• ಹೋಂ
  • »
  • ನ್ಯೂಸ್
  • »
  • Explained
  • »
  • Dengue Fever: ಹೊಸ ಪ್ರಭೇದದ ಡೆಂಗ್ಯೂ ವೈರಸ್ ಪತ್ತೆ! ಇದನ್ನು ತಡೆಗಟ್ಟುವುದು ಹೇಗೆ?

Dengue Fever: ಹೊಸ ಪ್ರಭೇದದ ಡೆಂಗ್ಯೂ ವೈರಸ್ ಪತ್ತೆ! ಇದನ್ನು ತಡೆಗಟ್ಟುವುದು ಹೇಗೆ?

ಡೆಂಗ್ಯೂ ವೈರಸ್ಸಿನ ಹೊಸ ಪ್ರಭೇದ ಪತ್ತೆ

ಡೆಂಗ್ಯೂ ವೈರಸ್ಸಿನ ಹೊಸ ಪ್ರಭೇದ ಪತ್ತೆ

ಮಳೆಗಾಲ ಶುರುವಾಯಿತು ಎಂದರೆ ಸಾಕು ಭಾರತದಲ್ಲಿ ಡೆಂಗ್ಯೂ ಪ್ರಕರಣಗಳಲ್ಲಿ ಏರಿಕೆಯಾಗುವುದನ್ನು ನಾವು ಪ್ರತಿ ವರ್ಷವೂ ನೋಡುತ್ತೇವೆ. ಈ ಡೆಂಗ್ಯೂ ಎಂಬುದು ಒಂದು ಡೆಂಗ್ಯೂ ಈಡೀಸ್‌ ಈಜಿಪ್ಟಿ ಎಂಬ ಸೊಳ್ಳೆಯ ಮೂಲಕ ಹರಡುತ್ತದೆ. ಡೆಂಗ್ಯೂ ಸೋಂಕಿತರು ಕೆಲವೊಬ್ಬರು ಬೇಗನೆ ಗುಣಮುಖರಾಗುತ್ತಾರೆ ಮತ್ತು ಇನ್ನೂ ಕೆಲವರು ತೀವ್ರ ಅನಾರೋಗ್ಯಕ್ಕೆ ಒಳಗಾಗುತ್ತಾರೆ.

ಮುಂದೆ ಓದಿ ...
  • Share this:

ಮಳೆಗಾಲ (Rainy season) ಶುರುವಾಯಿತು ಎಂದರೆ ಸಾಕು ಭಾರತದಲ್ಲಿ (India) ಡೆಂಗ್ಯೂ ಪ್ರಕರಣಗಳಲ್ಲಿ (case of dengue) ಏರಿಕೆಯಾಗುವುದನ್ನು ನಾವು ಪ್ರತಿ ವರ್ಷವೂ ನೋಡುತ್ತೇವೆ. ಈ ಡೆಂಗ್ಯೂ ಎಂಬುದು ಒಂದು ಡೆಂಗ್ಯೂ ಈಡೀಸ್‌ ಈಜಿಪ್ಟಿ (dengue aedes aegypti) ಎಂಬ ಸೊಳ್ಳೆಯ (Mosquito) ಮೂಲಕ ಹರಡುತ್ತದೆ. ಡೆಂಗ್ಯೂ ಸೋಂಕಿತರು ಕೆಲವೊಬ್ಬರು ಬೇಗನೆ ಗುಣಮುಖರಾಗುತ್ತಾರೆ ಮತ್ತು ಇನ್ನೂ ಕೆಲವರು ತೀವ್ರ ಅನಾರೋಗ್ಯಕ್ಕೆ (Illness) ಒಳಗಾಗುತ್ತಾರೆ. ಆದರೆ ಬ್ರೆಜಿಲ್ ದೇಶದಲ್ಲಿ ಫಿಯೋಕ್ರೂಜ್ ನ ಸಂಶೋಧಕರು ಮತ್ತು ಗೋಯಾಸ್ ನ ಸೆಂಟ್ರಲ್ ಪಬ್ಲಿಕ್ ಹೆಲ್ತ್ ಲ್ಯಾಬೊರೇಟರಿಯ ಸಂಶೋಧಕರು ಅಪಾರೆಸಿಡಾ ಡಿ ಗೊಯಾನಿಯಾ (ಜಿಒ) ಎಂಬ ಪ್ರದೇಶದಲ್ಲಿರುವ ವ್ಯಕ್ತಿಯ ದೇಹದಲ್ಲಿ ಡೆಂಗ್ಯೂವಿನ ಹೊಸ ಪ್ರಭೇದವನ್ನು (new species) ಕಂಡು ಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.


5,00,000ಕ್ಕೂ ಹೆಚ್ಚು ಡೆಂಗ್ಯೂ ಪ್ರಕರಣಗಳು
ಜಾಗತಿಕ ಜೀನೋಟೈಪ್ ಎಂದೂ ಕರೆಯಲ್ಪಡುವ ಜೀನೋಟೈಪ್ 2 ಡೆಂಗ್ಯೂ ವೈರಸ್ ನ ಅತ್ಯಂತ ಪ್ರಚಲಿತ ಪ್ರಭೇದವಾಗಿದೆ, ಆದರೆ ಬ್ರೆಜಿಲ್ ನಲ್ಲಿ ಎಂದಿಗೂ ಈ ವೈರಸ್ ನ ಪ್ರಭೇದ ಕಂಡು ಬಂದಿರಲಿಲ್ಲ. ಇದು ಪ್ರಸ್ತುತ ಜನವರಿ ಮತ್ತು ಏಪ್ರಿಲ್ ನಡುವೆ 5,00,000ಕ್ಕೂ ಹೆಚ್ಚು ಡೆಂಗ್ಯೂ ಪ್ರಕರಣಗಳನ್ನು ದಾಖಲಿಸುವುದರೊಂದಿಗೆ ಸಾಂಕ್ರಾಮಿಕ ರೋಗದಿಂದ ತತ್ತರಿಸುವಂತೆ ಮಾಡಿದೆ ಎಂದು ಹೇಳಬಹುದು.


ಈ ಆವಿಷ್ಕಾರವು ದಕ್ಷಿಣ ಅಮೆರಿಕಾದಲ್ಲಿ ಈ ತಳಿಯ ಮೊದಲ ಅಧಿಕೃತ ದಾಖಲೆಯನ್ನು ಪ್ರತಿನಿಧಿಸುತ್ತದೆ ಮತ್ತು ಅಮೇರಿಕಾದಲ್ಲಿ ಎರಡನೆಯದಾಗಿದೆ. ಅಲ್ಲಿ 2019ರಲ್ಲಿ ಪೆರುವಿನಲ್ಲಿ ಈ ಉಪಪ್ರಕಾರದ ಸ್ಫೋಟ ಸಂಭವಿಸಿತು. ಪ್ರಸ್ತುತ, ಸೆರೋಟೈಪ್ 3 ಜೀನೋಟೈಪ್ 2 ಅಥವಾ ಏಷ್ಯನ್ ಜೀನೋಟೈಪ್ ಎಂದು ಕರೆಯಲ್ಪಡುವ ಡೆಂಗ್ಯೂ ವೈರಸ್ ಬ್ರೆಜಿಲ್ ನಲ್ಲಿ ತನ್ನ ಪ್ರಾಬಲ್ಯವನ್ನು ಮೆರೆಯುತ್ತಿದೆ.


ಇದನ್ನೂ ಓದಿ: Health Care: ಕೀಲು, ಸೊಂಟ ನೋವಿನ ಸಮಸ್ಯೆ ಕಾಡುತ್ತಿದೆಯೇ? ಹಾಗಿದ್ದರೆ ಈ ಪದಾರ್ಥಗಳನ್ನು ನಿಮ್ಮ ಡಯಟ್ ನಲ್ಲಿ ಸೇರಿಸಿ


ಫಿಯೋಕ್ರೂಜ್ ಪ್ರಕಾರ, ಗೋಯಾಸ್ ನಗರದಲ್ಲಿ ನವೆಂಬರ್ ಅಂತ್ಯದಲ್ಲಿ ಸಂಭವಿಸಿದ ಪ್ರಕರಣವೊಂದರ ಮಾದರಿಯಿಂದ ಫೆಬ್ರವರಿಯಲ್ಲಿ ಈ ಗುರುತು ಮಾಡಲಾಗಿದೆ. ಈ ಪ್ರಕಟಣೆಯನ್ನು ಮುನ್ಸಿಪಲ್ ಮತ್ತು ರಾಜ್ಯ ಇಲಾಖೆಗಳು, ಆರೋಗ್ಯ ಸಚಿವಾಲಯ ಮತ್ತು ವಿವರವಾಗಿ ಈ ಫಲಿತಾಂಶಗಳನ್ನು ಮೆಡ್ಆರ್ಕ್ಸಿವ್ ಪ್ರಿಪ್ರಿಂಟ್ಸ್ ಪ್ಲಾಟ್‌ಫಾರ್ಮ್ ನಲ್ಲಿ ಪ್ರಕಟಿಸಲಾಗಿದೆ.


ಬ್ರೆಜಿಲ್ ನಲ್ಲಿ ಡೆಂಗ್ಯೂ ಜ್ವರ
ಆರೋಗ್ಯ ಸಚಿವಾಲಯವು ಮೇ ತಿಂಗಳ ಆರಂಭದಲ್ಲಿ ಬಿಡುಗಡೆ ಮಾಡಿದ ಬುಲೆಟಿನ್ ಪ್ರಕಾರ, ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಈ ವರ್ಷದ ಜನವರಿಯಿಂದ ಏಪ್ರಿಲ್ ವರೆಗೆ ಸೋಂಕಿನ ಸಂಭಾವ್ಯ ಪ್ರಕರಣಗಳಲ್ಲಿ 113.7 ಪ್ರತಿಶತದಷ್ಟು ಹೆಚ್ಚಳವಾಗಿದೆ. ಪಶ್ಚಿಮ ಮತ್ತು ಮಧ್ಯ ಪ್ರದೇಶವು ದೇಶದ ಅತಿ ಹೆಚ್ಚು ಬಾಧಿತ ಪ್ರದೇಶವಾಗಿದೆ ಮತ್ತು ಗೋಯಾನಿಯಾ ಏಪ್ರಿಲ್ 23 ರವರೆಗೆ 31,000ಕ್ಕೂ ಹೆಚ್ಚು ಪ್ರಕರಣಗಳೊಂದಿಗೆ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಪುರಸಭೆಯಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.


ಇದನ್ನೂ ಓದಿ: Healthy Sleep: ನಿಮಗೆ ಸರಿಯಾಗಿ ನಿದ್ದೆ ಬರುತ್ತಿಲ್ಲವೇ? ಹಾಗಾದ್ರೆ ನೀವು ಓದಲೇ ಬೇಕಾದ ವಿಷಯ! ಈ ಬಗ್ಗೆ ಯುಕೆ ಅಧ್ಯಯನ ಹೇಳಿದ್ದೇನು ಗೊತ್ತಾ?


ಗೋಯಾಸ್ ನಲ್ಲಿ ಡೆಂಗ್ಯೂ ಪ್ರಕರಣಗಳ ಸಂಖ್ಯೆಯ ಹೊರತಾಗಿಯೂ, ವುಕ್ರೂಜ್ ಸಂಶೋಧಕರು ದತ್ತಾಂಶವು ಹೊಸ ಜೀನೊಟೈಪ್ ಮತ್ತು ರಾಜ್ಯದಲ್ಲಿ ಪ್ರಕರಣಗಳ ಹೆಚ್ಚಳಕ್ಕೆ ಯಾವುದೇ ನೇರ ಸಂಬಂಧವನ್ನು ಹೊಂದಿಲ್ಲ ಎಂದು ಹೇಳಿದರು.


ಡೆಂಗ್ಯೂ ರೋಗವನ್ನು ತಡೆಗಟ್ಟುವುದು ಹೇಗೆ?
- ಒಂದೇ ಸ್ಥಳದಲ್ಲಿ ನೀರು ನಿಂತಿರುವುದರಿಂದ ಅಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ಹೆಚ್ಚಾಗುತ್ತದೆ. ಅತಿ ಹೆಚ್ಚು ಮಳೆ ಬೀಳುವ ತಿಂಗಳುಗಳಾದ ನವೆಂಬರ್ ಮತ್ತು ಮೇ ನಡುವೆ, ಈ ರೋಗವು ಹೆಚ್ಚಿಗೆ ಹರಡುತ್ತದೆ. ಆದ್ದರಿಂದ, ನಿಂತಿರುವ ನೀರಿನ ಮೂಲಗಳನ್ನು ತಪ್ಪಿಸುವುದು ಬಹಳ ಮುಖ್ಯ, ಏಕೆಂದರೆ ಸೊಳ್ಳೆಯ ಮೊಟ್ಟೆಗಳು ಪರಿಸರದಲ್ಲಿ ಒಂದು ವರ್ಷದವರೆಗೆ ಬದುಕಬಹುದು.


- ಎಲ್ಲಾ ವಯೋಮಾನದವರೂ ಸಮಾನವಾಗಿ ರೋಗಕ್ಕೆ ಒಳಗಾಗುತ್ತಾರೆ, ಆದರೆ ವಯಸ್ಸಾದವರು ಮತ್ತು ಮಧುಮೇಹ ಮತ್ತು ಅಧಿಕ ರಕ್ತದೊತ್ತಡದಂತಹ ದೀರ್ಘಕಾಲದ ಕಾಯಿಲೆಗಳನ್ನು ಹೊಂದಿರುವ ಜನರು, ತೀವ್ರವಾದ ಪ್ರಕರಣಗಳು ಮತ್ತು ಸಾವಿಗೆ ಕಾರಣವಾಗಬಹುದಾದ ಇತರ ತೊಡಕುಗಳನ್ನು ಅಭಿವೃದ್ಧಿಪಡಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ.


ಇದನ್ನೂ ಓದಿ: Health Tips: ವರ್ಕ್ ಫ್ರಂ ಹೋಮ್​ನಿಂದ ತಲೆ ನೋವು ಹೆಚ್ಚಾಗಿದ್ಯಾ? ಮೈಗ್ರೇನ್​ನಿಂದ ಮುಕ್ತಿ ಪಡೆಯಲು ಹೀಗೆ ಮಾಡಿ


- ಕೆಲವು ಜನರು ರೋಗಲಕ್ಷಣ ರಹಿತರಾಗಿರುತ್ತಾರೆ ಮತ್ತು ಇತರರು ರಕ್ತಸ್ರಾವದಂತಹ ಹೆಚ್ಚು ತೀವ್ರವಾದ ರೋಗಲಕ್ಷಣಗಳನ್ನು ಹೊಂದಿರುತ್ತಾರೆ. ರೋಗಲಕ್ಷಣಗಳು ಕಾಣಿಸಿಕೊಂಡಾಗ, ಆರೋಗ್ಯ ಸಚಿವಾಲಯವು ವೈದ್ಯಕೀಯ ಸೇವೆ ಪಡೆಯಲು ಶಿಫಾರಸು ಮಾಡುತ್ತದೆ.

Published by:Ashwini Prabhu
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು