• ಹೋಂ
  • »
  • ನ್ಯೂಸ್
  • »
  • Explained
  • »
  • Explained: ಕೋವಿಡ್​ ಸೋಂಕು ಪತ್ತೆಗೆ CT Scan​ ಮೊರೆ; ಈ ಚಿಕಿತ್ಸೆ ಬಗ್ಗೆ ಇರಲಿ ಪರಿಪೂರ್ಣ ಮಾಹಿತಿ

Explained: ಕೋವಿಡ್​ ಸೋಂಕು ಪತ್ತೆಗೆ CT Scan​ ಮೊರೆ; ಈ ಚಿಕಿತ್ಸೆ ಬಗ್ಗೆ ಇರಲಿ ಪರಿಪೂರ್ಣ ಮಾಹಿತಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಸೋಂಕಿನ ಲಕ್ಷಣ ನಿರ್ಧರಿಸುವಲ್ಲಿ ಈ ಸಿಟಿ ಸ್ಕ್ಯಾನ್​ ವರದಿ ಎಷ್ಟು ಸಹಾಯ ಮಾಡುತ್ತದೆ ಎಂಬುದು ಅರಿವುದು ಅವಶ್ಯವಾಗಿದೆ.

  • Share this:

ದೇಶದಲ್ಲಿ ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿದ್ದಂತೆ ಜನರಲ್ಲಿ ಆತಂಕ ಹೆಚ್ಚಿದ್ದು ಸುಳ್ಳಲ್ಲ. ಇದೇ ಸಮಯದಲ್ಲಿ ಆರ್​ಪಿಸಿಆರ್​ ಪರೀಕ್ಷೆಯಲ್ಲಿ ನೆಗೆಟಿವ್​ ಬಂದು, CT Scan​ನಲ್ಲಿ ಪಾಸಿಟಿವ್​ ಬರುತ್ತಿದ್ದು ಜನರಲ್ಲಿ ಆತಂಕ ಮೂಡಿಸಿತು. ಇದೇ ಹಿನ್ನಲೆ ಜನರು ಸೋಂಕಿನ ಲಕ್ಷಣ ಕಂಡು ಬಂದಾಕ್ಷಣ ಸಿಟಿ ಸ್ಕ್ಯಾನ್​ ಮೊರೆ ಹೋಗಲಾರಂಭಿಸಿದರು. ಇದರಿಂದ CT Scan​ಗಳು ಜನರಿಂದ ತುಂಬಿದವು. ಇನ್ನು ಕೆಲ ರೋಗಿಗಳು ವೈದ್ಯರ ಸಲಹೆ ಮೆರೆಗೆ ಸಿಟಿ ಸ್ಕ್ಯಾನ್​ ಮೊರೆ ಹೋದರೆ ಮತ್ತೆ ಕೆಲವರು ಸೋಂಕಿನ ಲಕ್ಷಣ ಕಂಡು ಬಂದ ಹಿನ್ನಲೆ ಸ್ವಯಂ ಆಗಿ ಈ ವಿಕಿರಣ ಶಾಸ್ತ್ರ ಪ್ರಯೋಗಲಾಯದ ಕಡೆಗೆ ಮುಖ ಮಾಡಿದರು.


ಬಹುತೇಕ ಜನರಿಗೆ ಈ ಚಿಕಿತ್ಸೆ ಅಗತ್ಯ ಇದೆಯೋ ಇಲ್ಲವೋ ಎಂಬ ಅರಿವು ಕೂಡ ಇರುವುದಿಲ್ಲ ಆದರೆ, ಸೋಂಕಿನ ಲಕ್ಷಣ ನಿರ್ಧರಿಸುವಲ್ಲಿ ಈ ಸಿಟಿ ಸ್ಕ್ಯಾನ್​ ವರದಿ ಎಷ್ಟು ಸಹಾಯ ಮಾಡುತ್ತದೆ ಎಂಬುದು ಅರಿವುದು ಅವಶ್ಯವಾಗಿದೆ. ಈ ಸಿಟಿ ಸ್ಕ್ಯಾನ್​ ಅನ್ನು ಎಷ್ಟು ದಿನಗಳ ಅಂತರದಲ್ಲಿ ಮಾಡಿಸಬೇಕು, ಇದರಿಂದ ಆಗುವ ಹಾನಿ ಏನು ಎಂಬ ಬಗ್ಗೆ ತಿಳಿಯುವುದು ಅವಶ್ಯವಾಗಿದೆ. ಈ ಕುರಿತಾದ ಮಾಹಿತಿಗೆ ವೈದ್ಯರಿಂದಲೇ ಇಲ್ಲಿದೆ ಉತ್ತರ


1. ಸಿಟಿ ಸ್ಕ್ಯಾನ್​ ಎಂದರೇನು?
ಕಂಪ್ಯೂಟರ್​ ಟೊಮೊಗ್ರಾಫಿ. ಎಚ್​ಆರ್​ಸಿಟಿ ಎಂದರೆ ಹೈ ರೆಸಲ್ಯೂಷನ್​ ಸಿಟಿ ಎಂದರ್ಧ ಇವು ಹೆಚ್ಚು ನಿಖರವಾಗಿದ್ದು, ವಿಕರಣ ಹೊಂದಿರುತ್ತವೆ. ಕೋವಿಡ್​ ಸೋಂಕು ಪತ್ತೆಗೆ ಹೆಚ್ಚು ನಿರ್ಣಯಕವಾಗಿದೆ. ಆರ್​ಪಿಸಿಆರ್​ನಲ್ಲಿ ಸೋಂಕು ಪತ್ತೆಯಾಗದಿದ್ದರೂ ಸಿಟಿ ಸ್ಕ್ಯಾನ್​ನಲ್ಲಿ ಸೋಮಕಿನ ತೀವ್ರತೆಯನ್ನು ಸ್ಪಷ್ಟವಾಗಿ ತಿಳಿಸುತ್ತದೆ.


2. ಎಲ್ಲಾ ಕೋವಿಡ್​ ಸೋಂಕಿತರು ಸಿಟಿ ಸ್ಕ್ಯಾನ್​ ಮೊರೆ ಹೋಗಬೇಕಾ?
ಅಗತ್ಯವಿಲ್ಲ


3. ಇಲ್ಲ. ಎಂದಾದರೆ ಯಾವ ರೋಗಿಗಳು ಈ ಪ್ರಕ್ರಿಯೆಗೆ ಒಳಗೊಳ್ಳಬೇಕು?
ಸಾಮಾನ್ಯದಿಂದ ತೀವ್ರ ಲಕ್ಷಣ ಹೊಂದಿರುವ ಸೋಂಕಿತರು. ಏಳುದಿನಗಳಿಂದ ಕೆಮ್ಮಿನಿಂದ ಬಳಲುತ್ತಿದ್ದರೆ, ಉಸಿರಾಟದ ತೊಂದರೆ, ಜ್ವರದಂತಹ ಲಕ್ಷಣ ಕಂಡು ಬಂದವರು


4. ಎಕ್ಸ್​ರೇ ಸಿಟಿ ಸ್ಕ್ಯಾನ್​ಗಿಂತ ಸುರಕ್ಷವೇ?
ಹೌದು. ಸಿಟಿ ಸ್ಕ್ಯಾನ್​ನಲ್ಲಿ ಅತಿ ಹೆಚ್ಚಿನ ವಿಕರಣಗಳು ಹೊರ ಹೊಮ್ಮುವುದರಿಂದ ಅವು ಇತರೆ ಕಾಯಿಲೆಗೆ ಕಾರಣವಾಗುತ್ತದೆ, ಸಿಟಿ ಸ್ಕ್ಯಾನ್​ನಲ್ಲಿ ಹಲವು ವಿಧ ಇದೆ. ಕೋವಿಡ್​ಗೆ ಎಚ್​ಆರ್​ಸಿಟಿ ಚೆಸ್ಟ್​ ಅನ್ನು ಶಿಫಾರಸ್ಸು ಮಾಡುತ್ತಾರೆ. ಎಕ್ಸ್​ರೇಗಿಂತ 50 ರಿಂದ 100 ರಷ್ಟು ವಿಕಿರಣ ಇದು ಹೊರಹಾಕುತ್ತದೆ.


5. ಯಾಕೆ ಈ ಸಿಟಿ ಸ್ಕ್ಯಾನ್​ ಅಗತ್ಯ?
ಶ್ವಾಸಕೋಶದ ಎಕ್ಸ್​ರೇ 2 ಡಿ ಸ್ಕ್ಯಾನ್​ ಸೋಂಕಿನ ಗಂಭೀರತೆ ತಿಳಿಸುತ್ತದೆ. ಸೋಂಕಿನ ಲಕ್ಷಣ ಸೌಮ್ಯವಾಗಿದ್ದರೆ, ಕ್ಲಿನಿಕಲ್​ ರೋಗಲಕ್ಷಣಗಳೊಂದಿಗೆ ಪರಸ್ಪರ ಸಂಬಂಧ ಹೊಂದಿರುತ್ತದೆ. ಜೊತೆಗೆ ಸೋಂಕಿನ ನಂತರದ ಅವಧಿಯನ್ನು ಇದು ನಿರ್ಧರಿಸುತ್ತದೆ.


7. ಸಿಟಿಎಸ್​ಎಸ್​ ಎಂದರೇನು?
ಸಿಟಿ ಸ್ಕ್ಯಾನ್​ ಸೆವೆರೆಟಿ ಸ್ಕೂರ್​ ಅಂದರೆ ತೀವ್ರತೆ ಮಟ್ಟ ಇದು ತಿಳಿಸುತ್ತದೆ, ಶ್ವಾಸಕೋಶದ ಪ್ರದೇಶದಲ್ಲಿ ಸ್ಕೋರಿಂಗ್​ ವ್ಯವಸ್ಥೆಯನ್ನು ಕಂಡು ಹಿಡಿಯುತ್ತದೆ, ಬಲ ಶ್ವಾಸಕೋಶದಲ್ಲಿ 3 ವಿಭಾಗ ಮತ್ತು ಎಡ ಶ್ವಾಸಕೋಶದ ಎರಡು ವಿಭಾಗದಲ್ಲಿ ದೃಷ್ಠಿ ಗೋಚರವಾಗಿ ಇದು ಗಮನಹರಿಸುತ್ತದೆ. ಅಲ್ಲದೇ 1 ರಿಂದ 5ರವರೆಗೆ ಸ್ಕೋರ್​ ನೀಡುವ ಮೂಲಕ ತೀವ್ರತೆ ಅಳೆಯಲಾಗುತ್ತದೆ.
1-8 ಇದ್ದರೆ ಸೋಂಕು ಸೌಮ್ಯವಾಗಿದೆ ಎಂದು
9- 15 ಸ್ಕೋರ್​ ಇದ್ದರೆ ಸಾಧಾರಣ ಸೋಂಕು
15ಕ್ಕಿಂತ ಹೆಚ್ಚಿದ್ದರೆ ಗಂಭೀರ ಸೋಂಕು ಎಂದು


8. CORADS ಎಂದರೇನು?
ಕೋವಿಡ್​ ಕಾಣಿಸಿಕೊಳ್ಳುವ ಮತ್ತು ಡಾಟಾ ಸಿಸ್ಟಮ್​ ಸೂಚಿಯೇ ORADS. ಇದು ವೈರಸ್​ ಕಾರಣದಿಂದಾಗಿ ಸೋಂಕು ಒಳಗೊಳ್ಳುವಿಕೆಯ ಮಟ್ಟವನ್ನು ನಿರ್ಧರಿಸುತ್ತದೆ. ಇದನ್ನು ಕೂಡ 1-6, 2-4 ಎಂದು ಗುರುತಿಸಲಾಗುತ್ತದೆ, 1 ಇದ್ದರೆ ನೆಗೆಟಿವ್​ ಕೋವಿಡ್​, 2-4 ಇದ್ದರೆ ಸೋಂಕು ಇದೆ ಎಂದು. 6 ಇದ್ದರೆ ಸೋಂಕು ಗಂಭೀರವಾಗಿದೆ ಎಂದು


9. ಯಾವಾಗ ಸಿಟಿ ಸ್ಕ್ಯಾನ್​ ಪುನಃ ಮಾಡಬಹುದು?
ರೋಗಿಗೆ ಚಿಕಿತ್ಸೆ ನೀಡಿ ಸ್ಪಂದಿಸದಿದ್ದರೂ ಸೋಂಕಿನ ಲಕ್ಷಣದಿಂದ ಆರೋಗ್ಯ ಹದಗೆಡುತ್ತಿದ್ದರೆ ಮತ್ತೆ ಸ್ಕ್ಯಾನ್​ ಮೊರೆ ಹೋಗಬಹುದು


10. ಯಾವಾಗ ಮತ್ತೆ ಸಿಟಿ ಸ್ಕ್ಯಾನ್​ ಮಾಡಿಸಬಾರದು?
ಸೋಂಕಿತರ ಆರೋಗ್ಯ ಸಯಧಾರಿಸುತ್ತಿದ್ದು, ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾಗ ಮತ್ತೆ ಮಾಡಬಾರದು


11. ಸಿಟಿ ಸ್ಕೋರ್ ಮತ್ತು ಆಕ್ಸಿಜನ್​ ಸ್ಯಾಚುರೇಶನ್ ನಡುವಿನ ಸಂಬಂಧ ಏನು?


ಸಿಟಿ ಎಸ್​ಎಸ್​ ಶ್ವಾಸಕೋಶದ ಮೇಲೆ ಹೆಚ್ಚಿದ್ದು , ಆಕ್ಸಿಜನ್​ ಸ್ಯಾಚುರೇಶನ್ ಕಡಿಮೆ ಇರುತ್ತದೆ, ಕೆಲಸ ಸಂದರ್ಭದಲ್ಲಿ ಶ್ವಾಸಕೋಶದ ಸಮಸ್ಯೆಯಿಂದಾಗಿ ಇದರ ಪರಿಣಾಮ ಕಡಿಮೆಯಾಗಬಹುದು. ಈ ಹಿನ್ನಲೆ ಸಿಟಿಎಸ್​ಎಸ್​ ಹೆಚ್ಚಿದ್ದರೂ ಆಕ್ಸಿಜನ್​ ಸ್ಯಾಚುರೇಷನ್​ ಉತ್ತಮವಾಗಿರುತ್ತದೆ.


12. ರೋಗಿ ಗುಣ ಮುಖರಾರದರೂ ಸಿಟಿ ಸ್ಕೋರ್​ ಇದ್ದರೆ ಏನರ್ಥ?
ತೀವ್ರವಾದ ಸೋಂಕಿನಿಂದಾಗಿ ಶ್ವಾಸಕೋಶವು ಫೈಬ್ರೊಸ್ ಆಗುತ್ತದೆ ಮತ್ತು ಪರಿಹರಿಸಲು ವಾರಗಳಿಂದ ತಿಂಗಳುಗಳವರೆಗೆ ತೆಗೆದುಕೊಳ್ಳುತ್ತದೆ ಎಂದರ್ಥ. ಅದರ ಬಗ್ಗೆ ಚಿಂತಿಸಬೇಕಾಗಿಲ್ಲ. ಕ್ಲಿನಿಕಲ್ ಲಕ್ಷಣಗಳು CTSS ಬಗ್ಗೆ ಭಯಪಡುವ ಅಗತ್ಯವಿಲ್ಲ.


13. ಸಿಟಿಎಸ್ಎಸ್ ಕಡಿಮೆ ಇದ್ದರೆ, ರೋಗಿಗೆ ಆಸ್ಪತ್ರೆಯಲ್ಲಿಯೇ ಇರಬೇಕೇ?


ಆಸ್ಪತ್ರೆಗೆ ಸೇರಿಸುವುದು ರೋಗಿಗಳ ಕ್ಲಿನಿಕಲ್ ಲಕ್ಷಣಗಳ ಮೇಲೆ ಹೆಚ್ಚು ಅವಲಂಬಿತವಾಗಿದೆ ಮತ್ತು ಸಿಟಿಎಸ್ಎಸ್ ಮೇಲೆ ಅಲ್ಲ. ಕ್ಲಿನಿಕಲ್ ಲಕ್ಷಣಗಳು ತೀವ್ರವಾಗಿದ್ದರೆ ಮತ್ತು ಕಡಿಮೆ ಸಿಟಿಎಸ್ಎಸ್ ಇದ್ದರೂ ರೋಗಿಗೆ ಸಾಮಾನ್ಯವಾಗಿ ಉಸಿರಾಡಲು ಸಾಧ್ಯವಾಗದಿದ್ದರೆ ಆಸ್ಪತ್ರೆಗೆ ದಾಖಲಾಗಬೇಕು. ಅದೇ ರೀತಿ ಸಿಟಿಎಸ್ಎಸ್ ಅಧಿಕವಾಗಿದ್ದರೂ ಸ್ಯಾಚುರೇಶನ್ ಅನ್ನು ಕಾಪಾಡಿಕೊಂಡರೆ ಆಸ್ಪತ್ರೆಗೆ ಸೇರಿಸುವ ಅಗತ್ಯವಿಲ್ಲ.


14. ಸಿಟಿ ಸ್ಕ್ಯಾನ್‌ಗೆ ಏನು  ಹಾನಿ ಮಾಡಬಹುದು?
ವಿಕಿರಣಗಳಿಗೆ ಒಡ್ಡಿಕೊಳ್ಳುವುದರಿಂದ ಕ್ಯಾನರ್​​ಗೆ ಗುರಿಯಾಗಬಹುದು


15. ಗರ್ಭಿಣಿ ಮಹಿಳೆಯರಿಗೆ ಇದನ್ನು ಮಾಡಬಹುದೇ?
ಇಲ್ಲ. ವಿಕಿರಣವು ಗರ್ಭದಲ್ಲಿರುವ ಮಗುವಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಸೋಂಕಿನ ತೀವ್ರತೆ ಆಧಾರ ತಾಯಿ ಮಗುವಿನ ಆರೋಗ್ಯಕ್ಕೆ ಮೊದಲು ಆದ್ಯತೆ ನೀಡಿ ಬಳಿಕ ಈ ಕುರಿತು ನಿರ್ಧರಿಸಬಹುದು

Published by:Seema R
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು