Explained: ಶಿಂಜೊ ಅಬೆಯನ್ನು ಗುಂಡಿಕ್ಕಿ ಹತ್ಯೆಗೈದ ತೆತ್ಸುಯಾ ಯಮಗಾಮಿ ಯಾರು ಗೊತ್ತಾ? ಇಲ್ಲಿದೆ ಓದಿ

ಜಪಾನಿನ ಮಾಜಿ ಪ್ರಧಾನಿ ಶಿಂಜೋ ಅಬೆ ಶುಕ್ರವಾರ (ಜುಲೈ 8) ಜಪಾನ್‌ನ ನಾರಾದಲ್ಲಿ 41 ವರ್ಷದ ತೆತ್ಸುಯಾ ಯಮಗಾಮಿ ಎಂಬ ವ್ಯಕ್ತಿಯಿಂದ ಗುಂಡು ತಿಂದು ಸಾವನ್ನಪ್ಪಿದ್ದಾರೆ. ಗುಂಡೇಟು ತಿಂದು ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸಿ ಮೃತಪಟ್ಟ ಶಿಂಜೋ ಅಬೆ ಹಂತಕ ತೆತ್ಸುಯಾ ಯಮಗಾಮಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದು ಹತ್ಯೆಗೆ ಕಾರಣ ಕೂಡ ತಿಳಿಸಿದ್ದಾನೆ. ಯಾರು ಈ ಹಂತಕ? ಶಿಂಬೊಗೆ ಗುಂಡಿಟ್ಟಿದ್ದೇಕೆ ಎಂಬ ವಿವರಗಳು ಹೀಗಿವೆ.

ತೆತ್ಸುಯಾ ಯಮಗಾಮಿ

ತೆತ್ಸುಯಾ ಯಮಗಾಮಿ

  • Share this:
ಜಪಾನಿನ ಮಾಜಿ ಪ್ರಧಾನಿ ಶಿಂಜೋ ಅಬೆ (Shinzo Abe) ಶುಕ್ರವಾರ (ಜುಲೈ 8) ಜಪಾನ್‌ನ (Japan) ನಾರಾದಲ್ಲಿ 41 ವರ್ಷದ ತೆತ್ಸುಯಾ ಯಮಗಾಮಿ ಎಂಬ ವ್ಯಕ್ತಿಯಿಂದ ಗುಂಡು ತಿಂದು ಸಾವನ್ನಪ್ಪಿದ್ದಾರೆ (Death). ಗುಂಡೇಟು ತಿಂದು ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸಿ ಮೃತಪಟ್ಟ ಶಿಂಜೋ ಅಬೆ ಹಂತಕ ತೆತ್ಸುಯಾ ಯಮಗಾಮಿ (Tetsuya Yamagami)ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದು ಹತ್ಯೆಗೆ ಕಾರಣ ಕೂಡ ತಿಳಿಸಿದ್ದಾನೆ. ಯಾರು ಈ ಹಂತಕ? ಶಿಂಬೊಗೆ ಗುಂಡಿಟ್ಟಿದ್ದೇಕೆ ಎಂಬ ವಿವರಗಳು ಹೀಗಿವೆ. ಜಪಾನ್ ಸಂಸತ್ ನ ಮೇಲ್ಮನೆಗೆ ಚುನಾವಣೆ ನಡೆಯುತ್ತಿದ್ದ ಪ್ರಚಾರದ ವೇಳೆ ಜಪಾನ್‌ನ ದೀರ್ಘಾವಧಿಯ ಪ್ರಧಾನಿ ಶಿಂಜೋ ಅಬೆಯನ್ನು ಗುರಿಯಾಗಿಸಿಕೊಂಡು 10 ಅಡಿ ದೂರದಲ್ಲಿ ನಿಂತಿದ್ದ ತೆತ್ಸುಯಾ ಯಮಗಾಮಿ 2 ಬಾರಿ ಗುಂಡು ಹಾರಿಸಿ ಹತ್ಯೆ (Shot dead) ಮಾಡಿದ್ದ.

ಭಾಷಣ ಮಾಡುತ್ತಿದ್ದ ಸಂದರ್ಭದಲ್ಲಿ ಏಕಾಏಕಿ ಗುಂಡಿನ ದಾಳಿ 
ಬೆಳಿಗ್ಗೆ 11.30ಕ್ಕೆ ಪ್ರಚಾರದ ಭಾಷಣ ಮಾಡುತ್ತಿದ್ದ ಸಂದರ್ಭದಲ್ಲಿ ಏಕಾಏಕಿ ಗುಂಡಿನ ದಾಳಿ ನಡೆಸಲಾಗಿದೆ. ಅವರನ್ನು ತಕ್ಷಣ ಆಸ್ಪತ್ರೆಗೆ ಸಾಗಲಿಸಲಾಗಿದ್ದರೂ ಕೂಡ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ. ಹಂತಕನನ್ನು ಕೂಡಲೇ ಪೊಲೀಸರು ಬಂಧಿಸಿದ್ದರು. ಬಳಿಕ ತನಿಖೆಯಲ್ಲಿ ಆರೋಪಿ ನಾರಾ ಸಿಟಿಯ ನಿವಾಸಿಯಾಗಿದ್ದು ನೌಕಾಸೇನೆಯ ಮಾಜಿ ಅಧಿಕಾರಿಯಾಗಿದ್ದ. ಜಪಾನೀಸ್ ನೌಕಾಪಡೆಯಾಗಿರುವ ಜಪಾನೀಸ್ ಮಾರಿಟೈಮ್ ಸೆಲ್ಫ್ ಡಿಫೆನ್ಸ್ ಫೋರ್ಸ್ (JMSDF)ನಲ್ಲಿ 2005ರವರೆಗೆ ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿ ಬಳಿಕ ಕೆಲಸವಿಲ್ಲದೆ ಜೀವನ ಸಾಗಿಸುತ್ತಿದ್ದ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ.

ಇದನ್ನೂ ಓದಿ: Explained: ಏನಿದು G7? ಈ ಶೃಂಗಸಭೆಯಲ್ಲಿ ಯಾರ‍್ಯಾರು ಭಾಗಿಯಾಗಿದ್ದಾರೆ? ಇಲ್ಲಿದೆ ಸಂಪೂರ್ಣ ಮಾಹಿತಿ

ಸುಮಾರು ನೂರು ವರ್ಷಗಳಲ್ಲಿ ಜಪಾನ್‌ನ ಹಾಲಿ ಅಥವಾ ಮಾಜಿ ಪ್ರಧಾನಿಯೊಬ್ಬರನ್ನು ಹತ್ಯೆ ಮಾಡಿರುವುದು ಇದೇ ಮೊದಲು ಎಂದು ರಾಯಿಟರ್ಸ್ ವರದಿ ಮಾಡಿದೆ.

ತೆತ್ಸುಯಾ ಯಮಗಾಮಿ ಯಾರು?
ಗುಂಡಿನ ದಾಳಿ ನಡೆದ ತಕ್ಷಣ, ಸ್ಥಳದಲ್ಲಿದ್ದ ಭದ್ರತಾ ಪಡೆಗಳು ತೆತ್ಸುಯಾ ಯಮಗಾಮಿಯನ್ನು ಬಂಧಿಸಿ, ಆತನ ಬಳಿ ಇದ್ದ ಬಂದೂಕನ್ನು ವಶಪಡಿಸಿಕೊಳ್ಳಲಾಗಿದೆ. ಜಪಾನ್‌ನ ಎನ್‌ಎಚ್‌ಕೆ ವರ್ಲ್ಡ್ ಸುದ್ದಿ ಸಂಸ್ಥೆಯ ಪ್ರಕಾರ, ಕೊಲೆಗೆ ಯತ್ನಿಸಿದ ಆರೋಪದ ಮೇಲೆ ಪೊಲೀಸರು ಯಮಗಾಮಿಯನ್ನು ಬಂಧಿಸಿದ್ದಾರೆ. ನಿಶಿ ಪೊಲೀಸ್ ಠಾಣೆಯಲ್ಲಿ ವಿಚಾರಣೆಗೆ ಒಳಪಡಿಸಿದಾಗ ಹತ್ಯೆಗೆ ಕಾರಣ ತಿಳಿಸಿದ್ದಾನೆ. ಯಮಗಾಮಿ ಸೇನೆಯಲ್ಲಿ ಸೇವೆಸಲ್ಲಿಸಿದ ಬಳಿಕ ನಿರುದ್ಯೋಗಿಯಾಗಿದ್ದ. ಹಾಗಾಗಿ ನಿರುದ್ಯೋಗದಿಂದ ಬೇಸತ್ತು ಮತ್ತು ಶಿಂಜೋ ಅಬೆಯ ರಾಜಕೀಯ ನಡೆಯಿಂದ ಅಸಮಾಧಾನಗೊಂಡು ಹತ್ಯೆಗೆ ಮುಂದಾಗಿರುವುದಾಗಿ ತನಿಖಾಧಿಕಾರಿಗಳಿಗೆ ತಿಳಿಸಿದ್ದಾನೆ.

ವಿಚಾರಣೆಯಲ್ಲಿ ತೆತ್ಸುಯಾ ಯಮಗಾಮಿ ಅವರು ಪ್ರಶ್ನೆಗಳಿಗೆ ಶಾಂತವಾಗಿ ಪ್ರತಿಕ್ರಿಯಿಸುತ್ತಿದ್ದಾರೆ ಎಂದು ಎಪಿ ವರದಿ ಹೇಳಿದೆ. "ಪೊಲೀಸರು ಗುರುತಿಸದ ನಿರ್ದಿಷ್ಟ ಸಂಘಟನೆಯೊಂದಿಗೆ ಮಾಜಿ ನಾಯಕನ ಸಂಪರ್ಕದ ಬಗ್ಗೆ ವದಂತಿಗಳನ್ನು ನಂಬಿದ್ದರಿಂದ" ಅವರು ಅಬೆಯನ್ನು ಕೊಲ್ಲಲು ಸಂಚು ರೂಪಿಸಿದ್ದರು ಎಂದು ಅವರು ಹೇಳಿದರು.

ಹತ್ಯೆಗಾಗಿ ತಾನೇ ತಯಾರಿಸಿದ್ದ ಗನ್ ಬಳಕೆ
ಹತ್ಯೆಗಾಗಿ ತಾನೇ ತಯಾರಿಸಿದ್ದ ಗನ್ ಬಳಕೆ ಮಾಡಿರುವುದಾಗಿ ವಿಚಾರಣೆ ವೇಳೆ ತಿಳಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಯಮಗಾಮಿ ಬಳಸಿದ ಗನ್ ಎರಡು ಪೈಪ್ ಬಳಸಿ ಜೋಡಿಸಿದಂತೆ ಕಾಣುತ್ತದೆ. ಗುಂಡಿನ ಸದ್ದು ಸ್ಫೋಟದ ಶಬ್ದದಂತೆಯೇ ಇತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಪ್ರಕರಣದಲ್ಲಿ ಅಚ್ಚರಿ ಎಂದರೆ ಅಬೆ ಹತ್ಯೆಯ ಬಳಿಕ ಯಮಗಾಮಿ ಓಡಿ ಹೋಗಲೂ ಕೂಡ ಯತ್ನಿಸಿಲ್ಲ. ಗುಂಡು ಹಾರಿಸಿ ಅಲ್ಲೇ ಇದ್ದ ಹಂತಕನನ್ನು ಪೊಲೀಸರು ತಕ್ಷಣ ಹೋಗಿ ಬಂಧಿಸಿದ್ದಾರೆ.

ಯಮಗಾಮಿ ವಾಸಿಸುತ್ತಿದ್ದ ಮನೆಯಲ್ಲಿ ಅವರ ವೈಯಕ್ತಿಕ ಕಂಪ್ಯೂಟರ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ಎಪಿ ವರದಿ ಮಾಡಿದೆ. ಸಮೀಪದಲ್ಲಿ ವಾಸಿಸುವವರನ್ನು ಸ್ಥಳಾಂತರಿಸಲು ತಿಳಿಸಲಾಗಿದೆ ಎಂದು ಎನ್‌ಎಚ್‌ಕೆ ಹೇಳಿದೆ. ಯಮಗಾಮಿ ನಾರಾ ನಗರದಲ್ಲಿ ವಾಸಿಸುತ್ತಿದ್ದು, ಅಲ್ಲಿಂದ ಸ್ವಲ್ಪ ದೂರದಿಂದ ಅಬೆಯನ್ನು ಗುಂಡಿಕ್ಕಿ ಹೊಡೆದಿದ್ದಾನೆ.

ಇದನ್ನೂ ಓದಿ:  Shinzo Abe: ಯಾರು ಗೊತ್ತಾ ಶಿಂಜೋ ಅಬೆ? ಭಾರತದ 'ಡಿಯರ್ ಫ್ರೆಂಡ್‌' ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ

ಜಪಾನ್ ಟೈಮ್ಸ್ ತನ್ನ ಹಿಂದಿನ ಕಂಪನಿಯ ಮೂಲವನ್ನು ಉಲ್ಲೇಖಿಸಿ ಯಮಗಾಮಿ ರಾಜಕೀಯವಾಗಿ ಸಕ್ರಿಯವಾಗಿಲ್ಲ ಎಂದು ವರದಿ ಮಾಡಿದೆ. ಅವರು 2020 ರಿಂದ ಅಲ್ಲಿ ಕೆಲಸ ಮಾಡಿದ ನಂತರ ಆರೋಗ್ಯ ಕಾರಣಗಳಿಗಾಗಿ ಮೇ ತಿಂಗಳಲ್ಲಿ ಉತ್ಪಾದನಾ ಕಂಪನಿಯಲ್ಲಿ ಕೆಲಸ ತ್ಯಜಿಸಿದ್ದರು ಎಂದು ಮೂಲಗಳು ತಿಳಿಸಿವೆ.

ಜಪಾನಿನ ಕಡಲ ಸ್ವರಕ್ಷಣೆ ಪಡೆ ಎಂದರೇನು?
ಇದರ ಅಧಿಕೃತ ವೆಬ್‌ಸೈಟ್‌ನ ಪ್ರಕಾರ, ಜಪಾನೀಸ್ ನೌಕಾಪಡೆ ಎಂದು ಸಹ ಉಲ್ಲೇಖಿಸಲಾಗುತ್ತದೆ, ಅದರ ಪ್ರಸ್ತುತ ರೂಪದಲ್ಲಿರುವ ಬಲವು ಡಿಸೆಂಬರ್ 2013 ರಲ್ಲಿ ಅನುಮೋದಿಸಲಾದ ರಾಷ್ಟ್ರೀಯ ಭದ್ರತಾ ಕಾರ್ಯತಂತ್ರ ಮತ್ತು ಡಿಸೆಂಬರ್ 2018 ರಲ್ಲಿ ಅನುಮೋದಿಸಲಾದ ರಾಷ್ಟ್ರೀಯ ರಕ್ಷಣಾ ಕಾರ್ಯಕ್ರಮದ ಮಾರ್ಗಸೂಚಿಗಳನ್ನು (NDPG) ಆಧರಿಸಿದೆ.

ಜಪಾನಿನ ಕಡಲ ಸ್ವರಕ್ಷಣೆ ಪಡೆ ಕೆಳಗಿನ ಮೂರು ಗುರಿಗಳ ಕಡೆಗೆ ಚಟುವಟಿಕೆಗಳನ್ನು ನಡೆಸುತ್ತದೆ:
1) ಜಪಾನ್‌ನ ಪ್ರದೇಶ ಮತ್ತು ಸುತ್ತಮುತ್ತಲಿನ ಪ್ರದೇಶಗಳನ್ನು ರಕ್ಷಿಸುವುದು
2) ಕಡಲ ಸಂಚಾರದ ಸುರಕ್ಷತೆಯನ್ನು ಸುರಕ್ಷಿತಗೊಳಿಸುವುದು
3) ಅಪೇಕ್ಷಣೀಯ ಭದ್ರತಾ ವಾತಾವರಣವನ್ನು ರಚಿಸುವುದು

ಜಪಾನ್‌ನಲ್ಲಿ, ತಾಂತ್ರಿಕವಾಗಿ ಮಿಲಿಟರಿಯನ್ನು ಅದರ ಸಂವಿಧಾನದ 9ನೇ ಪರಿಚ್ಛೇದದಿಂದ ನಿರ್ಬಂಧಿಸಲಾಗಿದೆ, ಆದರೆ 1954 ರಿಂದ, ದೇಶವು ಸಾಕಷ್ಟು ಶಸ್ತ್ರಾಸ್ತ್ರ ಮತ್ತು ಸಿಬ್ಬಂದಿಯನ್ನು ಹೊಂದಿರುವ 'ಆತ್ಮ ರಕ್ಷಣಾ ಪಡೆ'ಯನ್ನು ನಿರ್ವಹಿಸುತ್ತಿದೆ. ಆರ್ಟಿಕಲ್ 9ರ ಭಾಗದ ಪ್ರಕಾರ, "ಜಪಾನಿನ ಜನರು ಯುದ್ಧವನ್ನು ರಾಷ್ಟ್ರದ ಸಾರ್ವಭೌಮ ಹಕ್ಕಾಗಿ ಶಾಶ್ವತವಾಗಿ ತ್ಯಜಿಸುತ್ತಾರೆ ಮತ್ತು ಅಂತರರಾಷ್ಟ್ರೀಯ ವಿವಾದಗಳನ್ನು ಇತ್ಯರ್ಥಗೊಳಿಸುವ ವಿಧಾನವಾಗಿ ಬಲದ ಬೆದರಿಕೆ ಅಥವಾ ಬಳಕೆಯನ್ನು ತ್ಯಜಿಸುತ್ತಾರೆ."

ಜಪಾನ್ನಲ್ಲಿ ಶಸ್ತ್ರಾಸ್ತ್ರ ಕಾನೂನು ಹೇಗಿದೆ?
ಜಪಾನ್ನಲ್ಲಿ ಶಸ್ತ್ರಾಸ್ತ್ರ ಕಾನೂನುಗಳು ಅತ್ಯಂತ ಕಠಿಣವಾಗಿದ್ದು, ಯಾವುದೇ ವ್ಯಕ್ತಿ ಪರವಾನಗಿ ಇಲ್ಲದೆ ಶಸ್ತ್ರಾಸ್ತ್ರ ಹೊಂದುವಂತಿಲ್ಲ. ಪರವಾನಗಿ ಕೂಡ ಜಪಾನ್ನಲ್ಲಿ ಅಷ್ಟು ಸುಲಭವಾಗಿ ಸಿಗುವುದಿಲ್ಲ. ಜಪಾನ್‌ನಲ್ಲಿ ಬಂದೂಕು ಗುಂಡು ಹಾರಿಸುವುದು ಅಪರೂಪ ಮತ್ತು ಶಸ್ತ್ರಾಸ್ತ್ರಗಳ ಮೇಲಿನ ಕಠಿಣ ಕಾನೂನುಗಳಿಂದಾಗಿ ಸಾಮೂಹಿಕ ಗುಂಡಿನ ದಾಳಿಗಳು ಕೇಳಿಬರುವುದಿಲ್ಲ. 2017ರ ಬಿಬಿಸಿಯ ವರದಿಯ ಪ್ರಕಾರ, ಆಯುಧದ ಪ್ರವೇಶವನ್ನು ಪಡೆಯಲು ಅರ್ಜಿದಾರರು "ಇಡೀ ದಿನದ ತರಗತಿಗೆ ಹಾಜರಾಗಬೇಕು, ಲಿಖಿತ ಪರೀಕ್ಷೆಯನ್ನು ತೆಗೆದುಕೊಳ್ಳಬೇಕು ಮತ್ತು ಕನಿಷ್ಠ 95% ಅಂಕಗಳೊಂದಿಗೆ ಶೂಟಿಂಗ್-ಶ್ರೇಣಿಯ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು.

ಇದನ್ನೂ ಓದಿ:  Explained: ನಾನು ಭಾರತದ ರಾಷ್ಟ್ರಪತಿಯಾದರೆ! ಹೇಗಿರುತ್ತೆ ಜೀವನ?

ಕೈಬಂದೂಕುಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಮತ್ತು ಶಾಟ್‌ಗನ್ ಮತ್ತು ಏರ್ ರೈಫಲ್‌ಗಳನ್ನು ಮಾತ್ರ ಅನುಮತಿಸಲಾಗಿದೆ ಎಂದು ವರದಿ ಹೇಳಿದೆ. ಯಮಗಾಮಿ ಪ್ರಕರಣದಲ್ಲಿ 3ಡಿ ಪ್ರಿಂಟಿಂಗ್ ಬಳಸಿ ಬಂದೂಕು ತಯಾರಿಸಿರಬಹುದು ಎಂಬ ಊಹಾಪೋಹಗಳಿದ್ದವು. ಆತ್ಮರಕ್ಷಣಾ ಪಡೆಗಳಲ್ಲಿರುವವರೂ ಬಂದೂಕುಗಳ ಬಳಕೆಯನ್ನು ಕಟ್ಟುನಿಟ್ಟಾದ ನಿಯಮಗಳನ್ನು ಅನುಸರಿಸಬೇಕು.
Published by:Ashwini Prabhu
First published: