• ಹೋಂ
  • »
  • ನ್ಯೂಸ್
  • »
  • Explained
  • »
  • Rahul Gandhi: ಭಾರತ್ ಜೋಡೋ ಯಾತ್ರೆಯಿಂದ ರಾಹುಲ್‌ ಗಾಂಧಿಗೆ ಸಿಕ್ತಾ ಪೊಲಿಟಿಕಲ್ ಪವರ್?

Rahul Gandhi: ಭಾರತ್ ಜೋಡೋ ಯಾತ್ರೆಯಿಂದ ರಾಹುಲ್‌ ಗಾಂಧಿಗೆ ಸಿಕ್ತಾ ಪೊಲಿಟಿಕಲ್ ಪವರ್?

ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿ

ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿ

ಮೋದಿಗೆ ಸವಾಲ್ ಎಸೆದು ನಿಲ್ಲೋಕೆ ಕಳೆದೊಂದು ದಶಕದಿಂದಲೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹರಸಾಹಸ ಪಡ್ತಿದ್ದಾರೆ. ಆದ್ರೀಗ ರಾಹುಲ್ ಗಾಂಧಿಗೆ ಭಾರತ್ ಜೋಡೋ ಯಾತ್ರೆ ಸ್ವಲ್ಪ ಮಟ್ಟಿಗೆ ಶಕ್ತಿ ತಂದುಕೊಟ್ಟಿದೆ ಅಂತ ಹೇಳಲಾಗ್ತಿದೆ.

  • Share this:

ಪ್ರಧಾನಿ ನರೇಂದ್ರ ಮೋದಿಗೆ (PM Narendra Modi) ಮೋದಿಯೇ ಸಾಟಿ. ಮೋದಿಯನ್ನ ವಿಶ್ವನಾಯಕ (world leader) ಅಂತ ಬಿಜೆಪಿ ನಾಯಕರು (BJP Leaders) ಕೊಂಡಾಡುತ್ತಾರೆ. ಅದರೆ, ಮೋದಿಗೆ ಸವಾಲ್ ಎಸೆದು ನಿಲ್ಲೋಕೆ ಕಳೆದೊಂದು ದಶಕದಿಂದಲೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಹರಸಾಹಸ ಪಡ್ತಿದ್ದಾರೆ. ಈ ಹಾದಿಯಲ್ಲಿ ಅವರು ಪದೇ ಪದೇ ಸೋಲು ಅನುಭವಿಸಿರೋದು ಗೊತ್ತೇ ಇದೆ. ಆದ್ರೀಗ, ರಾಹುಲ್‌ ಗಾಂಧಿಗೆ ಭಾರತ್ ಜೋಡೋ ಯಾತ್ರೆ (Bharat Jodo Yatra) ಸ್ವಲ್ಪ ಮಟ್ಟಿಗೆ ಶಕ್ತಿ ತಂದುಕೊಟ್ಟಿದೆ ಅಂತ ಹೇಳಲಾಗ್ತಿದೆ. ಎನ್‌ಡಿಟಿವಿ ಹಾಗೂ ಲೋಕನೀತಿ ಸೆಂಟರ್ ನಡೆಸಿರುವ ಈ ಆಧ್ಯಯನದಲ್ಲಿ ರಾಹುಲ್ ಗಾಂಧಿಗೆ ಭಾರತ್ ಜೋಡೋ ಯಾತ್ರೆ ತಕ್ಕಮಟ್ಟಿಗೆ ಯಶಸ್ಸು ತಂದುಕೊಟ್ಟಿದೆ ಎನ್ನಲಾಗ್ತಿದೆ.


ರಾಹುಲ್ ನೇತೃತ್ವದಲ್ಲಿ ಭಾರತ್ ಜೋಡೋ


ಕಾಂಗ್ರೆಸ್‌ಗೆ ನವಚೈತನ್ಯ ನೀಡುವ ಸಲುವಾಗಿ, ಹಾಗೇ ದೇಶದಲ್ಲಿ ತಮ್ಮ ಶಕ್ತಿ ಸಾಮರ್ಥ್ಯವನ್ನ ಹೆಚ್ಚಿಸಿಕೊಳ್ಳುವ ಸಲುಗಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆ ನಡೆಸಿದ್ರು. ಕನ್ಯಾಕುಮಾರಿಯಿಂದ ಆರಂಭವಾಗಿ ಕಾಶ್ಮೀರದಲ್ಲಿ ಅಂತ್ಯವಾದ ಈ ಯಾತ್ರೆ ಕಾಂಗ್ರೆಸ್ ಪಾಳೆಯಕ್ಕೆ ಕೊಂಚಮಟ್ಟದ ಚೈತನ್ಯ ನೀಡಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಪಾಳೆಯ ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದೆ.


ಕರ್ನಾಟಕದಲ್ಲಿ ಕಾಂಗ್ರೆಸ್‌ಗೆ ಗೆಲುವು


ಕರ್ನಾಟಕದ 135 ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸಿದೆ. ಕಾಂಗ್ರೆಸ್‌ನ ಅರ್ಭಟದ ಎದುರು ಬಿಜೆಪಿ ಧೂಳೀಪಟವಾಗಿದೆ. ಕಾಂಗ್ರೆಸ್ ನಾಯಕರು ತಮ್ಮ ಈ ಗೆಲುವನ್ನ ಅನೇಕ ರೀತಿಯಲ್ಲಿ ವ್ಯಾಖ್ಯಾನಿಸುತ್ತಿದ್ದಾರೆ. ಈ ಭರ್ಜರಿ ಗೆಲುವು ಸಾಧಿಸಿರೋದಕ್ಕೆ ಈ ಭಾರತ್ ಜೋಡೋ ಯಾತ್ರೆಯೇ ಕಾರಣ ಅಂತ ರಾಜ್ಯದ ಕಾಂಗ್ರೆಸ್ ನಾಯಕರು ಹೇಳುತ್ತಿದ್ದಾರೆ. ಇದರ ಹೊರತಾಗಿ ನೋಡೋದಾದ್ರೆ ಭಾರತ್ ಜೋಡೋ ಯಾತ್ರೆ ರಾಹುಲ್ ಗಾಂಧಿ ಅವರಿಗೆ ನವಶಕ್ತಿ ನೀಡಿದೆ ಅಂತ ಹೇಳಲಾಗ್ತಿದೆ. ಅಂದಹಾಗೆ, ಎನ್‌ಡಿಟಿವಿ ಮತ್ತು ಲೋಕನೀತಿ ಸೆಂಟರ್ ಈ ಅಧ್ಯಯನ ನಡೆಸಿದೆ. ಸುಮಾರು 71 ಲೋಕಸಭಾ ಕ್ಷೇತ್ರಗಳಲ್ಲಿ7202 ಜನರಿಂದ ಈ ಮಾಹಿತಿಯನ್ನ ಸಂಗ್ರಹಿಸಿದೆ.


ಇದನ್ನೂ ಓದಿ: Siddaramaiah: ಹೂವಿನ ಹಾಸಿಗೆಯಲ್ಲ ಸಿಎಂ ಸ್ಥಾನ! ಸಿದ್ದು ಮುಂದಿದೆ ಸಾಲು-ಸಾಲು ಸವಾಲು!


ಅಧ್ಯಯನದಲ್ಲಿ ಬಯಲಾದ ಸಂಗತಿಗಳು


ಭಾರತ್ ಜೋಡೋ ಯಾತ್ರೆ ಸಾಗಿದ 19 ರಾಜ್ಯಗಳಲ್ಲಿ, ಮೇ 10 ರಿಂದ 19ರ ಅವಧಿಯಲ್ಲಿ ಈ ಅಧ್ಯಯನ ನಡೆಸಲಾಗಿದೆ. ಈ ಪೈಕಿ ಶೇ.43ರಷ್ಟು ಜನರು ಭಾರತೀಯ ಜನತಾ ಪಕ್ಷದ ಮುಂದಾಳತ್ವದ ಎನ್‌ಡಿಎಗೆ ಬೆಂಬಲ ಸೂಚಿಸಿದ್ದಾರೆ. ಹಾಗೇ ಮೂರನೇ ಅವಧಿಗೂ ಬಿಜೆಪಿಗೆ ಬೆಂಬಲ ನೀಡೋದಾಗಿ ಅವರು ಘೋಷಿಸಿದ್ಧಾರೆ. ಇನ್ನು ಶೇ 38ರಷ್ಟು ಜನರು ಮಾತ್ರ ಬಿಜೆಪಿಗೆ ಮತ್ತೊಂದು ಅವಧಿಯ ಸರ್ಕಾರ ನೀಡಲು ವಿರೋಧ ವ್ಯಕ್ತಪಡಿಸಿದ್ದಾರೆ.


ಯಾರು ಪ್ರಧಾನಮಂತ್ರಿಯಾಗಬೇಕು?


ಅಧ್ಯಯನದಲ್ಲಿ ಯಾರ ನೇತೃತ್ವದಲ್ಲಿ ಚುನಾವಣೆ ನಡೆದ್ರೆ, ಯಾರು ಪ್ರಧಾನ ಮಂತ್ರಿ ಅಭ್ಯರ್ಥಿಯಾದ್ರೆ ಯಾರಿಗೆ ಬೆಂಬಲ ನೀಡುತ್ತಿರಿ ಅನ್ನೋ ಪ್ರಶ್ನೆಯನ್ನೂ ಜನರ ಮುಂದೆ ಅಧ್ಯಯನ ತಂಡ ಇಟ್ಟಿತ್ತು. ಈ ಪೈಕಿ ಶೇ.43ರಷ್ಟು ಜನರು ನರೇಂದ್ರ ಮೋದಿ ಅವರ ಹೆಸರನ್ನ ಹೇಳಿದ್ದಾರೆ. ರಾಹುಲ್ ಗಾಂಧಿ ಅವರಿಗೆ ಶೇ.27ರಷ್ಟು ಜನರು ಜೈ ಎಂದಿದ್ದಾರೆ.


ಪ್ರಧಾನಿ ಇಮೇಜ್‌ಗಿಲ್ಲ ಧಕ್ಕೆ


ಮತ್ತೊಂದು ವಿಷಯ ಏನಂದ್ರೆ, ಕರ್ನಾಟಕ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಅತ್ಯಂತ ಹೀನಾಯವಾಗಿ ಸೋಲು ಅನುಭವಿಸಿದೆ. ಆದರೆ ಸೋಲಿನಿಂದ ಪ್ರಧಾನಿ ಮೋದಿಯ ಇಮೇಜ್‌ಗೆ ಯಾವುದೇ ತೊಂದರೆ ಉಂಟಾಗಿಲ್ಲ. ನರೇಂದ್ರ ಮೋದಿ ಜನಪ್ರಿಯತೆ ಹೇಗಿತ್ತೋ ಅದೇ ರೀತಿ ಇದೆ. ಯಾಕಂದ್ರೆ, 2019ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಶೇಕಡವಾರು ಮತಗಳಿಗೆ ಪ್ರಮಾಣ ಶೇ. 37ರಷ್ಟಿತ್ತು. ಆದರೆ 2023ರ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಶೇ.39ರಷ್ಟು ಮತಗಳನ್ನ ಪಡೆದಿದೆ.


ಮೋದಿಗೆ ಪರ್ಯಾಯವಾಗಿ ಈ ನಾಯಕರು!


ಈ ಅಧ್ಯಯನದ ಮೂಲಕ ಬಯಲಾಗಿರುವ ಸಂಗತಿ ಏನಂದ್ರೆ, ಪ್ರಧಾನಿ ಮೋದಿಗೆ ಬದಲಾಗಿ ಕೆಲವು ನಾಯಕರನ್ನ ಜನರು ಸೂಚಿಸಿದ್ದಾರೆ. ಮೋದಿಗೆ ಬದಲಾಗಿ ಬೇರೆ ನಾಯಕರ ಪರ ಶೇ.19ರಷ್ಟು ಮಂದಿ ಒಲವು ತೋರಿದ್ದಾರೆ. ಈ ಪೈಕಿ ಮಮತಾ ಬ್ಯಾನರ್ಜಿ ಮತ್ತು ಅರವಿಂದ ಕೇಜ್ರಿವಾಲ್ ಅವರ ಪರ ಶೇ.4ರಷ್ಟು ಮಂದಿ ಒಲವು ತೋರಿದ್ದಾರೆ. ಅಖಿಲೇಶ್ ಯಾದವ್ ಪರ ಶೇ.3ರಷ್ಟು ಮಂದಿ ಮತ ಹಾಕಿದ್ದಾರೆ. ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಪರ ಶೇ.1 ಪರ್ಸೆಂಟ್‌ನಷ್ಟು ಜನರು ಮತ ಹಾಕಿದ್ದಾರೆ. ಈ ಮೂಲಕ ಮೋದಿ ಬಿಟ್ರೆ ರಾಹುಲ್ ಅವರೇ ಬೆಸ್ಟ್ ಅಂತ ಬಹುತೇಕರು ವೋಟ್ ಹಾಕಿದ್ದಾರೆ.


ಮೋದಿಗೆ ಅವರ ಖ್ಯಾತಿಗೆ ಕಾರಣಗಳೇನು?


ಪ್ರಧಾನಿ ಮೋದಿಯವರ ಖ್ಯಾತಿಗೆ ಕಾರಣ ಏನು ಎಂಬ ಪ್ರಶ್ನೆಯನ್ನು ಜನರ ಮುಂದಿಡಲಾಯ್ತು. ಇದಕ್ಕೆ ದೇಶದ ಜನರು ತಮ್ಮದೇ ಆದಂತಹ ಕಾರಣಗಳನ್ನ ಕೊಟ್ಟಿದ್ದಾರೆ. ಶೇ.25ರಷ್ಟು ಜನರು ಮೋದಿಯ ಅವರ ಆಡಳಿತ ಶೈಲಿಗೆ ಬಹುಪರಾಕ್ ಹಾಕಿದ್ದಾರೆ. ಶೇ.20ರಷ್ಟು ಜನರು ಮೋದಿ ಅವರು ಅಭಿವೃದ್ಧಿ ಕಡೆಗೆ ಇರಿಸಿರುವ ದೂರದೃಷ್ಟಿಯನ್ನ ಗುರುತಿಸಿದ್ದು, ಅದೇ ಅವರ ಜನಪ್ರಿಯತೆಗೆ ಕಾರಣ ಅಂತೇಳಿದ್ದಾರೆ.
ಮೋದಿ ಜನಪ್ರಿಯತೆಗೆ ಏನು ಕಾರಣ?


ಇನ್ನು, ಶೇ.13ರಷ್ಟು ಮಂದಿ ಪ್ರಧಾನಿ ಮೋದಿಯವರ ಕಠಿಣ ಪರಿಶ್ರಮವೇ ಅವರ ಪಾಪ್ಯುಲರಿಟಿಗೆ ಕಾರಣ ಅಂತಂದ್ರೆ, ಅಷ್ಟೇ ಪ್ರಮಾಣದ ಜನರು ಅವರ ವರ್ಚಸ್ಸು ಅವರ ಹೆಗ್ಗಳಿಕೆಗೆ ಕಾರಣ ಅಂತೇಳಿದ್ದಾರೆ. ಉಳಿದಂತೆ ಶೇ.11ರಷ್ಟು ಜನರು ಮೋದಿ ಅವರು ರೂಪಿಸಿರುವ ಕಾರ್ಯಕ್ರಮಗಳು ಅವರ ಜನಪ್ರಿಯತೆಗೆ ಕಾರಣ ಅಂತ ತಿಳಿಸಿದ್ದಾರೆ. ಪ್ರಧಾನಿ ಮೋದಿ ಅವರು ತಮ್ಮ ಪ್ರತಿ ನಡೆ, ನುಡಿಯಲ್ಲೂ ಅಳೆದು ತೂಗಿ ಹೆಜ್ಜೆ ಹಾಕುತ್ತಾರೆ. ಯಾವುದಕ್ಕೆ ಯಾವ ಉತ್ತರ, ಎಷ್ಟು ಉತ್ತರ ಅನ್ನೋದರ ಸ್ಪಷ್ಟ ಅರಿವು ಇದೆ. ಅವರ ನಾಯಕತ್ವ ಗುಣಗಳು, ಎಲ್ಲರ ಮಧ್ಯದಲ್ಲೂ ಮಿಂಚುವ ಅವರ ರೀತಿಯನ್ನೂ ಜನರು ಗುರುತಿಸಿದ್ದಾರೆ.


ಇದನ್ನೂ ಓದಿ: DCM: ಉಪಮುಖ್ಯಮಂತ್ರಿ ಅನ್ನೋದು ಅಧಿಕಾರವಿಲ್ಲದ ಅಲಂಕಾರಿಕ ಹುದ್ದೆಯೇ? ಡಿಸಿಎಂಗೆ ಯಾವ ಪವರ್ ಇರುತ್ತದೆ?


ಮೋದಿಗೆ ಎದುರಾಳಿಯಾಗಿ ನಿಲ್ತಾರಾ ರಾಹುಲ್?


ಅಂದಹಾಗೇ, ಪ್ರಧಾನಿ ಮೋದಿಗೆ ಎದುರಾಳಿ ನಿಲ್ಲೋದಕ್ಕೆ ರಾಹುಲ್ ಗಾಂಧಿ ಅವರೇ ಸೂಕ್ತ ಅಂತ ಶೆ.26ರಷ್ಟು ಜನರು ತಿಳಿಸಿದ್ದಾರೆ. ಈ ಪೈಕಿ 15ರಷ್ಟು ಮಂದಿ ಭಾರತ್ ಜೋಡೋ ಯಾತ್ರೆಯಿಂದ ರಾಹುಲ್ ಅವರ ವರ್ಚಸ್ಸು ಹೆಚ್ಚಾಗಿದೆ ಅನ್ನೋ ನಿಲುವಿಗೆ ಬಂದಿದ್ದಾರೆ. ಉಳಿದಂತೆ ಶೇ.27ರಷ್ಟು ಜನರು ರಾಹುಲ್ ಗಾಂಧಿ ಅವರ ಕುರಿತಾಗಿ ವಿಭಿನ್ನವಾದ ನಿಲುವನ್ನು ಹೊಂದಿದ್ದಾರೆ.

top videos
    First published: