• ಹೋಂ
  • »
  • ನ್ಯೂಸ್
  • »
  • Explained
  • »
  • ಕೊರೊನಾ ರೋಗಿಗಳಲ್ಲಿ ಕಾಣಿಸಿಕೊಂಡ ಹೊಸ ವೈರಸ್.. ಸೈಟೋಮೆಗಾಲೋ ಬಗೆಗಿನ ಸಂಪೂರ್ಣ ಮಾಹಿತಿ ಇಲ್ಲಿದೆ

ಕೊರೊನಾ ರೋಗಿಗಳಲ್ಲಿ ಕಾಣಿಸಿಕೊಂಡ ಹೊಸ ವೈರಸ್.. ಸೈಟೋಮೆಗಾಲೋ ಬಗೆಗಿನ ಸಂಪೂರ್ಣ ಮಾಹಿತಿ ಇಲ್ಲಿದೆ

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ಸೈಟೋಮೆಗಾಲೋ ವೈರಸ್ ಹೆಚ್ಚಾಗಿ ಏಡ್ಸ್ ಸೋಂಕಿತರಿಗೆ, ಕ್ಯಾನ್ಸರ್ ಚಿಕಿತ್ಸೆಯಲ್ಲಿರುವವರಿಗೆ, ಅಂಗಾಂಗಗಳ ಕಸಿಯನ್ನು ಮಾಡಿಸಿಕೊಂಡವರಲ್ಲಿ  ಕಂಡು ಬರುವ ಸಾಧ್ಯತೆಗಳಿವೆ.

  • Share this:

    ಇಡೀ ವಿಶ್ವವೇ ಕೋವಿಡ್-19 ವೈರಸ್ನಿಂದ ಸ್ವಲ್ಪ ಮಟ್ಟಿಗೆ ವೈರಸ್ ನ ಬೇರೆ ಬೇರೆ ಅಲೆಗಳಿಂದ ಚೇತರಿಸಿಕೊಳ್ಳುವ ಮೊದಲೇ ಹೊಸದಾಗಿ ವೈರಸ್‌ಗಳು ಹುಟ್ಟಿಕೊಳ್ಳುತ್ತಿದ್ದು, ಅವುಗಳ ವಿರುದ್ಧ ಹೋರಾಡುವುದು ಹೊಸ ತಲೆನೋವು ಶುರುವಾದಂತೆ ಆಗಿದೆ. ಈಗ ಹೊಸದಾಗಿ ಕೋವಿಡ್-19 ವೈರಸ್ ನಿಂದ ಚೇತರಿಸಿಕೊಂಡವರಲ್ಲಿ ಸೈಟೋಮೆಗಾಲೋ ವೈರಸ್ (ಸಿಎಂವಿ) ಕಾಣಿಸಿಕೊಳ್ಳುತ್ತಿರುವಂತಹ ಘಟನೆಗಳು ಬೆಳಕಿಗೆ ಬಂದಿವೆ. ಸಿಎಂವಿಯು ಡಬಲ್ ಸ್ಟ್ರಾಂಡೆಡ್ ಡಿಎನ್ಎ ವೈರಸ್ ಆಗಿದ್ದು, ಇದು ಹ್ಯುಮನ್ ಹರ್ಪಸ್ ವೈರಸ್ ಕುಟುಂಬಕ್ಕೆ ಸೇರಿದ ವೈರಸ್ ಆಗಿದೆ.


    ಸುಮಾರು ಐದು ಜನರು ಇತ್ತೀಚೆಗೆ ಕೋವಿಡ್-19 ವೈರಸ್ ನಿಂದ ದೆಹಲಿಯ ಗಂಗಾ ರಾಮ್ ಆಸ್ಪತ್ರೆಗೆ ದಾಖಲಾಗಿದ್ದು ಅವರೆಲ್ಲರೂ ಕೊರೊನಾ ದಿಂದ ಚೇತರಿಸಿಕೊಳ್ಳುವಷ್ಟರಲ್ಲಿಯೇ ಇನ್ನೊಂದು ಹೊಸ ಸಮಸ್ಯೆಯೊಂದು ಅವರನ್ನು ಕಾಡಲು ಶುರುವಾಗಿದೆ. ಅವರಲ್ಲೀಗ ಗುದನಾಳದಲ್ಲಿ ರಕ್ತಸ್ರಾವ ಉಂಟಾಗಿದ್ದು ಅದನ್ನು ವೈದ್ಯರು ಸಿಎಂವಿ ಸೋಂಕಿನಿಂದ ಆಗಿದ್ದು ಅಥವಾಸೈಟೋಮೆಗಾಲೋ ವೈರಸ್ ತಗುಲಿದೆ ಎಂದು ಹೇಳುತ್ತಿದ್ದಾರೆ. ಈ ಐವರಲ್ಲಿ ಒಬ್ಬರು ಈಗಾಗಲೇ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.


    ಸಿಎಂವಿ ವೈರಸ್ ತುಂಬಾ ಸಾಮಾನ್ಯವಾದಂತಹ ವೈರಸ್ ಆಗಿದ್ದು, ಎರಡನೆಯ ಅಲೆಯಲ್ಲಿ ಕೊರೊನಾ ಬಂದವರಿಗೆ 20 - 30 ದಿನಗಳಲ್ಲಿ ಈ ಹೊಸ ವೈರಸ್ ಕಾಣಿಸಿಕೊಂಡಿದೆ ಎಂದು ವರದಿಗಳು ತಿಳಿಸಿವೆ.




    ಸೈಟೋಮೆಗಾಲೋ ವೈರಸ್ ಎಂದರೇನು..?

    ಮೇಯೋ ಕ್ಲಿನಿಕ್ ಪ್ರಕಾರ ಈ ವೈರಸ್ ದೇಹದೊಳಕ್ಕೆ ಹೊಕ್ಕರೆ ಜೀವನ ಪೂರ್ತಿ ಇದು ದೇಹದಲ್ಲಿಯೇ ಇರುತ್ತದೆ ಮತ್ತು ಯಾರಲ್ಲಿ ರೋಗ ನಿರೋಧಕ ವ್ಯವಸ್ಥೆಯು ಬಲವಾಗಿರುತ್ತದೆಯೋ ಅಂತವರಿಗೆ ಅಷ್ಟೊಂದು ಆರೋಗ್ಯ ಹಾಳಾಗುವುದಿಲ್ಲ, ಆದರೆ ಯಾರು ತುಂಬಾ ಸೂಕ್ಷ್ಮ ರೋಗ ನಿರೋಧಕ ಶಕ್ತಿಯನ್ನು ಹೊಂದಿರುತ್ತಾರೋ ಅಂತವರಲ್ಲಿ ಮಾತ್ರ ಈ ವೈರಸ್ ಆರೋಗ್ಯವನ್ನು ಸಂಪೂರ್ಣವಾಗಿ ಹದಗೆಡಿಸುತ್ತದೆ. ಈ ವೈರಸ್ ಸೋಂಕಿತ ವ್ಯಕ್ತಿಯ ರಕ್ತ, ಲಾಲಾರಸ, ಮೂತ್ರದ ಮತ್ತು ದೇಹದ ಯಾವುದೇ ದ್ರವರೂಪದಿಂದ ಬೇರೆಯವರಿಗೆ ಹರಡುವ ಸಾಧ್ಯತೆಗಳಿವೆ ಎಂದು ವರದಿಗಳು ತಿಳಿಸಿವೆ.ಈ ವೈರಸ್ ತುಂಬಾ ಸಾಮಾನ್ಯವಾದಂತಹ ವೈರಲ್ ಸೋಂಕಾಗಿದ್ದು, ಯಾವುದೇ ವಯಸ್ಸಿನವರಲ್ಲಿಯೂ ಸಹ ಬರಬಹುದು ಎಂದು ವೈದ್ಯರು ಹೇಳುತ್ತಾರೆ.


    ರೋಗ ಲಕ್ಷಣಗಳು:

    ಈ ವೈರಸ್ ಅನೇಕರಿಗೆ ತಗುಲಿದ್ದರೂ ಸಹ ಆರೋಗ್ಯವಂತ ದೇಹ ಉಳ್ಳವರಿಗೆ ಯಾವುದೇ ಲಕ್ಷಣಗಳು ಹೊರಗೆ ಕಂಡು ಬರುವುದಿಲ್ಲ. ಆದರೆ ಯಾರಿಗೆ ರೋಗ ನಿರೋಧಕ ಶಕ್ತಿ ಕಡಿಮೆ ಇರುತ್ತದೆಯೋ ಅಂತಹವರಲ್ಲಿ ಪ್ರಾಥಮಿಕವಾಗಿ ಜ್ವರ, ಗಂಟಲು ಕೆರತ, ಮೈ ಕೈ ನೋವು ಮತ್ತು ತುಂಬಾ ಆಯಾಸವು ಕಂಡುಬರುತ್ತದೆ ಎಂದು ವೈದ್ಯರು ಹೇಳುತ್ತಾರೆ. ಕೆಲವೊಮ್ಮೆ ಸೋಂಕಿತರಲ್ಲಿ ಹೊಟ್ಟೆ ನೋವು, ಭೇದಿ, ಗುದನಾಳದಲ್ಲಿ ರಕ್ತಸ್ರಾವ ಮತ್ತು ತೂಕ ಕಡಿಮೆಯಾಗುವ ಎಲ್ಲಾ ಸಾಧ್ಯತೆಗಳು ಇವೆ ಎಂದು ಸಹ ವೈದರು ಹೇಳುತ್ತಾರೆ.


    ರೋಗ ಬಂದಿರುವ ಬಗ್ಗೆ ಹೇಗೆ ತಿಳಿದುಕೊಳ್ಳುವುದು..?

    ಮಲಮೂತ್ರದಲ್ಲಿ ರಕ್ತ ಹೋಗುವಿಕೆ ಮತ್ತು ಅತಿಯಾದ ಭೇದಿ ಎರಡು ಲಕ್ಷಣಗಳು ಅತಿಯಾಗಿ ಕಾಣಿಸಿಕೊಂಡಲ್ಲಿ ತಕ್ಷಣವೇ ಪ್ರಯೋಗಾಲಯದಲ್ಲಿ ಹೋಗಿ ಟೆಸ್ಟ್ ಮಾಡಿಕೊಳ್ಳುವುದರಿಂದ ಸಹ ನಮಗೆ ಸಿಎಂವಿ ತಗುಲಿದೆ ಅಥವಾ ಇಲ್ಲ ಎನ್ನುವುದರ ಬಗ್ಗೆ ನಮಗೆ ಮಾಹಿತಿ ದೊರಯುತ್ತದೆ.


    ಈ ರೋಗವು ಕೋವಿಡ್-19 ಹೇಗೆ ಸಂಬಂಧವನ್ನು ಹೊಂದಿದೆ..?

    ಮೇಯೋ ಕ್ಲಿನಿಕ್ ಪ್ರಕಾರ ರೋಗ ನಿರೋಧಕ ಕಡಿಮೆ ಇರುವಂತಹ ಮನುಷ್ಯನಲ್ಲಿ ಅಥವಾ ಗರ್ಭ ಧರಿಸಿದ ಮಹಿಳೆಗೆ ಸಿಎಂವಿ ಸೋಂಕು ತಗುಲಿದರೆ ಆ ಮಹಿಳೆಯಿಂದ ಆಕೆಯ ಹೊಟ್ಟೆಯಲ್ಲಿ ಹುಟ್ಟುವಂತಹ ಮಗುವಿಗೆ ಅದು ವರ್ಗಾವಣೆಯಾಗುತ್ತದೆ. ನಂತರ ಆ ಮಗುವಿನಲ್ಲಿ ಆ ರೋಗ ಲಕ್ಷಣಗಳನ್ನು ನಾವು ಕಾಣಬಹುದಾಗಿದೆ. ರೋಗ ನಿರೋಧಕ ಶಕ್ತಿ ಕಡಿಮೆಯಿರುವ ಜನರಲ್ಲಿಯೂ ಸಹ ಸಿಎಂವಿ ಬೇರೆವರಿಗೆ ಹರಡುವ ಸಾಧ್ಯತೆಗಳು ಹೆಚ್ಚಾಗಿದೆ.






    ಸೈಟೋಮೆಗಾಲೋ ವೈರಸ್ ಹೆಚ್ಚಾಗಿ ಏಡ್ಸ್ ಸೋಂಕಿತರಿಗೆ, ಕ್ಯಾನ್ಸರ್ ಚಿಕಿತ್ಸೆಯಲ್ಲಿರುವವರಿಗೆ, ಅಂಗಾಂಗಗಳ ಕಸಿಯನ್ನು ಮಾಡಿಸಿಕೊಂಡವರಲ್ಲಿ  ಕಂಡು ಬರುವ ಸಾಧ್ಯತೆಗಳಿವೆ. ಈ ವೈರಸ್ ಕೋವಿಡ್-19 ನಿಂದ ಬಳಲುತ್ತಿರುವವರಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗಿರುವುದರಿಂದ ಮತ್ತು ಸ್ಟೀರಾಯ್ಡ್ ಚಿಕಿತ್ಸೆ ಪಡೆಯುತ್ತಿರುವವರಲ್ಲಿ ಸಹ ಸಿಎಂವಿ ಹರಡುವ ಸಾಧ್ಯತೆ ಇರುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ.


    ಚಿಕಿತ್ಸೆ:

    ಸಿಎಂವಿ ಮತ್ತುಸೈಟೋಮೆಗಾಲೋ ವೈರಸ್ ಕೊಲೈಟಿಸ್ ಇರುವವರು ರೋಗ ಲಕ್ಷಣಗಳನ್ನು ಕಡಿಮೆ ಮಾಡಿಕೊಳ್ಳಲು ಕೆಲವು ಮಾತ್ರೆಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ರೋಗ ಲಕ್ಷಣಗಳು ಕಂಡು ಬಂದ ತಕ್ಷಣವೇ ಆಸ್ಪತ್ರೆಗೆ ಹೋಗಿ ಸರಿಯಾದ ಚಿಕಿತ್ಸೆ ಪಡೆಯುವದರಿಂದ ರೋಗವು ಬೇರೆ ಆಯಾಮವನ್ನು ಪಡೆದುಕೊಳ್ಳುವುದಿಲ್ಲ ಎಂದು ವೈದ್ಯರು ಹೇಳುತ್ತಾರೆ.

    First published: