನ್ಯೂಸ್
 • »
 • Explained
 • »
 • Youtube CEO: ಯೂಟ್ಯೂಬ್ ಹೊಸ ಸಿಇಒ ನೀಲ್ ಮೋಹನ್ ಯಾರು ಗೊತ್ತೇ? ಇವರ ಬಗ್ಗೆ ಇಲ್ಲಿದೆ ಮಾಹಿತಿ

Youtube CEO: ಯೂಟ್ಯೂಬ್ ಹೊಸ ಸಿಇಒ ನೀಲ್ ಮೋಹನ್ ಯಾರು ಗೊತ್ತೇ? ಇವರ ಬಗ್ಗೆ ಇಲ್ಲಿದೆ ಮಾಹಿತಿ

ಯೂಟ್ಯೂಬ್ ಸಿಇಒ ನೀಲ್ ಮೋಹನ್

ಯೂಟ್ಯೂಬ್ ಸಿಇಒ ನೀಲ್ ಮೋಹನ್

ಭಾರತೀಯ ಮೂಲದ ಅಮೆರಿಕನ್ ಬ್ಯುಸಿನೆಸ್​ ಎಕ್ಸಿಕ್ಯೂಟಿವ್ ನೀಲ್ ಮೋಹನ್ ಅವರು ಆಲ್ಫಾಬೆಟ್ ನ ಸುಸಾನ್ ವೊಜ್ಸಿಕ್ಕಿ ಅವರ ಉತ್ತರಾಧಿಕಾರಿಯಾಗಿ ಯೂಟ್ಯೂಬ್ ನ ಹೊಸ ಸಿಇಒ ಆಗಿ ನೇಮಕಗೊಂಡಿದ್ದಾರೆ.

 • News18 Kannada
 • 4-MIN READ
 • Last Updated :
 • New Delhi, India
 • Share this:

  ಸಾಮಾನ್ಯವಾಗಿ ಈ ಗೂಗಲ್ (Google), ಮೆಟಾ, ಫೇಸ್‌ಬುಕ್ ನಂತಹ ದೊಡ್ಡ ದೊಡ್ಡ ಕಂಪೆನಿಗಳಲ್ಲಿ ಈ ಸಿಇಒಗಳು ಬದಲಾದರೆ ಮತ್ತು ಹೊಸದಾಗಿ ಆ ಸ್ಥಾನಕ್ಕೆ ನೇಮಕ ಗೊಂಡಿರುವವರು ನಮ್ಮ ಭಾರತದವರಾಗಿದ್ದರೆ, ನಮಗೆ ಅವರ ಬಗ್ಗೆ ತಿಳಿದುಕೊಳ್ಳಬೇಕು ಎಂಬ ಕುತೂಹಲ ತುಂಬಾನೇ ಇರುತ್ತದೆ. ಹೀಗೆಯೇ ಇಲ್ಲಿ ಸಹ ಯೂಟ್ಯೂಬ್ ಗೆ ಹೊಸ ಸಿಇಒ ಬಂದಿದ್ದಾರೆ ನೋಡಿ, ಅವರು ನಮ್ಮ ಭಾರತದವರಂತೆ. ಭಾರತೀಯ ಮೂಲದ ಅಮೆರಿಕನ್ ಬ್ಯುಸಿನೆಸ್​ ಎಕ್ಸಿಕ್ಯೂಟಿವ್ ನೀಲ್ ಮೋಹನ್ (Neal Mohan) ಅವರು ಆಲ್ಫಾಬೆಟ್ ನ ಸುಸಾನ್ ವೊಜ್ಸಿಕ್ಕಿ ಅವರ ಉತ್ತರಾಧಿಕಾರಿಯಾಗಿ ಯೂಟ್ಯೂಬ್ ನ ಹೊಸ ಸಿಇಒ (Youtube New CEO) ಆಗಿ ನೇಮಕಗೊಂಡಿದ್ದಾರೆ.


  ಗೂಗಲ್ ಮತ್ತು ಆಲ್ಫಾಬೆಟ್ ಸಿಇಒ ಸುಂದರ್ ಪಿಚೈ, ಮೈಕ್ರೋಸಾಫ್ಟ್ ನ ಸತ್ಯ ನಾಡೆಲ್ಲಾ, ಅಡೋಬ್ ನ ಶಂತನು ನಾರಾಯಣ್ ಮತ್ತು ಐಬಿಎಂನ ಅರವಿಂದ್ ಕೃಷ್ಣ ಅವರಂತಹ ಭಾರತೀಯ ಮೂಲದ ಜಾಗತಿಕ ಟೆಕ್ ಮುಖ್ಯಸ್ಥರ ಪಟ್ಟಿಗೆ ಈಗ ಮೋಹನ್ ಸಹ ಹೊಸದಾಗಿ ಸೇರಲಿದ್ದಾರೆ ಅಂತ ಹೇಳಿದರೆ ತಪ್ಪಾಗುವುದಿಲ್ಲ.


  ಯೂಟ್ಯೂಬ್ ಸಿಇಒ ಆಗುವುದಕ್ಕಿಂತ ಮುಂಚೆ ಏನ್ಮಾಡ್ತೀದ್ರು ಮೋಹನ್?


  ಹೊಸ ಯೂಟ್ಯೂಬ್ ಸಿಇಒ ಈ ಹಿಂದೆ ವೋಜ್ಕಿಕಿ ಅವರ ಅಡಿಯಲ್ಲಿ ಮುಖ್ಯ ಉತ್ಪನ್ನ ಅಧಿಕಾರಿಯಾಗಿ ಕೆಲಸ ಮಾಡಿದ್ದರು. ಅವರು ಈ ಹಿಂದೆ ಜನಪ್ರಿಯ ಲ್ಯೂ ಲೇಟರ್ (ಅನ್ಬಾಕ್ಸ್ ಥೆರಪಿ) ನಂತಹ ವಿವಿಧ ಟಾಕ್ ಶೋಗಳಲ್ಲಿ ಕಂಪನಿಯನ್ನು ಪ್ರತಿನಿಧಿಸಿದ್ದಾರೆ, ಅಲ್ಲಿ ಅವರು ತಮ್ಮ ಆರಂಭಿಕ ಜೀವನ ಮತ್ತು ಭವಿಷ್ಯದ ಯೂಟ್ಯೂಬ್ ನ ಯೋಜನೆಗಳ ಬಗ್ಗೆ ಮಾತನಾಡಿದರು.


  ಇದನ್ನೂ ಓದಿ: ಸೈಬರ್ ಕ್ರೈಮ್ ಎಂದರೇನು? ದೂರು ದಾಲಿಸೋದು ಹೇಗೆ? ಹಣ ಮರಳಿ ಪಡೆಯಲು ಹೀಗೆ ಮಾಡಿ


  ತನ್ನ ವಿದಾಯ ಪತ್ರದಲ್ಲಿ, ವೊಜ್ಸಿಕ್ಕಿ ಹೊಸ ಯೂಟ್ಯೂಬ್ ಸಿಇಒ ಬಗ್ಗೆ ಹೆಚ್ಚು ಮಾತನಾಡಿದರು ಮತ್ತು ಯೂಟ್ಯೂಬ್ ಟಿವಿ, ಯೂಟ್ಯೂಬ್ ಮ್ಯೂಸಿಕ್, ಪ್ರೀಮಿಯಂ ಮತ್ತು ಶಾರ್ಟ್ಸ್ ಸೇರಿದಂತೆ ಕೆಲವು ದೊಡ್ಡ ಯೂಟ್ಯೂಬ್ ಉತ್ಪನ್ನಗಳನ್ನು ಬಿಡುಗಡೆ ಮಾಡುವಲ್ಲಿ ಮೋಹನ್ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಹೇಳಿದರು. ಸ್ಪೀಚ್ ಎಐ ಈಗ ಚರ್ಚೆಯ ವಿಷಯವಾಗಿದ್ದರಿಂದ, ಮೋಹನ್ ಅವರ ಉನ್ನತೀಕರಣದ ನಂತರ ಭವಿಷ್ಯದಲ್ಲಿ ಯೂಟ್ಯೂಬ್ ಮುಂದೆ ಹೇಗೆ ಸಾಗುತ್ತದೆ ಎಂಬುದನ್ನು ನೋಡುವುದು ಅನೇಕರಿಗೆ ಆಸಕ್ತಿದಾಯಕ ವಿಷಯವಾಗಿದೆ ಅಂತ ಹೇಳಬಹುದು.


  ಮುಂದಿನ ಯೂಟ್ಯೂಬ್ ಸಿಇಒ ನೀಲ್ ಮೋಹನ್ ಬಗ್ಗೆ ತಿಳಿದುಕೊಳ್ಳಬೇಕಾದ ಸಂಗತಿಗಳು:


  1. ಮೋಹನ್ ಸ್ಟ್ಯಾನ್ಫೋರ್ಡ್ ವಿಶ್ವವಿದ್ಯಾಲಯದಿಂದ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ನಲ್ಲಿ ಪದವಿ ಮತ್ತು ಸ್ಟ್ಯಾನ್ಫೋರ್ಡ್ ಗ್ರಾಜ್ಯೂಯೆಟ್ ಸ್ಕೂಲ್ ಆಫ್ ಬಿಸಿನೆಸ್ ನಿಂದ ಎಂಬಿಎ ಪಡೆದಿದ್ದಾರೆ.


  2. ನೀಲ್ ಮೋಹನ್ ಅವರ ಲಿಂಕ್ಡ್ಇನ್ ಅನ್ನು ಸೂಕ್ಷ್ಮವಾಗಿ ಗಮನಿಸಿದರೆ, ಇವರು ಅಕ್ಸೆಂಚರ್ ಕಂಪನಿಯಿಂದ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು ಎಂಬುದು ಅರ್ಥವಾಗುತ್ತದೆ. ಅಲ್ಲಿ ಅವರು ಸರಿ ಸುಮಾರು ಒಂದೂವರೆ ವರ್ಷವನ್ನು ಕಳೆದರು. ಅದರ ನಂತರ, ಅವರು ಡಬಲ್ ಕ್ಲಿಕ್ ನಲ್ಲಿ ಕೆಲಸ ಮಾಡಿದರು, ಇದು 2007 ರಲ್ಲಿ ಗೂಗಲ್ ಗೆ ಪ್ರವೇಶಿಸಲು ಕಾರಣವಾಯಿತು. ಅವರ ಪಾತ್ರವು ಡಿಜಿಟಲ್ ಮತ್ತು ವಿಡಿಯೋ ಜಾಹೀರಾತುಗಳ ಎಸ್ವಿಪಿಯಾಗಿ ಬೆಳೆಯಿತು.


  ಯೂಟ್ಯೂಬ್ ಸಿಇಒ ನೀಲ್ ಮೋಹನ್


  3. ಗೂಗಲ್ ಗೆ ಸೇರುವ ಮೊದಲು ನೀಲ್ ಮೋಹನ್ ಮೈಕ್ರೋಸಾಫ್ಟ್ ಕಂಪನಿಯ ಕಾರ್ಪೊರೇಟ್ ಸ್ಟ್ರಾಟಜಿ ವಿಭಾಗದಲ್ಲಿ ಮ್ಯಾನೇಜರ್ ಆಗಿ ಸಹ ಕೆಲಸ ಮಾಡಿದ್ದರು. ಅವರು ಸ್ಟಿಚ್ ಫಿಕ್ಸ್ ಮತ್ತು ಜೀನೋಮಿಕ್ಸ್ ಮತ್ತು ಬಯೋಟೆಕ್ನಾಲಜಿ ಕಂಪನಿ 23 ಆಂಡ್ ಮಿ ಮಂಡಳಿಯಲ್ಲಿ ಸೇರಿಕೊಂಡರು.


  4. 2008 ರಲ್ಲಿ ಕಂಪನಿಯು ಡಬಲ್ ಕ್ಲಿಕ್ ಅನ್ನು ಸ್ವಾಧೀನಪಡಿಸಿಕೊಂಡ ನಂತರ ಮೋಹನ್ ಗೂಗಲ್ ಗೆ ಸೇರಿದರು. ಆರಂಭದಲ್ಲಿ ಅವರು ಡಿಜಿಟಲ್ ಮತ್ತು ಇಂಟರ್ನೆಟ್ ಜಾಹೀರಾತನ್ನು ನೋಡಿಕೊಳ್ಳುತ್ತಿದ್ದರು. ಅವರು ಈಗಾಗಲೇ ಯೂಟ್ಯೂಬ್ ತಂಡದೊಂದಿಗೆ ಪರಿಚಿತರಾಗಿದ್ದರು, ಏಕೆಂದರೆ ವಿಡಿಯೋ ಪ್ಲಾಟ್​​ಫಾರ್ಮ್​ ಡಬಲ್ ಕ್ಲಿಕ್ ನ ಅತಿದೊಡ್ಡ ಕ್ಲೈಂಟ್ ಆಗಿತ್ತು.


  5. 2013 ರಲ್ಲಿ, ಡಿಕ್ ಕೊಸ್ಟೊಲೊ ನೇತೃತ್ವದ ಟ್ವಿಟ್ಟರ್ ಮೋಹನ್ ಮತ್ತು ಪ್ರಸ್ತುತ ಗೂಗಲ್ ಸಿಇಒ ಸುಂದರ್ ಪಿಚೈ ಅವರನ್ನು ಕಂಪನಿಯಲ್ಲಿ ಹೊಸ ಉತ್ಪನ್ನಗಳ ಮೇಲ್ವಿಚಾರಣೆ ಮಾಡಲು ನೇಮಿಸಿಕೊಳ್ಳಲು ಪ್ರಯತ್ನಿಸಿತು. ಡಬಲ್ ಕ್ಲಿಕ್ ನ ಅವರ ಮಾಜಿ ಸಹೋದ್ಯೋಗಿ ಡೇವಿಡ್ ರೋಸೆನ್ ಬ್ಲಾಟ್ ಮೋಹನ್ ಅವರನ್ನು ಶಿಫಾರಸು ಮಾಡಿದರು. ಟೆಕ್ ಕ್ರಂಚ್ ನ ವರದಿಯ ಪ್ರಕಾರ, ಇಬ್ಬರು ಪ್ರಮುಖ ಉತ್ಪನ್ನ ಉದ್ಯೋಗಿಗಳನ್ನು ಉಳಿಸಿಕೊಳ್ಳಲು ಗೂಗಲ್ 150 ಮಿಲಿಯನ್ ಡಾಲರ್ ಸ್ಟಾಕ್ ಅನುದಾನವನ್ನು ಪಾವತಿಸಿದೆ.


  6. 2015 ರಲ್ಲಿ ಮೋಹನ್ ಯೂಟ್ಯೂಬ್ ನ ಮುಖ್ಯ ಉತ್ಪನ್ನ ಅಧಿಕಾರಿಯಾದರು. "ಅಂದಿನಿಂದ, ಅವರು ಉನ್ನತ ದರ್ಜೆಯ ಉತ್ಪನ್ನ ಮತ್ತು ಯುಎಕ್ಸ್ ತಂಡವನ್ನು ಸ್ಥಾಪಿಸಿದ್ದಾರೆ, ಯೂಟ್ಯೂಬ್ ಟಿವಿ, ಯೂಟ್ಯೂಬ್ ಮ್ಯೂಸಿಕ್ ಮತ್ತು ಪ್ರೀಮಿಯಂ ಮತ್ತು ಶಾರ್ಟ್ಸ್ ಸೇರಿದಂತೆ ಕೆಲವು ದೊಡ್ಡ ಉತ್ಪನ್ನಗಳನ್ನು ಬಿಡುಗಡೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಮತ್ತು ನಮ್ಮ ಟ್ರಸ್ಟ್ ಮತ್ತು ಸುರಕ್ಷತಾ ತಂಡವನ್ನು ಮುನ್ನಡೆಸಿದ್ದಾರೆ" ಎಂದು ವೊಜ್ಕಿಕಿ ತನ್ನ ವಿದಾಯ ಪತ್ರದಲ್ಲಿ ಬರೆದಿದ್ದಾರೆ.


  7. ಅವರು ಯೂಟ್ಯೂಬ್ ಶಾರ್ಟ್ಸ್ ನ ಪ್ರವರ್ತಕರಲ್ಲಿ ಒಬ್ಬರು - ಟಿಕ್‌ಟಾಕ್ ಮತ್ತು ಇನ್‌ಸ್ಟಾಗ್ರಾಮ್ ರೀಲ್ಸ್ ಪ್ರತಿಸ್ಪರ್ಧಿಗಳು. ಆದರೆ ಯೂಟ್ಯೂಬ್ ನ ವಿಶಾಲತೆಯಿಂದಾಗಿ, ಕೆಲವೊಮ್ಮೆ ಅವರು ಲಭ್ಯವಿರುವ ವೈಶಿಷ್ಟ್ಯಗಳ ಬಗ್ಗೆಯೂ ಮರೆತು ಬಿಡುತ್ತಾರೆ. ಯೂಟ್ಯೂಬ್ ಟಿವಿ ಅಪ್ಲಿಕೇಶನ್ ನಲ್ಲಿ ಪ್ಲೇಬ್ಯಾಕ್ ಸ್ಪೀಡ್ ಆಯ್ಕೆಯನ್ನು ಸೇರಿಸಲು ಕಂಪನಿಯು ಪರಿಶೀಲಿಸುತ್ತದೆ ಎಂದು ಮೋಹನ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ ಎಂದು 2021 ರಲ್ಲಿ ಪ್ರಕಟವಾದ ವರ್ಜ್ ವರದಿ ತಿಳಿಸಿದೆ.


  8. ಪ್ರಾಡಕ್ಟ್ ಮ್ಯಾನೇಜರ್ ಆಗಿ ಮೋಹನ್ ಯೂಟ್ಯೂಬ್ ನ ಟ್ರಸ್ಟ್ ಆಂಡ್ ಸೇಫ್ಟಿ ತಂಡವನ್ನು ನೋಡಿಕೊಳ್ಳುತ್ತಿದ್ದರು.
  9. ಪ್ರಸ್ತುತ, ಮೋಹನ್ ಇನ್ನೂ ವೊಜ್ಕಿಕಿಯೊಂದಿಗೆ ನಿಕಟವಾಗಿ ಕೆಲಸ ಮಾಡಲಿದ್ದಾರೆ. ನಿರ್ಗಮಿಸುತ್ತಿರುವ ಯೂಟ್ಯೂಬ್ ಸಿಇಒ ಆಲ್ಫಾಬೆಟ್ ನ ಮಂಡಳಿಯ ಸದಸ್ಯರಾಗಿ ಸೇವೆ ಸಲ್ಲಿಸಲಿದ್ದಾರೆ.


  ಮೋಹನ್ ತನ್ನ ಹೊಸ ಪಾತ್ರದ ಬಗ್ಗೆ ಮತ್ತು ವೊಜ್ಕಿಕಿಯ ನಿರ್ಗಮನದ ಬಗ್ಗೆಯೂ ಟ್ವೀಟ್ ಮಾಡಿದ್ದಾರೆ. ಟ್ವೀಟ್ ನಲ್ಲಿ "ಅನೇಕ ವರ್ಷಗಳಿಂದ ನಿಮ್ಮೊಂದಿಗೆ ಕೆಲಸ ಮಾಡಿರುವುದು ಅದ್ಭುತ ಅನುಭವವಾಗಿದೆ. ನೀವು ಯೂಟ್ಯೂಬ್ ಅನ್ನು ಸೃಷ್ಟಿಕರ್ತರಿಗೆ ಮತ್ತು ವೀಕ್ಷಕರಿಗೆ ಅಸಾಧಾರಣವಾದ ವೇದಿಕೆಯಾಗಿ ನಿರ್ಮಿಸಿದ್ದೀರಿ. ಈ ಅದ್ಭುತ ಕೆಲಸವನ್ನು ಹಾಗೆಯೇ ಮುಂದುವರಿಸಿಕೊಂಡು ಹೋಗಲು ನಾನು ಉತ್ಸುಕನಾಗಿದ್ದೇನೆ" ಎಂದು ಹೇಳಿದ್ದಾರೆ.

  Published by:Prajwal B
  First published: