• Home
 • »
 • News
 • »
 • explained
 • »
 • Explained| ಕ್ರಿಪ್ಟೊ ಕರೆನ್ಸಿ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದು ಸುರಕ್ಷಿತವೇ?

Explained| ಕ್ರಿಪ್ಟೊ ಕರೆನ್ಸಿ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದು ಸುರಕ್ಷಿತವೇ?

ಪ್ರಾತಿನಿಧಿಕ ಚಿತ್ರ.

ಪ್ರಾತಿನಿಧಿಕ ಚಿತ್ರ.

ಕ್ರಿಪ್ಟೊಕರೆನ್ಸಿ ಯಶಸ್ವಿಯಾದಲ್ಲಿ ಮತ್ತು ಬೆಲೆಗಳು ಅತ್ಯಧಿಕವಾದಾಗ ನಿಮ್ಮ ಲಾಭ ಕೂಡ ದುಪ್ಪಟ್ಟಾಗುತ್ತದೆ.

 • Share this:

  ಕಳೆದ ಒಂದು ದಶಕದಲ್ಲಿ ಕ್ರಿಪ್ಟೊ ಕರೆನ್ಸಿ ಜಾಗತಿಕ ಮಟ್ಟದಲ್ಲಿ ಹೆಚ್ಚಿನ ಸದ್ದು ಮಾಡುತ್ತಿದೆ. ಕ್ರಿಪ್ಟೊ ವಹಿವಾಟಿನ ಮೇಲೆ ಹೇರಿದ್ದ ರಿಸರ್ವ್ ಬ್ಯಾಂಕ್ ಹೇರಿದ್ದ ನಿರ್ಬಂಧವನ್ನು ಸುಪ್ರೀಂ ಕೋರ್ಟ್ ತಳ್ಳಿಹಾಕಿದ್ದು ಕ್ರಿಪ್ಟೊ ಕರೆನ್ಸಿ ವಹಿವಾಟಿಗೆ ಅಸ್ತು ಎಂದಿದೆ. ಆದಾಯವನ್ನು ಹೆಚ್ಚಿಸಲು ಹಾಗೂ ದೃಢವಾದ ಹೂಡಿಕೆಗಳನ್ನು ಖರೀದಿಸಲು ಕ್ರಿಪ್ಟೊ ಕರೆನ್ಸಿ ಮೇಲೆ ಹೂಡಿಕೆ ಮಾಡುವುದು ಸ್ವಾಗತಾರ್ಹ ಎಂಬುದು ವ್ಯವಹಾರ ಶಾಸ್ತ್ರಜ್ಞರ ಮಾತಾಗಿದೆ. ಕ್ರಿಪ್ಟೊ ಕರೆನ್ಸಿಯ ಭವಿಷ್ಯವೇನು ಇದು ಎಷ್ಟು ಸಮಯದವರೆಗೆ ಇರಲಿದೆ ಎಂಬುದು ಯಾರಿಗೂ ತಿಳಿದಿಲ್ಲ ಅದಾಗ್ಯೂ ನೀವು ಇದರ ಸಾಮರ್ಥ್ಯದ ಮೇಲೆ ನಂಬಿಕೆ ಇಟ್ಟಿದ್ದೀರಿ ಎಂದಾದಲ್ಲಿ ಈ ಕರೆನ್ಸಿ ಖರೀದಿಯನ್ನು ಈಗ ಮಾಡಿ ಇಲ್ಲವೇ ಬೆಲೆಗಳು ಅತ್ಯಧಿಕವಾಗಿದ್ದಾಗ ಖರೀದಿಸಿ ಸಮಸ್ಯೆಯಾಗುವುದಿಲ್ಲ


  ಕ್ರಿಪ್ಟೊಕರೆನ್ಸಿ ಯಶಸ್ವಿಯಾದಲ್ಲಿ ಮತ್ತು ಬೆಲೆಗಳು ಅತ್ಯಧಿಕವಾದಾಗ ನಿಮ್ಮ ಲಾಭ ಕೂಡ ದುಪ್ಪಟ್ಟಾಗುತ್ತದೆ.


  ಕ್ರಿಪ್ಟೊ ಕರೆನ್ಸಿ ದೀರ್ಘಾವಧಿ ಬಾಳಬಲ್ಲುದೇ?


  ಕ್ರಿಪ್ಟೊ ಕರೆನ್ಸಿ ಎಷ್ಟು ಸಮಯದವರೆಗೆ ಕಾರ್ಯನಿರ್ವಹಿಸಲಿದೆ ಎಂಬುದು ಯಾರಿಗೂ ತಿಳಿದಿಲ್ಲ. ಬಿಟ್ ಕಾಯಿನ್ ಅತ್ಯಧಿಕ ಲಾಭವನ್ನುಂಟು ಮಾಡಲಿದೆ ಎಂದು ಹೇಳಿದರೆ ಇನ್ನು ಕೆಲವರು ಇದು ಸಾಮರ್ಥ್ಯವಿಲ್ಲದ್ದಾಗಿದೆ ಎಂದು ನುಡಿದಿದ್ದಾರೆ. ಇದರ ಮೇಲೆ ಹೂಡಿಕೆ ಮಾಡುವುದು ನಿಮ್ಮ ವೈಯಕ್ತಿಕ ನಿರ್ಧಾರವಾಗಿದ್ದು ಅಪಾಯ ನಿರ್ವಹಣೆಯನ್ನು ಮಾಡುವ ಪ್ರಾಬಲ್ಯ ಕೂಡ ನಿಮ್ಮಲ್ಲಿರಬೇಕು.


  ಇನ್ನು ಅಪಾಯವನ್ನು ಎದುರಿಸಲು ನೀವು ಅಷ್ಟೊಂದು ಪ್ರಬಲರಲ್ಲ ಎಂದಾದಲ್ಲಿ ಕ್ರಿಪ್ಟೊ ಹೇಗೆ ಕಾರ್ಯನಿರ್ವಹಿಸಲಿದೆ ಎಂಬುದನ್ನು ಕೆಲವು ವರ್ಷಗಳ ಕಾಲ ಕಾದು ನೋಡಿ. ಬಿಟ್ ಕಾಯಿನ್ ವಿಶ್ವದ ಬಹು ಮೌಲ್ಯಯುತವಾಗಿರುವ ಕ್ರಿಪ್ಟೊ ಕರೆನ್ಸಿಯಾಗಿದೆ. ಬಿಟ್‌ಕಾಯಿನ್ ವ್ಯವಹಾರದಿಂದ ಬಹಳಷ್ಟು ಮಂದಿ ಲಾಭ ಮಾಡಿಕೊಂಡಿದ್ದು ಬಿಟ್ ಕಾಯಿನ್ ಮೌಲ್ಯ ಏರಿಕೆಯಾಗುವುದು, ಇಳಿಕೆಯಾಗುವುದು ನಡೆಯುತ್ತಲೇ ಇರುತ್ತದೆ.


  ಇದನ್ನೂ ಓದಿ: ಕೋವಾಕ್ಸಿನ್-ಕೋವಿಶೀಲ್ಡ್​ ಲಸಿಕೆ ಪಡೆದವರಿಗೂ ಯುರೋಪ್​ ಪ್ರಯಾಣಕ್ಕೆ ಅವಕಾಶ ನೀಡಿ; ಭಾರತ ಒತ್ತಾಯ

  ಈ ಕಾಯಿನ್ ಬಳಸಿಕೊಂಡು ಕೆಲವೇ ನಿಮಿಷಗಳಲ್ಲಿ ಹಣ ಕಳುಹಿಸಬಹುದು ಮತ್ತು ಪಡೆಯಬಹುದು. ಕೆಲವೊಂದು ಸ್ಥಳಗಳಲ್ಲಿ ಉತ್ಪನ್ನ ಹಾಗೂ ಸೇವೆಗಳಿಗೂ ಬಿಟ್ ಕಾಯಿನ್ ಎಂಬ ಕ್ರಿಪ್ಟೊ ಕರೆನ್ಸಿಯನ್ನು ಬಳಸುತ್ತಾರೆ. ಇದನ್ನು ಷೇರು ಮಾರ್ಕೆಟ್‌ನಲ್ಲಿ ಕೂಡ ಹೂಡಿಕೆ ಮಾಡಬಹುದು. ಬಿಟ್‌ಕಾಯಿನ್ ಮೌಲ್ಯವನ್ನು ಕೊನೆಯಲ್ಲಿ ನಿಮ್ಮ ಇಷ್ಟದ ಕರೆನ್ಸಿಯಾಗಿ ಮಾರ್ಪಡಿಸಿಕೊಳ್ಳಬಹುದು.


  ಬಿಟ್‌ಕಾಯಿನ್‌ಗಳಿಂದ ಸಹಾಯ ಇದ್ದಂತೆ ಅಪಾಯ ಕೂಡ ಇದ್ದೇ ಇದೆ. ಆರ್ಥಿಕ ಅಪರಾಧಗಳನ್ನು ಎಸಗಲು ಇದು ಅಪರಾಧಿಗಳಿಗೆ ಸಹಕಾರಿಯಾಗಿದೆ. ಹಣ ವರ್ಗಾವಣೆ ಯಾರು ಮಾಡಿದರು ಎಂಬ ಮಾಹಿತಿ ಇರುವುದಿಲ್ಲ. ಬೆಲೆ ಕೂಡ ಏರುವುದು ಇಳಿಯುವುದು ಹೀಗೆ ನಡೆಯುವುದರಿಂದ ಯಾವಾಗ ನಷ್ಟವುಂಟಾಗುತ್ತದೆ ಯಾವಾಗ ಲಾಭವುಂಟಾಗುತ್ತದೆ ಎಂಬುದು ತಿಳಿಯುವುದಿಲ್ಲ.


  ಇದನ್ನೂ ಓದಿ: Narendra Modi| ಕೊರೋನಾ 3ನೇ ಅಲೆಯನ್ನು ತಡೆಯುವಲ್ಲಿ ಮಾದರಿಯಾಗಿ ಕೆಲಸ ಮಾಡಿ; ಕೇಂದ್ರ ಸಚಿವರಿಗೆ ಮೋದಿ ಕಿವಿಮಾತು

  ಕ್ರಿಪ್ಟೋದಲ್ಲಿನ ಎರಡು ದೊಡ್ಡ ಹೆಸರುಗಳೆಂದರೆ ಬಿಟ್ ಕಾಯಿನ್ ಹಾಗೂ ಎಥೆರಿಯಮ್ ಆಗಿದೆ. ಹೆಚ್ಚಿನ ದಾಖಲೆಗಳನ್ನು ಹೊಂದಿರುವ ಈ ಎರಡೂ ಕರೆನ್ಸಿಗಳು ನೈಜ ಜಗತ್ತಿನ ಅತ್ಯವಶ್ಯಕ ಸೌಲಭ್ಯವಾಗಿದ್ದಾರೆ. ಕ್ರಿಪ್ಟೊ ವಲಯದಲ್ಲಿ ಇವುಗಳಿಗೆ ಮಾನ್ಯತೆ ಕಲ್ಪಿಸಿಕೊಡುತ್ತವೆ. ಡಾಗ್‌ಕೋಯಿನ್ (CRYPTO: DOGE) ನಂತಹ ಲೆಕ್ಕಪರಿಶೋಧಕ ನಾಣ್ಯಗಳು ನಂಬಲಾಗದಷ್ಟು ಅಪಾಯಕಾರಿ ಮತ್ತು ಭವಿಷ್ಯದಲ್ಲಿ ಯಶಸ್ವಿಯಾಗುವ ಸಾಧ್ಯತೆ ಕಡಿಮೆ.
  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.

  Published by:Sharath Sharma Kalagaru
  First published: