Explainer: 5G ಟೆಲಿಕಾಂಗಳು ವಿಮಾನಯಾನ ಸುರಕ್ಷತೆಗೆ ಅಪಾಯ ಉಂಟುಮಾಡುತ್ತದೆಯೇ? ಇಲ್ಲಿದೆ ವಿವರ

ಪ್ರಸ್ತುತ, 5G ಮೊಬೈಲ್ ಸಂವಹನ ವೈರ್‌ಲೆಸ್ ಸ್ಟೇಷನ್‌ಗಳು ದಕ್ಷಿಣ ಕೊರಿಯಾ ವಿಮಾನ ನಿಲ್ದಾಣಗಳ ಬಳಿಯೂ ಕಾರ್ಯನಿರ್ವಹಿಸುತ್ತಿದ್ದು, ಆದರೆ ಯಾವುದೇ ಸಮಸ್ಯೆ ಉಂಟಾಗಿರುವ ಬಗ್ಗೆ ವರದಿಗಳಿಲ್ಲ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಈಗ ಎಲ್ಲೆಲ್ಲೂ 5G ಯುಗ ಆರಂಭವಾಗುವ ಲಕ್ಷಣಗಳು ಇವೆ. ದೇಶದಲ್ಲೂ ಈಗಾಗಲೇ 5G ಸ್ಮಾರ್ಟ್‌ಫೋನ್‌ಗಳು (5G Smartphones) ಮಾರುಕಟ್ಟೆಯಲ್ಲಿ ದೊರೆಯುತ್ತಿದ್ದು, ಈ ವರ್ಷ ಹಲವು ನಗರಗಳಲ್ಲಿ 5G ನೆಟ್‌ವರ್ಕ್‌ಗೂ (Network) ಚಾಲನೆ ಸಿಗಲಿದೆ ಎಂದು ವರದಿಗಳು ಹೇಳುತ್ತಿವೆ. ಈಗಾಗಲೇ ಅನೇಕ (Countries) ದೇಶಗಳಲ್ಲಿ 5G ಸೇವೆ (Launching) ಆರಂಭವಾಗುತ್ತಿದೆ. ಆದರೆ, ಇದರಿಂದ ವಿಮಾನಯಾನ (Airline Safety) ಸುರಕ್ಷತೆಗೆ ಅಪಾಯ ತಂದೊಡ್ಡುತ್ತದೆಯೇ ಎಂಬ ಆತಂಕ ಎದುರಾಗಿದೆ. ಈ ಬಗ್ಗೆ ವಿವರಗಳು ಇಲ್ಲಿದೆ ನೋಡಿ.

AT&T ಮತ್ತು Verizon ಹೊಸ 5G ಸೇವೆಗಳನ್ನು ನಿಯೋಜಿಸುವುದರಿಂದ ಪ್ರಮುಖ ಯುನೈಟೆಡ್‌ ಸ್ಟೇಟ್ಸ್‌ (United States) (US) ಪ್ರಯಾಣಿಕರ ಮತ್ತು ಸರಕು ವಿಮಾನಯಾನ ಸಂಸ್ಥೆಗಳ ಮುಖ್ಯ ಕಾರ್ಯನಿರ್ವಾಹಕರು "ದುರಂತ" ವಾಯುಯಾನ ಬಿಕ್ಕಟ್ಟಿನ ಬಗ್ಗೆ ಇತ್ತೀಚೆಗೆ ಎಚ್ಚರಿಸಿದ್ದಾರೆ. ಬುಧವಾರ ಪ್ರಾರಂಭವಾಗಲಿರುವ ಹೊಸ C ಬ್ಯಾಂಡ್ 5G ಸೇವೆಯು ಗಮನಾರ್ಹ ಸಂಖ್ಯೆಯ ವಿಮಾನಗಳನ್ನು ನಿಷ್ಪ್ರಯೋಜಕಗೊಳಿಸಬಹುದು. ಇದು US ವಿಮಾನಗಳಿಗೆ ಮತ್ತು ಹತ್ತಾರು ಸಾವಿರ ಅಮೆರಿಕನ್ನರನ್ನು ಇತರೆ ದೇಶಗಳಲ್ಲಿ ಅವ್ಯವಸ್ಥೆ ಉಂಟುಮಾಡಬಹುದು ಎಂದು ಅವರು ಹೇಳಿದರು.

ವಿವಾದದ ಹಿನ್ನೆಲೆ ಇಲ್ಲಿದೆ:

ಏನಾಗಿದೆ..?

ಯುನೈಟೆಡ್ ಸ್ಟೇಟ್ಸ್ ಮಧ್ಯ ಶ್ರೇಣಿಯ 5G ಬ್ಯಾಂಡ್‌ವಿಡ್ತ್ ಅನ್ನು ಹಲವು ಮೊಬೈಲ್ ಫೋನ್ ಕಂಪನಿಗಳಿಗೆ 2021ರ ಆರಂಭದಲ್ಲಿ ಹರಾಜು ಪ್ರಕ್ರಿಯೆ ನಡೆಸಿದೆ. C ಬ್ಯಾಂಡ್ ಎಂದು ಕರೆಯಲಾಗುವ ಸ್ಪೆಕ್ಟ್ರಮ್‌ನಲ್ಲಿ 3.7-3.98 GHz ವ್ಯಾಪ್ತಿಯಲ್ಲಿ ಸುಮಾರು 80 ಶತಕೋಟಿ ಡಾಲರ್‌ ಮೊತ್ತಕ್ಕೆ ಈ ಹರಾಜು ನಡೆದಿದೆ.

ಇದರಿಂದ ಸಮಸ್ಯೆ ಏಕೆ..?

ಹೊಸ 5 ಜಿ ತಂತ್ರಜ್ಞಾನವು ಆಲ್ಟಿಮೀಟರ್‌ಗಳಂತಹ ಸಾಧನಗಳೊಂದಿಗೆ ಮಧ್ಯಪ್ರವೇಶಿಸಬಹುದೆಂದು ಯುಎಸ್ ಫೆಡರಲ್ ಏವಿಯೇಷನ್ ​​ಅಡ್ಮಿನಿಸ್ಟ್ರೇಷನ್ (FAA) ಎಚ್ಚರಿಸಿದೆ. ಆಲ್ಟಿಮೀಟರ್‌ಗಳು ವಿಮಾನವು ನೆಲದಿಂದ ಎಷ್ಟು ದೂರದಲ್ಲಿ ಪ್ರಯಾಣಿಸುತ್ತದೆ ಎಂಬುದನ್ನು ಅಳೆಯುತ್ತದೆ.

ಆಲ್ಟಿಮೀಟರ್‌ಗಳು 4.2-4.4 GHz ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತವೆ ಮತ್ತು ಹರಾಜಾದ ಆವರ್ತನಗಳು ಈ ಶ್ರೇಣಿಗೆ ತುಂಬಾ ಹತ್ತಿರದಲ್ಲಿವೆ. ಎತ್ತರದ ಜೊತೆಗೆ, ಆಲ್ಟಿಮೀಟರ್ ರೀಡೌಟ್‌ಗಳನ್ನು ಸ್ವಯಂಚಾಲಿತ ಲ್ಯಾಂಡಿಂಗ್‌ಗಳನ್ನು ಸುಗಮಗೊಳಿಸಲು ಮತ್ತು ವಿಂಡ್ ಶಿಯರ್ ಅನ್ನು ಪತ್ತೆಹಚ್ಚಲು ಸಹಾಯ ಮಾಡಲು ಸಹ ಬಳಸಲಾಗುತ್ತದೆ.

ಇದನ್ನೂ ಓದಿ: Explained: ಈ ವಿಮಾನ ಸಂಸ್ಥೆಗಳು ಸದ್ಯಕ್ಕೆ ತಮ್ಮ ಸೇವೆ ನಿಲ್ಲಿಸಿವೆ, ಇನ್ನು ಕೆಲವು ಭಾರೀ ಡಿಸ್ಕೌಂಟ್ ಕೊಡುತ್ತಿವೆ

FAAಯ 5G ನಿರ್ದೇಶನಗಳು ಸುಮಾರು 40 ಅಮೆರಿಕದ ದೊಡ್ಡ ವಿಮಾನ ನಿಲ್ದಾಣಗಳಲ್ಲಿ ರೇಡಿಯೋ ಆಲ್ಟಿಮೀಟರ್‌ಗಳ ಬಳಕೆಯನ್ನು ನಿರ್ಬಂಧಿಸುತ್ತದೆ ಎಂದು ಯುನೈಟೆಡ್ ಏರ್‌ಲೈನ್ಸ್ ಸಿಇಒ ಸ್ಕಾಟ್ ಕಿರ್ಬಿ ಕಳೆದ ತಿಂಗಳು ಹೇಳಿದ್ದರು. ಅಲ್ಲದೆ, ಈ ನಿರ್ದೇಶನಗಳು ದೈನಂದಿನ ವಿಮಾನಯಾನಗಳಲ್ಲಿ ಶೇಕಡಾ 4 ರಷ್ಟು ಅಡ್ಡಿಪಡಿಸಬಹುದು ಎಂದು US ಏರ್‌ಲೈನ್ಸ್ ಎಚ್ಚರಿಸಿದೆ.

ಇನ್ನು, ಇದನ್ನು ಪರಿಹರಿಸದೆ ಬಿಟ್ಟರೆ, ಕೆಟ್ಟ ಹವಾಮಾನ, ಮೋಡದ ಹೊದಿಕೆ ಅಥವಾ ದಟ್ಟ ಹೊಗೆಯ ಸಂದರ್ಭದಲ್ಲಿ ಯುಎಸ್‌ನ ಪ್ರಮುಖ ವಿಮಾನ ನಿಲ್ದಾಣಗಳಲ್ಲಿ "ನೀವು ದೃಷ್ಟಿಗೋಚರ ವಿಧಾನಗಳನ್ನು ಮಾತ್ರ ಮಾಡಬಹುದು" ಎಂದು ಕಿರ್ಬಿ ಎಚ್ಚರಿಸಿದ್ದರು.

ಈ ಫ್ರೀಕ್ವೆನ್ಸಿ ಯಾವ ವ್ಯತ್ಯಾಸವನ್ನು ಮಾಡುತ್ತದೆ..?

ಸ್ಪೆಕ್ಟ್ರಮ್‌ನಲ್ಲಿ ಎಷ್ಟು ಹೆಚ್ಚಿನ ಫ್ರೀಕ್ವೆನ್ಸಿ ಇರುತ್ತದೋ, ಅಷ್ಟರ ಮಟ್ಟಿಗೆ ಇದರ ಸೇವೆಯು ವೇಗವಾಗಿರುತ್ತದೆ. ಆದ್ದರಿಂದ 5Gಯಿಂದ ಪೂರ್ಣ ಮೌಲ್ಯವನ್ನು ಪಡೆಯಲು, ನಿರ್ವಾಹಕರು ಹೆಚ್ಚಿನ ಫ್ರೀಕ್ವೆನ್ಸಿಗಳಲ್ಲಿ ಕಾರ್ಯನಿರ್ವಹಿಸಲು ಬಯಸುತ್ತಾರೆ. ಹರಾಜಾದ ಕೆಲವು ಸಿ ಬ್ಯಾಂಡ್ ಸ್ಪೆಕ್ಟ್ರಮ್ ಅನ್ನು ಉಪಗ್ರಹ ರೇಡಿಯೊಗೆ ಬಳಸಲಾಗಿದೆ. ಆದರೆ 5Gಗೆ ಪರಿವರ್ತನೆಯಾಗುವುದು ಎಂದರೆ ಹೆಚ್ಚಿನ ಟ್ರಾಫಿಕ್ ಇರುತ್ತದೆ ಎಂದು ಹೇಳಲಾಗಿದೆ.

ಈ ಬಗ್ಗೆ ಟೆಲಿಕಾಂ ಕಂಪನಿಗಳು ಏನು ಹೇಳುತ್ತವೆ..?

ಆದರೆ, ಈ ಎಚ್ಚರಿಕೆ, ವಾದಗಳನ್ನು ತಳ್ಳಿಹಾಕಿದ ವೆರಿಝೋನ್ ಮತ್ತು AT&Tಗಳು C ಬ್ಯಾಂಡ್ 5G ಅನ್ನು ಸುಮಾರು 40 ದೇಶಗಳಲ್ಲಿ ವಿಮಾನಯಾನ ಹಸ್ತಕ್ಷೇಪ ಸಮಸ್ಯೆಗಳಿಲ್ಲದೆ ನಿಯೋಜಿಸಲಾಗಿದೆ ಎಂದು ಹೇಳಿದ್ದಾರೆ.ಆದರೂ, ಹಸ್ತಕ್ಷೇಪದ ಅಪಾಯಗಳನ್ನು ಕಡಿಮೆ ಮಾಡಲು 6 ತಿಂಗಳ ಕಾಲ ಫ್ರಾನ್ಸ್‌ನಲ್ಲಿ ಬಳಸಿದಂತೆಯೇ ಯುನೈಟೆಡ್ ಸ್ಟೇಟ್ಸ್‌ನ ಸುಮಾರು 50 ವಿಮಾನ ನಿಲ್ದಾಣಗಳ ಬಫರ್ ವಲಯಗಳನ್ನಾಗಿ ಮಾಡಲು ವೆರಿಝೋನ್ ಮತ್ತು AT&T ಒಪ್ಪಿಕೊಂಡಿದ್ದಾರೆ.

ಬೇರೆ ಕಡೆ ಏಕೆ ಈ ಸಮಸ್ಯೆ ಇಲ್ಲ..?

2019ರಲ್ಲಿ ಯುರೋಪಿಯನ್ ಯೂನಿಯನ್ 3.4-3.8 GHz ವ್ಯಾಪ್ತಿಯಲ್ಲಿ ಮಧ್ಯಮ ಶ್ರೇಣಿಯ 5G ಫ್ರೀಕ್ವೆನ್ಸಿಗಳಿಗೆ ಮಾನದಂಡಗಳನ್ನು ನಿಗದಿಪಡಿಸಿದೆ. ಇದು ಯುನೈಟೆಡ್ ಸ್ಟೇಟ್ಸ್‌ನಲ್ಲಿ ಹೊರತರಲಿರುವ ಸೇವೆಗಿಂತ ಕಡಿಮೆ ಫ್ರೀಕ್ವೆನ್ಸಿಯಾಗಿದೆ. ಬ್ಯಾಂಡ್‌ವಿಡ್ತ್ ಅನ್ನು ಯುರೋಪ್‌ನಲ್ಲಿ ಹರಾಜು ಮಾಡಲಾಗಿದೆ ಮತ್ತು ಇದುವರೆಗೆ ಯಾವುದೇ ಸಮಸ್ಯೆಯಿಲ್ಲದೆ ಯುರೋಪಿಯನ್‌ ಬ್ಲಾಕ್‌ನ 27 ಸದಸ್ಯ ರಾಷ್ಟ್ರಗಳಲ್ಲಿ ಬಳಕೆಯಲ್ಲಿದೆ.

ಈ ಮಧ್ಯೆ, 31 ರಾಜ್ಯಗಳನ್ನು ನೋಡಿಕೊಳ್ಳುವ ಯುರೋಪಿಯನ್ ಯೂನಿಯನ್ ಏವಿಯೇಷನ್ ​​ಸೇಫ್ಟಿ ಏಜೆನ್ಸಿ (European Union Aviation Safety Agency)(EASA), ಈ ಸಮಸ್ಯೆಯು US ವಾಯುಪ್ರದೇಶಕ್ಕೆ ನಿರ್ದಿಷ್ಟವಾಗಿದೆ ಎಂದು ಡಿಸೆಂಬರ್ 17 ರಂದು ಹೇಳಿದೆ.ಹಾಗೂ "ಈ ಹಂತದಲ್ಲಿ, ಯುರೋಪ್‌ನಲ್ಲಿ ಅಸುರಕ್ಷಿತ ಹಸ್ತಕ್ಷೇಪದ ಯಾವುದೇ ಅಪಾಯವನ್ನು ಗುರುತಿಸಲಾಗಿಲ್ಲ" ಎಂದು ಅದು ಸ್ಪಷ್ಟವಾಗಿ ಹೇಳಿದೆ.

ಇನ್ನು, ಫ್ರಾನ್ಸ್ ಬಳಸುವ ಸ್ಪೆಕ್ಟ್ರಮ್ 3.6-3.8 GHz ಆಗಿದ್ದು, ಇದು ಯುನೈಟೆಡ್ ಸ್ಟೇಟ್ಸ್‌ನಲ್ಲಿ ಆಲ್ಟಿಮೀಟರ್‌ಗಳಿಗೆ ಬಳಸಲಾಗುವ 4.2-4.4 GHz ಸ್ಪೆಕ್ಟ್ರಮ್‌ಗಿಂತ ಕಡಿಮೆ ಮತ್ತು 5G ಗಾಗಿ ಫ್ರಾನ್ಸ್‌ನ ಶಕ್ತಿಯ ಮಟ್ಟವು ಯುನೈಟೆಡ್ ಸ್ಟೇಟ್ಸ್‌ನಲ್ಲಿ ಅಧಿಕೃತವಾಗಿರುವುದಕ್ಕಿಂತ ಕಡಿಮೆಯಾಗಿದೆ ಎಂಬುದನ್ನು FAA ಅಧಿಕಾರಿಗಳು ಒತ್ತಿ ಹೇಳಿದ್ದಾರೆ. ಅಲ್ಲದೆ, ವೆರಿಝೋನ್ ಸಹ ಹಲವಾರು ವರ್ಷಗಳಿಂದ ಉನ್ನತ ಬ್ಯಾಂಡ್‌ಗೆ ಹತ್ತಿರವಿರುವ ಸ್ಪೆಕ್ಟ್ರಮ್ ಅನ್ನು ಬಳಸುವುದಿಲ್ಲ ಎಂದೂ ಸ್ಪಷ್ಟನೆ ನೀಡಿದೆ.

ಸಂವಹನ ವೈರ್‌ಲೆಸ್ ಸ್ಟೇಷನ್‌

ಇನ್ನು, ಅಮೆರಿಕ ಹಾಗೂ ಯುರೋಪ್‌ ಹೊರತುಪಡಿಸಿ ಏಷ್ಯಾದ ಕೆಲ ದೇಶಗಳಲ್ಲೂ ಈಗಾಗಲೇ 5G ಸೇವೆ ಬಳಕೆಯಲ್ಲಿದೆ. ಉದಾಹರಣೆಗೆ ದಕ್ಷಿಣ ಕೊರಿಯಾದಲ್ಲಿ, 5G ಮೊಬೈಲ್ ಸಂವಹನ ಫ್ರೀಕ್ವೆನ್ಸಿಯು 3.42-3.7 GHz ಬ್ಯಾಂಡ್ ಆಗಿದೆ ಮತ್ತು ಏಪ್ರಿಲ್ 2019ರಲ್ಲಿ 5Gಯ ​​ವಾಣಿಜ್ಯೀಕರಣದ ನಂತರ ಅಂದರೆ ಸುಮಾರು ಎರಡೂವರೆ ವರ್ಷಗಳಾದರೂ, ರೇಡಿಯೋ ತರಂಗದೊಂದಿಗೆ ಯಾವುದೇ ಹಸ್ತಕ್ಷೇಪದ ವರದಿಯಾಗಿಲ್ಲ ಎಂದೂ ಹೇಳಲಾಗಿದೆ.

ಇದನ್ನೂ ಓದಿ: Omicron Effect: ಶೇ. 20 ರಷ್ಟು ವಿಮಾನ ಹಾರಾಟ ರದ್ದುಗೊಳಿಸಿದ ಇಂಡಿಗೋ

ಪ್ರಸ್ತುತ, 5G ಮೊಬೈಲ್ ಸಂವಹನ ವೈರ್‌ಲೆಸ್ ಸ್ಟೇಷನ್‌ಗಳು ದಕ್ಷಿಣ ಕೊರಿಯಾ ವಿಮಾನ ನಿಲ್ದಾಣಗಳ ಬಳಿಯೂ ಕಾರ್ಯನಿರ್ವಹಿಸುತ್ತಿದ್ದು, ಆದರೆ ಯಾವುದೇ ಸಮಸ್ಯೆ ಉಂಟಾಗಿರುವ ಬಗ್ಗೆ ವರದಿಗಳಿಲ್ಲ. ಯುರೋಪ್ ಮತ್ತು ಏಷ್ಯಾದಾದ್ಯಂತ ಸುಮಾರು 40 ದೇಶಗಳಲ್ಲಿ ವೈರ್‌ಲೆಸ್ ಕ್ಯಾರಿಯರ್‌ಗಳು ಈಗ 5Gಗಾಗಿ C ಬ್ಯಾಂಡ್ ಅನ್ನು ಬಳಸುತ್ತವೆ, ಅದೇ ಅಂತಾರಾಷ್ಟ್ರೀಯವಾಗಿ ಗೊತ್ತುಪಡಿಸಿದ 4.2-4.4 GHz ಬ್ಯಾಂಡ್‌ನಲ್ಲಿ ಕಾರ್ಯನಿರ್ವಹಿಸುವ ರೇಡಿಯೋ ಆಲ್ಟಿಮೀಟರ್‌ಗಳ ಮೇಲೆ ಯಾವುದೇ ವರದಿ ಪರಿಣಾಮಗಳಿಲ್ಲ" ಎಂದು US ವೈರ್‌ಲೆಸ್ ವ್ಯಾಪಾರ ಗುಂಪು CTIA ಸಹ ತಿಳಿಸಿದೆ.

ಫೆಡರಲ್ ಕಮ್ಯುನಿಕೇಷನ್ಸ್ ಕಮಿಷನ್‌ಗೆ ಫೈಲಿಂಗ್‌ ಮಾಡುವಾಗ CTIA ಈ ಮಾಹಿತಿ ನೀಡಿದೆ. ಅಮೆರಿಕದಲ್ಲಿ ಈ ಆತಂಕಗಳ ನಡುವೆಯೇ ಭಾರತದಲ್ಲಿ ಈ ವರ್ಷ 5G ಟೆಲಿಕಾಂ ಸೇವೆ ಆರಂಭವಾಗುತ್ತಿರುವುದು ಸಹ ಪ್ರಮುಖವಾದ ಅಂಶವಾಗಿದೆ. ಭಾರತದಲ್ಲೂ ಈ ರೀತಿಯ ವಾದ, ಎಚ್ಚರಿಕೆಗಳು ಕೇಳಿಬರುತ್ತದೆಯೇ.

ಇದು ಈಗಾಗಲೇ ನಷ್ಟದ ಹಾದಿಯಲ್ಲಿರುವ ವಾಯುಯಾನ ಕ್ಷೇತ್ರದ ಮೇಲೆ ನಮ್ಮ ದೇಶದಲ್ಲಿ ಎಷ್ಟರ ಮಟ್ಟಿಗೆ ಪರಿಣಾಮ ಬೀರಲಿದೆ ಎಂಬ ಬಗ್ಗೆ ಕಾದುನೋಡಬೇಕಾಗಿದೆ. ಅಲ್ಲದೆ, ಈ ನಿಟ್ಟಿನಲ್ಲಿ ಮೋದಿ ಸರ್ಕಾರ ಯಾವ ರೀತಿಯ ಕ್ರಮಗಳನ್ನು ಕೈಗೊಳ್ಳಲಿದೆಯೋ ಎಂಬುದು ಸಹ ಗಮನಹರಿಸಬೇಕಾದ ವಿಚಾರವಾಗಿದೆ.
Published by:vanithasanjevani vanithasanjevani
First published: