Chameleon: ಊಸರವಳ್ಳಿಗಳು ಬಣ್ಣ ಬದಲಾಯಿಸುವುದೇಕೆ ಗೊತ್ತಾ? ಇವುಗಳ ವಿಶಿಷ್ಟ ಸ್ವಭಾವದ ಹಿಂದಿದೆ ಈ ಕಾರಣ

ಊಸರವಳ್ಳಿಗಳು ಏಕೆ ತಮ್ಮ ದೇಹದ ಬಣ್ಣವನ್ನು ಬದಲಾಯಿಸುತ್ತಾ ಇರುತ್ತವೆ ಎಂದು ನೀವು ಯೋಚಿಸಿದ್ದೀರಾ? ಇದರ ಬಣ್ಣ ಬದಲಾಗಲು ಕಾರಣವೇನು ಇದಕ್ಕೆ ಇಲ್ಲಿದೆ ಉತ್ತರ

ಊಸರವಳ್ಳಿ

ಊಸರವಳ್ಳಿ

  • Share this:
ನಮ್ಮ ನಡುವೆ ಇರುವಂತಹ ಅನೇಕ ಜನರು (People) ಪರಿಸ್ಥಿತಿಗೆ ಅನುಕೂಲವಾಗುವಂತೆ ಒಂದೇ ಘಟನೆಯನ್ನು ಅಥವಾ ಮಾತನ್ನು ಒಬ್ಬರ ಮುಂದೆ ಒಂದು ರೀತಿಯಾಗಿ ಮತ್ತು ಇನ್ನೊಬ್ಬರ ಮುಂದೆ ಇನ್ನೊಂದು ರೀತಿಯಾಗಿ ತಿರುಚಿ ಹೇಳುವುದರ ಮೂಲಕ ಕ್ಷಣ ಮಾತ್ರದಲ್ಲಿಯೇ ತಮ್ಮ ಮಾತನ್ನು ಬದಲಾಯಿಸುತ್ತಾರೆ. ಈ ರೀತಿ ಮಾಡುವ ಜನರನ್ನು ನಾವು ನೋಡಿದಾಗ ‘ಏನ್ ಜನ ಗುರು ಇವರು.. ಒಳ್ಳೆ ಊಸರವಳ್ಳಿ (Chameleon) ತರಹ ನಿಮಿಷ, ನಿಮಿಷಕ್ಕೂ ತಮ್ಮ ಬಣ್ಣ ಬದಲಾಯಿಸುತ್ತಾರೆ’ ಅಂತ ಹೇಳುತ್ತಿರುತ್ತೇವೆ. ಇಲ್ಲಿ ಬಣ್ಣ (Color) ಎಂದರೆ ವ್ಯಕ್ತಿಯ ಬಣ್ಣ ಬದಲಾಗುವುದಿಲ್ಲ. ಇಲ್ಲಿ ಉದಾಹರಣೆಗೆ ತೆಗೆದುಕೊಂಡಿರುವ ಊಸರವಳ್ಳಿಯ ಬಣ್ಣ ಬದಲಾಗುತ್ತದೆ ಎಂದು ಹೇಳಬಹುದು.

ಹೌದು.. ಈ ಉದಾಹರಣೆಯನ್ನು ನಾವು ಬಹಳಷ್ಟು ಬಾರಿ ಕೊಟ್ಟಿರುತ್ತೇವೆ, ಆದರೆ ಒಮ್ಮೆಯಾದರೂ ಈ ಊಸರವಳ್ಳಿಗಳು ಏಕೆ ತಮ್ಮ ದೇಹದ ಬಣ್ಣವನ್ನು ಬದಲಾಯಿಸುತ್ತಾ ಇರುತ್ತವೆ ಎಂದು ನೀವು ಯೋಚಿಸಿದ್ದೀರಾ? ಮೂಲ ಕಾರಣವೇನೆಂದರೆ ಊಸರವಳ್ಳಿಗಳು ಪರಿಸ್ಥಿತಿಗೆ ಮತ್ತು ಪರಿಸರಕ್ಕೆ ಅನುಗುಣವಾಗಿ ತನ್ನ ದೇಹದ ಬಣ್ಣವನ್ನು ಬದಲಾಯಿಸುವ ಅಭ್ಯಾಸವನ್ನು ಹೊಂದಿರುತ್ತವೆ.

ಬಣ್ಣ ಬದಲಾಯಿಸುವ ಊಸರವಳ್ಳಿಗಳು
ಊಸರವಳ್ಳಿಗಳು ಬಣ್ಣವನ್ನು ಬದಲಾಯಿಸುತ್ತವೆ ಎಂದು ನಮಗೆಲ್ಲರಿಗೂ ತಿಳಿದಿದೆ ಮತ್ತು ಈ ಸರೀಸೃಪದ ಈ ವಿಶಿಷ್ಟ ಸ್ವಭಾವದ ಹಿಂದಿನ ಕಾರಣದ ಬಗ್ಗೆ ನಮ್ಮಲ್ಲಿ ಅನೇಕರು ಆಶ್ಚರ್ಯಚಕಿತರಾಗಿರಬಹುದು. ಊಸರವಳ್ಳಿಗಳು ತಮ್ಮ ಚರ್ಮದ ಬಣ್ಣವನ್ನು ಬದಲಾಯಿಸುವ ಹಿಂದಿನ ಕಾರಣವು ಸಾಕಷ್ಟು ಆಸಕ್ತಿದಾಯಕವಾಗಿದೆ. ಪರಭಕ್ಷಕಗಳಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಮತ್ತು ಬದಲಾಗುತ್ತಿರುವ ಪರಿಸರಕ್ಕೆ ಹೊಂದಿಕೊಳ್ಳಲು ಇದೊಂದು ಮಾರ್ಗವಾಗಿದೆ ಎಂದು ಹೇಳಲಾಗುತ್ತದೆ.

ಶತ್ರು ಪ್ರಾಣಿಗಳಿಂದ ತನ್ನನ್ನು ರಕ್ಷಿಸಿಕೊಳ್ಳಲು ಒಂದು ಮಾರ್ಗ
ಅಂದ ಹಾಗೆ, ತಮ್ಮ ಜೀವಗಳನ್ನು ಬೇರೆ ದೈತ್ಯ ಪ್ರಾಣಿಗಳಿಂದ ಉಳಿಸಿಕೊಳ್ಳಲು ಅನೇಕ ಪ್ರಾಣಿಗಳು ಅನೇಕ ರೀತಿಯ ತಂತ್ರಗಳನ್ನು ಅಳವಡಿಸಿಕೊಳ್ಳುತ್ತವೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಕೆಲವು ಪ್ರಾಣಿಗಳು ಜೀವಂತಾಗಿದ್ದರೂ ಸಹ ಬೇರೆ ಪ್ರಾಣಿ ಅದರ ಮೇಲೆ ದಾಳಿ ಮಾಡಲು ಹತ್ತಿರ ಬರುತ್ತಿರುವುದನ್ನು ನೋಡಿ ಒಳ್ಳೆ ಸತ್ತಂತೆ ನಟಿಸುತ್ತವೆ. ಕೆಲವು ಪ್ರಾಣಿಗಳು ತಮ್ಮ ಶತ್ರು ಪ್ರಾಣಿಗಳನ್ನು ದೂರವಿಡಲು ಬಲವಾದ ದುರ್ವಾಸನೆಯನ್ನು ಬಿಡುತ್ತವೆ. ಅಂತೆಯೇ, ಊಸರವಳ್ಳಿಯು ಸಹ ತನ್ನ ಬಣ್ಣವನ್ನು ಬದಲಾಯಿಸುತ್ತದೆ ಎಂದು ಹೇಳಬಹುದು.

ಇದನ್ನೂ ಓದಿ: Viral Video: ನೀರಿನಲ್ಲಿ ಮರಿಗಳೊಂದಿಗೆ ಹೆಣ್ಣು ಹುಲಿ ತುಂಟಾಟ! ಅಮ್ಮ-ಮಕ್ಕಳ ಮುದ್ದಾದ ವಿಡಿಯೋ ನೀವೂ ನೋಡಿ

ಊಸರವಳ್ಳಿ ತನ್ನ ಶತ್ರು ಪ್ರಾಣಿಗಳಿಂದ ತನ್ನನ್ನು ರಕ್ಷಿಸಿಕೊಳ್ಳಲು ತನ್ನ ಬಣ್ಣವನ್ನು ಬದಲಾಯಿಸುತ್ತದೆ. ಊಸರವಳ್ಳಿಯು ತನ್ನ ಜೀವನ ತೊಂದರೆಯಲ್ಲಿದೆ ಎಂದು ಭಾವಿಸಿದಾಗ, ಅದು ತನ್ನ ಬಣ್ಣವನ್ನು ಕೂಡಲೇ ಬದಲಾಯಿಸುತ್ತದೆ. ಈ ಕಾರಣದಿಂದಾಗಿ, ಶತ್ರು ಪ್ರಾಣಿಗಳ ಕಣ್ಣುಗಳನ್ನು ತಪ್ಪಿಸಿ ತನ್ನನ್ನು ತಾನು ರಕ್ಷಿಸಿಕೊಳ್ಳುವಲ್ಲಿ ಯಶಸ್ವಿಯಾಗುತ್ತದೆ ಎಂದು ಹೇಳಬಹುದು. ಯಾವಾಗ ಶತ್ರು ಪ್ರಾಣಿಗಳು ತಮ್ಮ ಮೇಲೆ ದಾಳಿ ಮಾಡಲು ಬರುತ್ತಿವೆ ಎಂದು ತಿಳಿದ ಕೂಡಲೇ ತನ್ನ ಜೀವವನ್ನು ಉಳಿಸಿಕೊಳ್ಳಲು ಊಸರವಳ್ಳಿಯು ಒಂದೇ ಸ್ಥಳದಲ್ಲಿ ಸ್ಥಿರವಾಗಿ ಉಳಿಯುತ್ತದೆ ಮತ್ತು ಸುತ್ತಮುತ್ತಲಿನ ಪೊದೆಗಳಲ್ಲಿ ಅಡಗಿ ಕುಳಿತುಕೊಳ್ಳುತ್ತದೆ.

ಊಸರವಳ್ಳಿ ದೇಹದ ಬಣ್ಣ ಹೇಗೆ ಬದಲಾಯಿಸುತ್ತದೆ
ಪರಿಸರಕ್ಕೆ ಅನುಗುಣವಾಗಿ ಊಸರವಳ್ಳಿಯು ಬಣ್ಣವನ್ನು ಬದಲಾಯಿಸುತ್ತದೆ ಎಂದು ನೀವು ತಿಳಿದುಕೊಂಡಿದ್ದಾಯಿತು. ಆದರೆ ಅದು ಅದರ ದೇಹದ ಬಣ್ಣವನ್ನು ಹೇಗೆ ಬದಲಾಯಿಸುತ್ತದೆ? ವಾಸ್ತವವಾಗಿ, ಊಸರವಳ್ಳಿಯ ದೇಹದಲ್ಲಿ ಒಂದು ಕೋಶವು ಕಂಡು ಬರುತ್ತದೆ, ಇದು ಅಗತ್ಯವಿರುವಂತೆ ಬಣ್ಣವನ್ನು ಬದಲಾಯಿಸಲು ಸಹಾಯ ಮಾಡುತ್ತದೆ ಎಂದು ಹೇಳಲಾಗುತ್ತದೆ. ಇದು ದೇಹದ ತಾಪಮಾನದ ಮೇಲೆ ಅವಲಂಬಿತವಾಗಿರುತ್ತದೆ. ತಾಪಮಾನಕ್ಕೆ ಅನುಗುಣವಾಗಿ, ಊಸರವಳ್ಳಿಯ ದೇಹವು ಬೆಳೆಯುತ್ತದೆ ಮತ್ತು ಸಂಕುಚಿತಗೊಳ್ಳುತ್ತದೆ. ದೇಹದ ಹಾರ್ಮೋನುಗಳು ಹೆಚ್ಚಾದಾಗ, ಈ ಜೀವಕೋಶಗಳು ಬಣ್ಣವನ್ನು ಬದಲಾಯಿಸಲು ಪ್ರಾರಂಭಿಸುತ್ತವೆ.

ಇದನ್ನೂ ಓದಿ:  Cats Eat Woman: ಮಹಿಳೆಯನ್ನು ಕಚ್ಚಿಕೊಂದು ತಿಂದುಹಾಕಿದ 20 ಬೆಕ್ಕುಗಳು!

ಊಸರವಳ್ಳಿಯ ಚರ್ಮದ ಬಣ್ಣವು ಹಳದಿ, ಗಾಢ ಕಂದು ಮತ್ತು ಬಿಳಿ ಅಥವಾ ಅದೇ ರೀತಿಯ ಇತರ ಬಣ್ಣಗಳಾಗಿ ಬದಲಾಗಬಹುದು. ಈ ರೀತಿಯಾಗಿ ಊಸರವಳ್ಳಿಗಳು ತಮ್ಮ ದೇಹದ ತಾಪಮಾನವನ್ನು ನಿಯಂತ್ರಿಸುವ ಮೂಲಕ ಬಣ್ಣವನ್ನು ಬದಲಾಯಿಸುತ್ತವೆ ಎಂದು ಹೇಳಲಾಗುತ್ತದೆ.
Published by:Ashwini Prabhu
First published: