ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡು ಹುತಾತ್ಮನಾದ ವ್ಯಕ್ತಿಗೆ ಭಾರತದ ಮೊದಲ ಸಂತ ಪದವಿ ಸಿಗುತ್ತಿರುವುದೇಕೆ?

First Indian converted to Christianity gets Saint award: ಧರ್ಮ ಪ್ರಚಾರ ಮಾಡುವ ಸಂದರ್ಭದಲ್ಲಿ ಅವರು, ಜಾತಿ ಬೇಧಗಳ ಹೊರತಾಗಿಯೂ ಎಲ್ಲಾ ಜನರಿಗೆ ಸಮಾನತೆ ಸಿಗಬೇಕು ಎಂಬ ಅಂಶಕ್ಕೆ ಒತ್ತು ನೀಡಿದ್ದರು. ಈ ಕುರಿತ ದೇವ ಸಹಾಯಂ ಭೋಧನೆಗಳು ಕ್ರಮೇಣ ಅವರು ಹುತಾತ್ಮರಾಗಲು ಕಾರಣವಾಯಿತು ಎಂದು ಚರ್ಚ್ ಅಭಿಪ್ರಾಯಪಟ್ಟಿದೆ

ಸಂತ ದೇವಸಹಾಯಂ ಅವರ ಸಾಂದರ್ಭಿಕ ಚಿತ್ರ

ಸಂತ ದೇವಸಹಾಯಂ ಅವರ ಸಾಂದರ್ಭಿಕ ಚಿತ್ರ

 • Share this:
  ರೋಮನ್ ಕ್ಯಾಥೋಲಿಕ್ ಚರ್ಚ್ (Roman Catholic Church) ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡ (Converted to Christianity in 18th Century) 18ನೇ ಶತಮಾನದ ಹಿಂದೂ ವ್ಯಕ್ತಿಯೊಬ್ಬರಿಗೆ ಸಂತ (Saint) ಪದವಿ ನೀಡಲಿದೆ. ಈ ಪ್ರಕ್ರಿಯೆ ಮುಂದಿನ ವರ್ಷದ ಆರಂಭದಲ್ಲಿ ನಡೆಯಲಿದೆ. ಕ್ರೈಸ್ತ ಧರ್ಮ ಸ್ವೀಕರಿಸಿದ ಕಾರಣದಿಂದ ಹುತಾತ್ಮರಾದರು ಎಂದು ನಂಬಲಾಗಿರುವ ದೇವ ಸಹಾಯಂ ಪಿಳ್ಳೈ, ಸಂತ ಸ್ಥಾನವನ್ನು ಪಡೆದ ಭಾರತದ ಪ್ರಪ್ರಥಮ, ಲೇ ಮ್ಯಾನ್ (ಪಾದ್ರಿಯ ದೀಕ್ಷೆ ಪಡೆದಿಲ್ಲದ ಚರ್ಚಿನ ಸದಸ್ಯ) ಎನಿಸಿಕೊಳ್ಳಲಿದ್ದಾರೆ. ಇದುವರೆಗೂ ಸಂತ ಸ್ಥಾನ ಪಡೆದುಕೊಂಡಿರುವ ಎಲ್ಲರೂ, ಭಾರತೀಯ ಪಾದ್ರಿಗಳ ವರ್ಗದ ಸದಸ್ಯರಾಗಿದ್ದವರು, ಅಂದರೆ ಪಾದ್ರಿಗಳಾಗಿ ದೀಕ್ಷೆ ಪಡೆದಿದ್ದವರು.

  ನವೆಂಬರ್ 9 ರಂದು ವ್ಯಾಟಿಕನ್‍ನಲ್ಲಿರುವ ದ ಕಾಂಗ್ರಿಗೇಶನ್ ಫಾರ್ ಕಾಸಸ್ ಆಫ್ ಸೈಂಟ್ಸ್, (The Congregation For Causes of Saints Vatican City) ಮೇ 15ರಂದು ಸೇಂಟ್ ಪೀಟರ್ಸ್ ಬೆಸಿಲಿಕಾದಲ್ಲಿ ಕ್ಯಾನನೈಸೇಶನ್ ಸಂದರ್ಭದಲ್ಲಿ ಪೋಪ್ ಪ್ರಾನ್ಸಿಸ್ ಪೂಜ್ಯ ಲಸಾರಜ್ ಮತ್ತು ಇತರ 6 ಮಂದಿಗೆ ಸಂತ ಪದವಿ ನೀಡಲಿದೆ ಎಂದು ಹೇಳಿದೆ.

  ದೇವ ಸಹಾಯಂ ಪಿಳ್ಳೈ (Deva Sahayam Pillai) 1712ರಲ್ಲಿ ತಮಿಳುನಾಡಿನ ಕನ್ಯಾಕುಮಾರಿ ಜಿಲ್ಲೆಯ ನಟ್ಟಲಂ ಗ್ರಾಮದಲ್ಲಿ ಏಪ್ರಿಲ್ 23ರಂದು ಜನಿಸಿದರು. ಅವರ ಮೂಲ ಹೆಸರು ನೀಲಕಂಠ ಪಿಳ್ಳೈ. ದೇವಾಲಯದ ಅರ್ಚಕರ ಮೇಲ್ಜಾತಿಯ ಕುಟುಂಬದಲ್ಲಿ ಬೆಳೆದ ಅವರು, ನಂತರದ ಸಮಯದಲ್ಲಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಹೊಂದಿದರು.

  ತಿರುವಾಂಕೂರ್​ ರಾಜಮನೆತನಕ್ಕೆ ಸೇವೆ:

  ತಿರುವಾಂಕೂರಿನ ರಾಜಮನೆತನಕ್ಕೆ (Tiruvankoor Royal Family) ಸೇವೆ ಸಲ್ಲಿಸುತ್ತಿದ್ದ ದೇವ ಸಹಾಯಂ ಪಿಳ್ಳೈ ಅವರಿಗೆ , ಡಚ್ ಈಸ್ಟ್ ಇಂಡಿಯಾ ಕಂಪೆನಿಯ ಕ್ಯಾಪ್ಟನ್ (Dutch East India Company Captian) ಒಬ್ಬರ ಪರಿಚಯ ಆಯಿತು. ಆತನ ಒಡನಾಟವೇ ದೇವ ಸಹಾಯಂ ಕ್ರೈಸ್ತ ಧರ್ಮದ ಮೇಲೆ ಒಲವು ಬೆಳೆಸಿಕೊಳ್ಳಲು ಕಾರಣವಾಯಿತು. ಆ ಬಳಿಕ ಅವರು ಹಿಂದೂ ಧರ್ಮ ತ್ಯಜಿಸಿ, 1745ರಲ್ಲಿ ಕ್ಯಾಥೋಲಿಕ್ ಧರ್ಮವನ್ನು ತಮ್ಮದಾಗಿಸಿಕೊಂಡರು.

  ಮತಾಂತರದ ನಂತರ ಹೆಸರು ಬದಲು:

  ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡ (After converting to Christianity) ಬಳಿಕ ಅವರ ನೀಲಕಂಠ ಎಂಬ ಹೆಸರನ್ನು ಬದಲಾಯಿಸಿ, ಅವರಿಗೆ ಲಾಜರಸ್ ಎಂಬ ಕ್ರಿಶ್ಚಿಯನ್ ಹೆಸರನ್ನು ನೀಡಲಾಯಿತು. ಆದರೆ, ಆ ನಂತರ ಅವರು ದೇವ ಸಹಾಯಂ (ದೇವರ ಸಹಾಯ) ಎಂಬ ಹೆಸರಿನಲ್ಲಿ ಜನಪ್ರಿಯರಾದರು.

  ಇದನ್ನೂ ಓದಿ: Puneeth Rajkumar​ ಸಾವಿನಲ್ಲಿ ಎಚ್ಚರಿಕೆಯ ಗಂಟೆ: ಹೆಚ್ಚು ತೂಕ ಎತ್ತುವುದರಿಂದ Heart Attack

  ಧರ್ಮ ಪ್ರಚಾರ ಮಾಡುವ ಸಂದರ್ಭದಲ್ಲಿ ಅವರು, ಜಾತಿ ಬೇಧಗಳ ಹೊರತಾಗಿಯೂ ಎಲ್ಲಾ ಜನರಿಗೆ ಸಮಾನತೆ ಸಿಗಬೇಕು ಎಂಬ ಅಂಶಕ್ಕೆ ಒತ್ತು ನೀಡಿದ್ದರು. ಈ ಕುರಿತ ದೇವ ಸಹಾಯಂ ಭೋಧನೆಗಳು ಕ್ರಮೇಣ ಅವರು ಹುತಾತ್ಮರಾಗಲು ಕಾರಣವಾಯಿತು ಎಂದು ಚರ್ಚ್ ಅಭಿಪ್ರಾಯಪಟ್ಟಿದೆ.

  ಇದನ್ನೂ ಓದಿ: Explained: ಶತಕೋಟಿ ಡಾಲರ್‌ಗಳಿಗೆ ಸಮನಾದ ಆಸ್ತಿಗಾಗಿ ಕೇರಳದ 2 ಮುಸ್ಲಿಂ ಕುಟುಂಬಗಳ ಸಂಘರ್ಷ

  ರಾಜದ್ರೋಹದ ಆರೋಪ, ಜೈಲು ಶಿಕ್ಷೆ:

  ದೇವ ಸಹಾಯಂ ಪಿಳ್ಳೈ, ಕ್ರೈಸ್ತ ಧರ್ಮಕ್ಕೆ ಮತಾಂತರ ಹೊಂದಿದ ನಂತರ, ಆ ಧರ್ಮದ ಪ್ರಚಾರವನ್ನು ಆರಂಭಿಸಿದ್ದರು. ಅವರ ವಿರುದ್ಧ ರಾಜಾಡಳಿತವು ರಾಜದ್ರೋಹ (Sedition Charges against Deva Sahayam Pillai) ಮತ್ತು ಇನ್ನು ಹಲವಾರು ಗಂಭೀರ ಆರೋಪಗಳನ್ನು ಹೋರಿಸಿ, 1749ರಲ್ಲಿ ಜೈಲಿಗೆ ತಳ್ಳಿತು. ದೇವ ಸಹಾಯಂ ಅವರನ್ನು ನಾನಾ ರೀತಿಯ ಚಿತ್ರಹಿಂಸೆಗಳಿಗೆ ಒಳಪಡಿಸಿದ ನಂತರ, 1752ರ ಜನವರಿ 14 ರಂದು ಗುಂಡು ಹೊಡೆದು ಹತ್ಯೆ ಮಾಡಲಾಯಿತು (Assassinated in 1752). ಕ್ರೈಸ್ತ ಧರ್ಮದ ಪ್ರಚಾರ ಮಾಡಿದ್ದಕ್ಕಾಗಿ ಪ್ರಾಣ ಕಳೆದುಕೊಂಡರು ಎಂಬ ಕಾರಣಕ್ಕಾಗಿ ಆ ಧರ್ಮವು ಅವರಿಗೆ ಹುತಾತ್ಮ ಪಟ್ಟ ನೀಡಿದೆ.
  Published by:Sharath Sharma Kalagaru
  First published: