HOME » NEWS » Explained » DID YOU KNOW STUDY REVEALS WOMEN SMILE 62 TIMES A DAY WHILE MEN DO IT ONLY 8 TIMES STG HG

ಮಹಿಳೆಯರು ದಿನಕ್ಕೆ 62 ಬಾರಿ ನಗಾಡಿದರೆ ಪುರುಷರು ದಿನಕ್ಕೆ 8 ಬಾರಿ ನಗುತ್ತಾರೆ: ಸಂಶೋಧನೆ

ಇದೀಗ ಈ ನಗುವಿನ ಮೇಲೂ ಸಂಶೋಧನೆ ನಡೆದಿದ್ದು, ಒಂದು ಹೆಜ್ಜೆ ಮುಂದೆ ಹೋಗಿ ಮಹಿಳೆಯರು ದಿನಕ್ಕೆ 62 ಬಾರಿ ನಗಾಡಿದರೆ ಪುರುಷರು ದಿನಕ್ಕೆ 8 ಬಾರಿ ಮಾತ್ರ ನಗುತ್ತಾರೆ ಎಂದು ಹೊಸ ಅಧ್ಯಯನವೊಂದು ತಿಳಿಸಿದೆ.

news18-kannada
Updated:April 29, 2021, 3:42 PM IST
ಮಹಿಳೆಯರು ದಿನಕ್ಕೆ 62 ಬಾರಿ ನಗಾಡಿದರೆ ಪುರುಷರು ದಿನಕ್ಕೆ 8 ಬಾರಿ ನಗುತ್ತಾರೆ: ಸಂಶೋಧನೆ
Photo: Google
  • Share this:
ನಗುವೇ ಮುಖದ ಆಭರಣ. ನಗುತಲಿದ್ದರೆ ಆರೋಗ್ಯ. ನಗುವಿನಿಂದಲೇ ಪ್ರಪಂಚವನ್ನು ಗೆಲ್ಲಬಹುದು - ಇದು ಹಿಂದಿನಿಂದಲೂ ವಾಡಿಕೆಯಲ್ಲಿರುವ ಮಾತು. ಅದರಲ್ಲೂ ಮನೆಯಲ್ಲಿ ಹೆಂಗಳೆಯರು ನಗುತ್ತಲಿದ್ದರೆ ಐಶ್ವರ್ಯ ಸಮೃದ್ಧಿ ಎಂದು ಸಹ ಹೇಳುತ್ತಾರೆ. ಪ್ರಪಂಚದಲ್ಲಿರುವ ಪ್ರತಿಯೊಬ್ಬ ವ್ಯಕ್ತಿಗೂ ದುಃಖ, ನೋವು ಇದ್ದೇ ಇರುತ್ತದೆ. ಇದರಿಂದ ಹೊರಬಂದು ಖುಷಿಯಿಂದ ಬದುಕು ನಡೆಸಬೇಕು. ಆಗಲೇ ಬದುಕು ಸುಂದರವಾಗುತ್ತದೆ ಎಂದು ಹಿರಿಯರು ಹೇಳುತ್ತಾರೆ. ಅಂದರೆ ನಗು ಸದೃಢ ಮನಸ್ಸಿನ ಔಷಧಿಯಾಗಿ ಕಾರ್ಯನಿರ್ವಹಿಸುತ್ತದೆ ಎಂದೇ ಹೇಳಬಹುದು.

ಇದೀಗ ಈ ನಗುವಿನ ಮೇಲೂ ಸಂಶೋಧನೆ ನಡೆದಿದ್ದು, ಒಂದು ಹೆಜ್ಜೆ ಮುಂದೆ ಹೋಗಿ ಮಹಿಳೆಯರು ದಿನಕ್ಕೆ 62 ಬಾರಿ ನಗಾಡಿದರೆ ಪುರುಷರು ದಿನಕ್ಕೆ 8 ಬಾರಿ ಮಾತ್ರ ನಗುತ್ತಾರೆ ಎಂದು ಹೊಸ ಅಧ್ಯಯನವೊಂದು ತಿಳಿಸಿದೆ. ಅಂದರೆ ಮಹಿಳೆಯರು ಪುರುಷರಿಗಿಂತ ಹೆಚ್ಚು ಹಸನ್ಮುಖಿಗಳು ಎಂದು ಯೇಲ್‌ ಸಂಶೋಧನೆ ಹೇಳಿದೆ. ಬಾಲ್ಯಾವಸ್ಥೆಗಿಂತಲೂ ಯೌವ್ವನಾವಸ್ಥೆಯಲ್ಲಿ ಈ ವ್ಯತ್ಯಾಸ ಹೆಚ್ಚಾಗಿರುತ್ತದೆ. ಇನ್ನು ಹದಿಹರೆಯದಿಂದ ಪ್ರೌಢಾವಸ್ಥೆ ತಲುಪಿದಾಗ ಈ ವ್ಯತ್ಯಾಸ ಸಹಜವಾಗಿರುತ್ತದೆ ಎಂದು ಸಂಶೋಧನೆ ವಿವರಿಸಿದೆ.

ಇದಕ್ಕೆ ಹಲವಾರು ಕಾರಣಗಳಿವೆ. ಮಹಿಳೆಯರು ಸಹಜವಾಗಿ ಭಾವನಾ ಪ್ರಿಯರು, ಸಹಾನೂಭೂತಿ ಮತ್ತು ಅಭಿವ್ಯಕ್ತಿಶೀಲರಾಗಿರುತ್ತಾರೆ. ಮಹಿಳೆಯರು ಹುಟ್ಟುತ್ತಲೇ ಈ ಗುಣ ಮೈಗೂಡಿರುತ್ತದೆ. ಆದರೆ ಪುರುಷರಿಗೆ ಬರಬರುತ್ತಾ ನಗುವ ಗುಣವನ್ನು ಮೈಗೂಡಿಸಿಕೊಳ್ಳುತ್ತಾರೆ. ಮಹಿಳೆಯರು ಪುರುಷರಷ್ಟು ಸಾಮಾಜಿಕ ಪ್ರಾಬಲ್ಯವನ್ನು ಹೊಂದಿಲ್ಲದೇ ಇರುವುದರಿಂದ ಈ ಗುಣ ಸಹಜವಾಗಿ ಇರುತ್ತದೆ. ಇದರ ಜೊತೆಗೆ ಸಂಸ್ಕೃತಿ, ವಯಸ್ಸು, ಜನಾಂಗೀಯತೆಯು ಸಹ ನಗುವಿನಲ್ಲಿ ಮುಖ್ಯ ಪಾತ್ರ ವಹಿಸುತ್ತದೆ.

ಅಧಿಕಾರ, ಉದ್ಯೋಗ ಅಥವಾ ಸಾಮಾಜಿಕ ಪಾತ್ರಗಳಲ್ಲಿ ಒಂದೇ ರೀತಿಯ ಸ್ಥಾನಗಳನ್ನು ಪಡೆದಾಗ, ಎರಡೂ ಲಿಂಗಗಳ ನಡುವಿನ ವ್ಯತ್ಯಾಸವು ಕಣ್ಮರೆಯಾಗುತ್ತದೆ. ಆದರೂ, ಒಂದು ವ್ಯತ್ಯಾಸವಿದೆ. ಮಹಿಳೆಯರು ಹೆಚ್ಚು ಉದ್ವಿಗ್ನತೆಗೆ ಒಳಗಾದಾಗ ಅದನ್ನು ತಿಳಿಸಲು ಪ್ರಯತ್ನಿಸುವಾಗ, ನೋವಿನ ಭಾವನೆಗಳನ್ನು ಸುಗಮಗೊಳಿಸಲು, ಶಾಂತಿ ಮತ್ತು ಸಾಮರಸ್ಯವನ್ನು ಪುನಃಸ್ಥಾಪಿಸಲು ಹೆಚ್ಚು ನಗುತ್ತಾರೆ ಎಂದು ಸಂಶೋಧನೆಯು ಪತ್ತೆಹಚ್ಚಿದೆ.
ಮಹಿಳೆಯರು ಪುರುಷರಿಗಿಂತ ಅತಿ ಹೆಚ್ಚು ನಗಲು ನೂರಾರು ಕಾರಣಗಳಿವೆ. ಇದಕ್ಕೆ ಇದೇ ಕಾರಣ ಎಂದು ಕರಾರುವಕ್ಕಾಗಿ ಹೇಳಲು ಸಾಧ್ಯವಿಲ್ಲ.

ಮುಖ್ಯವಾಗಿ ಮಹಿಳೆಯರು ತಮ್ಮ ಅಥವಾ ಇತರೆ ಯಾವುದೇ ಭಾವನೆಗಳನ್ನು ಸುಗಮವಾಗಿ ಬೇಗನೆ ವ್ಯಕ್ತಪಡಿಸುತ್ತಾರೆ. ಹಾಗಾಗಿ ಮಹಿಳೆಯರನ್ನು ಸಾಮಾನ್ಯವಾಗಿ ಭಾವನಾ ಜೀವಿ ಎಂದೇ ಕರೆಯಲಾಗುತ್ತದೆ. ಇವರಲ್ಲಿ ಈ ಗುಣ ಸುತ್ತಮುತ್ತಲಿನ ವಾತಾವರಣ, ಬೆಳೆದು ಬಂದ ದಾರಿ, ಸಂಸ್ಕೃತಿ, ಸಂದರ್ಭ, ಸನ್ನಿವೇಶವನ್ನೂ ಒಳಗೊಂಡಿರುತ್ತದೆ. ಪುರುಷರು ತಮ್ಮ ಭಾವನೆಗಳನ್ನು ವ್ಯಕ್ತಪಡಿಸುವುದು, ಹಂಚಿಕೊಳ್ಳುವುದು ಅತೀ ವಿರಳ. ಅಕಸ್ಮಾತ್ ನಾವು ಅವರ ಭಾವನೆಗಳನ್ನು ಕೇಳಲು ಸಮರ್ಥ ವ್ಯಕ್ತಿಗಳು ಎಂದೆನಿಸಿದರೆ ತಮ್ಮಲ್ಲಿ ಉಂಟಾಗುವ ಭಾವನೆ, ತಳಮಳಗಳನ್ನು ಮುಕ್ತವಾಗಿ ಬಿಚ್ಚಿಡಲು ಹಿಂಜರಿಯುವುದಿಲ್ಲ ಹಾಗೂ ಹೆದರುವುದಿಲ್ಲ. ಒಟ್ಟಿನಲ್ಲಿ ಪುರುಷರು ಒಬ್ಬ ವ್ಯಕ್ತಿಯ ಮೇಲೆ ವಿಶ್ವಾಸ ಇಡುವವರೆಗೆ ಹೆಚ್ಚು ಸಾಮಾಜಿಕವಾಗಿ ಇರಲು ಹಿಂಜರಿಯುತ್ತಾರೆ. ಆದ್ದರಿಂದ ನಗೆಗಿಂತ ಕಿರುನಗೆಯೇ ಉತ್ತಮ ಎಂದು ನಂಬುತ್ತಾರೆ. ಒಟ್ಟಿನಲ್ಲಿ ಬದುಕು ಸುಂದರ ಯಾವಾಗಲೂ ನಗುತ್ತಲಿರಿ.
Published by: Harshith AS
First published: April 29, 2021, 3:41 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories