• Home
  • »
  • News
  • »
  • explained
  • »
  • Explained: ಕ್ರಿಪ್ಟೋಕರೆನ್ಸಿಗಳನ್ನು ಜಗತ್ತಿನ ಇತರೆ ದೇಶಗಳಲ್ಲಿ ಹೇಗೆ ನಿಯಂತ್ರಿಸಲಾಗುತ್ತದೆ?

Explained: ಕ್ರಿಪ್ಟೋಕರೆನ್ಸಿಗಳನ್ನು ಜಗತ್ತಿನ ಇತರೆ ದೇಶಗಳಲ್ಲಿ ಹೇಗೆ ನಿಯಂತ್ರಿಸಲಾಗುತ್ತದೆ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ದೇಶದ ವಿವಿಧ ರಾಜ್ಯಗಳು ಕ್ರಿಪ್ಟೋ ಕರೆನ್ಸಿಗಳಿಗೆ ನಿಯಮಗಳು ವ್ಯಾಖ್ಯಾನಗಳು ಮತ್ತು ನಿಬಂಧನೆಗಳನ್ನು ಹೊಂದಿವೆ. ಫೆಡರಲ್ ಸರಕಾರವು ಕ್ರಿಪ್ಟೋ ಕರೆನ್ಸಿಗಳನ್ನು ಕಾನೂನು ಟೆಂಡರ್ ಎಂದು ಗುರುತಿಸುವುದಿಲ್ಲ

  • Share this:

ಅಧಿಕೃತ ಡಿಜಿಟಲ್ ಬಿಲ್ 2021ರ ಕ್ರಿಪ್ಟೋ ಕರೆನ್ಸಿ (Crypto Currency) ಹಾಗೂ ನಿಯಂತ್ರಣ ಕಾಯ್ದೆಯನ್ನು ನವೆಂಬರ್ 29ರಿಂದ ಆರಂಭವಾಗುವ ಚಳಿಗಾಲದ ಅಧಿವೇಶನದಲ್ಲಿ ಪರಿಚಯಿಸಲು ಸಿದ್ಧತೆ ಮಾಡಿಕೊಂಡಿದ್ದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹೊರಡಿಸುವ ಅಧಿಕೃತ ಡಿಜಿಟಲ್ ಕರೆನ್ಸಿಯ (Digital Currency) ರಚನೆಗೆ ಅನುಕೂಲ ಚೌಕಟ್ಟನ್ನು ರಚಿಸುವ ಇರಾದೆ ಹೊಂದಿದೆ.ಈ ಮಸೂದೆಯು ಭಾರತದಲ್ಲಿರುವ ಎಲ್ಲಾ ಕ್ರಿಪ್ಟೋ ಕರೆನ್ಸಿಗಳನ್ನು ನಿಷೇಧಿಸುವ ಪ್ರಯತ್ನ ಹೊಂದಿದ್ದರೂ, ಕ್ರಿಪ್ಟೋ ಕರೆನ್ಸಿಗಳ ಆಧಾರವಾಗಿರುವ ತಂತ್ರಜ್ಞಾನ ಹಾಗೂ ಅದರ ಬಳಕೆಗಳನ್ನು ಉತ್ತೇಜಿಸಲು ಕೆಲವು ವಿನಾಯಿತಿಗಳನ್ನು ಇದು ಅನುಮತಿಸುತ್ತದೆ. ಮಸೂದೆ ಪರಿಚಯಿಸುವ ಸುದ್ದಿ ಹರಿದಾಡುತ್ತಿದ್ದಂತೆಯೇ ಜಾಗತಿಕ ಮಾರುಕಟ್ಟೆಗಳಲ್ಲಿ ಬದಲಾಗದೆ ಉಳಿದಿದ್ದ ಕ್ರಿಪ್ಟೋ ಕರೆನ್ಸಿಗಳ ಬೆಲೆಗಳು ರಾತ್ರೋರಾತ್ರಿ ಕುಸಿದವು.


ಹೂಡಿಕೆದಾರರಲ್ಲಿ ಆರಂಭವಾದ ಭಯ:


ಕ್ರಿಪ್ಟೋ ಕರೆನ್ಸಿಗಳಲ್ಲಿ ಹೂಡಿಕೆ ಮಾಡಿದವರು ಕೂಡ ನಿಷೇಧ ಹಾಗೂ ನಿರ್ಬಂಧದ ಹಿನ್ನೆಲೆಯಿಂದ ಇದೀಗ ಭಯಗೊಂಡಿದ್ದಾರೆ ಎಂಬುದಾಗಿ ಉದ್ಯಮದ ಮೂಲಗಳು ತಿಳಿಸಿವೆ. ಪ್ರಸ್ತುತ ಭಾರತದಲ್ಲಿ ಕ್ರಿಪ್ಟೋಕರೆನ್ಸಿಗಳ ಮೇಲೆ ಯಾವುದೇ ನಿಯಂತ್ರಣ ಅಥವಾ ನಿಷೇಧವಿಲ್ಲ; ಆದರೂ, ವರ್ಚುವಲ್ ಕರೆನ್ಸಿಗಳನ್ನು ವ್ಯಾಖ್ಯಾನಿಸುವ ಮತ್ತು ನಿಯಂತ್ರಿಸುವ ರಾಷ್ಟ್ರೀಯ ಪ್ರತಿಕ್ರಿಯೆಗಳು ಪ್ರಪಂಚದಾದ್ಯಂತದ ನ್ಯಾಯವ್ಯಾಪ್ತಿಯಲ್ಲಿ ವ್ಯಾಪಕವಾಗಿ ಬದಲಾಗುತ್ತವೆ.


ಸ್ಪಷ್ಟವಾದ ಸಮನ್ವಯತೆ ಇಲ್ಲ:


ಹಣಕಾಸಿನ ಸ್ವತ್ತುಗಳ ಮೇಲೆ ದೇಶಗಳು ಹಾಗೂ ನಿಯಂತ್ರಕರು ಹೇರುವ ಸಂಪೂರ್ಣ ನಿಷೇಧದಿಂದ ಹಿಡಿದು ಕಾರ್ಯನಿರ್ವಹಿಸಲು ಕೆಲವು ನಿಯಮಗಳು ಹಾಗೂ ಕಟ್ಟುಪಾಡುಗಳನ್ನು ವಿಧಿಸುವವರೆಗೆ ಪ್ರಸ್ತುತ ಯಾವುದೇ ಮಾರ್ಗಸೂಚಿಗಳು ಇಲ್ಲದೇ ಇರುವುದರಿಂದ ವರ್ಚುವಲ್ ಕರೆನ್ಸಿ ವ್ಯಾಪಾರ ಅನುಮತಿಸುವ ತೀವ್ರತೆಯ ಉಪಸ್ಥಿತಿ ಇದ್ದೇ ಇರುತ್ತದೆ.


ಕ್ರಿಪ್ಟೋವನ್ನು ಕರೆನ್ಸಿ ಹಾಗೂ ಸ್ವತ್ತಿನ ವಿಧವಾಗಿ ವಿಂಗಡಿಸುವುದು ಇಲ್ಲವೇ ವರ್ಗೀಕರಿಸುವುದು ಹೇಗೆ ಹಾಗೂ ಕಾರ್ಯಾಚರಣೆಯ ದೃಷ್ಟಿಯಿಂದ ನಿಯಂತ್ರಿಸುವ ಬಗೆ ಹೇಗೆ ಎಂಬುದರ ಕುರಿತು ಸರಕಾರ ಹಾಗೂ ನಿಯಂತ್ರಕರು ಯೋಚಿಸುತ್ತಿದ್ದಾರೆ. ನೀತಿ ಹಾಗೂ ನಿಯಂತ್ರಕ ಪ್ರತಿಕ್ರಿಯೆಯ ವಿಕಸನವು ಒಂದು ರೀತಿಯ ಅಸಂಗತತೆ ಪ್ರದರ್ಶಿಸಿದ್ದು ದೇಶಗಳು ಪ್ರತಿಕ್ರಿಯೆ ವಿಚಾರದಲ್ಲಿ ಸ್ಪಷ್ಟವಾದ ಸಮನ್ವಯ ತೋರಿಲ್ಲ.


ಕ್ರಿಪ್ಟೋ ಕರೆನ್ಸಿಗೆ ಚೀನಾದಲ್ಲಿ ನಿಯಂತ್ರಣ


ಈ ಹಿಂದೆ ತಿಳಿಸಿದಂತೆ ನಿಯಂತ್ರಕ ಮತ್ತು ನೀತಿಯ ಪ್ರತಿಕ್ರಿಯೆಯು ಸಾಲ್ವಡಾರ್‌ನಂತಹ (ಮಧ್ಯ ಅಮೆರಿಕಾದಲ್ಲಿರುವ ದೇಶ) ದೇಶಗಳಲ್ಲಿ ಕಂಡುಬರುವ ರೀತಿಯ ಸಂಪೂರ್ಣ ಮುಕ್ತತೆಯಿಂದ ಬದಲಾಗಬಹುದು. ಏಕೆಂದರೆ ಇದು ಬಿಟ್‌ಕಾಯಿನ್‌ ಅನ್ನು ಕಾನೂನು ಬದ್ಧ ಟೆಂಡರ್ ಎಂಬುದಾಗಿ ಅನುಮತಿಸಿದ್ದು ಚೀನಾದಲ್ಲಿ ಕ್ರಿಪ್ಟೋ ಕರೆನ್ಸಿಗಳು ಹಾಗೂ ಸೇವಾ ಒದಗಿಸುವವರ ಮೇಲೆ ಕಟ್ಟುನಿಟ್ಟಾದ ನಿಯಂತ್ರಣ ಹೇರಿದೆ.


ಈ ನಡುವೆ ಭಾರತದಂತಹ ದೇಶವು ಈ ಕುರಿತು ತಮ್ಮ ನಿರ್ಧಾರ ಪ್ರಕಟಿಸಬೇಕಾಗಿದೆ. ನಿಯಮಗಳನ್ನು ರೂಪಿಸುವಲ್ಲಿ ಕಟ್ಟುನಿಟ್ಟನ್ನು ಅನುಸರಿಸುವಲ್ಲಿ ಇನ್ನೂ ಒಂದು ರೀತಿಯ ಏಕರೂಪವನ್ನು ಸರಕಾರ ಹೊಂದಿಲ್ಲ ಎಂಬುದಾಗಿ ತೋರುತ್ತಿದೆ. ಕೆಲವು ನೀತಿ ಮತ್ತು ನಿಯಂತ್ರಕ ಪ್ರಯೋಗಗಳ ನಂತರ ಕ್ರಿಪ್ಟೋಗಳನ್ನು ನಿಯಂತ್ರಿಸಲು ಉತ್ತಮ ಮಾರ್ಗ ಕಂಡುಹಿಡಿಯುವ ಪ್ರಕ್ರಿಯೆಯಲ್ಲಿದೆ.


ಯುನೈಟೆಡ್ ಸ್ಟೇಟ್ಸ್ ಮತ್ತು ಯುರೋಪಿಯನ್ ಯೂನಿಯನ್ ನಿಯಂತ್ರಕ ಆದೇಶಗಳನ್ನು ಜಾರಿಗೆ ತರುವ ಚರ್ಚೆಗಳಲ್ಲಿ ತೊಡಗಿವೆ. ವಿವರವಾದ ನಿಯಮಾವಳಿಗಳನ್ನು ನೀಡದ ದೇಶಗಳಲ್ಲಿ, ಈ ಕರೆನ್ಸಿಗಳನ್ನು ಗುರುತಿಸಿದ ಮತ್ತು ವ್ಯಾಖ್ಯಾನಿಸಿದ ದೇಶಗಳಿವೆ. ಬೇರೆ ಬೇರೆ ದೇಶಗಳಲ್ಲಿ ಕ್ರಿಪ್ಟೋ ಕರೆನ್ಸಿಗಳನ್ನು ಹೇಗೆ ಗುರುತಿಸಲಾಗುತ್ತದೆ ಹಾಗೂ ಅವುಗಳ ಮೌಲ್ಯಗಳಿಗೆ ಹೇಗೆ ಪ್ರಾಶಸ್ತ್ಯ ನೀಡಲಾಗುತ್ತದೆ ಎಂಬುದನ್ನು ತಿಳಿದುಕೊಳ್ಳೋಣ.


ಕೆನಡಾ: ತನ್ನ ಮನಿ ಲಾಂಡರಿಂಗ್‌ ಮತ್ತು ಭಯೋತ್ಪಾದಕ ಹಣಕಾಸು ನಿಯಮಗಳ ಮೂಲಕ ವರ್ಚುವಲ್ ಕರೆನ್ಸಿಯನ್ನು ಹೀಗೆ ವ್ಯಾಖ್ಯಾನಿಸುತ್ತದೆ:


ಫಿಯೆಟ್ ಕರೆನ್ಸಿಯಲ್ಲದ (ಒಪ್ಪಿಗೆ ನೀಡದ) ಪಾವತಿ ಅಥವಾ ಹೂಡಿಕೆ ಉದ್ದೇಶಗಳಿಗಾಗಿ ಬಳಸಬಹುದಾದ ಮೌಲ್ಯದ ಡಿಜಿಟಲ್ ಪ್ರಾತಿನಿಧ್ಯ ಹಾಗೂ ಅದನ್ನು ಫಂಡ್‌ಗಳಿಗಾಗಿ ಸುಲಭವಾಗಿ ವಿನಿಮಯ ಮಾಡಿಕೊಳ್ಳಬಹುದಾದ ಮತ್ತೊಂದು ವರ್ಚುವಲ್ ಕರೆನ್ಸಿಗೆ ಸುಲಭವಾಗಿ ವಿನಿಮಯ ಮಾಡಿಕೊಳ್ಳಬಹುದು; ಅಥವಾ ಕ್ರಿಪ್ಟೋಗ್ರಾಫಿಕ್ ಸಿಸ್ಟಮ್‌ನ ಖಾಸಗಿ ಕೀಲಿಯು ಪ್ಯಾರಾಗ್ರಾಫ್ (ಎ) ನಲ್ಲಿ ಉಲ್ಲೇಖಿಸಲಾದ ಮೌಲ್ಯದ ಡಿಜಿಟಲ್ ಪ್ರಾತಿನಿಧ್ಯಕ್ಕೆ ಪ್ರವೇಶ ಹೊಂದಲು ವ್ಯಕ್ತಿ ಅಥವಾ ಘಟಕವನ್ನು ಸಕ್ರಿಯಗೊಳಿಸುತ್ತದೆ.


ಈ ವರ್ಷದ ಜೂನ್‌ನಲ್ಲಿ ಥಾಮ್ಸನ್ ರಾಯಿಟರ್ಸ್ ಇನ್‌ಸ್ಟಿಟ್ಯೂಟ್‌ನ ವರದಿಯು ಕೆನಡಾವು ಕ್ರಿಪ್ಟೋವನ್ನು ಆರಂಭಿಕ ಅಳವಡಿಕೆದಾರರಲ್ಲಿ ಸೇರಿಕೊಂಡಿವೆ ಎಂಬುದನ್ನು ಉಲ್ಲೇಖಿಸಿದೆ ಮತ್ತು ಕಂದಾಯ ಪ್ರಾಧಿಕಾರ (ಸಿಆರ್‌ಎ) ಸಾಮಾನ್ಯವಾಗಿ ದೇಶದ ಆದಾಯ ತೆರಿಗೆ ಕಾಯಿದೆಯ ಉದ್ದೇಶಗಳಿಗಾಗಿ ಕ್ರಿಪ್ಟೋ ಕರೆನ್ಸಿಯನ್ನು ಸರಕುಗಳಂತೆ ಕೆನಡಾ ಪರಿಗಣಿಸುತ್ತದೆ.


ಇಸ್ರೇಲ್: ದೇಶದ ಹಣಕಾಸು ಸೇವೆಗಳ ಕಾನೂನಿನ ಮೇಲ್ವಿಚಾರಣೆಯಲ್ಲಿ, ಹಣಕಾಸಿನ ಸ್ವತ್ತುಗಳ ಪ್ರಸ್ತುತಿಯಲ್ಲಿ ವರ್ಚುವಲ್ ಕರೆನ್ಸಿಗಳನ್ನು ಒಳಗೊಂಡಿದೆ. ಇಸ್ರೇಲಿ ಸೆಕ್ಯುರಿಟೀಸ್ ರೆಗ್ಯುಲೇಟರ್ ಕ್ರಿಪ್ಟೋ ಕರೆನ್ಸಿ ಭದ್ರತಾ ವಿಷಯವಾಗಿದೆ ಎಂದು ತೀರ್ಪು ನೀಡಿದೆ. ಆದರೆ ಇಸ್ರೇಲ್ ತೆರಿಗೆ ಪ್ರಾಧಿಕಾರವು ಕ್ರಿಪ್ಟೋ ಕರೆನ್ಸಿಯನ್ನು ಆಸ್ತಿಯಾಗಿ ಪರಿಗಣಿಸುತ್ತದೆ ಮತ್ತು ಬಂಡವಾಳದ ಲಾಭದ ಮೇಲೆ 25% ಬೇಡಿಕೆಯಿದೆ.


ಜರ್ಮನಿ: ಹಣಕಾಸು ಮೇಲ್ವಿಚಾರಣಾ ಪ್ರಾಧಿಕಾರವು ವರ್ಚುವಲ್ ಕರೆನ್ಸಿಗಳನ್ನು "ಖಾತೆಯ ಘಟಕಗಳು" ಎಂಬುದಾಗಿ ಅರ್ಹತೆ ನೀಡಿದೆ ಆದ್ದರಿಂದ "ಹಣಕಾಸು ಉಪಕರಣಗಳು" ಎಂದು ಉಲ್ಲೇಖಿಸುತ್ತದೆ. ಬುಂಡೆಸ್‌ಬ್ಯಾಂಕ್ ಬಿಟ್‌ಕಾಯಿನ್ ಅನ್ನು ಕ್ರಿಪ್ಟೋ ಟೋಕನ್ ಎಂದು ಪರಿಗಣಿಸುತ್ತದೆ. ಏಕೆಂದರೆ ಅದು ಕರೆನ್ಸಿಯ ವಿಶಿಷ್ಟ ಕಾರ್ಯಗಳನ್ನು ಪೂರೈಸುವುದಿಲ್ಲ. ಆದರೂ, ನಾಗರಿಕರು ಮತ್ತು ಕಾನೂನು ಘಟಕಗಳು ಜರ್ಮನ್ ಫೆಡರಲ್ ಫೈನಾನ್ಶಿಯಲ್ ಮೇಲ್ವಿಚಾರಣಾ ಪ್ರಾಧಿಕಾರದೊಂದಿಗೆ ಪರವಾನಗಿ ಪಡೆದ ವಿನಿಮಯ ಮತ್ತು ಜವಬ್ದಾರಿಯುತ ವ್ಯಕ್ತಿ ಅಥವಾ ಸಂಸ್ಥೆಯ ಮೂಲಕ ಕ್ರಿಪ್ಟೋಸೆಟ್‌ಗಳನ್ನು ಖರೀದಿಸಬಹುದು ಅಥವಾ ವ್ಯಾಪಾರ ಮಾಡಬಹುದು.


ಇಂಗ್ಲೆಂಡ್: ಆದಾಯ ಮತ್ತು ಕಸ್ಟಮ್ಸ್, ಕ್ರಿಪ್ಟೋ ಸ್ವತ್ತುಗಳನ್ನು ಕರೆನ್ಸಿ ಅಥವಾ ಹಣ ಎಂದು ಪರಿಗಣಿಸದಿದ್ದರೂ, ಕ್ರಿಪ್ಟೋಕರೆನ್ಸಿಗಳು ವಿಶಿಷ್ಟವಾದ ಗುರುತನ್ನು ಹೊಂದಿವೆ ಮತ್ತು ಆದ್ದರಿಂದ, ಯಾವುದೇ ರೀತಿಯ ಹೂಡಿಕೆ ಚಟುವಟಿಕೆ ಅಥವಾ ಪಾವತಿ ಕಾರ್ಯವಿಧಾನಕ್ಕೆ ನೇರವಾಗಿ ಹೋಲಿಸಲಾಗುವುದಿಲ್ಲ.


ಅಮೆರಿಕ: ದೇಶದ ವಿವಿಧ ರಾಜ್ಯಗಳು ಕ್ರಿಪ್ಟೋ ಕರೆನ್ಸಿಗಳಿಗೆ ನಿಯಮಗಳು ವ್ಯಾಖ್ಯಾನಗಳು ಮತ್ತು ನಿಬಂಧನೆಗಳನ್ನು ಹೊಂದಿವೆ. ಫೆಡರಲ್ ಸರಕಾರವು ಕ್ರಿಪ್ಟೋ ಕರೆನ್ಸಿಗಳನ್ನು ಕಾನೂನು ಟೆಂಡರ್ ಎಂದು ಗುರುತಿಸುವುದಿಲ್ಲ, ರಾಜ್ಯಗಳು ನೀಡಿದ ವ್ಯಾಖ್ಯಾನಗಳು ಹಾಗೂ ನಿಯಮಾವಳಿಗಳು ವರ್ಚುವಲ್ ಕರೆನ್ಸಿಗಳ ವಿಕೇಂದ್ರೀಕೃತ ಸ್ವರೂಪ ಗುರುತಿಸುತ್ತವೆ.


ಥೈಲ್ಯಾಂಡ್: ಥಾಮ್ಸನ್ ರಾಯಿಟರ್ಸ್ ಇನ್‌ಸ್ಟಿಟ್ಯೂಟ್ ವರದಿಯ ಪ್ರಕಾರ, ಅನ್ಯಾಯದ ವ್ಯಾಪಾರದ ಅಭ್ಯಾಸಗಳನ್ನು ಮೇಲ್ವಿಚಾರಣೆ ಮಾಡುವುದಕ್ಕಾಗಿ ಡಿಜಿಟಲ್ ಆಸ್ತಿ ವ್ಯವಹಾರಗಳು ಪರವಾನಗಿಗಾಗಿ ಅರ್ಜಿ ಸಲ್ಲಿಸಬೇಕಾಗುತ್ತದೆ ಮತ್ತು ಹಣ ವರ್ಗಾವಣೆ-ವಿರೋಧಿ ಉದ್ದೇಶಗಳಿಗಾಗಿ ಅವುಗಳನ್ನು "ಹಣಕಾಸು ಸಂಸ್ಥೆಗಳು" ಎಂದು ಪರಿಗಣಿಸಲಾಗುತ್ತದೆ. ಈ ತಿಂಗಳ ಆರಂಭದಲ್ಲಿ, ಥೈಲ್ಯಾಂಡ್‌ನ ಸಿಯಾಮ್ ಕಮರ್ಷಿಯಲ್ ಬ್ಯಾಂಕ್, ಸ್ಥಳೀಯ ಕ್ರಿಪ್ಟೋ ಕರೆನ್ಸಿ ವಿನಿಮಯ ಬಿಟ್ಕುಬ್ ಆನ್‌ಲೈನ್‌ನಲ್ಲಿ 51% ಪಾಲನ್ನು ಖರೀದಿಸುವ ಕ್ರಮ ಘೋಷಿಸಿತು.


ಇದನ್ನು ಓದಿ: ಭಾರತೀಯ ರೈಲ್ವೆಯ ಭಾರತ್ ಗೌರವ್ ಯೋಜನೆ ಎಂದರೇನು..? ಇಲ್ಲಿದೆ ವಿವರ..


ಈ ದೇಶಗಳಲ್ಲಿ ಹೆಚ್ಚಿನವು ಕ್ರಿಪ್ಟೋ ಕರೆನ್ಸಿಗಳನ್ನು ಕಾನೂನುಬದ್ಧ ಟೆಂಡರ್ ಎಂದು ಗುರುತಿಸದಿದ್ದರೂ, ಈ ಡಿಜಿಟಲ್ ಘಟಕಗಳು ಪ್ರತಿನಿಧಿಸುವ ಮೌಲ್ಯವನ್ನು ಗುರುತಿಸುತ್ತಾರೆ - ಮತ್ತು ಅವುಗಳ ಕಾರ್ಯಗಳನ್ನು ವಿನಿಮಯದ ಮಾಧ್ಯಮ, ಖಾತೆಯ ಘಟಕ ಅಥವಾ ಮೌಲ್ಯದ ಸಂಗ್ರಹಣೆ (ಸಾಮಾನ್ಯವಾಗಿ ಉಳಿಸಿಕೊಳ್ಳುವ ಯಾವುದೇ ಆಸ್ತಿ ಭವಿಷ್ಯದಲ್ಲಿ ಕೊಳ್ಳುವ ಶಕ್ತಿ) ಪರಿಗಣಿಸುತ್ತಾರೆ.


ಭಾರತದಂತೆಯೇ, ಹಲವಾರು ಇತರ ದೇಶಗಳು ತಮ್ಮ ಕೇಂದ್ರ ಬ್ಯಾಂಕ್‌ನಿಂದ ಬೆಂಬಲಿತ ಡಿಜಿಟಲ್ ಕರೆನ್ಸಿಯನ್ನು ಪ್ರಾರಂಭಿಸಲು ಮುಂದಾಗಿವೆ.


ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿ (CBDC) ಹೇಗೆ ಕೆಲಸ ಮಾಡುತ್ತದೆ?


ಭಾರತೀಯ ರಿಸರ್ವ್ ಬ್ಯಾಂಕ್ ತನ್ನ CBDC ಪ್ರಾರಂಭಿಸಲು ಯೋಜಿಸಿದ್ದು ಇದು ಫಿಯೆಟ್ ಕರೆನ್ಸಿಯ (ಅಧಿಕಾರ ನೀಡಿದ) ಡಿಜಿಟಲ್ ರೂಪವಾಗಿದ್ದು, ಬ್ಲಾಕ್‌ಚೈನ್‌ನಿಂದ ಬೆಂಬಲಿತವಾದ ವ್ಯಾಲೆಟ್‌ಗಳನ್ನು ಬಳಸಿಕೊಂಡು ವಹಿವಾಟು ನಡೆಸಬಹುದು ಮತ್ತು ಇದನ್ನು ಕೇಂದ್ರ ಬ್ಯಾಂಕ್‌ ನಿಯಂತ್ರಿಸುತ್ತದೆ. CBDCಗಳ ಪರಿಕಲ್ಪನೆಯು ನೇರವಾಗಿ ಬಿಟ್‌ಕಾಯಿನ್‌ನಿಂದ ಪ್ರೇರಿತವಾಗಿದ್ದರೂ, ಇದು ವಿಕೇಂದ್ರೀಕೃತ ವರ್ಚುವಲ್ ಕರೆನ್ಸಿಗಳು ಮತ್ತು ಕ್ರಿಪ್ಟೋ ಸ್ವತ್ತುಗಳಿಂದ ಭಿನ್ನವಾಗಿದೆ, ಇವುಗಳನ್ನು ರಾಜ್ಯದಿಂದ ನೀಡಲಾಗಿಲ್ಲ ಮತ್ತು ಸರಕಾರವು ಘೋಷಿಸಿದ 'ಕಾನೂನು ಟೆಂಡರ್' ಸ್ಥಿತಿ ಹೊಂದಿರುವುದಿಲ್ಲ.


ಇದನ್ನು ಓದಿ: ಭಾರತದಲ್ಲೀಗ ಪುರುಷರಿಗಿಂತ ಮಹಿಳೆಯರ ಸಂಖ್ಯೆಯೇ ಹೆಚ್ಚು: NFHS ಸಮೀಕ್ಷೆಯಲ್ಲಿ ಬಯಲು


ಮೂರನೇ ವ್ಯಕ್ತಿ ಅಥವಾ ಬ್ಯಾಂಕ್ ಅಗತ್ಯವಿಲ್ಲದ ದೇಶೀಯ ಮತ್ತು ಗಡಿಯಾಚೆಗಿನ ವಹಿವಾಟುಗಳನ್ನು ನಡೆಸಲು CBDC ಗಳು ಬಳಕೆದಾರರನ್ನು ಸಕ್ರಿಯಗೊಳಿಸುತ್ತವೆ. ಹಲವಾರು ದೇಶಗಳು ಈ ಜಾಗದಲ್ಲಿ ಪ್ರಾಯೋಗಿಕ ಯೋಜನೆಗಳನ್ನು ನಡೆಸುತ್ತಿರುವುದರಿಂದ, ಭಾರತವು ತನ್ನದೇ ಆದ CBDC ಪ್ರಾರಂಭಿಸುವುದು ಮುಖ್ಯವಾಗಿದೆ, ಇದು ರೂಪಾಯಿಯನ್ನು ಅಂತಾರಾಷ್ಟ್ರೀಯ ಹಣಕಾಸು ಮಾರುಕಟ್ಟೆಗಳಲ್ಲಿ ಸ್ಪರ್ಧಾತ್ಮಕವಾಗಿಸುತ್ತದೆ.


CBDC ಡಿಜಿಟಲ್ ಅಥವಾ ವರ್ಚುವಲ್ ಕರೆನ್ಸಿಯಾಗಿದ್ದರೂ, ಕಳೆದ ದಶಕದಲ್ಲಿ ಕ್ಷಿಪ್ರಗತಿಯಲ್ಲಿ ಬೆಳೆದ ಖಾಸಗಿ ವರ್ಚುವಲ್ ಕರೆನ್ಸಿಗಳಿಗೆ ಹೋಲಿಸಲಾಗುವುದಿಲ್ಲ. ಖಾಸಗಿ ವರ್ಚುವಲ್ ಕರೆನ್ಸಿಗಳು ಹಣದ ಐತಿಹಾಸಿಕ ಪರಿಕಲ್ಪನೆಯೊಂದಿಗೆ ಭಿನ್ನಾಭಿಪ್ರಾಯ ಹೊಂದಿವೆ.

Published by:Seema R
First published: