Education: ಸಾಧನೆಗೆ ಅಡ್ಡಿಯಾಗದ ಅಂಗವೈಕಲ್ಯ! ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸುವುದೇ ಉದ್ಯಮಿಯ ಉದ್ದೇಶ

ಕೆಲವರಿಗೆ ಸಕಲ ಸೌಲಭ್ಯಗಳಿದ್ದರೂ ಸಹ ಸಾಧನೆ ಎನ್ನುವುದು ಅವರಿಂದ ತುಂಬಾನೇ ದೂರವಿರುತ್ತದೆ, ಅದೇ ಇನ್ನೂ ಕೆಲವರಿಗೆ ಯಾವುದೇ ಸೌಲಭ್ಯಗಳು ಇಲ್ಲದೆ ಹೋದರೂ, ಅವರಲ್ಲಿರುವ ಆತ್ಮವಿಶ್ವಾಸ ಮತ್ತು ಛಲ ಅವರನ್ನು ದೊಡ್ಡ ಸಾಧಕರನ್ನಾಗಿ ಮಾಡುತ್ತವೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಇದಕ್ಕೆ ಸಾಕ್ಷಿಯೇ ಈ ಸ್ಟೋರಿ..

ಅಜಯ್ ಗುಪ್ತಾ

ಅಜಯ್ ಗುಪ್ತಾ

  • Share this:
ಕೆಲವರಿಗೆ ಸಕಲ ಸೌಲಭ್ಯಗಳಿದ್ದರೂ ಸಹ ಸಾಧನೆ (achievement) ಎನ್ನುವುದು ಅವರಿಂದ ತುಂಬಾನೇ ದೂರವಿರುತ್ತದೆ, ಅದೇ ಇನ್ನೂ ಕೆಲವರಿಗೆ ಯಾವುದೇ ಸೌಲಭ್ಯಗಳು (Facility) ಇಲ್ಲದೆ ಹೋದರೂ, ಅವರಲ್ಲಿರುವ ಆತ್ಮವಿಶ್ವಾಸ ಮತ್ತು ಛಲ ಅವರನ್ನು ದೊಡ್ಡ ಸಾಧಕರನ್ನಾಗಿ ಮಾಡುತ್ತವೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಹೀಗೆ ಕೇವಲ 9 ತಿಂಗಳ ಮಗುವಾಗಿದ್ದಾಗ ಪೋಲಿಯೋ (Polio) ಇರುವುದು ಪತ್ತೆಯಾಗುತ್ತದೆ. ನಂತರ ಆ ಮಗು ಬೆಳೆಯುತ್ತಿದ್ದಂತೆ ಪೋಲಿಯೋ ಇವರ ಎರಡು ಕಾಲುಗಳನ್ನು ಮತ್ತು ಎಡಗೈಯನ್ನು ಪಾರ್ಶ್ವವಾಯುವಿಗೆ ದೂಡುತ್ತೆ. ಇಷ್ಟೆಲ್ಲಾ ಸಮಸ್ಯೆಗಳು ಎದುರಾದರೂ ಸಹ ಏನಾದರೊಂದು ಮಾಡಬೇಕೆಂಬ ಅವರ ಛಲ ಇಂದು ಭಾರತದಾದ್ಯಂತ ಸಣ್ಣ ಸಣ್ಣ ನಗರಗಳಲ್ಲಿ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ (quality education) ಪಡೆಯುವಂತೆ ಸಹಾಯವಾಗಿದೆ ನೋಡಿ.

ಅಜಯ್ ಗುಪ್ತಾ ಅವರ ಬಾಲ್ಯದ ಜೀವನ ಹೇಗಿತ್ತು?
ಇಲ್ಲಿ ನಾವು ಮಾತನಾಡುತ್ತಿರುವುದು ಅಜಯ್ ಗುಪ್ತಾ ಅವರ ಬಗ್ಗೆ ಎಂದರೆ ಬಹುತೇಕರಿಗೆ ಯಾರಿವರು ಅಂತ ಅನ್ನಿಸಬಹುದು. ಅದೇ ಇವರ ಶಾಲೆಯ ಹೆಸರು ಹೇಳಿದರೆ ಎಲ್ಲರಿಗೂ ಅರ್ಥವಾಗುತ್ತದೆ. ‘ಬಚಪನ್’ ಶಾಲೆ ಅಂತ ಹೇಳಿದರೆ ಅಜಯ್ ಗುಪ್ತಾ ಅವರು ಯಾರು ಅನ್ನೋದು ಅರ್ಥವಾಗುತ್ತದೆ. ಇಂದು ಅವರು ಶೇಕಡಾ 70 ರಷ್ಟು ಲೋಕೋಮೋಟಿವ್ ಅಂಗವೈಕಲ್ಯವನ್ನು ಹೊಂದಿದ್ದಾರೆ. ಅವರು ಬಾಲ್ಯದಲ್ಲಿ ಅನೇಕ ಹಿನ್ನಡೆಗಳನ್ನು ಎದುರಿಸಿದರು, ಅವರು ಆರು ವರ್ಷ ವಯಸ್ಸಿನವರೆಗೆ ಶಾಲೆಗೆ ಹಾಜರಾಗಲು ಸಾಧ್ಯವಾಗಲಿಲ್ಲ, ಏಕೆಂದರೆ ಆಗ ಯಾವುದೇ ಸೌಲಭ್ಯಗಳು ಇರಲಿಲ್ಲ.

ಅವರ ಒಡಹುಟ್ಟಿದವರು ದೂರದಲ್ಲಿರುವ ಉತ್ತಮ ಶಾಲೆಗಳಿಗೆ ಹೋಗುತ್ತಿದ್ದಾಗ ಅವರು ಹತ್ತಿರದ ಸರ್ಕಾರಿ ಶಾಲೆಗೆ ಸೇರಬೇಕಾಯಿತು. ಅವರನ್ನು ನೋಡಿಕೊಳ್ಳಲು ಮನೆಯಲ್ಲಿ ಒಬ್ಬ ಸಹಾಯಕನೂ ಇದ್ದನು, ಅವನು ಇವರನ್ನು ಶಾಲೆಗೆ ಕರೆದೊಯ್ಯುತ್ತಿದ್ದನು. ಅದೇ ಸಹಾಯಕನು ಅವರಿಗೆ ಶಾಲೆಯಲ್ಲಿನ ವಾಶ್ ರೂಮ್ ಗೆ ಹೋಗಲು ಸಹ ಸಹಾಯ ಮಾಡುತ್ತಿದ್ದನು.

"ಇದು ಏಳು ವರ್ಷಗಳ ಕಾಲ ಹೀಗೆಯೇ ಮುಂದುವರಿಯಿತು. ಅದೃಷ್ಟವಶಾತ್, ನನ್ನ ಸಹಪಾಠಿಗಳು ನನಗೆ ಸಹಾಯ ಮಾಡಿದರು. ಕೆಲವೊಮ್ಮೆ, ಯಾರಾದರೂ ಮನೆಯಿಂದ ನನ್ನನ್ನು ಕರೆದೊಯ್ಯಲು ತಡವಾಗಿ ಬಂದಾಗ, ನನ್ನ ಸ್ನೇಹಿತರು ನನ್ನನ್ನು ಹೊರಗೆ ಕರೆದೊಯ್ಯುತ್ತಿದ್ದರು ಮತ್ತು ನನ್ನೊಂದಿಗೆ ಕಾಯುತ್ತಿದ್ದರು. ನಾನು ಬೆಳೆಯಲು ಪ್ರಾರಂಭಿಸಿದಾಗ, ನನ್ನನ್ನು ಎತ್ತುವುದು ಯಾರಿಗಾದರೂ ಕಷ್ಟಕರವಾಗಿತ್ತು. ಆದ್ದರಿಂದ ನನಗೆ 13 ವರ್ಷವಾದಾಗ, ನಾನು ಕ್ಯಾಲಿಪರ್ ಗಳು ಮತ್ತು ಊರುಗೋಲುಗಳನ್ನು ಬಳಸಲು ಪ್ರಾರಂಭಿಸಿದೆ ಮತ್ತು ಅವುಗಳನ್ನು 33 ವರ್ಷಗಳವರೆಗೆ ಬಳಸಿದೆ" ಎಂದು 52 ವರ್ಷದ ಅವರು ತಿಳಿಸಿದರು.

12ನೇ ತರಗತಿಯನ್ನು ಮುಗಿಸಿದ ನಂತರ, ಅಜಯ್ ಗೆ ಕುಟುಂಬದ ಬೆಂಬಲ ಮತ್ತು ಓದುವ ಪ್ರಚೋದನೆಯ ಹೊರತಾಗಿಯೂ ಕಾಲೇಜಿಗೆ ಹೋಗಲು ಸಾಧ್ಯವಾಗಲಿಲ್ಲ. "ಇಂದಿಗೂ, ಶಾಲಾ ಕಾಲೇಜುಗಳು ಅಂಗವಿಕಲರಿಗೆ ಲಭ್ಯವಿಲ್ಲ. ಮೂರು ದಶಕಗಳ ಹಿಂದಿನ ಪರಿಸ್ಥಿತಿಯನ್ನು ಊಹಿಸಿಕೊಳ್ಳಿ. ಶಾಲೆಯಲ್ಲಿ, ಸಹಾಯಕರು ನಮ್ಮೊಂದಿಗೆ ಬರಲು ಅವಕಾಶ ನೀಡುವಂತೆ ನಾವು ಅಧಿಕಾರಿಗಳನ್ನು ವಿನಂತಿಸಬಹುದಿತ್ತು. ಆದ್ದರಿಂದ, ನಾನು ನನ್ನ ಪದವಿಯನ್ನು ಮನೆಯಲ್ಲಿಯೇ ಕೂತು ಓದಿಕೊಂಡು ಹೋಗಿ ಪರೀಕ್ಷೆ ಬರೆದು ಮುಗಿಸಿದೆ" ಎಂದು ಅಜಯ್ ಹೇಳುತ್ತಾರೆ.

ಅಡೆತಡೆಗಳು ಅವರ ಪ್ರಗತಿಗೆ ಅಡ್ಡಿಯಾಗಲು ಅಜಯ್ ಬಿಡಲಿಲ್ಲ
ಅಜಯ್ ಅವರು ತಮ್ಮ ಸಮಯವನ್ನು ಪೂರ್ಣವಾಗಿ ಬಳಸಿಕೊಂಡರು ಮತ್ತು 16ನೇ ವಯಸ್ಸಿನಲ್ಲಿ ಷೇರುಗಳಲ್ಲಿ ವಹಿವಾಟು ಪ್ರಾರಂಭಿಸಿದರು. ಅವರು ತಮ್ಮ ಉದ್ಯಮಶೀಲತೆಯ ಮನೋಭಾವವನ್ನು ಬೆಳೆಸಿಕೊಳ್ಳಲು ತಮ್ಮ 9ನೇ ತರಗತಿಯ ಕಾಮರ್ಸ್ ಶಿಕ್ಷಕರೇ ಕಾರಣ ಎಂದು ಹೇಳುತ್ತಾರೆ. "ನಮ್ಮ ಮೊದಲ ದರ್ಜೆಯ ವಾಣಿಜ್ಯದಲ್ಲಿ, ನಮ್ಮ ಶಿಕ್ಷಕರು ಉತ್ತಮ ಉದ್ಯಮಿಯಾಗಲು ಏನು ಅಗತ್ಯವಿದೆ ಎಂಬುದರ ಬಗ್ಗೆ ಹೇಳಿದರು, ಅದರಲ್ಲಿ ಅವರು ಅಪಾಯವನ್ನು ತೆಗೆದುಕೊಳ್ಳುವ ಸಾಮರ್ಥ್ಯದ ಬಗ್ಗೆ ಮಾತನಾಡಿದರು. ಆ ದಿನವೇ ನಾನು ಒಬ್ಬ ಉದ್ಯಮಿಯಾಗಬೇಕೆಂದು ನಿರ್ಧರಿಸಿದೆ” ಎಂದು ಅಜಯ್ ಹೇಳುತ್ತಾರೆ.

ಇದನ್ನೂ ಓದಿ:  Explained: ಅಷ್ಟೊಂದು ಹಿಂಸೆಯಾಗ್ತಿದ್ರೂ ವಿಕಲಚೇತನ ಮಹಿಳೆಯರು ಎಲ್ಲಾ ನೋವು ಸಹಿಸಿಕೊಳ್ತಿರೋದೇಕೆ?

ಪದವಿಯನ್ನು ಮಾಡುತ್ತಿರುವಾಗ ಅವರು ತಮ್ಮ ಕುಟುಂಬ ವ್ಯವಹಾರಗಳಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು, ಅದರಲ್ಲಿ ಸಿಹಿ ತಿಂಡಿ ಅಂಗಡಿ ಮತ್ತು ರಫ್ತು ವ್ಯವಹಾರವೂ ಸೇರಿತ್ತು. ತಮ್ಮ 24ನೇ ವಯಸ್ಸಿನಲ್ಲಿ, ಅವರು ಕೆಲವು ಚಿಟ್ ಫಂಡ್ ಕಂಪನಿಗಳು, ಕಂಪ್ಯೂಟರ್ ಶಿಕ್ಷಣ ಕೇಂದ್ರಗಳು ಮುಂತಾದವುಗಳನ್ನು ಒಳಗೊಂಡಂತೆ ಯಶಸ್ವಿ ಉದ್ಯಮಗಳನ್ನು ಶುರು ಮಾಡಿದರು. 2002 ರಲ್ಲಿ ಅಜಯ್ ಜೀವನದಲ್ಲಿ ಏನು ಮಾಡಬೇಕು ಎಂಬುದನ್ನು ಕಂಡುಕೊಂಡರು.

ಪ್ಲೇ ಸ್ಕೂಲ್ ಶಿಕ್ಷಣವನ್ನು ಸುಧಾರಿಸುವುದು
ಪ್ಲೇ ಸ್ಕೂಲ್ ಮಟ್ಟದಲ್ಲಿ ಗುಣಮಟ್ಟದ ಶಿಕ್ಷಣವನ್ನು ಪಡೆಯಲು ಅತ್ಯಂತ ಶ್ರೀಮಂತರಿಗೆ ಮಾತ್ರ ಸಾಧ್ಯವಾಗುತ್ತದೆ ಎಂದು ಅವರು ಅರಿತುಕೊಂಡರು. "ನನಗೆ ಪ್ಲೇ ಸ್ಕೂಲ್ ಗೆ ಹಾಜರಾಗಲು ಸಾಧ್ಯವಾಗಲಿಲ್ಲ. ಹಲವಾರು ದಶಕಗಳ ನಂತರ, ನಾನು ನನ್ನ ಮಕ್ಕಳನ್ನು ಪ್ಲೇ ಸ್ಕೂಲಿಗೆ ಸೇರಿಸಿದಾಗ, ಶಿಕ್ಷಣದ ಗುಣಮಟ್ಟದ ಬಗ್ಗೆ ನನಗೆ ಅಷ್ಟೊಂದು ಸಮಾಧಾನ ಇರಲಿಲ್ಲ. ನಾನು ಯಾವಾಗಲೂ ಶಿಕ್ಷಣ ಕ್ಷೇತ್ರದಲ್ಲಿ ಏನನ್ನಾದರೂ ಮಾಡಬೇಕೆಂದು ಬಯಸುತ್ತಿದ್ದೆ. ಅಂತಿಮವಾಗಿ, ನಾನು 2002 ರಲ್ಲಿ ನನ್ನ ಯಶಸ್ಸನ್ನು ಪಡೆದೆ" ಎಂದು ಅಜಯ್ ಹೇಳುತ್ತಾರೆ. ಅವರು 2002 ರಲ್ಲಿ ಪ್ಲೇ ಸ್ಕೂಲ್ ನಿರ್ಮಿಸಲು ಅಡಿಪಾಯವನ್ನು ಪ್ರಾರಂಭಿಸಿದರು ಮತ್ತು ಅದರ ಮೇಲೆ ಎರಡು ವರ್ಷಗಳ ಕಾಲ ಸತತವಾಗಿ ಕೆಲಸ ಮಾಡಿದರು. ಶಿಕ್ಷಣ ಕ್ಷೇತ್ರದಲ್ಲಿ ಸಾಧಿಸಬೇಕಾದದ್ದು ತುಂಬಾ ಇದೆ ಅಂತ ಅವರು ಅರ್ಥ ಮಾಡಿಕೊಂಡರು.

"ಪ್ಲೇ ಸ್ಕೂಲ್ ಉದ್ಯಮವು ಆಗ ಅಷ್ಟೊಂದು ಸ್ಥಾಪಿತವಾಗಿರಲಿಲ್ಲ, ಯಾವುದೇ ಪಠ್ಯಕ್ರಮವಿರಲಿಲ್ಲ. ನನ್ನ ಮಗಳ ಪ್ರಿ ಸ್ಕೂಲ್ ಪುಸ್ತಕದ ಸೆಟ್ ಅನ್ನು ನೋಡಿದಾಗ, ನನಗೆ ಮೋಸವಾಗಿದೆ ಎಂದು ಅನಿಸಿತು. ಕೇವಲ ಒಂದು ಅಥವಾ ಎರಡು ಪುಸ್ತಕಗಳು ಮಾತ್ರ ಇದ್ದವು. ಇದು ಎರಡು ವರ್ಷಗಳ ಕಾಲ ಸಂಶೋಧನೆ ಮಾಡಲು ಮತ್ತು ಪ್ಲೇ ಸ್ಕೂಲ್ ಶಿಕ್ಷಣವನ್ನು ಹೆಚ್ಚು ವಿಶ್ವಾಸಾರ್ಹ ಮತ್ತು ಸಮರ್ಥನೀಯವಾಗಿಸಲು ನನ್ನನ್ನು ಪ್ರೇರೇಪಿಸಿತು. ನಂತರ ನಾನು ಪಠ್ಯಕ್ರಮ, ವಿಷಯ ಮತ್ತು ಶೈಕ್ಷಣಿಕ ಆಟಿಕೆಗಳನ್ನು ಅಭಿವೃದ್ಧಿಪಡಿಸಿದೆ. ನಾವು ಶಿಕ್ಷಕರ ತರಬೇತಿಯನ್ನು ಸಹ ನಡೆಸಿದ್ದೇವೆ ಮತ್ತು 2004 ರಲ್ಲಿ ಪ್ರಾರಂಭಿಸಲು ಸಿದ್ಧರಾಗಿದ್ದೆವು" ಎಂದು ಅವರು ಹೇಳುತ್ತಾರೆ.

ಇದನ್ನೂ ಓದಿ:  Online Classes: ಮತ್ತೆ ದೇಶಾದ್ಯಂತ ಶಾಲೆಗಳಲ್ಲಿ ಆನ್​​ಲೈನ್ ಕ್ಲಾಸ್​? ಕಾರಣ ಏನು ಗೊತ್ತಾ

ಆದಾಗ್ಯೂ, ಅಜಯ್ ಅವರು ಫ್ರಾಂಚೈಸಿ ನೆಟ್ವರ್ಕ್ ಅನ್ನು ಸ್ಥಾಪಿಸಲು ಬಯಸಿದ್ದರಿಂದ ಪ್ಲೇ ಸ್ಕೂಲ್ ಗಳನ್ನು ಸ್ಥಾಪಿಸುವಲ್ಲಿ ಮೊದಲಿಗೆ ಕೆಲವು ಹಿನ್ನಡೆಗಳನ್ನು ಸಹ ಎದುರಿಸಿದರು. "ನನ್ನ ಮನಸ್ಸಿನಲ್ಲಿ ಸ್ಪಷ್ಟವಾದ ವ್ಯವಹಾರ ಮಾದರಿ ಇತ್ತು. ನಾನು ಒಂದು ಅಥವಾ ಎರಡು ಪ್ಲೇ ಸ್ಕೂಲ್ ಗಳನ್ನು ಸ್ಥಾಪಿಸಲು ಬಯಸಲಿಲ್ಲ, ನಾನು ದೇಶಾದ್ಯಂತ ಇದನ್ನು ನಿರ್ಮಿಸಲು ಬಯಸಿದ್ದೆ. ನಮ್ಮ ಫ್ರ್ಯಾಂಚೈಸ್ ಅನ್ನು ತೆಗೆದುಕೊಳ್ಳುವ ಬಗ್ಗೆ ಜನರು ಭಯಭೀತರಾಗಿದ್ದರಿಂದ ಪ್ರಾರಂಭವು ತುಂಬಾ ಕಠಿಣವಾಗಿತ್ತು. ನನ್ನ ಕುಟುಂಬ ಮತ್ತು ಸ್ನೇಹಿತರು ಸಹ ನನ್ನ ಯೋಜನೆ ತಪ್ಪಾಗಿದೆ ಎಂದು ಭಾವಿಸಿದ್ದರು. ಆದಾಗ್ಯೂ, ನಾವು ದೆಹಲಿ, ನಂತರ ಪಂಜಾಬ್ ನಲ್ಲಿ ಒಂದು ಶಾಲೆಯೊಂದಿಗೆ ಪ್ರಾರಂಭಿಸಿದ್ದೇವು ಮತ್ತು ಶಾಲೆಗಳು ಉತ್ತಮವಾಗಿ ಕಾರ್ಯನಿರ್ವಹಿಸಲು ಪ್ರಾರಂಭಿಸಿದ ನಂತರ, ನಾವು ಹಿಂತಿರುಗಿ ನೋಡಲಿಲ್ಲ" ಎಂದು ಅಜಯ್ ಹೇಳುತ್ತಾರೆ.

ಇಂದು, ಬಚಪನ್ ಪ್ಲೇ ಸ್ಕೂಲ್ ಗಳು ದೇಶಾದ್ಯಂತ ಪ್ರಸ್ತುತವಾಗಿವೆ, 1,100 ಫ್ರಾಂಚೈಸಿಗಳೊಂದಿಗೆ, ಸುಮಾರು ಒಂದು ಲಕ್ಷ ವಿದ್ಯಾರ್ಥಿಗಳಿಗೆ ಅಕ್ಷರ ಜ್ಞಾನವನ್ನು ನೀಡುತ್ತಿವೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಇದರೊಂದಿಗೆ, ಅವರು ಗುಣಮಟ್ಟದ ಶಿಕ್ಷಣವನ್ನು 2 ಮತ್ತು 3 ಟೈರ್ ನಗರಗಳಿಗೆ ತೆಗೆದುಕೊಂಡು ಹೋಗಿದ್ದಾರೆ ಎಂದು ಅಜಯ್ ಹೇಳುತ್ತಾರೆ.

ಪೋಷಕರು ‘ಬಚಪನ್’ ಬಗ್ಗೆ ಹೇಳುವುದೇನು?
ಬಚಪನ್ ಪ್ಲೇ ಸ್ಕೂಲುಗಳಲ್ಲಿ ಓದುತ್ತಿರುವ ಮಗುವಿನ ಪೋಷಕರಾದ ಉರ್ಮಿ ದೆಧಿಯಾ "ನನ್ನ ಇಬ್ಬರು ಮಕ್ಕಳ ನಡುವೆ 10 ವರ್ಷಗಳ ವಯಸ್ಸಿನ ಅಂತರವಿದೆ. ಸುಮಾರು 12 ವರ್ಷಗಳ ಹಿಂದೆ ನಾನು ನನ್ನ ಮಗನನ್ನು ಪ್ಲೇ ಸ್ಕೂಲಿಗೆ ಸೇರಿಸಿದಾಗ, ಶಿಕ್ಷಣದ ಗುಣಮಟ್ಟದ ಬಗ್ಗೆ ನನಗೆ ಅಸಮಾಧಾನವಿತ್ತು. ಒಂದೇ ಒಂದು ಪುಸ್ತಕವಿತ್ತು ಮತ್ತು ಅವನಿಗೆ ಗಣನೀಯವಾದ ಯಾವುದನ್ನೂ ಕಲಿಸುತ್ತಿರಲಿಲ್ಲ. ಎರಡು ವರ್ಷಗಳ ಹಿಂದೆ ನಾನು ನನ್ನ ಮಗಳನ್ನು ಬಚಪನ್ ಶಾಲೆಯಲ್ಲಿ ಸೇರಿಸಿದೆ ಮತ್ತು ಅವರ ಪಠ್ಯಕ್ರಮ, ಅವರು ಒದಗಿಸುವ ಪುಸ್ತಕಗಳು ಮತ್ತು ಆಟಿಕೆಗಳಲ್ಲಿನ ವ್ಯತ್ಯಾಸವನ್ನು ನಾನು ನೋಡುತ್ತಿದ್ದೇನೆ. ಇದು ವಿನೋದಮಯ ಮತ್ತು ಮಗುವಿನ ಬೆಳವಣಿಗೆಗೆ ತುಂಬಾ ಉಪಯುಕ್ತವಾಗಿದೆ" ಎಂದು ಹೇಳಿದರು.

ಅಂದಿನಿಂದ, ಅಜಯ್ ಅಕಾಡೆಮಿಕ್ ಹೈಟ್ಸ್ ಪಬ್ಲಿಕ್ ಶಾಲೆಯನ್ನು ಸಹ ಸ್ಥಾಪಿಸಿದ್ದಾರೆ, ಇದು 100ಕ್ಕೂ ಹೆಚ್ಚು ಫ್ರಾಂಚೈಸಿಗಳನ್ನು ಹೊಂದಿದೆ. ನಂತರ, ಅವರು ರಿಷಿಹುಡ್ ವಿಶ್ವವಿದ್ಯಾಲಯವನ್ನು ಸ್ಥಾಪಿಸುವ ಮೂಲಕ ಉನ್ನತ ಶಿಕ್ಷಣಕ್ಕೆ ಮುಂದಾದರು.

ಅಂಗವಿಕಲರನ್ನು ಸಬಲೀಕರಣಗೊಳಿಸುವುದು ಅಜಯ್ ಉದ್ದೇಶ
ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವಾಗ ಮತ್ತು ದೇಶಾದ್ಯಂತ ಪ್ರಯಾಣಿಸುವಾಗ, ಅಜಯ್ ಅವರ ಆರೋಗ್ಯ ತುಂಬಾನೇ ಹದಗೆಟ್ಟಿತ್ತು ಎಂದು ಹೇಳಬಹುದು.

ಊರುಗೋಲುಗಳು ಮತ್ತು ಕ್ಯಾಲಿಪರ್ ಗಳ ಮೇಲೆ 30 ವರ್ಷಗಳಿಗಿಂತ ಹೆಚ್ಚು ಕಾಲ ಕಳೆದ ನಂತರ, ಅವರ ಭುಜಗಳು ದುರ್ಬಲವಾಗಿದ್ದವು. ನಂತರ ಅವರ ಗಾಲಿ ಕುರ್ಚಿಗೆ ಸ್ಥಳಾಂತರಗೊಳ್ಳಬೇಕಾಯಿತು. ಆದರೆ ಅವರು ತನ್ನಂತಹವರಿಗೆ ಸಹಾಯ ಮಾಡಲು ಒಂದು ಅವಕಾಶವಾಗಿ ಬಳಸಿಕೊಂಡರು.

"ಸುಮಾರು ಆರು ವರ್ಷಗಳ ಹಿಂದೆ, ನನ್ನ ಭುಜಗಳು ದುರ್ಬಲಗೊಂಡಿದ್ದರಿಂದ ನಾನು ಗಾಲಿ ಕುರ್ಚಿಗೆ ಬದಲಾಯಿಸಬೇಕಾಯಿತು. ನಾನು ಗಾಲಿ ಕುರ್ಚಿಯನ್ನು ಬಳಸುತ್ತಿದ್ದಂತೆ, ಅದನ್ನು ಬಳಸುವ ಇತರರು ಎದುರಿಸುತ್ತಿರುವ ಸವಾಲುಗಳನ್ನು ನಾನು ಕಂಡುಕೊಂಡೆ. ಭಾರತವು ಅಂಗವಿಕಲರಿಗಾಗಿ ಸಾಕಷ್ಟು ಕೆಲಸ ಮಾಡುತ್ತಿದ್ದರೂ, ಇನ್ನೂ ಪ್ರಮುಖ ಅಂಶಗಳು ದೊಡ್ಡ ಸವಾಲಾಗಿಯೇ ಉಳಿದಿವೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಅಂಗವಿಕಲ ವಿದ್ಯಾರ್ಥಿಗಳನ್ನು ಸಬಲೀಕರಣಗೊಳಿಸಲು ನಾನು 'ಹಮ್ ಹೋಂಗೆ ಕಾಮಿಯಾಬ್' ಎಂಬ ಎನ್‌ಜಿಒವನ್ನು ಸಹ ಸ್ಥಾಪಿಸಿದೆ" ಎಂದು ಅಜಯ್ ಹೇಳುತ್ತಾರೆ.

ಇದನ್ನೂ ಓದಿ: Explained: ಭಾರತದಲ್ಲಿ ಮಗುವಿನ ಪಾಲನೆ-ಪೋಷಣೆ ದುಬಾರಿ ಏಕೆ? ಮಕ್ಕಳ ಶಿಕ್ಷಣಕ್ಕೆ ತಗಲುವ ವೆಚ್ಚ ಎಷ್ಟು ಗೊತ್ತಾ?

"ಅಂಗವಿಕಲ ಮಕ್ಕಳು ಅನೇಕ ಅಡೆತಡೆಗಳನ್ನು ಎದುರಿಸುತ್ತಾರೆ. ಕುಟುಂಬಗಳು ಅವರನ್ನು ಹೊರೆ ಎಂದು ಭಾವಿಸಬಾರದು ಮತ್ತು ಅವರನ್ನು ಪ್ರೋತ್ಸಾಹಿಸಬೇಕು. ಎರಡನೆಯದು ಸಾಮಾಜಿಕ ಸ್ವೀಕಾರ. ಮೂರನೆಯದು ಶಾಲೆಗಳು ಮತ್ತು ಕಾಲೇಜುಗಳಲ್ಲಿ ಪ್ರವೇಶಾವಕಾಶ. ನಮ್ಮ ರಿಷಿವುಡ್ ವಿಶ್ವವಿದ್ಯಾಲಯದಲ್ಲಿ ಇವರಿಗೆಲ್ಲಾ ಮುಕ್ತ ಅವಕಾಶವಿದೆ, ನಮಗೆ ಅಂತಹ ಹೆಚ್ಚಿನ ವಿಶ್ವವಿದ್ಯಾಲಯಗಳ ಅಗತ್ಯವಿದೆ" ಎಂದು ಅಜಯ್ ಹೇಳುತ್ತಾರೆ.

"ಸೂರ್ಯನು ಎಲ್ಲರ ಮೇಲೂ ಸಮಾನವಾಗಿ ಬೆಳಕು ಚೆಲ್ಲುತ್ತಾನೆ ಹಾಗಾಗಿ ಅವಕಾಶಗಳು ಪ್ರತಿಯೊಬ್ಬರಿಗೂ ಅಪರಿಮಿತವಾಗಿವೆ ಮತ್ತು ನೀವು ಅವುಗಳನ್ನು ಗುರುತಿಸಬೇಕು ಮತ್ತು ಪಡೆದುಕೊಳ್ಳಬೇಕು" ಎಂದು ಅಜಯ್ ಹೇಳುತ್ತಾರೆ.
Published by:Ashwini Prabhu
First published: